ಆರೋಗ್ಯಕರ ಸಮಾಜಕ್ಕೆ ಟೀಕೆ ಟಿಪ್ಪಣೆಗಳು ಅವಶ್ಯಕವಾಗಿ ಬೇಕು

ಸತ್ಯಂಪೇಟೆ ಪ್ರಕರಣ ಕೈಬಿಡಿರಿ

ಬೀದರ : 3 : ಪತ್ರಕರ್ತ, ಶರಣ ಸಾಹಿತಿ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲೆ ಹೂಡಿರುವ ಕೇಸ್ ವಾಪಾಸ್ ಪಡೆಯುವ ಕುರಿತು ಬಸವ ಪರ ಸಂಘಟನೆಗಳ ಒಕ್ಕೂಟ ಬೀದರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು.

ನಮ್ಮ ನಾಡಿನ ಹೆಮ್ಮೆಯ ಚಿಂತಕ, ಪತ್ರಕರ್ತ ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲೆ ದಾವಣಗೆರೆಯ ಹೊನ್ನಾಳಿಯಲ್ಲಿ 505 ಸೆಕ್ಷನ್ ಪ್ರಕಾರ ಕೇಸ್ ದಾಖಲಿಸಿದ್ದು ಉದ್ದೇಶ ಪೂರ್ವಕವಾಗಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ಯಾವ ವ್ಯಕ್ತಿಯ ತೇಜೋವಧೆ ಮಾಡುವ ಉದ್ದೇಶ ವಿಶ್ವಾರಾಧ್ಯರಿಗೆ ಇಲ್ಲ. ಸತ್ಯಂಪೇಟೆಯವರು ಸೈದ್ಧಾಂತಿಕ ಭಿನ್ನ ನಿಲುವನ್ನು ಹೇಳಿ ಆಚರಣೆಗಳನ್ನು ಖಂಡಿಸಿದ್ದಾರೆ ಹೊರತು, ವ್ಯಕ್ತಿಗತವಾದ ಸಾವನ್ನು ಅವರು ಎಲ್ಲಿಯೂ ಸಂಭ್ರಮಿಸಿಲ್ಲ.

ಆದಾಗ್ಯೂ ಪ್ರಸ್ತುತ ಮಠಾಧೀಶರ ಭಕ್ತರಿಗೆ ನೋವಾದರೆ ವಿಷಾಧಿಸುವೆ ಎಂದು ಅದೇ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಆದಾಗ್ಯೂ ಹಲವರ ಪಿತೂರಿಯಿಂದ ಕೇಶ್ ದಾಖಲಿಸಿರುವುದು ವಿಷಾದನೀಯ ಎಂದು ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ವಿವರಿಸಿದ್ದಾರೆ.

ಆರೋಗ್ಯಕರ ಸಮಾಜಕ್ಕೆ ಟೀಕೆ ಟಿಪ್ಪಣೆಗಳು ಅವಶ್ಯಕವಾಗಿ ಬೇಕು. ಅದನ್ನು ಹತ್ತಿಕ್ಕುವ ಯತ್ನಕ್ಕೆ ಕೈ ಹಾಕುವ ಪಟ್ಟಭದ್ರರಿಗೆ ಸರಕಾರ ಮಣೆ ಹಾಕಬಾರದು, ಅಭಿವ್ಯಕ್ತಿಯ ಬಂಧನವೆಂದರೆ ಅದು ಪ್ರಜಾಪ್ರಭುತ್ವದ ಸೋಲು ಎಂದೆ ಎಂದು ಅರ್ಥ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಮನವಿ ಪತ್ರ ನೀಡುವವರಲ್ಲಿ ಪೂಜ್ಯ ಶ್ರೀ. ಪ್ರಭು ದೇವರು ಬಸವ ಸೇವಾ ಪ್ರತಿಷ್ಠಾನ ಬೀದರ, ಯುವ ಬಸವ ಸೇನಾ ಅಧ್ಯಕ್ಷರು ಬೀದರ, ನೀಲಮ್ಮನ ಬಳಗದ ಅಕ್ಕಮಹಾದೇವಿ, ಶಿವಯೋಗ ಒಕ್ಕೂಟದ ಸಂಚಾಲಕ ಪಿ.ನಂದಿ, ಶ್ರೀ.ಬಸವೇಶ್ವರ ಹಿರಿಯ ನಾಗರಿಕರ ವೇದಿಕೆ ಬೀದರನ ಮಾಣಿಕಪ್ರಭು ಗೋರವೆ, ಲಿಂಗಾಯತ ಮಹಾಸಭಾದ ಮುಖ್ಯಸ್ಥೆ ಪೂಜ್ಯ ಶ್ರೀ. ಅಕ್ಕಅನ್ನಪೂರ್ಣ ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಸೇವಾಶ್ರಮದ ಶರಣ ಉದ್ದೀನ ಬೀದರಮ ಮಾಣಿಕಪ್ಪ ಗೋರನಾಳೆ, ರಮೇಶ ಮಠಪತಿ, ಸಿ.ಎಸ್. ಗಣಾಚಾರಿ, ಪ್ರಕಾಶ ಮಠಪತಿ, ಮೊದಲಾದವರು ಉಪಸ್ಥಿತರಿದ್ದರು.

0 ಬೀದರ ವರದಿಗಾರ

Leave a Reply

Your email address will not be published. Required fields are marked *

error: Content is protected !!