ನಕಲಿ ಬೇಡ ಜಂಗಮ ಪ್ರಮಾಣ ಪತ್ರ, ನೌಕರರ ಅಮಾನತ್ತು

ಬೆಳಗಾವಿ: ಗೋಕಾಕ ಮತ್ತು ಮೂಡಲಗಿ ತಾಲೂಕಿನ 24 ಜನರು ಪರಿಶಿಷ್ಟ ಜಾತಿಯ ಬೇಡ ಜಂಗಮ ಪ್ರಮಾಣ ಪತ್ರ ಪಡೆದುಕೊಂಡು ಪರಿಶಿಷ್ಟ ಜಾಯಿವರಿಗೆ ಹಾಗೂ ಸರಕಾರಕ್ಕೆ ವಂಚಿಸಿದ್ದರು. ಈ ಸಂಬಂಧ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸಿದೆ.

ಮೂಲತಃ  ಲಿಂಗಾಯತ ಜಂಗಮ ಜಾತಿಗೆ ಸೇರಿದ ಇವರೆಲ್ಲ ಗೋಕಾಕ ತಹಸಿಲ್ದಾರ, ಉಪತಹಸಿಲ್ದಾರ ಗೋಕಾಕ ಮತ್ತು ಮೂಡಲಗಿ, ಕಂದಾಯ ನಿರೀಕ್ಷಕ ಅರಬಾವಿ, ಗ್ರಾಮ ಲೆಕ್ಕಾಧಿಕಾರಿ ಮೂಡಲಗಿ ಇವರೊಂದಿಗೆ ಶಾಮೀಲಾಗಿ ಪರಿಶಿಷ್ಟ ಜಾತಿಯ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕಾಗಿ ಬೇಡ ಜಂಗಮ ಸುಳ್ಳು ಪ್ರಮಾಣ ಪತ್ರ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಗೋಕಾಕ ತಹಸಿಲ್ದಾರ ಗ್ರೇಡ್ 2 ಎಸ್.ಕೆ.ಕುಲಕರ್ಣಿ, ಅರಬಾವಿ ಕಂದಾಯ ನಿರೀಕ್ಷಕ ರುದ್ರಪ್ಪ ನೇಸರಗಿ, ಮೂಡಲಗಿ ಗ್ರಾಮ ಲೆಕ್ಕಾಧಿಕಾರಿ ಅಲ್ಲಪ್ಪ ಬಾಗವಾನ ಇವರು ಸ್ಥಾನಿಕ ಚೌಕಾಶಿ ನಡೆಸದೆ, ಸರಿಯಾಗಿ ಪರಿಶೀಲನೆ ಮಾಡದೆ ನಿಯಮಗಳನ್ನು ಪಾಲಿಸದೆ ಜಾತಿ ಪ್ರಮಾಣ ಪತ್ರ ನೀಡಿದ್ದಾರೆಂದು ಆರೋಪಿಸಲಾಗಿದೆ.

ರಾಜಮಾರ್ಗವನ್ನು ಬಿಟ್ಟು ದಲಿತ ಸಮುದಾಯಕ್ಕೆ ಸಿಗಬೇಕಾದ ಸವಲತ್ತುಗಳನ್ನು ಪಡಕೊಳ್ಳುವುದು ಸರಿಯಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ಮುಖಂಡರು ಪತ್ರಕರ್ತರಿಗೆ ತಿಳಿಸಿದರು.

ಈ ಹಿನ್ನೆಲೆಯಲ್ಲಿ ವಿಚಾರಣೆ ಬಾಕಿ ಇಟ್ಟು ರುದ್ರಪ್ಪ ನೇಸರಗಿ ಹಾಗೂ ಅಲ್ಲಪ್ಪ ಬಾಗವಾನ್ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಈ ಸಂಗತಿಯನ್ನು ಅರಿತುಕೊಂಡಾದರೂ ಲಿಂಗಾಯತ ಜಂಗಮರು ಬೇಡ ಜಂಗಮ ಸರ್ಟಿಫಕೇಟ್ ಗೆ ಹಂಬಲಿಸುವುದು ಸರಿಯಲ್ಲ. ಲಿಂಗಾಯತ ಧರ್ಮದಲ್ಲಿ ಜಂಗಮರಿಗೆ ವಿಶೇಷವಾದ ಸ್ಥಾನಮಾನವಿದೆ. ಲಿಂಗಾಯತ ಧರ್ಮದ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಅಲ್ಪಸಂಖ್ಯಾತ ಸ್ಥಾನಮಾನದ ಲಾಭವನ್ನು ಪಡಕೊಳ್ಳಬೇಕು. ಇದು ಎಲ್ಲರೂ ಒಪ್ಪುವ ರಾಜಮಾರ್ಗ.

