ನ್ಯಾಯಾಂಗ ವ್ಯವಸ್ಥೆ ಕುಸಿದಿದೆ : ಗೊಗೊಯ್

ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್

ನೀವು ಕುಸಿದಿರುವ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದ್ದೀರಿ” ಎಂದು ಸುಪ್ರೀಂ ಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಭಾರತದ ಸಿಜೆಐ ಆಗಿ ನಿವೃತ್ತಿಯಾದ 15 ತಿಂಗಳ ಬಳಿಕ ಗೊಗೋಯ್ ನೀಡಿರುವ ಈ ಹೇಳಿಕೆಯು ರಾಷ್ಟ್ರದ ಕಾನೂನು ವ್ಯವಸ್ಥೆಯ ವಾಸ್ತವಾಂಶವನ್ನು ತೆರೆದಿಟ್ಟಿದೆ.

“ನಾನು ಸಮಸ್ಯೆಗಳನ್ನು ಹೇಳಿಕೊಂಡು ನ್ಯಾಯಾಲಯಕ್ಕೆ ಹೋಗುವುದಿಲ್ಲ. ಏಕೆಂದರೆ ತೀರ್ಪಿಗಾಗಿ ಕೊನೆಯಿಲ್ಲದೆ ಕಾಯಬೇಕಾಗುತ್ತದೆ” ಎಂಬುದಾಗಿ ರಂಜನ್ ಗೊಗೊಯ್ ಅಭಿಪ್ರಾಯಪಟ್ಟಿದ್ದಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.

“ನೀವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಬಯಸುತ್ತೀರಿ. ಆದರೆ, ನೀವು ನ್ಯಾಯಾಂಗವನ್ನು ಕುಸಿಯುವಂತೆ ಮಾಡಿದ್ದೀರಿ. ಹಾಗಾಗಿ ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡು ನೀವು ನ್ಯಾಯಾಲಯಕ್ಕೆ ಹೋದರೆ ನೀವು ಯಾವುದೇ ತೀರ್ಪನ್ನೂ ಪಡೆಯಲು ಸಾಧ್ಯವಿಲ್ಲ. ಇದನ್ನು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ” ಎಂದು ಇಂಡಿಯಾ ಟುಡೇ ಗ್ರೂಪ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೊಗೊಯ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ನಿಮಗೆ ಇಷ್ಟವಾದರೆ ಓದಿ, ಇಷ್ಟವಾಗದಿದ್ದರೆ ಬಿಟ್ಟು ಬಿಡಿ. http://www.basavamarga.com/satyampet-87/

ಗೊಗೋಯ್ ಅವರ ಹೇಳಿಕೆಯು ನ್ಯಾಯಾಂಗದ ಸಾಮರ್ಥ್ಯ ಹಾಗೂ ಪರಿಣಾಮಕಾರಿತ್ವವನ್ನು ಸೂಕ್ಷ್ಮ ಪರಿಶೀಲಿಸುವಂತೆ ಮಾಡಿದೆ. ತೀರ್ಪುಗಳ ವಿಳಂಬದಲ್ಲಿ ಭಾರತದ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಏಷ್ಯದ ಮೂರನೇ ಅತಿ ದೊಡ್ಡ ಆರ್ಥಿಕತೆಯ ನ್ಯಾಯಾಲಯದ ವ್ಯವಸ್ಥೆಗಳು 43 ದಶಲಕ್ಷಕ್ಕೂ ಅಧಿಕ ಪ್ರಕರಣಗಳಿಂದ ಮುಚ್ಚಿಹೋಗಿವೆ. ನ್ಯಾಯಾಧೀಶರ ಕೊರತೆಯಿಂದ ಕೆಲವು ಪ್ರಕರಣಗಳು ಪರಿಹಾರವನ್ನು ಕಂಡುಕೊಳ್ಳಲು ಹಲವು ವರ್ಷಗಳು, ದಶಕಗಳವರೆಗೆ ಕಾಯಬೇಕಾಗುತ್ತದೆ. ಭಾರತದಲ್ಲಿ ಹೂಡಿಕೆ ಮಾಡುವ ಕಂಪೆನಿಗಳು ಒಮ್ಮೆ ಕಾನೂನು ವಿವಾದದಲ್ಲಿ ಸಿಲುಕಿಕೊಂಡರೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ದಿ ಪ್ರಿಂಟ್ ವರದಿಯಲ್ಲಿ ಹೇಳಿದೆ.

2019ರ ನವೆಂಬರ್ ನಲ್ಲಿ ದೇಶದ ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾಗಿರುವ ಗೊಗೋಯ್ ಸದ್ಯ ಸಂಸತ್ತಿನ ಮೇಲ್ಮನೆಯ ಸದಸ್ಯರಾಗಿದ್ದಾರೆ. ಇದಕ್ಕೂ ಮುನ್ನ ಇವರು ದಶಕಗಳ ಅಯೋಧ್ಯೆ ವಿವಾದಕ್ಕೆ ಅಂತಿಮ ತೀರ್ಪು ನೀಡಿದ್ದರು.

ನಾನೂ ಗೌರಿ ಕೃಪೆ

Leave a Reply

Your email address will not be published. Required fields are marked *

error: Content is protected !!