ಇವರಲ್ಲಿ ಯಾರು ಲಿಂಗಾಯತರು?

ಮೊನ್ನೆ ನಾನೊಂದು ಸಭೆಯಲ್ಲಿ ಮಾತಾಡುತ್ತಿದ್ದೆ. ಬಸವಣ್ಣನವರ ಜಾತಿವಿನಾಶದ ಕಲ್ಪನೆಯನ್ನು ಕುರಿತು ವಿವರಿಸುತ್ತಿದ್ದೆ. ಆಗ ಸಭಿಕರಲೊಬ್ಬ ಎದ್ದು ನನ್ನನ್ನು ನೀವು ಯಾವ ಜಾತಿಯವರು?' ಎಂದು ಕೇಳಿ ಬಿಟ್ಟ. ಕ್ಷಣ ಹೊತ್ತು ಕಕ್ಕಾಬಿಕ್ಕಿಯಾದೆ. ``ಬೇಕಿದ್ದರೆ ಸಭೆ ಮುಗಿದ ನಂತರ ಅಥವಾ ನನ್ನ ಮಾತು ಮುಗಿದ ನಂತರ ಬೇಕಿದ್ದರೆ ಕೇಳಿ'' ಅಂದೆ. ಆದರೆ ಆ ವ್ಯಕ್ತಿ ತನ್ನ ಪಟ್ಟು ಬಿಡಲಿಲ್ಲ. ಜಾತಿವಿನಾಶದ ಕುರಿತು ಮಾತಾಡುವವರ ಜಾತಿಯನ್ನೇ ಪ್ರಶ್ನಿಸಿ ಅವರನ್ನು ಕಂಗೆಡಿಸಬಹುದು ಎಂಬ ದುರುದ್ದೇಶ ಆ ವ್ಯಕ್ತಿಗೆ ಇರುವಂತೆ ಕಂಡು ಬಂತು. ಒಡನೆಯೇ ನಾನು ಆ ವ್ಯಕ್ತಿಯನ್ನು ಉದ್ದೇಶಿಸಿ: ``ನಿಮ್ಮ ಜಾತಿ ಯಾವುದು? ಅಂತ ನಾನು ನಿಮ್ಮನ್ನು ಕೇಳಬಹುದೆ?'' ಎಂದೆ, ಅದಕ್ಕಾತನನ್ನದನ್ನು ತಗೊಂಡು ಏನ್ಮಾಡ್ತೀರಿ, ನಿಮ್ಮದನ್ನು ಹೇಳಿ! ಏಕೆಂದರೆ ಭಾಷಣ ಮಾಡಲು ಬಂದೋರು ನೀವು!’ ಅಂತ ಇನ್ನೊಂದು ಬಾಂಬ್ ಎಸೆದುಬಿಟ್ಟು ಬೀಗತೊಡಗಿದ. ಆಗ ನನಗೆ ಅದೊಂದು ಥರದ ಅವಮಾನ ಎಂಬಂತೆ ಭಾಸವಾಗತೊಡಗಿತು, ಎಲ್ಲರೂ ನನ್ನ ಕಡೆಗೇ ನೋಡತೊಡಗಿದರು. ಆ ವ್ಯಕ್ತಿಯ ಬಗೆಗೆ ನನಗೆ ಅಸಹನೆಯೇನೋ ಉಂಟಾಯಿತು. ಆದರೆ ಅದನ್ನು ಹೊರಗೆಡಹುವಂತಿಲ್ಲ.


