ಪುಗುಸಟ್ಟೆ ನೌಕರಿ ಇಟ್ಟುಗೊ ಅಂದರ ಯಾರು ಇಟ್ಟುಕೊಳ್ಳದವನನ್ನು ನೀವು ಪಗಾರಕೊಟ್ಟು ನೌಕರಿ ಇಟ್ಟಿಕೊಂಡಿರಿ

“ಪುಗುಸಟ್ಟೆ ನೌಕರಿ ಇಟ್ಟುಗೊ ಅಂದರ ಯಾರು ಇಟ್ಟುಕೊಳ್ಳದವನನ್ನು
ನೀವು ಪಗಾರಕೊಟ್ಟು ನೌಕರಿ ಇಟ್ಟಿಕೊಂಡಿರಿ ” ಎಂದು ತಂದೆಯ ಸಮಾನರಾದ ಶ್ರೀ ಲಿಂಗಣ್ಣ ಸತ್ಯಂಪೇಟೆಯವರು ಹೇಳಿದಾಗ ನನಗೆ ಕ್ಷಣ ನಗು ಬಂತು. ಲಿಂಗಣ್ಣನವರೊಂದಿಗೆ ಮಾತನಾಡಿಲು ಅಲ್ಲ, ಅವರ ಹತ್ತಿರ ನಿಲ್ಲಲು ಭಯ ಪಡುತ್ತಿದ್ದ ನಾವು ಕ್ರಮೇಣ ಅವರೊಂದಿಗೆ ಮಾತನಾಡಲು , ತಮ್ಮ ಮನದ ಆಶಯಗಳನ್ನು ಹಂಚಿಕೊಳ್ಳಲು ಶುರು ಮಾಡಿದ್ದರು.ಒಂದು ದಿನ ನಾನು ಮತ್ತು  ಗೆಳೆಯ ಬಸ್ಸು ಪಾಣಿ, ಪ್ರಭು ರಾಚರಡ್ಡಿ, ಹೀಗೆ ಹಲವರು ಹರಟೆ ಹೊಡಯುತ್ತ ಕುಳಿತಿರುವಾಗ ಅಚಾನಕ್ಕಾಗಿ ಸರ್ ಬಂದು ಬಿಟ್ಟರು.

ಅವರೊಂದಿಗೆ ಮಾತನಾಡುವ ಸಲುಗೆ ಸಿಕ್ಕಿದ್ದರಿಂದ ಸಹಜವಾಗಿ ಮತ್ತು ತಮಾಷೆಯಾಗಿ  “ನೋಡರಿ ಸರ್ ನಮ್ಮ ಬಸ್ಸು ಆನಲ್ಲ ನಿನ್ನೆ ಆತ್ಮ ಹತ್ಯೆ ಮಾಡಿಕೊಳ್ಳಲು ಹಗ್ಗ ತೆಗೆದುಕೊಂಡು ಮಹಡಿ ಮೇಲೆ ಹೋಗಿದ್ದರಿ ಸರ್ ಎಂದು ಹೇಳಿದೆವು. ಅದಕ್ಕೆ ಅವರು ತುಂಬಾ ಗಾಭರಿಯಾದರು. ಹೇ ಖೋಡಿ ಬಸ್ಸು ಹಿಂಗೆ ಯಾಕೆ ಮಾಡಿಕೊಂಡ ! ಏನಾದರು  ಸಮಸ್ಯೆ ಆದ ಏನು ?

