ಆಚಾರವಿಲ್ಲದ ನಾಲಿಗೆ

~ ಡಾ. ಜೆ ಎಸ್ ಪಾಟೀಲ

ಇತ್ತೀಚಿಗೆ ಒಂದು ನಿರ್ಧಿಷ್ಟ ರಾಜಕೀಯ ಪಕ್ಷವೊಂದರ ಪುಢಾರಿಗಳ ದೇಶದ ಸ್ವತಂತ್ರಕ್ಕಾಗಿ ಹೋರಾಡಿದ ರಾಜ್ಯ ಮತ್ತು ರಾಷ್ಟ್ರದ ಮಹಾ ಚೇತನಗಳನ್ನು ಅವಹೇಳನ ಮಾಡುವ ದುಸ್ಕ್ರತ್ಯ ದಿನೆ ದಿನೆ ಹೆಚ್ಚುತ್ತಿದೆ. ಒಬ್ಬ ಸಂಸದೆ ಮತ್ತು ಬಾಂಬ್ ಸ್ಪೋಟ ಪ್ರಕರಣದ ಶಂಕಿತ ಭಯೋತ್ಪಾದಕಿ ಗಾಂಧಿ ಭಾವಚಿತ್ರಕ್ಕೆ ಗುಂಡು ಹೊಡೆಯುವ ಅಣಕು ಪ್ರದರ್ಶಿಸಿ ಕುಖ್ಯಾತಳಾದಳು. ಇನ್ನೊಬ್ಬ ಕರ್ನಾಟಕದ ಕರಾವಳಿ ಭಾಗದ ಸಂಸದ ಗಾಂಧಿ ಉಪವಾಸ ಸತ್ಯಾಗ್ರಹದಿಂದ ಸ್ವತಂತ್ರ ದೊರೆಯಲಿಲ್ಲ ಎನ್ನುವ ಮತಿಹೀನ ಹೇಳಿಕೆ ನೀಡಿ ತನ್ನ ನೀಚತನ ಪದರ್ಶನ ಮಾಡಿದ್ದ. ಈಗ ಅದೇ ಪಕ್ಷದ ಇನ್ನೊಬ್ಬ ಶಾಸಕ ಮೊನ್ನೆ ಶತಾಯುಷಿˌ ನಾಡಿನ ಸಾಕ್ಷಿಪ್ರಜ್ಞೆಯಾಗಿರುವ ಸ್ವತಂತ್ರ ಹೋರಾಟಗಾರˌ ಗಾಂಧಿವಾದಿ ಹೆಚ್ ಎಸ್ ದೊರೆಸ್ವಾಮಿಯವರನ್ನು ಪಾಕಿಸ್ತಾನದ ಏಜೆಂಟ್ ಮತ್ತು ನಕಲಿ ಸ್ವತಂತ್ರ ಹೋರಾಟಗಾರ ಎಂದು ತನ್ನ ನಂಜಿನ ನಾಲಗೆ ಹರಿಬಿಟ್ಟಿದ್ದಾನೆ.

ಈ ಮತಿಗೇಡಿಗಳ ಹೇಳಿಕೆಯನ್ನು ಅವರು ಪ್ರತಿನಿಧಿಸುವ ಪಕ್ಷ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಬೇರೆ ಹೇಳುವ ಅಗತ್ಯವಿಲ್ಲ. ಏಕೆಂದರೆ ಗಾಂಧಿ ಸ್ವತಂತ್ರಕ್ಕಾಗಿ ಹೋರಾಡುವಾಗ ಭಾರತಕ್ಕೆ ಸ್ವತಂತ್ರ ಸಿಗಬಾರದು ಮತ್ತು ಸಿಕ್ಕರೂ ಅದು ಜನತಂತ್ರ ದೇಶವಾಗದೆ ಧರ್ಮಾಧಾರಿತ ದೇಶವಾಗಬೇಕು ಎಂದು ಹುನ್ನಾರ ಮಾಡುತ್ತಿದ್ದವರು ಒಟ್ಟಿಗೆ ಸೇರಿ ಸ್ಥಾಪಿಸಿದ ಆ ರಾಜಕೀಯ ಪಕ್ಷ ಇಂಥ ಹೇಳಿಕೆಗಳನ್ನು ಪ್ರಜ್ಞಾಪೂರ್ವಕವಾಗಿಯೇ ತೇಲಿಬಿಡುವಂತೆ ನೊಡಿಕೊಂಡು ಬಾಯುಪಚಾರಕ್ಕೆ ಒಂದಷ್ಟು ಎಚ್ಚರಿಕೆ ನೀಡಿ ಜಾಣ ಮೌನಕ್ಕೆ ಜಾರುತ್ತದೆ ಎನ್ನುವುದು ನಾವು ಬಲ್ಲೆವು. ಆದರೆ ಈ ರೀತಿಯ ಧರ್ಮಾಂಧ ಮತ್ತು ಮತಿಹೀನ ಹೇಳಿಕೆ ನೀಡುವಂತೆ ಪ್ರಚೋದಿಸುವ ಸಿದ್ದಾಂತಿಗಳು ಮೊನ್ನೆ ಈ ಶಾಸಕ ನೀಡಿದ ಹೇಳಿಕೆಯ ಕುರಿತು ನಾನು ಎತ್ತುವ ಎರಡು ಪ್ರಶ್ನೆಗಳಿಗೆ ಉತ್ತರಿಸಬೇಕಿದೆ.

