ಆಕಳ ಉಚ್ಛೆ ನಿರುಪಯೋಗಿ !?

ಬರಹ ೦ ಜಿ.ಎಸ್.ಪಾಟೀಲ ಬಿಜಾಪುರ

ವಿಜ್ಞಾನಿಗಳ ಪ್ರಕಾರ ಆಕಳ ಉಚ್ಛೆ ನಿರುಪಯೋಗಿ : ಭಾರತ ಸರಕಾರಕ್ಕೆ ಕೆಟ್ಟ ಸುದ್ದಿ.

(ಸುನಯನಾ ಮಲ್ಲಿಕ್ ಅವರ Mensxp ಇಂಗ್ಲೀಷ ನಿಯತಕಾಲಿಕದಲ್ಲಿನ ಸುದ್ದಿ ಆಧಾರಿತ ಲೇಖನ)

ಭಾರತೀಯರಾದ ನಾವು ಪ್ರಾಣಿಗಳನ್ನು ಪ್ರೀತಿಸುತ್ತೇವೆ. ಆದರೆ ಆಕಳು ಮಾತ್ರ ಅಗತ್ಯಕ್ಕಿಂತ ಹೆಚ್ಚಿನ ಪ್ರೀತಿಯನ್ನೇ ಸಂಪಾದಿಸಿದೆ. ನಾವೆಲ್ಲ ಆಕಳ ಉತ್ಪನ್ನಗಳು ಬಹುಪಯೋಗಿ ಎನ್ನುವ ಮಾತು ಕೇಳಿರುತ್ತೇವೆ. ಅದು ಕ್ಯಾನ್ಸರ್ ರೋಗ ಗುಣಪಡಿಸುತ್ತದೆˌ ಆಕಳ ಹಾಲು ಸ್ವಲ್ಪ ಹಳದಿ ಬಣ್ಣ ಹೊಂದಲು ಕಾರಣ ಅದರಲ್ಲಿ ಚಿನ್ನವಿದೆˌ ಆಕಳ ಇತರ ಉಪ ಉತ್ಪನ್ನಗಳು ಕೋರೊನಾ ವೈರಸ್ ಸೋಂಕನ್ನು ಕೂಡ ಗುಣಪಡಿಸುತ್ತದೆ ಎನ್ನುವಷ್ಟು ನಮ್ಮ ನಂಬಿಕೆ ಅತಿರೇಕದಿಂದ ಕೂಡಿದೆ. ನಮ್ಮಲ್ಲಿ ಹಲವರು ಆಕಳೆಂಬ ಸಾದಾ ಸಾದು ಪ್ರಾಣಿ ನಮಗೆ ಬೇಡಿದ್ದೆಲ್ಲವನ್ನು ನೀಡುಬಲ್ಲ ಕಾಮಧೇನು ಎಂದು ನಂಬಿದ್ದೇವೆ.

ಆಕಳು ನಮ್ಮ ದೇಶದಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದದ್ದಷ್ಟೇ ಅಲ್ಲದೆ ಅದು ಜನರಿಂದ ಪೂಜಿಸಲ್ಪಡುತ್ತದೆ. ನಮ್ಮಲ್ಲಿ ಬೇರೆ ಸಾಕು ಪ್ರಾಣಿಗಳನ್ನು ಜನ ಕೊಂದು ತಿನ್ನುತ್ತಾರೆˌ ಆದರೆ ಆಕಳನ್ನು ಹಾಗೆ ಮಾಡುವುದು ಪಾಪದ ಕೆಲಸ ಎಂದು ಭಾವಿಸುತ್ತಾರೆ. ಆದರೆ ಜನರ ಈ ನಂಬಿಕೆಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಜನರ ಈ ನಂಬಿಕೆಯನ್ನು ಮಾನ್ಯ ಮಾಡಿದ ಕೇಂದ್ರ ಸರಕಾರ ಈ ನಂಬಿಕೆಗೆ ವೈಜ್ಞಾನಿಕ ಮೂಲಗಳನ್ನು ಬೆಸೆದು ದೇಶದ ಎಲ್ಲ ಸಮುದಾಯಗಳ ಜನ ಇದನ್ನು ನಂಬಬೇಕು ಎಂದು ಇಚ್ಚಿಸುತ್ತಿದೆ. ಹಾಗಾಗಬೇಕಾದರೆ ಅದಕ್ಕೆ ಸ್ಪಷ್ಟವಾದ ಮತ್ತು ತರ್ಕಬದ್ದವಾದ ವೈಜ್ಞಾನಿಕ ಪುರಾವೆಗಳು ಬೇಕಾಗುತ್ತವೆ.

