ಸರಕಾರದ ಹಂಗಿಲ್ಲದೆಯೂ ಅನುಭವ ಮಂಟಪ ರಚಿಸಬಹುದು

ಬೀದರ : ೧೭:

ರವಿವಾರದಂದು ಬೀದರ್ನಲ್ಲಿ ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಹಮ್ಮಿಕೊಂಡ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅನುಭಾವ ಚಿಂತಕರಾಗಿ ಪಾಲ್ಗೊಂಡ ನಾಡಿನ ಶ್ರೇಷ್ಠ ಅನುಭಾವಿಗಳು ದಾರ್ಶನಿಕರು ಆದ ನಿಜಗುಣ ತೋಂಟದಾರ್ಯ ಮಹಾಸ್ವಾಮಿಗಳು ಮಾತನಾಡುತ್ತಾ ;ಬಸವಣ್ಣನವರ ಅರಿವು ಬಹಳ ವಿಸ್ತಾರವಾದದ್ದು ಬಹಳ ದೊಡ್ಡದು. ಒಂದು ಧರ್ಮ ಉಳಿಯುವುದು ವ್ಯಕ್ತಿಯಿಂದಲ್ಲ ತತ್ವದಿಂದ ಮಾತ್ರ. ಆದ್ದರಿಂದ ಧರ್ಮ ತತ್ವ ಕೇಂದ್ರವಾಗಬೇಕು. ವೈದಿಕವನ್ನು ಬಿಟ್ಟು ನಾನು ಲಿಂಗಾಯತ ಧರ್ಮವನ್ನು ಸ್ವೀಕರಿಸಿದ್ದು, ಜಗತ್ತಿನ ಯಾವ ಧರ್ಮದಲ್ಲಿ ಇಲ್ಲದ ಸಮಾನತೆಯ ಸಾರ ಲಿಂಗಾಯತದಲ್ಲಿದೆ ಎಂದರು. ಆದ್ದರಿಂದಲೇ ಲಿಂಗಾಯತ ಧರ್ಮದ ಸಂಘಟನೆ ತಾತ್ವಿಕ ನೆಲೆಗಟ್ಟಿನ ಮೇಲೆ ಆಕಬೇಕು ಎಂದು ಕರೆ ನೀಡಿದರು.
ದೇಶದ ಯಾವುದೇ ವ್ಯಕ್ತಿಗಳಾಗಲಿ ಮಠಾಧೀಶರಾಗಲಿ ಬಸವಣ್ಣನವರನ್ನು ಉಲ್ಲೇಖಿಸುವುದು ದೊಡ್ಡದಲ್ಲ ಆದರೆ ಬಸವಣ್ಣನವರನ್ನು ಅನುಭಾವದಿಂದ ಅರಿಯುವುದು ಬಹಳ ಮುಖ್ಯ. ಆದರೆ ಇಂದು ಬಸವಣ್ಣನವರನ್ನು ಅನುಭವದಿಂದ ಅರಿಯುವಲ್ಲಿ ನಾವು ಸೋತಿದ್ದೇವೆ ಆದ್ದರಿಂದ ಅರಿಯುವ ಪ್ರಯತ್ನ ಸಾಗಬೇಕು. ಬಸವಣ್ಣನವರು ಸನಾತನದಲ್ಲಿನ ನ್ಯೂನತೆಯನ್ನು ಕಂಡು ಹೊಸಧರ್ಮವನ್ನು ಕಟ್ಟಿದರು. ಒಂದು ವೇಳೆ ವೀರಶೈವ ಎಂಬ ಧರ್ಮ ಇದ್ದಿದ್ದರೆ 12ನೇ ಶತಮಾನದಲ್ಲಿ ಹೊಸ ಧರ್ಮದ ಅವಶ್ಯಕತೆ ಇರುತ್ತಿರಲಿಲ್ಲ. ಬಸವಣ್ಣನವರು ಅತ್ಯಂತ ವೈಚಾರಿಕತೆಯಿಂದ ಕೂಡಿದ ಹೊಸಧರ್ಮವನ್ನು ಕೊಟ್ಟರು. ಕಲ್ಪನಾ ಲೋಕದಿಂದ ಯಾವುದನ್ನು ಕೊಡಲಿಲ್ಲ ಅಥವಾ ಸೃಷ್ಟಿಸಲಿಲ್ಲ ಬದಲಿಗೆ ಕಾಯಕ-ದಾಸೋಹ ಅನುಭಾವದಿಂದ ಧರ್ಮವನ್ನು ಜಾತಿರಹಿತ ವರ್ಣರಹಿತ ವರ್ಗ ರಹಿತವಾಗಿ ಕಟ್ಟಿದರು. ಆದ್ದರಿಂದ ಶರಣರು ಕೊಟ್ಟ ಲಿಂಗಾಯತ ಧರ್ಮ ರಾಷ್ಟ್ರ ಧರ್ಮ ಆಗುವಲ್ಲಿ ಸರ್ವ ರೀತಿಯಿಂದ ಶಕ್ತಿವಂತವಾಗಿದೆ ಎಂದು ವಿಶ್ಲೇಷಿಸಿದರು.
ಲ್ಲಿ್ಿಿ