ನಾನು ಹುಟ್ಟಿದ ಜಾತಿ ಯಾವುದೋ ಇದ್ದಿರಬಹುದು, ಆದರೆ ಈಗ ನನಗೆ ಅದರಲ್ಲಿ ವಿಶ್ವಾಸವಿಲ್ಲ. ನೀವು ಕೇಳಿದ ಪ್ರಶ್ನೆಗೆ ಉತ್ತರಿಸಬಹುದಾದರೆ ನಾನೀಗ ಬಸವಣ್ಣನವರ ಅನುಯಾಯಿ! ಒಂದು ರೀತಿಯಲ್ಲಿ ಬಸವಮಾರ್ಗಿ ಈಗ ಹೇಳಿ! ನೀವು ಯಾರು?'' ಎಂದು ಕೇಳಿದೆ. ಅದಕ್ಕಾತನಿಮ್ಮಂಗೆ ನಾನೇಕೆ ಹೇಳಲಿ? ನಾನು ಲಿಂಗಾಯತರವನು!” ಎಂದೆನ್ನಬೇಕೆ? ಸರಿಬಿಡಿ ! ನೀವು ಇಷ್ಟಾದರೂ ಸ್ಪಷ್ಟವಾಗಿ ಹೇಳುತ್ತೀರಿ. ಏಕೆಂದರೆ ಅದೆಷ್ಟೋ ಜನ ನಾವು ಲಿಂಗಾಯತರು ಅಂತ ಹೇಳಿಕೊಳ್ಳುವುದೇ ಸಂಕೋಚ ಎಂದು ಭಾವಿಸುತ್ತಾರೆ'' ಎಂದು ಆ ವ್ಯಕ್ತಿಯ ಬಗ್ಗೆ ಬಹಿರಂಗವಾಗಿಯೇ ನಾನು ಸ್ವಲ್ಪ ಮೆಚ್ಚುಗೆ ವ್ಯಕ್ತಪಡಿಸಿದೆ. ಅಷ್ಟರಲ್ಲಿ ಮಗದೊಬ್ಬ ಎದ್ದು ನಿಂತ. ಲಿಂಗಾಯತರು ನಡೆಸುವ ಸಭೆಗಳಲ್ಲಿ ಇದು ಸಾಮಾನ್ಯವಾದ ದೃಶ್ಯ. ಒಬ್ಬಿಬ್ಬರು ಎದ್ದಾಡುವುದಿಲ್ಲ. ವಿಧಾನ ಸಭೆಗಳಲ್ಲಿಯಂತೆ ಅತ್ತ ಹತ್ತಾರು ಮಂದಿ, ಇತ್ತ ಹತ್ತಾರು ಮಂದಿ ಗುಂಪು ಗುಂಪಾಗಿ ನಿಂತು ಪರಸ್ಪರ ದೂಷಣೆಗಳನ್ನು ತೂರಾಡಿಕೊಂಡಾದ ಮೇಲೆಯೇ ಮುಕ್ತಾಯವಾಗುವುದು ಇದು. ಅವರ ಸಭೆಗಳ ವೈಶಿಷ್ಟ್ಯ ಕೂಡಾ! ಅಂದ ಹಾಗೆ ಅಕ್ಷರಶಃ ಹಾಗೆಯೇ ಆಗತೊಡಗಿತು. ನಡುವೆ ಎದ್ದು ನಿಂತ ಆ ವ್ಯಕ್ತಿ: ಆತ ತಾನು ಲಿಂಗಾಯತ ಅಂತ ಹೇಳಿಕೊಳ್ಳುತ್ತಾನಲ್ರೀ… ಅದರೊಳಗೆ ಆತ ಯಾವ ಪಂಗಡದವನು?” ಅಂತ ಸ್ವಲ್ಪ ನೀವು ವಿಚಾರಿಸಿರಿ?” ಅಂತ ನನ್ನ ಕಡೆ ನೋಡುತ್ತ ನುಡಿದ. ನಾನು ಆಶ್ಚರ್ಯಚಿಕಿತನಾದೆ.


