ಮನೋದೌರ್ಬಲ್ಯವೇ ಅಜ್ಞಾನಕ್ಕೆ ಕಾರಣ

ನಮ್ಮ ಮನೋದೌರ್ಬಲ್ಯಗಳನ್ನು ತಮ್ಮ ಬಂಡವಾಳವಾಗಿ ಮಾಡಿಕೊಂಡಿರುವ ಪುರೋಹಿತ ಮುಲ್ಲಾ, ಜೋತಿಷ್ಯಗಾರ,ಗಿಳಿ ಶಾಸ್ತ್ರ ಹೇಳುವ ಇನ್ನು ಅನೇಕರು ನಮ್ಮನು ನಿರ್ವಿರ್ಯರನ್ನಾಗಿ ಮಾಡಿದ್ದಾರೆ.
ದಾರಿಯಲ್ಲಿ ಒಂದು ಕ್ಯಾರು, ನಿಂಬೆಹಣ್ಣು, ತೆಂಗಿನಕಾಯಿ, ಮೆಣಸಿನಕಾಯಿ ನಮ್ಮನು ಭಯಬೀತರನ್ನಾಗಿ ಮಾಡುತ್ತದೆ. ಯಾವನೋ ಒಬ್ಬ ದೇವರನ್ನು ತಲೆಯ ಮೇಲೆ ಹೊತ್ತು ಬೀದಿ, ಬೀದಿ ತಿರುಗುವ ವ್ಯಕ್ತಿಯು ಸಹ ಇಲ್ಲದ ಆಸೆಯ ಆಶೀರ್ವಾದ ಮಾಡುತ್ತಾನೆ. ಇನ್ನು ನವಿಲು ಗರಿ ಹಿಡಿದು ಬರುವ ಮುಲ್ಲಾ ನಿಂದ ಬುಡುಬುಡಿಕೆ ,ದೇವರನ್ನು ಹೊತ್ತು ಕುಣಿಯುವ ಜೋಗತಿ ,ಮಂದಿರ ಮಸೀದಿಯಲ್ಲಿ ಕುಳಿತು ತಾಯತಾ ಕಟ್ಟುವವರನೇಕರು ನಮ್ಮನ್ನು ಭಯಭೀತರನ್ನಾಗಿ ಮಾಡಿ ಸುಲಿಯುತ್ತಿದ್ದಾರೆ.

ಇನ್ನೂ ಓದಿದ ಮತ್ತು ಸಂಸ್ಕಾರ ಪಡೆದವರು ಶಾಸ್ತ್ರ, ಪಂಚಾಂಗ, ಜೋತಿಷ್ಯದ ರೂಪದಲ್ಲಿ ಬೆಕ್ಕು ನಾಯಿ ಮುಂತಾದ ಪ್ರಾಣಿಗಳ ಅಡ್ಡ ಬಂದರೆ ಅಪಶಕುನವೆಂತಲು ಸೂರ್ಯ,ಚಂದ್ರ,ನಕ್ಷತ್ರ ಗ್ರಹಗಳನ್ನು ತೋರಿಸುತ್ತಾ ನಮ್ಮನು ಭಯಭೀತರನ್ನಾಗಿ ಮಾಡುತ್ತಿದ್ದಾರೆ. ಈ ಭಯದಿಂದ ಹುಟ್ಟಿದ ದೇವರುಗಳು ನಮ್ಮಲ್ಲಿ ಭಯ ಇರುವವರೆಗೆ ಇರುತ್ತವೆ. ಭಯ ಹೋದರೆ ಭಯದ ಜೊತೆ ದೇವರುಗಳು ಕೂಡ ಹೋಗುತ್ತವೆ.

ಭಯವೆಂಬ ಬಂಡವಾಳ ಬಳಸಿಕೊಂಡು ಶತ ಶಶತಮಾನಗಳಿಂದ ನಮ್ಮನ್ನು ಸುಲಿಯುತ್ತಿದ್ದಾರೆ. ಇವೆಲ್ಲಕ್ಕೂ ಕಾರಣ ನಮ್ಮಲ್ಲಿ ಇರುವ ಅಂದ ಶ್ರದ್ಧೆ, ಮೂಢನಂಬಿಕೆ, ಅಜ್ಞಾನ.ನಮ್ಮ ಬುದ್ದಿ, ವಿದ್ಯಾ ಮಟ್ಟ ಸುಧಾರಿಸದೆ ಇರುವುದು. ಇದಕ್ಕೆ ಬಸವಣ್ಣನವರ ತಮ್ಮ ವಚನ ದಲ್ಲಿ ಹೀಗೆ ಹೇಳುತ್ತಾರೆ.

