ಹೆಣ್ಣನ್ನು ಗೌರವಿಸಿದ ಇರ್ವರು

೧೨ನೇ ಶತಮಾನದಲ್ಲಿ ಬಸವಣ್ಣನವರು ಬ್ರಾಹ್ಮಣ ಮನೆತನದಲ್ಲಿ ಹುಟ್ಟಿದರೂ ಸಮಾಜದಲ್ಲಿ ಜಾತಿ ವರ್ಣ ಲಿಂಗಬೇಧದಿಂದ ತತ್ತರಿಸಿದ್ದ ಜನರ ನೋವುಗಳನ್ನು ಕಣ್ಣಾರೆ ಕಂಡು ಅವರಿಗಾಗಿ ವ್ಯಥೆ ಪಟ್ಟವರು.

ವೈದಿಕ ತನದಿಂದ ನೊಂದು ಬೆಂದವರನ್ನು ವಿಮುಕ್ತಿಗೊಳಿಸುವ ಸಲವಾಗಿ ಬಸವಣ್ಣನವರು “ದಯವೇ ಧರ್ಮದ ಮೂಲವಯ್ಯ” ಎಂಬ ಸಂದೇಶವನ್ನು ಸಾರಿದರು. ಬಸವಣ್ಣನವರಿಗೆ ಅಸ್ಪೃಶ್ಯತೆಯ ಅನುಭವ ಇರಲಿಲ್ಲ‌ ಆದರೂ ಕೂಡ ಸಮಾಜದಲ್ಲಿ ಮೇಲು-ಕೀಳು ಅಸ್ಪೃಶ್ಯತೆ ಎಂಬ ವಿಷ ಬೀಜದ ವಿರುದ್ಧ ಸಿಡಿದೆದ್ದರು. ತಮ್ಮ ವೈಚಾರಿಕತೆಯ ಮಾತುಗಳಿಂದ ಬಸವಣ್ಣನವರು ಅಸ್ಪೃಶ್ಯ ಲೋಕದ ಅಂಧಕಾರದಲ್ಲಿ ಮುಳುಗಿ ಹೋಗಿದ್ದ ಅಸಂಖ್ಯಾತ ಜನತೆಯ ಪಾಲಿಗೆ ಬೆಳಕಿನ ದೀವಿಗೆಯಾದರು.

ಕಾತಿರ್ಕದ ಕತ್ತಲಲ್ಲಿ
ಆಕಾಶ ದೀಪವಾಗಿ ನೀ ಬಂದೆ,
ಬಟ್ಟೆಗೆಟ್ಟವರಿಗೊಂದು ದೊಂದು ದಿಕ್ಕಾಗಿ,
ಎಂಟು ಶತಮಾನಗಳ ಹಿಂದೆ
ಅಗ್ನಿ ಖಡ್ಗವನಾಂತು,
ಓ ಆಧ್ಯಾತ್ಮ ಕ್ರಾಂತಿ ವೀರ,
ದೇವ ದಯೆಯೊಂದು ಹೇ
ಧೀರಾವತಾರ ಶ್ರೀ ಗುರು
ಬಸವೇಶ್ವರ.

*ರಾಷ್ಟ್ರಕವಿ ಕುವೆಂಪು.

ಸ್ತ್ರೀಯರಿಗೆ ಮಂತ್ರ ಪೂರ್ವಕವಾದ ಧರ್ಮ ಸಂಸ್ಕಾರಗಳಿಲ್ಲ ಎಂದು ಶಾಸ್ತ್ರ ಹೇಳುತ್ತದೆ. ಇಂದ್ರಿಯಗಳನ್ನು ನಿಗ್ರಹಿಸಲು ಮಂತ್ರಸಾಧನಗಳು ಸ್ತ್ರೀಯರಿಗೆ ಹೇಳಲ್ಪಟ್ಟಿಲ್ಲವಾದ್ದರಿಂದ ಅವರು ಸದಾ ಅಶುದ್ಧರಾಗಿಯೇ ಇರುತ್ತಾರೆ ಎಂಬುದು ಧರ್ಮದ ವಿಚಾರವಾಗಿದೆ. (ಅ: ೯:೧೯) ಮನುಸ್ಮೃತಿಯಲ್ಲಿ ಹೇಳುತ್ತಾರೆ.

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೆ?ನು?
ನಿನ್ನದೆಯ ದನಿಯೆ ?ಋಷಿ! ಮನು ನಿನಗೆ ನೀನು!

