ಬಸವ ಧರ್ಮದ ಮಹಾಜಂಗಮ

೦ ಮಹಾಂತೇಶ್ ಕುಂಬಾರ

ಸುಳಿಯ ಬಲ್ಲಡೆ ಸುಳುಹೆ ಲೇಸಯ್ಯ ಗಮನವಿಲ್ಲದೇ
ಸುಳಿಯ ಬಲ್ಲಡೆ ನಿರ್ಗಮನ ಯಾಗಿ ನಿಲ್ಲಬಲ್ಲಡೆ, ಅದಕ್ಕದೆ ಪರಿಣಾಮ ಅದಕ್ಕದೆ ಸಂತೋಷ! ಗುಹೇಶ್ವರಲಿಂಗದಲ್ಲಿ ಅವರ ಜಗದಾರಾಧ್ಯರೆಂಬೆ.

ಬಯಲ ಮೂರುತಿ, ರೋಮ ಕಾಯ ಸ್ಥಿತಿಯ ಮಹಾ ಜಂಗಮ ಅಲ್ಲಮಪ್ರಭುವಿನ ಮೇಲಿನ ವಚನದಂತೆ ಮಹಾ ವಿರಕ್ತರಾಗಿ ಲೋಕೋದ್ಧಾರದ ಮಹಾ ಮಣಿಹವನ್ನು ಹೊತ್ತುಕೊಂಡು ಬಂದು ಮಣಿಹವನ್ನು ಅತ್ಯಂತ ಸಾರ್ಥಕವಾಗಿ ಪೂರೈಸಿದ ಮಹಾಜಗದ್ಗುರು ಜಂಗಮ ಪುಂಗವರು ಎಂದರೆ ಗದಗಿನ ಲಿಂಗೈಕ್ಯ ಸದ್ಗುರು ಸಿದ್ಧಲಿಂಗ ಮಹಾಸ್ವಾಮಿಗಳು.
ಇಂಥ ಮಹಾ ಜಂಗಮ ಮೂರ್ತಿ ಸುಳಿದೆಲ್ಲೆಡೆ ಬಸವತತ್ವದ ಕಂಪು ಸೂಸುತ್ತಿತ್ತು.ಪರಮಸತ್ಯ ದರ್ಶಿಗಳಾದ ಅವರ ನಡೆನುಡಿ ಬಸವತತ್ವದ ಕುಲುಮೆಯಲ್ಲಿ
ಎರಕಹೊಯ್ದಿತ್ತು. ಹಾಗಾಗಿ ಮಹಾಗುರು ಸಿದ್ಧಲಿಂಗ ಮಹಾಸ್ವಾಮಿಗಳು ಬಸವತತ್ವ ನಿಷ್ಠರಿಗೆ ಶಕ್ತಿ ತುಂಬುವ ಚೈತನ್ಯವಾಗಿ ತೋರುತ್ತಿದ್ದರು.

ತನುಮನ ಭಾವದಿಂದ ಪವಿತ್ರ ರಾಗಿದ್ದ ಅವರ ನೋಟ ಅವರ ನಡೆ ಅವರ ನುಡಿಯನ್ನು ಇಡೀ ಬಸವ ಸಂಕುಲ ಕಾತುರದಿಂದ ಕಾಯುತ್ತಿತ್ತು. ಎಂಥ ಘನ ಗಂಭೀರವಾದ ವ್ಯಕ್ತಿತ್ವ ಅವರದ್ದು! ಅವರ ಸುಳಿವೇ ಅಲ್ಲಮಪ್ರಭು ವಿನಂತೆ ಘನ ಗಂಭೀರವಾದ ಸುಳಿವು… ಅವರಿಂದ ವೇದಿಕೆ ಮೇಲೆ ನೆರೆದ ಜನಸ್ತೋಮದ ನಡುವೆ ಅನಂತಸ್ವಾಮಿ ಮಹಾಸ್ವಾಮಿಗಳ ಮಧ್ಯದಲ್ಲಿ ಕುಳಿತಾಗ ಅನಂತ ಆಗಸದ ನಕ್ಷತ್ರಗಳ ನಡುವೆ ಪ್ರಕಾಶಿಸುವ ಹುಣ್ಣಿಮೆಯ ಚಂದ್ರನಂತೆ, ಅವರು ಶೋಭಿಸುತ್ತಿದ್ದರು. ಅವರ ಹಣೆಯ ಮೇಲೆ ಸದಾ ಶಿವನ ತೇಜಸ್ಸಾಗಿ ಹೊಳೆಯುವ ಶ್ರೀ ವಿಭೂತಿ. ಸುಂದರವಾಗಿ ಸುತ್ತಿದ ಅವರ ಪೇಟ , ಕೈಯಲ್ಲಿ ಹಿಡಿದ ಬಿದರಿನ ಬೆತ್ತ, ತೆರೆದ ಕಣ್ಣಿಂದಲೂ ಅನಂತದ ಕಡೆ ತದೇಕ ಚಿತ್ತ ವಾಗಿ ಹರಿದ ಅವರ ಕಣ್ಣೋಟ, ಅವರ ಮುಖದಲ್ಲಿ ಪ್ರಸನ್ನತೆ ಹಾಗೂ ಗದ್ದಕ್ಕೆ ಕೈ ಮುಷ್ಟಿ ಮಾಡಿ ಕುಳಿತ ಭಂಗಿ ಸಾಮಾನ್ಯವಾದುದಲ್ಲ! ಅದು ಓರ್ವ ಮಹಾಪುರುಷನ ಲೋಕ ಚಿಂತಕನ ಲೋಕೋದ್ಧಾರಕನ ಭವ್ಯ ಲಕ್ಷಣವಾಗಿತ್ತು.

