ಭಾರತ ನನ್ನ ತಾಯಿ ಮಾತೆ-ದೇವಿ-ಅಲ್ಲ

ಭಾರತ ನನ್ನ ತಾಯಿ ಮಾತೆದೇವಿ_ಅಲ್ಲ
ನನ್ನ ಹೆಸರು ವಚನ ದೀಪ್ತಿ ಎಸ್ ಪಾಟೀಲ್, ಚಿಕ್ಕವಳು, ಈ ದಿನ ನಮ್ಮೆಲರ ಪ್ರೀತಿಯ ವಿಶ್ವಮಾನವನಾದ ಭಾರತ ಸಂವಿಧಾನವ ನೆನೆದು ಒಂದು ಚಿಕ್ಕ ಚಿಂತನ ಮಂಥನವನ್ನು ನಿಮ್ಮ ಬಳಿ ಇರಿಸಿದ್ದೇನೆ.. ನಿಮಗೆ ಓದಬೇಕೆನಿಸಿ ಓದುವಷ್ಟು ಸಮಯ ಇದ್ದರೆ ಮಾತ್ರ ಒಮ್ಮೆ ಓದಿ ನಿಮ್ಮ ಭಾವನೆಗಳನ್ನು ತಿಳಿಸಿ..

ಹೇ ಭಾರತದೇಶದ ಮುಚ್ಚಿಡಲ್ಪಟ್ಟ ವಿಶ್ವ ಮಾನವ ಮನಸುಗಳೇ ಈ ಪುರೋಹಿತಶಾಯಿ ದೇಶಭಕ್ತಿಯ ಹುಚ್ಚು ಹೆಚ್ಚಿಸುವ ಒಂದು ಬಗೆ ಹೇಗಿದೆ ನೋಡಿ…

ವಾಸ್ತವದಲ್ಲಿ ಭೂಮಿ, ನೀರು, ಗಾಳಿ, ಪ್ರಾಣಿ, ಪ್ರಜೆಗಳು ಒಂದು ದೇಶದ ಸಹಜ ಮತ್ತು ಅಮೂಲ್ಯ ಸಂಪನ್ಮೂಲಗಳು…

ನಮ್ಮನ್ನು ವೈಧಿಕ ಮನಸುಗಳಿಂದ ಕಾಪಾಡುತ್ತಿರುವ ನಮ್ಮೆಲ್ಲರ ಎಕೈಕ ಪವಿತ್ರ ಗ್ರಂಥವಾದ ಸಂವಿಧಾನದಲ್ಲಿನ ಭಾರತದ ವ್ಯಾಖ್ಯಾನ (definition) ದಲ್ಲಿ ” SOVEREIGN SOCIALIST SECULAR DEMOCRATIC REPUBLIC INDIA” ಭಾರತವು ಸಾರ್ವಭೌಮ್ಯ, ಜಾತ್ಯಾತೀತ, ಸಮಾಜವಾದಿ ಜನಾಡಳಿತದ ಗಣರಾಜ್ಯವಾಗಿದೆ”…

ಇಲ್ಲಿ ಎಲ್ಲಿಯೂ ಭಾರತವು ಒಂದು ತಾಯಿ, ಮಾತೆ, ದೇವಿ, ಅವಳು ಕೇಸರಿ ಬಿಳಿ ಹಸಿರಿನ ಸೀರೆ ಉಟ್ಟಿದ್ದಾಳೆ, ಕೈಯಲ್ಲಿ ತ್ರಿಶೂಲ, ಹಣೆಯಲ್ಲಿ ಕುಂಕುಮ, ತಲೆಯಲ್ಲಿ ಬಂಗಾರದ ಕಿರೀಟ ಇಟ್ಟ ಅವಳು ಸಿಂಹ ವಾಹಿನಿ ಎಂದು ಎಲ್ಲಿಯೂ ಹೇಲಿಲ್ಲ ಯಾಕೆ ಗೊತ್ತಾ..?