ಆದರೆ ಬಸವಣ್ಣನವರು ಬದುಕಿದ್ದ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರ ಪಾಡು ಕೂಡ ಅತ್ಯಂತ ಹೀನವಾಗಿದೆ, ಎಂಬುದನ್ನು ಮನಗಂಡರು. ಬಸವಣ್ಣನವರು ಮಹಿಳೆಯರಿಗೆ ಆರ್ಥಿಕ ಸಾಮಾಜಿಕ ಶೈಕ್ಷಣಿಕ ವೈಚಾರಿಕ ಸ್ವಾತಂತ್ರ‍್ಯವನ್ನು ಕಲ್ಪಿಸಿಕೊಡುವುದರ ಜೊತೆಗೆ ಮಹಿಳೆಯರಿಗೆ ಲಿಂಗ ಸಂಸ್ಕಾರದ ಹಕ್ಕನ್ನು ನೀಡುವುದರ ಮೂಲಕ ಅನುಭವ ಮಂಟಪದಲ್ಲಿ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕೊಡುತ್ತಾರೆ. ಕಲ್ಯಾಣ ಪಟ್ಟಣದಲ್ಲಿ ಇರುವ ವೇಶ್ಯೆಯರನ್ನು ಕೂಡ ಮನಪರಿವರ್ತಿಸುವುದರ ಮೂಲಕ ವೇಶ್ಯೆಯರನ್ನ ಶರಣೆಯರನ್ನಾಗಿ ಮಾರ್ಪಾಡು ಮಾಡುತ್ತಾರೆ. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚು ಮಾನ್ಯತೆ ಕೊಟ್ಟವ್ರು ಬಸವಣ್ಣನವರು, ಅದು ಬಸವ ಧರ್ಮದಲ್ಲಿ ಮಾತ್ರ. ಬುದ್ಧ ಹೆಣ್ಣಿಗೆ ಸ್ವಾತಂತ್ರ್ಯ ಕೊಟ್ಟು ನಂತರ ಕಿತ್ತುಕೊಂಡ. ಜೈನ ಧರ್ಮದಲ್ಲಿ ಹೆಣ್ಣಿಗೆ ಮೋಕ್ಷ ಇಲ್ಲ. ಮೋಕ್ಷ ಬೇಕಾದರೆ ಗಂಡಾಗಿ ಜನಿಸಬೇಕು.

“ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ,
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ,
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ,
ಇದಾವಾವ ಪರಿಯಲ್ಲಿ ಕಾಡಿಹಿತು ಮಾಯೆ.
ಈ ಮಾಯೆಯ ಕಳೆವಡೆ ಎನ್ನಳವಲ್ಲ,
ನೀವೆ ಬಲ್ಲಿರಿ ಕೂಡಲಸಂಗಮದೇವಾ”

ಕಲ್ಯಾಣದಲ್ಲಿ ಜಾತಿ ಮತ್ತು ಅಸ್ಪೃಶ್ಯತೆಯ ವಿಷ ಬೀಜವನ್ನು ಕಿತ್ತುಹಾಕಿ ಸಮಾನತೆಯನ್ನು ಸಾರುವ ಉದ್ದೇಶದಿಂದ ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆಯನ್ನು ಶರಣರು ಏರ್ಪಡಿಸಿದ್ದರು. ಇದೇ ಕಾರಣವನ್ನು ಮುಂದೆ ಇಟ್ಟುಕೊಂಡು ಮನುವಾದಿಗಳು ರೊಚ್ಚಿಗೆದ್ದರು ಸಮಗಾರ ವರನಿಗೆ ಬ್ರಾಹ್ಮಣ ಕನ್ನೆಯನ್ನು ಕೊಡುವುದು ಧರ್ಮಬಾಹಿರವಾದ ಅನುಲೋಮ ವಿವಾಹ ಎಂದು ಕಲ್ಯಾಣದ ದೊರೆ ಬಿಜ್ಜಳನ ಕಿವಿ ಚುಚ್ಚಿದರು. ಇದನ್ನು ಕೇಳಿದ ಬಿಜ್ಜಳನಿಗೆ ಬಸವಣ್ಣನ ವ್ಯಕ್ತಿತ್ವದ ಮೋಹಕ್ಕೆ ಸಿಲುಕುವ ಬಿಜ್ಜಳನಿಗೆ ಬಸವ ಗೆಳೆಯನೋ ವೈರಿಯೋ ಎನ್ನುವ ಸಂದಿಗ್ಧ ಪರಸ್ಥಿತಿಗೆ ಬರುತ್ತಾನೆ. ಮುಂದೆ ಬಸವಣ್ಣನವರನ್ನು ಗಡಿಪಾರು ಮಾಡುವಂತೆ ಬಿಜ್ಜಳನ ಆಸ್ಥಾನದಲ್ಲಿ ತುಂಬಿದ ಸಭೆಯಲ್ಲಿ ಹೇಳಲಾಯಿತ್ತು. ಒಂದು ಕ್ಷಣವು ಯೋಚಿಸದೆ ಬಸವಣ್ಣನವರು ಕಿರೀಟವನ್ನು ಬಿಚ್ಚಿಟ್ಟ ಬಸವಣ್ಣನವರು ತಮ್ಮ ಪದವಿ ತ್ಯಾಗ ಮಾಡಿದರು.

