ಬಸವಣ್ಣನವರ ಸಂವಿಧಾನದಂತೆ ಮಹಿಳೆಗೂ ಪಟ್ಟಗಟ್ಟಿದ ವಿರಕ್ತ ಮಠ !

ಅ ರಿ ವಿನ ಗುಣ ಬಸವಣ್ಣನೊಳಗಡಕವಯ್ಯಾ ಎಂಬ ಸಿದ್ಧರಾಮ ಶರಣರ ಮಾತಿನಂತೆ ಯಾರಲ್ಲಿ ಬಸವಣ್ಣನವರ ಬೀಜಗಳನ್ನು ಬಿತ್ತಲಾಗುತ್ತದೋ ಅದು ಅರಿವಿನ ಖಣಜ ಆಗುವುದರಲ್ಲಿ ಸಂದೇಹವೆ ಇಲ್ಲ. ಏಕೆಂದರೆ ನಿಮ್ಮ ಶರಣ ಬಸವಣ್ಣನ ಪಾದವ ಕಂಡು ಮಿಗಿ ಮಿಗಿ ನಮೋ ನಮೋ ಎನುತಿದರ್ೆನಯ್ಯಾ ಎಂದು ಅಕ್ಕಮಹಾದೇವಿ ನುಡಿಯುತ್ತಾಳೆ. ಹೊರಗು ಒಳಗು ಕಲ್ಯಾಣವಾಗಬಯಸುವವರು ಮಾತ್ರ ಬಸವಣ್ಣನವರ ಸಮೀಪ ಹೋಗಬೇಕು. ಒಳಗೊರಗೆ ಒಂದಾಗದವರು ಶರಣರ ಸಮೀಪ ಹೋಗಲೇಬಾರದು. ಒಂದು ವೇಳೆ ಹೊರ ಒಳಗು ಒಂದಾಗದವರು ಶರಣರ ಸಮೀಪ ಹೋದರೆ ಆ ಶರಣತ್ವದ ಗರಗಸ ಹೋಗುತ್ತ ಬರುತ್ತ ಕೊಯ್ಯುತ್ತಲೆ ಇರುತ್ತದೆ. ಬಸವಣ್ಣನವರ ವಿಚಾರಗಳ ಸ್ಪರ್ಶದಿಂದ ಷಣ್ಮುಖ ಶಿವಯೋಗಿಗಳು

ಬಸವನ ನಾಮವು ಕಾಮಧೇನು ಕಾಣಿರೊ
ಬಸವನ ನಾಮವು ಕಲ್ಪವೃಕ್ಷ ಕಾಣಿರೊ
ಬಸವನ ನಾಮವು ಚಿಂತಾಮಣಿ ಕಾಣಿರೊ
ಬಸವನ ನಾಮವು ಪರುಷ ಮಣಿ ಕಾಣಿರೊ
ಬಸವನ ನಾಮವು ಸಂಜೀವನ ಮೂಲಿಕೆ ಕಾಣಿರೊ
ಇಂತಪ್ಪ ಬಸವನಾಮೃತವು ಎನ್ನ ಜಿಹ್ನೆಯ ತುಂಬಿ
ಹೊರಸೂಸಿ ಮನವ ತುಂಬಿತ್ತು.
ಆ ಮನವ ತುಂಬಿ ಹೊರಸೂಸಿ ಸಕಲಕರಣೇಂದ್ರಿಯಂಗಳ ತುಂಬಿತ್ತು.
ಆ ಸಕಲ ಕರಣೇಂದ್ರಿಯಂಗಳ ತುಂಬಿ ಹೊಸೂಸಿ
ಸವರ್ಾಂಗದ ರೋಮಕುಳಿಗನೆಲ್ಲ ವೇದಿಸಿತ್ತಾಗಿ,
ನಾನು ಬಸವಾಕ್ಷರವೆಂಬ ಹಡಗನೇರಿ
ಬಸವ ಬಸವಾ ಬಸವಾ ಎಂದು ಭವ ಸಾಗರವ
ದಾಟಿದೆನಯ್ಯಾ ಅಖಂಡೇಶ್ವರಾ.