ಶಾಸಕನ ಹೇಳಿಕೆ : ಹೆಚ್ ಎಸ್ ದೊರೆಸ್ವಾಮಿ ನಕಲಿ ಸ್ವಾತಂತ್ರ ಹೋರಾಟಗಾರ ಮತ್ತು ಆತ ಪಾಕಿಸ್ತಾನದ ಏಜೆಂಟ್.

ಮೊನ್ನೆ ಮೊನ್ನೆ ರಾಜ್ಯ ಸರಕಾರ ಕೊಡಮಾಡುವ ಪ್ರತಿಷ್ಟಿತ “ರಾಷ್ಟ್ರೀಯ ಬಸವ ಪುರಸ್ಕಾರ” ಪ್ರಶಸ್ತಿಯನ್ನು ಹೆಚ್ ಎಸ್ ದೊರೆಸ್ವಾಮಿಗಳಿಗೆ ನೀಡಲಾಯಿತು. ಆ ಪ್ರಶಸ್ತಿ ಪ್ರಧಾನ ಸಮಾರಂಧದಲ್ಲಿ ದೊರೆಸ್ವಾಮಿಗಳು ಮಂತ್ರಿ ಸಿ ಟಿ ರವಿಯ ಉದ್ಧಟತನಕ್ಕಾಗಿ ಆತನನ್ನು ವೇದಿಕೆಯ ಮೇಲೆಯೇ ತರಾಟೆಗೆ ತೆಗೆದುಕೊಂಡಿದ್ದನ್ನು ನಾವು ಸ್ಮರಿಸಬಹುದಾಗಿದೆ.

ನನ್ನ ಮೊದಲನೇಯ ಪ್ರಶ್ನೆ : ದೊರೆಸ್ವಾಮಿ ಪಾಕಿಸ್ತಾನದ ಏಜೆಂಟ್ ಮತ್ತು ನಕಲಿ ಸ್ವಾತಂತ್ರ ಹೋರಾಟಗಾರರಾಗಿದ್ದರೆ ಈ ಶಾಸಕ ಪ್ರತಿನಿಧಿಸುವ ಪಕ್ಷವೇ ಆಡಳಿತ ಪಕ್ಷವಾಗಿದ್ದು ಅದು ಯಾವ ಆಧಾರದ ಮೇಲೆ ಪಾಕಿಸ್ತಾನದ ಏಜೆಂಟ್ ಆಗಿರುವ ದೊರೆಸ್ವಾಮಿಗಳಿಗೆ ಬಸವ ಪ್ರಶಸ್ತಿ ನೀಡಿತು ?