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಚಿಕ್ಕ ವಯಸ್ಸಿನಿಂದಲೂ ಅನುಭವಿಸಿದ ಕಿರುಕುಳಗಳು ಅವಮಾನಗಳಿಂದ ರೋಸಿಹೊಗಿದ್ದ ಅವರನ್ನು ಒಬ್ಬ ಸಂಪ್ರದಾಯ ವಿರೋಧಿ ಬಂಡಾಯಗಾರನ್ನಾಗಿಸಿದವು. ಉನ್ನತ ಹುದ್ದೆಯಲ್ಲಿದ್ದರು ಹಿಂದೂ ಧರ್ಮದ ಮಿತಿಗಳಿಂದ ರೋಸಿ ಹೋಗಿದ್ದರು. ಅಸಮಾನತೆಯ ವ್ಯವಸ್ಥೆಯಿಂದ ಮುಕ್ತಿ ಪಡೆಯಬೇಕಾದರೆ ಧರ್ಮಾಂತರ ಅಗತ್ಯವಾಗಿದೆ ಎಂಬುದು ಮನಗಂಡು ಅದಕ್ಕಾಗಿಯೇ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರ ಗೊಂಡರು.

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಕಾಲಘಟ್ಟದಲ್ಲಿ ಮಹಿಳೆಯರಿಗೆ ಸಂವಿಧಾನದ ಚೌಕಟ್ಟಿನಡಿಯಲ್ಲಿ ಭದ್ರತೆ ಸ್ವತಂತ್ರತೆಯನ್ನು ಕೊಡಲು ಶ್ರಮಿಸಿದವರು. ಅಂಬೇಡ್ಕರ್ ಅಸ್ಪೃಶ್ಯತೆ ಸಾಮಾಜಿಕ ಮೌಢ್ಯತೆಗಳು ತೊಲಗದ ಹೊರತು ಸ್ತ್ರೀ ಉದ್ದಾರ ಸಾಧ್ಯವಿಲ್ಲವೆಂದು ಅವರ ಅಭಿಪ್ರಾಯ. ಹೆಣ್ಣು ಮಕ್ಕಳಿಗೆ ಆರ್ಥಿಕವಾಗಿ ಶೈಕ್ಷಣಿಕ ಸಾಮಾಜಿಕ ಧಾರ್ಮಿಕ ಭದ್ರತೆಯನ್ನು ಸಂವಿಧಾನದ ಚೌಕಟ್ಟಿನಡಿಯಲ್ಲಿ ನೀಡಲು ಮುಂದಾಗಿ ಅದಕ್ಕಾಗಿ ಹಿಂದು ಕೋಡ್ ಮಸೂದೆಯನ್ನು ಮಂಡಿಸಿದರು. ಅದಕ್ಕೆ ಸಂಸತ್ತಿನಲ್ಲಿ ಮಂಡನೆ ಸಿಗದಿದ್ದಾಗ ತಮ್ಮ ಮಂತ್ರಿ ಪದವಿಯನ್ನು ತ್ಯಜಿಸಿ ತಮ್ಮ ಬದ್ದತೆಯನ್ನು ಮೆರೆದರು. ಮಹಿಳೆಯರ ಬಗೆಗಿನ ತಮ್ಮ ಅಸೀಮ ಪ್ರೇಮವನ್ನು ವ್ಯಕ್ತ ಪಡಿಸಿದರು.

೦ ಸಾಯಿ ಕುಮಾರ ಇಜೇರಿ ಶಹಾಪುರ

Leave a Reply

Your email address will not be published. Required fields are marked *

error: Content is protected !!