ಶಹಾಪುರದ ಸಗರಾದ್ರಿ ಬೆಟ್ಟ- ಪ್ರಾಚೀನ ಬೌದ್ದ ನೆಲೆ -ಲಕ್ಷೀಸಬೇಕಾದಕೆಲವು ಸಂಗತಿಗಳು

ಬುದ್ಧಘೋಷ್‍ದೇವೇಂದ್ರ ಹೆಗ್ಗಡೆ

ಐತಿಹಾಸಿಕವಾಗಿದಕ್ಕನ್ ಪ್ರಸ್ಥಕ್ಕೆ ಸೇರಿದ, ಪ್ರಸ್ತುತಯಾದಗಿರಿಜಿಲ್ಲೆಯಶಹಾಪುರ,ಸುರಪುರತಾಲೂಕ ಹಾಗೂ ಕಲಬುರರ್ಗಿಜಿಲ್ಲೆಯಜೇವರಗಿ,ವಿಜಯಪುರಜಿಲ್ಲೆಯ ಮುದ್ದೆಬಿಹಾಳ,ಸಿಂಧಗಿ ತಾಲೂಕಿನ ಕೆಲವು ಭಾಗ ಸೇರಿ, ಭೀಮಾ ಮತ್ತು ಕೃಷ್ಣ ನದಿಗಳ ನಡುವಿನ ಪ್ರದೇಶವನ್ನು ಸಗರನಾಡುಎಂದುಕರೆಯಲಾಗಿದೆ.ಸಗರನಾಡಿನ ಪೂರ್ವಕ್ಕೆಎಡದೊರೆಎರಡುಸಾಸಿರ, ಪಶ್ಚಿಮಕ್ಕೆ ತರ್ದೆವಾಡಿ ಸಾಸಿರ,ಉತ್ತರಕ್ಕೆಅಲಂದ ಸಾಸಿರಮತ್ತುದಕ್ಷಿಣಕ್ಕೆಕರಡಕಲ್ಲು ಮುನ್ನೂರುಎಂದುಗಡಿ ಪ್ರಸ್ತಾಪಿಸಲಾಗಿದೆ.


ಶಹಾಪುರ ನಗರಕ್ಕೆ ಹೊಂದಿಕೊಂಡು ಹಬ್ಬಿರುವ ಬೆಟ್ಟಗಳ ಸಾಲಿಗೆ ಸಗರಾದ್ರಿಎಂದುಕರೆಯಲಾಗಿದೆ. ಸಗರಾದ್ರಿಯು ಪೂರ್ವ-ಪಶ್ಚಿಮವಾಗಿ ಸುಮಾರು11ಕಿಮೀ.ಉತ್ತರ-ದಕ್ಷಿಣವಾಗಿ13ಕಿ.ಮೀ ವಿಶಾಲವಾಗಿದ್ದುಬೌಗೋಳಿಕವಾಗಿ ಹಲವು ವೈಶಿಷ್ಠ್ಯಗಳನ್ನು ಹೊಂದಿದೆ. ವಿವಿಧ ಬಗೆಯಬಹುಉಪಯೋಗಿಸಸ್ಯರಾಶಿ, ನಿಸರ್ಗದತ್ತ ಹಲವಾರು ಗುಹೆಗಳು, ಬೃಹತ್‍ಗಾತ್ರದಹೆಬ್ಬಂಡೆಗಳು, ವಜ್ರಾಕೃತಿಯಲ್ಲಿಅಲ್ಲಲ್ಲಿಚದುರಿ ಬಿದ್ದಂತಿರುವ ಗಿರಿಶಿಖರ ಶ್ರೇಣೀಗಳುಇಲ್ಲಿನ ನೈಸರ್ಗಿಕ ಕೊಡುಗೆಗಳು. ಐತಿಹಾಸಿಕವಾಗಿ ಹದಿನಾಲ್ಕರಿಂದ ಹದಿನಾರನೇಶತಮಾನದಲ್ಲಿ ನಿರ್ಮಾಣವಾಗಿರಬಹುದಾದಕೋಟೆ,ಈ ಬೆಟ್ಟದ ಸೊಬಗನ್ನು ಹೆಚ್ಚಿಸಿದ್ದು;ಈ ಕೋಟೆಕಾಲಾನುಕ್ರಮದಲ್ಲಿ ಸಗರಚಕ್ರವರ್ತಿ, ಬಹುಮನಿ, ಆದಿಲ್ ಶಾಹಿ, ನಿಜಾಮರು, ವಿಜಯನಗರದಅರಸರು,ದೇವಗಿರಿಯಾದವರು, ಸುರಪುರದದೊರೆಗಳ ಆಡಳಿತದಲ್ಲಿತ್ತು ಎಂಬ ಪ್ರತೀತಿಇದೆ.ಈ ಪ್ರದೇಶವು ಶಾತವಾಹನರ, ಚಾಲುಕ್ಯರ ಹಾಗೂ ಮೌರ್ಯಚಕ್ರವರ್ತಿ ಸಾಮ್ರಾಟ ಅಶೋಕನ ಆಡಳಿತಕ್ಕೆ ಒಳಪಟ್ಟಿತ್ತು ಎಂಬುದನ್ನು ಹಲವಾರುಐತಿಹಾಸಿಕ ದಾಖಲೆಗಳು ಉಲ್ಲೇಖಿಸಿವೆ.


ಸಗರನಾಡು ಮತ್ತು ಸಗರಾದ್ರಿಯಕುರಿತು ಹಲವಾರು ಸಂಶೋಧಕರು, ಲೇಖಕರು,ಚಿಂತಕರು,ಪತ್ರಕರ್ತರು ಹಾಗೂ ಉತ್ಸಾಹಿ ವಿಧ್ಯಾರ್ಥಿ,ಯುವಕರುಅಧ್ಯಾಯನ ಮಾಡಿದ್ದಾರೆ.ಹಲವಾರು ಕೃತಿಗಳುರಚನೆಯಾಗಿವೆ; ಹಲವಾರು ಸಾಹಿತ್ಯಿಕ-ಸಾಂಸ್ಕøತಿಕ ಮತ್ತುರಾಜಕೀಯ ವೇಧಿಕೆಗಳಲ್ಲಿಬಹುಮುಖಿಯಾಗಿಚರ್ಚೆ ನಡೆದಿವೆ.ಡಿ.ಎನ್.ಅಕ್ಕಿ-ಸಗರನಾಡ ಸಿರಿ, ಎ.ಕೃಷ್ಣ ಸುರಪುರ-ಸಗರನಾಡದರ್ಶನ, ಸಗರಕೃಷ್ಣಚಾರ್ಯ-ಸಗರನಾಡಿನ ಪೌರಾಣಿಕ ಹಿರಿಮೆ, ಸೂಗಯ್ಯ ಹಿರೇಮಠ-ಶಹಾಪುರದರ್ರ್ಶನ 1994, ಡಿ.ಎನ್.ಅಕ್ಕಿಯವರಶಹಾಪುರದರ್ರ್ಶನ 1996, ಚಂದ್ರಕಾಂತ ಕರದಳ್ಳಿಯವರ ಶಹಾಪುರದರ್ರ್ಶನ ಮಾಲಿಕೆ 2008, ಡಾ. ಚೆನ್ನಬಸಪ್ಪ ಪಾಟೀಲರವರಕರ್ನಾಟಕ ಕೋಟೆಗಳು ಸಂಪುಟ 1, ಡಾ.ಅಬ್ದುಲ್‍ಕರೀಮ್‍ರವರಸಗರನಾಡ ಸಂಸ್ಕøತಿ ಸಮಿಕ್ಷೆ, ಸಿದ್ದಣ್ಣ ಕುಂಬಾರರವರಶಹಾಪುರ ಪರಿಸರದ ಶಾಸನಗಳು,ಡಾ.ಧರ್ಮಣ್ಣ ಬಡಿಗೇರರವರಯಾದಗಿರಿಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು, ಶಾಯಿಬಾಬಾ ಅಣಬಿಯವರಸಗರಾದ್ರಿ ಸ್ಮಾರಕಗಳ ಅಧ್ಯಾಯನ,ರಾಘವೇಂದ್ರ ಹಾರಣಗೇರಾರವರಶಹಾಪುರತಾಲೂಕಿನಆಧ್ಯಾತ್ಮಿಕ ಕ್ಷೇತ್ರಗಳು ಗಮನಸೆಳೆಯುವ ಕೃತಿಗಲಾಗಿವೆ. ಇದಲ್ಲದೆಇತಿಹಾಕಾರರಾದಭಾಸ್ಕರರಾವ ಮೂಡಬೊಳ, ಶಾಸನತಜ್ಞರಾದಡಾ.ಮೋನಪ್ಪ ಸಿರಿವಾಳ, ಸಾಹಿತಿಗಳಾದ ಲಿಂಗಣ್ಣ ಸತ್ಯಂಪೇಟ, ಸಿದ್ರಾಮ ಹೊನ್ಕಲ್,ವಿಶ್ವಾರಾಧ್ಯ ಸತ್ಯಂಪೇಟ, ಗಾಳೆಪ್ಪ ಪೂಜಾರಿ, ಬಸವರಾಜಕಲೆಗಾರ, ಸಿ.ಎಸ್.ಬೀಮರಾಯ, ಪತ್ರಕರ್ತರಾದ ಟಿ.ನಾಗೇಂದ್ರ, ದೇವು ಪತ್ತರ, ಶಿವರಂಜನ ಸತ್ಯಂಪೇಟ, ಅಶೋಕ ಸಾಲವಾಡಗಿ,ಅಮರೇಶ ಹಿರೇಮಠ, ಮಲ್ಲು ಮುದ್ನೂರ, ನಾರಾಯಣ ಸಗರ,ಇನ್ನಿತರ ಸಾಹಿತ್ಯ ಸಂಸ್ಕøತಿಆಸಕ್ತರು ಸಗರನಾಡು ಮತ್ತು ಸಗರಾದ್ರಿಕುರಿತು ವಿವಿಧಕಡೆ ಬೆಳಕು ಚೆಲ್ಲಿದ್ದಾರೆ.
ಇವುಗಳಲ್ಲಿ ಕೆಲವು ಸಮಗ್ರ ನೋಟದಲ್ಲಿದ್ದರೆ, ಹಲವು ಅಧ್ಯಾಯನಗಳು ಬಿಡಿ ಬಿಡಿಯಾಗಿದ್ದು, ವಿಷಯದ ಮಿತಿ ಮತ್ತುಆಧ್ಯತೆಗೆ ಒಳಪಟ್ಟಿವೆ. ಈ ಅಧ್ಯಾಯನಗಳ ನೋಟ ಮತ್ತು ವ್ಯಾಪ್ತಿ ಸಹಜವಾಗಿ ಸಗರಾದ್ರಿಯಲ್ಲಿ ಅಸ್ತಿತ್ವದಲ್ಲಿದ್ದ ಬೌದ್ಧನೆಲೆಯ ಶೋಧನಾ ನೋಟದಕೊರತೆಯಲ್ಲಿವೆ.ಸಗರಾದ್ರಿಯಲ್ಲಿನ ಬೌದ್ಧ ನೆಲೆಗಳ ಕುರಿತು ಇಂದಿನವರೆಗೆಯಾವ ಸ್ವತಂತ್ರಅಧ್ಯಾಯನವು ನಡೆದಿಲ್ಲ. ಆ ನಿಟ್ಟಿನಲ್ಲಿಇದೊಂದುಪ್ರಾರಂಭಿಕ ಸಂಪರ್ಕ ಸೇತುಪ್ರಯತ್ನವಾಗಿದೆ;ಮುಂದಿನ ವಿಸ್ತರಿತಅಧ್ಯಯನಕ್ಕೆ ದಿಕ್ಸೂಚಿಯಾಗಲಿದೆ.