ನಾನು ಕಂಡಂತೆ ಅನ್ಯರ ಚಿಂತನೆಯನ್ನು ಮನಗೊಟ್ಟು ಕೇಳುವ ಸಹೃದಯಿ ಆಗಿದ್ದರು. ಮಹಾ ಮೌನಿಯಾಗಿ ಪರಮ ತಪಸ್ವಿಯಾಗಿ ತೋರುತ್ತಿದ್ದರು. ಒಂದೆಡೆ ಪರಮ ಶಾಂತಿಯ ಸಾಗರದಂತೆ ಅವರ ವ್ಯಕ್ತಿತ್ವ ಅವರು ಬಹಿರ್ಮುಖರಾಗಿ ಮಾತನಾಡಲು ಆರಂಭಿಸಿದರೆ ಸಾಕು… ವೈಚಾರಿಕ ವೈಜ್ಞಾನಿಕ ಚಿಂತನೆಗಳು ಅವರ ಹೃದಯದಿಂದ ಅಲೆಗಳ ರೂಪದಲ್ಲಿ ಆವಿರ್ಭವಿಸು ತ್ತಿದ್ದವು. ಎದುರಿಗಿದ್ದ ಶ್ರೋತೃವಿನ ಹೃದಯ ಹೊಕ್ಕು ಅವನಲ್ಲಿ ವೈಚಾರಿಕ ಚಿಂತನೆಯ ಮಂಥನ ನಡೆಸಲಾರಂಭಿಸುತ್ತಿತ್ತು. ಸಮತೆಯ ಸದ್ಭಾವದ ಶರಣರ ವಿಚಾರಗಳು ವಚನ ಸಂದೇಶಗಳು ಗದುಗಿನ ಲಿಂಗೈಕ್ಯ ಜಗದ್ಗುರುಗಳ ಮುಖದಿಂದ ಧರ್ಮಾಜ್ಞೆಗಳಾಗಿ ಹೊರಬೀಳುತಿದ್ದವು. ಅಂತೆಯೇ ಅವರು ಬಸವ ಪ್ರಣಿತ ಲಿಂಗಾಯತ ಧರ್ಮದ ಮಹಾ ದಂಡನಾಯಕರಾಗಿ ತೋರಿ.. ಅವರು ಸುಳಿ ದೆಲ್ಲೆಡೆ ಜನಮನದಲ್ಲಿ ಸಂಚಲನ ಉಂಟುಮಾಡುತ್ತಿತ್ತು. ಅದನ್ನು ನೆನೆಸಿಕೊಂಡರೆ ಪರಮ ಆಶ್ಚರ್ಯವಾಗುತ್ತದೆ. ಅಂತೆಯೇ ಬಸವ ಭಕ್ತರಿಗೆಲ್ಲ ಪರಮರಾಧ್ಯರಾಗಿ ಈ ಶತಮಾನದಲ್ಲಿ ತೋರಿದ್ದು ಇತಿಹಾಸವೇ ಸರಿ.
ಬದಲಾವಣೆಯ ಹರಿಕಾರರಾಗಿ ಕಂಡ ಸಿದ್ಧಲಿಂಗ ಮಹಾಸ್ವಾಮಿಗಳು ಜಿಡ್ಡುಗಟ್ಟಿದ ಸಮಾಜದ ಕೊಳೆಯನ್ನು ತೊಳೆಯಲು ಬಂದ ಪುಣ್ಯಪುರುಷ. ಅವರ ಆ ಪರಿವರ್ತನೆ ಪ್ರಾರಂಭಿಸಿದ್ದೆ ಅವರ ಶ್ರೀಮಠದಿಂದ. ಕೇವಲ ಲಿಂಗಾಯತರಿಗೆ ಮಾತ್ರ ಪ್ರವೇಶ ಎಂಬ ಮಠದ ಮೇಲಿನ ಬೋರ್ಡನ್ನು ತೆಗೆದುಹಾಕಿ ಮಾನವ ಕುಲವೆಲ್ಲವೂ ಒಂದೇ ಮೇಲು ಕೀಳು ಜಾತಿ ಧರ್ಮ ಮಾಡಿಕೊಂಡಿದ್ದು ಮನುಷ್ಯನೆ ವಿನಹ ಸೃಷ್ಟಿಕರ್ತ ಪರಮಾತ್ಮನಲ್ಲ. ಧರ್ಮ ಎಂದರೆ ಕೇವಲ ದೇವರನ್ನು ಪೂಜಿಸುವುದು ಹೋಮ-ಹವನಗಳನ್ನು ಆಚರಿಸುವುದಲ್ಲ. ಮಾನವಲೋಕದ ಕಲ್ಯಾಣವೇ ನಿಜವಾದ ಧರ್ಮ ಮಾನವ ಲೋಕಕಲ್ಯಾಣ ಬಯಸದ ಧರ್ಮ ಧರ್ಮವೇ ಅಲ್ಲ ಅದು ಯಾವ ಧರ್ಮ ವಾದರೇನು? ಧರ್ಮ ಎಂಬ ಪದಕ್ಕೆ ನಡೆ-ನುಡಿಯಿಂದ ಮಹಾ ವ್ಯಾಖ್ಯಾನ ನೀಡಿದವರು ಗದಗ್ ಶ್ರೀಮಠದ ಸಿದ್ಧಲಿಂಗ ಮಹಾಸ್ವಾಮಿಗಳು.ಆದ್ದರಿಂದ ಅವರ ಶ್ರೀಮಠದ ಲೋಕಕಲ್ಯಾಣದ ಕಾರ್ಯದಲ್ಲಿ ಕೇವಲ ಲಿಂಗಾಯತರಿಗೆ ಮಾತ್ರವಲ್ಲ ಇಸ್ಲಾಂ ದಲಿತ ಕ್ರೈಸ್ತ ಹೀಗೆ ಸರ್ವ ಜನಾಂಗ ಜಾತಿ ಧರ್ಮ ದವರಿಗೂ ಆದ್ಯತೆ ಇತ್ತು.
ಅವರ ಶ್ರೀಮಠದ ಮಹಾ ಜಾತ್ರೆಯ ಅಧ್ಯಕ್ಷತೆಯನ್ನು ಇಸ್ಲಾಂ ಬಂಧು ಓರ್ವರಿಗೆ ನೀಡಿದ್ದಾರೆ ಎಂದು ಕೇಳಿದಾಗ ಇದು ನಿಜವಾದ ಸಂತನ ಮಹಾ ಧರ್ಮದ ನಿಲವು ಎಂದು ವೇದ್ಯವಾಯಿತು. ತಮ್ಮ ಶ್ರೀಮಠದ ವಸತಿ ನಿಲಯದಲ್ಲಿ ಅನೇಕ ಇಸ್ಲಾಂ ವಿದ್ಯಾರ್ಥಿಗಳು ಆಶ್ರಯ ಪಡೆದು ಜೀವನ ರೂಪಿಸಿಕೊಂಡು ಇಂದಿಗೂ ಗುರುಗಳ ಶಿಷ್ಯರೆಂದು ಲಿಂಗಾಯತರ ಮನೆಯ ಮಠದ ಕಾರ್ಯಕ್ರಮಗಳಲ್ಲಿ ಶ್ರೀವಿಭೂತಿಯ ಸಿದ್ಧಲಿಂಗ ಮಹಾಸ್ವಾಮಿಗಳು ನೆನೆಸುತ್ತಾ ಹಣೆಗೆ ಹೆಮ್ಮೆಯಿಂದ ಧರಿಸುವುದನ್ನು ಕಂಡಾಗ ಸದ್ಗುರುಗಳು ಬಿತ್ತಿ ಬೆಳೆದ ಸದ್ಭಾವದ ಬೆಳೆ ಎಷ್ಟು ಎತ್ತರದ್ದು ! ಎಂಬುದು ಅರಿವಿಗೆ ಬರುತ್ತದೆ.

