ಈ ಮಠಾಧೀಶರಿಗೆ ಯಾವ ರೋಗ ಬಡಿದಿದೆ ?

ಕೃಷ್ಣೆ ಹಾಗೂ ಭೀಮಾನದಿಗೆ ಹೆಚ್ಚು ನೀರು ಪ್ರವಹಿಸಿ ಜನ ಜೀವನ ಅಸ್ತವ್ಯಸ್ತವಾಗಿದೆ. ನದಿ ಹರಿಯುವ ಸ್ಥಾಲದಲ್ಲೆಲ್ಲ ಜನರು ಅಪಾರ ತೊಂದರೆಗೆ ಒಳಾಗಿದ್ದಾರೆ. ಮಳೆ ಇಲ್ಲದೆ ಕಂಗಾಲಾದರೆ, ಮಳೆ ಇಲ್ಲದೆ ನೆರೆ ಬಂದು ಹೈರಾಣಾಗಿದ್ದಾರೆ.

ಇಂತಹ ಕಂಗೆಟ್ಟ ಪರಿಸ್ಥಿತಿಯಲ್ಲಿ ಸ್ಪಂದಿಸಬೇಕಾದುದು ಮನುಷ್ಯರೆಲ್ಲರ ಕರ್ತವ್ಯ. ಎಲ್ಲಾ ಬಿಟ್ಟ ಮಗ ಭಂಗಿನೆಟ್ಟ ಎಂಬಂತೆ ಕೃಷ್ಣಾ ನದಿಯ ದಡಲ್ಲಿರುವ ಗುರ್ಜಾಲ ಸಿದ್ದಲಿಂಗೇಶ್ವರ ಶಾಖಾ ಮಠ ನೀರಡಗುಂಬ ವಿರಕ್ತ ಮಠದ ಸಿದ್ದಲಿಂಗ ಸ್ವಾಮಿ ಮೌನ ಅನುಷ್ಠಾನ ಮಾಡಿದ್ದಾರೆ.

ಜನ ನೆರೆಗೆ ,ಬರದಲ್ಲಿ ಹೋಯ್ಕೋ ಬಡ್ಕೋ ಮಾಡುವಾಗ ಈ ವಯ್ಯನದು ಮೌನ ಬೇರೆ ಕೇಡು. ಮೌನ ಮುಗಿದ ಮೇಲೆ ಲೋಕಕಲ್ಯಾಣಕ್ಕಾಗಿ ಎಂಬ ಪ್ರಚಾರಬೇರೆ. ಇಂಥ ಬುವ್ವಬಾಜಿ ಕೆಲಸಗಳನ್ನು‌ ಮಠಾಧೀಶರು ಬಿಟ್ಟು ಬಿಡಬೇಕು. ಇವರು ಮೌನ, ಮಾಡುವುದು, ಮತ್ತೆ ಇವರನ್ನು‌ ಮೌನದಿಂದ ಎಬ್ವಿಸುವುದು ಅರ್ಥವಿಲ್ಲದ ಕೆಲಸಗಳು. ಜನಗಳಿಗೂ ಬುದ್ದಿ ಇಲ್ಲ. ಮೌನ ವ್ರತ ಮಾಡಿದರೆ ಇವರಿಗೇನು ಲಾಭ ?

ಕವಿ ಸಾಧಕರೆಲ್ಲ ಕಳವಳಿಸಿ ಕೆಟ್ಟರು

ವಿದ್ಯೆ ಸಾಧಕರೆಲ್ಲ ಬುದ್ದಿ ಹೀನರಾದರು

ಪವನ ಸಾಧಕರೆಲ್ಲ ಹದ್ದುಕಾಗೆಗಳಾದರು

ಜಲ ಸಾಧಕರೆಲ್ಲ ಕಪ್ಪೆ ಮೀನುಗಳಾದರು

ಅಲ್ಲಮ ಪ್ರಭುವಿನ ವಿಚಾರದಂತೆ ಮೌನ ಸಾಧಕರು ಬಹಳವಾದರೆ ತಾವು ಯಾವುದೆ ಘಟನೆ, ಸಂಗತಿಗಳಿಗೆ ಯಾವುದೆ ರೀತಿಯ ಪ್ರತಿಕ್ರಿಯೆ ನೀಡದ ಮಟ್ಟಿಗೆ ಕಲ್ಲಾಗುತ್ತಾರೆ ಅಷ್ಟೆ. ಇದರಿಂದ ಜನ ಸಾಮಾನ್ಯನಿಗೆ ಏನು ಉಪಯೋಗ ? ಸ್ವಾಮೀಜಿಗಳಾದವರು ಸಾರ್ವಜನಿಕರ ಬದುಕಿಗೆ ಮೌಲ್ಯ ತಂದು ಕೊಡಲಿಕ್ಕೆ ಇದ್ದಾರೆಯೆ ಹೊರತು ಮತ್ಯಾವುದಕ್ಕೂ ಅಲ್ಲ. ಬರೀ ಸ್ವಕಾರ್ಯವನ್ನು ಮಾಡುವಂತ್ತಿದ್ದರೆ ಮಠದೊಳಗೆ ಇರುವುದನ್ನು ಬಿಟ್ಟು ಬೇರೆ ಇನ್ನೇನೋ ಕೆಲಸ ಮಾಡಲಿ. ಆಗ ಹದ್ದಿನಂತೆ ಗಾಳಿಯಲ್ಲಿ ತೇಲಾಡಲಿ. ಕಪ್ಪೆಯಂತೆ ಮೀನಿನಂತೆ ನೀರಿನಲ್ಲಿ ಈಜಾಡಲಿ ಬೇಡ ಅಂದವರು ಯಾರು ? ಇವರ ಮೌನ ಅನುಷ್ಠಾನ ಅವರಿಗೆ ಒಳಿತನ್ನು ಉಂಟು ಮಾಡಬಹುದೆ ಹೊರತು, ಸಮಾಜಕ್ಕೆ ಎಳ್ಳಷ್ಟು ಉಪಯೋಗವಿಲ್ಲ. ಮತ್ತಷ್ಟು ಮೌಢ್ಯ(ಕಸ)ವನ್ನು ಹಾಕುವ ಕೆಲಸವನ್ನು ಮಾಡುತ್ತಾರೆ.

ಜನ ಸಾಮಾನ್ಯರಾದ ಭಕ್ತರಲ್ಲಿ ಸಾವಿರಾರು ಸಮಸ್ಯೆಗಳಿವೆ. ಮೌಢ್ಯಗಳಿವೆ. ಇವುಗಳ ಕುರಿತು ಮಠಾಧೀಶರು ಯೋಚಿಸಬೇಕು. ನೂರಾರು ಜನ ಮಠಾಧಿಪತಿಗಳು, ಮೌನದ ಮೂಲಕ ಇವರೇನೋ ಕಡಿದು ಕಟ್ಟಿ ಹಾಕಿದರು ಎಂದು ಸನ್ಮಾನಿಸಿ ಗೌರವಿಸುವುದು ನೋಡಿದರೆ, ಇವರಿಗೆ ನಾಚಿಕೆ ಗೀಚಿಕೆ ಏನೂ ಇದ್ದಂತ್ತಿಲ್ಲ !?

ಈ ಗಿಮಿಕ್ ಬಹಳ ದಿನ ನಡೆಯೋದಿಲ್ಲ.

೦ ವರದಿಗಾರ

Leave a Reply

Your email address will not be published. Required fields are marked *

error: Content is protected !!