ಕೇಂದ್ರ ತನಿಖಾ ಶ್ರೇಷ್ಠ ಪ್ರಶಸ್ತಿ ಪಡೆದ ಸಿಪಿಐ ದೇವರಾಜ

ಬಸವ ತತ್ವವನ್ನು ನಡೆಯಬೇಕೆಂಬ ಅಪೇಕ್ಷೆ ಇರುವ ನನಗೆ ಸಹಸ್ರಾರು ಜನ ಸಹೋದರರು. ಲಕ್ಷಾಂತರ ಜನ ಸಹೃದಯರು.

ಅವರಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಸಿ.ಪಿ.ಐ. ಅವರಾದ ಸಹೋದರ ಟಿ.ವಿ. ದೇವರಾಜು ಅವರಿಗೆ ನಾಳೆ ದಿನ ದೇಶದ ಗೃಹ ಇಲಾಖೆ ಅಪರಾಧ ತನಿಖಾ ಶ್ರೇಷ್ಠ ಎಂಬ ಪದವಿ ನೀಡಿ ಗೌರವಿಸಲಾಗುತ್ತಿರುವುದು ಸಂತಸ ತರುವ ಸಂಗತಿಯಾಗಿದೆ.

2018 ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಗೆ ಕರ್ನಾಟಕದಿಂದ ೭ ಜನರನ್ನು ಆಯ್ಕೆ ಮಾಡಲಾಗಿದೆ. ಆ ಏಳು ಜನರಲ್ಲಿ ದೇವರಾಜ ಅವರೂ ಒಬ್ಬರು. ದೇವರಾಜು ಅವರನ್ನು ನಾನು ತೀರಾ ಹತ್ತಿರದಿಂದ ಬಲ್ಲೆ. ಅವರ ನಡೆ ನುಡಿಗಳು ಒಂದಕ್ಕೊಂದು ತಾಳೆ ಇವೆ.

ಬಹುತೇಕರು ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಗುಮಾನಿಯಿಂದ ನೋಡುತ್ತಾರೆ. ಎಲ್ಲವನ್ನೂ ಬಹು ಸೂಕ್ಷ್ಮವಾಗಿ ಗಮನಿಸುವರಿಂದ ಅವರು ಸಾರ್ವಜನಿಕ ಬದುಕಿನಿಂದ ಬಹುದೂರ ಇರುತ್ತಾರೆ. ಆದರೆ ದೇವರಾಜ ಈ ವಿಚಾರಗಳಿಗೆ ಅಪವಾದ. ಎರಡನೆ ಅಲೆಯ ಕೋವಿಡ್ ಸಂದರ್ಭದಲ್ಲಿ ಶಾಸಕರು ಹೋಗಿರುವ ಕಡೆಯಲ್ಲೆಲ್ಲ ಅಡ್ಡಾಡಿ ಕೋವಿಡ್ ಪೀಡಿತರ ಮನೋ ಧೈರ್ಯವನ್ನು ಹೆಚ್ಚಿಸಲು ಹಾಡು ಹಾಡಿ ಕುಣಿದು ಕುಪ್ಪಳಿಸಿದ್ದಾರೆ.

ಇದಷ್ಟೇ ಅಲ್ಲದೆ ಕೆಲವು ಕೊಲೆ ಕೇಸುಗಳನ್ನು, ಕ್ರಿಮಿನಲ್ ಹಿನ್ನೆಲೆಯ ಸಮಾಜ ದ್ರೋಹಿಗಳನ್ನು ಎಡಮುರಗಿ ಕಟ್ಟಿ ಬಿಸಾಡಿದ್ದಾರೆ. ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಎಂಬಂತೆ ಒಳ್ಳೆಯ ಜನರಿಗೆ ಒಳ್ಳೆಯವರಾಗಿ ತೋರಿ ಇಲಾಖೆಯ ಮಾನ ಹೆಚ್ಚಿಸಿದ್ದಾರೆ. ದಾವಣಗೆರೆಯ ಜಿಲ್ಲಾ ಎಸ್ಪಿಯಾಗಿದ್ದ ಇದೀಗ ಹಾವೇರಿಯಲ್ಲಿರುವ ಶ್ರೀ ಹನುಮಂತರಾಯಪ್ಪ ಅವರಿಗೆ ಅಚ್ಚು  ಮೆಚ್ಚಿನವರಾಗಿದ್ದರು.

ಸದಾ ಕ್ರಿಯಾಶೀಲ ಚಟುವಟಿಕೆ, ಇಲಾಖೆಯ ಹೊಣೆಗಾರಿಕೆಯನ್ನು ದಕ್ಷವಾಗಿ ನಿರ್ವಹಿಸುತ್ತಿರುವ ದೇವರಾಜ ಅವರಿಗೆ ನಾಳೆ ಸ್ವಾತಂತ್ರ್ಯೋತ್ಸವದ ದಿನ ಅಪರಾಧ ತನಿಖಾ ಶ್ರೇಷ್ಠ ಪದವಿ ನೀಡಿ ಗೌರವಿಸಲಾಗುತ್ತಿದೆ.

ಇದು ಕನ್ನಡಿಗರೆಲ್ಲ ಖುಷಿ ಪಡುವ, ಹೆಮ್ಮೆಯಿಂದ ನಮಗೆ ನಾವೇ ಹೇಳಿಕೊಳ್ಳುವ ಸಂದರ್ಭ. ಸೂಕ್ತ ವ್ಯಕ್ತಿಗೆ ಪ್ರಶಸ್ತಿ ನೀಡಿದ ಸರಕಾರಕ್ಕೆ, ಪ್ರಶಸ್ತಿ ಪಡೆದ ದೇವರಾಜ ಅವರಿಗೆ ಬಸವಮಾರ್ಗ ಅಭಿನಂದಿಸುತ್ತದೆ.

೦ ವಿಶ್ವಾರಾಧ್ಯ ಸತ್ಯಂಪೇಟೆ

One thought on “ಕೇಂದ್ರ ತನಿಖಾ ಶ್ರೇಷ್ಠ ಪ್ರಶಸ್ತಿ ಪಡೆದ ಸಿಪಿಐ ದೇವರಾಜ

  1. ಕಾಯಕವೇ ಕೈಲಾಸವೆಂದ ಅಣ್ಣ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಸರ್ವರು ತಮ್ಮ ದೈನಂದಿನ ಚಟುವಟಿಕೆಯಲ್ಲಿ ಅಳವಡಿಸಿಕೊಂಡರೆ, ಆ ಭಗವಂತ ಸಕಲ ಸೌಭಾಗ್ಯಗಳನ್ನು ಕರುಣಿಸುತ್ತಾರೆ.
    ಹಾಗೆಯೇ ಶ್ರೀಯುತ ದೇವರಾಜ ಅಣ್ಣಾನವರು ಕಾಯಕ ಸಿದ್ಧಾಂತದಲ್ಲಿ ತಮ್ಮನ್ನು ತೊಡಗಿಕೊಂಡಿದ್ದರ ಫಲವಾಗಿ ಪ್ರಶಸ್ತಿ ಲಭಿಸುತ್ತಿದೆ.
    ಅಪ್ಪ ಬಸವಣ್ಣನವರು ದೇವರಾಜ ಅಣ್ಣಾ ರವರಿಗೆ ಇನ್ನೂ ಉನ್ನತವಾದ ಪ್ರಶಸ್ತಿಗಳನ್ನು ಕರುಣಿಸಲಿ ಎಂದು ಬೇಡುವೆ

Leave a Reply

Your email address will not be published. Required fields are marked *

error: Content is protected !!