ಸತ್ಯಂಪೇಟೆ ಕೇಸ್ ಹಿಂಪಡೆಯದಿದ್ದರೆ ಬಸವ ಕೇಂದ್ರದಿಂದ ಹೋರಾಟ

ಜೇವರ್ಗಿ : ೨೯ : ಕನ್ನಡ ನಾಡಿನ ವೈಚಾರಿಕ ಸಾಹಿತಿ ಬಂಡಾಯಗಾರ ಶರಣ ಚಳುವಳಿಯ ವಾರಸುದಾರ ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲಿನ ಕೇಸ್ ವಾಪಸ್ ಪಡೆಯಬೇಕೆಂದು ಬಸವ ಕೇಂದ್ರ ತಹಶೀಲ್ದಾರರ ಮೂಲಕ ಸರಕಾರವನ್ನು ಒತ್ತಾಯಿಸಿತು.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ೧೨೦-೨೦೨೦ ಕೈ.ನಂ. ೫೦೫ ಐ.ಪಿ.ಸಿ ಅಡಿಯಲ್ಲಿ ಕೇಸ್ ದಾಖಲಿಸಿದ್ದು ಉದ್ದೇಶ ಪೂರ್ವಕ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ರಾಂಪುರ ಮಠದ ಶ್ರೀ ವಿಶ್ವೇಶ್ವರ ಕುರಿತು ಸೈದ್ಧ್ಯಾಂತಿಕ ಭಿನ್ನಾಭಿಪ್ರಾಯವನ್ನು ಕುರಿತು ಸತ್ಯಂಪೇಟೆ ತಮ್ಮ ವಿಚಾರ ದಾಖಲಿಸಿದ್ದಾರೆ ಹೊರತು ಉದ್ದೇಶ ಪೂರ್ವಕವಾಗಿ ಬರೆದಿಲ್ಲ.

ಈಗಾಗಲೇ ಈ ಕುರಿತು ಅವರು ವಿಷಾದ ವ್ಯಕ್ತ ಪಡಿಸಿದರೂ ವಿನಾಕಾರ ಪೊಲೀಸ್ ಕೇಸ್ ದಾಖಲಿಸುವ ಮೂಲಕ ವಿಶ್ವಾರಾಧ್ಯ ರನ್ನು ಹಣಿಯಲು ಯತ್ನಿಸುತ್ತಿದೆ. ಒಂದರ್ಥದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸರಕಾರ ಪೊಲೀಸರನ್ನು ಬಳಸುತ್ತಿದೆ. ಇದನ್ನು ನಾವೆಲ್ಲ ಒಕ್ಕೂರಲಿ ಖಂಡಿಸುತ್ತೇವೆ.

ಸತ್ಯಂಪೇಟೆಯವರ ಮೇಲೆ ಹಾಕಿರುವ ಕೇಸ್ ವಾಪಾಸ ಪಡೆಯದೆ ಹೋದರೆ ರಾಜ್ಯದಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಸಂಘಟನೆಯ ಪ್ರಮುಖರು ತಹಶೀಲ್ದಾರರ ಮೂಲಕ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಶಿವನಗೌಡ ಕಲ್ಲಹಂಗರಗಿ, sadanand patil, Nilkant Patil, Ningu Halimani, Ramanna Tonchnahalli, Basava Kendrada Sadashahu

೦ ವರದಿಗಾರ ಜೇವರ್ಗಿ

Leave a Reply

Your email address will not be published. Required fields are marked *

error: Content is protected !!