ಸೆರಗೊಡ್ಡಿ ಬೇಡಿದ ಬಸವಣ್ಣನವರು


ಬಸವಣ್ಣನವರ ಜೀವನದ ಪ್ರಸಂಗಗಳು – 1

ವಿಶ್ವದ ವಿಭೂತಿ ಪುರುಷರಲ್ಲಿ ಅಗ್ರಗಣ್ಯರಾದ ಬಸವಣ್ಣನವರು ಮಾಡಿಕೊಂಡಷ್ಟು ಆತ್ಮಾವಲೋಕವನ್ನು ಇನ್ನಾರು ಮಾಡಿಕೊಂಡಿಲ್ಲವೆಂದು ಹೇಳಿದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ. ತಾವು ಕಂಡುಕೊಂಡ ಅರಿವಿನ ಮೂಲಕ ತಮ್ಮ ಒಳಗಿನ ತಮವನ್ನು ಕಳೆಯಬೇಕೆಂದು ಪ್ರಯತ್ನಿಸಿದ್ದಷ್ಟು ಮತ್ತೆ ಮತ್ತೆ ಕಾಡುವ ಸಣ್ಣತನ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿತ್ತು.

ಉಚ್ಚಕುಲವೆಂದು ಕರೆಯುತ್ತಿದ್ದ ಬ್ರಾಹ್ಮಣರಾಗಿ ಬಸವಣ್ಣನವರು ಹುಟ್ಟಿದವರು. ದೊಡ್ಡವರಾಗುತ್ತಲೆ ಕಲ್ಯಾಣದಲ್ಲಿ ಕರುಣಿಕ , ನಂತರ ಆ ದೇಶದ ಪ್ರಧಾನಿ ಪಟ್ಟ. ತರುವಾಯ ಅವರ ಸುತ್ತ ಮುತ್ತ ಜೇನು ನೊಣಗಳಂತೆ ಇದ್ದ ಶರಣ ಸಮೂಹ. ಮನುಷ್ಯನಿಗೆ ಈ ಮೇಲಿನವುಗಳಲ್ಲಿ ಯಾವುದಾದರೂ ಒಂದಿದ್ದರೂ ಸಾಕು. ತಲೆ ಬುಜದ ಮೇಲೆ ನಿಲ್ಲುವುದೆ ಇಲ್ಲ. ಆಕಾಶದಲ್ಲಿ ಓಲಾಡಿ, ವಾಸ್ತವವನ್ನು ಮರೆತು ಬಿಡುತ್ತದೆ.

ಬಸವಣ್ಣನವರಿಗೂ ಆಗಾಗ ಇಂಥ ಮೇಲಿರಿಮೆಯ ಭಾವ ಕಾಡಿರಬೇಕು. ಏಕೆಂದರೆ ಅವರೂ ನಮ್ಮ ನಿಮ್ಮಂತೆ ಇರುವ ಮನುಷ್ಯರು ತಾನೆ ? ಹಾಗಾಗಿ ಆ ಸಂದರ್ಭದಲ್ಲಿ ತಮ್ಮ ಮನಸ್ಸಿನಲ್ಲಿಯ ಹೊಯ್ದಾಟವನ್ನು ಪರಿಣಾಮಕಾರಿ ಶಬ್ಧಗಳ ಮೂಲಕ ಇಲ್ಲಿ ವಚನವಾಗಿಸಿದರು.

ಅಂದಣನೇರಿದ ಸೊಣಗನಂತೆ
ಕಂಡಡೆ ಬಿಡದು ಮುನ್ನಿನ ಸ್ವಭಾವವನು.
ಸುಡು , ಸುಡು ಮನವಿದು ವಿಷಯಕ್ಕೆ ಹರಿವುದು
ಮೃಡ ನಿಮ್ಮನನುದಿನ ನೆನೆಯಲೀಯದು
ಎನ್ನೊಡೆಯ ಕೂಡಲಸಂಗಮದೇವಾ
ನಿಮ್ಮ ಚರಣವ ನೆನೆವಂತೆ ಕರುಣಿಸು
ಸೆರಗೊಡ್ಡಿ ಬೇಡುವೆ ನಿಮ್ಮ ಧರ್ಮ

ಪಲ್ಲಕ್ಕಿಯಲ್ಲಿ ಕುಳಿತ ನಾಯಿಯಂತೆ, ಮನಸ್ಸು ಒಂದೆ ಸಮ ಚಂಚಲವಾಗಿದೆ. ತಾನು ಕುಳಿತದ್ದು ಪಲ್ಲಕ್ಕಿ ಎಂದು ಮರೆತು ತನ್ನ ಹಿಂದಿನ ಸ್ವಭಾವಕ್ಕೆ ಒಂದು ಓಡುತ್ತದೆ. ತನಗೆ ಸಿಕ್ಕಿದ ಗೌರವ, ಸ್ಥಾನ ಮಾನಗಳನ್ನು ಲೆಕ್ಕಿಸದೆ ಕಸದ ಕಡೆಗೆ ಹರಿಯುತ್ತದೆ. ಸತ್ಯದ ಕಡೆಗೆ ಮನ ನೆನೆಯದಂತೆ ಮಾಡುತ್ತದೆ.

ನಾನು ತ್ರಾಹಿ ತ್ರಾಹಿಯಾಗಿ ಸೆರಗೊಡ್ಡಿ ಬೇಡಿಕೊಳ್ಳುವ ನಿಮ್ಮ ಅರಿವಿನ ಪಾದವನ್ನಲ್ಲದೆ ಅನ್ಯ ವಿಷಯಕ್ಕೆ ನನ್ನ ಮನಸ್ಸು ಓಲಾಡದಂತೆ ಇರಿಸಿ. ನಾನು ವಿನಮ್ರವಾಗಿ ಸೆರಗೊಡ್ಡಿ ಬೇಡುವೆ ಎಂದು ತನ್ನೊಳಗೆ ತಾನೇ ಬಸವಣ್ಣನವರು ಹೇಳಿಕೊಳ್ಳುತ್ತಾರೆ.

0 ವಿಶ್ವಾರಾಧ್ಯ ಸತ್ಯಂಪೇಟೆ

2 thoughts on “ಸೆರಗೊಡ್ಡಿ ಬೇಡಿದ ಬಸವಣ್ಣನವರು

  1. Uccha neecha emba bhedava hodedodisi,samanateya tatvadaele ninta basava tatva manushya manavs gunava toredu sharana gunava hondi satyateya kadege saguva vachana adbuta prastuta dinagalige atyavasyaka nim vicharagalu sir

  2. Basavanna said whatever comes to his mind without any hesitation….

    Pray God that….. Atta litt hogadante helavan madayya tande….

Leave a Reply

Your email address will not be published. Required fields are marked *

error: Content is protected !!