ಅವರ ಶ್ರೀಮಠದ ಜಾಗದಲ್ಲಿಯೇ ಮಸೀದಿಗೆ ಸ್ಥಳಾವಕಾಶ ನೀಡಿದ ಮಹಾ ಚೇತನವನ್ನು ನೆನೆಸಿಕೊಂಡಾಗ ನಿಜ ಮಾನವ ಧರ್ಮ ಇದೆ ಎಂದು ಅರ್ಥವಾಗುತ್ತದೆ. ಶ್ರೀಮಠದಲ್ಲಿ ಅಲ್ಲಾಹನನ್ನು ಕಾಣಬೇಕು. ಮಸೀದಿಯಲ್ಲಿ ಶಿವ ಬೆಳಕು ತೋರಬೇಕು , ದೇವ ಬೇರೆ ಇಲ್ಲ ನಾನು ಮಾತ್ರ ಭಿನ್ನ ಅದಕ್ಕೆ ಕಾರಣ ಅವರ ಅವರ ಭಾಷೆ ಬೇರೆ ಧರ್ಮಗಳು ಬೇರೆ ಬೇರೆ ಪ್ರದೇಶದಲ್ಲಿ ಜನ್ಮತಾಳಿದ್ದು ಕಾರಣ ಆದರೆ ತತ್ವ ಒಂದೇ ಒಂದೇ ಅಲ್ಲವೇ ? ಎಂದು ಸೌಹಾರ್ದದ ನುಡಿಯಿಂದ ನಾಡನ್ನು ಕಟ್ಟಲು ಬಯಸಿದರು. ಅದರಂತೆಯೇ ಉತ್ತರಪ್ರದೇಶದಲ್ಲಿ ಜಾಟ್ ಸಮುದಾಯಕ್ಕೆ ಇಷ್ಟಲಿಂಗ ದೀಕ್ಷೆಯನ್ನು ಕೊಡುವುದರ ಮೂಲಕ ಸಮುದಾಯವನ್ನು ಆ ಭಾಗದಲ್ಲಿ ಗೌರವ ಮತ್ತು ಅಭಿಮಾನದಿಂದ ಬಾಳುವಂತ ಮಾಡಿದರು. ಇದು ಸಾಮಾನ್ಯವಾದ ಕೆಲಸವೇನು?


ಮನುಷ್ಯ ಕುಲಂ ತಾನೊಂದೆ ವಲಂ ಎಂಬ ಮಹಾಕವಿ ಪಂಪನ ನುಡಿ ಧರ್ಮಗುರು ಬಸವ ತಂದೆಯ ಇವ ನಮ್ಮವ ಇವನಮ್ಮವ ಎಂಬ ವಚನ ಭಾವ ಸಿದ್ಧಲಿಂಗಸ್ವಾಮಿಗಳು ಹೃದಯಗೀತೆ ಯಾಗಿಸಿಕೊಂಡು ಬದುಕಿನುದ್ದಕ್ಕೂ ನಡೆದುತೋರಿದ ಮಹಾನ್ ಸಂತರು. ಸದ್ಭಾವನೆ ಪಾದಯಾತ್ರೆಯ ಮೂಲಕ ಸೌಹಾರ್ದತೆಯ ಬೀಜ ಬಿತ್ತಿ ನಾಡಿನೆಲ್ಲೆಡೆ ಪರಮ ಶಾಂತಿಯು ನೆಲೆಸುವಂತೆ ಮಾಡಿದ ಗಾಂಧೀಜಿಯವರು. ಅವರ ವ್ಯಕ್ತಿತ್ವ ಬಸವ ಅಲ್ಲಮ ಗಾಂಧಿ ವಿವೇಕಾನಂದ ಪೆರಿಯಾರ್ ಸ್ವಾಮಿನಾರಾಯಣ ಮುಂತಾದ ಕ್ರಾಂತಿಕಾರಕ ಸುಧಾರಕರ ಮಾನವ ಕುಲೋದ್ಧಾರಕರ ಶಕ್ತಿಯ ಸಂಗಮವಾಗಿದ್ದರು. ಆದ್ದರಿಂದಲೇ ಹಾಳಾಗಿ ಹೋಗಿದ್ದ ಶ್ರೀಮಠದ ಜವಾಬ್ದಾರಿಯನ್ನು ಜಗದ್ಗುರು ಪೀಠವನ್ನು ಅಲಂಕರಿಸುವುದು ರ ಮೂಲಕ ಸ್ವೀಕರಿಸಿ ಘಟಕದಿಂದ ಮಠ ಬೆಳಗಿದ ಮಹಾನುಭಾವರು. ಯಡಿಯೂರ ತೋಂಟದ ಸಿದ್ಧಲಿಂಗ ಬಸವಧರ್ಮದ ಸುಮ್ನೆ ಪೀಠದ ಅಲ್ಲಮಪ್ರಭು ಪರಂಪರೆಯನ್ನು ಅದರ ಮಹತ್ವವನ್ನು ಜಗಕ್ಕೆ ಸಾರಿದ ಪ್ರವಾದಿಯಂತೆ ನಮಗೆ ತೋರಿದರು.

ಹಿರಿದಪ್ಪ ಜಲಧಿಯ ಮಡುವಿನೊಳಗೆ
ಕರಿಯಾ ಕಬ್ಬಿಲ ಜಾಲವ ಬೀಸಿದ ನೋಡಯ್ಯ
ಅರಿದ ತಲೆ ಐದು ಅರಿಯದ ತಲೆ ಐದು ಕರಿಯ ತಲೆ ಐದು ಮುಂದೈದಾವೆ ನೋಡಯ್ಯ.
ಕರಿಯ ಕಬ್ಬಿಲ ಜಾಲವ ಹೊತ್ತುಕೊಂಡು ಹೋದರೆ ನೇತ್ರದಲೋ ಕುಳಿ ಹಾಡಿತ್ತು ಕಂಡೆನು ಗುಹೇಶ್ವರ

ಈ ಲೋಕ ಮತ್ತು ಲೌಕಿಕದ ಬದುಕೆಂಬುದು ಆಳ ವಿಸ್ತಾರವಾದ ಸಾಗರದಂತೆ. ಕಾಲ ಪುರುಷ ಎಂಬ ಸಾಲಗಾರನು ಬಲೆಯ ಬೀಸುತ್ತಲೇ ಜೀವಗಳು ಗಳಾದ ಈ ಪ್ರಾಪಂಚಿಕ ಸುಖಭೋಗಾಸಕ್ತರು ಬಲೆಗೆ ಬಿದ್ದು ಬಿಡುತ್ತಾರೆ. ಗೌರವ ಪ್ರತಿಷ್ಠೆ ಹಮ್ಮು ಬಿಮ್ಮುಗಳ ತೆಕ್ಕೆಗೆ ಸಿಲುಕಿ ಸಿಕೊಂಡು ರಕ್ತ ಸಂಬಂಧದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಾರೆ. ಅನೇಕ ಸ್ವಾಮಿ ಮಹಾಸ್ವಾಮಿಗಳ ಪರಿಸ್ಥಿತಿ ಇದುವೇ ಆಗಿದೆ. ಆದರೆ ಸಿದ್ಧಲಿಂಗ ಮಹಾಸ್ವಾಮಿಗಳು ವಿರಕ್ತರಾದ ಮೇಲೆ ಎಲ್ಲಿಯೂ ಯಾವತ್ತೂ ಬಂಧನದಲ್ಲಿ ಇರಲಿಲ್ಲ.


