ಭೈರಪ್ಪನವರು ಹುಟ್ಟಿದ್ದಾದರೂ ಎಲ್ಲಿ ?

ಡಾ.ಎಸ್.ಎಲ್. ಭೈರಪ್ಪ ಎಂದಿನಂತೆ ತಮ್ಮ ಪಿಟಿಲು ಕೊರೆದಿದ್ದಾರೆ. ಬಸವಣ್ಣನವರ ಸಂದರ್ಭದಲ್ಲಿ ಅಂತರ್ಜಾತಿಯ ಮದುವೆ ಮಾಡಿಕೊಳ್ಳುವಲ್ಲಿ ಕಾಲ ಪರಿಪಕ್ವಗೊಂಡಿರಲಿಲ್ಲ ಎಂದೂ ಹೇಳಿದ್ದಾರೆ. ಡಾ. ಭೈರಪ್ಪನವರೆ ಅಂದು ಮದುವೆಯಾದುದು ಅಂತರ್ಜಾತಿಯ ಮದುವೆ ಅಲ್ಲ. ಸಮಗಾರ ಹರಳಯ್ಯ, ಮತ್ತು ಮಧುವರಸರಿಬ್ಬರೂ ಇಷ್ಟಲಿಂಗವನ್ನು ಧರಿಸಿ ಲಿಂಗಾಯರಾಗಿದ್ದರು.

ಲಿಂಗವ ಪೂಜಿಸಿ ಫಲವೇನಯ್ಯಾ

ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ

ಲಿಂಗವ ಪೂಜಿಸಿ ಫಲವೇನಯ್ಯಾ

ಕೂಡಲಸಂಗಮದೇವರ ಪೂಜಿಸಿ

ನದಿಯೊಳಗೆ ನದಿ ಬೆರೆಸದಂತಾಗದ್ದನ್ನಕ್ಕ

ಇಂಥ ಪರಿಪೂರ್ಣ ಲಿಂಗಾಯತರಾದ ಮಧುವರಸನ ಮಗಳು ಹಾಗೂ ಹರಳಯ್ಯನ ಮಗ ಶೀಲವಂತ ಮದುವೆಯಾದುದರಲ್ಲಿ ಯಾವ ತಪ್ಪು ಇರಲಿಲ್ಲ ಎಂಬುದು ಶರಣರ ಇಂಗಿತ. ಒಲುಮೆ ಕೂಟಕ್ಕೆ ಹಾಸಿಗೆಯ ಹಂಗೇಕೆ ? ಎಂದು ಶರಣರು ಪರಸ್ಪರ ಹುಡುಗ- ಹುಡುಗಿ ಒಪ್ಪಿಕೊಂಡಾದ ಮೇಲೆ ಇನ್ನಾರದು ತಕರಾರು ? ಎಂದರು. ಜೊತೆಗೆ ಅಂದು ಹರಳಯ್ಯ ಮತ್ತು ಮಧುವರಸರ ಕುಟುಂಬಗಳೆರಡೂ ಒಪ್ಪಿಗೆ ಕೊಟ್ಟಿದ್ದವು. ಆದರೆ ಮನುವಾದಿಗಳು ಈ ಮದುವೆಗೆ ಅಸಮ್ಮತಿ ವ್ಯಕ್ತ ಪಡಿಸಿದ್ದಲ್ಲದೆ ಈ ಕ್ರಿಯೆಗೆ ಒಳಗಾದ ಹರಳಯ್ಯ ಹಾಗೂ ಮಧುವರಸರಿಗೆ ಎಳೆಹೂಟಿಯ ಶಿಕ್ಷೆ ನೀಡಿ ಘೋರವಾದ ಅನ್ಯಾಯ ಮಾಡಿತು.

ಪ್ರತಿಯೊಂದು ಸಂಗತಿಯನ್ನು ಅಳೆದು ತೂಗಿ ಮಾತಾಡುವೆ ಎಂದು ಜಂಬ ಕೊಚ್ಚಿಕೊಳ್ಳುವ ಭೈರಪ್ಪ ಈ ಇತಿಹಾಸವನ್ನೂ ಜನತೆಗೆ ತಿಳಿಸಬೇಕಿತ್ತು. ವಚನಕಾರರನ್ನು ಹಾಗೂ ವಚನಗಳನ್ನು ಮತೀಯವಾದಿಗಳು ಸುಟ್ಟು ಹಾಕಿದರು. ಇದು ಸರಿಯಾದ ನಡೆಯಲ್ಲ ಎಂದು ಬಿಚ್ಚು ಮನಸ್ಸಿನಿಂದ ದಸರಾ ಹಬ್ಬ ಉದ್ಘಾಟಿಸಿ ಮಾತಾಡಿದರೆ ಅದು ಬೇರೆ ಆಗುತ್ತಿತ್ತು.

