ಸತ್ಯಂಪೇಟೆ ಕುಟುಂಬದ ರಕ್ಷಣೆಯ ಹೊಣೆ ಯಾರಿಗೆ ?

ಸತ್ಯಂಪೇಠ ಕುಟುಂಬ ಹಾಗು ಕಾಯದೆ

ಅವರೊಬ್ಬ ಲಿಂಗಾಯತ ಗಣಾಚಾರಿ, ವೃತ್ತಿ ಪ್ರಾಥಮಿಕ ಶಾಲಾ ಶಿಕ್ಷಕ,ಪ್ರಖರ ಬರಹಗಾರ,ಅವರ ಬರವಣಿಗೆಗೆ, ವಿಚಾರ ಸರಣಿಗೆ ಸರಿಸಾಠಿಯಾಗಿರಲಿಲ್ಲ. ವಿಶ್ವವಿಧ್ಯಾಲಯದ ಪ್ರಾಧ್ಯಾಪಕರು ಸಹ. ಒಂದು ದಿನ ಕಾಣೆಯಾದರವರು, ಗಾಬರಿಯಾದವು ಮನೆಯಲ್ಲಿ ಚಿಕ್ಕ ಮಕ್ಕಳು, ಹೊರಟವವು ತಂದೆಯ ಹುಡುಕಾಟಕ್ಕೆ, ರಾತ್ರಿ ಎಲ್ಲ ಸುತ್ತಿದವು. ಕಲಬುರ್ಗಿಯ ಗಲ್ಲಿ ಗಲ್ಲಿಗಳನ್ನು, ಕೊನೆಗೂ ಸಿಕ್ಕ ತಂದೆ ಬೆಳಗಿನ ಜಾವ, ಅಪ್ಪಾ ಎಂದು ಓಡಿದವು ಮಕ್ಕಳು. ಆದರೆ ಬಿದ್ದ ಅಪ್ಪ ಓ ಗೊಡಲಿಲ್ಲ. ತಬ್ಬಿಕೊಳ್ಳಲಿಲ್ಲ, ಓಡಿ ಬಂದ ಮಕ್ಕಳನ್ನು ಅವನು.ಅಪ್ಪನಾಗಿದ್ದ ಅರೆ ಬತ್ತಲೆಯ ಶವ, ಅಪ್ಪನ ಮೈಯಲ್ಲ ರಕ್ತದ ಕಲೆಗಳು, ಅವನ ಶವ ಬಿದ್ದಿದೆ ಶರಣ ಬಸಪ್ಪನ ದೇವಸ್ಥಾನ ಎದುರಿನ ಚರಂಡಿಯಲ್ಲಿ. ಇದೆ ಶವ,ಪ್ರಾಣ ಇದ್ದಾಗ ನಿಲ್ಲಿಸಿತ್ತು ಭ್ರಷ್ಟರ ಎದೆ ಬಡಿತವನ್ನು. ಪತರಗುಟ್ಟಿದ್ದರು ಲಿಂಗಾಯತ ಹಿತಶತ್ರುಗಳು. ಆ ಮಹಾನಭಾವರೆ ಲಿಂಗಣ್ಣ ಸತ್ಯಂಪೇಟೆ. ತಂದೆಯ ರಕ್ತ ಸಿಕ್ತ ಶವವನ್ನು ಕಂಡವನೆ ವಿಶ್ವಾರಾಧ್ಯ.

ಲಿಂಗಣ್ಣ ಸತ್ಯಂಪೇಟೆ ಮಕ್ಕಳೊಂದಿಗೆ ಸಾಮಾನ್ಯವಾಗಿ ಸಾಹಿತಿಗಳಿಗಿರುವಂತೆ ಇವರಿಗೂ ಇತ್ತು ಬಡತನ.ಅದೆ ಬಡತನ ಬೆಳೆಸಿತ್ತು ಅವರಲ್ಲಿ ಕೆಚ್ಚತನ. ಬಡತನವಾಗಿತ್ತು ಪೆನ್ನಿನ ಮಸಿ, ಜೀವನದ ಕಷ್ಟಗಳಾದವು ಕಥೆ, ಸಿದ್ಧಾಂತವಾಯಿತು ಖಡ್ಗ. ಬರೆಯುತ್ತ ಹೋದರು….. ಬರೆಯುತ್ತಲೆ ಶವವಾದರೊಂದು ದಿನ.

ಬೋರಾಡಿ ಅತ್ತವು ತಬ್ಬಲಿ ಮಕ್ಕಳು. ಕರಗಲಿಲ್ಲ ಕರಗಬೇಕಾದವರ ಮನಸ್ಸು. ಕಲ್ಲು ಬಂಡೆಗಳ ವಿಧಾನ ಸೌಧಕ್ಕೆ ಕಣ್ಣು ಕಿವಿಗಳಿಲ್ಲ,ಹೃದವಂತು ಇಲ್ಲವೆ ಇಲ್ಲ. ಬಂಡೆಗೆಲ್ಲುಗಳಿಗಿರುವದಿಲ್ಲವಲ್ಲಾ ಕಿವಿಗಳು?. ಕೇಳಲೇ ಇಲ್ಲ ಚಿಕ್ಕ ಮಕ್ಕಳ ಅಳು ಆಕ್ರಂಧನ ಅದಕ್ಕೆ,ಸತ್ತವನ ಆತ್ಮ ಮತ್ತೊಮ್ಮೆ ಸತ್ತಿತು ಕೊಲೆ ಮಾಡಿದವನು ರಾಜಾರೋಷವಾಗಿ ತಿರುಗಾಡುವವನನ್ನು ನೋಡಿ.ಆಗ ಕೊಲೆಗಾರ ಅರಿತನವನು ಲಿಂಗಾಯತರ ಮನಃಸ್ಥಿತಿ, ಹಾಗು ನಾಡಿನ ಕಾಯದೆ ಸುವ್ಯಸ್ಥತೆಯ ಸ್ಥಿತಿ ಗತಿಯನ್ನು ಸಹ, ಉತ್ಸುಕನಾದನವನು ಉಳಿದ ವೈಚಾರಿಕ ಬರಹಗಾರ (ಲಿಂಗಾಯತರ) ರುಂಡ ಚಂಡಾಡಲು. ಮೊದಲು ಬಲಿಯಾದರು ಡಾ ಎಂ. ಎಂ. ಕಲ್ಬುರ್ಗಿ,ನಂತರದ ಸರದಿಯಲ್ಲಿ ಗೌರಿ ಲಂಕೇಶ್.