ಪರ್ವತಶ್ರೇಣಿಗಳು ಮತ್ತು ಬೌದ್ದನೆಲೆಗಳು


ವಿಶ್ವದ ಬೌದ್ದ ಸಾಂಸ್ಕøತಿಕ ಪರಂಪರೆಯಲ್ಲಿ ಪರ್ವತ ಶ್ರೇಣಿಗಳು, ಬೆಟ್ಟಗಳು ಬಹುಮಹತ್ವದ ಸ್ಥಾನ ಪಡೆದಿವೆ. ಅತ್ಯಂತ ಪ್ರಾಚೀನ ಬೌದ್ದನೆಲೆಗಳು ಜಗತ್ತಿನಾದ್ಯಂತ ಪರ್ವತಶ್ರೇಣಿಗಳಲ್ಲಿ ನೆಲೆಗೊಂಡಿವೆ. ಚೀನಾದೇಶದ ಹಳದಿ ಪರ್ವತಗಳು, ತಾಯ್, ವುತಾಯ್, ಎಮಿ, ಪುತು, ಜೀಹೂ ಮತ್ತುತೇಲುವಬೆಟ್ಟಎಂದೇ ಪ್ರಖ್ಯಾತಿ ಪಡೆದ ಫಂಜಿಗಾಷೀನ್ ಪರ್ವತಗಳು ಮುಖ್ಯವಾದವುಗಳು. ಕೋರಿಯಾದೇಶದ, Seoಟಿಚಿsಚಿ, ಆಚಿeheuಟಿgsಚಿ, ಃeoಠಿರಿusಚಿ, ಒಚಿgoಞsಚಿ, ಖಿoಟಿgಜosಚಿ, ಃoಟಿgieogsಚಿಮತ್ತುಃuseoಞsಚಿಮುಖ್ಯವಾದವು. ಅಫಘಾನಿಸ್ತಾನದ ಬಾಮಿಯಾನ ಪರ್ವತಶ್ರೇಣಿ, ಭೂತಾನದ ಫಾಗೋ ಪರ್ವತ, ಥೈಲ್ಯಾಂಡ ವ್ಯಾತಫರ್, ಜಪಾನ್ ಕೀ ಪರ್ವತಶ್ರೇಣಿ, ಶ್ರೀಲಂಕಾದ ದಾಬೋಲದರಾಯಲ್‍ಕೇವ್ ಪರ್ವತಶ್ರೇಣಿ, ಬ್ಯಾಂಕಾಕ್‍ಗೊಲ್ಡನ್‍ಮೌಂಟ್ ಪ್ರಮುಖವಾಗಿವೆ. ಇವುಗಳಲ್ಲಿ ಹಲವು ಪರ್ವತಶ್ರೇಣಿಗಳನ್ನು ಯುನೇಸ್ಕೊಜಾಗತಿಕ ಬೌದ್ದ ಪರಂಪರೆಯ ತಾಣಗಳೆಂದು ಘೋಷಿಸಿದೆ.
ಭಾರತದಲ್ಲಿ ಲಡಾಖ್, ಹಿಮಾಚಲ ಪ್ರದೇಶ, ತ್ರಿಪುರಾ, ಅರುಣಾಚಲ ಪ್ರದೇಶ, ಈಶಾನ್ಯದ ರಾಜ್ಯಗಳು ಹಾಗೂ ದಕ್ಷಿಣದಅಜಂತಾ ,ಎಲ್ಲೋರ, ಕಾರ್ಲೇ, ಕನ್ಹೇರಿ, ಆಂಧ್ರದ ನಾಗರ್ಜುನಕೊಂಡ, ತಿರುಪತಿ, ಶ್ರೀಶೈಲ, ಬೋವಿಕೊಂಡ, ತೊಟ್ಲಕೊಂಡ, ಪವುರಲ್‍ಕೊಂಡ, ಬೊಜ್ಜನಕೊಂಡ, ಎರ್ರಮಟ್ಟಿ ದಿಬ್ಬಲುಇನ್ನಿತರ ಪರ್ವತಶ್ರೇಣಿಗಳು ಬೌದ್ದರ ಪ್ರಮುಖ ಬೆಟ್ಟದ ನೆಲೆಗಳಾಗಿವೆ. ಕರ್ನಾಟಕದ ಮಸ್ಕಿ, ಕೊಪ್ಪಳ, ಬಾದಾಮಿ, ಬ್ರಹ್ಮಗಿರಿ, ಜಟಿಂಗರಾಮೇಶ್ವರ, ಸಿದ್ದಪುರ ಮತ್ತುಸನ್ನತ್ತಿ-ಶಹಾಪುರ ಈ ಸಾಲಿಗೆ ಸೇರುತ್ತವೆ.
ಬೌದ್ದರ ನಂಬಿಕೆ ಪ್ರಕಾರ ಬುದ್ದನ ನಿರ್ವಾಣದ 450 ವರ್ಷಗಳ ನಂತರ ಬೋಧಿಸತ್ವನಾಗಿ ಮಂಜುಶ್ರೀಯು ಹಿಮಾವತ್ ಪರ್ವತದಲ್ಲಿ ಜನಿಸುವನೆಂದು ಮಹಾಪರಿನಿರ್ವಾಣಸುತ್ತದಲ್ಲಿ ತಿಳಿಸಲಾಗಿದೆ. ಅಲ್ಲದೆಆತನ ನಿರ್ವಾಣವಾದ ಮೇಲೆ ಬುದ್ದನ ಉಳಿಕೆಗಳು ಗಂಧಮಾನ ಪರ್ವತಗಳಲ್ಲಿನ ವಜ್ರಕೂಟದಲ್ಲಿದೊರೆಯುವುದೆಂದು ಹೇಳಲಾಗಿದೆ. ಇದರಲ್ಲಿ ನಂಬಿಕೆ ಹೊಂದಿದ ಹಲವಾರು ಬೌದ್ದ ಶಾಖೆಯ ಪರಿಪಾಲಕರು ಬುದ್ದನನ್ನುಅರಸುತ್ತ ಬೆಟ್ಟ ಗುಡ್ಡಗಳತ್ತ ಮುಖಮಾಡಿದ್ದು ಈಗ ಐತಿಹಾಸಿಕ ಸತ್ಯವಾಗಿದೆ.
ಬುದ್ದ ಭದ್ರನಅವಂತಕಸುತ್ತದಲ್ಲಿ (ಕ್ರಿ.ಶ. 5ನೇ ಶತಮಾನ) ಮಂಜುಶ್ರೀಯು ಈಶಾನ್ಯ ಭಾಗದ ಶೀತಲ ಪರ್ವತಶ್ರೇಣಿಯ ಬೆಟ್ಟಗಳಲ್ಲಿ ಅವತರಿಸುವನೆಂದು ಭವಿಷ್ಯ ನುಡಿಯಲಾಗಿತ್ತು. ಮುಂದೆಚೀನಿ ಅನುವಾದಕರುಅದನ್ನು ವುತಾಯಿ ಬೆಟ್ಟಗಳೆಂದು ಅನುವಾದಿಸಿ ಚೀನಾದ ವುತಾಯಿ ಬೆಟ್ಟದಲ್ಲಿ ಬೌದ್ದನೆಲೆಕಂಡರು. ಚೀನಾದ ವುತಾಯ್ ಬೆಟ್ಟಗಳು ಪ್ರಾಚೀನ ಕಾಲದಿಂದಲೂ ಬೌದ್ದದೈವಿಕಶಕ್ತಿ ನೆಲೆಗಳೆಂದು ಪ್ರಸಿದ್ದಿ ಪಡೆದಿವೆ. ಈ ಮೇಲಿನ ಸಂಕ್ಷಿಪ್ತ ಸಾರಾಂಶದ ದಿಕ್ಸೂಚಿಏನೆಂದರೆಜಗತ್ತಿನಾದ್ಯಂತ ಬೌದ್ದಧರ್ಮಿಯರುತಮ್ಮ ನೆಲೆಗಳನ್ನು ಬೆಟ್ಟಗಳಲ್ಲಿಯೂ ಸಹ ಕಂಡುಕೊಂಡುದೈವಿಕ ಶಕ್ತಿ ಕೇಂದ್ರಗಳಾಗಿ ಪ್ರಾದಾನ್ಯತೆಪಡೆದಿರುವುದು ಪ್ರಶ್ನಾತೀತವಾಗಿದೆ.

ಶಹಾಪುರದ ಸಗರಾದ್ರಿ ಬೆಟ್ಟದ ಸಾಲು, ಬುದ್ದ ಮಲಗಿದ ಬೆಟ್ಟಪ್ರಾಚೀನ ಬೌದ್ದ ನೆಲೆಇರಬಹುದೇ?


ಜಗತ್ತಿನಾಧ್ಯಂತ ಹರಡಿರುವ ಬೌದ್ದ ಸಂಪ್ರದಾಯಗಳ ಇತಿಹಾಸವನ್ನು ಮತ್ತು ನೆಲೆಗಳನ್ನು ಅವಲೋಕಿಸಿದರೆ ಪರ್ವತ ಶ್ರೇಣಿಯಲ್ಲಿ ಬೌದ್ದತಾಂತ್ರಿಕರ ನೆಲೆಗಳು ಇರುವುದುಮನಗಾಣಲಾಗಿದೆ. ಈಗಾಗಲೇ ಇತಿಹಾಸದಲ್ಲಿ ಬೌದ್ದ ನೆಲೆಗಳೆಂದು ಅಂಗೀಕರಿಸಲ್ಪಟ್ಟ ಮಹತ್ವದ ಬೌದ್ದ ನೆಲೆಗಳೆಂದರೆ ಸಗರನಾಡಿನ ಸರಹದ್ದಿನ ಸನ್ನತಿ, ಕನಗನಳ್ಳಿ, ಅಣಬಿ, ಏವೂರು, ಹುರಸಗುಂಡಗಿ, ರಾಯಚೂರಜಿಲ್ಲೆಯ ಮಸ್ಕಿ, ಇವುಗಳ ಮಧ್ಯ ಹಾಗೂ ಮಸ್ಕಿ , ಕೊಪ್ಪಳ ಸಮಿಪದಲ್ಲಿ ಪುರಾತನ ಕಾಲದಿಂದಲೂ ಅಸ್ತಿತ್ವದಲ್ಲಿರುವ ಸಗರಾದ್ರಿಯ ಬುದ್ದ ಮಲಗಿದ ಬೆಟ್ಟದಲ್ಲಿ ಬೌದ್ದ ನೆಲೆ ಇದ್ದಿರಬಹುದು ಎಂಬ ಉಹೆ ಸಂಶೋಧನೆಗೆತಕ್ಕ ವಿಷಯವಾಗಿದೆ. ಆ ಬೆಟ್ಟಕ್ಕೆ ಹೊಂದಿಕೊಂಡಂತೆಇರುವ ನಾಗರಕೆರೆ, ತಾವರಕೆರೆ, ಮೇಲಗಿರಿ, ಮಂದಾಕಿನಿಯ, ಹೆಸರುಗಳು ಬೌದ್ದ ಸಂಪ್ರದಾಯದ ಪರಿಧಿಯಲ್ಲಿವೆ; ಹಾಗೂ ಇಲ್ಲಿಯ ಪರಿಸರವನ್ನು ಅವಲೋಕಿಸಿದರೆ ಬೌದ್ದ ನೆಲೆಗಳನ್ನು ಅಲ್ಲಗಳೆಯುವಂತಿಲ್ಲ. ಬುದ್ದ ಮಲಗಿದ ಬೆಟ್ಟದತುದಿಯಲ್ಲಿಇರುವ ಬುದ್ದನ ಮೂಗಿನ ಹೊಳ್ಳೆಯ ಒಳಗೆ ನಿಸರ್ಗದತ್ತವಾಗಿರುವಗುಹೆಯನ್ನುಜನಪದರು ನಾಗಬುಸಪ್ಪನ ಗವಿ ಎಂದುಕರೆಯುತ್ತಿದ್ದು, ಅಲ್ಲಿಒಂದಾನೊಂದುಕಾಲದಲ್ಲಿಒಬ್ಬತಾಂತ್ರಿಕ ವಿಧ್ಯಬಲ್ಲ ಸಂತನಿದ್ದನೆಂದು ನಂಬಿದ್ದಾರೆ, ಈ ಎಳೆಯನ್ನು ಹಿಡಿದು ಅವಲೋಕನ ಮಾಡಿದರೆ ಈ ಎಳೆ ಮುಟ್ಟುವುದೇ ಬೌದ್ದತಾಂತ್ರಿಕ ಶಾಖೆಗೆ;ಇನ್ನೊಂದಷ್ಟು ಮುಂದೆಹೋದರೆ ಈ ಶಾಖೆಯ ಪ್ರಮುಖರೂವಾರಿ, ದಕ್ಷಿಣಪಥದಲ್ಲಿ ನೆಲೆ ಇದ್ದ ನಾಗಾರ್ಜುನನ ಪರಂಪರೆಗೆತಲುಪುತ್ತದೆ.

ನಾಗಾರ್ಜುನ ಇವನ ವೃತ್ತಾಂತವನ್ನುಆತನ ಬಗೆಗಿನ ಐತಿಹ್ಯಗಳ ರಾಶಿಯಿಂದ ಹೆಕ್ಕಿ ಶುದ್ದಗೊಳಿಸುವುದು ಕಷ್ಠವಾಗಿದೆ, 7ನೇ ಶತಮಾನದ ಹ್ಯೂಯನ್ಸತ್ಯಾಂಗ್ ಹೇಳುವ ಪ್ರಕಾರಅಶ್ವಘೋಷ, ನಾಗಾರ್ಜುನ್, ಆರ್ಯದೇವ, ಕುಮಾರ ಲಬ್ದ, ಇವರೆಲ್ಲ ಸಮಕಾಲಿನರು. ಕಲ್ಲಣ್ಣನರಾಜತರಂಗಿಣಿಯ ಪ್ರಕಾರ ಬೋಧಿಸತ್ವ ನಾಗಾರ್ಜುನನು ಕಾಶ್ಮೀರ ವಾಸಿ, ಉಸ್ಕಾ, ಜುಸ್ಕಾ ಮತ್ತು ಕನಿಷ್ಕರ ಸಮಕಾಲಿನರು;ತಾರನಾಥನ ಪ್ರಕಾರವು ನಾಗಾರ್ಜುನನು ಕನಿಷ್ಕನ ಸಮಕಾಲಿನವನು, ನಾಗಾರ್ಜುನ ಹೆಸರಿನವರುಚರಿತ್ರೆಯಲ್ಲಿ ವಿವಿಧಕಾಲಘಟ್ಟದಲ್ಲಿ 3ಜನ ಆಗಿ ಹೋಗಿದ್ದರೆಂಬ ಪ್ರತೀತಿಯೂಇದೆ.

ಕುಮಾರಜೀವಕನೆಂಬಾತ ಬರೆದಿರುವ ನಾಗಾರ್ಜುನನಜೀವನಚರಿತ್ರೆಯೊಂದುಚೀನಿ ಭಾಷೆಗೆ 405ರಲ್ಲಿ ಅನುವಾದಿತವಾಗಿದೆ. ಇದರ ಪ್ರಕಾರ ನಾಗಾರ್ಜುನನುದಕ್ಷಿಣ ಬಾರತದ ಬ್ರಾಹ್ಮಣ ಮನೆಯಲ್ಲಿ ಹುಟ್ಟಿ 4 ವೇದಗಳು ಇತರ ಶಾಸ್ತ್ರಗಳನ್ನು ಅಭ್ಯಸಿಸಿ ಬಳಿಕ ಇಂದ್ರಜಾಲ ವಿದ್ಯೆಯನ್ನುಕರಗತ ಮಾಡಿಕೊಂಡನು, ಇದ್ದಕ್ಕಿದ್ದಂತೆ ಮಾಯವಾಗುವ ವಿದ್ಯೆಯೂ ಅವನಿಗೆ ತಿಳಿದಿತ್ತು, ಆತನುಇತರ ಮೂವರೊಂದಿಗೆರಾಜನೊಬ್ಬನಅರಮನೆಗೆ ನುಗ್ಗಿ ರಹಸ್ಯವಾಗಿಅಂತಪುರದಲ್ಲಿ ಕೋಲಾಹಲನೆಬ್ಬಿಸಿದನು, ಅರಮನೆ ಸೈನಿಕರುಇದನ್ನು ಪತ್ತೇಹಚ್ಚಿಇತರ ಮೂವರನ್ನು ಬಂಧಿಸಿದರು. ನಾಗಾರ್ಜುನನು ತಲೆಮರೆಸಿಕೊಂಡನು. ಆ ಬಳಿಕ ಬೌದ್ದಗುರುವಿನಿಂದಉಪದೇಶ ಪಡೆದು 90 ದಿನಗಳಲ್ಲಿ ಸಮಸ್ತ ತ್ರಿಪಿಟಕ ಸಾಹಿತ್ಯವನ್ನು ಅಭ್ಯಸಿಸಿದನು, ಇದರಿಂದತೃಪ್ತನಾಗದೆ ಕೊನೆಗೆ ಹಿಮಾಲಯಕ್ಕೆ ಹೋಗಿ ಅಲ್ಲಿಯ ಬಿಕ್ಷುಒಬ್ಬರಿಂದ ಮಹಾಯಾನ ತತ್ವಗಳನ್ನು ತಿಳಿದುಕೊಂಡನು; ನಾಗರಾಜನೊಬ್ಬನ ಸಹಾಯದಿಂದ ಆ ಮಹಾಯಾನ ಸೂತ್ರಗಳಿಗೆ ವ್ಯಾಖ್ಯಾನ ರಚಿಸಿದನು. ಬಳಿಕ ದಕ್ಷಿಣ ಭಾರತದಲ್ಲಿ ಬೌದ್ದ ಮತ ಪ್ರಸಾರದಲ್ಲಿ 300 ವರ್ಷಗಳ ಕಾಲ ಕಂಕಣಬದ್ದವಾಗಿದುಡಿದನು.

ಕುಮಾರಜೀವ ಹೇಳುವಂತೆ ನಾಗಾರ್ಜುನಜ್ಯೋತಿಷ್ಯ, ವೈಧ್ಯ ಮತ್ತು ಲೌಕಿಕ ವೈಧ್ಯಗಳಲ್ಲಿ ಪ್ರಾಜ್ಞನಿದ್ದನು. ಟಿಬೆಟಿಯನ್ ಮೂಲಗಳ ಪ್ರಕಾರಆತಇಂದ್ರಜಾಲಬಲ್ಲವನಾಗಿದ್ದ, ಮತ್ತುಆತ 600 ವರ್ಷಗಳ ಕಾಲ ಬದುಕಿದ್ದನು; ಬಾಣನ ಹರ್ಷಚರಿತೆಯಲ್ಲಿ ನಾಗಾರ್ಜುನನ್ನುರಸವಿದ್ಯ ನಿಪುಣನನೆಂದು ಹೇಳಿದೆ.