ಎಡೆಯೂರ ಸಿದ್ಧಲಿಂಗರ ಅಲ್ಲಮಪ್ರಭು ಪರಂಪರೆಯ ಬಸವ ಪ್ರಣಿತ ಲಿಂಗಾಯತ ಧರ್ಮದ ಶೂನ್ಯ ಪೀಠ ಎಂದರೆ ಸಾಮಾನ್ಯವೇ? ಅಲ್ಲ… ಇದನ್ನು ಮೀರಿಸುವ ತತ್ವವಾಗಲಿ ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಹೃದಯ ಮಾವ ಗಟ್ಟಿಗೊಂಡು ತತ್ವಕ್ಕೆ ಬದ್ಧರಾಗಿಯೇ ಜೀವಿಸುವುದು ಬಹು ಕಷ್ಟದ ಕೆಲಸ. ಆದರೆ ಸಿದ್ದಲಿಂಗ ಮಹಾಸ್ವಾಮಿಗಳಿಗೆ ಇದು ಕಷ್ಟವೆನಿಸಲಿಲ್ಲ. ಅರಮನೆಯ ಅರಸೊತ್ತಿಗೆಯಿಂದ ದೊರೆತ ಅಡ್ಡಪಲ್ಲಕ್ಕಿ ಮಣಿಮುಕುಟ ಖಚಿತ ಕಿರೀಟ ಮುತ್ತಿನ ಮಾಲೆ ಬೆಳ್ಳಿಯ ದಂಡ ಚಿತ್ತಾಕರ್ಷಕವಾಗಿಸುವ ಒಡವೆ ವಡ್ಡಾಣ ಗಳು ಮಠದ ತುಂಬೆಲ್ಲ ಇದ್ದರು ಜೀವನದ ಉದ್ದಕ್ಕೂ ಅವನ್ನು ಸ್ಪರ್ಶಿಸಲಿಲ್ಲ. ಇಂದಿನ ಗುರು ಜಗದ್ಗುರುಗಳು ಇವರ ಬದುಕನ್ನು ನೋಡಿ ಕಲಿಯಬೇಕಾದದ್ದು ಬಹಳವಿದೆ ಅಲ್ಲವೇ? ಅವರೆಂದಿಗೂ ಅಡ್ಡಪಲ್ಲಕ್ಕಿ ಮೆರೆಯಲಿಲ್ಲ. ವಚನ ಸಾಹಿತ್ಯವನ್ನು ಮೆರೆಸಿದರು. ಬಸವಣ್ಣನ ಧರ್ಮವನ್ನು ಮೆರೆಸಿದರು. ಅವರು ದಂಡ ನಾಯಕರಂತೆ ಮುಂದೆ ನಡೆದರು ಬಸವ ಅನುಯಾಯಿಗಳು ಬಸವತತ್ವಕ್ಕೆ ಬದ್ಧತೆಯುಳ್ಳ ಮಠಾಧಿಪತಿಗಳು ಅವರ ಹಿಂದೆ ನಡೆದರು. ಅಂತ ಧೀರ ವ್ಯಕ್ತಿತ್ವ ಅವರದ್ದು.

ಡಾಕ್ಟರ್ ಸಿದ್ಧಲಿಂಗ ಮಹಾಸ್ವಾಮಿಗಳು ಅಡ್ಡಪಲ್ಲಕ್ಕಿ ಹತ್ತಿ ಮೆರೆಯಬಹುದಿತ್ತು. ಜನರ ಅಂಧಶ್ರದ್ಧೆಯನ್ನು ಬಂಡವಾಳವಾಗಿಸಿಕೊಂಡ ಅನೇಕ ಸ್ವಾಮಿಗಳಂತೆ ತೋಂಟದ ಸಿದ್ಧಲಿಂಗರನ್ನು ನಂಬಿದ ಭಕ್ತರಲ್ಲಿ ಮೌಢ್ಯತೆ ಬಿತ್ತಿ ಬೆಳೆದು ಅವರ ಅಂಧ ಶ್ರದ್ಧೆಯನ್ನು ಬಂಡವಾಳವಾಗಿಸಿ ಕೊಳ್ಳಬಹುದಿತ್ತು. ಆದರೆ ಗುರುಗಳು ಭಕ್ತರನ್ನು ಮೌಢ್ಯತೆಗೆ ಸಾಗಿಸದೆ ವೈಚಾರಿಕ ವೈಜ್ಞಾನಿಕ ತಳಹದಿಯ ಮೇಲೆ ಮುನ್ನಡೆಸಲು ಪ್ರೇರೇಪಿಸಿದರು. ಗುರುಗಳು ವಿರಕ್ತ ಪರಂಪರೆಯ ವಾರಸುದಾರರಾಗಿ ನಿಜವಾಗಿ ಬದುಕಿದರು. ಗುರುಗಳ ಜಗದ್ಗುರು ನಿರಂಜನ ಪೀಠದ ಪಟ್ಟಾಭಿಷೇಕದ ಸಂದರ್ಭದಲ್ಲಿ ದಿವ್ಯಜ್ಞಾನದ ಸಂಕೇತವಾದ ಕಿರೀಟವನ್ನು ಸಮತೆಯ ದಂಡವನ್ನು ತ್ಯಾಗದ ಸಂಕೇತವಾದ ಕಂಪನಿಯನ್ನು ತೊಟ್ಟು ಆಸೀನರಾಗಿದ್ದರು. ಅವರ ಪೂರ್ವಾಶ್ರಮದ ಸಹೋದರರು ಹಾಗೂ ಸಿಂದಗಿಯ ಪಟ್ಟಾಧ್ಯಕ್ಷರಾದ ಶಾಂತಲಿಂಗ ಶಿವಾಚಾರ್ಯರು ಬಂಗಾರದ ಕಿರೀಟವನ್ನು ಸಹೋದರನಿಗೆ ತೊಡಿಸಿ ಕಣ್ಮನವನ್ನು ತುಂಬಿ ಕೊಳ್ಳಬೇಕೆಂದು ಹಾತೊರೆದರು. ಆದರೆ ಸಿದ್ಧಲಿಂಗ ಮಹಾಸ್ವಾಮಿಗಳು ಅವರ ಬಯಕೆಯನ್ನು ಅಷ್ಟೇ ಸರಳವಾಗಿ ತಿರಸ್ಕರಿಸಿ ಒಡವೆ ಬಂಗಾರ ತ್ಯಾಗಿ ಆದವನಿಗೇಕೆ ? ಆಭರಣ ಮೋಗದ ಸಂಕೇತ ! ನಾಳೆ ಬಂದ ಭಕ್ತರೆಲ್ಲ ಇದನ್ನೇ ಮಾಡ ಹೊರಟರೆ ಭಕ್ತರ ಶ್ರಮದ ಹಣವೆಲ್ಲ ಅಂಧಶ್ರದ್ಧೆಯ ಭಕ್ತಿಗೆ ವ್ಯಯವಾಗುತ್ತದೆ. ಅಂತಹ ಒಡವೆ ವಡ್ಯಾಣ ಆಸೆ ವಿರಕ್ತ ರಾದವರಿಗೆ ಸಲ್ಲದು ಎಂದು ತಿಳಿ ಹೇಳಿದರಂತೆ.

