ಸತ್ಯಂಪೇಟೆಯವರ ಮೇಲೆ ಕೇಸ್ ಖಂಡಿಸಿ ಕಲಬುರ್ಗಿಯಲ್ಲಿ ಪ್ರತಿಭಟನೆ

ಕಲಬುರ್ಗಿ : ೨೯ : ಬಸವ ಅನುಯಾಯಿ, ಪತ್ರಕರ್ತ, ತತ್ವ ಪ್ರಸಾರಕ ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲೆ ಹೂಡಿರುವ ಮೊಕದ್ದಮ್ಮೆ ಹಿಂಪಡೆಯಬೇಕೆಂದು ಆಗ್ರಹಿಸಿ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.


ಈ ಹಿಂದೆಯೂ ಹರಿಹರದಲ್ಲಿ ಶ್ರೀ. ಸಿದ್ರಾಮ ಶೆಟ್ಟಕಾರ ಮೇಲೆ ದೂರು ದಾಖಲಿಸಿ ತೊಂದರೆ ಕೊಡಲು ಮೂಲಭೂತವಾದಿಗಳು ಯತ್ನಿಸಿದರು. ಈಗ ವಿಶ್ವಾರಾಧ್ಯ ಸತ್ಯಂಪೇಟೆ ಯವರ ಮೇಲೆ ವಿನಾಕಾರಣ ದೂರು ದಾಖಲಿಸಿ ಕಿರುಕುಳ ನೀಡಲು ಯತ್ನಿಸುತ್ತಿದೆ.

ದಾವಣಗೆರೆಯ ಹೊನ್ನಾಳಿಯಲ್ಲಿ ವಿಶ್ವಾರಾಧ್ಯರ ಮೇಲೆ ೧೨೦/೨೦೨೦ ಪ್ರಕಾರ ಐ.ಪಿ.ಸಿ.‌‌ಸೆಕ್ಷನ್ ೫೦೫ ರ ಪ್ರಕಾರ ದೂರು ದಾಖಲಿಸಿ ಅವರ ತೇಜೋವಧೆಗೆ ಯತ್ನಿಸುತ್ತಿದೆ.


ಇದಕ್ಕೆಲ್ಲ ಮೂಲ ಕಾರಣ ವಿಶ್ವಾರಾಧ್ಯ ಸತ್ಯಂಪೇಟೆಯವರು ಈಗಾಗಲೇ ತಮ್ಮ ಪ್ರಖರವಾದ ಬರಹ ಹಾಗೂ ಭಾಷಣಗಳಿಂದ ಹೆಸರುವಾಸಿಯಾಗಿದ್ದಾರೆ. ಬಸವ ತತ್ವ ಪ್ರಸಾರವೇ ತಮ್ಮ ಗುರಿಯನ್ನಾಗಿ ಮಾಡಿಕೊಂಡಿದ್ದಾರೆ. ಈಗಾಗಲೇ ಬಸವಮಾರ್ಗ.ಕಾಮ್ ಎಂಬ ಅಂತರ್ಜಾಲ ಪತ್ರಿಕೆಯ ಮೂಲಕ ಆರು ಲಕ್ಷ ಜನರನ್ನು‌ ತಲುಪಿದ್ದಾರೆ. ಇದು ಮೂಲಭೂತವಾದಿಗಳಿಗೆ ನುಂಗಲಾಗದ ತುತ್ತಾಗಿದೆ.ಆದ್ದರಿಂದಲೇ ಅವರ ಮೇಲೆ ಹೊನ್ನಾಳಿಯಲ್ಲಿ ವಿನಾಕಾರಣ ದೂರು ದಾಖಲಿಸಿ ತೊಂದರೆ ಕೊಡಲು ಯತ್ನಿಸುತ್ತಿದೆ.

ಕೂಡಲೇ ಸಕಕಾರ ಎಚ್ಚರಗೊಂಡು ಈ ದೂರು ವಾಪಾಸು ಪಡೆಯಬೇಕು. ಇಲ್ಲದಿದ್ದರೆ ರಾಜ್ಯದ ತುಂಬೆಲ್ಲ ಉಗ್ರ ಹೋರಾಟ ಮಾಡಲಾಗುವುದು ಎಂದು ಸಂಘಟನೆ ಪ್ರತಿಪಾದಿಸಿತು.

ಸಂಘಟನೆಯ ಅಧ್ಯಕ್ಷರಾದ ಪ್ರಭುಲಿಂಗ ಮಹಾಗಾಂವಕರ್, ಅಶೋಕ ಘೂಳಿ, ವಿಜಯಕುಮಾರ ತೇಗಲತಿಪ್ಪಿ, ಶಶಿಕಾಂತ ಪ್ರಸಾದ, ಧನರಾಜ ತಾಂಬೋಳೆ, ಸಿದ್ರಾಮಪ್ಪ‌ಲದ್ದೆ, ಚಂದ್ರಕಾಂತ ಪಾಟೀಲ,ಜಗದೀಶ ಪಾಟೀಲ, ಶ್ರೀಶೈಲ ಘೂಳಿ,ರಾಜಶೇಖರ ಯಕ್ಚಿಂತಿ, ಅಮೃತರಾವ್ ಸೋಂತ, ರಮೇಶ್ ಧುತ್ತರಗಿ ಮೊದಲಾದವರು ಭಾಗವಹಿಸಿದ್ದರು. ಜಿಲ್ಲಾಧಿಕಾರಿಗಳ ಮೂಲಕ‌ ಸರಕಾರಕ್ಕೆ ಮನವಿ ಸಲ್ಲಿಸಿದರು.

೦ ವರದಿಗಾರ, ಕಲಬುರ್ಗಿ

One thought on “ಸತ್ಯಂಪೇಟೆಯವರ ಮೇಲೆ ಕೇಸ್ ಖಂಡಿಸಿ ಕಲಬುರ್ಗಿಯಲ್ಲಿ ಪ್ರತಿಭಟನೆ

  1. ಜಾಗತಿಕ ಲಿಂಗಾಯತ ಮಹಾ ಸಭೆ ಕಲಬುರ್ಗಿ ಘಟಕಕ್ಕೆ ಅನಂತ ಶರಣು ಶರಣಾರ್ಥಿ

Leave a Reply

Your email address will not be published. Required fields are marked *

error: Content is protected !!