ಇಷ್ಟು ಐತಿಹ್ಯಗಳಿಂದ ಸ್ಪಷ್ಟವಾಗುವಅಂಶವೆನೆಂದರೆಆತದಕ್ಷಿಣಭಾರತದ ನಿವಾಸಿ; ಪೂರ್ವಾಶ್ರಮದ ವೈದಿಕ ಬ್ರಾಹ್ಮಣನಾಗಿದ್ದನು, ಆ ಬಳಿಕ ಬೌದ್ದನಾದನು, ಸಿದ್ದ ವಿದ್ಯೆ ಪಾರಂಗತ, ಬಹುಸೃತ, ನಾಗವಂಶದ ಮುಖ್ಯ ವ್ಯಕ್ತಿಯೊಬ್ಬನ ಸಹಾಯ ಸ್ನೇಹ ಗಳಿಸಿದ್ದು, ಮಹಾಯಾನದದೊಡ್ಡ ಪ್ರತಿಪಾದಕನಾಗಿದ್ದನು. ದಿರ್ಘಾಯು, ನಿರೋಗಿ, ದೃಡಕಾಯನುಆಗಿದ್ದನು. ಈ ನಾಗಾರ್ಜುನನ ನೆಲೆ ಶಹಾಪುರದಸಗರಾದ್ರಿ ಬೆಟ್ಟಆಗಿರಬಹುದು. ಬುದ್ದನ ಮೂಗಿನ ಗುಹೆ ಹಾಗೂಪಕ್ಕದ ಗವಿಗಳಿಗೂ(ಪ್ರಸ್ತುತಕಲ್ಯಾಣೋತ್ತರ ಗವಿಬಸಪ್ಪನಗುಹೆ, ಗೊಗ್ಗಮ್ಮನಗವಿ) ಪ್ರಾಚೀನ ಬೌದ್ಧಚಾರಿತ್ರಿಕದೃಷ್ಠಿಕೋನದಲ್ಲಿಅವಲೋಕನದಅಗತ್ಯವಿದೆ.ನಾಗಪ್ರತಿಮೆಗಳಿಗೂ, ನಾಗಸಂಕೇತಗಳಿಗೂ ಬೌದ್ಧ ಸಂಸ್ಕøತಿಗೂಕಿಸ್ತಪೂರ್ವ ಕಾಲದಿಂದಸಾಂಸ್ಕ್ರತಿಕ, ಚಾರಿತ್ರಿಕವಾದ ಸಂಬಂಧವಿದೆ.ಗುಹೆಯಲ್ಲಿರುವ ನಾಗಸಂಕೇತಗಳ ಮತು ನಾಗಪ್ರತಿಮೆಗಳ ಹಿನ್ನೇಲೆಯಬಗ್ಗೆ ಆಳಕ್ಕಿಳಿದು ಸಂಶೋಧಿಸಬೇಕಾಗಿದೆ, ಆಗಚಾರಿತ್ರಿಕ ಪಲ್ಲಟಗಳು ಸ್ಪಷ್ಠವಾಗುತ್ತವೆ.ಆದರೆ ಸದ್ಯಕ್ಕೆಬೌದ್ಧ-ನಾಗ ಸಮ್ಮಂಧನಿರಾಕರಿಸುವ ಮಾತುಕೂಡಇಲ್ಲದಂತೆಜನಪದರ ಬಾಯಿಯಲ್ಲಿ ನಾಗಬುಸಪ್ಪನಗವಿಯಾಗಿ ನಮ್ಮೆದರು ನಿಂತಿದೆ.

ಈ ಸಂಬಂಧವನ್ನುದೃಢಿಕರಿಸುವ ದಿಕ್ಸೂಚಿ ಅಂಶಗಳು ಹಲವು ಇವೆ.

