ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಶಿಕ್ಷಕರ ನೇಮಕಾತಿ ಮತ್ತು ಬಡ್ತಿಗೆ ಯುಜಿಸಿಯ ಹೊಸ ಮಾನದಂಡ

~ ಡಾ. ಜೆ ಎಸ್ ಪಾಟೀಲ

ವಿಶ್ವವಿದ್ಯಾಲಯ ಅನುದಾನ ಆಯೋಗವು ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಶಿಕ್ಷಕರ ನೇಮಕಾತಿ ಮತ್ತು ಬಡ್ತಿಗೆ ಹೊಸ ಮಾನದಂಡವೊಂದನ್ನು ಅನುಷ್ಠಾನಗೊಳಿಸಿದೆ. ಸೆಪ್ಟೆಂಬರ್ 16 2019 ರಂದು ಯುಜಿಸಿ ಈ ಕುರಿತು ದೇಶದ ಎಲ್ಲ ವಿಶ್ವವಿದ್ಯಾಲಯಗಳಿಗೆ ಸುತ್ತೋಲೆಯೊಂದನ್ನು ರವಾನಿಸಿದೆ. ಈ ಸುತ್ತೋಲೆಯ ಪ್ರಕಾರ ಇನ್ನು ಮುಂದೆ ಕಾಲೇಜುಗಳ ಮತ್ತು ವಿಶ್ವವಿದ್ಯಾಲಯಗಳ ಶಿಕ್ಷಕರ ನೇಮಕಾತಿ ಮತ್ತು ಬಡ್ತಿಗಳನ್ನು ಯುಜಿಸಿ ಪರಿಸ್ಕರಿಸಿˌ ಅನುಮೋದಿಸಿ ಪ್ರಕಟಿಸಿದ 800 ಸಂಶೋಧನಾ ನಿಯತಕಾಲಿಕಗಳಲ್ಲಿ ಮಾತ್ರ (ಜರ್ನಲ್ಸ್) ಶಿಕ್ಷಕ ನೇಮಕಾತಿಯ ಅಭ್ಯರ್ಥಿ ಅಥವ ಬಡ್ತಿ ಹೊಂದಬಯಸುವ ಶಿಕ್ಷಕ ತಮ್ಮ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವುದು ಕಡ್ಡಾಯಗೊಳಿಸಲಾಗಿದೆ.

ಸರಕಾರ ನೇಮಿಸಿದ ಯುಜಿಸಿಯ ಹೊಸ ಶೈಕ್ಷಣಿಕ ಸಂಶೋಧನಾ ನೀತಿಶಾಸ್ತ್ರ ಒಕ್ಕೂಟವು (UGC-CARE : Consortium for Academic Research and Ethics) ಸಂಶೋಧನಾ ನಿಯತಕಾಲಿಕಗಳ ಪರಿಷ್ಕ್ರತ ಪಟ್ಟಿಯೊಂದನ್ನು ತಯ್ಯಾರಿಸಿದೆ. ಯುಜಿಸಿಯ ಈ ಒಕ್ಕೂಟದಲ್ಲಿ ದೇಶದ ವಿವಿಧ ಭಾಗದ ಉನ್ನತ ಶಿಕ್ಷಣ ಸಂಶೋಧನಾ ತಜ್ಞರುˌ ವಿಷಯ ತಜ್ಞರು ಮತ್ತು ಶಿಕ್ಷಣ ತಜ್ಞರ ಸಮೂಹ ಯುಜಿಸಿ ಈ ಹಿಂದೆ ಅನುಮೋದಿಸಿ ಪ್ರಕಟಿಸಿದ 5000 ಸಂಶೋಧನಾ ಜರ್ನಲ್ಲಗಳನ್ನು ಕೂಲಂಕುಶವಾಗಿ ತಪಾಸಿಸಿ ಅವುಗಳಲ್ಲಿ ಅರ್ಹ ಮತ್ತು ಗುಣಮಟ್ಟವುಳ್ಳ ಕೇವಲ 800 ಜರ್ನಲ್ಲಗಳು ಮಾತ್ರ ಸಂಶೋಧನಾ ಪ್ರಬಂಧಗಳ ಪ್ರಕಟಣೆಗೆ ಯೋಗ್ಯವೆಂದು ತೀರ್ಮಾನಿಸಿದೆ. ಅಂದರೆ ಯುಜಿಸಿ ಈ ಹಿಂದೆ ಅನುಮೋದಿಸಿ ಪ್ರಕಟಿಸಿದ ಜರ್ನಲ್ಲಗಳ ಪೈಕಿ ಶೇಕಡ 88 ರಷ್ಟು ಜರ್ನಲ್ಲಗಳು ಪರಭಕ್ಷಕ (predatory) ಎಂದು ಗುರುತಿಸಿ ಅವುಗಳ ಅನುಮೋದನೆಯನ್ನು ತಿರಸ್ಕರಿಸಲಾಗಿದೆ.