ಜಾಗತಿಕ ಮಟ್ಟದಲ್ಲಿ ಇಂದು ಭಾರತಕ್ಕೆ ಗೌರವ ಸನ್ಮಾನ ದೊರೆಯುತ್ತಿರುವುದು ಬುದ್ಧ ಬಸವ ಅಂಬೇಡ್ಕರರ ಚಿಂತನೆಗಳಿಂದಲೇ ಹೊರತು, ಕಾಲ್ಪನಿಕ ರಾಮನ ಕಥೆ ಇಂದಲ್ಲ. ಜಾಗತಿಕ ಮಟ್ಟದಲ್ಲಿ ಇಂದು ಬಸವಣ್ಣನವರು ಗುರುತಿಸಲ್ಪಡುತ್ತಿದ್ದಾರೆ ಅವರ ಚಿಂತನೆಗಳು ಬೆಳೆಯುತ್ತಿವೆ ಹಾಗಾಗಿ ತಾತ್ವಿಕ ನೆಲೆಗಟ್ಟಿನ ಮೇಲೆ ಲಿಂಗಾಯತರು ಸಾಗಬೇಕು ಇಂದು ರಾಮ ಮಂದಿರ ಕಟ್ಟಲು ವೈದಿಕರು ಹಣ ಸಂಗ್ರಹಿಸುತ್ತಿದ್ದಾರೆ.ಲಿಂಗಾಯತರು ಅದಕ್ಕೆ ನೀಡುತ್ತಿದ್ದಾರೆ ಆದರೆ ಇಂದು ಅನುಭವ ಮಂಟಪವನ್ನು ಸರಕಾರದ ಸಹಾಯವಿಲ್ಲದೆಯೂಕಟ್ಟುವ ಶಕ್ತಿ ಲಿಂಗಾಯತ ಧರ್ಮಿಯರಿಗೆ ಇದೆ .ಇದನ್ನು ಅರಿತು ಮುಂದಾದರೆ ಸರ್ಕಾರಕ್ಕೆ ಕೈಯೊಡ್ಡದೆ ದೊಡ್ಡ ಕಾರ್ಯ ಸಾಧಿಸಬಹುದೆಂದು ಲಿಂಗಾಯತರಿಗೆ ಕಿವಿಮಾತು ಹೇಳಿದರು.


ಅದೇ ರೀತಿಯಲ್ಲಿ ಬಾಲಕಿಯ ಚನ್ನಬಸವ ಪಟ್ಟದೇವರು ಲಿಂಗಾನಂದ ಮಹಾಸ್ವಾಮಿಗಳು ಸಾಕ್ಷಿಪ್ರಜ್ಞೆಯ ಸಂಕೇತವಾಗಿದ್ದಾರೆ. ಆದ್ದರಿಂದಲೇ ಇಂದು ಬಸವಧರ್ಮ ಜಾಗೃತವಾಗಿದೆ ಜಗತ್ತಿನಲ್ಲಿ ಅನೇಕ ಸ್ಥಾವರಗಳಿವೆ ಆದರೆ ಲಿಂಗಾಯತರು ಕಟ್ಟಿದ್ದು ಪ್ರಸಾದನಿಲಯಗಳು . ಸುತ್ತೂರಿನ ಲಿಂಗೈಕ್ಯ ಜಗದ್ಗುರುಗಳು ಬಂಗಾರದ ಗುಂಡಗಡಗೆಯನ್ನು ಮಾರಿ ವಿದ್ಯಾರ್ಥಿಗಳಿಗೆ ಉಣಬಡಿಸಿದರು ಈ ನಿಟ್ಟಿನಲ್ಲಿ ಚನ್ನಬಸವ ಪಟ್ಟದೇವರ ಕಾರ್ಯ ಬಹುದೊಡ್ಡದು ಆದ್ದರಿಂದಲೇ ಶಾಂತರಸರು ಬೆಳೆಯಲು ಸಾಧ್ಯವಾಯಿತು.
ಚತುರ್ವರ್ಣ ವ್ಯವಸ್ಥೆಯಿಂದ ಹೊರಗಿರುವುದು ಲಿಂಗಾಯತ ಧರ್ಮ ಆದರೆ ಇಂದು ಸನಾತನ ಎಂಬ ಪದ ಪ್ರಯೋಗ ಮಾಡಿ ದ್ದು ತಪ್ಪು. ಸಾಮಾಜಿಕ ವ್ಯವಸ್ಥೆ ಹಾಳಾಗಬಾರದೆಂದು ಬಸವಣ್ಣನವರು ಹೊಸಧರ್ಮ ನೀಡಿದರು ಬಸವಣ್ಣನವರಿಗೆ ವೇದಾಗಮ ಉಪನಿಷತ್ತು 63 ಪುರಾಣಗಳು ಎಲ್ಲವೂ ಪರಿಚಯವಿದ್ದವು ಎಲ್ಲವನ್ನು ಅಧ್ಯಯನ ಮಾಡಿಯೇ ಸರ್ವರಿಗೂ ಬೇಕಾದ ಹೊಸಧರ್ಮವನ್ನು ಕೊಟ್ಟರು ಸೂಳೆ ಸಂಕವ್ವೆ ಶರಣಳಾಗಲು ಸಾಧ್ಯವಾಯಿತು ಲಿಂಗಾಯತ ಧರ್ಮ ಪರಿವರ್ತನೆಯ ಧರ್ಮ ಎಂದು ವಿಶ್ಲೇಷಣೆ ಮಾಡಿದರು.