ಅಂಗೈ ಹುಣ್ಣಿಗೆ ಕನ್ನಡಿ ಏಕೆ ? ಎಂಬಂತೆ ಈ ಮೇಲಿನ ವಚನಕ್ಕೆ ವ್ಯಾಖ್ಯಾನ ಅಗತ್ಯವಿಲ್ಲವೆಂದು ಭಾವಿಸಿದ್ದೇನೆ. ಬಸವಣ್ಣನವರೆಂಬ ಭವರೋಗ ವೈದ್ಯನ ಮಾತು, ಬರೀ ಮಾತಲ್ಲ. ಅದು ಮುತ್ತು. ಮುತ್ತಿನಂತಹ ಮಾತಿಗೆ ಮೃತ್ಯುವನ್ನು ಗೆಲ್ಲುವ ಶಕ್ತಿ ಇದೆ. ನಡೆ ನುಡಿಗಳನ್ನು ಒಂದಾದ ಶರಣ ವಚನ ನುಡಿಗಳನ್ನು ಬದುಕಿನಲ್ಲಿ ಇಂಬಿಟ್ಟುಕೊಂಡು ಹೋದವರು ವಿರಳ. ಆ ವಿರಳಾತಿ ವಿರಳರಲ್ಲಿ ಅಥಣಿಯ ಶಿವಯೋಗಿಗಳು, ಧಾರವಾಡದ ಮುರುಘಾ ಮಠದ ಮೃತ್ಯುಂಜಯ ಅಪ್ಪಗಳು, ಇಳಕಲ್ಲಿನ ಮಹಾಂತ ಸ್ವಾಮೀಜಿಗಳು, ಗದುಗಿನ ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮೀಜಿಗಳು ಮೊದಲಾದವರು. ಹಾಗೆ ನೋಡಿದರೆ ಮಠಗಳು ಶರಣರ ಕನಸುಗಳಲ್ಲ. 15 ನೇ ಶತಮಾನದಲ್ಲಿ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಉತ್ಕ್ರಾಂತಿಯಲ್ಲಿ ಮಠಗಳ ಉಗಮವಾಗುತ್ತದೆ.

ಮಠೀಯ ಪರಂಪರೆ ಶರಣರ ವಿಚಾರಗಳನ್ನು ಇಂಬಿಟ್ಟುಕೊಂಡು ನಡೆದಿದ್ದರೆ ಇಡೀ ರಾಷ್ಟ್ರಕ್ಕೆ ಕನರ್ಾಟಕದ ಮಠಗಳು ಮಾದರಿಯಾಗುತ್ತಿದ್ದವು. ಕಾಲನ ತೆಕ್ಕೆಯಲ್ಲಿ ಹಲವಾರು ಮಠಗಳು ತಮ್ಮ ಮೂಲ ಕಾಳಜಿಯನ್ನು ಮರೆತು ವೈದಿಕ ಸಂಸ್ಕೃತಿಗೆ ತಗಲು ಬಿದ್ದವು. ಮಠದಯ್ಯ, ಪಟ್ಟಕ್ಕೆ ಬರುತ್ತಲೆ ವೇದಮೂತರ್ಿಯಾದ, ಶಾಸ್ತ್ರಿಯಾದ ಹೀಗಾಗಿ ಮಠಗಳು ಸಂಪೂರ್ಣ ವಚನ ಸಾಹಿತ್ಯದ ಆಶಯವನ್ನು ತೊತ್ತಲ ತುಳಿದು ನಿಂತವು. ಇಳಕಲ್ಲಿನ ಲಿಂ.ಡಾ. ಮಹಂತಸ್ವಾಮೀಜಿಗಳು ಮಾತ್ರ ತಮ್ಮ ಮಠವನ್ನು ಬಸವಣ್ಣನವರ ಆಶಯಗಳಿಗೆ ತೆರೆದಿಟ್ಟು ಹೋದರು. ತಮ್ಮ ಶಾಖಾ ಮಠಗಳಿಗೆ ನೀತಿ ಜಂಗಮತ್ವ ಹಾಗೂ ಶರಣತ್ವ ತುಂಬಿಕೊಂಡಿರುವ ವ್ಯಕ್ತಿಗಳನ್ನು ಉತ್ತರಾಧಿಕಾರಿಗಳನ್ನಾಗಿ ಮಾಡುವ ಮೂಲಕ ಹೊಸ ಭಾಷ್ಯೆಯನ್ನು ಬರೆದರು. ತಮ್ಮ ಮೂಲ ಮಠಕ್ಕೂ ಆ ಆಶಯವನ್ನು ಜಾರಿಗೆ ತರುವಾಗ ಉಂಟಾದ ಗಲಾಟೆ ಅಷ್ಟಿಷ್ಟಲ್ಲ.