ಈ ಪ್ರಶ್ನೆಗೆ ನೀಚ ಹೇಳಿಕೆ ನೀಡಿದ ಶಾಸಕನೇ ಉತ್ತರಿಸಬೇಕೆಂದೇನಿಲ್ಲ. ಸರಕಾರದ ಮುಖ್ಯಸ್ಥನಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರೂ ಉತ್ತರಿಸುವ ಅಗತ್ಯವಿಲ್ಲ. ಆದರೆ ದೇಶಾದ್ಯಂತ ಯುವಕರಲ್ಲಿ ಈ ತರಹದ ವಿಷಮ ಮನಸ್ಥಿತಿ ಹುಟ್ಟುಹಾಕಿರುವ ಬಿಜೆಪಿ ನಿಯಂತ್ರಕ ಸಂಘಟನೆಯ ಯಾವ ಪುರೋಹಿತ ಪುಂಗವರಾದರೂ ಕೂಡ ಆಗಲಿ ಈ ನನ್ನ ಪ್ರಶ್ನೆಗೆ ಉತ್ತರಿಸಬಹುದಾಗಿದೆ. ಸಂಘ ಪರಿವಾರ ನಿಯಂತ್ರಿತ ಬಿಜೆಪಿ ಆಡಳಿತದ ಸರಕಾರ ಪಾಕಿಸ್ತಾನದ ಏಜೆಂಟನೊಬ್ಬನಿಗೆ ರಾಷ್ಟ್ರೀಯ ಬಸವ ಪುರಸ್ಕಾರ ಯಾವ ಆಧಾರದ ಮೇಲೆ ನೀಡಿತು ಎನ್ನುವ ಸಂಗತಿ ತಿಳಿದುಕೊಳ್ಳಲು ನಾಡಿನ ಜನ ಅತಿ ಉತ್ಸುಕರಾಗಿದ್ದಾರೆ. ಇದಕ್ಕೆ ಸಂಘದ ಸರಸಂಘಚಾಲಕ ಮೋಹನ್ ಭಾಗ್ವತ ಆಗಲಿ ಅಥವ ಕರಾವಳಿ ಭಾಗದಲ್ಲಿ ಸಂಘವನ್ನು ಮುನ್ನೆಡೆಸುವ ಬಿ ಎಲ್ ಸಂತೋಷ್ ಆಗಲಿ ಇಲ್ಲದೆ ಕರಾವಳಿಯ ಸೌಹಾರ್ದತೆ ಕದಡಲು ಕಾರಣವಾಗಿರುವ ಕಲ್ಲಡ್ಕ ಪ್ರಭಾಕರ್ ಭಟ್ಟ ಆಗಲಿ ಯಾರು ಬೇಕಾದರೂ ಉತ್ತರಿಸಬಹುದಾಗಿದೆ.

ಏಕೆಂದರೆ ಇವರ ಪಕ್ಷದ ಸರಕಾರಗಳಲ್ಲಿರುವ ಶೂದ್ರ ಮುಖ್ಯಮಂತ್ರಿಗಳು ಆಡಳಿತಾತ್ಮಕ ಅಥವ ಸಾಂಸ್ಕ್ರತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವತಂತ್ರ ಹೊಂದಿಲ್ಲ ಮತ್ತು ಈ ಪ್ರಶಸ್ತಿ ನೀಡಿಕೆ ಮುಂತಾದ ಸಂಗತಿಗಳಲ್ಲಿ ಸರಕಾರದ ನಿರ್ಧಾರದ ಸಂಘ ಪರಿವಾರವೇ ಕೆಲಸ ಮಾಡುತ್ತದೆ ಎನ್ನುವ ಸಂಗತಿ ನಮಗೆಲ್ಲ ತಿಳಿದದ್ದೆ. ಇದಕ್ಕೆ ಉದಾಹರಣೆ ಇತ್ತೀಚಿಗೆ ಸರಕಾರದ ಪ್ರಾಧಿಕಾರವೊಂದಕ್ಕೆ ಸಂಘ ಪರಿವಾರ ಹಿನ್ನೆಯ ಕೋಮುದ್ವೇಷ ಹರಡುವ ಲೇಖನ ಬರವಣಿಗೆಗಾಗಿ ಕುಖ್ಯಾತನಾಗಿರುವ ರೋಹಿತ್ ಚಕ್ರತೀರ್ಥ ಎನ್ನುವ ವ್ಯಕ್ತಿಯನ್ನು ಸದಸ್ಯನಾಗಿ ನೇಮಿಸಿದ ಪ್ರಸಂಗ. ಹಾಗಾಗಿˌ ಸರಕಾರದ ನೀತಿ ನಿಯಮಗಳನ್ನು ಪರೋಕ್ಷವಾಗಿ ನಿರ್ಧರಿಸುವ ಶಕ್ತಿಗಳೇ ದೊರೆಸ್ವಾಮಿಯವರಿಗೆ ನೀಡಿದ ಪ್ರಶಸ್ತಿಯ ಕುರಿತು ಸ್ಪಷ್ಟನೆ ನೀಡಬೇಕಿದೆ. ಒಂದು ವೇಳೆ ದೊರೆಸ್ವಾಮಿಯವರು ಪಾಕಿಸ್ತಾನದ ಏಜೆಂಟ್ ಆಗಿರುವುದು ಸತ್ಯವಾಗಿದ್ದರೆ ಅವರಿಗೆ ಕೊಡಮಾಡಲಾದ ಪ್ರಶಸ್ತಿಯನ್ನು ಹಿಂಪಡೆದು ಅವರ ಮೇಲೆ ಕಾನೂನಾತ್ಮಕ ಕ್ರಮಕ್ಕೆ ಸರಕಾರ ಮುಂದಾಗಬೇಕು. ಇಲ್ಲದಿದ್ದರೆ ಈ ಮತಿಹೀನ ಹೇಳಿಕೆ ನೀಡಿದ ಶಾಸಕನ ಪರವಾಗಿ ಸಂಘ ಪರಿವಾರದವರು ಸಾರ್ವಜನಿಕರಲ್ಲಿ ಕ್ಷಮೆಯಾಚಿಸಬೇಕು. ಈ ನನ್ನ ಪ್ರಶ್ನೆಗೆ ಸಂಬಂಧಪಟ್ಟವರು ಉತ್ತರಿಸುವ ನಿರೀಕ್ಷೆಯಲ್ಲಿರುವೆ.