 1. ಹ್ಯೂಯನ್‍ತ್ಯಾಂಗ್ಸ ನು ಪೋತಲಕ ಪರ್ವತದಲ್ಲಿ ನೆಲೆಸಿದ ಅವಲೋಕೆಶ್ವರನುತನ್ನ ಭಕ್ತರಿಗೆ ಪಾಶುಪಥ, ತೀರ್ಥಕ, ಅಥಾವ ಮಹೇಶ್ವರನ ಮಾರುವೇಷದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ ಎಂದು ಹೇಳಿದ್ದಾನೆ. ಇದರಅರ್ಥ ಬದಲಾದ ಬೌದ್ದ ಸಂಸ್ಕøತಿಯ ಲಕ್ಷಣ. ಅವಲೋಕಿತೇಶ್ವರನ ಗುಣಲಕ್ಷಣಗಳು ಮತ್ತು ಶಿವನ ಗುಣಲಕ್ಷಣಗಳು ಸಾಮ್ಯವಿದ್ದು, ಲೋಕೇಶ್ವರಎಂಬುದು ಶಿವನ ನಾಮವೂ ಆಗಿರುವುದರಿಂದ ಈ ಪರಿವರ್ತನೆ ಸುಲಭವಾಗಿರಬಹುದು. ಬೌದ್ಧರ ಪ್ರಭಾವದ ಇಳಿಕೆಯ ಕಾಲದ ಸ್ಪಷ್ಠ ಸೂಚನೆಗಳಿವು. ಬೌದ್ಧಧಾರ್ಮಿಕ ಕೇಂದ್ರಗಳು ಒಂದುಜೈನಅಥವಾ ಶೈವ ಕೇಂದ್ರಗಳಾಗಿ ಮಾರ್ಪಾಡಾಗಿವೆಎನ್ನುತ್ತ ಕ್ರಿ.ಶ.7ನೇ ಶತಮಾನದಿಂದ 10ನೇ ಶತಮಾನದಕಾಲದಲ್ಲಿಇದಕ್ಕೆ ಸಾಕ್ಷಿಗಳಿವೆ ಎನ್ನುತ್ತಾರೆಡಾ. ತಾಳ್ತಜೆ ವಸಂತಕುಮಾರರವರು. ಇದೇತರ್ಕವು ಈ ಬೆಟ್ಟಗಳಲ್ಲಾದ ಬೌದ್ಧದಿಂದ ಶೈವ ಸಾಂಸ್ಕøತಿಕ ಪರಿವರ್ತನೆಗೆಅನ್ವಯಿಸುತ್ತದೆ
 2. ಸಗರನಾಡು ಶಹಾಪುರದ ಸುತ್ತಲೂ ಬೌದ್ದನೆಲೆ ಮತ್ತು ಕುರುಹುಗಳು ಇರುವ ಬಗ್ಗೆ ಸಾಕ್ಷಿಗಳು ಕಾಲಾನುಕ್ರಮದಲ್ಲಿ ಪತ್ತೇಯಾಗಿಒಂದೊಂದೇ ಬೆಳಕಿಗೆ ಬಂದಿವೆ. ಉದಾ. ಸನ್ನತಿ, ಕನಗನಹಳ್ಳಿ, ಅಣಬಿ, ಹುರಸಗುಂಡಗಿ, ಶಿರವಾಳ, ಏವೂರು, ಮಸ್ಕಿ, ಕೊಪ್ಪಳ, ಇಂಡಿ, ನೆಲೆಗಳೂ ಮತ್ತು ಕುರುಹುಗಳು ನಿಧಾನಕ್ಕೆಕಾಲಾನುಕ್ರದಲ್ಲಿಒಂದೊಂದಾಗಿ ಬೆಳಕಿಗೆ ಬಂದಿವೆ. ಸಿದ್ದಪುರದಲ್ಲಿ 1891, ಜಟಿಂಗ್‍ರಾಮೇಶ್ವರದಲ್ಲಿ 1891, ಮಸ್ಕಿಯಲ್ಲಿ 1915, ಕೊಪ್ಪಳ ಗವಿಮಠದಲ್ಲಿ1915, ಕೊಪ್ಪಳ ಪಾಲಕಿಗುಂಡುನಲ್ಲಿ 1931 ಅಶೋಕನ ಶಿಲಾಶಾಸನಗಳು ಪತ್ತೇಯಾಗಿದ್ದರೂ ಸನ್ನತ್ತಿಯಶಿಲಾ ಶಾಸನದಬಗ್ಗೆ 1965-66ರ ಉತ್ಕನನದವರೆಗೆಯಾವಮಾಹಿತಿಯೂಇರಲಿಲ್ಲ. ಮತ್ತೇ ಕನಗನಹಳ್ಳಿಯಲ್ಲಿ 1989ರಲ್ಲಿ ದೊರೆತಶಾಸನಗಳು ವಿಸ್ತಾರವಾದ ಮಾಹಿತಿ ಒದಗಿಸಿದವು.ಅಲ್ಲಿಯವರೆಗೆ(1965) ಸನ್ನತ್ತಿ ಬೌದ್ಧ ನೆಲೆ ಕತ್ತಲಲ್ಲಿ ಇತ್ತುಎನ್ನಬಹುದು. ಅದೇರೀತಿ ಸಗರಾದ್ರಿಗೆಅಘೋಷಿತಕತ್ತಲಿದೆ; ಆ ಕತ್ತಲನ್ನು ಕಳೆಯಬೇಕಿದೆ.ಇನ್ನೂ ಸಗರನಾಡಿನ ಹಲವು ವೈವಿಧ್ಯ ಮತ್ತು ಐತಿಹ್ಯಗಳ ಬಗ್ಗೆ ಸಂಶೋಧನೆ ಮುಂದುವರಿದಿದೆ. ಈ ಮುಂದುವರಿದ ಸಂಶೋಧನೆಸಗರಾದ್ರಿಯಬುದ್ದ ಮಲಗಿದ ಬೆಟ್ಟಕ್ಕೆ ವಿಶೇಷವಾಗಿಸಾಮ್ರಾಟ ಅಶೋಕ ಮತ್ತು ಶಾತವಾಹನರಅವಧಿಗೆ ಗಮನಹರಿಸಿದರೆ ಹೊಸ ನೋಟಕಾಣಬಹುದು.
 3. ಬುದ್ಧ ಮಲಗಿದ ಬೆಟ್ಟದ ಪರಿಕಲ್ಪನೆ
 4. ಶಾತವಾಹನರಕಾಲದ ಬಹುದೊಡ್ಡ ಬೌದ್ದನೆಲೆಯಾಗಿದ್ದ ಬೌದ್ದ ವಿದ್ಯಾಕೇಂದ್ರ ಸನ್ನತಿಗೆಕಾಲ್ನಡಿಗೆದೂರದಲ್ಲಿರುವ, ಸಹಜವಾಗಿಕಣ್ಣೋಟಕ್ಕೆಕಾಣುವ ಬೆಟ್ಟದ ಸಾಲೆ ಸಗರಾದ್ರಿ. ಸನ್ನತಿಯಿಂದ ಶಹಾಪುರಕ್ಕೆ ಬರುವಾಗದಾರಿಯಲ್ಲಿ ಸ್ಪಷ್ಟವಾಗಿಕಾಣುವಚಿತ್ರಣವೇ ಬುದ್ದ ಮಲಗಿದ ಬೆಟ್ಟದಚಿತ್ರಣ. ಬುದ್ದ ಮಲಗಿದ ನಿಸರ್ಗದದೃಶ್ಯದಕಲ್ಪನೆ ಆ ಕಾಲದಜನರಿಗೆಇರಲಿಲ್ಲ ಎಂಬುದು ನಂಬಲು ಅಸಾಧ್ಯವಾದುದ್ದು. ಒಂದು ವೇಳೆ ತಿಳಿದಿದ್ದರೂ ಯಾಕೆದಾಖಲಿಸಲಿಲ್ಲ? ದಾಖಲಿಸಿದ್ದರೂ ಕಾಲಾನುಕ್ರಮದಲ್ಲಿ ಹೇಗೆ ನಾಶವಾಯಿತು ? ಸಾಕ್ಷಿ ಸಧ್ಯಕ್ಕೆ ಲಭ್ಯವಿಲ್ಲ ಆದುದರಿಂದ ಮೌನ, ಎಂಬ ವಾದ ಸಹ ಬಹುಕಾಲ ನಿಲ್ಲದು. ಅದಕ್ಕಾಗಿಇದು ಸಂಶೋಧನೆಯಿಂದ ಸ್ಪಷ್ಟವಾಗಬೇಕು. ಆದರೆತಕ್ಷಣಕ್ಕೆ ಆ ಕಾಲದಜನರಿಗೆ ಬುದ್ದಮಲಗಿದಬೆಟ್ಟದಕಲ್ಪನೆಇರಲಿಲ್ಲ ಎಂದು ತಳ್ಳಿ ಹಾಕುವಂತಿಲ್ಲ.
 5. ಸನ್ನತಿಯ ನೆಲೆಯಲ್ಲಿ ಹಲವಾರು ಬೌದ್ದ ವಿದ್ವಾಂಸರು, ಬಿಕ್ಕುಗಳು, ಸಾಧಕರುಇದ್ದ ಬಗ್ಗೆ ದಾಖಲೆಗಳಿವೆ. ಬೀಮಾನದಿಯದಡದಲ್ಲಿ ಹಲವಾರುಧಾರ್ಮಿಕ ವಿಧಿವಿಧಾನಗಳು ಮತ್ತುಆಧ್ಯಾತ್ಮಿಕ ಸಾಧನೆ ಮಾಡಲಾಗುತ್ತಿತ್ತು. ಈ ಸಾಧಕರಿಗೆ ಸನ್ನತಿಯಅಕ್ಕಪಕ್ಕದ ಬೆಟ್ಟಗುಡ್ಡಗಳು ತಮ್ಮಏಕಾಂತ ಸಾಧನೆಗೆ ಪ್ರೇರಣೆಯಾಗಿರಲೇಬೇಕು. ಅವರ ಸಾಧನೆಅಲ್ಲಿನ ಗುಹೆಗಳಲ್ಲಿ ನಡೆದಿರುವುದನ್ನು ಅಲ್ಲಗಳೆಯಲು ತಾರ್ಕಿಕವಾಗಿ ಸಾಧ್ಯವಿಲ್ಲ. ಅಂತೆಯೇ ಸಗರಾದ್ರಿ ಬೆಟ್ಟದಲ್ಲಿನ ಗುಹೆಗಳನ್ನು ಮತ್ತುಅದರ ಪರಿಸರವನ್ನುತಮ್ಮ ಸಾಧನಕ್ಷೇತ್ರ ಮಾಡಿಕೊಂಡಿದ್ದರುಎಂದುತರ್ಕಸಮೇತತೀರ್ಮಾನಿಸಬಹುದಾಗಿದೆ. ಈ ನಿಟ್ಟಿನಲ್ಲಿ ಬುದ್ದ ಮಲಗಿದ ಬೆಟ್ಟದತುತ್ತಾತುದಿಯಲ್ಲಿ ಬುದ್ದನ ಮೂಗಿನ ಹೊಳ್ಳೆಯ ಗುಹೆ, ಸಮೀಪದ ಗವಿಬಸಪ್ಪನ ಗುಹೆ, ಬೌದ್ದ ಸಾಧಕರ, ನಾಗಾರ್ಜುನನಅಥವಾ ಆ ತಾಂತ್ರಿಕ ಪಂಥದ ಸಾಧಕರ ಸಾಧನೆಯಕ್ಷೇತ್ರವಾಗಿರಬಹುದು. ಕಾಲಾನುಕ್ರಮದಲ್ಲಿ, ನಾಗಾರ್ಜುನ ಪಂಥದ ನಾಗಬೋಧಿ ನಾಗಬುಸ್ಸಪ್ಪನಾಗಿಜನಪದರಲ್ಲಿರೂಪಾಂತರಆಗಿರಬಹುದುಎಂಬುದನ್ನುತರ್ಕಸೂತ್ರದಡಿಯಲ್ಲಿ ವೈಜ್ಞಾನಿಕವಾಗಿಒಪ್ಪಬಹುದಾಗಿದೆ.
 6. ಇಂಥಹ ನೆಲೆಯನ್ನುಜನ ಸಮುದಾಯ ಹೇಗೆ ಮತ್ತುಯಾಕೆ ಮರೆತಿರಬಹುದುಎಂದುತರ್ಕದ ಸಂಶೋಧನೆಯಲ್ಲಿತೊಡಗಿದಾಗಒಂದು ಕಾಲಕ್ಕೆ ಬೌದ್ದ ನೆಲೆಯಾಗಿದ್ದ ಈ ಪ್ರದೇಶವು ಮುಂದೆಚಾರಿತ್ರಿಕ ಏರಿಳಿತಗಳನ್ನು ಕಂಡುಕಾಲಾನುಕ್ರಮದಲ್ಲಿ ಶೈವನೆಲೆಯಾಗಿ ಪರಿವರ್ತತನೆಯಾಯಿತು. ಕಲ್ಯಾಣಕ್ರಾಂತಿಯ ಅಂಗಳವಾಯಿತು. ಆ ಕಾಲದ ಪ್ರಮುಖ ವಚನಕಾರ, ಚಳುವಳಿಯ ಸೇನಾನಿ ಉರಿಲಿಂಗ ಪೆದ್ದಿಯ ವಚನ “ಶಿವದೀಕ್ಷೆ, ಶಿವಧ್ಯಾನಗಳಿಗೆ ಮನಸ್ಸುಕೊಟ್ಟ ಮೇಲೆ ಭಿನ್ನ ದರ್ಶನಗಳಿಗೆ ಮನಸ್ಸುಕೊಡಬಾರದು” ಎಂದು ನುಡಿದುಗಡಿರೇಖೆಹಾಕಿರುವುದುಗಮನಾರ್ಹವಾಗಿದೆ. ಸನ್ನತಿಯ ಅಕ್ಕ ಪಕ್ಕದ ಪ್ರದೇಶಗಳಲ್ಲಿ ಉರಿಲಿಂಗ ಪೆದ್ದಿಯ ಸಂಪ್ರದಾಯಇನ್ನೂ ಹಸಿರಾಗಿದೆ. ಉರಿಲಿಂಗ ಪೆದ್ದಿ ಮಠಕೊಡ್ಲಾದಲ್ಲಿದ್ದು, ಸನ್ನತಿ ವ್ಯಾಪ್ತಿಯ ಕನಗನಹಳ್ಳಿ, ಬನಹಟ್ಟಿ, ಕಲ್ಲೂರು, ನಾಲವಾರ, ಹುರಸುಗುಂಡಗಿ, ಶಿರವಾಳ, ಅಣಬಿ, ಶಹಾಪುರ ಊರುಗಳಲ್ಲಿ ಮತ್ತು ಗುಲಬರ್ಗಾ, ಯಾದಗಿರಿ, ರಾಯಚೂರ, ಕೊಪ್ಪಳ ಜಿಲ್ಲೆಯಾದ್ಯಂತಉರಿಲಿಂಗ ಪೆದ್ದಿಯ ಅನುಯಾಯಿಗಳಿದ್ದು, ಅವರಲ್ಲಿದಲಿತರು ಬಹುಸಂಖ್ಯಾತರಿದ್ದು, ಅವರುತಮ್ಮಗುರುವಿನ ಆಜ್ಞೆಯಂತೆ ಶಿವದೀಕ್ಷೆಯಾದ ಮೇಲೆ ಏಕಾಮುಖವಾಗಿ ಚಲಿಸಿ ತಮ್ಮ ಹಿಂದಿನ ಬೌದ್ದ ಪರಂಪರೆಯನ್ನು ಸ್ಮರಣೆಯಿಂದಲೇತೆಗೆದಿರಬಹುದೆಂದುತರ್ಕಿಸಬಹುದಾಗಿದೆ.
 7. ಹೀಗೆ ಕಾಲಾನುಕ್ರಮದಲ್ಲಿ ಮರೆತುಹೊದನೈಸರ್ಗಿಕದೃಶ್ಯಸತ್ಯವನ್ನುತಮ್ಮ ಆಕಸ್ಮಿಕ ನೋಟದಲ್ಲಿ ಸೆರೆಹಿಡಿದಕಂದಾಯಇಲಾಖೆಯ ಅಧಿಕಾರಿಗಳಾದರಂಗರಾವಬಡಶೇಷಿಯರವರು ಸಾರ್ವಜನಿಕರ ಹಾಗೂ ಸರಕಾರದ ಗಮನ ಸೆಳೆದು ಸರಕಾರಿದಾಖಲೆಗೆಸೇರಲುಕಾರಣಿಕರ್ತರಾದರು. ಸಿದ್ದಯ್ಯ ಪುರಾಣಿಕರುಇದನ್ನು ಅಧಿಕೃತಗೊಳಿಸಿ ಪ್ರಚಾರಪಡಿಸಿದರು.(ಸ್ಥಳೀಯವಾಗಿ ಇಬ್ಬರ ಹಿಂಬಾಲಕರಲ್ಲಿಇವರೇ ಪ್ರಥಮರೆಂಬ ಸ್ಪರ್ಧೆಇದೆ) ಒಟ್ಟಾರೆಈ ಮಹನೀಯರು ಬುದ್ದ ಮಲಗಿದ ಬೆಟ್ಟದ ಪರಿಕಲ್ಪನೆಯನ್ನುಇತ್ತೀಚಿನ ಕಾಲಕ್ಕೆ ಪುನರ್ ಪ್ರಕಟಿಸಿದರೆಂದು ಹೇಳುವುದು ಸೂಕ್ತ ಎನಿಸುತ್ತದೆ.
 1. ನಾಗಾರ್ಜುನನುದಕ್ಷಿಣಾಪಥಕ್ಕೆ ಸೇರಿದವನುಎಂಬುದು. ಪಕ್ಕದಚಿತಾಪುರತಾಲೂಕ ನಾಗಾಯಿಗೂ ಬೌದ್ಧಆಚಾರ್ಯ ನಾಗಾರ್ಜುನನಿಗೂ ವಿದ್ವಾಂಸರು ತಳಕು ಹಾಕಿದ್ದಾರೆ. ನಾಗಾರ್ಜುನ ನೆಲೆಸಿದ ಕಾರಣವಾಗಿ ನಾಗಾವಿ ಹೆಸರು ಬಂತೆಂದು ಹುಲ್ಲೂರು ಶ್ರೀನಿವಾಸ ಜೊಯಿಸರು ಉಹಿಸುತ್ತಾರೆ. ಶಹಾಪುರದ ನಾಗರಕೆರೆ, ನಾಗಬುಸ್ಸಾಪ್ಪನ ಗವಿ , ತಾವರೆಕೆರೆ, ಸಗರಾದ್ರಿ ಬೆಟ್ಟದ ಸಾಲಿನ ಇನ್ನಿತರ ಸ್ಥಳಗಳನ್ನು ಸೂಕ್ಮವಾಗಿ ಪರಿಶೀಲಿಸಿದರೆ ನಾಗಾರ್ಜನನ ಅವನ ಸಿದ್ಧ ಪರಂಪರೆಯ ಸಂಬಂಧವನ್ನು ನಿರ್ಲಕ್ಷ ಮಾಡುವಂತಿಲ್ಲ. ಬೌದ್ಧ ಮಹಾಸಿದ್ಧರು: ಬೌದ್ಧಧಾರ್ಮಿಕಚರಿತ್ರೆ ಮತ್ತು ಸಾಹಿತ್ಯದಲ್ಲಿ ನಾಥ ಮತ್ತು ಸಿದ್ಧ ಪರಂಪರೆಯ ಉಲ್ಲೇಖಗಳು ಕಾಣುತ್ತವೆ. ಟಿಬೇಟ್ ಬೌದ್ಧ ಸಾಹಿತ್ಯ ಒಳಗೊಂಡು ಹಲವಾರು ಬೌದ್ಧ ಗ್ರಂಥಗಳಲ್ಲಿ 84ಜನ ಸಿದ್ಧರ ಉಲ್ಲೇಖವಿದೆ. 1.ಲೂಯಿಪಾ,( ಹಲವಾರುಕಡೆಕೊನೆಯಅಕ್ಷರ “ಪಾ”, ವನ್ನು “ಪಾದ” ಎಂದುಉಚ್ಚರಿಸಲಾಗುತ್ತಿದೆ. ಉದಾ: ಸರಹಪಾ – ಸರಹಪಾದ), 2.ಲೀಲಾಪಾ, 3.ವಿರೂಪಾ, 4.ದೊಂಬಿಪಾ, 5.ಶಬರಿಪಾ, 6.ಸರಹಪಾ, 7.ಕಂಕರಿಪಾ, 8.ಮೀನಪಾ, 9.ಗೋರಕ್ಷ, 10.ಚೌರಾಂಗಿ, 11.ವೀಣಾಪಾ, 12.ಶಾಂತಿಪಾ, 13.ತಂತಿಪಾ, 14.ಚಮರಿಪಾ, 15.ಖಡ್ಗಪಾ, 16.ನಾಗಾರ್ಜುನ, 17.ಕಾನ್ಹಪಾ, 18.ಕರ್ಣರಿಪಾ, 19.ತಂಗನಪಾ, 20.ನಾರೊಪಾ, 21.ಶಾಲಿಪಾ, 22.ತಿಲೋಪಾ, 23.ಚತ್ರಪಾ, 24.ಭದ್ರಪಾ, 25.ಖಂಡಿಪಾ, 26.ಅಜೋಕಿಪಾ, 27.ಕಲಪಾ, 28.ದೊಂಬಿಪಾ, 29.ಕಂಕಣ, 30.ಕಂಬಲಾ, 31.ತೆಂಗಿಪಾ, 32.ಭಂಧೆಪಾ, 33.ತಂದೆಪಾ, 34.ಕುಕ್ಕುರಿಪಾ, 35.ಕೂಚಿಪಾ, 36.ಧರ್ಮಪಾ, 37.ಮಹಿಪಾ, 38.ಅಚಿಂತಾ, 39.ಬಭಾಹಿ, 40.ನಳಿನ, 41.ಭುಸುಕುಪಾ, 42.ಇಂದ್ರಭೂತಿ, 43.ಮೇಕೋಪಾ, 44.ಕೊಟಾಲಿ, 45.ಕಂಪರಿಪಾ, 46.ಜಾಲಂಧರಿ, 47.ರಾಹುಲ, 48.ಧರ್ಮಪಾ, 49.ಧೋಕರೀಪಾ, 50.ಮೇಧಿನಾ, 51.ಪಂಕಜಾ, 52.ಘಂಧಪಾ, 53.ಯೋಗಿಪಾ, 54.ಚಳುಕಿ, 55.ಗೋರೂರ, 56.ಲೂಚಿಕಾ, 57.ನಿರ್ಗುಣ, 58.ಜಯಾನಂದ, 59.ಪಚರಿ, 60.ಚಂಪಕಾ, 61.ಭಿಕ್ಷಣ, 62.ತೆಲೂಪಾ, 63.ಕುಮರಿಪಾ, 64.ಚಪರಿಪಾ, 65.ಮಣಿಭದ್ರ, 66.ಮೇಖಲಾ, 67.ಕಂಖಲಾ, 68.ಕಾಲಕಾಲ, 69.ಕಂಥಲಿ, 70.ಧಾಹುಲಿ, 71.ಉಧೇಲಿ, 72.ಕಪಲಪಾ, 73.ಕೀರವ, 74.ಸಕರಾ, 75.ಸರ್ವಭಕ್ಷ, 76.ನಾಗಬೋಧಿ, 77.ಡಾರಿಕಾ, 78.ಪುತಲಿ, 79.ಪನಹ, 80.ಕೋಕಲಿಪಾ, 81.ಅನಂಗ, 82.ಲಕ್ಷ್ಮಿಂಕರ, 83.ಸಮುದ್ರ, 84.ವ್ಯಾಳಿ.
  ಹೀಗೆ ಎಂಬತ್ತು ನಾಲ್ಕು ಜನ ಮಹಾ ಸಿದ್ಧರ ಹೆಸರುಗಳು ಬೌದ್ಧ ಸಾಹಿತ್ಯದಲ್ಲಿ ಪ್ರಸ್ತಾಪಿಸಲ್ಪಟ್ಟಿವೆ. ಬೌದ್ಧರ ಈ ಸಿದ್ಧ ಪರಂಪರೆಗೂ ಮತ್ತು ಶೈವ ಸಿದ್ಧ ಪರಂಪರೆಗೂಇರುವತಾತ್ವಿಕ, ನಾಮಿಕ ಹಾಗೂ ಸಾಂಸ್ಕøತಿಕವಾದ ಹಲವು ಸಾಮ್ಯತೆಗಳನ್ನು ನಾವು ಗಮನಿಸಬಹುದಾಗಿದೆ.ಶರಣ ಸಂಸ್ಕøತಿಯ ಮೂಲ ಬೌದ್ಧವಾಗಿದೆ. ಭಾರತೀಯಸಂಸ್ಕøತಿಯಲ್ಲಿ ಮುಖ್ಯವಾಗಿಎರಡು ಮೂಲ ಪರಂಪರೆಯ ಬೇರುಗಳು.ಒಂದು ವೈಧಿಕಇನ್ನೊಂದುಅವೈಧಿಕ. ವಿಸ್ತರಿಸಿ ಹೇಳಬೇಕೆಂದರೆ, ಬ್ರಾಹ್ಮಣ ಮತ್ತುಸಮಣ. ಸಮಣ ಮುಂದೆ ಶ್ರಮಣ, ನಂತರಕವಲೊಡೆದು ಶರಣ ಸಂಸ್ಕøತಿಯಾಯಿತು. ಈಗಾಗಲೇ ಈ ನೆಲೆಯಲ್ಲಿ ಹಲವಾರು ವಿಧ್ವಾಂಸರುಚಿಂತನೆ ಮಾಡಿದ್ದಾರೆ. ಇವರಲ್ಲಿ ಪ್ರಮುಖವಾಗಿ ಡಿ.ಆರ್.ನಾಗರಾಜ, ಡಾ.ಎಲ್.ಬಸವರಾಜ, ತಾಳ್ತಜೆ ವಸಂತಕುಮಾರ, ನಟರಾಜ ಬೂದಾಳು, ಲಕ್ಷೀಪತಿಕೋಲಾರ, ಕೆ.ಬಿ.ಸಿದ್ಧಯ್ಯ ಇನ್ನಿತರರು ಮುಂಚೂಣಿಗರು.
  ಸಗರಾದ್ರಿಯ ನೆಲೆಯಲ್ಲಿ ಶೈವ ಸಂಪ್ರದಾಯಕ್ಕೆ ಸೇರಿದನಾಥ ಮತ್ತು ಸಿದ್ದ ಪರಂಪರೆಯ ಕುರುಹುಗಳು ಯಥೇಚ್ಚಾವಾಗಿವೆ. ಈ ಶೈವ ನಾಥ ಸಿದ್ಧರ ಮೂಲ ಬೌದ್ಧಆಗಿರುವಾಗಸಗರಾದ್ರಿಯಸೆಲೆಯಲ್ಲಿ ಬೌದ್ಧ ಜಲವಿದೆಎನ್ನಬಹುದು.
 2. ಮಹಾಯಾನ ಶಾಖೆಯ ಪ್ರಮುಖ ನೆಲೆ ಸನ್ನತ್ತಿ ಬುದ್ದ ಮಲಗಿದ ಬೆಟ್ಟಕ್ಕೆ ಕೇವಲ 25 ಕಿ.ಮೀ. ದೂರವಿದ್ದು ಸಗರಾದ್ರಿ ಬೆಟ್ಟದ ಸಾಲಿನ ರಂಗನಾಥನ ಗವಿಯಿಂದ ಸನ್ನತ್ತಿಚಂದ್ರಲಾಂಬಾಗುಡಿಗೆ ಗುಪ್ತ ಮಾರ್ಗಇತ್ತುಎಂದು ನಾಡಿ ಗ್ರಂಥಗಳಿಂದ ತಿಳಿದು ಬರುತ್ತದೆಎಂದು ಸಗರಕೃಷ್ಣಚಾರ್ಯರುಅಭಿಪ್ರಾಯಪಟ್ಟಿದ್ದಾರೆ. ಈ ವಿಷಯದಪರಾಮರ್ಶೆಗೆತೊಡಗಿದರೆ, ಚಂದ್ರನಾಡಿ, ರವಿನಾಡಿ, ನಂದಿಕೇಶ್ವರ ನಾಡಿ, ಬುಧನಾಡಿ, ಕರ್ಮವಿಶಾಕ ನಾಡಿಇತ್ಯಾದಿ ನಾಡಿ ಗ್ರಂಥಗಳು ಅನೇಕ ರಹಸ್ಯವಾದ ವಿಷಯಗಳನ್ನು ವಿವರಿಸುತ್ತವೆಎಂದುಪ್ರಾಜ್ಞರು ತಿಳಿಸುತ್ತಾರೆ. ಈ ರಹಸ್ಯದಲ್ಲಿಗವಿ ರಂಗನಾಥನಿಂದಸನ್ನತ್ತಿಗೆಇರುವ ಗುಪ್ತ ಮಾರ್ಗಒಂದು.
  ಗವಿ ರಂಗನಾಥನಗವಿಯಅಧ್ಯಾಯನ ಮಾಡಿದಡಾ.ಧರ್ಮಣ್ಣ ಬಡಿಗೇರ “ ಇದು ಆದಿ ಮಾನವತಾಣವಾಗಿದ್ದುಗವಿಯ ಮೇಲ್ಬಾಗದಲ್ಲಿ ಅನೇಕ ಆದಿ ಮಾನವ ಚಿತ್ರರೇಖೆಗಳಿವೆಕಾಲಾನುಕ್ರಮದಲ್ಲಿ ಪ್ರತಿ ವರ್ಷ ಪೂಜೆಗಾಗಿ ಸುಣ್ಣ ಬಳಿದು ಎಲ್ಲವೂ ಮುಚ್ಚಿ ಹೋಗಿದೆ ರೇಖಾಚಿತ್ರಗಳು ಗುರುತಿಸದಷ್ಟುಅಸ್ಪಷ್ಟವಾಗಿವೆ ”ಎನ್ನುತ್ತಾರೆ.ಮುಂದುವರೆದುಕಲ್ಯಾಣಿಚಾಲುಕ್ಯರಅರಸನಾದ 2ನೇ ಸೋಮೇಶ್ವರನುಪೂಜಾ ಕೈಂಕರ್ಯಗಳಿಗಾಗಿ ದಾನವಿತ್ತಶಾಸನವನ್ನು ಪತ್ತೇಹಚ್ಚಿದ್ದಾರೆ. ಶಾಸನದಲ್ಲಿ ಸುಮಾರುಅರವತ್ತುಸಾಲುಗಳಿದ್ದು ಕಾಲು ಭಾಗಚೆನ್ನಾಗಿದ್ದು, ಮುಕ್ಕಾಲು ಭಾಗತುಂಡರಿಸಲಾಗಿದ್ದುಓದಲು ಸಾಧ್ಯವಿಲ್ಲದಂತಾಗಿದೆ. ಒಂದುತುಂಡನ್ನುಮಧ್ಯೆದಲ್ಲಿರಂಧ್ರಕೊರೆದುರಂಗನಾಥನಮೂರ್ತಿಯಕೃತಕಪೀಠಕ್ಕೆ ಅಳವಡಿಸಲಾಗಿದೆ.ಪೀಠದ ಮುಂಭಾಗದಲ್ಲಿಗರುಡನಚಿತ್ರವನ್ನುಗುಹಾಂತರದೇವಾಲಯದಎಡಭಾಗದಲ್ಲಿಆಂಜನೇಯ್ಯನಉಬ್ಬು ಶಿಲ್ಪ ಕೆತ್ತಲಾಗಿದೆಎಂದು ವಿವರಿಸಿದ್ದಾರೆ.
  ಇಲ್ಲಿ ಕೆಲವು ಪ್ರಶ್ನೆಗಳು ಉದ್ಬವಿಸಿದ್ದು ಸಮಂಜಸತಾರ್ಕಿಕಉತ್ತರದೊರಕಬೇಕಿದೆ. ಇದೇದೇವಸ್ಥಾನದ ಶಾಸನವನ್ನುಕಾಲಾಂತರದಲ್ಲಿಯ್ಯಾಕೆಹಾಳು ಮಾಡಿ ಪೀಠಕ್ಕೆ ಹಾಕಲಾಯಿತು? ಸನ್ನತ್ತಿಯಚಂದ್ರಲಾಂಭದೇವಿಯ ಪೀಠಕ್ಕೆ ಅಶೋಕನ ಶಾಸನ ಅಳವಡಿಸಿದ್ದು ಇತ್ತೀಚಿಗೆ ಬೆಳಕಿಗೆ ಬಂದು ಬೌದ್ಧಚರಿತ್ರೆಯ ಪಲ್ಲಟ ವಿವರಿಸಿತು. ಅದೇರೀತಿ ನೈಸರ್ಗಿಕವಾಗಿ ಸಗರಾದ್ರಿಗೂ ಸನ್ನತ್ತಿಯ ಬೌದ್ಧ ನೆಲೆಗೂ ಇರುವ ಸಂಬಂಧ ಮತ್ತುಚಾರಿತ್ರಿಕ ಪಲ್ಲಟದ ವಿವರ ಆ ಶಾಸನ ಹೊಂದಿದೆಯೇ?ಅಥವಾ ಬೌದ್ಧಧರ್ಮದ ಅವಸಾನ ಬಳಿಕ ಬೌದ್ದ ಕುರುಹುಗಳನ್ನು ಆಕ್ರಮಿಸಿಕೊಂಡ ಆಗೀನ ಆಳರಸರು ಮತ್ತು ಬೌದ್ಧೇತರಧರ್ಮ ವಕ್ತಾರರುಬೌದ್ಧ ನೆಲೆಗಳನ್ನು ಬೇರೆಕಡೆ ಮಾಡಿರುವಂತೆಇಲ್ಲಿ ಸಹ ಹಿಂದೂಕರಣ ಮಾಡಿರಬಹುದೇ? ಆದಿ ಮಾನವ ಚಿತ್ರಲೇಖೆಗಳು ನಿಕರವಾಗಿಯಾವಕಾಲದವು? ಅವು ಏನನ್ನು ತಿಳಿಸುತ್ತವೆ? ಹಲವುದಮನಕಾರಿ ದಾಖಲೆಗಳಂತೆ ನಾಡಿ ಶಾಸ್ತ್ರದ ರಹಸ್ಯಗಳೂ ಹಿಂದೂಕರಣದ ಭಾಗವೆ?ಎಂಬುದನ್ನುಚರ್ಚಿಸಬೇಕಾಗಿದೆ.
  ಇನ್ನೊಂದು ಪ್ರಶ್ನೆಎಂದರೆಗವಿರಂಗನಾಥನಇತಿಹಾಸಆರಂಭವಾಗುವುದೆಮೌರ್ಯ ಮತ್ತು ಶಾತವಾಹನ ಬೌದ್ಧ ಪ್ರಬಾವದಅವಧಿಯ ನಂತರದಕಲ್ಯಾಣಿಚಾಲುಕ್ಯರ,ಬೌದ್ಧಧರ್ಮದ ಪತನಾವಸ್ತೆ ಕಾಲದಿಂದ. ಈ ಪತನ ಪೂರ್ವಚರಿತ್ರೆ ಈ ಗುಹೆಗೆ ಹೊಸ ತಿರುವು ನೀಡಬಹುದು. ಕಪಟರಾಳಕೃಷ್ಣರಾಯರು ಪೂರ್ವೋಕ್ತದಲ್ಲಿದಾಖಲಿಸಿರುವಂತೆ ಚಂದ್ರಲಾಂಬಾಗುಡಿಯು ಬೌದ್ಧರಕಾಲದಲ್ಲಿ ಬೌದ್ಧರ ಸ್ಥಾನವಾಗಿಯೂ, ಶೈವ-ಶಾಕ್ತರಕಾಲದಲ್ಲಿ ಪಾರ್ವತಿ, ಮಹಾಕಾಳಿಯ ಸ್ಥಾನವಾಗಿಯೂ, ವೈಷ್ಣವರಿಗೆ ಶ್ರೀರಾಮ, ಸರಸ್ವತಿಸ್ಥಾನವಾಗಿಯೂಇದ್ದಿರುವ ಸಾಧ್ಯತೆಇದೆಎಂದಿದ್ದಾರೆ.ಇದನ್ನುಧಾರ್ಮಿಕ ಪುನ:ಸಂಯೋಗ (ಖeಟigious ಡಿಚಿಠಿಠಿಡಿomeಟಿಣ) ಎಂದು ತಾಳ್ತೆಜೆ ವಸಂತಕುಮಾರಗುರುತಿಸಿದ್ದಾರೆ.ಅದೇರೀತಿ ಸಗರಾದ್ರಿಯಸ್ಮಾರಕಗಳನ್ನು ಗ್ರಹಿಸಬಹುದಾಗಿದೆ. ಬುದ್ಧನತಾಯಿಯಜನಾಂಗವಾದ ಕೋಲಿ ಸಮಾಜದವರು(ಗಂಗ ಮತ) ವರ್ಷಕ್ಕೊಮ್ಮೆರಂಗನಾಥನ ಗವಿಗೆ ಬಂದು ಪರ್ವ ಆಚರಿಸಿ ಪೂಜೆ ಸಲ್ಲಿಸುತ್ತಿರುವ ಸಾಂಸ್ಕøತಿಕಚರಿತ್ರೆಯ ಆಳವನ್ನು ಗ್ರಹಿಸಬೇಕಿದೆ.