ಜಮಖಂಡಿ ತಾಲೂಕಿನ ಮರೆಗುದ್ದಿ ಮತ್ತು ಬುದ್ನಿ(ಪಿ.ಕೆ) ಮಹಾಂತ ಮಠ ಎಂಬ ವಿರಕ್ತ ಮಠಕ್ಕೆ ಮುಂದಿನ ಪೀಠಾಧಿಕಾರಿಯಾಗಿ ನೀಲಮ್ಮ ತಾಯಿಯನ್ನು ಪಟ್ಟಾಧಿಕಾರಿಯನ್ನಾಗಿ ಮಾಡಲಾಗಿದೆ. ವೈದಿಕ ಪರಂಪರೆಯಲ್ಲಿ ಹೆಣ್ಣು ಅಸಹ್ಯ ವಸ್ತು. ಅವಳು ನಡೆದಾಡುವ ಸ್ಮಶಾನ. ಮಹಿಳೆ ಹೆಣ್ಣಾಗಿರುವುದರಿಂದ ಅವಳಿಗೆ ಮೋಕ್ಷ ಸೋಕ್ಷ ಸಿಗಲು ಸಾಧ್ಯವಿಲ್ಲವೆಂಬುದು ವೇದದ ಮಾತು. ಸಮಾಜವು ಸಹ ಧಾಮರ್ಿಕ ನಂಬಿಕೆಗಳನ್ನು ಪೋಷಿಸಿಕೊಂಡು ನಡೆದುದ್ದರಿಂದ ಸಹಜವಾಗಿ ಹೆಣ್ಣು ನಗಣ್ಯ. ಹೆಣ್ಣು ಮುಟ್ಟಾಗುತ್ತಿರುವುದರಿಂದ ಗುಡಿಯನ್ನು ಪ್ರವೇಶಿಸಲು ಯೋಗ್ಯವಿಲ್ಲವೆಂದಾದ ಮೇಲೆ ಅವಳನ್ನು ಪಟ್ಟಗಟ್ಟುವುದು, ಪೂಜ್ಯಳನ್ನಾಗಿಸುವುದು ಸಾಧ್ಯವೆ ಇಲ್ಲ ಎಂಬಂತ ದಿನಗಳಲ್ಲಿ ಬಸವಣ್ಣನವರ ತತ್ವಗಳನ್ನು ಹಿಡಿದುಕೊಂಡು ಹೊರಟ ಮಠ ಮಾತ್ರ ಇದರಲ್ಲೇನು ಬಹುದೊಡ್ಡ ವಿಶೇಷವಿಲ್ಲವೆಂದು ನಡೆದುಕೊಂಡಿದೆ.