ಲಿಂಗಣ್ಣ ಸತ್ಯಂಪೇಟೆ

ಇದೆ ಲಿಂಗಣ್ಣ ಸತ್ಯಂಪೇಠೆಯವರ ಮಗ ವಿಶ್ವಾರಾಧ್ಯ ಸತ್ಯಂಪೇಟೆ. ತಂದೆಯ ಸಾವು ಮಗನ ಮನಸ್ಸನ್ನು ಕಲ್ಲಾಗಿಸಿತ್ತು. ಅವನೊಬ್ಬನಾದ ನಿರ್ಭಿತ ಬರಹಗಾರ. ಕಾಯಕವಾಯಿತು ಸತ್ಯ ಶೋಧನೆ, ಕಂದಾಚಾರ ನಿರ್ಮೂಲನೆ,ಬಸವ ನಿಷ್ಠೆ ಕಾಯಕದಾರನಿಗೆ. ಇಂದು ಒಬ್ಬರಿಂದ ಬಂದಿದೆ ಅವರ ಮೇಲೆ ದೂರು. ದೂರನ್ನು ದಾಖಲಿಸಿಕೊಂಡಿದ್ದಾರೆ ನ್ಯಾಯ ಪರಿಪಾಲಕರು. ಸತ್ಯಕ್ಕೆ ಜಯ ಎಂಬುದು ಬಸವಣ್ಣನವರ ಅನುಯಾಯಿಗಳ ನಿಲುವು.ಆದರೂ ಒಂದು ಮೂಲೆಯಲ್ಲಿ ಶಂಕೆ. ಕಿವಿ, ಕಣ್ಣಗಳಿರದ ವಿಧಾನ ಸೌಧಕ್ಕೆ ಮತ್ತೊಮ್ಮೆ ಕೇಳಿಸೀತೆ ಸತ್ಯಂಪೇಠ ಕುಟುಂಬದ ಅಹವಾಲು.

ಲಿಂಗಾಯತ ಮಹಾಸಭಾ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದೆ. ಅದು ಅದರ ಕರ್ತವ್ಯವು ಹೌದು. ಆದರೆ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದೆ.ಕಾರಣ ಇಲಿಗೆ ಹೊಡದರೆ ಗಣೇಶನಿಗೆ ಪೆಟ್ಟಾಗದಿರಲಿ ಎಂದು.

೦ ಜಿ.ಬಿ. ಪಾಟೀಲ

ಜಾಗತಿಕ ಲಿಂಗಾಯತ ಮಹಾಸಭೆ ಬೆಂಗಳೂರು

4 thoughts on “ಸತ್ಯಂಪೇಟೆ ಕುಟುಂಬದ ರಕ್ಷಣೆಯ ಹೊಣೆ ಯಾರಿಗೆ ?

  1. ಲಿಂಗಾಯತ ಮಹಾಸಭಾದ ನಡೆ ಒಳ್ಳೆಯದೇ.‌ಆದರೆ‌ ನಿಧಾನಗತಿ ಒಳಿತಲ್ಲ. ಸನ್ಮಾರ್ಗದಲ್ಲಂತೂ ನಮಗೆ ನ್ಯಾಯ ಸಿಗದು ಸಿಕ್ಕರೂ ಕಾಲಮಿತಿಯಲ್ಲಿ ಸಿಗುತ್ತದೆಂಬ ಭರವಸೆಯೂ ಇಲ್ಲ. ಅದ್ದರಿಂದ ರಾಜಕೀಯ ಗಾಳವನ್ನು ಬಿಸಿಯಾದರೂ ನ್ಯಾಯ ಪಡೆದು ವಿಶ್ವಾರಾಧ್ಯರ ಮತ್ತು ಇಂತಹ ವೈಚಾರಿಕ‌ನಿಲುವಿನ ಲಿಂಗಾಯತರೊಂದಿಗೆ ಬೆಂಬಲಕ್ಕೆ ನಾವೆಲ್ಲಾ ಇದ್ದೆವೆ ಎಂಬ ಸಂದೇಶವನ್ನು ಈ ನಾಡಿಗೆ ಬಿತ್ತರಿಸುವ ಜವಾಬ್ದಾರಿ ಲಿಂಗಾಯತ ಮಹಾಸಭಾದ ಮೇಲಿದೆ ಎಂಬುದನ್ನು ಮರೆಯಬಾರದು.

Leave a Reply

Your email address will not be published. Required fields are marked *

error: Content is protected !!