ಮಠಾಧಿಪತಿಯೊಬ್ಬರ ಅಣಿ ಮುತ್ತುಗಳು !

ಇತ್ತೀಚೆಗೆ ವಚನ ಸಾಹಿತ್ಯ ಓದು – ಜಾಗ್ರತೆ ಹೆಚ್ಚಾಗಿ ಲಿಂಗಾಯತಕ್ಕೆ ವೀರಶೈವ ಅಂಟಿಕೊಂಡ ಪರಿ ಎಲ್ಲ ಬಸವಭಕ್ತರಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಒಬ್ಬ ಬಾಗಲಕೋಟೆ ಜಿಲ್ಲೆಯ ವಿರಕ್ತ ಸಂಪ್ರದಾಯದ ಮಠಾಧೀಶನೊಬ್ಬ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳ ಬಗ್ಗೆ ಪೋಸ್ಟ್ ಹಾಕಿದ್ದ. ಅವರೂ ಶಿವಯೋಗ ಮಂದಿರದ ಪ್ರಾಡಕ್ಟ್ ,ಹಾಗೂ ಸಹಜವಾಗಿಯೇ ಅವರೂ ಜಾತಿ ಜಂಗಮರು.

ಈ ಕುರಿತು ನಾನು ಆ ಜಾಲತಾಣದಲ್ಲಿ, ಹಾನಗಲ್ಲ ಶ್ರೀಗಳು ವೀರಶೈವ ಪದ ಉಪಯೋಗಿಸಿ ಲಿಂಗಾಯತವನ್ನು ಕುಲಗೇಡಿಸಿದರೆ ?! ಅಂತ ವೈಚಾರಿಕವಾದ ಪ್ರಶ್ನೆ ಮಾಡಿದ್ದೆ. ಅವರು ನನಗೆ ಫೋನ್ ಮಾಡಿ ಅಂದ್ರು ಮಾಡಿದೆ, ಕನೆಕ್ಟ್ ಆಗ್ತಾ ಇದ್ದಂಗೆನೇ ಅವರ ಬಾಯಲ್ಲಿ ಮುತ್ತು ರತ್ನಗಳು ಉದುರಿದವು. ಅವನ್ನು ನಾನು ರೇಕಾರ್ಡ್ ಮಾಡಿ ಇಟ್ಟುಕೊಂಡೆ. ಏಕೆಂದರೆ ಇಬರು ಸರಿದರೆ ಒತ್ತಣ್ಣ ,ಒತ್ತಿದರೆ ಸರಿಯಣ್ಣ ಪೈಕಿ ಎಂದು ಗೊತ್ತಾಗಿತ್ತು. ಆ ಆಶೀರ್ವಚನ ಹೇಗಿತ್ತು ? ನೀವೂ ಒಮ್ಮೆ ಕೇಳಿರಿ.

