ಸತ್ಯಂಪೇಟೆ ಪ್ರಕರಣ ಕೈಬಿಡದಿದ್ದರೆ ರಾಜ್ಯಾದ್ಯಂತ ಹೋರಾಟಕ್ಕೆ ಸಿದ್ಧ : ಡಿ.ಎಸ್.ಎಸ್.

ರಾಯಚೂರು : ಶರಣ ತತ್ವಗಳ ಪ್ರಸಾರಕ, ಪತ್ರಕರ್ತ ದಿಟ್ಟ ಬರಹಗಾರ ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲೆ ದಾವಣಗೆರೆಯ ಹೊನ್ನಾಳಿಯಲ್ಲಿ ದಾಖಲಿಸಿರುವ ಕೇಸ್ ಹಿಂಪಡೆಯಬೇಕೆಂದು ಒತ್ತಾಯಿಸಿ ಮಸ್ಕಿಯ ತಾಲೂಕು ದಲಿತ ಸಂಘರ್ಷ ಸಮಿತಿ ಜಿಲ್ಲಾಧಿಕಾರಿಗಳ ಮೂಲಕ  ಒತ್ತಾಯಿಸಿತು.

ಈ ಸಂದರ್ಭದಲ್ಲಿ ಸಮಿತಿಯ ತಾಲೂಕು ಅಧ್ಯಕ್ಷರಾದ ಸಿದ್ಧಪ್ಪ ಪೂವಿನಭಾವಿ ಮಾತನಾಡಿ, ಕಲ್ಯಾಣ ಕರ್ನಾಟಕದ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲೆ 120-2020 , ಕಲಂ 505 ಅಡಿಯಲ್ಲಿ ಕೇಸ್ ದಾಖಲಿಸಿದ ಶಕ್ತಿಗಳು ಸನಾತನವಾದಿಗಳಾಗಿದ್ದಾರೆ. ಅವರು ಎಂದೂ ವೈಜ್ಞಾನಿಕ ವೈಚಾರಿಕತೆಗೆ ತಮ್ಮನ್ನು ತಾವು ತೆರೆದುಕೊಳ್ಳುವವರಲ್ಲ. ಸತ್ಯಂಪೇಟೆಯವರ ಲೇಖನ ಬರಹ ಯಾವತ್ತೂ ಜನಪರ ಹಾಗೂ ಜೀವಪರವಾಗಿರುವುದು ಇಂಥ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ನೇಪವಾಗಿ, ನಿರ್ಲಕ್ಷಿಸಬಹುದಾದ ಸಂಗತಿಯ ಮೇಲೆ ಕೇಸ್ ಮಾಡಿ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿವೆ. ಇದು ನಿಜಕ್ಕೂ ಖಂಡನಾರ್ಹ ಸಂಗತಿ ಎಂದು ಸಭೆಗೆ ತಿಳಿಸಿದರು.

ಪ್ರಸ್ತುತ ವಿಶ್ವಾರಾಧ್ಯ ಸತ್ಯಂಪೇಟೆ ಜಾಗತಿಕ ಲಿಂಗಾಯತ ಮಹಾಸಭೆಯ ರಾಜ್ಯ ಕಾರ್ಯದರ್ಶಿಯಾಗಿದ್ದು ನಾಡಿನ ತುಂಬೆಲ್ಲ ೀಗಾಗಲೇ ಬುದ್ಧ ಬಸವ ಅಂಬೇಡ್ಕರ ಪೆರಿಯಾರ ಪುಲೆ ಶಿವಾಜಿ ಮುಂತಾದ ಮಹಾ ದಾರ್ಶನಿಕರ ತತ್ವಗಳನ್ನು ತಿಳಿಸುತ್ತ ಮುನ್ನಡೆದಿದ್ದಾರೆ. ಸತ್ಯಂಪೇಟೆಯವರ ಪ್ರಗತಿಪರವಾದ, ಚಿಂತನಪರವಾದ, ಸಾಮಾಜಿಕ ಸುಧಾರಣೆಯ ಬರಹಗಳು ಹಲವರಿಗೆ ಮಗ್ಗುಲ ಮುಳ್ಳಾಗಿವೆ. ಆದ್ದರಿಂದಲೆ ಆ ಸನಾತನ ಶಕ್ತಿಗಳನ್ನು ಅವರ ಅಭಿವ್ಯಕ್ತಿಯನ್ನು ಕೇಸ್ ದಾಖಲಿಸುವ ಮೂಲಕ ಹತ್ತಿಡಲು ಬಯಸುತ್ತಿವೆ ಎಂದವರು ದೂರಿದರು.

