ಹುಲಸೂರು ಶಿವಾನಂದ ಸ್ವಾಮೀಜಿಯಿಂದ ತತ್ವಕ್ಕೆ ಅಪಚಾರ !?

ಹುಲಸೂರು ಮಠದ ಪೂಜ್ಯ ಶ್ರೀ ಶಿವಾನಂದ ಸ್ವಾಮೀಜಿಗಳು ಬಸವ ಧರ್ಮಕ್ಕೆ ಅಪಚಾರ ಮಾಡುವ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಬಸವ ಕೇಂದ್ರದ ಪ್ರಮುಖರಲ್ಲಿ ಒಬ್ಬರಾದ ಕಲಬುರ್ಗಿಯ ಶರಣ ಸೋಮಣ್ಣ ನಡಕಟ್ಟಿಯವರು ಗಂಭೀರ ಆರೋಪ ಮಾಡಿದ್ದಾರೆ.

ಇತ್ತ ಬಸವ ತತ್ವ ವಚನ ಸಾಹಿತ್ಯ ಎಂದು ಹೇಳುತ್ತಲೇ ಒಳಗೊಳಗೆ ಪಂಚಾಚಾರ್ಯರ ಬಗೆಗೆ ಪ್ರೇಮ ಹೊಂದಿದ್ದಾರೆ.‌ಹುಲಸೂರು ಶಾಖಾ ಮಠದ ಕಾರ್ಯಕ್ರಮದಲ್ಲಿ ಉದ್ಭವಗೊಂಡ ಶ್ರೀ ರೇಣುಕಾಚಾರ್ಯ ಚಿತ್ರ ಹೊಂದಿರುವ ನೆನಪಿನ ಕಾಣಿಕೆಯೆ ಇದಕ್ಕೆ ಸಾಕ್ಷಿ ಎಂದು ನಡಕಟ್ಟಿಯವರು ವಿವರಿಸುತ್ತಾರೆ.

ಆದರೆ ನಮ್ಮ ಶಾಖಾ ಮಠದವರು ಈ ಸ್ಮರಣಿಕೆಗಳನ್ನು ಮಾಡಿಸಿಲ್ಲ. ಯಾರೋ ಭಕ್ತರೊಬ್ಬರು ಮಾಡಿಸಿಕೊಟ್ಟದ್ದು. ನಾನೂ ಈಗಲೂ ಬಸವ ಭಕ್ತನೆ ಎಂದು ಶಿವಾನಂದ ಸ್ವಾಮಿಗಳು ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಇಷ್ಟು ದಿನ ಲಿಂಗಾಯತ ಸಮಾಜದ ಜನಗಳನ್ನು ಕತ್ತಲಿನಲ್ಲಿಟ್ಟು ಮಠಾಧೀಶರು ಆಟ ಆಡಿದ್ದಾರೆ. ಇನ್ನು ಮುಂದೆಯೂ ಇಂಥ ಒಳಗೊಂದು ಹೊರಗೊಂದು ಆಡ ಆಡಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಜೇವರ್ಗಿ ಬಸವ ಕೇಂದ್ರದ ಶರಣ ಬಸವ ಕಲ್ಲಾ ಆಕ್ರೋಶ ವ್ಯಕ್ತ ಪಡಿಸಿದರು.

ನಿಜವಾದ ಬಸವ ಪ್ರೇಮಿಯಾಗಿದ್ದರೆ ಪಂಚಾಚಾರ್ಯ ಪ್ರೇಮವನ್ನು ಹೊಂದಿರುವುದು ಸುಳ್ಳೆ ? ಎಂದು ಬರಹಗಾರ ವಿಶ್ವನಾಥ ಡೋಣೂರ ಪ್ರಶ್ನಿಸಿದ್ದಾರೆ.

ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಶಿವಾನಂದ ಸ್ವಾಮೀಜಿಗಳು ನಾನು ವೈಯಕ್ತಿವಾಗಿ ಇದನ್ನೆಲ್ಲ ಇಷ್ಟ ಪಡುವುದಿಲ್ಲ, ಆದರೆ ಅನಿವಾರ್ಯವಾಗಿ ಕೆಲವು ಘಟನೆಗಳು ನಡೆದು ಹೋಗುತ್ತವೆ. ಭಕ್ತರಾದವರು ಎಲ್ಲರೂ ಪ್ರೌಢರಾಗಿರಲಾರರು. ಹೀಗಾಗಿ ಇಂಥ ಅವಘಡಗಳು ಘಟಿಸುತ್ತವೆ ಎಂದು ಸ್ವಾಮೀಜಿ ಸಮಜಾಯಿಸಿ ನೀಡಿದರು.

ಸ್ವಾಮೀಜಿಯ ಸಮಜಾಯಿಸಿಯನ್ನು ಖಂಡಿಸಿದ ಸೋಮಣ್ಣ ನಡಕಟ್ಟಿಯವರು ಜನರು ಪ್ರೌಢರಾಗಿರದೆ ಇರುವುದಕ್ಕೆ ಕಾರಣರೆ ಮಠಾಧೀಶರು ಎಂದು ನೇರ ಆರೋಪ ಮಾಡಿದರು.

೦ ರಾಘವೇಂದ್ರ ಕುಲ್ಕರ್ಣಿ

 • ತೀರಾ ಇತ್ತೀಚೆಗೆ ಚಿತ್ರದುರ್ಗ ಶರಣರು ಶಿವಾನಂದ ಸ್ವಾಮೀಜಿ ಅವರಿಗೆ ಬಸವ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು.
 • ಭಾರತದ ಉದ್ದಗಲಕ್ಕೂ ಸುಮಾರು ೨೨೦೦೦ ಸಾವಿರ ಕಿ.ಮೀಟರ ಪಾದಯಾತ್ರೆ ಮಾಡಿ ತತ್ವ ಪ್ರಸಾರ ಮಾಡಿದ್ದು ಶ್ಲಾಘನೀಯ ಕಾರ್ಯ ಎಂದು ಕಲಬುರ್ಗಿ ಜಾಗತಿಕ‌ ಲಿಂಗಾಯತ ಮಹಾಸಭೆ ಸನ್ಮಾನಿಸಿ ಗೌರವಿಸಿತ್ತು.
 • ಈ ಮೇಲಿನ ವಿಷಯದ ಕುರಿತು ಮುಕ್ತವಾದ ಚರ್ಚೆಯನ್ನು ಬಸವಮಾರ್ಗ ಸ್ವಾಗತಿಸುತ್ತದೆ.
 • ಓದುಗರು ತಮ್ಮ ಅಭಿಪ್ರಾಯಗಳನ್ನು ೯೦೦೮೮೦೨೪೫೬ ಗೆ ಕಳುಹಿಸಬಹುದು.
 • ಯಾವುದೇ ಅಭಿಪ್ರಾಯಗಳನ್ನು ಮುಕ್ತವಾಗಿ ಇರಿಸಲಾಗಿದೆ.
 • ಸಂಪಾಕರು, ಬಸವಮಾರ್ಗ

6 thoughts on “ಹುಲಸೂರು ಶಿವಾನಂದ ಸ್ವಾಮೀಜಿಯಿಂದ ತತ್ವಕ್ಕೆ ಅಪಚಾರ !?

 1. Yes. During his country wide padayatra, he propogated Basavanna as Veershaiva Dhrma sthapaka/uddharaka. I suggested to correct this. But don’t know he corrected it or not. He had recorded tape saying the above said propagation. He use run this on the Mike. It shows that, he might be having hidden affection about panchachrya.

 2. ಜನರನ್ನು ಸರಿಯಾದ ರೀತಿಯಲ್ಲಿ ಬಸವಮಾರ್ಗಕ್ಕೆ ಕರೆಂದುಕೊಡು ಬರಬೇಕಾದ ಮಠಾಧೀಶರು,
  ಮೇಲಿನ ವಿಷಯಕ್ಕೆ ಭಕ್ತರನ್ನು ಜವಾಬ್ದಾರಿ ಮಾಡಿರುವುದು ಖೇದಕರ.