ಆದರೆ ಮನಸ್ಸಿನಲ್ಲಿ ಸಾಕಷ್ಟು ಕೊಳೆಯನ್ನು ತುಂಬಿಕೊಂಡು ಬರೀ ಮೇಲೆ ಮೇಲೆ ಮಾತಾಡುತ್ತೇನೆ ಅಂದರೆ ಅದು ಒಂದಲ್ಲ ಒಂದು ಕಡೆ ಅದು ಅವರಿಗೂ ಸುಳಿವು ಕೊಡದೆ ನುಗ್ಗಿ ಬಿಡುತ್ತದೆ. ಮಹಿಳೆಯರು ಪುರುಷರಿಗೆ ಸರಿಸಮನಾಗಿ ದುಡಿಯುವುದೇನೋ ಸರಿ. ಆದರೆ ಅವರು ಗರ್ಭ ಗುಡಿಗೆ ಹೋಗಬಾರದು ಎಂದು ಹೇಳಿರುವುದು ಭೈರಪ್ಪನವರು ಎಂಥ ಕರ್ಮಠರು ಎಂದು ತೋರಿಸಿಕೊಡುತ್ತದೆ.

ಹೆಣ್ಣು ಗುಡಿ ಪ್ರವೇಶಿಸಬಾರದಂತೆ !?

ಮಹಿಳೆ ಮುಟ್ಟಾಗುತ್ತಾಳೆ ಎನ್ನುವ ಕಾರಣಕ್ಕೆ ಗುಡಿಗೆ ಹೋಗಬಾರದು ಎಂದಿದ್ದರೆ ಮುಟ್ಟು ಅಪವಿತ್ರವೆಂದು ಯಾವುದಾದರೂ ವಿಜ್ಞಾನಿ ಹೇಳಿದ್ದಾರೆಯೆ ? ಮುಟ್ಟಿಲ್ಲದೆ ಯಾರಾದರೂ ಹುಟ್ಟಲು ಸಾಧ್ಯವೆ ? ಇದೆಲ್ಲ ಹೋಗಲಿ ಸನ್ಮಾನ್ಯ  ಶ್ರೀ ಭೈರಪ್ಪನವರು ತಾಯಿಯ ಮುಟ್ಟಿನಲ್ಲಿ ಹುಟ್ಟಿ ಬಂದಿದ್ದಾರೋ ? ಅಥವಾ ತಂದೆಯ ಉದರದಲ್ಲಿ ಜನಿಸಿದ್ದಾರೋ ? ಅದನ್ನು ಅವರೆ ಬಾಯಿಬಿಟ್ಟು ಹೇಳಬೇಕು.  ಇಲ್ಲದೆ ಹೋದರೆ ಭೈರಪ್ಪನವರ ಜನನದ ಕುರಿತು ಯಾರಾದರೂ ಅಪಾರ್ಥವಾಗಿ ಮಾತಾಡಬಹುದು.

ಹೆಣ್ಣು ಕನಿಷ್ಠ ಗಂಡು ಶ್ರೇಷ್ಠ ಎಂಬ ಗೊಬ್ಬರ ಬೈರಪ್ಪನವರ ತಲೆಯಲ್ಲಿ ತುಂಬಿಕೊಂಡಿದೆ. ಬಹುಶಃ ಭೈರಪ್ಪನವರು ಮದುವೆಯಾದುದು ಯಾರನ್ನೋ !? ಹೆಣ್ಣು ಕನಿಷ್ಠವೆನ್ನುವುದಾದರೆ ಇನ್ನು ಮುಂದೆ ನಾವು ನೀವೆಲ್ಲ ಭೈರಪ್ಪನವರು ಅಪ್ಪಣೆ ಕೊಡಿಸಿದಂತೆ ಗಂಡು ಗಂಡುಗಳೆ ಮದುವೆ ಆದರಾಯಿತು ?! ಹೆಣ್ಣುಗಳನ್ನು ನಿಕೃಷ್ಟವಾಗಿ ಕಾಣುವುದಾದರೂ ತಪ್ಪುತ್ತದೆ.

