ಶಹಾಪುರದಲ್ಲಿ ಗುರುವಾರ ೨೫ ರಂದು ಬಸವ ಬೆಳಕು- ೯೭

ಶಹಾಪುರ : ದಿನಾಂಕ 25 ಮಾರ್ಚ 2021 ರ ಗುರುವಾರ ಸಾಯಂಕಾಲ 6.30 ಕ್ಕೆ ಬಸವಮಾರ್ಗ ಪ್ರತಿಷ್ಠಾನ ಪ್ರತಿ ತಿಂಗಳು ನಡೆಯುವ ತಿಂಗಳ‌ ಬಸವ ಬೆಳಕು -97 ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಿಂ. ಶಾರದಾಬಾಯಿ ಅವಂಟಿ ಅವರ ನಾಲ್ಕನೆಯ ಸ್ಮರಣೋತ್ಸವದ ನಿಮಿತ್ತ ಈ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಶಿವಕುಮಾರ ಜ್ಯೋತಿ ಅವಂಟಿ ಉದ್ಘಾಟಿಸಲಿದ್ದಾರೆ.

ಅತಿಥಿಗಳಾಗಿ ಶಹಾಪುರ ಪೊಲೀಸ್ ಠಾಣೆಯ ಸಿ.ಪಿ.ಐ. ಚನ್ನಯ್ಯ ಹಿರೇಮಠ ಹಾಗೂ ಖ್ಯಾತ ಹೃದಯರೋಗ ತಜ್ಞ ಡಾ.ಪರವೇಜ್ ಕಾಡ್ಲೂರ್ ಅವರು ವಹಿಸುವರು. ಅನುಭಾವಿಗಳಾಗಿ ಶ್ರೀಮತಿ ಇಂದೂಮತಿ ಸಾಲಿಮಠ ಆಗಮಿಸಲಿದ್ದಾರೆ. ಶರಣರ ಕ್ರಾಂತಿಯ ಕುರಿತು ಅವರು ಮಾತನಾಡಲಿದ್ದಾರೆ.

ಸಭೆಯ ಸಂಚಾಲನೆಯನ್ನು ಶಿವಣ್ಣ ಇಜೇರಿ ನಿರ್ವಹಿಸಲಿದ್ದಾರೆ. ಚಂದ್ರಶೇಖರ ಗೋಗಿ ವಚನ ಹಾಡುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

ಜನ‌ಮಾನಸಕ್ಕೆ ಶರಣರ ಚಿಂತನೆಯನ್ನು ತಲುಪಿಸಬೇಕು ಎಂಬ ಉದ್ದೇಶದಿಂದ ಆರಂಭಗೊಳಿಸಿರುವ ಈ ಕಾರ್ಯಕ್ರಮದಲ್ಲಿ ಸಹೃದಯಿ ಶರಣ ಬಂಧುಗಳು ಪಾಲ್ಗೊಳ್ಳಬೇಕೆಂದು ಪ್ರತಿಷ್ಠಾನ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!