 3. ಬಸವ ತತ್ವ ಪ್ರಚಾರ ಪ್ರಸಾರ ಹಾಗೂ ವಾಸ್ತವಿಕ ಸಮಾಜಿಕ ಪರಿಸ್ಥಿತಿ ಕುರಿತು ಸಮಾನ ಮನಸ್ಕರ ಚಿಂತನ ಮಂಥನ ಆಗಬೇಕು. ಇಲ್ಲಿ ಹೊಸಬರನ್ನು ಅವಕಾಶ ಒದಗಿಸಬೇಕು.
  ಮಠಾಧೀಶರ ಹೊರತಾಗಿಯೂ ಕೌಟುಂಬಿಕ ಜೀವನದಲ್ಲಿ ಇರುವ ಅನೇಕರು ಈ ಕುರಿತು ತುಂಬಾ ಆಸಕ್ತರು ಹಾಗೂ ಸಮರ್ಥರು ಇದ್ದಾರೆ.ಆದರೆ ಸನ್ಯಾಸ ಸ್ವೀಕರಿಸಿ ಮಠ ಮಾಡಿಕೊಂಡು ಇರುವವರ ಅಸ್ತಿತ್ವ ಹಾಗೂ ಆರ್ಥಿಕ ಸಂಪನ್ಮೂಲ ಸಧೃಡ ಇರುವದರ ಕುರಿತು ಚಿಂತನ ಆಗುವದರ ಅವಶ್ಯಕತೆ ಇದೆ. ಬೇರೆ ಶಕ್ತಿಗಳು ಇವರುಗಳ ಮೇಲೆ ಪ್ರಭಾವ ಬೀರುವ ಕುರಿತು ಎಚ್ಚರಿಕೆ ವಹಿಸುವ ಜವಾಬ್ದಾರಿ ನಿಗದಿಗೊಳ್ಳಬೇಕು.

 4. ಬಸವ ನಿಷ್ಠೆಯಲ್ಲಿ ಬದ್ದತೆ ಬಹಳ ಮುಖ್ಯ.
  ನೀ ಮಾಯೋಳಗೊ ನಿನ್ನೊಳು ಮಾಯೆಯೋ
  ನೀ ಬಸವನೋಳಗೋ ನಿನ್ನೋಳು ರೇಣುಕನೋ…!!.