ಇನ್ನು ಈ ಶಾಸಕದ ಎರಡನೇ ಉದ್ಧಟತನದ ಹೇಳಿಕೆಯನ್ನು ನೋಡೋಣ. ದೊರೆಸ್ವಾಮಿ ಮಾತ್ರ ಸ್ವತಂತ್ರ ಹೋರಾಟಗಾರನಲ್ಲ ನಮ್ಮ ವಾಜಪೇಯಿಯವರೂ ಸ್ವತಂತ್ರಕ್ಕಾಗಿ ಹೋರಾಡಿದ್ದಾರೆ ಎನ್ನುವ ಹೇಳಿಕೆ. ದಿವಂಗತ ಮಾಜಿ ಪ್ರಧಾನಿ ವಾಜಪೇಯಿಯವರು ಹೇಗೆ ಸ್ವತಂತ್ರ ಹೋರಾಟಗಾರರಲ್ಲ ಎನ್ನುಲು ನಮ್ಮಲ್ಲಿ ಸಾಕಷ್ಟು ದಾಖಲೆಗಳಿವೆ. ಅದು ಹೇಗೆಂದರೆˌ 1942 ರ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ತರುಣ ವಾಜಪೇಯಿಯವರು ಭಾಗವಹಿಸುತ್ತಾರೆ. ಅದು ಉತ್ತರಪ್ರದೇಶದ ಆಗ್ರಾ ಸಮೀಪದ ಬಟೇಪುರ ಗ್ರಾಮದಲ್ಲಿ. ಅದು ಅವರ ತಾತನ ಮನೆ. ತಾರುಣ್ಯದ ಉತ್ಸಾಹದಲ್ಲಿ ತರುಣ ವಾಜಪೇಯಿ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಒಮ್ಮೆ ಭಾಗವಸಿದ್ದು ನಿಜ. ಆದರೆ ಮುಂದೇನಾಯ್ತು ಎನ್ನುವುದು ಈಗಾಗಲೇ ದೇಶದ ಜನರಿಗೆ ತಿಳಿದ ಸಂಗತಿಯಾಗಿದೆ. ಆದರೂ ಆ ಸಂಗತಿ ನಮ್ಮ ಯುವಕರಿಗೆ ಗೊತ್ತಾಗಲಿ ಎಂದು ನಾನಿಲ್ಲಿ ಮತ್ತೊಮ್ಮೆ ಪ್ರಸ್ತಾಪಿಸುತ್ತಿದ್ದೇನೆ. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಬ್ರಿಟೀಷ್ ಆಡಳಿತ ತರುಣ ವಾಜಪೇಯಿಯವರನ್ನು ಬಂಧಿಸುತ್ತದೆ. ಬಂಧನದಿಂದ ಗಾಬರಿಯಾದ ವಾಜಪೇಯಿ ಬ್ರಿಟೀಷರಿಗೆ ತನ್ನದು ತಪ್ಪಾಯಿತೆಂದು ಮುಚ್ಚಳಿಕೆ ಬರೆದುಕೊಟ್ಟು ಬಿಡುಗಡೆಯಾಗುತ್ತಾರೆ ಮತ್ತು ತನ್ನೊಂದಿಗೆ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ ಇತರರ ಹೆಸರನ್ನು ಬಹಿರಂಗ ಪಡಿಸಿ ಅವರ ಬಂಧನಕ್ಕೆ ಕಾರಣವಾಗುತ್ತಾರೆ. ಮುಂದೆಯೂ ಕೂಡ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸುವವರನ್ನು ಹಿಡಿದುಕೊಡುವುದಾಗಿ ಬ್ರಿಟೀಷರಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟ ವಾಜಪೇಯಿಯವರ ಆ ದಾಖಲೆ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಬಹಿರಂಗವಾಗಿ ಕೋಲಾಹಲವೆ ಸ್ರಷ್ಟಿಯಾಗುತ್ತದೆ.