ಆ ದಿಶೆಯಲ್ಲಿ ಕೇಂದ್ರ ಸರಕಾರ ಇದೆ ಫೆಬ್ರುವರಿ 17 ರಂದು ತೆಗೆದುಕೊಂಡ ನಿರ್ಧಾರದ ಪ್ರಕಾರ ಆಕಳ ಹಾಲುˌ ಉಚ್ಛೆ ˌ ಸೆಗಣಿ ಮತ್ತಿತರ ಆಕಳ ಉಪ ಉತ್ಪನ್ನಗಳು ಅನೇಕ ಔಷಧಿಯ ಗುಣಗಳು ಹೊಂದಿರುವ ಬಗ್ಗೆ ವೈಜ್ಞಾನಿಕ ಮುಖ್ಯಾಂಶಗಳ ಮೂಲಕ ಪ್ರಚೂರಪಡಿಸಲು ಕಾರ್ಯಪ್ರವೃತ್ತವಾಗಿದೆ. ಅದಕ್ಕಾಗಿ ಭಾರತೀಯ ದೇಶಿ ಆಕಳುಗಳನ್ನು ಪರಿಕ್ಷಿಸಲು ಮುಂದಾಗಿದ್ದು ಅದನ್ನು Scientific Utilisation Through Research Augmentation-Prime Products from Indigenous Cows (SUTRA PIC) ಎನ್ನುವ ಸ್ಕೀಮಿನಡಿಯಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಮುಂದಾಳತ್ವದಲ್ಲಿ ಪ್ರಧಾನ ವಿಜ್ಞಾನಿಯೊಬ್ಬರ ಮುಖಂಡತ್ವದಲ್ಲಿ ಸಂಶೋಧನೆಗೆ ಚಿಂತಿಸುತ್ತಿದೆ.