5 thoughts on “ನಕಲಿ ಬೇಡ ಜಂಗಮ ಪ್ರಮಾಣ ಪತ್ರ, ನೌಕರರ ಅಮಾನತ್ತು

 1. I would like to express some appreciation to you for rescuing me from this type of issue. Because of searching throughout the world-wide-web and seeing recommendations that were not powerful, I thought my life was done. Being alive without the answers to the difficulties you have resolved through the site is a serious case, as well as the ones that could have badly damaged my career if I had not come across your blog post. Your main talents and kindness in touching a lot of things was important. I’m not sure what I would have done if I had not come upon such a stuff like this. I can also at this moment relish my future. Thanks a lot so much for your reliable and result oriented guide. I will not be reluctant to propose the blog to any individual who should get recommendations about this issue.

 2. ಅಮಾನತ್ತು ಶಿಕ್ಷೆಯಲ್ಲ. ಜುಡಿಶಿಯಲ್‌ ಮೈಂಡ್‌ ಇಲ್ಲದೆ ಹೊರಡಿಸಿದ್ದ ಅಮಾನತ್ತು ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ ರದ್ದುಗೊಳಿಸಿ ತೀರ್ಪು ನೀಡಿದ ರೀತ್ಯಾ ಬೆಳಗಾವಿ ಪ್ರಾದೇಶಿಕ ಆಯುಕ್ತರು ಅಮಾನತ್ತು ಆದೇಶವನ್ನು ತೆರವುಗೊಳಿಸಿ ಸದರಿ ತಹಶೀಲ್ದಾರರನ್ನು ಕರ್ತವ್ಯದಲ್ಲಿ ಮುಂದುವರೆಸಿ ಆದೇಶಿಸಿದ್ದಾರೆ.

  ತಮ್ಮ ಬರಹಗಳನ್ನು ಗಮನಿಸಿದರೆ, ತಮಗೆ ಕಾನೂನಿನ ಮತ್ತು ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲವೆಂಬುದು ವೇದ್ಯವಾಗುತ್ತದೆ. ಜಂಗಮರು ಬೇಡಜಂಗಮರಲ್ಲ ಎಂದು ಹೊರಡಿಸಿದ್ದ ೩ ಸುತ್ತೋಲೆಗಳನ್ನು ಇನ್ನು ಮುಂದೆ ಅನುಸರಿಸುವುದಿಲ್ಲವೆಂದು ಸರಕಾರವೇ ಮಾನ್ಯ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಾಗ್ದಾನ ಮಾಡಿ ೫.೧೦.೧೯೯೫ರಲ್ಲಿ ಹಿಂಪಡೆದಿದೆ. ಬೇಡಜಂಗಮರೆಂದರೆ ತಮ್ಮ ಪ್ರಕಾರ ಯಾರು ಎಂಬುದನ್ನು, ತಾವು ತಿಳಿದಂತೆ ಬೇಡಜಂಗಮರ ಆಚಾರ-ವಿಚಾರ, ಧಾರ್ಮಿಕ ಗುಣಲಕ್ಷಣಗಳನ್ನು ವಿವರಿಸಿರಿ. ತಾವು ಸರಕಾರದ ದಾಖಲೆಗಳನ್ನು ಪರಾಮರ್ಶಿಸದೆ, ಲಿಂಗಾಯತ ಜಂಗಮರು ಬೇಡಜಂಗಮರೆಂದು ಹಂಬಲಿಸುವುದು ಸರಿಯಲ್ಲ ಎಂಬ ನಿರಾಧಾರ ಹೇಳಿಕೆಗಳನ್ನು ನ್ಯಾಯಾಧೀಶರು ಆದೇಶಿಸುವ ತೆರದಲ್ಲಿ ವ್ಯಕ್ತಪಡಿಸುವುದು ತಮ್ಮಂಥ ಹಿರಿಯರಿಗೆ ಶೋಭೆಯಲ್ಲ. ಸರಕಾರದ ದಾಖಲೆಗಳನ್ನು ಪರಿಪೂರ್ಣವಾಗಿ ಓದಿಕೊಳ್ಳಿರಿ, ಅಥವಾ ತಮ್ಮಲ್ಲಿ ಸಮರ್ಥಿಸತಕ್ಕ ದಾಖಲೆಗಳಿದ್ದರೆ ಬಿಡುಗಡೆಗೊಳಿಸಿ. ಸಂಶಯಗಳಿದ್ದರೆ ನಾವು ದಾಖಲೆಗಳನ್ನು ಒದಗಿಸಲು ಸಿದ್ಧರಿದ್ದೇವೆ. ದಯಮಾಡಿ “ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯಪಡಬೇಡ” ಎಂಬ ಬಸವಣ್ಣನವರ ವಚನದಂತೆ ನಡೆಯುವಿರೆಂದು ನಂಬಿದ್ದೇನೆ.