ಎಲ್ಲರೂ ಬಲ್ಲಂತೆ ಇಳಕಲ ಮಠದ ಶಾಖಾ ಮಠ ಮರೆಗುದ್ದಿಯ ಹಿರೇಮಠ. ಈ ಮಠಕ್ಕೆ ಈಗಾಗಲೆ ಮಠಾಧೀಶರಿದ್ದಾರೆ. ಅವರು ಮೂಲಕ ಜಂಗಮ ಜನಾಂಗದವರಿಂದ ಬಂದವರಾಗಿದ್ದರೂ ಸಹ ನೀಲಮ್ಮ ತಾಯಿ ಎಂಬ ಮಹಿಳೆಯನ್ನು ತಮ್ಮ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡಿ ಪಟ್ಟಗಟ್ಟಿದ್ದಾರೆ. ಇಳಕಲ್ಲಿನ ಇಂದಿನ ಗುರುಮಹಾಂತ ಸ್ವಾಮೀಜಿಗಳು ನೀಲಮ್ಮ ತಾಯಿಗೆ ಪಟ್ಟಗಟ್ಟಿ ನೀಲ ವಿಜಯ ಮಹಾಂತಮ್ಮ ಎಂದು ಹೆಸರಿಟ್ಟು ಕರೆದು, ಆ ತಾಯಿಯ ಪಾದಗಳಿಗೆ ನಮಸ್ಕರಿಸಿದ್ದಾರೆ. ಅವರ ಪಾದೋದಕವನ್ನು ಸಹ ಕುಡಿದಿದ್ದಾರೆ.

ಶಿಷ್ಯಳಿಗೆ ಪಟ್ಟಗಟ್ಟಿ ಆಕೆಯ ಕಾಲಿಗೆ ಎರಗಿ, ಆಕೆಯ ಪಾದೋದಕ ಪಡೆಯುವುದು ವೈದಿಕ ವ್ಯವಸ್ಥೆಯಲ್ಲಿ ಅಸಾಧ್ಯ ಕೋಟಿಯ ಮಾತು. ಆದರೆ ಬಸವಣ್ಣನವರ ವಚನ ಸಂವಿಧಾನದಲ್ಲಿ ಇದೆಲ್ಲವೂ ಸಾಧ್ಯ ಎಂದು ಇಡೀ ನಾಡಿಗೆ ನಿನ್ನೆಯ ಕಾರ್ಯಕ್ರಮ ತೋರಿಸಿಕೊಟ್ಟಿದೆ. ಮೂಲತಃ ಕುರುಬ ಜನಾಂಗಕ್ಕೆ ಸೇರಿದವರಾದ ನೀಲಮ್ಮ ಗುಣ, ನಡತೆ, ಹಾಗೂ ವಚನ ಸಾಹಿತ್ಯದ ಮೇಲಿನ ಆಸಕ್ತಿಗಳು ಹಾಗೂ ಇದಕ್ಕೆ ಪೂರಕವಾದ ಚಟುವಟಿಕೆಗಳು ಅವರನ್ನು ಪೀಠಾಧಿಕಾರಿಯಾಗುವವರೆಗೂ ತಂದು ನಿಲ್ಲಿಸಿವೆ. ಮುಂದೆಯೂ ಸಹ ಈ ವಿರಕ್ತ ಪೀಠಕ್ಕೆ ಉತ್ತರಾಧಿಕಾರಿಯಾಗಿ ಬರುವವರು ಯಾವತ್ತೂ ರಕ್ತ ಸಂಬಂಧಿಗಳಾಗಿರಬಾರದು ಎಂದು ಸ್ಪಷ್ಟವಾಗಿ ಉಲ್ಲೇಖಿಸಿ ಮತ್ತೊಂದು ಇತಿಹಾಸವನ್ನು ಬರೆಯಲಾಗಿದೆ.

ಹಿಂದೆ 1970 ರಲ್ಲಿ ಮಾತೆ ಮಹಾದೇವಿ ಎಂಬ ಮಹಿಳೆಗಾಗಿಯೆ ಸ್ವತಂತ್ರ ಶೂನ್ಯ ಪೀಠವನ್ನು ಸ್ಥಾಪಿಸಿ, ಅದನ್ನು ಮುನ್ನಡಿಸಿಕೊಂಡು ಬಂದುದಲ್ಲದೆ ಅದರ ಛಾಪನ್ನು ಒತ್ತಿದ್ದು ಒಂದು ಇತಿಹಾಸವಾದರೆ, ಹಳೆಯ ವಿರಕ್ತ ಮಠಕ್ಕೆ ಮಹಿಳೆಯೊಬ್ಬಳಿಗೆ ಪೀಠಕ್ಕೆ ಕೂರಿಸಿ ಸಂಪ್ರದಾಯಗಳನ್ನು ಬದಿಗೊತ್ತಿ ನಿಂತದ್ದು ಮತ್ತೊಂದು ಇತಿಹಾಸವಾಗಿದೆ.