ನಾ ಏನೊ ಸರ್ ಗೊತ್ತಿಲ್ಲ ಅಂದಾಗ ,ಬಸ್ಸು ಬ್ಯಾಂಕಿನ ಕೆಲಸಕ್ಕ ಬಂದಾನೇನು ? ಇನ್ನು ಬಂದಿಲ್ಲರೀ ಸರ್ ಅಂತಹ ಸುಳ್ಳು ಹೇಳಿದೆವು. ಮತ್ತೆ ಅವರ ಮುಖದಲ್ಲಿ ಆತಂಕದ ಛಾಯೆ ಮೂಡಿತು. ಬಸ್ಸುನ ಮೇಲೆ ಇದ್ದ ಪ್ರೀತಿ ,ಕರುಣೆ ಅವರ ಮುಖದಲ್ಲಿ ಕಂಡೆವು ನಂತರ ಅವನಿಗೆ ಏನಾದರುಸಮಸ್ಯೆ ಇದ್ದರೆ ಹೇಳಿ ! ಆಗೆ ಇಗೆ ಅವನ ಬಗ್ಗೆ ವಿಚಾರ ಮಾಡುತ್ತಲೆ ಇದ್ದರು .ಇದನ್ನೆಲ್ಲ ಗಮನಿಸಿದ ನನಗೆ ಸರ್ ಅವನಿಗೆ ದಿನಾಲು ಬೈಯದೆ ಇದ್ದ ದಿನಗಳೆ ಇದ್ದಿರಲಿಲ್ಲ. ಆದರೆ ಅವನು ಆತ್ಮಹತ್ಯೆ ಪ್ರಯತ್ನ ಪಟ್ಟಿದಾನೆ ಎಂದು ಸುಳ್ಳು ಹೇಳಿದ್ದೆ ತಡ ಅವರ ಅಂತಕರಣ ಮಮ್ಮಲ ಮರಗಿದ್ದು ನೋಡಿ ನನಗೆ ಅನಿಸಿದ್ದು : ಬಾಹ್ಯವಾಗಿ ಎಲ್ಲರನ್ನು ಬೈಯುತ್ತಿರುವ ಸರ್ (ಲಿಂಗಣ್ಣ ಸತ್ಯಂಪೇಟೆ ) ಅವರ ಅಂತರಂಗದಲ್ಲಿ ಆ ಹುಡುಗಳ ಬಗ್ಗೆ ಎಷ್ಟೊಂದು ಕನಿಕರವಿದೆಯಲ್ಲ ಎಂದು ಅನಿಸಿತ್ತು.


ಬ್ಯಾಂಕಿನಲ್ಲಿ ಕುಳಿತ್ತಿದ್ದಾಗ ಸರ್ ಬಂದರೆ ಬಚ್ಚಿಟ್ಟು ಕೊಳ್ಳುತ್ತಿದ್ದೆವು ಯಾಕೆಂದರೆ ಅವರು ನಮಗೆ ಏನಾದರು ಕೆಲಸ ಹೇಳುತ್ತಾರೆಂದು ಒಳಗೆ ಇದ್ದರು ಇಲ್ಲಾ ಎಂದು ಸುಳ್ಳು ಹೇಳುತ್ತಿದ್ದೇವು. ಅಂಚೆ ಕಛೇರಿಗೆ ಅಥವಾ ಪತ್ರಿಕೆ ಕೆಲಸಕ್ಕೊ ಕರಿಯುತ್ತಾರೆಂದು ಅವರಿಂದ ಸಾಕಷ್ಟು ದೂರ ನಿಲ್ಲುತ್ತಿದ್ದೇವು. 

ಒಂದು ಸಲ ಅಚ್ಚಾನಕ್ಕಾಗಿ ನನ್ನನ್ನು ಕರಿಸಿದರು. ಹೇ ಖೋಡಿ ಸಾಯಿ ಆ ಬಸ್ಸಪ್ಪನಿಗೆ ಹ್ಯೆಂಗಾರೆ ನೌಕರಿ ಇಟ್ಟುಕೊಂಡಿರಿ? ಅಂದರು ಯಾಕರಿ ಸರ್ ? ಅಂದಾಗ ಅಲ್ಲಲ್ಲೆ ಅವನಿಗೆ ಮತ್ತೆ ಪಗಾರ ಬೇರೆ ಕೊಟ್ಟು ನೌಕರಿಗೆ ಇಟ್ಟಕೊಂಡಿರಲ್ಲ ! ನಿಮ್ಮ ಏನು ಹೇಳಬೇಕು ತಿಳಿಯಾವಲ್ದು. ಪುಗಸಟ್ಟೆ ನೌಕರಿಗಿ ಇಟ್ಟುಕೊ ಅಂದು ಅವನನ್ನ ಯಾರು ಇಟ್ಟುಕೊಳ್ಳುವುದಿಲ್ಲ. ಅಂತವನಿಗೆ ಪಗಾರ ಕೊಟ್ಟು ಇಟ್ಟುಕೊಂಡಿರಿ ನೋಡು ಅಂದರು. ಅವರು ಹೀಗೆ ಅನ್ನಲು ಕಾರಣ ವೇನೆದರೆ ಬಸ್ಸು ದಿನಾಲು ಏನಾದರು ಸುಳ್ಳು ಹೇಳಿ ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಅದಕ್ಕೆ ಅವರು ಹಾಗೆ ಹೇಳಿದರು.