 3. ಮಂದಾಕಿನಿ ಎಂದರೆ ಪಾಲಿ ಪದಕೋಶದಪ್ರಕಾರ ಆಕಾಶಗಂಗೆ, ದೇವನದಿಯಒಂದುಹೆಸರು, ಹಿಮಾಲಯದದೊಡ್ಡ ಸರೋವರ. ಬೌದ್ಧ ಸಾಹಿತ್ಯದಲ್ಲಿ ವ್ಯಾಪಕವಾಗಿ ನಾನಾ ಕಡೆ, ನಾನಾ ಅರ್ಥದಲ್ಲಿ ಮಂದಾಕಿನಿಯ ಪ್ರಸ್ತಾಪವಿದೆ.ಇದೊಂದು ಪವಿತ್ರಕ್ಷೇತ್ರ, ಎಂಬುದು ಸ್ಪಷ್ಟವಿದೆ.ಸಗರನಾಡುದರ್ಶನಕೃತಿಯ ಪ್ರಸ್ತಾವನೆಯಲ್ಲಿ ಎ.ಕೃಷ್ಣ ಸುರಪುರರವರು ಶಹಾಪುರ ಬೆಟ್ಟಕ್ಕೆ ಹಿಮಾಚಲದ ಸಹೋಧರನೆಂದುಕರೆದು ಕೆಲವು ಸಾಮ್ಯತೆಗಳನ್ನುಗುರುತಿಸುತ್ತಾರೆ. ಅಲ್ಲಿ ಕೈಲಾಸ ಪರ್ವತವಿದ್ದರೆ,ಇಲ್ಲಿ ಮೇಲುಗಿರಿ ಪರ್ವತವಿದೆ, ಅಲ್ಲಿ ಮಾನಸಸರೋವರವಿದ್ದರೆಇಲ್ಲಿಪದ್ಮಸರೋವರ (ತಾವರೆಕೆರೆ) ಇದೆ,ಅಲ್ಲಿದೇವಗಂಗೆಇದ್ದರೆ, ಇಲ್ಲಿಅದೇ ಗಂಗೆ ಮಂದಾಕಿಯಾಗಿದ್ದಾಳೆಎಂದು ಸಗರಾದ್ರಿಯ ಹಿರಿಮೆಗರಿಮೆಕೊಂಡಾಡಿದ್ದಾರೆ. ಇದು ಮಂದಾಕಿನಿಯಪಾವಿತ್ರತೆಗೆ ಸಾಕ್ಷಿಯಾಗಿದೆ.ಸಗರಾದ್ರಿಯ ಮಂದಾಕಿನಿ ತೀರ್ಥದಲ್ಲಿ ಮುಳುಗಿದ ತಾಮ್ರದತಂಬಿಗೆಅಣಬಿಯ ಹತ್ತಿರ ಬೀಮಾತೀರ್ಥದಲ್ಲಿತೇಲಿತು ಎಂಬ ಜನಪದರ ನಂಬಿಕೆಯಐತಿಹ್ಯವಿದೆ.ಜನಪದತಜ್ಞರ ಪ್ರಕಾರಜನಪದರ ಪ್ರತಿಐತಿಹ್ಯದ ಹಿಂದೆಸೂಚ್ಯ ಸಂದೇಶವಿರುತ್ತದೆ ಮೇಲ್‍ನೋಟಕ್ಕೆ ಸರಳಾರ್ಥ ಕಂಡರೂ ಆಳದಲ್ಲಿ ಗೂಢಾರ್ಥಇರುತ್ತವೆಎನ್ನುತ್ತದೆಜಾನಪದ ಶಾಸ್ತ್ರ. ಈ ಐತಿಹ್ಯದ ಸೂಚ್ಯ ಸಂದೇಶವೇನುಎಂದು ಪರಿಶೀಲಿಸಿದರೆ, ಬೀಮಾ ನದಿಗೆ ಹೊಗುವ ದಾರಿಯಲ್ಲಿನಅಣಬಿಯಹಿರೇಮಠದಲ್ಲಿಇರುವಬ್ರಾಹ್ಮೀಲಿಪಿಯಬೌದ್ಧ ಶಾಸನದತ್ತತೋರು ಬೆರಳಿಟ್ಟು ಸಂಬಂಧ ಕಲ್ಪಿಸಿದ ಸೂಚ್ಯವಿದ್ದಿರಬಹುದು ಎನಿಸುತ್ತದೆ.ಈ ಐತಿಹ್ಯವನ್ನು ವಿವಿಧ ಮಗ್ಗಲುಗಳಿಂದ ಪರಿಶೀಲಿಸುವ ಅಗತ್ಯವಿದೆ.ಆಗಪ್ರಾಚೀನ ಬೌದ್ಧ ನೆಲೆ ಅಣಬಿಯ ಹಿರೇಮಠ,ಕುಂಬಾರ ಮಠ, ಅಗ್ರಹಾರ ಮತ್ತು ಸಗರಾದ್ರಿ ಸಂಪರ್ಕಗೋಚರಿಸುತ್ತದೆ.
 4. ರೈಸ್‍ಡೇವಿಡ್ಸ್‍ರವರು ಬುದ್ದಿಷ್ಠ ಇಂಡಿಯಾ ಸಂಶೋಧನಾತ್ಮಕಕೃತಿಯಲ್ಲಿ “ ತಗರಶಿಖಿನ್” ಎಂಬ ಪ್ರಯೋಗದಲ್ಲಿಯ “ತಗರ” ಎಂಬುದುದಕ್ಷಿಣ ಭಾರತದಒಂದು ನೆಲೆಯಿದ್ದಿತ್ತೇಂದು ಊಹಿಸಿದ್ದಾರೆ. ಪ್ರಾಚೀನ ಕಾಲದಿಂದಲೂ ಈ ಭಾಗವನ್ನು ಸಗರನಾಡುಎಂದು , ಸಗರಾದ್ರಿ ಬೆಟ್ಟಗಳೆಂದು ಕರೆಯುತ್ತಿದ್ದು, ತಗರ ದಿಂದ ಸಗರ ಪದ ಬಂದಿರಬಹುದೆಂದು ಹಲವು ವಿದ್ವಾಂಸರು ಅಬಿಪ್ರಾಯ ಪಟ್ಟಿದ್ದಾರೆ.ರೈಯಿಸ್‍ಡೇವಿಡ್ಸ್‍ರವರ ಪಾಲಿ-ಇಂಗ್ಲೀಸ್ ಪದಕೋಶ ಮತ್ತುಕುವೆಂಪು ಬಾಷಾ ಭಾರತಿ ಪ್ರಾಧಿಕಾರದ ಪಾಲಿ-ಕನ್ನಡ ಪದಕೋಶದ ಪ್ರಕಾರ,ತಗರಎಂದರೆಸುವಾಸನೆ ಬೀರುವಒಂದು ಹೂ. ಶಿಖಿನ್ ಎಂದರೆಅಗ್ನಿ, ನವಿಲು ಮತ್ತು ಬುದ್ಧಎಂಬ ಅರ್ಥವಿದೆ.ತಗರ ಶಿಖಿನ್ ಎಂದರೆ ಸುವಾಸನೆ ಬೀರುವ ಬುದ್ಧಎಂದಾಗುತ್ತದೆ. ಈ ಜಾಡು ಸಹ ಬುದ್ಧ ನೆಲೆ ಸೂಚಿಸುತ್ತದೆ.
  ಪಾಲಿ ಬೌದ್ಧ ಸಾಹಿತ್ಯದಲ್ಲಿಉಲ್ಲೇಖಗೊಂಡಿರುವ“ ತಗರಶಿಖಿನ್ ” ಎಂಬ ಗುರುವಿನ ಮೂಲ ತಗರನಾಡುಅಥವಾಥೇರ್(ಬೀದರಜಿಲ್ಲೆಯಾಚೆಗಿನ ಮಹಾರಾಷ್ಟರಾಜ್ಯದಉಸ್ಮಾನಾಬಾದಜಿಲ್ಲೆಯಲ್ಲಿದೆ) ಇರಬಹುದೆಂದುಕೆಲವರು ಉಹಿಸಿದರೆ, ಗೋಕರ್ಣದ ಬಳಿಯ ತೊರ್ಕೆಯೇತಗರಇರಬಹುದೆಂದುಕೆ.ಜಿ.ಕುಂದಣಗಾರರವರುಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಸಂಶೋಧಕರು ಸನ್ನತ್ತಿಯನ್ನುಕೇಂದ್ರವಾಗಿಟ್ಟುಕೊಂಡು ಸಗರಾದ್ರಿಪರಿಸರವನ್ನುಅವಲೋಕಿಸಿರುವ ಕೊರತೆಇದೆ ಎನಿಸುತ್ತದೆ.
  ಇದೇದಾಟಿಯಲ್ಲಿ ಸಗರನಾಡಿನ ಸಂಶೋಧಕರಾದಡಿ.ಎನ್.ಅಕ್ಕಿಯವರು, ಈ ಪ್ರದೇಶದ ಸಾಲುಗಟ್ಟಿದ ಬೆಟ್ಟ-ಗುಡ್ಡಗಳಲ್ಲಿ ಇರುವ ಅನೇಕ ನೈಸರ್ಗಿಕ ಗವಿಗಳಲ್ಲಿ, ದೊಡ್ಡದೊಡ್ಡ ಬಂಡೆಗಳ ಆಸರೆಯಲ್ಲಿ, ಆದಿ ಮಾನವನ ಚಿತ್ರಗಳು ಇದ್ದಿರಬಹುದಾದಸಾಧ್ಯತೆಇದೆ. ಹಾಗೆಯೇ, ಅಶೋಕನ ಕಾಲದಬ್ರಾಹ್ಮೀ ಶಾಸನಗಳ ಸಂಶೋಧನೆಗೆಈ ಬೆಟ್ಟಗಳು ಸಾಕಷ್ಟು ಸುಳಿವು ನೀಡುತ್ತವೆಎಂದು ಸಗರನಾಡ ಸಿರಿ ಕೃತಿಯ ಮೊದಲ ಮಾತಿನಲ್ಲಿ ತಿಳಿಸಿದ್ದಾರೆ. ಸಂಶೋಧನಾಕ್ಷೇತ್ರದ ಈ ಕೊರತೆ ನೀಗಿಸುವ ಅಗತ್ಯವಿದೆ.ಸಗರ ನಾಡುಪರಿಕಲ್ಪನೆಕುರಿತು ನಿರ್ದಿಷ್ಠ ಸಂಶೋಧನೆ ನಡೆದರೆತಗರ ನಾಡು- ಸಗರ ನಾಡು ಎಂಬಜಿಜ್ಞಾಸೆಇತ್ಯಾರ್ಥವಾಗಬಹುದು.
  ಐಹೊಳೆಯ ಬೌದ್ಧಗುಹೆಯನ್ನು ಮೊದಲುಜೈನಗುಹೆಎಂದುತಪ್ಪಾಗಿ ಭಾವಿಸಲಾಗಿತ್ತು. ಈ ಕುರಿತು ಷ.ಶಟ್ಟರ್‍ರವರುಇದುಒಂದು ಬೌದ್ಧ ವಿಹಾರವೆಂದುಇಚಿsಣ ಚಿಟಿಜ Wesಣ ನಿಯತಕಾಲಿಕದಲ್ಲಿ(ಸಂ. 19, 1969) ಲೇಖನ ಬರೆದು ಪ್ರತಿಪಾದಿಸಿದರು. ಆದರೆ ಆ ಬಳಿಕ ಇದು ವಿಹಾರವಲ್ಲಬೌದ್ಧಚೈತ್ಯಾಲಯಎಂದು ಎಂ.ಎಂ. ಅಣ್ಣಿಗೇರಿಯವರುಐಹೊಳೆ ಸಂಸ್ಕøತಿ ಮತ್ತು ಕಲೆ ಕೃತಿಯಲ್ಲಿ ನಿರೂಪಿಸಿದ್ದಾರೆ. ಈ ರೀತಿಯ ನಿಕರ ನಿರಂತರಸಂಶೋಧನೆಗಳುಇತಿಹಾಸಕ್ಕೆ ಸ್ಪಷ್ಟತೆ ನೀಡುತ್ತ ಹೋಗುತ್ತವೆ. ಸಗರಾದ್ರಿಯನೆಲೆಗಳ ಕುರಿತು ಆಳವಾದಇಂತಹ ನಿಕರ ಸಂಶೋಧನೆಯಅಗತ್ಯವಿದೆ.
 5. ಬೌದ್ಧಧಾರ್ಮಿಕಗ್ರಂಥವಾದ ವಿನಯಪಿಟಕದಲ್ಲಿ ಸೇತುಕನ್ನಿಕಾ (ಶಾತಕರ್ಣಿಕಾ) ಉಲ್ಲೇಖದಿಂದಾಗಿದಕ್ಖಣದಲ್ಲಿ ಬೌದ್ಧಧರ್ಮದ ಏಳಿಗೆಯ ವಿಚಾರಗೊತ್ತಾಗುತ್ತದೆ. ಹಾಗೂ ಅಶೋಕನ ನಂತರ ಸಂಕಲನ ಮಾಡಿದೆಎನ್ನಲಾದ ಮಹಾವಗ್ಗದಲ್ಲಿದಕ್ಷಿಣದೇಶದ ಅನೇಕ ವಿಚಾರಗಳು ಸಿಗುತ್ತವೆ ಎಂದು ಸಂಶೋಧಕರಾದ ತಾಳ್ತಜೆ ವಸಂತಕುಮಾರ ತಿಳಿಸಿದ್ದಾರೆ. ಮುಂದುವರೆದುಕ್ರಿಸ್ತಶಕ 4ನೇಯ ಮತ್ತು 6ನೇಯ ಶತಮಾನದಲ್ಲಿ ಸಂಕಲವಾದ ಮಹಾವಂಶ ಮತ್ತು ದೀಪವಂಶ ಗ್ರಂಥಗಳು ವಿಶೇಷ ದಾಖಲೆ ಎನಿಸಿದರೂ ಮಹಾವಂಶದಲ್ಲಿದಕ್ಷಿಣ ಭಾರತಕ್ಕೆ ಸಂಬಂಧಿಸಿದ ದಾಖಲೆಗಳು ಕರ್ನಾಟಕದದೃಷ್ಠಿಯಿಂದ ಮುಖ್ಯವೆನಿಸುತ್ತವೆಎನ್ನುತ್ತಾರೆ.
  ಮಹಾವಂಶದಲ್ಲಿಒಂದು ಮುಖ್ಯವಾದ ಸಂಗತಿದಾಖಲಿಸಲಾಗಿದೆ. ಅದೇನೆಂದರೆ, ಕ್ರಿ.ಶ. ಒಂದನೇ ಶತಮಾನದಲ್ಲಿ ಸಿಂಹಳದ ರಾಜದುತ್ತಗಾಮಣಿಅಭಯನುತನ್ನರಾಜಧಾನಿಯಲ್ಲಿ ಮಹಾವಿಹಾರವೊಂದನ್ನು ಕಟ್ಟಿಸಿ, ಅದರ ಪ್ರಾರಂಭೋತ್ಸವಕ್ಕೆ ಹದಿನಾಲ್ಕು ಬೌದ್ಧ ಕೇಂದ್ರಗಳಿಂದ ಅಥಿತಿಗಳನ್ನು ಅಮಂತ್ರಿಸಿದನು. ಹಾಗೆ ನೆರೆದವರಲ್ಲಿ ಬನವಾಸಿಯ 80ಸಾವಿರ ಥೇರರೂಇದ್ದರುಎಸ್.ಕೆ. ಐಯ್ಯಂಗರ್ ಪೂರ್ವೋಕ್ತದಲ್ಲಿ ಪ್ರಸ್ತಾಪಿಸಿದ್ದಾರೆ.
  ಮಹಾವಂಶದ ಈ ಮಾಹಿತಿಯನ್ನು ವಾಸ್ತವಿಕ ನೆಲೆಯಲ್ಲಿ ಪರಿಶೀಲಿಸಿದಾಗ ಬನವಾಸಿಯಿಂದ ಅಂದಿನ ಕಾಲಕ್ಕೆ 80 ಸಾವಿರಥೇರರು ಸಿಂಹಳಕ್ಕೆ ಹೋಗಿದ್ದರುಎನ್ನುವುದುತುಸುಉತ್ಪ್ರೇಕ್ಷೆ ಎನಿಸಿದರೂ, ಬನವಾಸಿಯ ಗುಂಪಿನಲ್ಲಿಕರ್ನಾಟಕದ ಸನ್ನತ್ತಿ ಒಳಗೊಂಡು ಇತರೆ ಬೌದ್ಧ ಕೇಂದ್ರಗಳ ಥೇರರು ಸೇರಿದ್ದರುಎಂದು ಉಹಿಸುವುದು ಸೂಕ್ತವೆನಿಸುತ್ತದೆ. ಸನ್ನತ್ತಿ ನೆಲೆಯಥೇರ ಸಮುದಾಯ ಸಗರಾದ್ರಿಯನ್ನು ಒಳಗೊಂಡಿರಬಹುದುಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
  ಕ್ರಿಸ್ತ ಪೂರ್ವ 2ನೇ ಶತಮಾನದಿಂದಕ್ರಿಸ್ತ ಶಕೆ 16ನೇ ಶತಮಾನದವರೆಗೆಕರ್ನಾಟಕದಲ್ಲಿ ಬೌದ್ಧಧರ್ಮವು ಪ್ರಚಲಿತವಾಗಿತ್ತು. ಅದು ಬಹುಶ: ಯಾವಾಗಲೂ ಪ್ರಬಲ ಧರ್ಮವಾಗಿರಲಿಲ್ಲ. ಕ್ರಿ.ಶ. ಒಂದನೇಯ ಶತಮಾನದ ವರೆಗೆಥೇರವಾದವೂ (ಹೀನಯಾನ), ಅಲ್ಲಿಂದ ಮುಂದೆ ಆರೇಳು ಶತಮಾನದವರೆಗೆ ಮಹಾಯಾನವೂ, ಸುಮಾರು 7-8ನೇ ಶತಮಾನಗಳಿಂದ ವಜ್ರಯಾನವೂ, ಕರ್ನಾಟಕದಲ್ಲಿ ಪ್ರಚಾರಗೊಂಡವುಎಂದು ಸಂಶೋಧಕರಾದಡಾ.ಎಂ.ಚಿದನಂದಮೂರ್ತಿಯವರು ದಾಖಲಿಸಿದ್ದಾರೆ. ಈ ಕಾಲಘಟ್ಟಗಳ ಆಧಾರದಲ್ಲಿ ಸನ್ನತ್ತಿ ಮತ್ತು ಸಗರಾದ್ರಿಯ ಪ್ರಾದೇಶಿಕ ಅಧ್ಯಾಯನದಅಗತ್ಯವಿದೆ.
 6. ತಾಂತ್ರಿಕ ಶಾಖೆಯ ನಾಗಾರ್ಜುನಕೊಂಡದಅಂತರ ಮತ್ತುಅಂತರಮುಖಿ ಸಾಮಿಪ್ಯ ಮತ್ತು ಸಂಬಂಧಗಳ ಸಾಮ್ಯತೆ. ಸಗರಾದ್ರಿಯಲ್ಲಿ ಬೌದ್ಧ ನೆಲೆಯನ್ನು ಸಂಕೇತಿಸುತ್ತದೆ.
  ನಾಗಾರ್ಜುನಕೊಂಡವುಸಹಾಪುರದಸಗರಾದ್ರಿಯಿಂದಕೇವಲ ಸುಮಾರು 260 ಕಿ.ಮೀ. ದೂರದಲ್ಲಿದ್ದುಸಾವಿರಾರು ಕಿ.ಮೀ. ದೂರದ ಹಿಮಾಲಯಕ್ಕೂ ಸಗರಾದ್ರಿಗೂಧಾರ್ಮಿಕ-ಸಾಂಸ್ಕøತಿಕ ಸಾಮಿಪ್ಯಕಲ್ಪಿಸುವವಿಧ್ವಾಂಸರು ನಾಗಾರ್ಜುನಕೊಂಡದಕಡೆ ಲಕ್ಷವಹಿಸಿ ಅಧ್ಯಾಯನ ನಡೆಸಿದ ಪ್ರಕರಣಗಳಿಲ್ಲ. ಮೂಲ ಬೌದ್ಧನೆಲೆಗಳಾಗಿದ್ದಶ್ರೀಶೈಲ ಮತ್ತುತಿರುಪತಿಕ್ಷೇತ್ರಗಳ ಸಂಬಂಧಕಲ್ಪಿಸುವ ಅಧ್ಯಾಯನಗಳಿದ್ದರೂ ಬಹುಮುಖಿಯಾಗಿರದೆ ವೈಷ್ಣವ ಮತ್ತುಶೈವದ ಏಕಮುಖವಾಗಿವೆ. ಬೌದ್ಧದೃಷ್ಠಿಕೋನದಕೊರತೆಎದ್ದುಕಾಣುತ್ತಿದೆ. ಈಗ ಬಹುಮುಖಿ ಅಧ್ಯಾಯನಕೈಗೊಂಡರೆಹೊಸ ಕಿರಣಕಾಣುವ ಸಾದ್ಯತೆ ಹೇರಳವಾಗಿದೆ.
  ಕಪಟರಾಳ ಕೃಷ್ಣರಾಯರು “ ಸನ್ನತ್ತಿಯ ಶಿಲ್ಪದ ಕೆತ್ತನೆಗಳುಕ್ರಿಸ್ತ ಶಕ 3ನೇಯ ಅಥವಾ 4ನೇಯ ಶತಮಾನಗಳ ಅಮರಾವತಿ ಮತ್ತು ನಾಗಾರ್ಜುನ ಬೆಟ್ಟಗಳ ಕಲ್ಲಿನ ಕೆತ್ತನೆಗಳನ್ನು ಹೋಲುತ್ತವೆ. ಹಾಗೂ ಇವು ಪೂರ್ವಕಾಲದಲ್ಲಿಮಹಾಯಾನ ಪಂಥದ ಬೌದ್ಧರ ಪವಿತ್ರಕ್ಷೇತ್ರವಾಗಿತ್ತು”ಎಂದುಅಭಿಪ್ರಾಯಪಟ್ಟಿದ್ದಾರೆ. ಬಾಹ್ಯ ಸಮ್ಮಂಧಗಳ ಸಾಮಿಪ್ಯವನ್ನುಗುರುತಿದಂತೆಆಂತರ್ಯದತತ್ವ-ಸಂಸ್ಕøತಿಯ ಸಮ್ಮಂಧಗಳನ್ನು ನಾಗಾರ್ಜುನ ಬೆಟ್ಟ ಮತ್ತು ಸನ್ನತ್ತಿ ಪರಿಸರದ ಸಗರಾದ್ರಿಯೊಂದಿಗೆ ಹೋಲಿಕೆ ಮಾಡಿದಾಗತಕ್ಷಣಕ್ಕೆ ವಜ್ರಯಾನದ ನಾಥ, ಸಿದ್ಧ ಪರಂಪರೆಯ ಮೇಲ್‍ನೋಟದಕುರುಹುಗಳು ಕಾಣುತ್ತವೆ.
  ಖ್ಯಾತ ಸಂಸ್ಕøತಿಚಿಂತಕರಾದಡಾ.ಡಿ.ಆರ್.ನಾಗರಾಜರವರು, ತಮ್ಮಅಲ್ಲಮಪ್ರಭು ಮತ್ತು ಶೈವ ಪ್ರತಿಭೆಕೃತಿಯಲ್ಲಿ ಬ್ರಾಹ್ಮಣ್ಯ ವಿರೋಧಿ ಸಂಸ್ಕøತಿಕ ನೆಲೆಯಲ್ಲಿ ಬೌದ್ಧದೊಂದಿಗೆ ನಾಥ, ಸಿದ್ಧ ಪರಂಪರೆಗಳ ಸಂಯೋಗವನ್ನು ಪ್ರಸ್ತಾಪಿಸುತ್ತ, “ ಬ್ರಾಹಣ್ಯದಆತ್ಮಸಂಕೋಚಿಕರಣ ಮತ್ತು ನವ ಸಂಪ್ರಾದಾಯಿಕರಣಕ್ಕೆವಿರುದ್ದವಾಗಿಇನ್ನೊಂದು ಬಗೆಯ ವಿಕಾಸೀಕರಣವೂ ಪ್ರಬಲಗೊಳ್ಳತೊಡಗಿತು. ಬ್ರಾಹ್ಮಣ್ಯ ಹಠತೊಟ್ಟು ಶ್ರಮಣ ಪರಂಪರೆಗಳಜತೆಗೆತನ್ನ ಸಂಬಂಧವನ್ನು ವೈರದ ಹಂತದಲ್ಲಿ ಮಾತ್ರ ಉಳಿಸಿಕೊಂಡರೆ, ಈ ವಿಕಾಸಶೀಲ ಧಾರೆಗಳು ಶ್ರಮಣಪರಂಪರೆಗಳ ಜತೆಗೆತುಂಬ ಆಪ್ತವಾದ, ಸಂಕೀರ್ಣ ಸಂಬಂಧ ಬೆಳಸಿಕೊಂಡವು.ಬೌದ್ಧ ಹಾಗೂ ಶೈವ ಪರಂಪರೆಗಳ ನಡುವೆಅಂತೂ ಆಳವಾದ ಕೊಳು ಕೊಡುಗೆ ಬೆಳೆದು ಬ್ರಾಹ್ಮಣ್ಯದ ಮುಕ್ಕೂಟದ ವಿರುದ್ದತೀವ್ರ ಸಮರವೇ ಪ್ರಾರಂಭವಾಯಿತು.ವಿಕಾಸೀಕರಣದ ಧಾರೆಗಳು ಬೌದ್ಧಧರ್ಮದಿಂದಅಂತರಂಗಿಕರಿಸಿಕೊಂಡ ಒಂದು ಪ್ರಧಾನ ಮೌಲ್ಯವೆಂದರೆ, ಸಂಸಾರ ಮತ್ತು ನಿರ್ವಾಣಗಳು ಬೇರೆ ಬೇರೆಯಲ್ಲಎಂದುದ್ದು. ಸಂಸಾರ ಎಂಬ ಕಲ್ಪನೆಯನ್ನುನಾಥ-ಸಿದ್ಧರು ವ್ಯಾಖ್ಯಾನಿಸಿಕೊಂಡ ಕ್ರಮ ಈ ದೃಷ್ಠಿಯಿಂದ ವಿಶಿಷ್ಠ. ಹೇ ವಜ್ರತಂತ್ರದ ಪ್ರಕಾರ ಸಂಸಾರಯಾವುದೋಅದೇ ನಿರ್ವಾಣ.
  ಏವಂ ಎವ ಸಂಸಾರಮ್ ನಿರ್ವಾಣಂಏವತು1
  ಸಂಸಾರಹತೇ ನಾನ್ಯನ್ ನಿರ್ವಾಣಮ್‍ಇತಿಕಥ್ಯತೇ 11
  ಸಂಸಾರರೂಪ ಶಟಾಯಾ: ಸಂಸಾರಂ ವೇರನಾದಯ: 1
  ಸಂಸಾರಂಇಂದ್ರಿಯಾಣ್ಯ ಏವ ಸಂಸಾರಂದ್ವೇಷಕಾದಯಾ: 11
  ಬೌದ್ಧದರ್ಶನದಕ್ರಾಂತಿಕಾರಿ ಸಾಧ್ಯತೆಗಳನ್ನು ಅನೇಕ ಬೌದ್ಧ ವೈಚಾರಿಕರು ಸಂಸಾರ – ನಿರ್ವಾಣಗಳ ಅಂತರದ ನಿರ್ನಾಮದಲ್ಲೇಗುರುತಿಸುತ್ತಾರೆ. ಸಿದ್ಧರ ತಾತ್ವಿಕತೆಯಲ್ಲಿಇದುಅಂತರ್ಗತವಾಗಿದೆ.”ಎಂದು ಬೌದ್ಧ ತತ್ವಗಳು ನಾಥ ಮತ್ತು ಸಿದ್ಧ ಪಂಥಗಳೊಂದಿಗೆ ಸಮ್ಮೀಳಿತಗೊಂಡ ವಿವರಗಳನ್ನು ಡಾ.ಡಿ.ಆರ್.ನಾಗರಾಜರವರು ಸವಿಸ್ತಾವಾಗಿ ವಿಶ್ಲೇಷಿಸಿದ್ದಾರೆ.
 7. ಮಹಾಪರಿನಿರ್ವಾಣ ಸೂತ್ರದಲ್ಲಿನ ನಂಬಿಕೆಯಂತೆ ಬುದ್ದನ ನಿರ್ವಾಣದ ನಂತರ 450 ವರ್ಷಗಳ ಮೇಲೆ ಪರ್ವತ ಶ್ರೇಣಿಯಲ್ಲಿ ಜನಿಸುವೆ ಎಂಬುದು. ಹಾಗೂ ಬುದ್ದನ ಉಳಿಕೆಗಳು ಗಂಧಮಾನಪರ್ವತಗಳಲ್ಲಿ ವಜ್ರಕೂಟದಲ್ಲಿದೊರೆಯುತ್ತವೆಂಬ ಬೌದ್ದ ಭವಿಷ್ಯವಾಣಿಯ ನಂಬಿಕೆಯ ಸುಳಿವು; ಈ ನಂಬಿಕೆಯಲ್ಲಿ ವಿಶ್ವಾಸವಿಟ್ಟವಿಶ್ವದ ನಾನಾ ಭಾಗಗಳ ಬುದ್ದನಆರಾಧಕರುಬೆಟ್ಟಗಳತ್ತ ಚಿತ್ತ ಹರಿಸಿದಂತೆ ಈ ಪ್ರದೇಶದ ಬೌದ್ಧರಿಗೆ ಸಗರಾದ್ರಿಯತ್ತಚಿತ್ತಹರಿಸಲುಕಾರಣವಾಗಿರಬಹುದು.
 8. ಬುದ್ದಭದ್ರನಅವಂತಕ ಸೂತ್ರದ ಭವಿಷ್ಯದಲ್ಲಿನಈಶಾನ್ಯ ಭಾಗದಲ್ಲಿ ಶೀತಲ ಪರ್ವತವಿದ್ದುಅಲ್ಲಿ ಅನೇಕ ಬೋದಿಸತ್ವರು ಜೀವಿಸಿದ್ದಾರೆ ಎಂಬುದನ್ನುಚೀನಿಯರು ವುತಾಯ್ ಬೆಟ್ಟಗಳು ಎಂದು ಅನುವಾದಿಸಿಕೊಂಡು ವುತಾಯ್ ಬೆಟ್ಟದಲ್ಲಿ ಬೌದ್ದನೆಲೆ ಪ್ರತಿಷ್ಠಾಪಿಸಿ ಬುದ್ದನನ್ನುಅರಸುತ್ತಾ ಹೊರಟಿರುವುದುಅದೇರೀತಿ ಪ್ರಪಂಚದ ಹಲವು ದೇಶಗಳಲ್ಲಿ ಬೌದ್ದಆರಾಧಕರುತಮ್ಮತಮ್ಮ ಪ್ರದೇಶದ ಬೆಟ್ಟಗಳಲ್ಲಿ ಬೌದ್ದದೈವಿಕನೆಲೆಕಂಡಿರುವುದು. ಅದೇರೀತಿಇಲ್ಲಿಯೂ ಸಹ ಬೌದ್ಧತಾಂತ್ರಿಕರುದೈವಿಕನೆಲೆಕಂಡಿರಬಹುದು.
 9. ಕದರಿಯ ಬೆಟ್ಟದಲ್ಲಿ ಗುಹೆಗಳು ಇದ್ದು, ಇಂದು ಆ ಭಾಗದಲ್ಲಿ ನಾಥ ಪಂಥದ ಜೋಗಿಗಳು ವಾಸವಾಗಿದ್ದರೂ, ಅದಕ್ಕೂ ಹಿಂದಿನ ಕಾಲದಲ್ಲಿಅಲ್ಲಿ ಬೌದ್ಧ ಬಿಕ್ಷುಗಳು ವಾಸವಾಗಿದ್ದರುಎಂದು ಹುಯೇನ್‍ತ್ಸಾಂಗ್ ದಾಖಲಿಸಿದ್ದಾನೆ. ಶಹಾಪುರ ಬೆಟ್ಟದಲ್ಲಿ ಸಹ ನಾಥ ಪರಂಪರೆಯ ನೆಲೆ ಇದ್ದು, ಬಸವಣ್ಣ ಮತ್ತುಅಲ್ಲಮಪ್ರಭು ಮೂಲತ: ನಾಥ ಪಂಥದ ಅನುಯಾಯಿಗಳಾಗಿದ್ದರು ಎಂದು ಕಪಟರಾಳ ಕೃಷ್ಣರಾಯರು ಹಾಗೂ ಹಲವಾರು ವಿಧ್ವಾಂಸರುನ ಶ್ರುತಪಡಿಸಿದ್ದಾರೆ. ಶಹಾಪುರ ಬೆಟ್ಟದಲ್ಲಿ ಬಸವಣ್ಣ, ಅಲ್ಲಮಪ್ರಭು ಮತ್ತು ನಾಥ ಪಂಥದ ನೆಲೆಯ ಕುರುಹುಗಳು ಸಾಕಷ್ಟಿವೆ. ಹೀಗಿರುವಾಗಇದುಕಲ್ಯಾಣ ಪೂರ್ವದ ಬೌದ್ಧ ನೆಲೆ ಆಗಿರುವ ಸಾದ್ಯತೆ ಬಲಿಷ್ಠವಾಗಿದೆ.
 10. ಗೊಗ್ಗಮ್ಮನ ಗವಿ ಮತ್ತದರ ಸಾಂಸ್ಕøತಿಕ ಲಕ್ಷಣಗಳನ್ನು ಅವಲೋಕಿಸಿದರೆ ಬೌದ್ಧ ಸಾಧಕರತಾರಾದೇವತೆಯ ಸ್ಥಾನವಾಗಿರಬಹುದುಎಂಬುದಕ್ಕೆ ಪೂರಕವಾಗಿದೆ. ಚರಿತ್ರೆಯನ್ನು ಪರಿಶೀಲಿಸಲಾಗಿ, ಕರ್ನಾಟಕದಲ್ಲಿ ಸ್ವತಂತ್ರವಾದತಾರಾ ಗುಡಿಗಳು ಇದ್ದವುಎಂಬುದುದೃಡಪಟ್ಟಿದೆ. ಬಳ್ಳಿಗಾವೆ-ಕೋಳಿವಾಡಗಳಲ್ಲಿ ದೊರೆತತಾರಾ ವಿಗ್ರಹಗಳನ್ನು ಅಲ್ಲಿಯತಾರಾ ಗುಡಿಗಳ ಮುಖ್ಯದೇವತೆಆಗಿದ್ದಿರಬಹುದೆಂದುತಜ್ಞರು ತಿಳಿಸಿದ್ದಾರೆ. ಡಂಬಳದ ಶಾಸನವುತಾರಾ ಸ್ತುತಿ ಮಾಡುತ್ತ “ ಅವಳು ಹರಿ, ಕರಿ, ಶಿಖಿ, ಫಣಿ, ತಸ್ಕರ,ಜಳ,ಅರ್ಣವ, ಪಿಚಾಚಿಗಳ ಭಯವನ್ನುಹೋಗಲಾಡಿಸತಕ್ಕವಳು, ಅವಳು ಜ್ಞಾನ ಸಮುದ್ರವನ್ನು ಮಥಿಸಿದ್ದರಿಂದ ಹುಟ್ಟಿದವಳು; ಅವಳನ್ನು ಪ್ರಜ್ಞಾಎಂದುಕರೆಯುತ್ತಾರೆ. ಅವಳು ಬುದ್ಧನಿಗೆ ವಿಭೂತಿಅಥವಾವೈಭವವನ್ನು ಕೊಟ್ಟವಳು (ಬುದ್ಧಸ್ಯ, ವಿಭೂತಿದಾ); ಅವಳು ಬೋಧಿಸತ್ವ ಸ್ವರೂಪಳು; ತಥಾಗತನ ಹೃದಯಾಕಾಶದಲ್ಲಿ ನೆಲೆಸಿರತಕ್ಕವಳು ”ಇತ್ಯಾದಿಯಾಗಿ ಸ್ತೋತ್ರ ಮಾಡಲಾಗಿದೆ. ಹಾಗೆಯೇ ಶಾಸನದಕೊನೆಯಲ್ಲಿ, ಜಗತ್ತಿನವಿಷಯದಲ್ಲಿ‘ಕರುಣವ್ಯಾಪಾರಚಿಂತಾತುರ’ಳಾಗಿರುವ ತಾರೆಯನ್ನು ಮತ್ತೇ ಸ್ತೋತ್ರ ಮಾಡಲಾಗಿದೆಎಂದು ತಾಳ್ತಜೆಯವರು ದಾಖಲಿಸಿದ್ದಾರೆ. ಮುಂದುವರೆದುಕರ್ನಾಟಕದ ಕರಾವಳಿಯಲ್ಲಿರುವ ಅನೇಕದುರ್ಗಾಭಗವತಿ ಗುಡಿಗಳನ್ನು ಪರಿಶೀಲಿಸಿದರೆ, ಅವೆಲ್ಲ ಹಿಂದೆ ಪ್ರಾಯಶ: ತಾರಾಭಗವತಿಯಆರಾಧನಾ ಕೇಂದ್ರಗಳಾಗಿರುವ ಸಾಧ್ಯತೆನ್ನು ಅಲ್ಲಗಳೆವಂತಿಲ್ಲಎಂದಿದ್ದಾರೆ.