ಇಂಥ ವಿವೇಕ ರಹಿತರ ಕಂಡು ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿಯೆ :

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ

ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ

ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ

ಇದಾವಾವ ಪರಿಯಲ್ಲಿ ಕಾಡಿತ್ತು ಮಾಯೆ

ಈ ಮಾಯೆಯ ಕಳೆವಡೆ ಎನ್ನಳವಲ್ಲ

ನೀವೆ ಬಲ್ಲಿರಿ ಕೂಡಲಸಂಗಮದೇವಾ !

ಎಂದು ಹೆಣ್ಣನ್ನು ಮರೆಯಲು , ಆಕೆಯನ್ನು ಬಿಟ್ಟಿರಲು ಸಾಧ್ಯವಿಲ್ಲ ಏಕೆಂದರೆ ಹೆಣ್ಣು ಗಂಡು ಭಿನ್ನ ಭಿನ್ನ ಅಲ್ಲವೇ ಅಲ್ಲ. ಇಬ್ಬರೂ ಒಂದೇ. ಇರ್ವರಲ್ಲಿರುವ ಪ್ರಾಣ, ಜೀವ,ಭಾವ ಭಿನ್ನವಲ್ಲ. ನಡುವೆ ಸುಳಿವ ಆತ್ಮಕ್ಕೆ ಹೆಣ್ಣು ಗಂಡು ಎಂಬ ಭೇದ  ಇಲ್ಲವೇ ಇಲ್ಲ.

ಹೆಣ್ಣು ಹೆಣ್ಣಾದಡೆ ಗಂಡಿನ ಸೂತಕ

ಗಂಡು ಗಂಡಾದಡೆ ಹೆಣ್ಣಿನ ಸೂತಕ

ಮನದ ಸೂತಕ ಹಿಂಗಿದಡೆ ತನುವಿನ ಸೂತಕಕ್ಕೆ

ತೆರವುಂಟೆ ? ಅಯ್ಯಾ.

ಮೊದಲಿಲ್ಲದ ಸೂತಕಕ್ಕೆ ಮರುಳಾಯಿತ್ತು ಜಗವೆಲ್ಲ

ಎನ್ನದೇವ ಚೆನ್ನಮಲ್ಲಿಕಾರ್ಜುನನೆಂಬ ಗುರುವಂಗೆ

ಜಗವೆಲ್ಲ ಹೆಣ್ಣು ನೋಡಾ ಅಯ್ಯಾ

ಎನ್ನುವ ಮೂಲಕ ಗಂಡು ಹೆಣ್ಣು ಬೇರೆ ಬೇರೆ ಅಲ್ಲ ಎಂಬುದು ಶರಣರ ಸ್ಪಷ್ಟವಾದ ನಿಲುವು. ಇದು ವೈಜ್ಞಾನಿಕ ಸತ್ಯವೂ ಸಹ. ಇದನ್ನು ಭೈರಪ್ಪನವರಂಥವರು ಅರಿತುಕೊಳ್ಳುವುದು ಒಳಿತು.

0 ವಿಚಾರಿ ,”sans7>�o�

8 thoughts on “ಭೈರಪ್ಪನವರು ಹುಟ್ಟಿದ್ದಾದರೂ ಎಲ್ಲಿ ?

 1. ಮೆಲಿನ ಲೆಖನದಲ್ಲಿ ಕಂಡುಬಂದ ಅಂಶಗಳು:1.ಬಸವಣ್ಣನ ಕಾಲದಲ್ಲಿ ನಡೆದ್ದು ಅಂತರ ಜಾತಿ ವಿವಾಹವಲ್ಲ.2.ಆ ಮದುವೆ ಲಿಂಗಾಯತರಲ್ಲಿ ಆದದ್ದು.ವಿಪರ್ಯಾಸ ಅಭಿಪ್ರಾಯವಲ್ಲವೆ?
  ಬಸವಣ್ಣ ಅಂತರ ಜಾತಿವಿವಾಹ ಮಾಡಿ ಸಮಾಜದಲ್ಲಿ ಸಾಮರಸ್ಯ ಮುಡಿಸಲು ಪ್ರಯತ್ನಿಸಿದ ಎಂದು ಜಗತ್ತೆ ನಂಬುತ್ತದೆ.ಆವಾಗಲು ಅದು ಪಟ್ಟಬದ್ರಹಿತಾಸಕ್ತಿಗಳಿಂದ,ದುರ್ದೈವದದಂದ ಸಮಾಜಕ್ಕೆ ಸ್ವೀಕಾರವಾಗಲಿಲ್ಲ.ಇಂದಿಗೂ 900ವರ್ಷಗಳಲ್ಲಿಯಾ ಸಹ ಸಮಾಜ ತೆರೆದಮನಸ್ಸಿನಿಂದ ಸ್ವೀಕರಿಸುತ್ತಿಲ್ಲ.ಮರ್ಯಾದೆ ಹತ್ಯೆಗಳು ಆಗುತ್ತಿಲ್ಲವೆ? ಅದನ್ನೇ ಭೈರಪ್ಪನವರು ಹೆಳಿದ್ದಾರೆ.ಅದು ವಾಸ್ತವ.ಒಪ್ಪುವ ಮಾನಸಿಕತೆ ಬೆಕು.