 5. ಹುಲಸೂರು ಶ್ರೀಗಳುಗುರು ಬಸವ ತತ್ವಕ್ಕೆ ಅಪಚಾರ ಮಾಡುತ್ತಿದ್ದಾರೆಂದು ಕೆಲವರು ಆರೋಪ ಹೊರಿಸುತ್ತಿದ್ದಾರೆ ಆದರೆ ಅವರ ಶ್ರೀಮಠದಲ್ಲಿ ಬಸವತತ್ವ ಬಿಟ್ಟರೆ ಬೇರೆ ಇಲ್ಲ. ಅದರಂತೆ ದೇಶದ ಉದ್ದಗಲಕ್ಕೂ ಬಸವನ ಹೆಸರಲ್ಲಿ ಪಾದಯಾತ್ರೆ ಮಾಡಿದರು ಅದು ಮುಪ್ಪಾವಸ್ಥೆಯಲ್ಲಿ ಇದು ಸಾಮಾನ್ಯವಾದ ಕೆಲಸವೇನಲ್ಲ .ಬಸವಣ್ಣನವರ ಕುರಿತಾದ ಸಾವಿರಾರು ಪುಸ್ತಕಗಳನ್ನು ಬೇರೆ ಬೇರೆ ಭಾಷೆಯ ಮೂಲಕ ಮುಟ್ಟಿಸಿದ್ದಾರೆ ಬೇರೊಂದು ಮಠದ ಕಾರ್ಯಕ್ರಮದಲ್ಲಿ ನೆನಪಿನ ಕಾಣಿಕೆ ಮೇಲೆ ಗುರು ಬಸವಣ್ಣರ ಸಮೇತ ರೇಣುಕರ ಭಾವಚಿತ್ರವನ್ನು ಮತ್ತು ಸ್ವಾಮಿಗಳ ಭಾವಚಿತ್ರವಿರುವುದೇ ಇಂದು ಅವರ ಕುರಿತು ಮಾಡುತ್ತಿರುವ ಆರೋಪಕ್ಕೆ ಕಾರಣವಾಗಿದೆ ಆದರೆ ಇದು ಭಕ್ತರು ಮಾಡಿದ ಅವಾಂತರ. ಗುರುಗಳು ಹೇಳಬಹುದಿತ್ತು ಆದರೆ ಬಸವತತ್ವ ಬದ್ಧತೆಯ ಶಿಷ್ಯವರ್ಗ ಇಲ್ಲದ ಊರಲ್ಲಿ ಇಂಥ ಘಟನೆಗಳು ಆಗುವುದು ಬಹಳ ಸಹಜ ಅವರನ್ನು ಮೆಲ್ಲಗೆ ತಿದ್ದಬೇಕಾಗುತ್ತದೆ ಬಸವತತ್ವ ಅರಿಯದ ಸಾಮಾನ್ಯರಿಗೆ ಝೇಂಕರಿಸುತ್ತಾ ಬರೆಯುತ್ತ ಹೋದರೆ ಬಸವತತ್ವ ಬೆಳೆಯುವುದಾದರೂ ಹೇಗೆ?.ಇದನ್ನೇ ಗುರಿಯಾಗಿಸಿಕೊಂಡು ಹಲಸೂರು ಶ್ರೀಗಳನ್ನು ಬಸವತತ್ವ ವಿರೋಧಿ ಎಂದು ಹೇಳುವುದು ಸರಿಯಲ್ಲ.
  ಅವರು ಸಂಪೂರ್ಣ ಬಸವ ನಿಷ್ಠರು ಆದರೆ ಅವರ ಸುತ್ತಲಿನ ಕೆಲವರು ಅವರಿಗೆ ಕೆಟ್ಟ ಹೆಸರು ಬರಬೇಕೆಂದಲೂ ಹೀಗೆ ಮಾಡಿರಬಹುದು ಗುರುಗಳು ಅಂಥವರ ಬಗ್ಗೆ ಜಾಗೃತೆ ವಹಿಸುವುದು ಒಳ್ಳೆಯದು.

  ಭಕ್ತರನ್ನು ಬಹಳ ಸಮಾಧಾನದಿಂದ ತಿದ್ದ ಬೇಕಾಗಿದೆ .ಎಲ್ಲರೂ ಅವರವರ ಮೂಗಿನ ನೇರಕ್ಕೆ ಮಾತನಾಡುವುದನ್ನು ಬಿಟ್ಟುಗುರು ಭಕ್ತರು ಕೂಡಿಕೊಂಡೆ ಬಸವ ತತ್ವ ಪ್ರಸಾರ ಮಾಡಬೇಕಿದೆ. ಇಂಥ ವಾದಗಳನ್ನು ಬಿಟ್ಟು ಹಳ್ಳಿಹಳ್ಳಿಗೆ ಬಸವ ತತ್ವವನ್ನು ಪ್ರಸಾರ ಮಾಡಿ. 🙏🙏

 6. ನಿಮ್ಮ ಮಾತು ನಿಜವಾದದ್ದು.ತಿದ್ದುವುದು, ಬಿದ್ದವರು ಎದ್ದು ನಡೆಯೋದು, ಇನ್ನೊಮ್ಮೆ ಹೀಗಾಗದಂತೆ ನಿಷ್ಠೆಯಿಂದ, ಎಚ್ಚರಿಕೆಯಿಂದ ಇರೋದು ಇದೆಲ್ಲ ನಮ್ಮ ತತ್ವದ ವೈಶಿಷ್ಟ್ಯ. ಪನರ್ಬಾಳು.
  ಶರಣಾರ್ಥಿಗಳು.
  ಮಹಾನಂದಾ ತಾಯಿ ಹಿರೇಮಠ ಮುಗಳಿ.

Leave a Reply

Your email address will not be published. Required fields are marked *

error: Content is protected !!