ಈ ದಿಶೆಯಲ್ಲಿ ವಿಜ್ಞಾನಿಗಳು ದೇಶಿ ಆಕಳುಗಳ ಹಾಲುˌ ಉಚ್ಛೆ ˌ ಸೆಗಣಿ ಮತ್ತು ಇತರ ಉಪ ಉತ್ಪನ್ನಗಳು ಶೈಕ್ಷಣಿಕˌ ಮತ್ತು ವೈಜ್ಞಾನಿಕ ಮಹತ್ವದ ಸಂಶೋಧನಾ ವಸ್ತುವಾಗಬೇಕು ಮತ್ತು ಅವು ಮನುಷ್ಯನ ಆರೋಗ್ಯಕ್ಕೆ ಉತ್ತಮ ಔಷಧಿಗಳಾಗಬೇಕು ಎನ್ನುವುದು ಈ ಉದ್ದೇಶಿತ ಸಂಶೋಧನೆಯ ಹಿಂದಿರುವ ಉದ್ದೇಶ. ಇದರೊಂದಿಗೆ ಆಕಳ ಉಪ ಉತ್ಪನ್ನಗಳನ್ನು ಉಪಯೋಗಿಸಿ ಟೂತ್ ಪೇಸ್ಟ್ ˌ ಸೊಳ್ಳೆ ಓಡಿಸುವ ದ್ರವ್ಯ ˌ ಮತ್ತು ಹಾಲಿನ ಉತ್ಪನ್ನಗಳು ತಯ್ಯಾರಿಸಿ ಕ್ಯಾನ್ಸರ್ ಮುಂತಾದ ಮಾರಕ ರೋಗಗಳ ಚಿಕಿತ್ಸೆ ಮಾಡುವುದು ಸರಕಾರದ ಉದ್ದೇಶವಾಗಿತ್ತು. ಆದರೆˌ ಈ ಮಾರ್ಗದಲ್ಲಿ ಒಂದು ತರ್ಕಬದ್ದ ಸಮಸ್ಸೆ ಎದುರಾಗಿದೆ. ಅದೇನೆಂದರೆ ವಿಜ್ಞಾನಿಗಳು ಈ ವಿಷಯದ ಮೇಲೆ ಸಂಶೋಧನೆ ಮಾಡಿ ಸಿನಾಪ್ಸಿಸ್ (Synopsis) ತಯ್ಯಾರಿಸಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ವಿಜ್ಞಾನಿಗಳು ಆಕಳ ಉತ್ಪನ್ನಗಳ ಮೇಲೆ ಸಂಶೋಧನೆ ಮಾಡಲು ನಿರಾಕರಿಸಿರುವುದರ ಹಿಂದಿನ ಕಾರಣಗಳೇನೆಂದರೆ ಆಕಳ ಉತ್ಪನ್ನಗಳನ್ನು ಧಾರ್ಮಿಕ ನಂಬಿಕೆಯ ಆಧಾರಗಳ ಮೇಲೆ ವಿಜ್ರಂಭಿಸುವುದರಿಂದ ಇಲ್ಲಿಯವರೆಗಿನ ನಮ್ಮ ವೈಜ್ಞಾನಿಕ ರಂಗದ ಸಾಧನೆಗಳ ವಿಶ್ವಾರ್ಹಾತೆಯನ್ನು ನಾಶಮಾಡಿತಂದಾಗುತ್ತದೆ ಎನ್ನುವುದು. ಏಕೆಂದರೆ ಕ್ಯಾನ್ಸರ್ˌ ಸಕ್ಕರೆ ಕಾಯಿಲೆˌ ಮತ್ತು ರಕ್ತದೊತ್ತಡದಂತ ಕಾಯಿಲೆಗಳ ಕುರಿತ ಇಲ್ಲಿವರೆಗೆ ನಡೆದ ಸಂಶೋಧನೆಗಳಲ್ಲಿ ಪ್ರಾಚೀನ ಸಾಹಿತ್ಯಗಳಲ್ಲಿ ಆಕಳ ಉತ್ಪನ್ನಗಳು ಈ ಕಾಯಿಲೆಗಳು ಗುಣಪಡಿಸುವುದರ ಬಗ್ಗೆ ಯಾವುದೇ ದಾಖಲೆಗಳು ಲಭ್ಯವಿಲ್ಲ ಎನ್ನುತ್ತದೆ ವೈಜ್ಞಾನಿಕ ಲೋಕ. ಆಕಳ ಉತ್ಪನ್ನಗಳು ಈ ತರಹದ ಮಾರಣಾಂತಿಕ ರೋಗಗಳನ್ನು ಗುಣಪಡಿಸುವ ಕುರಿತು ಸಾಹಿತ್ಯ ದಾಖಲೆಗಳ ಕೊರತೆಯ ಕಾರಣದಿಂದ ವಿಜ್ಞಾನಿಗಳು ಈ ಕುರಿತು ಸಂಶೋಧನೆಗೆ ಹಿಂದೇಟು ಹಾಕುತ್ತಿದ್ದಾರೆ.