ವೇದಕ್ಕೆ ಒರೆಯ ಕಟ್ಟುವೆ,ಶಾಸ್ತ್ರಕ್ಕೆನಿಗಳವನಿಕ್ಕುವೆ,ತರ್ಕದ ಬೆನ್ನ ಬಾರನೆತ್ತುವ,ಆಗಮದ ಮೂಗ ಕೊಯಿವೆ,ನೋಡಯ್ಯಾ.ಮಹದಾನಿ ಕೂಡಲಸಂಗಮದೇವಾ,ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.”

ಒಂದು ಗ್ರಾಮದಲ್ಲಿ ಸಂಭ್ರ‍್ರಮದಿಂದ ಮದುವೆಯ ಕಾರ್ಯ ನಡೆದಿರಲು ಆ ಮನೆಯಲ್ಲಿ ಸಾಕಿದ ಬೆಕ್ಕೊಂದು ಮನೆಯಲ್ಲಿ ಅತಿಂದ ಇತ್ತ ಓಡಾಡುತ್ತಿರಲು ಒಂದು ವೇಳೆ ಬೆಕ್ಕು ಓಡಾಟದ ಮಧ್ಯ ಕಾಲಿಗೆ ಸಿಕ್ಕರೆ ನಾನಾದುರು ಬೀಳಬಹುದು ಅಥವಾ ಬೆಕ್ಕಾದರು ಸಾಯಬಹುದೆಂಬ ಮುಂದಾಲೋಚನೆಯಿಂದಾಗಿ ಮನೆಯ ಯಜಮಾನ ಅದನ್ನು ಹಿಡಿದು ನಡುಮನೆಯ ಕಂಬಕ್ಕೆ ಕಟ್ಟುತ್ತಾನೆ. ಅದನ್ನು ಗಮನಿಸಿದ ಮದುಮಗ ತದೇಕ ಚಿತ್ತದಿಂದ ಅದನ್ನೆ ನೋಡುತ್ತಿರುತ್ತಾನೆ. ನಂತರ ಮದುವೆಯ ಕಾರ್ಯವೇನೊ ಯಶಸ್ವಿಯಾಗಿ ಮುಗಿಯುತ್ತೆ. ಕೆಲವು ವರ್ಷಗಳನಂತರ ತನ್ನ ಮಕ್ಕಳ ಮದುವೆಯನ್ನು ನಿಶ್ಚಯಿಸುತ್ತಾನೆ. ಮದುಗೆ ಬೇಕಾದ ಎಲ್ಲಾ ತಯ್ಯಾರಿಗಳನ್ನು ಮಾಡಿಕೊಂಡಿರುತ್ತಾನೆ. ಇನ್ನೇನು ನಾಳೆ ಮದುವೆ ಮಾಡಬೇಕು ,ಅನ್ನುವಷ್ಟರಲ್ಲಿ ತನ್ನ ಮದುವೆಯ ದಿನದಂದು ನಡೆದ ಘಟನೆ ನೆನಪಿಗೆ ಬರುತ್ತದೆ. ಆಗ ತನ್ನ ಮದುವೆಯ ನೇಮದಂತೆ ತಮ್ಮ ತಂದೆ ಮನೆಯ ನಡು ಕಂಬಕ್ಕೆ ಬೆಕ್ಕನ್ನು ಕಟ್ಟಿ ನನ್ನ ಮದುವೆ ಮಾಡಿದರು. ಆದರೆ ಇಂದು ನನ್ನ ಮಕ್ಕಳ ಮದುವೆ. ನಾನು ಕಂಬಕ್ಕೆ ಬೆಕ್ಕನ್ನು ಕಟ್ಟಿಲವಲ್ಲ ! ಎಂಬ ಗೊಂದಲಕ್ಕೆ ಒಳಗಾಗಿ ಏನು ಮಾಡುವುದು ?! ಎಂದು ತೋಚದೆ ಆತಂಕಕ್ಕೆ ಒಳಗಾಗುತ್ತಾನೆ.

ನಂತರ ತನ್ನ ಮನೆಯ ಸುತ್ತ ಮುತ್ತ ಬೆಕ್ಕನ್ನು ಹುಡುಕುತ್ತಾನೆ. ಎಲ್ಲೂ ಅದು ಸಿಗುವುದಿಲ್ಲ. ಮತ್ತೆ ನೆರೆ ಮನೆಯವರನ್ನು ವಿಚಾರಿಸುತ್ತಾನೆ. ಅವರ ಮನೆಯಲ್ಲು ಬೆಕ್ಕು ಸಿಗದ್ದಿದ್ದಾಗ ಮನೆಯ ಆಳುಗಳನ್ನು ಕರೆಸಿ ಎಲ್ಲಿಯಾದರು ಬೆಕ್ಕು ಸಿಕ್ಕರೆ ಬೇಗನೆ ತಗೆದುಕೊಂಡು ಬನ್ನಿ ಎಂದು ಆದೇಶ ನೀಡುತ್ತಾನೆ. ಆಳುಗಳು ಬೆಕ್ಕನು ಹುಡುಕುತ್ತಾ , ಅದನ್ನು ತಗೆದುಕೊಂಡು ಬಂದವರೆ ಮನೆಯ ಯಜಮಾನನಿಗೆ ಕೊಡುತ್ತಾರೆ.