ಲಿಂಗಾಯತ ಅನ್ನೋದು ಜಾತಿ ಅಲ್ಲ; ಅದೊಂದು Wಚಿಥಿ oಜಿ ಐiಜಿe. ಬಸವಣ್ಣನವರು ಎಲ್ಲ ಮತ ಪಂಥ, ಜಾತಿ ವಿಜಾತಿಗಳನ್ನು ಕಿತ್ತೊಗೆದದ್ದರ ಸಂಕೇತವಾಗಿಯೇ ಯಾವುದೇ ಗುಡಿಗುಂಡಾರಗಳ, ಇಗರ್ಜಿ ಮಸೀದಿಗಳ, ಪ್ರತೀಕವಲ್ಲದ ಸಮಸ್ತ ಬಯಲು ಬ್ರಹ್ಮಾಂಡದ ಕುರುಹಿನಂತಿರುವ ಇಷ್ಟಲಿಂಗವನ್ನು ಕೊಟ್ಟು, ಯಾರು ಇಂಥ ಇಷ್ಟಲಿಂಗವನ್ನು ಆಯತ ಮಾಡಿಕೊಂಡಿರುತ್ತಾರೋ ಅಂಥವರು ಲಿಂಗಾಯತರು-ಲಿಂಗವಂತರು ಅಂತ ಹೆಸರಿಟ್ಟು ಕರೆದರು. ಈಗ ಅದೇ ಒಂದು ಜಾತಿ ಆಗಿರೋದು ದುರ್ದೈವ. ಹೀಗಿರುವಾಗ ಅಂಥ ಲಿಂಗಾಯತದೊಳಗೂ, ಪಂಗಡಗಳಿವೆ ಎಂದು ಹೇಳಿದರೆ ಶುದ್ಧ ನಾಚಿಕೆಗೇಡು!'' ಎಂದು ಒಂದು ಥರದ ಸಿಟ್ಟು ಮತ್ತು ಅಸಹನೆಯನ್ನು ನಾನು ವ್ಯಕ್ತಪಡಿಸಿದೆ. ಅಷ್ಟರಲ್ಲಿ ಮಗದೊಬ್ಬಾತ, ನಾನು ಮಾತಾಡುತ್ತಿದ್ದ ಮೈಕ್‍ನ ಹತ್ತಿರವೇ ಬಂದು,ಸ್ವಲ್ಪ ಸರೀರಿ, ಅಣ್ಣಾ ಅವರೇ” ಎಂದವನೇ ನನಗೆ ಯಾವ ದರಕಾರು ಮಾಡದೆ, ಎದುರು ನಿಂತಿದ್ದ (ಬಹುಶಃ ಆ ವ್ಯಕ್ತಿ ಅವನ ಎದುರಾಳಿಯಾಗಿರಬಹುದೇನೋ?) ವ್ಯಕ್ತಿಯನ್ನು ಕುರಿತು:


ಲಿಂಗಾಯತ ಅಂತ ಇಲ್ಲಿ ದೊಡ್ಡದಾಗಿ ಹೇಳುತ್ತಿ, ಆದರೆ ನೀನು ಬಣಜಿಗರ ಸಂಘ ಯಾಕೆ ಕಟ್ಟಿರುವೆ?'' ಎಂದದ್ದಕ್ಕೆ ಎದುರುಗಡೆ ನಿಂತಿದ್ದ ಆ ವ್ಯಕ್ತಿಯೇನು ಸುಮ್ಮನಾದನೇ? ಇಲ್ಲ ! ಅದಕ್ಕೆ ಪ್ರತಿಯಾಗಿಬಣಜಿಗರಿಗೆ ಸರ್ಕಾರ ಕೆಲವು ಸವಲತ್ತು ಕೊಡುತ್ತದಂತೆ, ಅದರ ಸಲುವಾಗಿ ನಾವು ಬಣಜಿಗರ ಸಂಘ ಕಟ್ಟಿಕೊಂಡಿದ್ದೇವೆಯೇ ಹೊರತು ನಿನ್ನಂತೆ ರೆಡ್ಡಿಸಂಘ'' ಕಟ್ಟಿಕೊಂಡು ಜಾತಿ ಮಾಡುತ್ತಿಲ್ಲ'' ಎಂದುಬಿಟ್ಟ. ಅದನ್ನು ಕೇಳಿಸಿಕೊಳ್ಳುತ್ತ ಕೊನೆಯಲ್ಲಿ ನಿಂತಿದ್ದ ಇಬ್ಬರು ಮೂವರು ಅಷ್ಟರಲ್ಲಿ ಒಮ್ಮಿಗೆ ಬಂದವರೇ: ನೋಡ್ರಿ ಇವರು ಹೀಗೆ ಜಗಳ ಆಡೋದನ್ನು ನೋಡಿ ನೋಡಿ ಬೇಸತ್ತು ನಾವೀಗ ಪಂಚಮಸಾಲಿ ಸಂಘ ಅಂತ ಕಟ್ಟಿಕೊಂಡೀವಿ. ನಾವೂ ಈಗಾಗಲೇ ಒಬ್ಬ ಸ್ವಾಮಿಯನ್ನ ನೋಡೀವಿ. ಆತ ನಮ್ಮ ಜಗದ್ಗುರು ಅಂತ ಕರಿತೀವಿ. ಪ್ರತ್ಯೇಕವಾಗಿ ನಮ್ಮದೇ ಒಂದು ಜಗದ್ಗುರು ಪೀಠ ಸ್ಥಾಪನಾ ಮಾಡಿ ಅದರ ಮ್ಯಾಲ ಆ ಸ್ವಾಮೀನ್ನ ಕುಂಡ್ರಸ್ತಿವಿ” ಎಂದು “ತಾವು ಮಾತ್ರ ಒಳ್ಳೆಯವರು, ಜಾತಿ ಮಾಡೋರಲ್ಲ” ಎಂಬಂತೆ ನನಗೆ ಅದನ್ನು ಬಿಂಬಿಸತೊಡಗಿದರು. ಹಣೆ ಹಣೆ ಗಟ್ಟಿಸಿಕೊಂಡೆ! ಹಾಗಾದರೆ ಇವರಲ್ಲಿ ಯಾರು ಲಿಂಗಾಯತರು?