“ಲೇ ನೀನಾರೆಂದು ಗೊತ್ತೋ ಮಗನೇ, ನಿನ್ನ ಪ್ರೊಫೈಲ್ ನೋಡಿನಿ . ನೀ ಎಲ್ಲಿ ಬಾ ಅಂತಿ ಹೇಳು. ಅಲ್ಲಿ ನಮ್ಮ ಗ್ಯಾಂಗ್ ಕರೆದುಕೊಂಡು ಬಂದು ನಿನ್ನ ಓಣ್ಯಾಗ ನಿನ್ನ ಓಡ್ಯಾಡಿಸಿ ಚಪ್ಪಲ್ಲೇ ಹೊಡೀತಿವಿ.ಸೊಳೆ ಮಗನೇ, ಕತ್ತೆ ಸೊಳಿಮಗನೆ. ನೀ ಏನಂತ ತಿಳಿದಿಯೋ ನನ್ನ.ಅಂತೆಲ್ಲ ಒಂದು ಬಾರಿ ಅಲ್ಲ ಹಲವು ಬಾರಿ ಅಂದರು. ನನಗೆ ಸಂಶಯ ಬಂದು, ನೀವು ಸ್ವಾಮಿಗಳಾ ಅಥವಾ ಗುಂಡಾಗಳಾ ? ಅಂತ ಕೇಳಿದೆ ಅದಕ್ಕೆ ಹೌದು ನಾವು ಉಗ್ರರು, ಉಗ್ರಗಾಮಿಗಳು ಅಂದರು. ಅಲ್ಲದೆ ನೀನು ಪಂಚಮಸಾಲಿ ಇಲ್ಲ, ಬಣಜಿಗ ಇರಬಹುದೆಂದು ಜಾತಿ ನಿಂದನೆ ಮಾಡಿ, ಲೇ, ನೀ ನಿಮ್ಮ ಅಪ್ಪಗ ಹುಟ್ಟಿದಿಯೋ ಹೇಗೆ ಅಂತ ಪ್ರಶ್ನೆ ಮಾಡಿದ. ಆದರೆ ಇದಕ್ಕೆ ಪ್ರತ್ಯುತ್ತರವಾಗಿ ಬೇಕಾದಷ್ಟು ಮಾತನಾಡಬಹುದಿತ್ತು. ಆದರೆ ತಾಳ್ಮೆಗಿಂತ ತಪ ಇನ್ನೊಂದು ಇಲ್ಲ ಎಂದು ಸುಮ್ಮನಿದ್ದೆ. ನಾನು ಅಕಸ್ಮಾತ್ತಾಗಿ ಮುಂದೇನಾದ್ರು ಇದ್ದಿದ್ದರೆ ಕೊಲೆನೆ ಮಾಡ್ತಿದ್ರೋ, ಏನೋ ಅಷ್ಟು ಉದ್ರೇಕ, ಭಾವೋದ್ವೇಗದಿಂದ ಮಾತನಾಡುತ್ತಿದ್ದರು.ಇಲ್ಲಿ ನಾನು ಬರೆದಿದ್ದು ಬರಿ ಸ್ಯಾಂಪಲ್, ಇಲ್ಲಿನ ಯಾವ ಶಬ್ದಗಳನ್ನು ಅವರು ಅಲ್ಲಗಳೆಯುವಂತಿಲ್ಲ ಕಾರಣ ಅವರು ಒಂದು ತಂದೆಯ ಮಗ ಮೇಲಾಗಿ ಅವೆಲ್ಲ ತನ್ನ ತನು-ಮನ-ಆತ್ಮ ಸಾಕ್ಷಿಯಿಂದ ಉದುರಿದ ಅಣಿ ಮುತ್ತುಗಳು.

ಸಾಮಾನ್ಯವಾಗಿ ಇವರನ್ನ ನಮ್ಮ ಜನ ಬುದ್ಧಿ, ಅಪ್ಪೋರೆ ಅಂತೆಲ್ಲ ಗೌರವದಿಂದ ಕಾಣುತ್ತಾರೆ. ಇಲ್ಲಿ ವ್ಯಕ್ತಿಗತವಾಗಿ ನೋಡಿದರೆ, ಕಿರಾತಕ ನಡೆ. ಇವರನ್ನ ಏನೇನ್ನಬೇಕು ? ಅರ್ಥವಾಗುತ್ತಿಲ್ಲ, ತೀರಾ ಕೀಳು ಮಟ್ಟದ ವರ್ತನೆ ನನ್ನನ್ನು ತಬ್ಬಿಬ್ಬಾಗಿಸಿತು.

ಅಶ್ಲೀಲ, ಅಸಭ್ಯ, ಅನಾಗರಿಕ, ಕ್ರತಘ್ನ , ಅಸಂಸ್ಕ್ರುತ, ಅಸುರ? ಏನಂತ ಕರೆಯಬೇಕೋ ಅರ್ಥವಾಗುತ್ತಿಲ್ಲ. ಇವರಿಗೆ ಬಸವಾನುಯಾಯಿಗಳನ್ನ, ವೈಚಾರಿಕ ಪ್ರಶ್ನೆಗಳನ್ನು ಕಂಡ್ರೆ ಸಾವಿರ ಚೇಳು ಒಮ್ಮೆಲೇ ಕಡಿದಂತಾಗುತ್ತಾರೆ.

