ನಾನು ಸಾಯುವವರೆಗೂ ಅಪ್ಪ ಜೀವಂತ !

T. Shashidhar – ಟಿ.ಶಶಿಧರ್ ಸರ್ ಪುತ್ರನ ಬರಹ.


ನನ್ನಪ್ಪ ಇನ್ನೂ ನೆನಪು

  • ಎಸ್.ದಿನೇಶ ಕುಮಾರ್

ಮಹಾನಾಯಕ ಧಾರಾವಾಹಿಯ ಬ್ಯಾನರ್ ಉದ್ಘಾಟನೆ ಮಾಡಲು ಹೋದಾಗ ಒಗ್ಗದ ಮಿನರಲ್ ನೀರು ಕುಡಿದು ಕೆಮ್ಮು, ದಮ್ಮು, ನೆಗಡಿಯಿಂದ ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಕೆಲ ಮನೆ ಮದ್ದುಗಳಿಂದ ಹುಷಾರು ಆಗಲು ಯತ್ನಿಸಿದನು ಆದರೆ ಕೊಂಚವೂ ಬದಲಾವಣೆಯನ್ನು ಕಾಣಲಿಲ್ಲ. ಒಂದು ದಿನ ನಾನು ನೀನು ಮತ್ತು ಬಸವರಾಜ್ ಅಪ್ಪ (ಚಿಕ್ಕಪ್ಪ) ವೈಚಾರಿಕ ಪುಸ್ತಕಾಲಯ ದಿಂದ ಬರುವಾಗ ನಮ್ಮೂರ ಮೆಡಿಕಲ್ ನ ಬಳಿ ಗಾಡಿ ನಿಲ್ಲಿಸು ಬಸಪ್ಪ ಎಂದು ಚಿಕ್ಕಪ್ಪನಿಗೆ ಹೇಳಿ ಗಾಡಿ ನಿಲ್ಲಿಸಿದ ಮೇಲೆ ಮೆಡಿಕಲ್ ಗೆ ಹೋಗಿ Mentho Plus ತಂದೊಡನೆ ನನಗೆ ಕಕ್ಕೇರಿ ಡಾಕ್ಟರ್ (Dr Maheboob badeghar)ಆಸ್ಪತ್ರೆಯಲ್ಲಿ ಇದ್ದಾರೆ ಇಲ್ಲ ನೋಡು ಅಂತ ಹೇಳಿದನು ನಾವು ಗಾಡಿಯಲ್ಲಿ ಬಸ್ ಸ್ಟ್ಯಾಂಡ್ ಹತ್ತಿರ ಬರುವಾಗ ಆ ವೈದ್ಯರು ನಮಗೆ ಎದುರಾದರು ಆದರೆ ನೀನು ನೋಡಿರಲಿಲ್ಲ ಎಂದೆ ತಕ್ಷಣ ಆ ವೈದ್ಯರಿಗೆ ಕರೆ ಮಾಡಿ ಬರುವಂತೆ ಹೇಳಿದನು ಅದಕ್ಕೆ ಅವರು ಬಂದರು ಅಪ್ಪ ಮೇಲ್ಕಾಣಿಸಿದ ಸಮಸ್ಯೆಗಳನ್ನು ತಿಳಿಸಿದನು ಸ್ವಲ್ಪ ಮಾತ್ರೆ ಬರೆದರು ನಾನೋಗಿ ಮಾತ್ರೆಗಳನ್ನು ತೆಗೆದುಕೊಂಡು ಬಂದೆ ಮಾತ್ರೆಗಳನ್ನು ಯಾವಾಗ್ಯವಾಗ ನುಂಗಬೇಕೆಂದು ಡಾಕ್ಟರ್ ತಿಳಿಸಿದರು. ಮನೆಗೆ ಬಂದು ಊಟ ಮಾಡಿ ಉಗಿ ತೆಗೆದುಕೊಂಡು ಮಲಗಿದ ರಾತ್ರಿ ಒಮ್ಮಿದೊಮ್ಮಲೆ ನಡುರಾತ್ರಿ ಎದ್ದು ನನಗೆ ಕಾಲಿಲ್ಲ ಕೈಯಿಲ್ಲ ಎಂದು ಅಳಲು ತೊಡಗಿದನು ಅಂತ (ಆ ಸಮಯದಲ್ಲಿ ನಾನು ಮಲಗಿದ್ದೆ) ಬೆಳ್ಳಿಗೆ ಎದ್ದಾಗ ಅಕ್ಕಂದಿರು ಹೇಳಿದರು. ಮುಂಜಾನೆಯು ಸುಸ್ತಿ ಅಂತ ಮಲಗಿದನು ಪುನಃ ಮೇಲೆ ಉಲ್ಲೇಖಿಸಿದ ವೈದ್ಯರನ್ನು ಕರೆಸಿದೆವು ಅವರು ಬಂದು ಕಮ್ಮು ಜಾಸ್ತಿ ಅಂತ ಕಫ ಹಿಡಿದರು (ಶಾಲೆಗೆ ಸಮಯವಾಗಿದ್ದರಿಂದ ನಾನು ಶಾಲೆಗೆ ಹೋದೆ,ಶಾಲೆ ಮುಗಿಸಿಕೊಂಡು ಬಂದೆ) ಅಷ್ಟೋತ್ತಿಗಾಗಲೆ ಶಹಾಪೂರದ ಪ್ರಸಿದ್ಧ ಅಚ್ಚಪ್ಪಗೌಡ ಸುಬೇದಾರ್ ಸಗರ ಸ್ಮಾರಕ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ Covid19 ಪರೀಕ್ಷೆಯಲ್ಲಿ ಕೊರೊನಾ+ve ಎಂದು ದೃಡಪಟ್ಟಿತ್ತು.