ಲಿಂಗಣ್ಣ ಸತ್ಯಂಪೇಟೆ ಸರ್  ಬರುತ್ತಿದ್ದಾರೆಂದರೆ ನಾವುಗಳು ಎಲ್ಲಾದರು ಬಚ್ಚಿಟ್ಟುಕೊಳ್ಳುತ್ತಿದೆವು ಯಾಕೆಂದರೆ ಅವರು ಕಾರ್ಯಕ್ರಮದ ಆಮಂತ್ರಣ ಪತ್ತಿಕೆಯನ್ನು ಹಂಚಲು ಹೇಳುತ್ತಿದ್ದರು. ಹಂಚಲು ಹೊರಟೆ ಇರುವುದಿಲ್ಲ ನಾವು ಆಗಲೆ ಅವರು ಕ್ರಾಸ್ ಚಕ್ಕ್ ಮಾಡಲು ಪ್ರಾರಂಭಿಸಿ ಬಿಡುತ್ತಿದ್ದರು. ಆಮಂತ್ರಣ ಪತ್ರಿಕೆಯ ಬಂಡಲನಲ್ಲಿರುವ ಸದಸ್ಯರಿಗೆ ಪೋನಾಯಿಸಿ ಸರ್ ಆಮಂತ್ರಣ ಪತ್ರಿಕೆ ತಲುಪಿತ್ತೆ ? ಎಂದು ಎಲ್ಲರಿಗು ಕೇಳುವರು. ನಾವು ಇನ್ನು ಕೊಟ್ಟೆ ಇರುತ್ತಿರಲ್ಲಿಲ್ಲ. ಅದರಿಂದ ಸರ್ ಮತ್ತೆ ಕೋಪ ಈಗೆ ಪ್ರತಿ ದಿನವು ನಡೆಯುತ್ತಿರುತ್ತಿತ್ತು.ಒಮ್ಮೊಮ್ಮ ನಾವು ಆಮಂತ್ರಣ ಪತ್ರಿಕೆಗಳನ್ನು ಕೆಲವರಿಗೆ ತಲುಪ್ಪಿಸುತ್ತಿರಲಿಲ್ಲ. ಅವರುಗಳು ಅಚ್ಚಾನಕ್ಕಾಗಿ ಎಲ್ಲಾದರು ಭೇಟಿಯಾದರೆ ಸರ್ ಯಾಕರಿ ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಕೇಳುತ್ತಿದ್ದರು. ಇಲ್ಲಿ ಸರ್ ಆಮಂತ್ರಣ ಪತ್ರಿಕೆನೆ ಬಂದಿಲ್ಲ ! ಎಂದಾಗ  ಅಲ್ಲಿಂದ ಮರಳಿ ಬಂದ ನಂತರ ನಮ್ಮನು ಕರೆಯಿಸಿ ಕೇಳುವರು. ಆಗಲೂ ನಾವು ಮೊಂಡುವಾದಕ್ಕಿಳಿದು ತಪ್ಪಿಸಿಕೊಳ್ಳುತ್ತಿದ್ದೆವು.