ಈಗಾಗಲೇ ವಿಶ್ವವಿದ್ಯಾಲಯಗಳ ಶಿಕ್ಷಕರ ನೇಮಕಾತಿ ಮತ್ತು ಬಡ್ತಿಯಲ್ಲಿ ಯುಜಿಸಿ ಗುರುತಿಸಿ ನಿಗದಿಗೊಳಿಸಿದ ಶಿಕ್ಷಕರ ಶೈಕ್ಷಣಿಕ ಕಾರ್ಯನಿರ್ವಹಣೆಯ ಸೂಚ್ಯಂಕ(Academic Performace Index)ವನ್ನು ಅನುಸರಿಸಲಾಗುತ್ತಿದೆ. ಇದರೊಂದಿಗೆ ಈಗ ಅನುಷ್ಠಾನಗೊಳಿಸಿದ ಹೊಸ ಮಾನದಂಡವನ್ನೂ ಕೂಡ ಪರಿಗಣಿಸಬೇಕೆಂದು ದೇಶದ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಅವುಗಳ ಅಧೀನ ಕಾಲೇಜುಗಳಿಗೆ ಯುಜಿಸಿ ನೋಟೀಸ್ ಜಾರಿಗೊಳಿಸಿದೆ. ಈ ಮೊದಲು ಶಿಕ್ಷರಕ ನೇಮಕಾತಿ ಮತ್ತು ಬಡ್ತಿಗಾಗಿ ಅಭ್ಯರ್ಥಿ ಪ್ರಕಟಿಸಿದ ಸಂಶೋಧನಾ ಪ್ರಬಂಧಗಳ ಸಂಖ್ಯೆಯನ್ನು ಮಾತ್ರ ಪರಿಗಣಿಸಲಾಗುತ್ತಿತ್ತೆ ವಿನಃ ಆ ಪ್ರಬಂಧಗಳ ಗುಣಮಟ್ಟ ಮತ್ತು ಅವು ಪ್ರಕಟಗೊಂಡ ಜರ್ನಲ್ಲಗಳ ಗುಣಮಟ್ಟ ನಗಣ್ಯವಾಗಿತ್ತು. ಇದು ನಿಮ್ನ ಗುಣಮಟ್ಟದ ಸಂಶೋಧನಾ ಚಟುವಟಿಕೆಗಳಿಗೆ ಆಸ್ಪದ ನಿಡಿತು ಎನ್ನುತ್ತಾರೆ ಯುಜಿಸಿಯ ಉಪ ಕಾರ್ಯಾದ್ಯಕ್ಷ ಭೂಷಣ್ ಪಟವರ್ಧನ್.

ಈ ಹೊಸ ಮಾನದಂಡ ಅನುಷ್ಠಾನಗೊಳಿಸಿದ್ದರ ತಾರ್ತಿಕ ಹಿನ್ನೆಲೆ ಏನೆಂದರೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಶಿಕ್ಷಕರ ಸಂಶೋಧನಾ ಗುಣಮಟ್ಟ ಹೆಚ್ಚಿಸುವುದು ಮತ್ತು ಈಗಿರುವ ಕಳಪೆ ಶೈಕ್ಷಣಿಕ ನಿರ್ವಹಣೆಯನ್ನು ಕೊನೆಕೊಳಿಸುವುದು ಎನ್ನುತ್ತಾರೆ ಪಟವರ್ಧನ್ ಅವರು. ಇನ್ನುಮುಂದೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಯುಜಿಸಿ ಪರಿಷ್ಕರಿಸಿˌ ಅನುಮೋದಿಸಿ ಪ್ರಕಟಿಸಿದ ಪಟ್ಟಿಯೊಳಗಿರುವ ಜರ್ನಲ್ಲಗಳಲ್ಲಿ ಪ್ರಕಟಗೊಂಡ ಸಂಶೋಧನಾ ಪ್ರಬಂಧಗಳನ್ನಾಧರಿಸಿಯೆ ಶಿಕ್ಷಕರ ನೇಮಕಾತಿ ಮತ್ತು ಬಡ್ತಿ ಪ್ರಕ್ರೀಯೆಗಳು ನಡೆಯಲಿವೆ ಎನ್ನುವ ಪಟವರ್ಧನ್ ಅವರುˌ ಒಂದು ವೇಳೆ ಗುಣಮಟ್ಟದ ಸಂಶೋಧನಾ ಪ್ರಬಂಧಗಳು ಯಾವುದೊ ತಪ್ಪಿನಿಂದ ಪಟ್ಟಿಯೊಳಗಿಲ್ಲದ ಪರಭಕ್ಷಕ ಜರ್ನಲ್ಲಗಳಲ್ಲಿ ಪ್ರಕಟಗೊಂಡಿದ್ದರೆ ಅಂಥ ಅಭ್ಯರ್ಥಿಗಳ ಸಂಶೋಧನಾ ಪ್ರಬಂಧವನ್ನು ಉನ್ನತ ಮಟ್ಟದ ತಜ್ಞರ ಸಮಿತಿಯ ಪರಿಶೀಲನೆಗೊಳಪಡಿಸಲಾಗುವುದು ಎನ್ನುತ್ತಾರೆ.