 3. ಆತ್ಮೀಯರೇ ಮತ್ತು ಹಿರಿಯರೇ,

  ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಮೂಡಲಗಿಯ ೨೪ ಜನರಿಗೆ ಬೇಡಜಂಗಮ ಜಾತಿ ಪ್ರಮಾಣಪತ್ರ ಮಂಜೂರು ಮಾಡಿರುವ ಪ್ರಕ್ರಿಯೆಯಲ್ಲಿ ಸಂಬಂಧಿತ ತಹಶೀಲ್ದಾರರು ಮತ್ತು ಇತರೆ ಇಬ್ಬರು ಕಂದಾಯ ಸಿಬ್ಬಂದಿಗಳನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತರು ಅಮಾನತ್ತುಗೊಳಿಸಿದ ವಿಷಯವನ್ನು “ಬಸವ ಮಾರ್ಗ”ದಲ್ಲಿ ತಾವು ಪ್ರಸ್ತಾಪಿಸಿ, ಈ ಸಂಗತಿಯನ್ನು ಅರಿತಾದರೂ ಲಿಂಗಾಯತ ಜಂಗಮರು ಬೇಡಜಂಗಮ ಸರ್ಟಿಫಿಕೇಟ್‌ ಗೆ ಹಂಬಲಿಸುವುದು ಸರಿಯಲ್ಲ ಎಂದು ಬರೆದಿರುತ್ತೀರಿ. ಈ ದಿಸೆಯಲ್ಲಿ ತಮಗೆ ಕೆಳಕಂಡ ವಿಷಯಗಳನ್ನು ಮನವರಿಕೆ ಮಾಡಿಕೊಡಬಯಸುತ್ತೇನೆ.

  ಭಾಗ-೧ : ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆಯ ಸನ್ಮಾನ್ಯ ಮಂತ್ರಿಗಳು ಸಹ ತಮ್ಮದೇ ಅಭಿಪ್ರಾಯವನ್ನೇ ಸದನದಲ್ಲಿ ವ್ಯಕ್ತಪಡಿಸಿದ್ದರು. ಸನ್ಮಾನ್ಯ ಮಂತ್ರಿಗಳು ವ್ಯಕ್ತಪಡಿಸಿದ ಅಂಶಗಳನ್ನು ನಿರೂಪಿಸತಕ್ಕ ದಾಖಲೆಗಳು ಕಚೇರಿ ಕಡತಗಳಲ್ಲಿ ಲಭ್ಯವಿಲ್ಲವೆಂದು (ಮಾಹಿತಿ ಹಕ್ಕು ಕಾಯ್ದೆ ಅಡಿ ಕೋರಲಾಗಿ), ಸನ್ಮಾನ್ಯ ಮಂತ್ರಿಗಳ ಆಪ್ತಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಮತ್ತು ವಿಧಾನಸಭೆ ಸಚಿವಾಲಯಗಳು ಸ್ಪಷ್ಟಪಡಿಸಿವೆ. ಈ ರೀತಿ ಸದನದಲ್ಲಿ ಹುಸಿ ನುಡಿದಿರುವುದಕ್ಕೆ ಕಾರಣಗಳನ್ನು ತಿಳಿಸುವಂತೆ ಮತ್ತು ಸರಕಾರದ ದಾಖಲೆಗಳಲ್ಲಿರುವ ಸತ್ಯವನ್ನು ಸಾರ್ವಜನಿಕಗೊಳಿಸುವಂತೆ ಸನ್ಮಾನ್ಯ ಮಂತ್ರಿಯವರನ್ನೊಳಗೊಂಡಂತೆ ಸರಕಾರಕ್ಕೆ ಮತ್ತು ಸರಕಾರದ ಸಂಬಂಧಿತ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ, ಅವರ್ಯಾರೂ ಈವರೆಗೆ ಉತ್ತರಿಸಿಲ್ಲ. ಇದರ ಅರ್ಥ ತಾವು ತಿಳಿಯಬಲ್ಲಿರಾದ್ದರಿಂದ ವಿವರಿಸುವ ಅಗತ್ಯವಿಲ್ಲ.

