ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲಿನ ಕೇಸ್ ಹಿಂಪಡೆಯುವಂತೆ ಸಾಮಾಜಿಕ ಸಂಘಟನೆಗಳ ಒಕ್ಕೂಟದಿಂದ ಮುಖ್ಯ ಮಂತ್ರಿಗಳಿಗೆ ಮನವಿ

ಸುರಪುರ : 28 : ಸಾಮಾಜಿಕ ಚಿಂತಕ ಪತ್ರಕರ್ತ ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲೆ ಹೊನ್ನಾಳಿಯಲ್ಲಿ ದಾಖಲಿಸಿರುವ ಕೇಸ್ ಹಿಂಪಡೆಯಬೇಕೆಂದು ಒತ್ತಾಯಿಸಿ ಮುಖ್ಯ ಮಂತ್ರಿಗಳಿಗೆ ತಹಶೀಲ್ದಾರರ ಮೂಲಕ ಸಾಮಾಜಿಕ ಸಂಘಟನೆಗಳ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು.

ಸಗರ ನಾಡಿನ ಚಿಂತಕರು ಶರಣ ಸಾಹಿತಿಗಳಾದ ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲೆ ದಾವಣಗೆರೆ ಜಿಲ್ಲೆಯ ಕೇ.ನಂ.120-2020 ,5050 ಐ.ಪಿ.ಸಿ. ಕಲಂ ಅಡಿಯಲ್ಲಿ ಕೇಸ್ ದಾಖಲು ಮಾಡಿರುತ್ತಾರೆ. ಇದು ನಿಜಕ್ಕೂ ದುರುದ್ದೇಶ ಪೂರ್ವಾಗ್ರಹ ಹಾಗೂ ದೋಷಪೂರಿತ ದೂರಾಗಿದೆ. ವಾಸ್ತವಾಗಿ ಇದರಲ್ಲಿ ಯಾವುದೆ ಹುರುಳಿಲ್ಲ. ಇದನ್ನು ನಮ್ಮ ಸಂಘಟನೆಯೂ ಬಲವಾಗಿ ಖಂಡಿಸುತ್ತದೆ.

ಪ್ರಸ್ತುತವಾಗಿ ವಿಶ್ವಾರಾಧ್ಯ ಸತ್ಯಂಪೇಟೆ ರಾಜ್ಯ ಮಟ್ಟದ ಜಾಗತಿಕ ಲಿಂಗಾಯತ ಮಹಾಸಭೆಯ ಕಾರ್ಯದರ್ಶಿಯಾಗಿದ್ದು ನಾಡಿನಾದ್ಯಂತ ಬುದ್ದ ಬಸವ ಅಂಬೇಡ್ಕರ ಅವರ ತತ್ವಗಳನ್ನು ಮುಂದಿಟ್ಟುಕೊಂಡು ಪ್ರತಿಯೊಂದು ಸಮಾಜದವರನ್ನು ಸಮಾಜದಲ್ಲಿ ಕೂಡಿ ಬದಕಲು ಶ್ರಮವಹಿಸುತ್ತಿದ್ದಾರೆ.

ಮತ್ತು ಸಾಕಷ್ಟು ಪ್ರಗತಿಪರವಾದ ಚಿಂತನಾತ್ಮಕ ಬರಹಗಳನ್ನು ಬರೆದು ಜನ ಸಾಮಾನ್ಯರಲ್ಲಿ ನೈಜ ಇತಿಹಾಸ ತಿಳಿಸಿ, ಸಂವಿಧಾನ್ಮಕವಾದ ಚಿಂತನೆಗಳನ್ನು ಬರಹಗಳ ಮೂಲಕ ವ್ಯಕ್ತ ಪಡಿಸಿ, ಜನ ಮೆಚ್ಚುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಕೆಲವರು ಇದನ್ನು ಹತ್ತಿಕ್ಕುವ ದೃಷ್ಟಿಯಿಂದ ಅವರ ಚಿಂತನೆಗಳನ್ನು ಮೂಲೆಗೆ ತಳ್ಳಬಯಸಿದ್ದಾರೆ. ಮೂಲಭೂತವಾದಿಗಳ ಕೆಂಗಣ್ಣು ಸತ್ಯಂಪೇಟೆಯವರ ಮೇಲೆ ಬಿದ್ದು ದೂರು ದಾಖಲಾಗಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ರಾಂಪುರದ ಶ್ರೀ ವಿಶ್ವೇಶ್ವರಯ್ಯ ಅವರ ಕುರಿತು ಸೈದ್ಧಾಂತಿಕವಾಗಿ ಬರೆದ ಬರಹವನ್ನು ಅನಾವಶ್ಯಕವಾಗಿ ದೊಡ್ಡದು ಮಾಡಿ ಗೊಂದಲ ಎಬ್ಬಿಸುತ್ತಿದ್ದಾರೆ. ವಿಶ್ವಾರಾಧ್ಯ ಸತ್ಯಂಪೇಟೆಯವನ್ನು ಪೇಚಿಗೆ ಸಿಲುಕಿಸಿ ಸಾಮಾಜಿಕ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