ಯುಸಿಜಿ ಈ ಹಿಂದೆ ಅನುಮೋದಿಸಿದ ಜರ್ನಲ್ಲಗಳ ಪಟ್ಟಿಯನ್ನು ಅದರ ಜಾಲತಾಣದಿಂದ ಬದಲಿಸಿ ಹೊಸ ಪರಿಷ್ಕ್ರತ ಪಟ್ಟಿ ಪ್ರಕಟಿಸಲಾಗಿದೆ. ಈ ಪರಿಷ್ಕ್ರತ ಪಟ್ಟಿಯಲ್ಲಿ ಮೊದಲಿದ್ದ 5000 ಸಂಶೋಧನಾ ಜರ್ನನಲ್ಲಗಳ ಬದಲಿಗೆ 800 ಸಂಶೋಧನಾ ಜರ್ನಲ್ಲಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇನ್ನು ಮುಂದೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ನೇಮಕಾತಿ ಮತ್ತು ಬಡ್ತಿ ಪ್ರಕ್ರೀಯೆಗಳಲ್ಲಿ ಈ ಹೊಸ ಮಾನದಂಡವನ್ನು ಜೂನ್ 14 2019 ರಿಂದ ಹೊಸ ಪಟ್ಟಿಯೊಳಗಿರುವ ಜರ್ನಲ್ಲಗಳಲ್ಲಿ ಪ್ರಕಟವಾಗಿರುವ ಸಂಶೋಧನಾ ಪ್ರಬಂಧಗಳು ಮಾತ್ರ ಪರಿಗಣಿಸಲಾಗುವುದು ಎಂದು ಯುಜಿಸಿ ತಿಳಿಸಿದೆ. ಇನ್ನು ಮುಂದೆ ಬಡ್ತಿ ಬಯಸುವ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಶಿಕ್ಷಕರ ಸಂಶೋಧನಾ ಪ್ರಬಂಧಗಳು ಹೊಸ ಪರಿಷ್ಕ್ರತ ಪಟ್ಟಿಯೊಳಗಿರುವ ಜರ್ನಲ್ಲಗಳಲ್ಲಿ ಪ್ರಕಟವಾಗಿರದಿದ್ದರೆ ಅಂಥವರ ಬಡ್ತಿ ಅರ್ಜಿಯನ್ನು ತಿರಸ್ಕರಿಸಿˌ ಅಂಥ ಶಿಕ್ಷಕರ ಬಡ್ತಿಯನ್ನು ಹೊಸ ಮಾನದಂಡದನ್ವಯ ನಿರಾಕರಿಸಬಹುದಾಗಿದೆ ಎನ್ನುತ್ತವೆ ಯುಜಿಸಿ ಮೂಲಗಳು.