ಭಾರತ ಸಂವಿಧಾನವು ಎಲ್ಲಾ ಜಾತಿ, ಧರ್ಮ ಮತಗಳ ಮೀರಿ ನಿಂತ ಅದೊಂದು ವಿಶ್ವಮಾನವ..
ನಮ್ಮೆಲ್ಲರೊಳಗಿರುವ ದೇಶ ಪ್ರೇಮವನ್ನು ದೇಶ ಭಕ್ತಿಯಾಗಿ ಬದಲಾಯಿಸಿ ಅದಕ್ಕೊಂದು ಹೆಣ್ಣಿನ ರೂಪವ ಕೊಟ್ಟು, ಅವಳು ಹೀಗೇ ಇದ್ದಾಳೆ ಎಂಬ ಮೂರ್ತಿಯ ಮಾಡಿ ಪೂಜಿಸುವ ಈ ಮೂಡ ಮತಿಗಳಿಗೆ ನಾ ಎನೆಂದು ಹೇಳಬೇಕು ???

ಭಾರತವು ಮಾತೆ ಅಲ್ಲ, ಇದೊಂದು ದೇಶ ಅಷ್ಟೇ ..
ನಾವೆಲ್ಲರೂ ಅವಳ ಮಕ್ಕಳಲ್ಲ, ಅದರ ಪ್ರಜೆಗಳು..
ನಮಗೆ ವೇದ ಉಪನಿಷತ್ತುಗಳ ಮಂತ್ರ ಪಠಣಗಳು ಬೇಕಾಗಿಲ್ಲ.. ಬದಲಿಗೆ ಸರ್ವರಿಗೂ ಸಮಾನತೆಯ ಸಾರುವ ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳ ನಿತ್ಯ ಪಠಣ ಬೇಕು…

ಹೌದು ನಾವು ಭಾರತೀಯರು..
ನಮಗೆ ಭಾರತವು ನಮ್ಮ ಪ್ರೀತಿಯ ದೇಶವೇ ಹೊರತು ನೀವು ಹಾಕಿದ ದೇವಿ ವೇಷದ ತಾಯಿ ಅಲ್ಲ ..
ನಿಮ್ಮಗಳ ಪುರೋಹಿತ ಶಾಯಿ ಅಧಿಕಾರದ ಬೇಳೆ ಬೇಹಿಸಿಕೊಳ್ಳಲು ಈ ತಾಯಿ, ದೇವತೆ ಎಂಬ ಹೆಸರಿಟ್ಟು ದಯವಿಟ್ಟು ನಮ್ಮನ್ನು ಮೂಡ ಕುರಿಗಳನ್ನಾಗಿಸಬೇಡಿ…

ಹೌದು, ನಿಮಗೆ ಅಷ್ಟೊಂದು ಭಕ್ತಿ, ಪ್ರೀತಿ, ಜನಪರ ಖಾಳಜಿ ಇದ್ದಲ್ಲಿ ಲೋಕ ಕಲ್ಯಣಕ್ಕಾಗಿ ಮಾಡುವ ಈ ಯಜ್ಞ ,ಯಾಗ, ಹೋಮ, ಹವನ, ಮಂತ್ರ ತಂತ್ರಗಳ ಬದಲು ನಿಮ್ಮ ತಾಯಿ ಭಾರತಿಯ ಮೆದಳಿನಂತಿರುವ ಸಂವಿಧಾನ, ಅದರ ಉದ್ದೆಶಗಳು, ಪ್ರತಿಯೊಬ್ಬ ಪ್ರಜೆಯ ಹಕ್ಕು ಕರ್ತವ್ಯಗಳನ್ನು ತಿಳಿಸುವ ಜನ ಜಾಗೃತ ಮಾಡಿ ನೋಡೋಣ ..