ಗೋರಕ್ಷಕ ನಾಥ ಸಂಪ್ರದಾಯಸ್ಥಾಪಕ ಎನ್ನಲಾಗಿದೆ.84ಜನ ಬೌದ್ದ ಮಹಾಸಿದ್ದರ ಪಟ್ಟಿಯಲ್ಲಿಗೋರಕ್ಷನ ಹೆಸರಿದೆ. ಮತ್ಸ್ಯೇಂದ್ರ ಮತ್ತುಗೋರಕ್ಷನಾಥರು ಕೇರಳದಲ್ಲಿ ಸಂಚರಿಸುತ್ತಧರ್ಮ ಪ್ರಚಾರ ಮಾಡುತ್ತಿರುವಾಗರಾಜಕುಮಾರಿ ಪರಿಮಳ ಇವರ ಶಿಷ್ಯಳಾಗಿ ಹಿಂಬಾಲಿಸಿ ಬಂದಳು. ಅವಳನ್ನು ಕರಾವಳಿ ದಾರಿಯಲ್ಲಿ ನೇತ್ರವತಿದಾಟಿ, ನೆಲೆಗೊಳ್ಳುವಂತೆ ಮಾಡಿ, ಮಂಗಳ ಎಂದುನಾಮಕರಣ ಮಾಡಲಾಯಿತು. ಈಐತಿಹ್ಯದ ಕಾರಣವಾಗಿಮಂಗಳಾದೇವಿದೇವತೆಯಾಗಿ ಮಂಗಳೂರು ಪ್ರಸಿದ್ಧಿಯಾಯಿತು ಎಂದುಗಣಪತಿರಾವ್ ಐಗಳ್ ದಾಖಲಿಸಿದ್ದಾರೆ.