ಖಾವಿ ಬಟ್ಟೆ, ಕಾಮ, ಕ್ರೋಧ, ಮೋಹ, ಮದ, ಮತ್ಸರ ಮುಂತಾಗಿ ಅರಿಷಡ್ವರ್ಗಗಳ ತ್ಯಾಗದ ಸಂಕೇತ ಅಲ್ಲವೇ? ಹಾಗಂತ ತಿಳಿದೇ ಇವರನ್ನ ನಮ್ಮ ಮನೆಗಳ ಪ್ರತಿ ಕಾರ್ಯಕ್ರಮಕ್ಕೆ ಕರೆದು ಉಣಬಡಿಸಿ ಪಾದ ತೊಳಕೊಂಡು ನೀರು ಕುಡಿದು ಮೇಲೆ ದಕ್ಷಿಣ ಕೊಟ್ಟು ಕಳಿಸಿದ್ದೇವೆ. ಈಗ ಅದೇ ಭಕ್ತರು ವೈಚಾರಿಕವಾಗಿ ಸ್ಪಷ್ಟನೆ ಕೇಳಿದರೆ ಈ ರೀತಿ ಉತ್ತರಿಸಬಹುದಾ?.. ಹೆಣ್ಣನ್ನು ಗೌರವಿಸದೆ ಸೂಳೆ ಎಂದು ಅವಮಾನಿಸುವ ಇವರೆಲ್ಲಿ, ಹೆಣ್ಣು ಹೆಣ್ಣಲ್ಲ ಹೆಣ್ಣು ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ ಎಂದ ಶರಣರೆಲ್ಲಿ ? ಮಾತು ಮಾತಿಗೂ ಲೇ, ಮಗನೇ ಹೊಡೀತಿನಿ, ಬಡಿತಿನಿ ಅನ್ನೋ ಇವರೆಲ್ಲಿ ? ನುಡಿದರೆ ಮುತ್ತಿನ ಹಾರದಂತಿರಬೇಕು ಅನ್ನೋ ಶರಣರೆಲ್ಲಿ ? ಶರಣ ಸಂಸ್ಕೃತಿಗೂ ಈ ಗುಂಡಾ ಸಂಸ್ಕೃತಿಗೂ ಎತ್ತಣಿಂದೆತ್ತ ಸಂಬಂಧವಯ್ಯ?

ಉತ್ತಂಗಿ ಚೆನ್ನಪ್ಪನವರು

ಈ ಸಂಭಾಷಣೆ ಕೇಳಿದ ನನ್ನ ಕುಟುಂಬ ಹೆದರಿಕೊಂಡಿದ್ದಾರೆ, totally traumatized, terrified ಮತ್ತು ಇನ್ನು ಮುಂದೆ ಎಂದೆಂದಿಗೂ ಇಂತಹ ಜಾತಿ ಮೋಹದ ಜಂಗಮರನ್ನು ಯಾವ ಕಾರ್ಯಕ್ರಮಕ್ಕೂ ಕರೆಯದೆ ಬಹಿಷ್ಕರಿಸಲು ನಿರ್ಧರಿಸಿದ್ದೇನೆ. ಈ ಬಗ್ಗೆ ಸಮಾಜದ ಮುಖಂಡರಿಗೂ ಸೂಚಿಸಿ ಬಹಿಷ್ಕಾರಕ್ಕೆ ಒತ್ತಾಯಿಸುವೆನು.

ಬಸವ ತತ್ವದ ನೊಗ ಇಂಥವರ ಮೇಲೆ ಕೊಡುವುದು ಬೇಡ. ಸಮಾಜ ಇಂತಹ ಜಾತಿಶ್ರೇಷ್ಠ ಎನ್ನುವ ಖಾವಿಗಳ ಬಗ್ಗೆ ಎಚ್ಚೆತ್ತು ಕೊಳ್ಳಬೇಕು. ಬಸವ ತತ್ವದ ನೊಗ ಇವರ ಮೇಲೆ ಹೇರಿ ಈಗ ಬಸವಣ್ಣನನ್ನೇ ಎತ್ತನ್ನಾಗಿ ಮಾಡಿ ನಿಲ್ಲಿಸಿದ ಇವರಿಂದ ಬಸವ ತತ್ವವನ್ನು ಬಿಡುಗಡೆ ಗೊಳಿಸಬೇಕಾದ ಅಗತ್ಯವಿದೆ.