ವಾಜಪೇಯಿಯವರ ತಪ್ಪೊಪ್ಪಿಗೆ ಪತ್ರದ ದಾಖಲೆ ಮೊದಲು ಬಿಡುಗಡೆಗೊಳಿಸಿದ್ದು ಇಂದಿನ ಭಾರತೀಯ ಜನತಾ ಪಕ್ಷದ ರಾಜ್ಯಸಭಾ ಸದಸ್ಯ ಮತ್ತು ಭಾರತೀಯ ರಾಜಕೀಯ ರಂಗದ ದಲ್ಲಾಳಿಯಂತಿರುವ ಸುಬ್ರಮಣ್ಯಯಂ ಸ್ವಾಮಿ. ಈ ದಾಖಲೆಗಳ ಆಧಾರದಲ್ಲಿ ಶರಣ ಸಾಹಿತಿ ರಮಜಾನ್ ದರ್ಗಾ ಅವರು ಅಂದು ಪ್ರಜಾವಾಣಿ ಪತ್ರಿಕೆಯಲ್ಲಿ ಸರಣಿ ಲೇಖನಗಳ ಮೂಲಕ ಸಂಗತಿ ನಾಡಿನ ಜನರೆದುರಿಗೆ ಇಡುತ್ತಾರೆ. ದರ್ಗಾರವರ ಲೇಖನಗಳ ಜಾಡು ಹಿಡಿದ ಆಂಗ್ಲ ನಿಯತಕಾಲಿಕ “ಔಟಲುಕ್” ಪರಿಪೂರ್ಣ ವರದಿಯೊಂದನ್ನು ಪ್ರಕಟಿಸುತ್ತದೆ. ಅದರಲ್ಲಿ ವಾಜಪೇಯಿ ಜೊತೆಗೆ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿ ವಾಜಪೇಯಿ ಮಾಹಿತಿಯಾಧಾರದಲ್ಲಿ ಬ್ರಿಟೀಷರಿಂದ ಬಂಧನಕ್ಕೊಳಗಾಗಿದ್ದ ವ್ಯಕ್ತಿಯನ್ನು ಆತನ ಊರಾದ ಆಗ್ರಾ ಹತ್ತಿರದ ಬಟೇಪುರದಲ್ಲಿ ಔಟಲುಕ್ ಪತ್ರಿಕೆ ಸಂದರ್ಶಿಸುತ್ತದೆ. ಈ ಸುದ್ದಿ ದೇಶಾದ್ಯಂತ ಸಂಚಲನವನ್ನೇ ಸ್ರಷ್ಟಿಸುತ್ತದೆ. ವಿರೋಧ ಪಕ್ಷಗಳು ಸುದ್ದಿಯನ್ನು ಸಂಸತ್ತಿನ ಅಂಗಳಕ್ಕೂ ಒಯ್ಯುತ್ತವೆ. ಅಂದು ಪ್ರಧಾನಿಯಾಗಿದ್ದ ವಾಜಪೇಯಿ ಬಿಜೆಪಿ ಪಕ್ಷದ ಇತರ ನಾಯಕರಂತೆ ಬಹಿರಂಗ ಆಕ್ರಮಣಶೀಲ ಪ್ರವರ್ತಿಯವರಾಗಿರದ್ದರಿಂದ ಮತ್ತು ಅವರ ವಿರೋಧ ಪಕ್ಷದ ನಾಯಕಯೊಂದಿಗಿನ ಸೌಹಾರ್ದ ಸಂಬಂಧದಿಂದ ಬಿಜೆಪಿ ಪಕ್ಷ ವಿರೋಧ ಪಕ್ಷಗಳಿಗೆ ಮಾಡಿದ ಒಳ ಮನವಿಯನ್ನು ಪರಿಗಣಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ವಾಜಪೇಯಿಯವರಿಗೆ ಮುಜಗರವಾಗುವುದನ್ನು ತಪ್ಪಿಸಲು ಆ ಸಂಗತಿಯ ಕುರಿತ ಚರ್ಚೆ ಅಲ್ಲಿಗೆ ನಿಲ್ಲಿಸಲಾಗುತ್ತದೆ.