ಎಲ್.ಐ. ವಡ್ಡೆಲ್‍ರವರು ಬಹು ಹಿಂದೆಯೇತಾರಾ-ಮಂಗಳಾ ಪರ್ಯಾಯ ನಾಮಗಳು ಎಂದಿದ್ದಾರೆ. ಈ ವಾದವನ್ನು ಪೂರ್ವೋಕ್ತದಲ್ಲಿ ಬಿ.ಎ.ಸಾಲೆತ್ತೊರ ಮತ್ತುಗುರುರಾಜ ಭಟ್ಟಎತ್ತಿಹಿಡಿದಿದ್ದಾರೆ.

ಬಳ್ಳಿಗಾವೆ-ಕೋಳಿವಾಡದ ತಾರಾ ವಿಗ್ರಹಇತಿಹಾಸ, ಡಂಬಳದ ಶಾಸನ ಮತ್ತು ಮಂಗಳಾದೇವಿ-ಮಂಗಳೂರು ಐತಿಹ್ಯಗಳಸ್ವರೂಪಗಳ ಸ್ಪೂರ್ತಿಯಲ್ಲಿಶಹಾಪುರದ ಸಗರಾದ್ರಿ ನೆಲೆಯಲ್ಲಿ ಅಸ್ತಿತ್ವ ಪಡೆದ ನಾಥ ಸಂಪ್ರದಾಯದಒಳಹೊಕ್ಕು ಅವಲೋಕಿಸಿದರೆ ಗೋರಕ್ಷಕ ಪಂಥದತಾರಾದೇವತೆಯ ಪಳೆಯುಳಿಕೆಯಾಗಿ ಗೊಗ್ಗಮ್ಮ, ಗೋಗ್ಗಾಂಭೆ, ಮಹಾಶರಣೆಗೋಗ್ಗಾಮಾಂಭೆ ಕಾಣುತ್ತಾಳೆ. ಈ ಗುಹೆಯಆರಾಧಕರಾದಕುಂಬಾರ ಸಮಾಜಕೂಡಶೈವ ಪರಂಪರೆಯ ನಾಥ ಸಂಪ್ರದಾಯದಚಹರೆ ಹೊಂದಿರುವುದುಗಮನರ್ಹವಾಗಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಯಅಗತ್ಯವಿದೆ.