ಗಣಾಚಾರದ ಪಥದಲ್ಲಿ ಇಂತಹ ಕಲ್ಲು ಮುಳ್ಳುಗಳು ಬರುತ್ತಿರುತ್ತವೆ. ಎದೆಯೊಡ್ಡಿ ಮುಂದೆ ಸಾಗೋಣ. ಬಸವನ ರಥವನ್ನು ವಿಶ್ವದೆಡೆಯಲ್ಲಿ ಎಳೆಯೋಣ.

ಇಲ್ಲಿ ನನಗೆ ನೆನಪಾಗುವರು ರೇವರಂಡ ಉತ್ತಂಗಿ ಚೆನ್ನಪ್ಪನವರು, ಅವರು ಅಂದೆ ಹೇಳಿದ ಕಟು ಸತ್ಯದ ಮಾತು ನನ್ನ ಕಣ್ಮುಂದೆ ತೇಲಿ ಬಂತು. ಬಸವಣ್ಣನವರಿಗೆ “ಪಂಚಾಚಾರ್ಯರು ಬಹಿರಂಗದ ಶತ್ರುಗಳಾದರೆ, ವಿರಕ್ತರು ಅಂತರಂಗದ ವೈರಿಗಳಾಗಿದ್ದಾರೆ” ಎಂದು. ಇದು ಇಂದಿಗೂ ಪ್ರಸ್ತುತ, ಕಾರಣ ವಿರಕ್ತ ಪರಂಪರೆ ಅಂದರೆ ಆದರೆ ಮೂಲ ಶ್ರೀಮನ ನಿರಂಜನ ಪ್ರಣವ ಸ್ವರೂಪ ಅಲ್ಲಮಪ್ರಭುವಿನ ಪರಂಪರೆ. ಅದನ್ನ ಈಗ ಜಾತಿ ಡೊಂಬರು ಜಾತಿಗೆ ಮಿತಿಯಾಗಿಸಿ ಸಾಮಾನ್ಯ ಲಿಂಗಾಯ್ತರನ್ನ ಕತ್ತಲಲ್ಲಿ ನೂಕಿದ್ದಾರೆ, ಬನ್ನಿ ಇಂಥವರ ವಿರುದ್ಧ ಎಚ್ಚೆತ್ತುಕೊಳ್ಳೋಣ.ಕಾವಿ ಕಾಷಾಂಬರವ ಹೊದ್ದು ಕಾಮವಿಕಾರಕ್ಕೆ ತಿರುಗುವ ಕರ್ಮಿಗಳಮುಖವ ನೋಡಲಾಗದು. ಜಂಗಮವಾಗಿ ಜಗದಿಚ್ಫೆಯ ನುಡಿವ ಜಂಗುಳಿಗಳಮುಖವ ನೋಡಲಾಗದು. ಲಿಂಗೈಕ್ಯರೆನಿಸಿಕೊಂಡು ಅಂಗವಿಕಾರಕ್ಕೆ ತಿರುಗುವ ಲಿಂಗದ್ರೋಹಿಗಳ ಮುಖವ ನೋಡಲಾಗದು ಕಾಣಾ, ಅಮುಗೇಶ್ವರಲಿಂಗವೆ. ಶಿವಶರಣೆ ಅಮ್ಮುಗೆ ರಾಯಮ್ಮನ ವಚನದಂತೆ ಕಾವಿ ಹೊತ್ತು ತಿರುಗುವ ಗಾವಿಲರೆಲ್ಲ ನಮ್ಮರಲ್ಲ. ಅವರೊಳಗೆ ಬಹಳಷ್ಟು ಜನ ಬಸವ ದ್ರೋಹಿಗಳಿದ್ದಾರೆ. ಇದನ್ನು ನಾವು ಅರಿತುಕೊಳ್ಳಲೇಬೇಕಾಗಿದೆ. ಇಲ್ಲದೆ ಹೋದರೆ ತಮ್ಮ ಕಾಲನ್ನು ನಮ್ಮ ಡುಬ್ಬದ ಮೇಲೆ ಹೇರಿ ಲಿಂಗಾಯತ ಸಮಾಜವನ್ನು ಸತ್ಯಾನಾಸ ಮಾಡುತ್ತಾರೆ. ಅಯ್ಯಾ, ವಿರಕ್ತ ವಿರಕ್ತರೆಂದೇನೊ? ವಿರಕ್ತಿಯ ಮಾತನಾಡುವರಲ್ಲದೆ ವಿರಕ್ತಿಕೆ ಎಲ್ಲರಿಗೆಲ್ಲಿಯದೊ? ಕೈಯೊಳಗಣ ಓಲೆ, ಕಂಕುಳೊಳಗಣ ಸಂಪುಟ, ಬಾಯೊಳಗಣ ಮಾತು. ಪುಣ್ಯವಿಲ್ಲ-ಪಾಪವಿಲ್ಲ, ಕರ್ಮವಿಲ್ಲ-ಧರ್ಮವಿಲ್ಲ, ಸತ್ಯವಿಲ್ಲ-ಅಸತ್ಯವಿಲ್ಲವೆಂದು ಮಾತನಾಡುತಿಪ್ಪರು ಎಂಬ ಅಕ್ಕಮಹಾದೇವಿ ತಾಯಿಯ ವಚನವನ್ನು ಸರಿಯಾಗಿ ಗ್ರಹಿಸಿ ಮುನ್ನಡೆಯಬೇಕಿದೆ.‌‌‌