ಎಂಥ ಅದ್ಭುತ ವ್ಯಕ್ತಿತ್ವ ಅವರದು ! ಇಂದು ಹಲವು ಮಠಾಧೀಶರು ನೋಡುತ್ತೇವೆ ಅವರಿಗೆ ಒಡವೆ ವೈಡೂರ್ಯ ವಸ್ತ್ರಾಭರಣಗಳು ಬೇಕು. ತ್ಯಾಗದ ಸಂಕೇತವಾದ ಕಪನಿಯನ್ನು ತೊಟ್ಟರು ಅವರ ಮಠದಲ್ಲಿ ಎಲ್ಲಾ ಪೂರ್ವಾಶ್ರಮದ ಬಂಧುಗಳೆ ತುಂಬಿರುತ್ತಾರೆ. ಆದರೆ ಸಿದ್ಧಲಿಂಗ ಮಹಾಸ್ವಾಮಿಗಳು ಇದಕ್ಕೆ ತದ್ವಿರುದ್ಧ ವ್ಯಕ್ತಿತ್ವ ಹೊಂದಿದವರು. ಎಂದಿಗೂ ರಕ್ತ ಸಂಬಂಧಿಗಳನ್ನು ಮಠದ ಹತ್ತಿರ ಸುಳಿಯ ಗೊಡಲಿಲ್ಲ. ಅದರಂತೆ ಯಾರಾದರೂ ಬಂದು ಅವರ ಪೂರ್ವಾಶ್ರಮದ ಬಂಧುಗಳನ್ನು ಸ್ಮರಿಸಿಕೊಂಡರೆ ಮೌನವಾಗಿ ಇರುತ್ತಿದ್ದರು. ಅವರ ಮಾತಿಗೆ ಉತ್ತರ ಕೊಡುತ್ತಿರಲಿಲ್ಲ. ಅಷ್ಟರಮಟ್ಟಿಗೆ ವೈರಾಗ್ಯವನ್ನು ಸಂಪಾದಿಸಿಕೊಂಡ ಮಹಾನ್ ವಿರಾಗಿಗಳು.

ಇಂದಿನ ಮಠಾಧೀಶರು ಇವರನ್ನು ಅನುಸರಿಸಿದರೆ ಧರ್ಮ ಸಮಾಜ ಉದ್ಧಾರವಾಗುವುದುರಲ್ಲಿ ಅನುಮಾನವಿಲ್ಲ. ಅಥಣಿಯ ಮುರುಘರಾಜೇಂದ್ರರಂತೆ ದಿವ್ಯ ವ್ಯಕ್ತಿತ್ವ. ಒಂದೆಡೆ ಚನ್ನಬಸವ ಪಟ್ಟದೇವರ ಬಸವ ನಿಷ್ಠೆ ,ತೋಂಟದ ಸಿದ್ಧಲಿಂಗೇಶ್ವರರ ಶಿವಯೋಗದ ಸ್ಥಿತಿ ಅಳವಡಿಸಿಕೊಂಡ ಸಿದ್ಧಲಿಂಗ ಮಹಾಸ್ವಾಮಿಗಳು ಮಹಾಮಠದ ಒಡೆಯರಾಗಿದ್ದರು.

ಮಠದ ಭಕ್ತರಿಂದ ಆಗಲಿ ಆಸ್ತಿಯಿಂದ ಆಗಲಿ ಬಂದ ಲಾಭ ನಾಡಿನ ಶಿಕ್ಷಣಕ್ಕಾಗಿ ಮೀಸಲಿಟ್ಟರು. ಸುಮಾರು 40ಕ್ಕೂ ಹೆಚ್ಚಿನ ಶೈಕ್ಷಣಿಕ ಸಂಸ್ಥೆಗಳನ್ನು ಕೇವಲ ಗದಗಿನಲ್ಲಿ ಕೇಂದ್ರೀಕರಿಸಿದೆ ನಾಡಿನ ಉದ್ದಗಲಕ್ಕೂ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ, ಹಳ್ಳಿಗಳು ಉದ್ಧಾರವಾಗಲಿ ಎಂದು ಸರ್ವರಿಗೂ ಸಮಪಾಲು-ಸಮಬಾಳು ದೊರೆಯುವಂತಾಗಲಿ ಎಂದು ಸಂಸ್ಥೆಗಳನ್ನು ತೆರೆದರು.

ವಿರಕ್ತ ಪರಂಪರೆಯ ಕರ್ತೃ ಶ್ರೀಗಳಾದ ಎಡೆಯೂರು ತೋಂಟದ ಸಿದ್ಧಲಿಂಗ ರ ಸನ್ನಿಧಿಯಲ್ಲಿ ದಾಸೋಹ ಸೇವೆಯನ್ನು ಆರಂಭಿಸಿದ ಕೀರ್ತಿ ಎಡೆಯೂರಿನ ಅಭಿವೃದ್ಧಿಗೆ ಅವರು ನೀಡಿದ ಕಾಣಿಕೆ ಅಪಾರ. ಇಂದು ಪ್ರತಿನಿತ್ಯ ಹತ್ತು ಸಾವಿರಕ್ಕಿಂತಲೂ ಹೆಚ್ಚಿನ ಭಕ್ತರು ಅಲ್ಲಿ ನಿತ್ಯ ಪ್ರಸಾದವನ್ನು ಸೇವಿಸುತ್ತಾರೆ. ಅದರಂತೆ ತೋಂಟದ ಸಿದ್ಧಲಿಂಗರು ಅನುಷ್ಠಾನ ಗೈದ ಕಗ್ಗೇರಿಯ ತೋಟದಲ್ಲಿ ಗದಗ್ ಶ್ರೀಗಳು ಮಾಡಿದ ಅಭಿವೃದ್ಧಿ ಕಣ್ಮನ ಸೆಳೆಯುತ್ತದೆ. ಅಲ್ಲಿಯ ದಾಸೋಹ ನಿರಂತರವಾಗಿ ಸಾಗುತ್ತಿದೆ. ಇದನ್ನು 2019ರಲ್ಲಿ ಕಂಡಾಗ ನನಗಾದ ಆನಂದ ಹೇಳತೀರದು. ಅಂದಿನಿಂದ ದಿನಕ್ಕೊಂದು ಬಾರಿಯಾದರೂ ಕಗ್ಗೇರಿಯ ಕ್ಷೇತ್ರ ನನ್ನ ಕಣ್ಣ ಮುಂದೆ ಬಂದು ಹೋಗುತ್ತದೆ.
ವಚನ ಸಾಹಿತ್ಯದ ಬೆಳವಣಿಗೆಗೆ ಅವರು ಮಾಡಿದ ಸೇವೆ ಅಮೋಘವಾಗಿದೆ. ಎಂಎಂ ಕಲಬುರ್ಗಿ ಅವರ ಮಾರ್ಗದರ್ಶನದಲ್ಲಿ ಗದಗ ಶ್ರೀಮಠದಿಂದ ಮಾಡಿದ ಸಾಹಿತ್ಯ ಸೇವೆ ಅನನ್ಯ. ಮಾತ್ರವಲ್ಲ ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಮಹಾನ್ ಕಾಣಿಕೆ.ಹಳೆಯ ಹಸ್ತಪ್ರತಿಗಳಿಗೆಲ್ಲ ಹೊತ್ತಿಗೆಯ ಹೊಸರೂಪ ನೀಡಿದ ಗುರುಗಳಿಗೆ ಕನ್ನಡ ನೆಲ ಜಲ ಭಾಷೆ ಎಂದರೆ ಮಾನ ಅಭಿಮಾನ ಪ್ರಾಣ.