ಬುದ್ಧಘೋಷ್‍ದೇವೇಂದ್ರ ಹೆಗ್ಗಡೆ
ಬೌದ್ಧಸಾಹಿತಿಗಳು ಮತ್ತು ಸಂಶೋಧಕರು

ವಿಳಾಸ:
ಬುದ್ಧಘೋಷ್‍ದೇವೇಂದ್ರ ಹೆಗ್ಗಡೆ
ಸಮುದಾಯ ಸಂಘಟನಾಧಿಕಾರಿ
ನಗರಸಭೆಕಾರ್ಯಾಲಯ ಶಹಾಪುರ
ಜಿಲ್ಲಾ: ಯಾದಗಿರಿ
ಪೋನ: 9880351904
ಇm

ಗ್ರಂಥ ಸೂಚಿ

 1. ಬೌದ್ಧಯಾನ–ಡಾ. ತಾಳ್ತೆಜೆ ವಸಂತಕುಮಾರ
 2. ಕನ್ನಡತ್ರಿಪಿಟಕಗ್ರಂಥ ಮಾಲೆ – ಸಂಪುಟಗಳು
  ಸಂಪಾದಕರು : ಪೂಜ್ಯಆಚಾರ್ಯ ಬುದ್ದರಕ್ಕಿತ.
 3. ಪಾಲಿ ಭಾಷೆ ಮತ್ತು ಸಾಹಿತ್ಯದಇತಿಹಾಸ.
  ಪೂಜ್ಯಆಚಾರ್ಯ ಬುದ್ದರಕ್ಕಿತ,ಅನುವಾದ : ಸಿ.ಚಂದ್ರಪ್ಪ
 4. ಬುದ್ದ ಮತ್ತು ಪರಂಪರೆ– ಓಶೋಅನುವಾದ: ಡಾ.ಟಿ.ಎನ್.ವಾಸುದೇವ ಮೂರ್ತಿ.
 5. ಕರ್ನಾಟಕದಲ್ಲಿ ಭೌದ್ಧಧರ್ಮದ ಪುನರುಜ್ಜಿವನ–ಡಾ. ಬಿ.ಕೆ.ಎಸ್. ವರ್ಧನ.
 6. ಪ್ರತ್ಯಕ ಬುಧ್ಧಅಲ್ಲಮ ಪ್ರಭು–ಎಸ್. ನಟರಾಜ ಭೂದಾಳು
 7. ಬೌದ್ಧಧರ್ಮದರ್ಶನ–ಆಚಾರ್ಯ ನರೇಂದ್ರದೇವ.ಅನು: ಹನುಮಂತು , ಬಿ.ವೈ.ಲಲಿತಾಂಬ.
 8. ಪ್ರಾಚೀನಚೀನಾದಲ್ಲಿಬೌದ್ಧಧರ್ಮ– ಡಾ.ಸಿ.ಚಂದ್ರಪ್ಪ.
 9. ಪ್ರಾಚೀನ ಮತ್ತು ಮಧ್ಯಯುಗೀನ ಹಿಂದು ಸಂಸ್ಕøತಿ – ಸ್ವಾಮಿ ಹರ್ಷಾನಂದ.
 10. ಕನ್ನಡದಲ್ಲಿ ಬೌದ್ಧಸಾಹಿತ್ಯ–ಡಾ. ಸುಷ್ಮಾ ಹಾಗರಗಿ.
 11. ಹಿಂದು ಸಾಮ್ರಾಜ್ಯ ಶಾಹಿಯಇತಿಹಾಸ – ಡಾ ಕೆ.ಎಸ್.ಭಗವಾನ.
 12. ಭಾರತಿಯತತ್ವ ಶಾಸ್ತ್ರದ ರೂಪುರೇಖೆಗಳು – ಎಂ.ಹಿರಿಯಣ್ಣ, ಅನುವಾದ : ಪ್ರಭುಶಂಕರ.
 13. ಹಿಂದು ವೀರಶೈವ (ಲಿಂಗಾಯತ) –ಡಾಎಂ.ಚಿದಾನಂದ ಮೂರ್ತಿ.
 14. ಹಿಂದುಧರ್ಮೋತ್ತರ ಭಾರತ–ಡಾ. ಕಾಂಚಾ ಐಲಯ್ಯ, ಅನುವಾದ:ಜಾಜಿದೇವಿಂದ್ರಪ್ಪ.
 15. ಸಂಸ್ಕøತ ಸಾಹಿತ್ಯದಇತಿಹಾಸ-ಆಚಾರ್ಯಬಲದೇವಉಪಾಧ್ಯಾಯ, ಅನು:ಎಸ್.ರಾಮಚಂದ್ರಶಾಸ್ತ್ರಿ.
 16. ಇತಿಹಾಸ ಸಂಶೋಧನ ಸಮೀಕ್ಷೆ–ಡಾ. ಎಚ್.ವಿ. ಶ್ರೀನಿವಾಸ ಮೂರ್ತಿ.
  17.ಪ್ರಾಕೃತಜಗದ್ವಲಯ – ಷ. ಶಟ್ಟರ
 17. ಸಗರಾದ್ರಿ ಸ್ಮಾರಕಗಳ ಅಧ್ಯಾಯನ–ಶಾಯಿಬಾಬ ಅಣಬಿ
 18. ಸಗರನಾಡ ಸಿರಿ-ಡಿ.ಎನ್.ಅಕ್ಕಿ
 19. ಸಗರನಾಡ ಸಂಸ್ಕøತಿ ಸಮಿಕ್ಷೆ-ಡಾ.ಅಬ್ದುಲ್‍ಕರೀಮ್
 20. ಶಹಾಪುರ ಪರಿಸರದ ಶಾಸನಗಳು-ಸಿದ್ದಣ್ಣ ಕುಂಬಾರ
 21. ಯಾದಗಿರಿಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು (ಅಪ್ರಕಟಿತ)-ಡಾ.ಧರ್ಮಣ್ಣ ಬಡಿಗೇರ
 22. ಶಹಾಪುರತಾಲೂಕಿನಆಧ್ಯಾತ್ಮಿಕ ಕ್ಷೇತ್ರಗಳು- ರಾಘವೇಂದ್ರ ಹಾರಣಗೇರಾ
  24.ಸಗರನಾಡದರ್ಶನ- ಎ.ಕೃಷ್ಣ ಸುರಪುರ
  25.ಸಗರನಾಡಿನ ಪೌರಾಣಿಕ ಹಿರಿಮೆ-ಸಗರಕೃಷ್ಣಚಾರ್ಯ
  26.ಶಹಾಪುರದರ್ರ್ಶನ 1994-ಸೂಗಯ್ಯ ಹಿರೇಮಠ
  27.ಶಹಾಪುರದರ್ರ್ಶನ 1996- ಡಿ.ಎನ್.ಅಕ್ಕಿ
  28.ಶಹಾಪುರದರ್ರ್ಶನ ಮಾಲಿಕೆ 2008- ಚಂದ್ರಕಾಂತ ಕರದಳ್ಳಿ
  29.ಕರ್ನಾಟಕ ಕೋಟೆಗಳು ಸಂಪುಟ- ಡಾ. ಚೆನ್ನಬಸಪ್ಪ ಪಾಟೀಲ
  30.ಸರಹಪಾದ – ನಟರಾಜ ಬೂದಾಳ್
 23. ಶೈವ ಪ್ರತಿಭೆಅಲ್ಲಮಪ್ರಭು– ಡಾ.ಡಿ.ಆರ್.ನಾಗರಾಜ
 24. ಃuಜಜhisಣ ಂಡಿಣ & ಂಡಿಛಿhiಣeಛಿಣuಡಿe iಟಿ ಏಚಿಡಿಟಿಚಿಣಚಿಞಚಿ -ಆಡಿ. ಎಚಿಥಿಚಿshಡಿee ಂಟಿಚಿಟಿಜ ಆeshಚಿmಚಿಟಿe.
  33.2500 ಙeಚಿಡಿs oಜಿ ಃuಜಜhism – Pಡಿoಜಿ . P.ಗಿ. ಃಚಿಠಿಚಿಣ.
 25. ಃuಜಜhism iಟಿ ಏಚಿಡಿಟಿಚಿಣಚಿಞಚಿ – ಆಡಿ. ಅ. ಅhಚಿಟಿಜಡಿಚಿಠಿಠಿಚಿ.
  35.ಂ Pಡಿoರಿeಛಿಣ ಜಿoಡಿ ಣhe ಡಿesಣoಡಿಚಿಣioಟಿ, ಠಿಡಿeseಡಿvಚಿಣioಟಿ ಚಿಟಿಜ ಆeveಟoಠಿmeಟಿಣ oಜಿ ಃuಜಜhisಣ ಒoಟಿumeಟಿಣ iಟಿ ಚಿಟಿಜ ಚಿಡಿouಟಿಜ sಚಿಟಿಟಿಚಿಣi – ಂ ಉovಣ ಖeಠಿoಡಿಣ.
 26. ಖಿಡಿಚಿveಟs oಜಿ ಈಚಿh-ಊiಚಿಟಿ ಚಿಟಿಜ Suಟಿg-ಙuಟಿ
  ಃuಜಜhisಣ ಠಿiಟgಡಿims ಜಿಡಿom ಅhiಟಿಚಿ ಣo Iಟಿಜiಚಿ (400ಂಆ ಚಿಟಿಜ 518ಂಆ) – Sಚಿmueಟ ಃeಚಿಟ
 27. ಃuಜಜhisಣ Iಟಿಜiಚಿ – ಖಿ.W. ಖhಥಿs ಆಚಿviಜs

Leave a Reply

Your email address will not be published. Required fields are marked *

error: Content is protected !!