0 Linganna Satyamet


ಸೆಪ್ಟೆಂಬರ್ -2007

3 thoughts on “ಇವರಲ್ಲಿ ಯಾರು ಲಿಂಗಾಯತರು?

  1. ಲಿಂಗಾಯತರ ದುಸ್ಥಿತಿಯನ್ನುಇ ಲೇಖನಬಿಂಬಿಸುತ್ತದೆ.ಬಸವಣ್ಣ ಮಠ ಕಟ್ಟಲಿಲ್ಲ ಭಕ್ತರ ಮನೆಗಳೆ ಮಠ ಅಂದ್ರು ಆದರೂ ಇವರು ಮಠದ ವೆವಸ್ಥೆಯಿಂದದುರ ಸರಿಯುವುದು ಬಿಟ್ಟು ಆಕಡೆನೆ ವಾಲುತಿದ್ದಾರೆ ಇದು ದುರಂತವಲ್ಲವೆ. ವ

  2. ಲೇಖನ ಹಾಸ್ಯ ಭರಿತವಾಗಿ ಚೆನ್ನಾಗಿ ಮೂಡಿ ಬಂದಿದೆ ಆದರೆ ಈ ಜಾತಿವ್ಯವಸ್ಥೆ ಎಲ್ಲಿಗೆ ಬಂದು ನಿಲ್ಲುತ್ತದೆ ತಿಳಿಯದಾಗಿದೆ

  3. ಜಾತಿ ಎಂಬ ವಿಷ ಪ್ರತಿಯೊಬ್ಬ ಭಾರತೀಯ ನಲ್ಲಿ ತುಂಬಿತುಳುಕುತ್ತಿದೆ,ತಮ್ಮ ತಮ್ಮ ಒಳ ಪಂಗಡ ಗಳೇ ಶ್ರೇಷ್ಟ ಎಂದೂ ಅಷ್ಪೃಶ್ಯತೇ ಯನ್ನು ಆಚರಿಸುತ್ತಾ ತಾವು ಲಿಂಗಾಯತರು ಎಂದು ಎದೆ ಉಬ್ಬಿ ಸಿ ಹೇಳುತ್ತಾರೆ, ಪ್ರತಿ ಅಮಾವಾಸ್ಯೆ ಗೆ ತಮ್ಮ ತಮ್ಮ ವಾಹನಗಳಿಗೆ ಲಿಂಬೆ ಹಣ್ಣು,ಕರಿದಾ ರ ಕಟ್ಟಿ ಊರ ದೇವತೆಗಳ ದರ್ಶನ್ ತೆಗೆದುಕೊಳ್ಳುತ್ತಾ,ಗುತ್ತಿಗೆಗೆ,ಕೈಗಳಿಗೆ ಕರಿದಾ ರ,ತಾಯಿ ತ ಕಟ್ಟಿಕೊಳ್ಳುತ್ತಾರೆ.ಮೈತುಂಬ ವಿಭೂತಿ ಧರಿಸಿ ಶರಣು ಶರಣು ಅನ್ನುತ್ತಾರೆ.

Leave a Reply

Your email address will not be published. Required fields are marked *

error: Content is protected !!