ಹಾಗಾಗಿ ಅವರು ಜೀವನದಲ್ಲಿ ಕನ್ನಡ ನೆಲ-ಜಲದ ಸಂರಕ್ಷಣೆಗಾಗಿ ಟೊಂಕ ಕಟ್ಟಿ ನಿಂತರು. ಸಾವಿರಾರು ಎಕರೆ ವಿಶಾಲವಾದ ಕಪ್ಪತ ಗುಡ್ಡದ ಸಂರಕ್ಷಣೆಗಾಗಿ ಜೀವವನ್ನೇ ಪಣವಾಗಿಟ್ಟುಕೊಂಡು ಹೋರಾಡಿ ಪ್ರಾಕೃತಿಕ ಸಂಪತ್ತನ್ನು ಉಳಿಸಿಕೊಟ್ಟರು. ಪೋಸ್ಕೋ ಕಂಪನಿಯ ಕಬಂಧ ಬಾಹುವಿನಿಂದ ಸಾವಿರಾರು ಜನ ರೈತರ ಫಲವತ್ತಾದ ಭೂಮಿಯನ್ನು ಹೋರಾಟದ ಮೂಲಕ ಉಳಿಸಿ ಕೊಟ್ಟರು. ಗೋಕಾಕ್ ಚಳುವಳಿ ನೇತೃತ್ವ ವಹಿಸಿ ಅದರ ಯಶಸ್ಸಿಗೆ ಗುರುಗಳು ದುಡಿದದ್ದು ಅವಿಸ್ಮರಣೀಯವಾಗಿದೆ. ಅವರ ಜೀವನದ ಒಂದೊಂದು ಘಟನೆಗಳು ಐತಿಹಾಸಿಕ ಸಂಗತಿಗಳಾಗಿವೆ. ನಂಜುಂಡಪ್ಪ ವರದಿ ಅನುಷ್ಠಾನ , ಮಹಿಷಿ ವರದಿಗಳ ಜಾರಿಯ ಸಂಕಲ್ಪ ಗುರುಗಳದಾಗಿತ್ತು.

ಮಹಾಮಠದ ಮಹಾ ಗುರುವಾಗಿದ್ದರು ಕ್ಷಣಕ್ಷಣವೂ ಅವರ ಹೃದಯ ನಾಡು-ನುಡಿಗಾಗಿ ಮಿಡಿಯುತ್ತಿತ್ತು. ಬಡವರಿಗಾಗಿ ವಿದ್ಯಾರ್ಥಿಗಳಿಗಾಗಿ ಅವರು ಮಾಡಿದ ಸೇವೆ ಅನುಪಮ. ಭಕ್ತರು ನೀಡಿದ ಕಾಣಿಕೆಯನ್ನು ಕಷ್ಟವೆಂದು ಹೇಳಿಕೊಂಡು ಬಂದ ಇಲ್ಲವೇ ಅಧ್ಯಯನಕ್ಕಾಗಿ ಸಹಾಯ ಕೇಳಿ ಬಂದ ಯಾವ ವಿದ್ಯಾರ್ಥಿಗಳಿಗೂ ಬರಿಗೈಯಿಂದ ಕಳುಹಿಸಿದರಲ್ಲ. ಅನೇಕ ಬಡ ದಲಿತರ ಹಿಂದುಳಿದವರ ಹೆಣ್ಣುಮಕ್ಕಳ ಮದುವೆಗೆ ಗುರುಗಳು ಮಾಡಿರುವ ಸಹಾಯವನ್ನು ಬಡವರ ಬಗ್ಗೆ ಅವರಿಗಿರುವ ಕಾಳಜಿಯನ್ನು ಕಂಡಾಗ ಅವರ ಕುರಿತು ಕೇಳಿದಾಗ ಸ್ವಾಮೀಜಿಗಳ ಆದವರು ಹೀಗೂ ಇರುವರೇ? ಎಂಬ ಪ್ರಶ್ನೆ ನನ್ನಲ್ಲಿ ಅನೇಕ ಬಾರಿ ಮೂಡಿದೆ ! ಸ್ವಾಮೀಜಿಗಳ ಆದವರು ಉತ್ಸವ ಮೂರ್ತಿ ಆಗಬಾರದು ಸಮಾಜಸೇವೆಗೆ ನಾಡ ಸೇವೆಗೆ ಕಂಕಣ ಕಟ್ಟಬೇಕು, ಎಂದು ಅನೇಕ ಸಭೆಗಳಲ್ಲಿ ಅವರು ಆಡಿದ ಮಾತು ಆದೇಶವೆಂದು ಅನೇಕ ಸ್ವಾಮಿಗಳು ಅರಿತು ಆಚರಿಸಿದರೆ ಈನಾಡು ಬಂಗಾರದ ಬೀಡಾಗುವುದರಲ್ಲಿ ಸಂಶಯವಿಲ್ಲ.

ಲಿಂಗೈಕ್ಯ.ಸಿದ್ಧಲಿಂಗ ಮಹಾಸ್ವಾಮಿಗಳು ಇಷ್ಟಲಿಂಗವನ್ನು ಹಿಡಿದು ಶಿವ ಯೋಗದಲ್ಲಿ ಮಗ್ನರಾದರೆಂದರೆ ಬಾಹ್ಯಲೋಕ ಮಾತ್ರವಲ್ಲ ದೇಹದ ಅರಿವನ್ನೇ ಮರೆತು ಲಿಂಗಯ್ಯನಲ್ಲಿ ಮಾನವನ್ನು ಪೂರ್ಣ ಲೀನವಾಗಿ ಸುತ್ತಿದ್ದರು. ಇದಕ್ಕೆ ಸಾಕ್ಷಿಯೆಂದರೆ ಅವರು ಶಿವಯೋಗದಲ್ಲಿದ್ದಾಗ ಅವರ ವೈದ್ಯರು ಶ್ರೀನಿಧಿ ಚುಚ್ಚಿದರು ಅದರ ಅರಿವು ಅವರಿಗೆ ಇರುತ್ತಿರಲಿಲ್ಲ. ಇಂಥ ಶಿವಯೋಗದ ಆಚರಣೆಯಿಂದಲೆ ಅವರಲ್ಲಿ ಮಹಾಶಕ್ತಿ ಅಡಕವಾಗಿತ್ತು. ಶಿವಯೋಗದ ಸಾಧನೆಯಿಂದಲೇ ಅವರ ಹೃದಯ ಹೂವಿನಂತೆ ಮೃದುವಾಗಿತ್ತು. ಮನಸ್ಸು ತತ್ವ ಬದ್ಧತೆಗೆ ತುಡಿಯುತ್ತಿತ್ತು. ಸಕಲಜೀವಾತ್ಮರ ಬರವಿಗಾಗಿ ಹಾತೊರೆಯುತ್ತಿದ್ದರು. ಅವರಲ್ಲಿಯ ತಾಯಿಯ ವಾತ್ಸಲ್ಯದ ಜೊತೆಗೆ

ಅವ್ಯವಸ್ಥೆ ಕಂಡಾಕ್ಷಣ ಸಾತ್ವಿಕ ಕೋಪ ವ್ಯಕ್ತಪಡಿಸುತ್ತಿದ್ದರು. ಆದರೆ ಅದು ಕ್ಷಣಿಕ ಮಾತ್ರ ಯಾರ ಮೇಲೆ ಕೋಪಗೊಂಡಿದ್ದರು ಅವರನ್ನು ಆ ಕ್ಷಣವೇ ಕರೆಸಿಕೊಂಡು ಅವರೊಂದಿಗೆ ಪೂಜೆಯ ಪ್ರಸಾದವನ್ನು ಸೇವಿಸುತ್ತಿದ್ದರು. ಇದಲ್ಲವೇ ನಿಜವಾದ ಮಹಾಗುರುವಿನ ಲಕ್ಷಣವೆಂದರೆ?!