ಇದು ಒಂದು ಸರಕಾರದ ತೆರೆದ ಬಾಗಿಲು ಸಂಶೋಧನಾ ಯೋಜನೆಯಾಗಿದ್ದರೆ ಕೇವಲ ಆಕಳನ್ನು ಮಾತ್ರ ಕೇಂದ್ರಿಕರಿಸಿ ಸಂಶೋಧನೆ ಏಕೆ ಮಾಡುವುದು ? ಬೇರೆ ಮತ್ತಿತರ ಸಸ್ಯಾಹಾರಿ ಪ್ರಾಣಿಗಳಾದ ಮೇಕೆˌ ಎಮ್ಮೆ ˌ ಒಂಟೆಗಳ ಮೇಲೇಕೆ ಸಂಶೋಧನೆ ಬೇಡ ? ಸಂಪ್ರದಾಯಿಕ ವೈದ್ಯವಿಜ್ಞಾನವು ಈ ಪ್ರಾಣಿಗಳ ಉತ್ಪನ್ನಗಳೂ ಕೂಡ ಅನೇಕ ರೋಗಗಳಿಗೆ ಮದ್ದಾಗಬಲ್ಲವು ಎಂದು ನಂಬಲಾಗಿರುವಾಗ ಕೇವಲ ಆಕಳನ್ನು ಕೇಂದ್ರಿಕರಿಸಿ ಸಂಶೋಧನೆ ಏಕೆ ಎನ್ನುತ್ತಾರೆ ಕಲಕತ್ತೆಯ ಇಂಡಿಯನ್ ಇನ್ಸಿಟ್ಯೂಟ್ನ ಆಫ್ ಸೈನ್ಸ್ ˌ ಎಜುಕೇಷನ್ ಆಂಡ್ ರಿಸರ್ಚ್ ಸಂಸ್ಥೆಯ ವಿಜ್ಞಾನಿ ಅಯ್ಯನ್ ಬ್ಯಾನರ್ಜಿ ತಮ್ಮ ಟೆಲಿಗ್ರಾಫ್ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ.

ದ್ರಢಪಡಿಸದೇ ಇರುವ ಸಂಗತಿಯೊಂದರ ಕುರಿತು ಆಕಳಂತ ಪ್ರಾಣಿಯೊಂದನ್ನು ಸಂಶೋಧನೆಯ ಹೆಸರಿನಲ್ಲಿ ಧಾರ್ಮಿಕವಾಗಿ ವಿಜ್ರಂಭಿಸುವ ಕಾರ್ಯವು ವಿಜ್ಞಾನಿಗಳು ಮಾಡಬಾರದು. ಹೌದುˌ ಆಕಳು ಉಳಿದೆಲ್ಲ ಪ್ರಾಣಿಗಂತೆ ಅದೂ ಒಂದು ಮಹತ್ವಪೂರ್ಣ ಪ್ರಾಣಿ ಎನ್ನುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಾರೆ ವಿಜ್ಞಾನಿಗಳು. ನಾವು ಆಕಳ ಉತ್ಪನ್ನಗಳ ಬಗೆಗಿರುವ ಕಟ್ಟು ಕಥೆಗಳನ್ನು ನಂಬುತ್ತ ಹೋದರೆ ಜನರು ತಮ್ಮ ಎಲ್ಲ ರೋಗಗಳಿಗೆ ಆಕಳ ಉಚ್ಛೆಯೇ ಪರಿಹಾರವೆಂದು ಭಾವಿಸುತ್ತ ಅಧುನಿಕ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯನ್ನೇ ಸಶಯಿಸಲಾರಂಭಿಸಬಹುದು. ಆದರೆ ಆಕಳ ಉತ್ಪನ್ನಗಳು ನಿಜವಾಗಿಯೂ ಕ್ಯಾನ್ಸರ ಮುಂತಾದ ವೈದ್ಯಕೀಯ ರಂಗಕ್ಕೆ ಸವಾಲಾಗಿರುವ ಅನೇಕ ರೋಗಗಳಿಗೆ ಪರಿಹಾರವಾಗಲಾರವು ಎನ್ನುತ್ತದೆ ವಿಜ್ಞಾನ ಕ್ಷೇತ್ರ.