ಆಗ ಮನೆಯ ಯಜಮಾನನ ಮನಸ್ಸಿಗೆ ನೆಮ್ಮದಿಯನಿಸಿ ಬಿಡುತ್ತದೆ. ಮಾರನೇ ದಿನ ಮದುವೆಯ ಸಿದ್ದತೆಗಳ ಪೂರ್ವದಲ್ಲಿ ಮನೆಯ ನಡು ಕಂಬಕ್ಕೆ ಬೆಕ್ಕನ್ನು ಕಟ್ಟಿದ ನಂತರ ಮುಂದಿನ ಕಾರ್ಯಗಳನ್ನು ಪ್ರಾರಂಬಿಸುತ್ತಾನೆ. ಮದುವೆ ಅತ್ಯಂತ ಸಂಭ್ರಮದಿಂದ ನೆರವೇರುತ್ತದೆ. ಆಗ ಮನೆಯ ಯಜಮಾನ ನೆಮ್ಮದಿಯ ನಿಟ್ಟುಸಿರು ಬಿಡುತ್ತಾನೆ. ಒಂದು ವೇಳೆ ಬೆಕ್ಕು ಸಿಗದೆ ಇದ್ದರೆ ಏನಾಗುತ್ತಿತೊ ? ಆದರೆ ಬೆಕ್ಕು ಸಿಕ್ಕ ಪುಣ್ಯದಿಂದ ಏನು ಅನಾವುತಗಳ ನಡೆಯಲ್ಲಿಲ್ಲ ಎಂದು ಸಂತೋಷಗೊಂಡು ಬೆಕ್ಕಿಗೆ ತಿನ್ನಲು ಹಾಕಿ ನಂತರ ಆಳುಗಳನ್ನು ಕರೆದು ಇದನ್ನು ಎಲ್ಲಿಂದ ತಂದಿರಿ ಅಲ್ಲಿಗೆ ಬಿಟ್ಟು ಬನ್ನಿ ಎಂದು ಹೇಳುತ್ತಾನೆ.

ಇಲ್ಲಿ ಗಮನಿಸ ಬೇಕಾದ ವಿಷಯವೆಂದರೆ ತಮ್ಮ ತಂದೆ ಯಾವ ಉದ್ದೇಶದಿಂದ ಬೆಕ್ಕನ್ನು ಕಂಬಕ್ಕೆ ಕಟ್ಟಿ ಮದುವೆಯನ್ನು ನೆರವೇರಿಸಿದ ಎಂಬುವುದನ್ನು ಅರಿಯದೆ ಅದೊಂದು ಸಂಪ್ರದಾಯವೆ ಇರಬಹುದೆಂದು ಕೊಂಡಿದ್ದ.ಮಗ ಅದನ್ನು ಚಾಚುತಪ್ಪದೆ ನೆರವೇರಿಸಿದ. ನಮ್ಮ ಅಸ್ಥಿರ ಮನಸ್ಸಿನಿಂದ ಮತ್ತು ದೃಢಸಂಕಲ್ಪವಿಲ್ಲದೆ ಮಾಡುವ ಕೆಲಸಗಳು ಯಶಸ್ವಿಯಾಗದೆ ಅನಾಹುತಗಳಿಗೆ, ಅವನತಿಗೆ ಕಾರಣಗಳಾಗುತ್ತವೇಯೆ ಹೊರತು ಸಂಪ್ರದಾಯದ ಪದ್ಧತಿಗಳನ್ನು ಅನುಸರಿಸದೇ ಇದ್ದದಕಾಗಿ ಅಥವಾ ಯಾವುದೇ ಜಾತಕ ಫಲದಿಂದ ಅಥವಾ ಗ್ರಹಗಳ ದೋಷದಿಂದಲ್ಲ.

ನಮ್ಮ ದೇಶ ಎಷ್ಟೇ ಪ್ರಗತಿ ಹೊಂದಿದರು ಕೂಡ ನಮ್ಮಲ್ಲಿ ಇರುವ ಅಂಧಶ್ರದ್ಧೆ, ಮೂಢನಂಬಿಕೆ, ಅಜ್ಞಾನ, ಇವಕ್ಕೆಲ್ಲ ಕಾರಣ ನಮ್ಮ ವಿದ್ಯಾ ಮಟ್ಟ ಸುಧಾರಿಸದೆ ಇರುವುದು.

೦ ಸಾಯಿಕುಮಾರ ಇಜೇರಿ

One thought on “ಮನೋದೌರ್ಬಲ್ಯವೇ ಅಜ್ಞಾನಕ್ಕೆ ಕಾರಣ

Leave a Reply

Your email address will not be published. Required fields are marked *

error: Content is protected !!