ದೇವರನ್ನು ತಂದು ರಾಜಕಾರಣ ಮಾಡುವುದನ್ನು ಕೈಬಿಡಿ: ಬಾಬಾಗೌಡ ಪಾಟೀಲ

ಬೆಳಗಾಂವ : ರೈತ ವಿರೋಧಿ ಮಸೂದೆಯನ್ನು ಕೇಂದ್ರ ಸರಕಾರ ವಾಪಾಸ್ ಪಡೆಯಬೇಕು ಎಂದು ಚಳುವಳಿ ಮಾಡುತ್ತಿರುವವರು ಈ ದೇಶದ ರೈತರೆ ಹೊರತು ಭಯೋತ್ಪಾದಕರಲ್ಲ ಎಂದು ಕೇಂದ್ರದ ಮಾಜಿ ಸಚಿವ, ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖರಲ್ಲಿ ಒಬ್ಬರಾದ ಬಾಬಾಗೌಡ ಪಾಟೀಲ ಗುಡುಗಿದರು.

ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಕೇಂದ್ರದ ಕೃಷಿ ನೀತಿಯ ವಿರುದ್ಧ ಹೋರಾಟ ಮಾಡುತ್ತಿರುವ ರೈತರನ್ನು ಕೇಂದ್ರದ ಹಲವು ರಾಜಕೀಯ ನಾಯಕರು ಖಲೀಸ್ಥಾನಿಗಳು, ಭಯೋತ್ಪಾದಕರು ಎಂದು ಬಣ್ಣಿಸುತ್ತಿರುವಿರಿ.. ಈ ರೈತರೆಲ್ಲ ಖಲಿಸ್ಥಾನಿಗಳು, ಪಾಕಿಸ್ತಾನಿ ಭಯೋತ್ಪಾದಕರೆ ಆಗಿದ್ದರೆ ಅವರನ್ನು ಬಂಧಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಿ. ಸುಮ್ಮನೆ ನಿಮ್ಮ ಮೇಲೆ ಬಂದಿರುವ ಆಪಾದನೆಯಿಂದ ಪಾರಾಗಲೂ ಏನೇನೋ ಸಬೂಬು ಹೇಳಬೇಡಿ ಎಂದು ಕೇಂದ್ರ ಸರಕಾರದ ಮೇಲೆ ಕಿಡಿ ಕಾರಿದರು.

ಮೋದಿ ಸರಕಾರ ಜನ ಸಾಮಾನ್ಯರಲ್ಲಿ ಮನೆ ಮಾಡಿರುವ ಧಾರ್ಮಿಕ ನಂಬಿಕೆಯನ್ನು ಬಂಡವಾಳ ಮಾಡಿಕೊಂಡು ರಾಜಕೀಯ ಮಾಡುತ್ತಿರುವಿರಿ. ದೇವರನ್ನು ತಂದು ರಾಜಕಾರಣ ಮಾಡುವುದನ್ನು ಕೈಬಿಡಿ. ಆ ದೇವರಲ್ಲಿಯೂ ಜನ ಸಾಮಾನ್ಯರು ಆರಾಧಿಸುವ ದೇವರು ಇಲ್ಲ.

ದೆಹಲಿಗೆ ಹೋಗದೆ ಇಲ್ಲಿಂದಲೇ ಕೇಂದ್ರದ ಕೃಷಿ ನೀತಿಯ ವಿರುದ್ಧ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಸತ್ಯಾಗ್ರಹ ಆರಂಭಿಸುವುದಾಗಿ ಮಾಧ್ಯಮಕ್ಕೆ ತಿಳಿಸಿದರು.

ವರದಿ : ರಾಘವೇಂದ್ರ ಕುಲ್ಕರ್ಣಿ

Leave a Reply

Your email address will not be published. Required fields are marked *

error: Content is protected !!