ನನ್ನ ಎರಡನೇ ಪ್ರಶ್ನೆ : ಈ ಸಂಗತಿಯನ್ನು ಗಮನದಲ್ಲಿರಿಸಿಕೊಂಡು ಸಂಘ ಪರಿವಾರ ಹಿನ್ನೆಲೆಯ ವಾಜಪೇಯಿಯಾಗಲಿ ಅಥವ ಇನ್ನಾರೆ ಆಗಲಿ ಬ್ರಿಟೀಷರೊಂದಿಗೆ ಹೊಂದಿದ್ದ ಅನ್ಯೊನ್ಯ ಸಂಬಂಧಗಳನ್ನು ಮತ್ತು ಸ್ವತಂತ್ರ ಹೋರಾಟದಲ್ಲಿ ಭಾಗವಹಿಸದಿರುವ ಸಂಗತಿ ಜನರಿಗೆಲ್ಲ ತಿಳಿದ ವಿಷಯವೇ ಆಗಿದ್ದರಿಂದ ವಾಜಪೇಯಿ ಮೊದಲ್ಗೊಂಡು ಸಂಘ ಪರಿವಾರದ ಯಾವುದೇ ನಾಯಕರು ಸ್ವತಂತ್ರ ಹೋರಾಟಗಾರರಾಗಿರಲಿಲ್ಲ ಎನ್ನುವ ಸಾರ್ವತ್ರಿಕ ಸಂಗತಿಯನ್ನು ನಿರಾಕರಿಸಿ ಸಂಘ ಪರಿವಾರದ ನಾಯಕರ ಸ್ವತಂತ್ರ ಹೋರಾಟದ ಬಗ್ಗೆ ಸಂಬಂಧಿಸಿದವರು ಉತ್ತರಿಸಿಯಾರೆ ?

ಇನ್ನಾದರೂ ಈ ಮೂಲಭೂತವಾದಿ ಮನಸ್ಥಿತಿಯ ಬಿಜೆಪಿ ಪಕ್ಷದವರು ಸಾರ್ವಜನಿಕವಾಗಿ ಮಾತನಾಡುವಾಗ ಮೈಮೇಲೆ ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕಿದೆ. ಇಲ್ಲದಿದ್ದರೆ ಭಾರತೀಯ ಬಹುಸಂಸ್ಕ್ರತಿಯ ಜನ ಇವರನ್ನು ಕಸದ ಬುಟ್ಟಿಗೆ ಎಸೆಯುವುದರಲ್ಲಿ ಅನುಮಾನವೇ ಇಲ್ಲ.

~ ಡಾ. ಜೆ ಎಸ್ ಪಾಟೀಲ.

6 thoughts on “ಆಚಾರವಿಲ್ಲದ ನಾಲಿಗೆ

  1. ನಿಮ್ಮ ಪ್ರಕಾರ ದೇಶಾದ್ಯಂತ ಕಾಂಗ್ರೆಸನ್ ಇದೆ ಕಾರಣ್ಣಕ್ಕೆ ಜನ ತಿರಸ್ಕಿರಿಸಿದ್ದಾರೆ

      1. ಭಕ್ತರ ಮೂರ್ಖತನವೇ ದೇಶ ಬ್ರಾಹ್ಮಣಶಾಹಿಗಳ ಪಾಲಾಗಲು ಕಾರಣ

    1. ಎಲೇ ಮೂರ್ಖ ನಿನ್ನ ಮೂರ್ಖತನ ಸನಾತನಿಗಳಾಗೆ ಮಾರಿಕೊಂಡಾಗಲೆ ನಿನ್ನ ಹೆಸರನ್ನು ಸರಿಯಾಗಿ ಬರೆದುಕೊಳ್ಳಲಾಗದ ಸ್ಥಿತಿಯಲ್ಲಿರುವೆ

Leave a Reply

Your email address will not be published. Required fields are marked *

error: Content is protected !!