ಹೊಸ ಮಾನದಂಡ ಅನುಷ್ಠಾನಕ್ಕೆ ಬಂದಿದ್ದರ ಹಿನ್ನೆಲೆ :

2018 ರಲ್ಲಿ ಮಹಾರಾಷ್ಟ್ರದ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಶಿಕ್ಷಣತಜ್ಞರು ಒಂದು ಸರ್ವೇಕ್ಷಣೆಯನ್ನು ಮಾಡಿದ್ದರು. ಅವರ ಸರ್ವೇಕ್ಷಣೆಯ ಫಲಿತಾಂಶದ ಪ್ರಕಾರ ಯುಜಿಸಿ ಅನುಮೋದಿಸಿದ ಸಂಶೋಧನಾ ಜರ್ನಲ್ಲಗಳ ಪಟ್ಟಿಯಲ್ಲಿನ ಶೇಕಡ 88 ರಷ್ಟು ಜರ್ನಲ್ಲಗಳು ಪರಭಕ್ಷಕ ಅಥವ ನಿಮ್ನ ಗುಣಮಟ್ಟ ಉಳ್ಳವು ಎನ್ನುವುದು ಬೆಳಕಿಗೆ ಬಂದಿತ್ತು. 5699 ಜರ್ನಲ್ಲಗಳಲ್ಲಿ ಸ್ವೆಚ್ಛೆಯಾಗಿ 1336 ಜರ್ನಲ್ಲಗಳನ್ನು ಸರ್ವೇಕ್ಷಣೆಗೊಳಪಡಿಸಿದ್ದ ಶಿಕ್ಷಣ ತಜ್ಞರು 1009 ಜರ್ನಲ್ಲಗಳನ್ನು ವಿವಿಧ ಕಾರಣಗಳಿಂದ ಕಳಪೆ ಎಂದು ಪರಿಗಣಿಸಿದ್ದರು. ಸಂಶೋಧನಾ ಜರ್ನಲ್ಲಗಳಿಗೆ ಮೂಲಭೂತವಾಗಿ ಇರಬೇಕಾದ ಅಗತ್ಯ ಮಾಹಿತಿಗಳಾದ ಸೂಕ್ತ ವಿಳಾಸˌ ಜಾಲತಾಣ ವಿವರಣೆˌ ಸಂಪಾದಕರ ಹೆಸರು ಇತ್ಯಾದಿಗಳ ಕೊರತೆಯನ್ನು ಪತ್ತೆಹಚ್ಚಲಾಗಿತ್ತು. ಇನ್ನೂ ಕೆಲವು ಜರ್ನಲ್ಲಗಳು ತಪ್ಪು ಮಾಹಿತಿಯನ್ನು ನೀಡಿದ್ದವು. ಅಂತರಾಷ್ಟ್ರೀಯ ಗುಣವತ್ ಸರಣಿ ಸಂಖ್ಯೆ (Internatioal Standard Serial Number:ISSN), ಜರ್ನಲ್ನ ಪರಿಣಾಮ ಅಂಶ (Impact Factor), ಸೂಚ್ಯಂಕಗಳ ತಪ್ಪು ಮಾಹಿತಿˌ ಮುಂತಾದ ಅನೇಕ ಮಾಹಿತಿಗಳನ್ನಾದರಿಸಿ ಮಾಡಿದ ಈ ಸರ್ವೇಕ್ಷಣಾ ವರದಿಯನ್ನು ಕರೆಂಟ್ ಸಾಯನ್ಸ್ ಎಂಬ ಖ್ಯಾತ ಜರ್ನಲ್ಲನಲ್ಲಿ ಪ್ರಕಟಿಸಲಾಗಿತ್ತು.

Young indian student at the university.

ಇಂದಿನ ಯುಜಿಸಿಯ ಉಪ ಕಾರ್ಯಾದ್ಯಕ್ಷ ಭೂಷಣ್ ಪಟವರ್ಧನ್ ಅವರೂ ಕೂಡ ಈ ಪ್ರಕಟಿತ ವರದಿಯ ಒಬ್ಬ ಲೇಖಕರಾಗಿದ್ದದ್ದು ವಿಶೇಷ. ಈ ಸರ್ವೇಕ್ಷಣಾ ವರದಿ ಪ್ರಕಟಣೆಯ ನಂತರ ಯುಜಿಸಿಗೆ ಅಪಾರ ಸಂಖ್ಯೆಯ ದೂರುಗಳು ಬರತೊಡಗಿದವು. ಸದರಿ ಸರ್ವೇಕ್ಷಣಾ ವರದಿಯ ಅನ್ವಯ ಶೈಕ್ಷಣಿಕ ಸಂಶೋಧನೆಗಳ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಶಿಕ್ಷಣತಜ್ಞರು ಕಳವಳ ವ್ಯಕ್ತಪಡಿಸಿದ್ದರು. ಸರ್ಷೇಕ್ಷಣಾ ವರದಿಯ ಲೇಖಕರು ಯುಜಿಸಿಗೆ ತನ್ನ ಅನುಮೋದಿಸಿ ಪ್ರಕಟಿಸಿದ ಸಂಶೋಧನಾ ಜರ್ನಲ್ಲಗಳ ಪಟ್ಟಿಯನ್ನು ಮರುಪರಿಶೀಲಿಸಲು ಒತ್ತಡ ಹಾಕಿದ್ದರು. ಆ ಕಾರಣದಿಂದ ಯುಜಿಸಿ ತಜ್ಞರ ಸಮಿತಿಯೊಂದನ್ನು ರಚಿಸಿ ಹಳೆ ಪಟ್ಟಿಯನ್ನು ಪರಿಷ್ಕರಿಸಿ ಹೊಸ ಪಟ್ಟಿಯನ್ನು ಪ್ರಕಟಿಸಿದೆ.