ಅವರ ಬದುಕಿನ ಮೊದಲ ಮತ್ತು ಕೊನೆಯ ಸಂಕಲ್ಪ ವೆಂದರೆ ಲಿಂಗಾಯತ ಧರ್ಮ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಬೇಕು. ಅದಕ್ಕಾಗಿ ಅವರು ನಾಡಿನಾದ್ಯಂತ ಲಿಂಗಾಯತ ಧರ್ಮದ ಚಳುವಳಿಯಲ್ಲಿ ಭಾಗವಹಿಸಿದರು. ದಾಖಲೆ ಸಾಹಿತ್ಯವನ್ನು ನೀಡಿದರು. ವೀರಶೈವ ಲಿಂಗಾಯತರಲ್ಲ ಅದು ಶೈವ ಧರ್ಮದ ಒಂದು ಶಾಖೆ ಮಾತ್ರ ಕರ್ನಾಟಕದ ಜಂಗಮರು ಲಿಂಗಾಯತ ಧರ್ಮದ ಕಾಯಕ ಜಂಗಮರ ಹೊರತು, ಆಗಮಿಕ ಶೈವರಲ್ಲಿ ಎಂದು ಸ್ಪಷ್ಟವಾಗಿ ಸಾರುತ್ತಿದ್ದರು. ಹಾಗಾಗಿ ಇವರನ್ನು ಕಂಡರೆ ವಿರೋಧಿಗಳ ಮೈನಡುಕ ಹೆಚ್ಚುತ್ತಿತ್ತು. ಅವರು ನೀಡಿದ ಹೇಳಿಕೆಯನ್ನು ಉಜ್ಜುವ ದುಸ್ಸಾಹಸಕ್ಕೆ ಯಾವ ಘನಂದಾರಿ ಸ್ವಾಮೀಜಿ ಹೋಗುತ್ತಿರಲಿಲ್ಲ. ಅಂಥ ಅದ್ಭುತ ನಿಲವು ನಿಲುವು ಅವರದಾಗಿತ್ತು.

ಸಿದ್ದಲಿಂಗ ಮಹಾಸ್ವಾಮಿಗಳ ಬದುಕೆಂದರೆ ಹೋರಾಟದ ಬದುಕು. ಕಲ್ಲುಮುಳ್ಳಿನ ಹಾದಿಯಲ್ಲಿ ಬದುಕಿನ ದಾರಿಯುದ್ದಕ್ಕೂ ತುಳಿದುಕೊಂಡು ಬಂದ ಸಂತ. ಸಾವು ನೋವಿಗೆ ಅವರು ಎಂದೆಂದೂ ಅಂಜಲಿಲ್ಲ ಅಳುಕಲಿಲ್ಲ. ಮರಣವೇ ಮಹಾನವಮಿ ಎಂಬ ಶರಣರ ಮಾತು ಗುರುಗಳ ಮಾತಿನಲ್ಲೂ ಸತ್ಯವಾಯಿತು. ಮರುದಿನವೇ ಅವರು ಲಿಂಗೈಕ್ಯರಾದ ವಿಷಯ ಬೆಳೆ ಬೆಳಗ್ಗೆ ನಾಡಿನಾದ್ಯಂತ ಪಸರಿಸಿತ್ತು. ಹೃದಯಕ್ಕೆ ಸಿಡಿಲು ಬಿದ್ದಂತ ಅನುಭವವಾಯಿತು. ದುಷ್ಟರು ಮನದೊಳಗೆ ನಕ್ಕರು. ಬಸವ ಭಕ್ತರ ಮನದ ನೋವು ಹೇಳತೀರದು. ಮುಂದೇನು ನಮ್ಮ ಗತಿ ಎಂಬ ಪ್ರಶ್ನೆ ಲಕ್ಷಲಕ್ಷ ಬಸವಭಕ್ತರಿಗೆ ಕಾಡಿತು. ರಾಜ್ಯ ಪರ ರಾಜ್ಯದಿಂದ ಲಕ್ಷ ಜನ ಅನುಯಾಯಿಗಳು ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಮುಗಿಲು ಮುಟ್ಟಿದ ಜಯಘೋಷಗಳ ನಡುವೆ ಅವರ ಅಂತಿಮ ಯಾತ್ರೆ ಜಾತ್ರೆಯಂತೆ ಶೋಭಿತವಾಗಿತ್ತು.
ಬಸವ ಭಕ್ತರ ಹೃದಯಗಳೆಲ್ಲ ಭಾರದಿಂದಲೇ ತುಂಬಿದ ದುಃಖದಿಂದಲೇ ಗದಗಿನಿಂದ ಮರುಪ್ರಯಾಣ ಬೆಳೆಸಿದರು. ಕಲಬುರ್ಗಿಯ ನಮ್ಮೆಲ್ಲ ಬಸವ ಭಕ್ತರೊಂದಿಗೆ ಗುರುಗಳ ಅಂತಿಮ ದರ್ಶನ ಪಡೆದದ್ದು ಆ ದಿನ ಅಲ್ಲಲ್ಲಿ ನಿಂತುಕೊಂಡು ಗುರುಗಳ ಬಗ್ಗೆ ನೂರಾರು ಜನ ತಮ್ಮತಮ್ಮಲ್ಲೇ ಹಂಚಿಕೊಳ್ಳುತ್ತಿದ್ದ ಅಭಿಪ್ರಾಯವನ್ನು ಕೇಳುತ್ತಲೇ ಹೃದಯ ಒತ್ತಿ ಬರುತ್ತಿತ್ತು.


ತೋಂಟದ ಬಸವಣ್ಣ ಎಂಬ ನಿಷ್ಠಿರುದ್ರಪ್ಪನವರ ಕೃತಿಯನ್ನು ಓದುತ್ತ ಹೋದಾಗ ಸಿದ್ಧಲಿಂಗ ಮಹಾಸ್ವಾಮಿಗಳು ಮಹಾಕಾರ್ಯ ಅವರು ನೊಂದವರ ನೆರಳಾಗಿದ್ದ ಅವರ ವ್ಯಕ್ತಿಚಿತ್ರಣ ಓದುತ್ತ ಹೋದಂತೆ ಎಂಥ ಕಲ್ಲು ಹೃದಯ ಕೂಡ ಕರಗಿ ನೀರಾಗುತ್ತದೆ. ಆದರೆ ಅವರಿಂದು ನೆನಪು ಮಾತ್ರ. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಗಾರರಿಗೆಲ್ಲ ಅವರು ಅಂತಃಶಕ್ತಿ.

ಒಂದು ಕಡೆ ಇಳಕಲ್ಲಿನ ಮಹಾಂತ ಶ್ರೀಗಳು ಮತ್ತೊಂದೆಡೆ ಗದಗ ಗುರುಗಳ ಲಿಂಗೈಕ್ಯ ಅನಂತ ಬಸವ ಭಕ್ತರ ಶಕ್ತಿ ಉಡುಗಿ ಹೋದಂತೆ ಆಗಿದೆ. ಕಾಲೊಳಗಿನ ಶಕ್ತಿ ಕುಂದಿ ಮುಂದೇನು ? ಎಂಬ ಭಾವ ಮನತುಂಬಿ ಕಂಠ ಗದ್ಗದಿತ ವಾಗಿ ಮಾತು ಹೊರಡದೆ ನಡುಗುವ ಧ್ವನಿಯಲ್ಲಿ ಮೇಲಿನ ಮಾತನ್ನು ಹೇಳಿದೆ.