ಲಿಂಗಾಯತ ರಾಜಕೀಯ ನಾಯಕರಿಗೆ ನೀವು ಯಾವುದೇ ಪಕ್ಷದಲ್ಲಿರಿ ಆದರೆ ಧರ್ಮದ ವಿಷಯ ಬಂದಾಗ ದಯವಿಟ್ಟು ಲಿಂಗಾಯತ ಧರ್ಮದ ಅಭಿಮಾನಿಗಳಿಂದ ಅಭಿಮಾನದಿಂದ ವರ್ತಿಸಿ ಧರ್ಮದ ಉನ್ನತಿಗೆ ಶ್ರಮಿಸಲು ಕರೆ ನೀಡಿದರು ಮತ್ತು ಕಿವಿಮಾತನ್ನು ಹೇಳಿದರು. ಬಸವಣ್ಣನವರು 12ನೇ ಶತಮಾನದಲ್ಲಿಯೇ ಅಕ್ಷರ ಜ್ಞಾನ ನೀಡಿದರು ಸ್ವಚ್ಛತೆ ಹೇಳಿಕೊಟ್ಟರು ಆದ್ದರಿಂದಲೇ ನಡೆ ಕಲಿಸಿದ ಬಸವ ನುಡಿ ಕಲಿಸಿದ ಬಸವ ಎಂದು ಶರಣರು ಕೊಂಡಾಡಿದರು ಅದರಿಂದಲೇ ವೈದಿಕರು ನೀಡಿದ ಆಮಿಷವನ್ನು ದಿಕ್ಕರಿಸಿ ಈ ಬದುಕು ಇರುವುದು ಬಸವಣ್ಣನವರಿಗೆ ಅವರ ತತ್ವ ಪ್ರಚಾರಕ್ಕಾಗಿ ಎಂದು ಹೇಳಿದರು. ಇಸ್ಲಾಮರೂ ಯಾವ ಪಕ್ಷದಲ್ಲಿ ಇಲ್ಲ?, ಎಲ್ಲಾ ಪಕ್ಷಗಳಲ್ಲಿ ಇದ್ದಾರೆ ಆದರೆ ಅವರು ಮಸೀದಿಯನ್ನು ಪ್ರವೇಶಿಸಿದಾಗ ಸಮಾನತೆಯ ಆಧಾರದ ಮೇಲೆ ಒಂದಾಗುತ್ತಾರೆ. ಅದೇ ರೀತಿ ಸಿಖ್ಧರ್ಮೀಯರೂ ಕೂಡ ಅಂದರಂತೆ ಲಿಂಗಾಯತ ರಾಜಕಾರಣಿಗಳು ಧರ್ಮ ದ ಮಾನ್ಯತೆಗಾಗಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕರೆಕೊಟ್ಟರು.


೦ಮಹಾಂತೇಶ ಹೂವಿನಹಳ್ಳಿ

Leave a Reply

Your email address will not be published. Required fields are marked *

error: Content is protected !!