ಕೇಂದ್ರ ಸರಕಾರವು ಧಾರ್ಮಿಕ ನಂಬಿಕೆಯಾಧಾರದ ಭಾವನಾತ್ಮಕ ಸಂಗತಿಗಳನ್ನು ವಿಜ್ರಂಭಿಸಿ ಅದಕ್ಕೆ ವೈಜ್ಞಾನಿಕ ಹಿನ್ನೆಲೆ ಸ್ರಷ್ಟಿಸುತ್ತಿರುವುದು ನೈಜ ವಿಜ್ಞಾನಿಗಳಲ್ಲಿ ಅಸಮಧಾನವನ್ನು ಮೂಡಿಸಿದೆ. ಒಂದು ವೇಳೆ ಆಕಳ ಉತ್ಪನ್ನಗಳು ಕಾನ್ಸರ್ ಮುಂತಾದ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿರುವ ರೋಗಗಳಿಗೆ ಪರಿಹಾರವೆಂದು ಊಹಿಸಿ ಸಂಶೋಧನೆ ಮಾಡುವುದಾದಲ್ಲಿ ಎಲ್ಲ ಸಸ್ಯಾಹಾರಿ ಪ್ರಾಣಿಗಳ ಪ್ರಾಣಿಜನ್ಯ ಉತ್ಪನ್ನಗಳ ಮೇಲೆ ಸಂಶೋಧನೆ ಆಗಲಿ ಎನ್ನುವ ವಿಜ್ಞಾನಿಗಳ ತರ್ಕ ಸಮಂಜಸವೇ ಆಗಿದೆ.

ಬರಹ

~ ಡಾ. ಜೆ ಎಸ್ ಪಾಟೀಲ.

~

5 thoughts on “ಆಕಳ ಉಚ್ಛೆ ನಿರುಪಯೋಗಿ !?

  1. ಸಂಶೋಧನೆ ಮಾಡಿ ಗೋಮೂತ್ರದಲ್ಲಿ ವೈದ್ಯಕೀಯ ಅಂಶಗಲಿಲ್ಲದಿದ್ದರೆ, ಇಲ್ಲಾ ಎಂದು ಸ್ಪಷ್ಟ ಪಡಿಸುವುದು ಉತ್ತಮವಲ್ಲವೇ. ಸಂಶೋಧನೆಯನ್ನು ನಿರಾಕರಿಸುವುದು ವಿಜ್ಞಾನಿಗಳಿಗೆ ತರವಲ್ಲ. ಬಹಳಷ್ಟು ಜನ ಜ್ಞಾನಿಗಳು ನಮ್ಮ ಹಿಂದಿನ ತಲೆಮಾರಿನಲ್ಲಿದ್ದರು ಎನ್ನುವುದು ನಿಸ್ಸಂಶಯ. ವೈಜ್ಞಾನಿಕ ಪುರಾವೆಗಳು ಸಿಕ್ಕಿಲ್ಲದೇ ಇರುವುದಕ್ಕೆ ಒಂದು ನಂಬಿಕೆಯನ್ನು ತಳ್ಳಿಹಾಕಲಾರದು. ಆಯುರ್ವೇದದಲ್ಲಿ ತುಪ್ಪವನ್ನು ನಿಯತಕಾಲಿಕವಾಗಿ ತಿಂದರೆ ಆಯಸ್ಸು ವೃದ್ಧಿ ಮತ್ತು ಆರೋಗ್ಯ ಭಾಗ್ಯದ ಬಗ್ಗೆ ಮಾಹಿತಿ ಇದೆ. ಹಿಂದಿನ ಜನರು ಮನೆ ಮುಂದೆ ಸಗಣಿ ಸಾರಿಸುತ್ತಿದ್ದರು( ಔಷಧೀಯ ಗುಣಹಳಿಗಾಗಿ) ಹೀಗೆ ಹಲವಾರು ವಿಷಯಗಳಿವೆ. ಸಂಶೋಧನೆ ಮಾಡಿ ಸತ್ಯಾಸತ್ಯತೆಯ ಅರಿವು ಮೂಡಿಸುವುದು ವಿಜ್ಞಾನಿಗಳ ಕರ್ತವ್ಯ. ನಿರಾಕರಿಸುವುದು ಅಕ್ಷಮ್ಯ. ಒಂದುವೇಳೆ ಸಂಶೋಧನೆಯಲ್ಲಿ ಆಕಳ ಉತ್ಪನ್ನದಲ್ಲಿ ಔಷಧೀಯ ಗುಣಗಳಿರುವುದು ದೃಢಪಟ್ಟರೆ ನಿರಾಕರಣೆಯ ಮೂಲಕ ಸಲ್ಲುವ ಗೌರವವನ್ನು, ನಾವು ಕಸಿದುಕೊಂಡು ಮೊಸಮಾಡಿದಂತಲ್ಲವೇ ಅದರ ಉಪಯೋಗದಿಂದ ನಾವು ವಂಚಿತರಾದಂತಲ್ಲವೇ?
    ವಿಜ್ಞಾನಿಗಳಿಗೆ ಬೇರೆ ಪ್ರಾಣಿಗಳ ಬಗ್ಗೆಯೂ ಸಂಶೋಧನೆ ಮಾಡಬೇಕು ಎನಿಸಿದರೆ ತಡೆಯುವವರಾರು.
    ಒಂದು ನಂಬಿಕೆಯನ್ನು ಕಡೆಗಣಿಸಲು ಸಂಶೋಧನೆ ನಿರಾಕರಿಸುವುದು ವಿಜ್ಞಾನಿಗಳಿಗೆ ತರವಲ್ಲ.