 ಒಂದು ಸುಳ್ಳು ತಮಾಷೆಗಾಗಿ ಆತ್ಮ ಹತ್ಯೆ ಮಾಡಿಕೊಳ್ಳಲು ಹೋಗಿದ್ದ ಅಂದರೆ ಅಂದು ಅವರು ಅವನ ಬಗ್ಗೆ ಆಡಿದ ಮಾತುಗಳು ಸಾಂತ್ವನ ಹೇಳಿದ ರೀತಿ ಇಂದಿಗೂ ನನಗೆ ಕಣ್ಣಿಗೆ ಕಟ್ಟಿದ ಹಾಗೆ ಕಾಣುತ್ತದೆ. ಅವರ ಪ್ರೀತಿಯ ಬೈಗುಳಗಳು ನಮಗೆ ಆ ಸಮಯದಲ್ಲಿ ಅರ್ಥವೆ ಆಗಲ್ಲಿಲ. ನಮಗೆ ಮಾತ್ರ ಯಾವಾಗಲು ಬೈಯುತ್ತಾರೆ ಅನ್ನುವುದೊಂದೆ ನಮ್ಮ ತಲೆಯಲ್ಲಿ ಇತ್ತೆ ಹೊರತು ಇನ್ನೇನು ಅಲ್ಲ. ಅವರ ಮಾತುಗಳನ್ನು ಕೇಳಿಕೊಂಡು ನಾವೂ ಬದಲಾಗಬಹುದಿಲ್ಲತ್ತಲ್ಲ ಎಂದು ಹಳಹಳಿಯಾಗುತ್ತದೆ.

 ನಾವು ಗೌರವಿಸುವ ವ್ಯಕ್ತಿಯಾಗಲ್ಲಿ ಅರ್ಥವಾ ನಾವು ಪ್ರೀತಿಸುವವರಾಗಲಿ , ವಸ್ತು ಆಗಲ್ಲಿ ಅದು ನಮ್ಮಿಂದ ದೂರಾದಾಗ ಮಾತ್ರ ಅದರ ಬೆಲೆ ಗೊತ್ತಾಗುತ್ತದೆ ವಿನಹಃ ಅವರು ಇದ್ದಾಗ ನಾವು ಅವರಿಗೆ ತೋರಿಸುವ ಅಸಡ್ಡೆತನವನ್ನು ನೆನೆದು ಮನಸ್ಸಿಗೆ ಖೇದವಾಯಿತು. ಇದ್ದಾಗ ಬಚ್ಚಿಟ್ಟುಕೊಳ್ಳಲು ಪ್ರಯತ್ನಿಸುವವರು ನಾವುಗಳು ಇಂದು ಅವರು ಇಲ್ಲದಿರುವಾಗ ನೆನಯುತ್ತಿದ್ದೇವೆ. ಅವರ ಕೊನೆಯ ದಿನಗಳಲ್ಲಂತು ನನಗೆ ಗೆಳೆಯನ ರೀತಿಯಲ್ಲಿ ಕರೆದು ನಮ್ಮ ನೋವು ನಲಿವುಗಳು ಹಂಚಿಕೊಂಡದ್ದು ನೆನೆದರೆ ಕಣ್ಣೀರು ಬರುತ್ತದೆ.

ಸದಾ ಬರವಣಿಗೆ ಓದಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಿದ್ದ ಸರ್ ಎಂದು ಯಾರನ್ನು ಹತ್ತಿರ ಸೇರಿಸಿಕೊಳ್ಳದವರು ಕೊನೆಯ ದಿನಗಳಲ್ಲಿ ಮಗುವಿನಂತಾಗಿದ್ದರು. ಕೆಲವು ವ್ಯಕ್ತಿಗಳೆ ಆಗೆ ಇದ್ದಾಗ ಅವರ ಬೆಲೆ ನಮ್ಮಗೆ ಅರ್ಥವಾಗುವುದಿಲ್ಲ. ಆ ಒಂದು ಸುಳ್ಳಿನಿಂದ ನಮ್ಮಮೇಲೆ ಅವರ ಪ್ರೀತಿ ಮತ್ತು ಕರುಣೆ ಎಷ್ಟು ಇತ್ತು ಅನ್ನುವುದು ನನಗೆ ಗೊತ್ತಾಯಿತ್ತು ಅವರು ನಮ್ಮೊಂದಿಗೆ ಇಲ್ಲದೆ ಇರಬಹುದು ಆದರೆ ಅವರು ಬಿಟ್ಟು ಹೋದ ವಿಚಾರಗಳು, ನಮ್ಮೊಂದಿಗೆ ಕಳೆದ ಕೆಲವು ಘಟನೆಗಳು ಮಾತ್ರ ನಮ್ಮಿಂದ ದೂರವಾಗಲಾರವು.

0 ಸಾಯಿಕುಮಾರ ಇಜೇರಿ ಶಹಾಪುರ

Leave a Reply

Your email address will not be published. Required fields are marked *

error: Content is protected !!