ಅಪ್ಪ -ನೀವು ಒಂದು ನಾಣ್ಯದ ಎರಡು ಮುಖ

ಒಂದಿಷ್ಟು ಆರ್ಥಿಕ ಚೇತರಿಕೆ ಕಂಡರೆ ಸಾಕು ಹಿಂದಿನ ಎಲ್ಲ ನೆನಪುಗಳನ್ನು ಮರೆಮಾಚುವ ಪ್ರಸ್ತುತ ದಿನಗಳಲ್ಲಿ ಬಡತನದ ಅವಿಭಕ್ತ ಕುಟುಂಬದ ಗ್ರಾಮೀಣ ಬದುಕನ್ನ ಹೇಳಿಕೊಂಡ ತಮ್ಮ ಬರವಣಿಗೆ ತುಂಬ ಇಷ್ಟವಾಯಿತು.

ಗಟ್ಟಿತನದ ಆಯಿ ,ಸಾಂಸ್ಕೃತಿಕ ಕೇಂದ್ರವಾದ ಗುರಪ್ಪ ಯಜಮಾನ ಅವರ ಮೇಲೆಯೇ ಕಟ್ಟಿದಂತಿದ್ದ ಜನಪದ ಗೀತೆ ಸುಂದರ.ಶರಣರ ಚಿಂತನೆಗಳನ್ನು ಮನೆ ಮನೆಗೆ ತಲುಪಿಸಲು ಹೊರಟು ನಿಂತ ನಮಗೆ ಅಪ್ಪಾಜಿಯ ದಿಟ್ಟ ನಿಲುವುಗಳು ದಾರಿ ದೀಪ. ಆಸ್ಪತ್ರೆಯಲ್ಲಿ ಬಿಡಿಗಾಸು ಹೊಂದಿಸಲು ಆಗದ ಸಂದರ್ಭದಲ್ಲಿ ನನ್ನ ಪ್ರಾರ್ಥನೆ ಈ ಕಾರ್ಯದಲ್ಲಿ ನಡೆಯುವ ನಮಗಾರಿಗು ಈ ಸಂದರ್ಭ ಬರದಿರಲಿ.

ಜೆ.ಎಚ್. ಪಟೇಲರೊಡನೆ ನಡೆದ ತಿಳಿ ಹಾಸ್ಯದ ಪ್ರಸಂಗಗಳು ಇನ್ನೂ ಇರಬೇಕಿತ್ತು. ಅಪ್ಪನ ಸಾವು ಮನಕಲಕಿತು. ಮಠಾಧೀಶರ ಪುಸ್ತಕಗಳನ್ನು ಓದಿ ಅವರ ದೃಷ್ಟಿಯಲ್ಲಿ ಮಾತ್ರ ವಚನಗಳನ್ನು ಅರ್ಥೈಸಿಕೊಂಡ ನಮಗೆ ತಮ್ಮ ಬರವಣಿಗೆಯ ಮಧ್ಯೆ ವಚನಗಳನ್ನು ಅರ್ಥೈಸಿದ್ದು ನಮ್ಮ ಜೀವನದಲ್ಲು ಈ ವಚನಗಳ ಸಾಲುಗಳು ಬಂದು ಹೋಗಿವೆ ಎನ್ನುವ ಅನುಭವವಾಯಿತು.

ಒಟ್ಟಾರೆ ಅಪ್ಪಾಜಿ ಮತ್ತು ನೀವು ಒಂದೇ ನಾಣ್ಯದ ಎರಡು ಮುಖಗಳಾಗಿ ಸಾಗಿದ್ದರಿಂದ ಅವರ ಜೀವನ ಚರಿತ್ರೆ ನೀವು ಬರೆದಿದ್ದೀರಿ. ನಿಮ್ಮ ಚರಿತ್ರೆ ಬರೆಯುವವರಿಗೆ ಮಣ ಭಾರವಾಗಲಾರದು.

೦ ಮರುಳಸಿದ್ದಯ್ಯ ದಾವಣಗೆರೆ

ಜಾಗತಿಕ ಲಿಂಗಾಯತ ಮಹಾಸಭೆ ದಾವಣಗೆರೆ

One thought on “ಅಪ್ಪ -ನೀವು ಒಂದು ನಾಣ್ಯದ ಎರಡು ಮುಖ

  1. ಅಪ್ಪಮತ್ತು ನೀವು ಒಂದು ನಾಣ್ಯದ ಎರಡು ಮುಖಗಳು ಅಪ್ಪನ ನೆನಪು ಕೃತಿಯನ್ನು ಕುರಿತು ಮರುಳ ಸಿದ್ದಯ್ಯ ಅರ್ಥಪೂರ್ಣವಾಗಿ ಬರೆದಿದ್ದಾರೆ.ನೂಲಿನಂತೆ ಸೀರಿ,ತಾಯಿಯಂತೆ ಮಗಳು,ತಂದೆಯಂತೆ ಮಗ ಎಂಬ ನಾಣ್ಣುಡಿಯನ್ನು ಸಾಬೀತಾದಂತಾಗಿದೆ . ಶರಣುಗಳು.

Leave a Reply

Your email address will not be published. Required fields are marked *

error: Content is protected !!