0 ವಿಶ್ವಾರಾಧ್ಯ ಸತ್ಯಂಪೇಟೆ
ಬಸವ ಬೆಳಗು, ಬಸವಮಾರ್ಗ ಪ್ರತಿಷ್ಠಾನ
ಬುದ್ದ ವಿಹಾರ ಹತ್ತಿರ
ಶಹಾಪುರ – ಯಾದಗಿರಿ (ಜಿಲ್ಲೆ

11 thoughts on “ಬಸವಣ್ಣನವರ ಸಂವಿಧಾನದಂತೆ ಮಹಿಳೆಗೂ ಪಟ್ಟಗಟ್ಟಿದ ವಿರಕ್ತ ಮಠ !

  1. ಬಸವಾದಿಶರಣರ ವಚನ ಆಧರಿತ ಲಿಂಗಾಯತ ಆಶಯ ಪ್ರೇರಿತರಾಗಿ ಹೊಸ ಮುನ್ನುಡಿ ಬರೆಯಿತ್ತಿರುವವರ ಸಂಖ್ಯೆ ಹೆಚ್ಚಲಿ.

  2. ಬಸವ ಧರ್ಮದಲ್ಲಿ ,ಪಾದ ತೊಳೆದು ನೀರು ಕುಡಿಯುವದು ನಿಷೇಧ ಅಲ್ಲವೇ?

  3. ಖುಷಿಯ ವಿಚಾರ. ಈ ಮಾದರಿಯ ಕಾರ್ಯಕ್ಕೆ ಹಾರ್ದಿಕ ಅಭಿನಂದನೆಗಳು. ಶರಣು ಶರಣಾರ್ಥಿಗಳು.

  4. ಅದ್ಭುತ ಐತಿಹಾಸಿಕ ಘಟನೆ ಇದು. ಬಸವ ಮಾರ್ಗ ಇದಕ್ಕೆ ಸರಿಯಾದದ್ದು ಮತ್ತು ಸಂಸ್ಕ್ರಾರಯುತವಾದದ್ದು.ಎಲ್ಲರೂ ಸೇರಿ ಅಪ್ಪ ಬಸವಣ್ಣನವರನ್ನ ಕೊಂಡಾಡುವ. ಬಸವನ ಭೂಮಿಯ ತುಂಬಾ ಭಕ್ತಿರಸ ತುಂಬಲಿ.

  5. It set an example for viraktas to follow. But I don’t agree with the ritual taking padodska. Did Basav practise it ?literall?. I don’t think so. Hampanna sindhanur.

  6. ಅಂದು ನಡೆದ ಕಲ್ಯಾಣ ಕ್ರಾಂತಿಯ ನಂದಾ ದೀಪ ಆರಲು ಸಾಧ್ಯವೇ ಇಲ್ಲ. ಸದಾ ಬೆಳಗುತ್ತಿರುತ್ತದೆ…
    ಜೈ ಗುರು ಬಸವ..

  7. ನುಡಿದಂತೆ ನಡೆವ ಬಸವ ತತ್ವ ಹಾಗು ನುಡಿ ನಡೆಗಳೊಂದಾದ ಮಹಾಂತಅಪ್ಪಗಳು ಹಾಗು ಗುರುಮಹಾಂತಅಪ್ಪಗಳು.🙏

  8. ಇದುವೆ ಬಸವಕ್ರಾಂತಿ ಪೂಜ್ಯೆರಿಗೆ ಶರಣುಗಳು.

Leave a Reply

Your email address will not be published. Required fields are marked *

error: Content is protected !!