~ ಡಾ. ಜೆ ಎಸ್ ಪಾಟೀಲ

9 thoughts on “ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಶಿಕ್ಷಕರ ನೇಮಕಾತಿ ಮತ್ತು ಬಡ್ತಿಗೆ ಯುಜಿಸಿಯ ಹೊಸ ಮಾನದಂಡ

  1. ನೇಮಕಾತಿ ಹೊಂದಿದ 2016 ನಂತರ ಪಿಎಚ್ ಡಿ ಪಡೆದವರು, ಬಡ್ತಿ ಪಡೆಯುವ ಬಗ್ಗೆ ತಿಳಿಸಿರಿ

 1. ಸರ್
  ಇದರಲ್ಲಿ ತಪ್ಪು ಮಾಹಿತಿ ಇದೆ. UGC ಯ CARE List ಒಳಗೊಂಡಿರುವುದು ಕೇವಲ ೮೦೦ ಜರ್ನಲ್ ಗಳಲ್ಲ. Scopus ಮತ್ತು Web of Science ದತ್ತಾಂಶಗಳು ಒಳಗೊಂಡಿರುವ ಜರ್ನಲ್ ಗಳ ಸಂಖ್ಯೆ 30000. ಕ್ಕೂ ಅಧಿಕ. ಇದರ ಜೊತೆಗೆ ದೇಶದ ಇತರ ಜರ್ನಲ್ ಗಳನ್ನು ಕೂಡ ಕೇರ್ ಲಿಸ್ಟ್ ಒಳಗೊಂಡಿದೆ. ಒಟ್ಟು ೩೦೮೦೦೦ ಕ್ಕೂ ಅಧಿಕ ಜರ್ನಲ್ ಗಳನ್ನು CARE List ಒಳಗೊಂಡಿದೆ.

  Web of Science ಮತ್ತು Scopus index ಮಾಡುವ ಯಾವ ಜರ್ನಲ್ ಗಳಲ್ಲಿ‌ನಿಮ್ಮ ಲೇಖನ ಪ್ರಕಟಿಸಿದರೆ ಅದನ್ನು ಪರಿಗಣಿಸಲಾಗುವುದು. Care list ನಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಎಂದು ಎರಡು ಭಾಗಗಳಿವೆ ಅದನ್ನು ನೋಡಿ.

  ವಂದನೆಗಳೊಂದಿಗೆ
  ವಸಂತ ರಾಜು ಎನ್
  ಗ್ರಂಥಪಾಲಕರು
  ಸ.ಪ್ರ.ದ. ಕಾಲೇಜು
  ತಲಕಾಡು
  9916882066

  1. ನಿಮ್ಮದು ಸರಿ. ಆದರೆ ನಾನು ಒಂದು ಸರ್ವೆ ಆಧರಿಸಿ ಪ್ರಕಟವಾದ ಲೇಖನವನ್ನು ಉಲ್ಲೇಖಿಸಿ ಅಂಕಿಅಂಶ ಕೊಟ್ಟಿದ್ದೇನೆ. ವಿಧಆ ಅದಕ್ಕಿಂತ ಹೆಚ್ಚಿನ ಪಟ್ಟಿ ನೀಡಿರಬಹುದು.

   1. ಸರ್
    ನೀವು ಪಟವರ್ಧನ್ ಮತ್ತು ಇತರರು current science ನಲ್ಲಿ ಪ್ರಕಟಿಸಿದ ಲೇಖನವನ್ನು ಉಲ್ಲೇಖಿಸಿದ್ದಿರಾ. ಅವರು ವಿಶ್ವವಿದ್ಯಾಲಯ ಗಳಿಂದ UGC approved list of journals ಗೆ ಸೇರಿಸಿದ set of journal ಗಳನ್ನು ಪರಿಗಣಿಸಿ ಬರೆದ ಲೇಖನ.