  ಭಾಗ-೨ : ಜಂಗಮರು ಬೇಡಜಂಗಮರಲ್ಲ ಎಂದಿದ್ದ ೩ ಸುತ್ತೋಲೆಗಳು ಸಂವಿಧಾನಬಾಹಿರ ಮತ್ತು ಕಾನೂನುಬಾಹಿರ ಎಂದು ಮೂರು ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯವು ತೀರ್ಪು ನೀಡಿದೆ. ಈ ೩ ಸುತ್ತೋಲೆಗಳನ್ನು ಹಿಂಪಡೆಯುವುದಾಗಿ ಸರಕಾರವೇ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ವಾಗ್ದಾದ ಮಾಡಿ ದಿ. ೫.೧೦.೧೯೯೫ರಂದು ಹಿಂಪಡೆದು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಈ ಆದೇಶವನ್ನು ಪಾಲಿಸುವಂತೆ, ಜೊತೆಗೆ ಜಂಗಮರೇ ಬೇಡಜಂಗಮರೆಂದು ಸರಕಾರವೇ ಸಮೀಕ್ಷೆ ನಡೆಸಿದ ಕರ್ನಾಟಕ ಗೆಜೆಟಿಯರ್‌ ವರದಿಯನ್ನು ಅನುಸರಿಸತಕ್ಕದ್ದೆಂದು ದಿ. 29.11.1993, ೮.೩.೨೦೧೦ರಲ್ಲಿ ರಾಜ್ಯ ಸರಕಾರವೇ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಿದೆ. ಪ್ರಯುಕ್ತ, ಜಂಗಮ ಅಥವಾ ಬೇಡಜಂಗಮರನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಮುಂದುವರೆಸಿಲ್ಲ ಎಂದು ಹಿಂದುಳಿದ ವರ್ಗದ ಆಯೋಗವು ಸ್ಪಷ್ಟನೆಯನ್ನು ನೀಡಿದೆ. ಸರಕಾರದ ಒಪ್ಪಿತ ದಾಖಲೆಗಳು, ಆದೇಶಗಳು ಮತ್ತು ಮಾನ್ಯ ನ್ಯಾಯಾಲಯದ ಆದೇಶಗಳಿಗಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ತಾವು ಒಪ್ಪುತ್ತೀರೆಂದು ನಂಬಿದ್ದೇನೆ.

  “ಬಸವಮಾರ್ಗ” “ವಿಶ್ವಾರಾಧ್ಯ” ಹೆಸರಿನಲ್ಲಿ ವಿಶ್ವಗುರು ಬಸವಣ್ಣನವರು “ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯಪಡಬೇಡ” ಎಂದು ನುಡಿದಿರುವುದಕ್ಕೆ ವ್ಯತಿರಿಕ್ತವಾದ ಸಂದೇಶಗಳನ್ನು ಸಾರುವುದು ತಮ್ಮಂಥ ಹಿರಿಯರಿಗೆ ಶೋಭೆಯಲ್ಲವೆಂದು ವಿನಂತಿಸುತ್ತೇನೆ. ಜಂಗಮರೇ ಬೇಡಜಂಗಮರೆಂಬುದಕ್ಕೆ ೧೮೮೧ರಿಂದ (೧೩೬ ವರ್ಷಗಳ ಪುರಾತನ) ಸರಕಾರದ ಅಧಿಕೃತ ಮತ್ತು ದೃಢೀಕೃತ ದಾಖಲೆಗಳು ನನ್ನ ಬಳಿ ಇವೆ. ಅಲ್ಲಗಳೆಯುವುದಾದರೆ, ತಮ್ಮ ಬಳಿ ಇರುವ ಸರಕಾರದ ದಾಖಲೆಗಳನ್ನು ಬಿಡುಗಡೆಗೊಳಿಸಿ ಆರೋಗ್ಯಕರ ಚರ್ಚೆಗೆ ಅವಕಾಶ ಮಾಡಬಹುದೆಂದು ಕೋರುತ್ತೇನೆ.