ಆದರೆ ಗುರುಗಳ ಒಂದು ಮಾತಂತೂ ನನಗೆ ಸದಾ ಸ್ಫೂರ್ತಿಯ ಸೆಲೆಯಾಗಿದೆ. 2017ರ ಬಸವಕಲ್ಯಾಣದ ಅನುಭವ ಮಂಟಪದ ಶರಣ ಕಮ್ಮಟ ಅನುಭವ ಮಂಟಪ ಉತ್ಸವ ಕಾರ್ಯಕ್ರಮಕ್ಕೆ ಅವರು ಬಂದಾಗ ಬಾಲ್ಕಿಯ ಬಸವಲಿಂಗ ಪಟ್ಟದ್ದೇವರು ನನ್ನನ್ನು ಗುರುಗಳಿಗೆ ಪರಿಚಯಿಸಿದರು. ನಾನು ಬರೆದ ಸಾಹಿತ್ಯವನ್ನು ಅವರಿಗೆ ನೀಡಿದೆ. ಕೇವಲ ಎರಡು ದಿನದಲ್ಲಿ ಕೃತಿಗಳನ್ನು ಓದಿದ ಸಿದ್ಧಲಿಂಗ ಮಹಾಸ್ವಾಮಿಗಳು ಉತ್ಸವದ ಕಾರ್ಯಕ್ರಮದಲ್ಲಿ ನೆರೆದ ಸಾವಿರಾರು ಜನರ ನಡುವೆ ಕಲ್ಯಾಣ ನಾಡು ಬರಡಲ್ಲ. ಈ ಭಾಗದಲ್ಲಿ ಸೋಮನಾಥ್ ಯಾಳವಾರ ರು ಎಂ.ಎಂ ಕಲಬುರ್ಗಿ ಅವರಂತೆ ಶರಣ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಮುಂದಿನ ಕಾರ್ಯಕ್ಕೆ ಚಿಂತೆಯಿಲ್ಲ ಅದರಂತೆ ಸಣ್ಣ ಯುವಕ ಕುಂಬಾರರ ಹುಡುಗ ಇಲ್ಲೇ ವೇದಿಕೆ ಮೇಲೆ ಇದ್ದಾನೆ ಮಹಾಂತೇಶ್ ಕುಂಬಾರ್ ಹೂವಿನಹಳ್ಳಿ ಅವನ ಕಾದಂಬರಿ ಬರಹ ತಿಪ್ಪೇರುದ್ರಸ್ವಾಮಿ ಜಿ.ಎಚ್ ಹನ್ನೆರಡುಮಠ ಅವರಂತೆ ಅತ್ಯುತ್ತಮವಾಗಿದೆ. ಶರಣರ ಕುರಿತು ಆತ ಬರೆದ ಶರಣು ಶರಣಾರ್ಥಿ ಕಾದಂಬರಿ ಹೊಸ ರೀತಿಯ ಅನುಭವ ನೀಡಿತು. ಕಲಬುರಗಿ ಶರಣಪ್ಪನ ಕುರಿತು ಆತ ಬರೆದ ಸರ್ವ ದಲ್ಲಿ ದಾಸೋಹಿ ಕಾದಂಬರಿ ಓದಿದಾಗ ನಿಜವಾದ ಶರಣಪ್ಪನ ಚರಿತ್ರೆ ಈಗ ವರವಿತ್ತು ನೋಡು ಪುರಾಣದ ಶರಣಪ್ಪ ಐತಿಹಾಸಿಕ ಶರಣಪ್ಪ ಆದ,ಎಂದು ತುಂಬಿದ ಹೃದಯದಿಂದ ಹೇಳಿದರು. ಆಗ ನನಗೆ ಭಾಲ್ಕಿಯ ಚನ್ನಬಸವ ಪಟ್ಟದ್ದೇವರು ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿದಂತೆ ಅನುಭವವಾಯಿತು. ಗದಗ ಜಗದ್ಗುರುಗಳಿಂದ ಬಂದ ಪ್ರಶಂಶನೀಯ ಮಾತು ಯಾವ ಪಾರಿತೋಷಕ ಕಡಿಮೆ ಅನಿಸಲಿಲ್ಲ. ಅವರ ಮಾತು ನನಗೀಗ ಸದಾ ಉತ್ಸಾಹ ನೀಡುತ್ತಿದೆ. ಬೆಲೆಕ ಟ್ಟಲಾಗದ ಸ್ಪೂರ್ತಿತುಂಬಿದ ಅವರ ವಾಣಿ ನೆನಪಿಸಿಕೊಂಡಾಗಲೆಲ್ಲ ಮೈಯಲ್ಲಿ ರೋಮಾಂಚನವಾಗಿ ಮತ್ತೆ ಪುಟಿದೇಳುತ್ತೇನೆ.


ಲೇಖನ:-ಮಹಾಂತೇಶ ಕುಂಬಾರ ಹೂವಿನಹಳ್ಳಿ

ಶರಣ ಸಾಹಿತಿಗಳು ಕಲಬುರಗಿ,

5 thoughts on “ಬಸವ ಧರ್ಮದ ಮಹಾಜಂಗಮ

  1. ವಾಯ್ಸ್ ಟೈಪ್ ಸಮಯದಲ್ಲಿ ಕೆಲವು ತಪ್ಪುಗಳಾಗಿವೆ ಅವನು ದಯವಿಟ್ಟು ತಿದ್ದುಕೊಂಡು ಓದಬೇಕೆಂದು ವಾಚಕರಲ್ಲಿ ಮನವಿ
    ಮಹಾಂತೇಶ್ ಕುಂಬಾರ ಹೂವಿನಹಳ್ಳಿ

  2. ಗದುಗಿನಲಿಂ.ಜಗದ್ಗುರು ಸಿದ್ದಲಿಂಗ ಮಹಾ ಸ್ವಾಮಿಗಳಬಗ್ಗೆ ವಿಸ್ತಾರವಾಗಿ ಬರೆದಿದ್ದಿರಿ. ಲಿಂಗಾಯತ,ಕನ್ನಡ, ಬಸವಾದಿ ಶರಣರ ವಿಚಾರಗಳು ಬಂದಾಗ ನಿಷ್ಟೂರವಾಗಿ ಮಾತನಾಡುವ ಏಕೈಕ ಗುರುಗಳು ಅವರಾಗಿದ್ದರು. ಅವರೇಒಂದು ಶಕ್ತಿಯಾಗಿದ್ದರು.ಜಂಗಮತ್ವದ ದೀರ ನಿಲುವು ಅವರದಾಗಿತ್ತು. ಅವರ ನೆನಪೆ ನಮಗೆ ಶಕ್ತಿಯಾಗಿದೆ ಶರಣುಗಳು.

Leave a Reply

Your email address will not be published. Required fields are marked *

error: Content is protected !!