ಸಂವಿಧಾನದ ರಕ್ಷಣೆಗಾಗಿ ಶಹಾಪುರದಲ್ಲಿ ಜಿಲ್ಲಾ ಮಟ್ಟದ ಬಹಿರಂಗ ಸಮಾವೇಶ

ಶಹಾಪುರ : 27 :

ಸಂವಿಧಾನ ರಕ್ಷಣಾ ಆಂದೋಲನದ ಅಂಗವಾಗಿ ದಿನಾಂಕ. 7 ಮಾರ್ಚ 2020 ರಂದು ಪಟ್ಟಣದ ಸಿ.ಪಿ.ಎಸ್. ಶಾಲಾ ಮೈದಾನದಲ್ಲಿ ಬೃಹತ್ ಬಹಿರಂಗ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘಟನೆಯ ಮುಖ್ಯಸ್ಥರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಸಂವಿಧಾನದ ಅನುಚ್ಛೇದ 14 ರ ಪ್ರಕಾರ ಸಿ.ಎ.ಎ. ಎನ್.ಆರ್.ಸಿ. ಮತ್ತು ಎನ್.ಪಿ.ಆರ್.ಗಳಂಥ ಕರಾಳ ಶಾಸನವನ್ನು ಜನರ ಮೇಲೆ ಹೇರಿ ಮತ್ತೆ ಇ.ವಿ.ಎಂ. ಮೂಲಕ ಮೋಸ ಮಾಡಿ ಅಧಿಕಾರದಲ್ಲಿ ಶಾಶ್ವತವಾಗಿ ತಾವೇ ಮುಂದುವರೆಯಬೇಕೆಂಬ ತಂತ್ರಗಳಿಂದ ದೇಶದ ಜನಗಳನ್ನು ಬಿ.ಜೆ.ಪಿ. ಪಕ್ಷ ಮರೆ ಮಾಚುತ್ತಿದೆ ಎಂದು ಆರೋಪಿಸಿದರು.

ದೇಶದ ಎಲ್ಲೆಡೆ ಸಾರ್ವಜನಿಕರು ಕೇಂದ್ರ ಸರಕಾರ ರೂಪಿಸಿರುವ ಕರಾಳ ಮಸೂದೆಯ ವಿರುದ್ಧ ಚಳುವಳಿಗಳನ್ನು ರೂಪಿಸಿ ಹೋರಾಡುತ್ತಿದ್ದರೆ ಅವರನ್ನು ಹಣಿಯಲು ಸರಕಾರಿ ಯಂತ್ರವನ್ನು ಬಳಸಿ ಬಾಯಿ ಮುಚ್ಚಿಸುತ್ತಿರುವುದು ನಿಜಕ್ಕೂ ಖಂಡನೀಯ ಸಂಗತಿ ಎಂದವರು ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರ್ ರೂಪಿಸಿದ ಭಾರತದ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಹಲವು ಸುಪ್ರಿಂಕೋರ್ಟ ಹಾಗೂ ಹೈಕೋರ್ಟ ನ್ಯಾಯಾಧೀಶರು ಮಾಡುತ್ತಿದ್ದರೆ ಅವರನ್ನು ಬೇರೆಡೆಗೆ ವಗರ್ಾಯಿಸಿ ತಮ್ಮ ಅಧಿಕಾರವನ್ನು ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದವರು ದೂರಿದರು.

ಬಹಿರಂಗ ಸಮಾವೇಶದಲ್ಲಿ ಡಾ.ಅಂಬೇಡ್ಕರ ಮೊಮ್ಮಗ ರಾಜರತ್ನ, ಜ್ಞಾನಪ್ರಕಾಶ ಸ್ವಾಮಿ ಭಾಗಿ

ಕೆಲವು ಜನ ನ್ಯಾಯಾಧೀಶರು ತಮ್ಮ ಘನತೆ ಗೌರವವನ್ನು ಗಾಳಿಗೆ ತೂರಿ ಸಂವಿಧಾನದ ಆಶಯಕ್ಕೆ ಧಕ್ಕೆ ತರುತ್ತಿದ್ದಾರೆ. ಮನುವಾದಿಗಳ ಅಟ್ಟಹಾಸ ಮೀತಿ ಮೀರಿದರೆ ಮತ್ತೆ ಮನುಸ್ಮೃತಿಯೆ ಈ ದೇಶವನ್ನು ಆಳುವ ಅಪಾಯವಿದೆ ಎಂದವರು ಪತ್ರಕರ್ತರಿಗೆ ಮನದಟ್ಟು ಮಾಡಿ, ಜನ ಸಾಮಾನ್ಯರಿಗೆ ಈ ಬಗೆಗೆ ಅರಿವು ನೀಡಲು ದಿ.7-3-2020 ರಂದು ಜಿಲ್ಲಾ ಮಟ್ಟದ ಬಹಿರಂಗ ಸಮಾವೇಶ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಈ ಬಹಿರಂಗ ಸಮಾವೇಶದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ರಾಜರತ್ನ ಅಂಬೇಡ್ಕರ್, ಜ್ಞಾನ ಪ್ರಕಾಶ ಸ್ವಾಮೀಜಿ, ನಾಡಿನ ಹಿರಿಯ ಚಿಂತಕರು, ಹೋರಾಟಗಾರರು, ಬುದ್ಧಿ ಜೀವಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಶಿವಕುಮಾರ ತಳವಾರ, ರಾಯಣ್ಣ ಎಸ್.ಸಾಲಿಮನಿ, ಭೀಮರಾಯ ಹೊಸ್ಮನಿ, ಶಿವಪುತ್ರ ಜವಳಿ,ಕಾಶಿನಾಥ ನಾಟೇಕಾರ, ಬಂದೆಪ್ಪ ಬಾಚವಾರ, ಭಾಗೇಶ ಹಳಿಸಗರ, ದೇವಿಂದ್ರಪ್ಪ ಗೌಡರೂರು,ಮಲ್ಲಿನಾಥ ಬಡಿಗೇರ, ಗುರು ನಾಟೇಕಾರ, ನರೇಶ ಅನ್ವರ್, ವಿವೇಕ ಕಂಬಾರ ಮೊದಲಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!