    1. ನೀವು ಹೇಳುವ ಎಲ್ಲವೂ ಸತ್ಯ. ಆದರೆ ಸರಕಾರದ ಸ್ಕೀಮು ಕೇವಲ ಹಸುವಿಗೆ ಮಾತ್ರ ಮೀಸಲು. ಸರಕಾರದ ಉದ್ದೇಶ ಸ್ಪಷ್ಟವಾಗಿದೆ. ಆದರೆ ಬಹು ಮುಖ್ಯ ಪ್ರಶ್ನೆ ಸಣ್ಣಪುಟ್ಟ ಆರೋಗ್ಯ ಪೋಷಕ ಅಂಶಗಳನ್ನು ಹೊರತು ಪಡಿಸಿ ಆಕಳ ಉತ್ಪನ್ನಗಳು ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿರುವ ಮಾರಣಾಂತಿಕ ರೋಗಗಳು ಗುಣಪಡಿಸುವ ಅಂಶ ಹೊಂದಿಲ್ಲ ಎನ್ನುವುದು ಅಂಗೈ ಹುಣ್ಣಿನಷ್ಟೆ ಸ್ಪಷ್ಟವಾಗಿದೆ. ಇನ್ನು ಕ್ರಷಿ ಕ್ಷೇತ್ರಕ್ಕೆ ಹುಸು ಮೊದಲ್ಗೊಂಡು ಎಲ್ಲ ಪ್ರಾಣಿಗಳ ತ್ಯಾಜ್ಯ ಮತ್ತು ಉತ್ಪನ್ನಗಳು ಪೂರಕವಾಗಿಯೇ ಇವೆ ಎನ್ನುವ ಸಂಗತಿ ನಾವು ಒಪ್ಪಿಕೊಳ್ಳಲೇಬೇಕು.

