ಸತ್ಯಂಪೇಟೆಯವ ಮೇಲೆ ಕೇಸ್ ಹಿಂಪಡೆಯಲು ಮಾನ್ವಿಯಲ್ಲಿ ಮನವಿ

ಮಾನ್ವಿ : 30 : ಶರಣ ಸಾಹಿತಿ ಪತ್ರಕರ್ತ, ನಿಷ್ಠುರ ಅನುಭಾವಿ ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲೆ ಮಾಡಿದ ಸುಳ್ಳು ಮೊಕ್ಕದ್ದಮ್ಮೆ ಹಿಂಪಡೆಯಬೇಕೆಂದು ಒತ್ತಾಯಿಸಿ ತಾಲೂಕಾ ಬಸವಕೇಂದ್ರ ತಹಶೀಲ್ದಾರರ ಮೂಲಕ ಒತ್ತಾಯಿಸಿತು.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಶ್ರೀ ವಿಶ್ವೇಶ್ವರ ಸ್ವಾಮೀಜಿಯವವರ ಕುರಿತು ಸೈದ್ಧಾಂತಿಕ ವಿಷಯವನ್ನು ಪ್ರಸ್ತಾಪಿಸಿದ ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲೆ 505 ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿದ್ದು ಖಂಡನಾರ್ಹ. ಯಾವುದೆ ಸೈದ್ಧಾಂತಿಕ ಭಿನ್ನ ಅಭಿಪ್ರಾಯಗಳನ್ನು ಹೇಳುವ ಸ್ವಾತಂತ್ರ್ಯ ಪ್ರತಿಯೊಬ್ಬ ಪ್ರಜೆಗೂ ಇದೆ. ಇದನ್ನು ಸತ್ಯಂಪೇಟೆಯವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದಾರೆ. ಸದರಿ ಮಠಾಧೀಶರಿಗೆ ಯಾವುದೆ ರೀತಿಯ ಅವಹೇಳನ ಮಾಡುವ ದುರುದ್ಧೇಶವನ್ನು ಅವರು ಹೊಂದಿಲ್ಲದಿರುವುದು ಕಂಡು ಬರುತ್ತದೆ.

ಹಲವಾರು ಭಕ್ತರು ತಮ್ಮ ಗುರುಗಳಿಗೆ ಏಕ ವಚನ ಪದ ಪ್ರಯೋಗವಾಗಿದೆ ಎಂದಾಕ್ಷಣವೇ ಅವರು ಸಾಮಾಜಿಕ ಜಾಲ ತಾಣದಲ್ಲಿ ವಿಷಾದ ವ್ಯಕ್ತ ಪಡಿಸಿದ್ದಾರೆ. ಆದರೂ ಅವರ ಮೇಲೆ ಹಗೆ ಇಟ್ಟುಕೊಂಡು ಅವರನ್ನು ಅವಮಾನಿಸುವ, ತೇಜೋವಧೆಗೆ ಗುರಿಪಡಿಸುವ ಇಚ್ಚೆ ಇದ್ದಂತೆ ಕಾಣುತ್ತದೆ.

ಸ್ವಾಮೀಜಿಯವರ ಸಾವನ್ನು ಸಂಭ್ರಮಿಸುವ ವಿಕೃತಿ ವಿಶ್ವಾರಾಧ್ಯ ಸತ್ಯಂಪೇಟೆಯವರಿಗೆ ಇಲ್ಲವೆಂಬುದು ಅವರ ಬರಹಗಳೇ ಸಾಕ್ಷಿಯಾಗಿವೆ. ಆದ್ದರಿಂದ ಕೂಡಲೇ ಸತ್ಯಂಪೇಟೆಯವರ ಮೇಲೆ ಹಾಕಿರುವ ಕೇಸ್ ಹಿಂಪಡೆಯುವ ಮೂಲಕ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕು.

ಬರಹಗಾರ, ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕೆಂದು ಡಾ. ಬಸವಪ್ರಭು ಪಾಟೀಲ ಸರಕಾರವನ್ನು ಒತ್ತಾಯಿಸಿರು, ಶರಣಬಸವ ಮಾನ್ವಿ, ದೇವಿಂದ್ರದುರ್ಗದ, ನಾಗರಾಜ ಬಳಿಗಾರ, ತ್ರಿಂಬಕೇಶ ಮೇದಾ, ಕುಮಾರ ಸ್ವಾಮಿ ಮೇದಾ, ಮಲ್ಲಿಕಾರ್ಜುನಗೌಡ ಚಿಮ್ಮಲಾಪುರ, ಅಮರೇಶ ಗವಿಗಟ್ಟ, ಹ್ಯಾರಿಶ್ ಕೊಟ್ನೆಕಲ್ ಮುಂತಾದವರು ಇದ್ದರು.

0 reporter Manvi

Leave a Reply

Your email address will not be published. Required fields are marked *

error: Content is protected !!