೦ ಪ್ರಕಾಶ ಉಳ್ಳಾಗಡ್ಡಿ

11 thoughts on “ಮಠಾಧಿಪತಿಯೊಬ್ಬರ ಅಣಿ ಮುತ್ತುಗಳು !

 1. ಅವರ ನಾಲಿಗೆ ಅವರ ಕುಲವನ್ನು ಹೇಳಿದೆ.

 2. ಜಾತಿ ಜಂಗಮರಿಗೆ ಮಣಿಹಾಕುವುದು ಬೇಡ.ವಿರಕ್ತಪೀಠದಿಂದ ಅನಾಚಾರಿ ಜಂಗಮರನ್ನು ಹೊರಹಾಕಬೇಕು.

 3. ಯಾವನೋ ಅಯೋಗ್ಯ ಸ್ವಾಮಿ ಕೆಟ್ಟ ಕೆಟ್ಟ ಶಬ್ದಗಳಿಂದ ನಿಂದಿಸಿದರೆ ಆ ಶಬ್ದಗಳನ್ನು ಬಸವ ಪಾದಕ್ಕೆ ಅರ್ಪಿಸಿ ನಿಶ್ಚಿಂತೆಯಿಂದ ಇರಿ.ಆ ಸ್ವಾಮಿ ಮತ್ತೇನಾದರೊ ಕಿತಾಪತಿ ಮಾಡಿದರೆ ನಿಮ್ಮ ಬೆನ್ನಿಗೆ ಇಡೀ ಬಸವ ಸಮುದಾಯ ಇದೆ. ನಾವೆಲ್ಲ ಅಲ್ಲಿಗೆ ಬರುತ್ತೇವೆ.ಹೆದರಿಕೊಂಡು ಕುಳಿತುಕೊಳ್ಳುವ ಕಾಲ ಮುಗಿದು ಹೋಯಿತು. ಒಂದು ದಿನಾಂಕ ಸಮಯ ನಿರ್ಧರಿಸಿ ಅವರ ಜೊತೆ ಮಾತನಾಡೋಣ.ಆ ಸ್ವಾಮಿಯ ದೂರವಾಣಿ ಸಂಖ್ಯೆ ಕೊಡಿ ಚಳಿ ಬಿಡಿಸೋಣ.

 4. Mathava kattada khavi hakada sharana tatva mecchidaru mathadisharu .basavatatva palane madidre olledu adre adsne esto Jana babdavala madikollutirodu sariyala…………….nijavad basava anuyayi Sri siddaganga shreegalu kuda mathadeesharallave avar adarsha ulidavarige yake Ila ?