ಇಲ್ಲ ನೀವು ಹಾಗೆ ಮಡುವುದಿಲ್ಲ ಬಿಡಿ, ಯಾಕೆಂದರೆ ಅಲ್ಲಿರುವ ಸತ್ಯ ಸಂಗತಿಗಳು ಅವಶ್ಯಕತೆ ನಿಮಗಿಲ್ಲ.. ತಾಯಿ, ದೇವಿ, ಭಕ್ತಿ ಪೂಜೆ ಎಂದು ಎಲ್ಲರ ಮನಸ್ಸಿನ ಭಾವನೆಗಳ ಮೇಲೆ ವೈದಿಕತೆಯ ತುಂಬಿ ಕೋಮುವಾದಗಳ ಚಲ್ಲಾಟ ಆಡಿ ಮುಗ್ದ ಜನರ ಕಣ್ಣುಗಳಿಗೆ ನಿಮ್ಮ ಕುಂಕುಮ ಭಂಡಾರಗಳ ಉಗ್ಗಿ , ಅವರ ದೃಷ್ಟಿಯನ್ನೆ ಮಂಕು ಗೊಳಿಸಿದ್ದೀರಿ..ವಿಶ್ವಮನವೀಯತೆಯ ಸಾರಿದ ನಮ್ಮ ಸಂವಿಧಾನದ ನಿಜ ಆಶಯಗಳನ್ನು ಮುಚ್ಚಿಟ್ಟು ನಿಮ್ಮ ಸಂಕುಚಿತ ಧರ್ಮಾಂಧತೆಯ ಬಿತ್ತುವಲ್ಲಿ ನೀವು ಯಶಸ್ವಿಯಾಗಿದ್ದಿರಿ ..

ಸಾಕು ಸಾಕಿನ್ನು…ನೀವು ಹೇಳಿದಂತೆ ದೇಶ ಭೂಮಿ ನೀರು ಗಾಳಿ ಬೆಳಕು ಯಾವುದು ದೇವರಲ್ಲ.. ಅವು ನಮಗೆ ನಮ್ಮ ದೇಶಾಭಿವೃದ್ದಿಗೆ, ದುಡಿಯುವ ಕೈ ಮನಗಳಿಗೆ ನ್ಯಾಯ ಒದಗಿಸಿ ಕೊಡಬಲ್ಲ ನಿಷ್ಪಕ್ಷಪಾತ ಸಂಪನ್ಮೂಲಗಳು …

ಜಪಾನ್ ಚೀನ, ಸಿಂಗಾಪುರ್, ಇಂಗ್ಲೆಂಡ್, ಫ್ರಾನ್ಸ್, ಅಮೆರಿಕ, ಕೆನಡ ದೇಶಗಳಂತೆ ನನ್ನದು ಒಂದು ದೇಶ.. ನನ್ನದು ಒಂದು ಭಾಷೆ..ಅವರಂತೆ ನನ್ನದು ಒಂದು ದೇಶ ಪ್ರೇಮದ ಭಾವನೆ..

ಹೇ ಢಾಂಭಿಕ ರಾಷ್ಟ್ರ ಭಕ್ತರೇ ದಯವಿಟ್ಟು ಹೊರ ಬನ್ನಿ.. ನಾವೆಲ್ಲರೂ ವಿಶ್ವ ಮಾನಾವಾರಾಗೋಣ..
ಗಡಿ ಭಾಷೆ ಜಾತಿ ಧರ್ಮಗಳ ಎಲ್ಲೆಗಳ ಮೀರಿ ನಮ್ಮ ಸಂವಿಧಾನದ ವಿಶ್ವಮಾನವತೆಯ ತತ್ವಗಳ ಪರಿಪಾಲಕರಾಗೋಣ..

ಯುವಕರು ಚಿಕ್ಕ ಮಕ್ಕಳೆಲ್ಲಾ ಸೇರಿ ಇಂದಿನಿಂದ ನಮ್ಮ ಹಕ್ಕು ಕರ್ತವ್ಯಗಳ ನಿತ್ಯ ಪಠಣ ಮಾಡಿ ಅವುಗಳ ಮೂಲ ಉದ್ದೇಶಗಳ ನೆರವೇರಿಸೋಣ…
ದಿನವು ನಿಮ್ಮ ನಮ್ಮಗಳ ಧರ್ಮಗ್ರಂಥಗಳ ಜೋತೆಗೆ ಸಂವಿಧಾನದ ಅಧ್ಯಾಯಗಳನ್ನೂ, ಶಾಸನ(articles)ಗಳನ್ನು ಓದಿ ಜಾಗೃತರಾಗಿ ಅದರ ಸದುದ್ದೇಶಗಳ ಬಗ್ಗೆ ಅರಿತು ಪ್ರಭುದ್ಧ ಭಾರತವ ಕಟ್ಟೋಣವೇ..???