ಯಾವ ಆಸ್ಪತ್ರೆಗೆ ಹೋಗುತ್ತೀರಿ ಅಂದರೆ ಯಾದಗಿರಿ ಜಿಲ್ಲಾ ಕೋವಿಡ್ 19 ಆಸ್ಪತ್ರೆಗೆ ದಾಖಲಿಸಲಾದರು ಅಲ್ಲಿ ಆ ದಿನ ರಾತ್ರಿ oxygen ಕೊರತೆಯಿದೆ ಕಲ್ಬುರ್ಗಿಯ ESIC ಆಸ್ಪತ್ರೆಗೆ ಹೋಗಿ ದಾಖಲಾಗಿ ಎಂದರು ಆ ದಿನ ರಾತ್ರಿಯೇ ಹೋದರು ಚಿಕಿತ್ಸೆ ಪ್ರಾರಂಭಿಸಿದರು ಅಲ್ಲಿ ಯಾರ ಪರಿಚಯವು ಇಲ್ಲ ನಮ್ಮ ಕಣ್ಣೆದುರಿಗೆ ಕಂಡದ್ದು ನಮ್ಮ ವಂಶದ ಶಕ್ತಿಗಳಾದ DR HC Mahadevappa ಮತ್ತು Siddaramaiah Dinesh Amin Priyank Kharge ಇವರನ್ನು ಸಂಪರ್ಕಿಸಿ ವೈದ್ಯ ರಿಗೆ ಅಪ್ಪನ ಮೇಲೆ ಕಾಳಜಿ ತೋರುವಂತೆ ಸಹಾಯ ಹಸ್ತ ಚಾಚಿದೆವು ಅವರು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳನ್ನು, ವೈದ್ಯರನ್ನು ಕರೆ ಮಾಡಿ ಸೂಕ್ತ ಚಿಕಿತ್ಸೆ ನೀಡಿ ಎಂದು ಹೇಳುತ್ತಾ ಅಪ್ಪನಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.ಅಪ್ಪ ಧೈರ್ಯ ಮಾಡಿ ಕೊರೊನಾದಿಂದ ಗುಣಮುಖರಾದರು, ಈಕಡೆ ಕೆಮ್ಮು ದಮ್ಮು ಮತ್ತು ಉಸಿರಾಟ ಸಮಸ್ಯೆಗಳು ತಮ್ಮ ರೌದ್ರ ನರ್ತನವನ್ನು ಶುರುಮಾಡಿದವು. ಆರೋಗ್ಯ ತೀರಾ ಹದಗೆಟ್ಟಿತ್ತು, ಆದರೂ ವೈದ್ಯರು ಎದೆಗುಂದದೆ ವಿವಿಧ ತರಹದ oxygen ಮಾಸ್ಕ್ ಗಳನ್ನು ಹಾಕಿ ತಮ್ಮ ಸತತವಾದ ಪ್ರಯತ್ನ ಮಾಡಿದರು ಕೊನೆಗೆ ಜೀವ ಉಳಿಸಲು ಕೊನೆಯ ಹಂತವಾದ ಉಪಕರಣವೆಂದರೆ ವೆಂಟಿಲೇಟರ್ ಈ ಉಪಕರಣವು ಬಳಸಿದರು. ಆದರೆ ಶ್ವಾಸಕೋಶ ಸಂರ್ಪೂಣವಾಗಿ ಹಾಳಾಗಿತ್ತು . ಚಿಕಿತ್ಸೆ ಫಲಿಸದೆ ಅಪ್ಪನ ದೇಹ ಸತ್ತಿತ್ತು. ಆದರೆ ನನ್ನಪ್ಪನ ಕೋಟ್ಸ್ ಗಳು,ವಿಶಿಷ್ಟಗಳಲ್ಲಿ ವಿಶಿಷ್ಟವಾದ ಚಿಂತನೆಗಳು, ವಿಚಾರಗಳು, ಧೈರ್ಯತನ, ಸೈದ್ಧಾಂತಿಕ ಗಟ್ಟಿತನ,ಲೇಖನಗಳು ನಾನು ಸಾಯುವವರೆಗೂ ನನ್ನಲ್ಲಿ ಜೀವಂತವಾಗಿರುತ್ತವೆ…

ನನ್ನಪ್ಪ ತಾನೂ ಜೀವಂತವಿರುವಾಗ ಡಾ ಹೆಚ್ ಸಿ ಮಹಾದೇವಪ್ಪ ರವರನ್ನು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿ ನೋಡಬೇಕೆನ್ನುವುದೇ ಬಹುದೊಡ್ಡ ಆಸೆಯಾಗಿತ್ತು.

ಹಾಗೆ ಸಿದ್ದರಾಮಯ್ಯ ಮತ್ತು ಮಹಾದೇವಪ್ಪರವರ ಮುಂದೆ ಹೋಗಿ ಬಿಳಿ ಹಾಳೆಯಿಟ್ಟರು ಕಣ್ಣು ಮುಚ್ಚಿ ಸಹಿ ಮಾಡುತ್ತಿದ್ದರು ಆದರೂ ನನ್ನಪ್ಪ ಸ್ವಂತಕ್ಕಾಗಿ ಒಂದು ರೂಪಾಯಿ ಕೇಳಿದವನಲ್ಲ.

Love U Appa I will maintain your qualities which u like and accept

Leave a Reply

Your email address will not be published. Required fields are marked *

error: Content is protected !!