 5. ಲೋ ಕಿತ್ತೋದವನೆ ನೀನು ಯಾವ ಸ್ವಾಮಿಯೊ ಅವಿವೇಕಿ..ಲಿನ್ಗಾಯತಧರ್ಮವನ್ನ ನಿಮ್ಮನ್ತ ಕರ್ಮಠ
  ಜಾತಿ ಜನ್ಗಮರು ಹಸಗೆಡಿಸಿದ್ದಾರೆ. ಆ ಬಗ್ಗೆ ಪ್ರಶ್ನಿಸಿದ ಪ್ರಕಾಶ್ ರವರನ್ನ ಗುನ್ಡಾಗಿರಿಗೆ ಕರೆದಿದ್ದೀಯ, ಅವರನ್ನ ಬಿಡು.. ನಮ್ಮ ಮಯಿಸೂರಿಗೆ ಬಾಪ್ಪಾ..ಧರ್ಮದ ಬಗ್ಗೆ ಸಮ್ ವಾದಕ್ಕೂ
  ಸರಿ…ಇಲ್ಲಾ ನೀನನ್ದನ್ತೆಯೆ ಗೂನ್ಡಾಗಿರಿಗೂ ಸರಿ
  ಯಾವತ್ ಬರ್ತಿ.. ಮಯಿಸೂರಿಗೆ ತಿಳಿಸೋ ಅಡ್ನಾಡಿ ಸ್ವಾಮಿ…

 6. ಲೋ ಅವಿವೇಕಿ ಸ್ವಾಮಿ..ಕೆಲವು ಕರ್ಮಠ ಜಾತಿ ಜನ್ಗಮರ ಅವಿವೇಕವನ್ನು ಖನ್ಡಿಸುವ ಪ್ರಕಾಶರವರನ್ನು
  ಆವಾಚ್ಯ ಶಬ್ಧಗಳಿನ್ದ ನಿನ್ದಿಸಿ ಗೂನ್ಡಾಗಿರಿಗೆ ಕರೆದಿದ್ದೀಯಾ..ಮಗನ ಅವರ್ನ ಬಿಡು..ನಮ್ಮ ಮಯಿಸೂರಿಗೆ ಯಾವತ್ ಬರ್ತಿ ತಿಳ್ಸೊ ಮಗನ…
  ಸಮ್ ವಾದಕ್ಕೂ ಸರಿ… ಇಲ್ಲ ಗೂನ್ಡಾಗಿರಿಗೂ ಸರಿ..
  ಮಯಿಸೂರಿಗೆ ಯಾವಾಗ್ಬರ್ತಿ ತಿಳ್ಸೊ ಮಗ್ನಾ..

 7. ಮೊದಲು ಈಗಿರುವ ಮಠಗಳ ಮಠಾಧಿಪತಿಗಳಾದ ಜಾತಿ ಜಂಗಮರನ್ನು ಉಚ್ಛಾಟಿಸಿ ಲಿಂಗಾಯತ ಒಳ ಪಂಗಡಗಳಲ್ಲಿಯೇ ಇರುವ ಬಸವ ತತ್ವ ಮತ್ತು ಲಿಂಗಾಯತ ಧರ್ಮದ ಅರಿವು ಆಚಾರವುಳ್ಳ ವ್ಯಕ್ತಿಗಳನ್ನು ಪೀಠಾಧಿಪತಿಗಳನ್ನಾಗಿ ನೇಮಕ ಮಾಡುವುದು ಅವಶ್ಯಕವಾಗಿದೆ.
  ಪಂಚಮಸಾಲಿ ಪೀಠದಂತೆ ಒಳ ಪಂಗಡಗಳ ಪೀಠಗಳು ಉಗಮವಾದರೂ ಚಿಂತೆಯಿಲ್ಲ.
  ಜಾತಿ ಅಹಂಮಿಕೆ ಮತ್ತು ಲಿಂಗಾಯತರೆಲ್ಲರಿಗೂ ನಾವೇ ಗುರುಗಳು ಎನ್ನುವ ಅಹಂಮಿಕೆ ಮತ್ತು ಲಿಂಗಾಯತ ಧರ್ಮ ಸಂಸ್ಥಾಪಕ ಬಸವಣ್ಣನವರನ್ನು ಅವಹೇಳನ ಮಾಡುವ ಈ ಜಾತಿ ಜಂಗಮರನ್ನು ಮಠಗಳ ಮಠಾಧಿಪತಿಗಳನ್ನಾಗಿ ಮಾಡೋದು ತಪ್ಪಿದಾಗ ಮಾತ್ರ ಲಿಂಗಾಯತ ಧರ್ಮ ಮತ್ತು ಅಪ್ಪ ಬಸವಣ್ಣ ಅವರಿಗೆ ಬೆಲೆ ಸಿಕ್ಕಂತಾಗುತ್ತದೆ.

Leave a Reply

Your email address will not be published. Required fields are marked *

error: Content is protected !!