    ಹಿಂದಿನ ugc approved list of journals ನ ಪಟ್ಟಿ ಕೂಡ ನಲ್ವತ್ತು ಸಾವಿರದಷ್ಟು ಜರ್ನಲ್ ಗಳನ್ನು ಒಳಗೊಂಡಿತ್ತು. ಒಟ್ಟಾರೆ ನಾನು ಹೇಳುವುದು ಕೇರ್ ಲಿಸ್ಟ್ ನಿಮ್ಮ ಲೇಖನದಲ್ಲಿ ಹೇಳಿದಂತೆ ೮೦೦ ಜರ್ನಲ್ ಗಳಲ್ಲ ಅದು ತಪ್ಪು ಮಾಹಿತಿ.

    1. ಅದು ಯುಜಿಸಿ ಅಪ್ರ್ಯೂ ಮಾಡಿದ ಸಂಪೂರ್ಣ ಪಟ್ಟಿಯಲ್ಲ. ಸರ್ವೆಗೆ ಪರಿಗಣಿಸಿದ 5000 ಜರ್ನಲ್ಲಗಳ ಪೈಕಿ ಸರ್ವೆಗಾಗಿ ರ್ಯಾಂಡಂ ಆಗಿ ಬಳಸಿದ್ದು ಕೇವಲ 1300. ಅದರಲ್ಲಿ 800ಕ್ಕೂ ಮಿಕ್ಕು ಫೇಕ್ ಎಂದು ಹೇಳುವ ಲೇಖನವಿದು. ಅದರಲ್ಲೇನು ತಪ್ಪು ಮಾಹಿತಿ ಇಲ್ಲ. ಇಡೀ ಲೇಖನದ ಉದ್ದೇಶ ಅರ್ಥ ಮಾಡಿಕೊಂಡರೆ ಸಾಕು. ಅಂಕಿ ಅಂಶಗಳ ನಿಖರತೆಗೆ ಯುಜಿಸಿ ವೆಬ್ ನೋಡಿದರಾಯ್ತು.

 2. ಸರ್
  ನೀವು ಪಟವರ್ಧನ್ ಮತ್ತು ಇತರರು current science ನಲ್ಲಿ ಪ್ರಕಟಿಸಿದ ಲೇಖನವನ್ನು ಉಲ್ಲೇಖಿಸಿದ್ದಿರಾ. ಅವರು ವಿಶ್ವವಿದ್ಯಾಲಯ ಗಳಿಂದ UGC approved list of journals ಗೆ ಸೇರಿಸಿದ set of journal ಗಳನ್ನು ಪರಿಗಣಿಸಿ ಬರೆದ ಲೇಖನ.

  ಹಿಂದಿನ ugc approved list of journals ನ ಪಟ್ಟಿ ಕೂಡ ನಲ್ವತ್ತು ಸಾವಿರದಷ್ಟು ಜರ್ನಲ್ ಗಳನ್ನು ಒಳಗೊಂಡಿತ್ತು. ಒಟ್ಟಾರೆ ನಾನು ಹೇಳುವುದು ಕೇರ್ ಲಿಸ್ಟ್ ನಿಮ್ಮ ಲೇಖನದಲ್ಲಿ ಹೇಳಿದಂತೆ ೮೦೦ ಜರ್ನಲ್ ಗಳಲ್ಲ ಅದು ತಪ್ಪು ಮಾಹಿತಿ.

 3. These rules would have been implemented only after 2021 onwards. Especially for those who are appointed in 2006 will suffer a lot who are at the verge of becoming associate professors. Ph.D should be exempted for them to become associate professors. Because they have to get selected in the university for doing Ph.D. And it is a matter of 5 to 6 years for completing the Ph.D if they are selected now. It is unscientific and biased. It shows duel policy. It’s my earnest request to give exemption for 2006 appointed batch to become associate professors. Otherwise they will suffer & will be deprived from the placement.
  The dept. has to consider the matter genuinely. The KGCTA should open its eyes & consider the matter very seriously. If Ph.D be made mandatory for all, there is no value for research. There is a possibility of a great chance for money makers. But who are the real sufferers? Is it a quality assurance?

Leave a Reply

Your email address will not be published. Required fields are marked *

error: Content is protected !!