  1. ತುಂಬಾ ಚೆನ್ನಾಗಿ ಬರೆದಿರುವಿರಿ ಈ ನಿಮ್ಮ ಬರವಣಿಗೆಯ ರೂಪದಲ್ಲಿರುವ ನಿಮ್ಮ ಆ ಭೈರಪ್ಪನವರ ಭೈರಪೊ ಅನ್ನುವದು ಅಷ್ಟೇ ಬಾಕಿ. ಗೊಬ್ಬರವನ್ನು ತಿಪ್ಪೆಗೆಸಿಯಬೇಕು ಇವೇನೊ ದೊಡ್ಡ ಸಾಹಿತಿಯಂತೆ ಹೆಣ್ಣಿನ ಬಗ್ಗೆ ತಾತ್ಸಾರ ಭಾವನೆಯ ಮುದಿಮುರ್ಖ., ಶ್ರೀ ಗುರು ಬವಣ್ಣನವರ ಬಗ್ಗೆ “ಜಗತ್ತಿನ ಜೋತಿಗೆ” ಬಗ್ಗೆ ಚನ್ನಾಗಿ ಅರಿತು ಕೊಳ್ಳದ ಅವಿವೇಕದ ಮಾತುಗಾರಿಕೆ.

 2. Let us follow the preachings of LORD SRI BADAVANNA. Forgive the people who want publicity and do business in their routine way.

 3. ನಮಸ್ಕಾರ. …
  ಹರಳಯ್ಯ ಮಧುವರಸರು ಲಿಂಗದೀಕ್ಷೆ ಹೊಂದಿದಾಗ
  ಅವರ ಅವರ ಜಾತಿ ಸುಟ್ಟುಹೋಗಿ ಅವರೀರ್ವರೂ,
  ಅವರಮಕ್ಕಳೂ(ಸ್ವಜಾತಿ)ಲಿಂಗಾಯತಧರ್ಮೀಯ ರಾಗಿದ್ದಾರೆ. ಇದು ಅಂತರ್ಜಾತೀಯ ಮದುವೆಯೇ
  ಅಲ್ಲ! ಇದನ್ನು ವಿರೋಧಿಸಿದ್ದು ಸನಾತನಿಗಳು, ಮನು
  ವಾದಿಗಳು ಹಾಗೂ ಪುರೋಹಿತಶಾಹಿಗಳು. ಸಮಸ್ತ
  ಸಮಾಜವಲ್ಲ. ಇದನ್ನು ಭೈರಪ್ಪನವರರು ಅರಿತೂ
  ಈ ರೀತಿ ಹೇಳುವುದು ಅವರ ಚಿಂತನೆ ಸೂತಕವಾಗಿರುವುದನ್ನು ತೋರಿಸುತ್ತದೆ !
  *ಚಂದ್ರಶೇಖರ ಇಟಗಿ

 4. ಪೃಕೃತಿ ಸಹಜ ಅವರವರ ನಡವಳಿಕೆಯಿಂದ ಆಕರ್ಷಣೆಗೊಂಡು ಸತಿ ಪತಿ ಗಳಾಗಿ ನಿಷ್ಠೆ ಯಿಂದ ಬಾಳ್ವೆ ನಡೆಸಲು ದಾರಿ ತೋರಿದ ಆ ಬಸವಣ್ಣನ ಮಾದರಿಗೆ ಪೃಕೃತಿಯೇ ಸಾಕ್ಷಿ ಯಾಗಿರುವಾಗ ಯಾವನಿಗೆ ಬೇಕು ಈ ಭೈರಪ್ಪನ ಪಿಟೀಲು.

 5. ಅ ಪ್ರಬುದ್ದ ಬರಹಗಾರ ಮತ್ತು ಇವನೊಬ್ಬ ಜಾತಿಯಿಂದ ಹೊರ ಬರದ ಬರಹಗಾರ

Leave a Reply

Your email address will not be published. Required fields are marked *

error: Content is protected !!