ಸಾಮಾಜಿಕ ಜಾಲತಾಣದಲ್ಲಿ ರಾಂಪುರ ಹೊನ್ನಾಳಿಯ ಮಠಾಧೀಶರ ಅವೈಜ್ಞಾನಿಕ ನಡಾವಳಿಗಳನ್ನು ಪ್ರಶ್ನಿಸಿದ್ದೇ ಬಹುದೊಡ್ಡ  ಅಪರಾಧವೆಂಬಂತೆ ಬಿಂಬಿಸಿ ಪೊಲೀಸರ ಮೇಲೆ ಒತ್ತಡ ತಂದು ಕೇಸ್ ದಾಖಲಿಸಿದ್ದಾರೆ. ಈ ಕುರಿತು ಸತ್ಯಂಪೇಟೆಯವರು ಆಗಲೇ ವಿಷಾದ ವ್ಯಕ್ತ ಪಡಿಸಿದರೂ ವಿನಾಕಾರಣ ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ ಸತ್ಯಂಪೇಟೆಯವರ ಮೇಲೆ ದ್ವೇಷ ಪೂರಿತವಾದ ಭಾವನೆ ಇಟ್ಟುಕೊಂಡಿವೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬಯಸುವ ಸತ್ಯಂಪೇಟೆಯವರನ್ನೇ ಅದಕ್ಕೆ ಗುರಿಪಡಿಸಿ ವಿಘ್ನಸಂತೋಷ ಅನುಭವಿಸುವುದು ಖಂಡನೀಯ ಎಂದವರು ಸಭೆಗೆ ತಿಳಿಸಿದರು.

ಜವಾಬ್ದಾರಿಯುತ ಬರಹಗಾರ, ಪತ್ರಕರ್ತ, ಶರಣ ಸಾಹಿತಿಯನ್ನು ಹೀಗೆ ವಿನಾಕಾರಣ  ಇಕ್ಕಟ್ಟಿಗೆ ಸಿಕ್ಕಿಸುವ ಮೂಲಕ ಅವರ ಅಭಿವ್ಯಕ್ತಿಯನ್ನು ಹತ್ತಿಡಲು ಬಯಸುವುದು ನಿಜಕ್ಕೂ ಖಂಡನಾರ್ಹ ಸಂಗತಿಯಾಗಿದೆ. ಕರ್ನಾಟಕ ಸರಕಾರ ಯಾರದೋ ಪಿತೂರಿಗೆ ಒಳಗಾಗದೆ ಒಬ್ಬ ಪ್ರಜ್ಞಾವಂತ ಬರಹಗಾರನಿಗೆ ರಕ್ಷಣೆ ನೀಡಿ, ಈಗಾಗಲೇ ದಾಖಲಾಗಿರುವ ಕೇಸ್ ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ನಮ್ಮ ಸಂಘಟನೆಯ ಒತಿಯಿಂದ ರಾಜ್ಯದ ತುಂಬೆಲ್ಲ ಹೋರಾಟ ತೀವ್ರಗೊಳಿಸಲಾಗುವುದು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

0 ರಾಯಚೂರು ವರದಿಗಾರ

2 thoughts on “ಸತ್ಯಂಪೇಟೆ ಪ್ರಕರಣ ಕೈಬಿಡದಿದ್ದರೆ ರಾಜ್ಯಾದ್ಯಂತ ಹೋರಾಟಕ್ಕೆ ಸಿದ್ಧ : ಡಿ.ಎಸ್.ಎಸ್.

  1. ಖಂಡಿತ್ ನಾವು ನಿಮ್ಮ ಜೊತೆ ಇದ್ದಿವಿ ಅಣ್ಣ, ನಿಮ್ಮ ವಿಚಾರವನ್ನು ಯಾರು ತಡೆಯಲು ಸಾಧ್ಯವಿಲ್ಲ.. ನಿಮ್ಮ ಬೆಂಬಲಕ್ಕೆ ಬಸವ ಬಳಗ ಇದೆ…

Leave a Reply

Your email address will not be published. Required fields are marked *

error: Content is protected !!