  2. ಸರ್ ನೀಮ್ಮ ಬರಹ ಅತ್ಶಂತ ವೈಚಾರಿಕ ಹಾಗೂ ಸತ್ಶತೆಯಿಂದ ಕೂಡಿದೆ.ಹೀಗೆಯೆ ಸಮಾಜದ ಏಲ್ಲ ಜನರೂ ವೈಚಾರಿಕ ನೇಲೆಯ ಮೇಲೆ ಬದುಕು ಕಟ್ಟಿಕೊಳ್ಳಲು ಮುಂದಾಗಲಿ..ಧನ್ಶವಾದಗಳು..

  3. ಅರ್ಥಪೂರ್ಣ ಮಾಹಿತಿ, ಜನರ ತಲೆಯಲ್ಲಿ ತುಂಬುತ್ತಿರುವ ಇಂತಹ ಅಜ್ಞಾನವನ್ನು ಹೋಗಲಾಡಿಸಲು ವಿಜ್ಞಾನದ ತಿಳುವಳಿಕೆ ಅತ್ಯವಶ್ಯಕ. ಧನ್ಯವಾದಗಳು 🙏

  4. ವಿದೇಶದಿಂದ ಯುದ್ಧ ವಿಮಾನ ಖರೀದಿಸಿ ಅದರ ಚಕ್ರದ ಕೆಳಗೆ ನಿಂಬೆ ಹಣ್ಣನ್ನಿಟ್ಟು ಧಾರ್ಮಿಕ ನಂಬಿಕೆ ಹೆಸರಲ್ಲಿ ದರಿದ್ರತನ ಮೆರೆದವರು ಈಗ ಗೋವಿನ ಹೆಸರಲ್ಲೂ ಅಂತದ್ದೆ ದರಿದ್ರ ನಡೆಯನ್ನು ಅನುಸರಿಸಲು ನಿಂತು ವಿಜ್ಞಾನವನ್ನೆ ಗೋವಿನ ಸೆಗಣಿ ಮಾಡಿ ಹೊರಟ ಕೇಸರಿ ಕಮಂಗಿಗಳ ತಾಳಕ್ಕೆ ವಿಜ್ಞಾನಿಗಳು ಇನ್ನೂ ಕುಣಿಯದೇ ನಿರಿಕರಿಸಿದ್ದಾರೆಂಬುದೆ ತುಸು ಸಂತೋಷದ ಸಂಗತಿ‌. ಉಡಾವಣೆ ಮಾಡುವ ಉಪಗ್ರಹಕ್ಕೂ ಊರಿನ ಕಡ್ಡಿ ಬೆಳಗುವ ಬೇಕೂಫರು ಇದ್ದಾರೆ.ಕೇಂದ್ರದ ಕುತಂತ್ರಕ್ಕೆ ಮಣಿದು ವಿಜ್ಞಾನಕ್ಕೂ ಅಪಚಾರ ಎಸಗುವ ರೀತಿಯಲ್ಲಿ ಸಂಶೋಧನೆಯ ಹೆಸರಲ್ಲಿ ಕತೆ ಕಟ್ಟದಿರಲೆಂಬುದೆ ವಿಜ್ಞಾನಿಗಳಿಗೆ ನಮ್ಮ ಮನವಿ ಮತ್ತು ಒತ್ತಾಯ. ಅಕ್ಷರ ಬಲ್ಲ ಅಜ್ಞಾನಿಗಳು ಗೋವಿನ ಗಂಜಳ ಕುಡಿದು ಸೆಗಣಿ ತಿನ್ನುವುದು ಸರಿ ಎನ್ನುವವರ ಕಣ್ಣು ತೆರೆಸಲಿದೆ ಲೇಖನ.ಅವರೆಲ್ಲ ಎಷ್ಟು ಗಮನಕೊಟ್ಟು ಇದನ್ನು ಓದುತ್ತಾರೊ,ಅರ್ಥೈಸಿಕೊಳ್ಳುತ್ತಾರೊ ಸೀರಿ ಕೃಷ್ಣನೆ‌ಬಲ್ವ.

Leave a Reply

Your email address will not be published. Required fields are marked *

error: Content is protected !!