ಜಯ ವಿಶ್ವ ಮಾನವ..
ಅಪ್ಪ #ಬಸವರಾಜರ ವಿಶ್ವಮಾನವ ಸಂದೇಶಗಳ ಮೂಲ ಮಂತ್ರವಾದ #ಸಕಲಜೀವಾತ್ಮರಿಗೂಲೇಸಾಗಲಿ ಎಂಬುದ ನೆನೆದು..

ಅಪ್ಪ_ಅಂಬೇಡ್ಕರ್ ಅವರ ಮನಸ್ಸಿನಲ್ಲಿದ್ದ ಸಮಾನತೆಯ ತತ್ವಗಳನ್ನು ವಾಸ್ತವದಲ್ಲಿ ಜಾರಿಗೆ ತರಲು ಪ್ರಯತ್ನಿಸೋಣ…

ಆಗ ಮಾತ್ರ ಗಣಾರಾಜ್ಯೋತ್ಸವವ ಅರ್ಥಪೂರ್ಣವಾಗಿ ಆಚರಿಸಿದಂತೆ…

ನಿಮ್ಮಗಳ ಮನದಲ್ಲಿ ಮುಚ್ಚಿಟ್ಟ ವಿಶ್ವಮಾನವೀಯತೆಯ ಮಹಾ ಮನಸ್ಸಿಗೆ ಶರಣು ಶರಣಾರ್ಥಿಗಳು…

ದೀಪ್ತಿ ಎಸ್ ಪಾಟೀಲ್ (ವಿದ್ಯಾರ್ಥಿನಿ)
ಬಸವ ಪ್ರಿಯಳು..

3 thoughts on “ಭಾರತ ನನ್ನ ತಾಯಿ ಮಾತೆ-ದೇವಿ-ಅಲ್ಲ

 1. ಬಸವಪ್ರಿಯೆ ದೀಕ್ಷಾ ಗೆ ಅಭಿನಂದನೆಗಳು.ಶರಣಾರ್ಥಿಗಳು.ನೀನು ವಯಸಲಿ ಚಿಕ್ಕವಳಾದರೂ ಜ್ಞಾನದಲಿ ಹಿರಿಯಳು.ಲೇಖನ ಓದಿ ಖುಷಿಯಾಯಿತು.
  ನೂರು ದೇವರ ನೂಕಾಚೆ ದೂರ!
  ಭಾರತ ಮಾತೆಯ ಪೂಜಿಸುವ ಬಾರ!
  ಎಂಬ ಕುವೆಂಪು ಅವರ ಸಾಲುಗಳು ನೆನಪಾದವು.
  ಹೀಗೇ ಬರೀತಾ ಇರು ಮಗಳೇ!

 2. ಮೂಲಭೂತವಾದಕ್ಕೆ ಅಂಟಿಕೊಳ್ಳದೆ ಇಂಥಹ ಆಲೋಚನೆಗಳು ಎಲ್ಲರಲ್ಲೂ ಮೂಡಬೇಕಾಗಿದೆ

 3. ಇಂದುಮತಿ ಅವರ ಸಾಲುಗಳು ಸರಿ ಇವೆ. ಕುವೆಂಪು ಅವರ ಪದ್ಯದ ಸಾಲುಗಳು ಹೆಚ್ಚ್ ಸೂಕ್ತವಾಗಿವೆ.
  ಕುವೆಂಪು ಅವರಷ್ಟು ತಿಳಿವಳಿಕೆ ನಮ್ಮಲ್ಲಿ ಇಲ್ಲಾ, ಅವರೆ ಹೇಳಿದ್ದಾರೆ, ತಾಯಿ ಭಾರತೀಯ ಪೂಜಿಸೋಣ ಬಾರಾ ಅಂತಾ.
  ಬರಹಗಾರ್ತಿಗೆ ಕುವೆಂಪು ಅವರ ಸಾಲುಗಳು ಅರ್ಥವಾದರೆ ಸಾಕು 🙏🇮🇳🙏

Leave a Reply

Your email address will not be published. Required fields are marked *

error: Content is protected !!