ಕರ್ನಾಟಕ ಸರಕಾರವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ದಾಖಲಾಗಿರುವ ಕೇಸ್ ವಾಪಾಸ್ ಪಡೆಯಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ದಲಿತ ಮತ್ತು ಪ್ರಗತಿಪರ ಚಿಂತನೆಗಳ ಸಂಘಟನೆಯ ಮೂಲಕ ಉಗ್ರವಾದ ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗುತ್ತದೆಂದು ಸರಕಾರಕ್ಕೆ ತಿಳಿಸಲಾಗಿದೆ.


ಈ ಮನವಿ ಪತ್ರವನ್ನು ದೇವಿಂದ್ರಪ್ಪ ಪತ್ತಾರ, ಅಹ್ಮದ ಪಠಾಣ, ನಿಂಗಣ್ಣ ಎಂ.ಗೋನಾಲ, ಕನಕಾಚಲ ನಾಯಕ ಯಡಿಯಾಪುರ, ಮಾಳಪ್ಪ ಕಿರದಳ್ಳಿ, ಮೌನೇಶ ಎಂ. ಹುಣಸಿಹೊಳೆ, ಬಸವರಾಜ ಮುಷ್ಠಳ್ಳಿ, ಹುಲಗಪ್ಪ ದೇವತ್ಕಲ್, ವಿಶ್ವನಾಥ ಮುಂತಾದವರು ಉಪಸ್ಥಿತರಿದ್ದರು.

2 thoughts on “ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲಿನ ಕೇಸ್ ಹಿಂಪಡೆಯುವಂತೆ ಸಾಮಾಜಿಕ ಸಂಘಟನೆಗಳ ಒಕ್ಕೂಟದಿಂದ ಮುಖ್ಯ ಮಂತ್ರಿಗಳಿಗೆ ಮನವಿ

  1. ಇದು ನಿಜಕ್ಕೂ ಅತ್ಯಂತ ಸಮಂಜಸವಾದ ಕೆಲಸ. ವಿಶ್ವಾರಾಧ್ಯ ಸತ್ಯಂಪೇಟೆ ಅವರನ್ನು ಕಾನೂನಿನ ಬಲೆಯೊಳಕ್ಕೆ ಸಿಕ್ಕಿಸಲು ಮನುವಾದಿಗಳ ಸಂಚು. ಲಿಂಗಾಯತ ಚಳುವಳಿಯನ್ನು ಸಹಿಸದ ಮೂಲಭೂತವಾದಿಗಳ ಹುನ್ನಾರ. ನಾನು ಸದಾ ನಿಮ್ಮೊಂದಿಗಿದ್ದೇನೆ. ಈ ಹೋರಾಟಕ್ಕೆ ಕೈಜೋಡಿಸಿರುವ ಎಲ್ಲಾ ಶರಣ ಬಂಧುಗಳಿಗೆ ಶರಣು ಶರಣಾರ್ಥಿಗಳು

  2. सरकार मुक्त विचारसरणीचा गळा घोटत असेल त्याचा नक्की विरोध केला गेला पाहिजे, असे काही मोजकेच विचारवंत आणि पत्रकार करत आहेत अश्यांवर राजकीय स्वार्थापायी खोटी गुन्हे दाखल करत असतील तर समजावे लोकशाही धोक्यात आहे.

Leave a Reply

Your email address will not be published. Required fields are marked *

error: Content is protected !!