  ಸೋಮನಾಥ. ಎಚ್.ಎಂ.
  ೯೪೪೮೮೧೦೦೭೨.

 4. ಸತ್ಯಂಪೇಟೆಯವರೆ,
  ಅವರು ನಕಲಿ ಪ್ರ.ಪತ್ರ ಪಡೆದಿಲ್ಲ. ಸರ್ಕಾರವೇ ಅವರಿಗೆ ವೀರಶೈವ ಲಿಂಗಾಯತ ಎಂದು ನಕಲಿ ಜಾತಿ ಪ್ರ.ಪತ್ರ ಕೊಡುತ್ತಿತ್ತು. ಈಗ ಅವರು ತಮ್ಮ ಜಾತಿ ಯಾವುದು ಎಂಬ ಅರಿವಿಗೆ ಬಂದಿದೆ. ಆ ಜಾತಿಯ ಸಾಮಾನ್ಯರು ವೀರಶೈವ ಲಿಂಗಾಯತದಲ್ಲಿ ಕಳೆದುಹೋಗಿದ್ದರು. ಅಸಲಿಗೆ, ಬುದ್ಧಿಜೀವಿಗಳೆನಿಸಿಕೊಂಡವರು ಸತ್ಯವನ್ನು ನುಡಿಯಲಾಗುತ್ತಿಲ್ಲ. ವೀರಶೈವ ಲಿಂಗಾಯತ ಮತ/ಪಂಥ. ಅದು ಸಾಂವಿಧಾನಿಕ ಸತ್ಯ. ಅದನ್ನು ತಪ್ಪಿಸಲು ಯಾವ ದುಷ್ಟ ಶಕ್ತಿಯಿಂದಲೂ ಸಾಧ್ಯವಿಲ್ಲ. ಸಂವಿಧಾನದ ಪ್ರಾಥಮಿಕ ಜ್ಞಾನವಿದ್ದವರು, ಸಾರಾಸಾರ ವಿಚಾರ ಮಾಡಿ ತಮ್ಮ ಅಭಿಪ್ರಾಯ ಮಂಡಿಸುತ್ತಾರೆ. ಸ್ವಾರ್ಥ, ಅಜ್ಞಾನ, ದುಷ್ಟತನ ಮೆರೆಯುವುದರಿಂದ ಯಾವ ಪ್ರಯೋಜನವೂ ಸಿಗದು..

  ಅವರ ಅಮಾನತು ಆದೇಶವನ್ನು KAT ರದ್ದುಗೊಳಿಸಿದೆ. ಆ ಸತ್ಯವನ್ನೂ ಅರಗಿಸಿಕೊಳ್ಳಿ.!. ಸುಳ್ಳು ಜಾತಿ ಪ್ರ.ಪತ್ರ ತೆಗೆದುಕೊಳ್ಳುವ ನೀಚ ಕೆಲಸ ಜಂಗಮ ಸಮಾಜ ಮಾಡುವುದಿಲ್ಲ. ನಮಗೆ ನಿಮ್ಮಂತೆ 2A, Central OBC ಯಲ್ಲೇ ಪ್ರ.ಪತ್ರ ಕೊಡಿಸುವುದಾದರೆ, ನೋಡಿ..! ಪ್ರತ್ಯೇಕ ಧರ್ಮದಲ್ಲಿ ಜಾತಿಗಳು ಪ್ರತ್ಯೇಕವಾಗಿ ಏಕಿವೆ..?!

 5. ಜಂಗಮರಿಗೇ ಬೇಡ ಜಂಗಮ ಪ್ರಮಾಣ ಪತ್ರ ಕೊಡಲು ಸರ್ಕಾರವೇ ಮುಂದೆ ಬರಬೇಕು ಬಂದು ತನ್ನ ಮಾನ ಹುಳಿಸಿಕೋಳಲಿ ಯಾರು ಕೆಲವು ದುರಾಸೆ ರಾಜಕಾರಣಿಗಳ ಮಾತು ಕೇಳಿ ಸರ್ಕಾರ ಕಚಡ ಸರ್ಕಾರ ವಾಗಬಾರದು ಕಾನೂನು ನಿಂದನೆ ಮಾಡಬಾರದು. ಜಯವಾಗಲಿ ನಮ್ಮ ಬೇಡ ಜಂಗಮ ಸಮಾಜಕ್ಕೆ

Leave a Reply

Your email address will not be published. Required fields are marked *

error: Content is protected !!