ಹೆಣ್ಣು ಶೈವಾಗಮ ಮತ್ತು ಶರಣರು

೦ ಶಿವಣ್ಣ ಇಜೇರಿ

ಮಹಿಳೆಯರ ಬಗ್ಗೆ ಅನಾದಿ ಕಾಲ ದಿಂದಲು ನಮ್ಮ ಸಮಾಜ ಸಮಾನತೆಯ ದೃಷ್ಟಿಯಿಂದ ನೊಡಿಲ್ಲ. ಎಲ್ಲಿ ಮಹಿಳೆಯರನ್ನು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ ಎಂದು ಹೇಳಿದವರೆ ಹೆಣ್ಣು ನಿತ್ಯ ನಾರಕಿ, ಸಮಾನತೆಗೆ ಅರ್ಹಳಲ್ಲ.ಆಕೆ ಶೂದ್ರಳು ,ಆಕೆ ಸೇವಕಿಯಂತೆ ಸೇವೆ ಮಾಡಲು ಅರ್ಹಳು ಎಂದು ಮನು ಮುನಿಗಳೆಲ್ಲ ಹೇಳಿದ್ದಾರೆ.ಇದಕ್ಕೆ ಪೂರಕವೆಂಬಂತೆ ಇದೆ ತಿಂಗಳ ೧೬-೭-೨೦೨೦ರ ವಿಜಯವಾಣಿ ಪತ್ರಿಕೆಯ ಪುಟ ೪ ರಲ್ಲಿ ಅಮೃತಬಿಂದು ಎನ್ನುವ ಸುಭಾಶಿತದಲ್ಲಿ ಶ್ರೀಶೈವಾಗಮದ ಒಂದು ಮಾತನ್ನು ಬರೆದಿದ್ದಾರೆ.

ಇಚ್ಛೆ ಇಲ್ಲದಿರುವ ಬ್ರಾಹ್ಮಣ ಮಹಿಳೆಯ ಸಮಾಗಮ ಮಾಡಿದರೆ ಅದರ ದೋಷ ಪರಿಹಾರಕ್ಕಾಗಿ ಕೃಚ್ಛಚಾಂದರಾಯಣ ವೃತವನ್ನು ಆಚರಿಸಬೇಕು.
ಒಂದು ವೇಳೆ ಆ ಮಹಿಳೆಯು ಅದಕ್ಕೆ ಸಮ್ಮತಿ ಹೊಂದಿದವಳಾಗಿದ್ದಲ್ಲಿ ಅದರ ಅರ್ಧಪ್ರಾಯಶ್ಚಿತ್ತ ಆಚರಿಸಬೇಕು. ಒಂದು ಬಾರಿ ಮಾತ್ರ ಸಮಾಗಮಿಸಿದರೆ,ತಪ್ತ ಕೃಚ್ಛ ವೃತವನ್ನು ಆಚರಿಸಬೇಕು.ಮುಳ್ಳನ್ನು ಅರಿತು ಅಥವಾ ಅರಿಯದೆ ಅದು ಹೇಗೇಯೆ ತುಳಿದರೂ ಗಾಯ ಮಾಡುವಂತೆ ಧರ್ಮವಿರುದ್ದವಾದ ಪರಸ್ತ್ರೀಗಮನವು ಇಷ್ಟವಿರಲಿ,ಇಲ್ಲದಿರಲಿ ಅದನ್ನು ಮಾಡಿದ ವ್ಯಕ್ತಿಯು ಮಹಾ ಪಾಪದ ಫಲವನ್ನು ಅನುಭವಿಸಲು ವಿವಶನನ್ನಾಗಿ ಮಾಡುತ್ತದೆ. ಎಂಬ ನುಡಿಯನ್ನು ಬರೆಯಲಾಗಿದೆ
.


ಇದನ್ನು ಹೇಳಿದವರು ಶ್ರೀಶೈಲ ಜಗದ್ಗುರು ಡಾ.ಚನ್ನ ಸಿದ್ದರಾಮ ಪಂಡಿತಾರಾಧ್ಯ ಭಗವತ್ಪಾದರು.ಇಲ್ಲಿ ನಮಗೆ ಕಾಡುವ ಪ್ರಶ್ನೆ ಅಂದ್ರೆ ಒಂದು ಕಡೆ ಪ್ರಾಯಶ್ಚಿತ್ತವಾಗಿ ವೃತಗಳನ್ನು ಮಾಡಲು ಹೇಳುತ್ತಾರೆ. ಅದರಲ್ಲಿ ಒಪ್ಪಿಗೆ ಇದ್ದರೆ ಒಂದು ವೃತ,ಒಪ್ಪಿಗೆ ಇರದಿದ್ದರೆ ಇನ್ನೋಂದು ವ್ರತ. ಒಮ್ಮೆ ಸಮಾಗಮಿಸಿದರೆ ಮತ್ತೆ ಅದಕ್ಕೊಂದು ವ್ರತವೂ ಇದೆ.


ಮತ್ತೊಂದು ಕಡೆ ವ್ಯಕ್ತಿಯು ಪಾಪದ ಫಲವನ್ನು ಅನುಭವಿಸಲು ಅರ್ಹನಾಗುತ್ತಾನೆ. ಇಲ್ಲಿ ಇನ್ನೊಂದು ಮಾತನ್ನು ಗಮನಿಸಬೇಕು,ಬ್ರಾಹ್ಮಣ ಮಹಿಳೆ ಎಂದು ಇದೆ ಹೊರತಾಗಿ ಇಡೀ ಮಹಿಳೆಯರನ್ನು ಕುರಿತು ಹೇಳಲಾಗಿಲ್ಲವಲ್ಲ ! ಯಾಕೆ ? ಈ ತಾರತಮ್ಯವನ್ನು ಇತಿಹಾಸದುದ್ದಕ್ಕೂ ಮಾಡಿಕೊಂಡೆ ಬಂದಿರುವ ಪುರೋಹಿತ ಪರಂಪರೆಯು ಕನಸು ಮನಸಿನಲ್ಲಿಯೂ ಸಮಾನತೆಗೆ ಮಹಿಳೆ ಅರ್ಹಳು ಎಂದು ಭಾವಿಸಿಯೇ ಇಲ್ಲಾ.ಇದು ನಮ್ಮ ಮಹಿಳೆಯರ ದುರಂತ.ಇದಕ್ಕೆ ಪರಿಹಾರ ಹುಡುಕಿದವರು ಅಣ್ಣಬಸವಣ್ಣ ಅಕ್ಕನಿಗಿಲ್ಲದ ಜನಿವಾರ ನನಗೇಕೆ? ಎಂದು ಪ್ರಶ್ನೆ ಮಾಡುತ್ತಾರೆ. ಅಲ್ಲಿಂದ ಮಹಿಳೆಯರನ್ನು ಸಮಾನವಾಗಿ ತಮ್ಮ ಶರಣಗಣದಲ್ಲಿ ಸೇರಿಸಿ ಕೊಳ್ಳುತ್ತಾರೆ.


ಹಿಡಿದೊಂದು ಕೋಲನ್ನು ಕಡಿದು ಎರಡು ಮಾಡಿ ತಿಕ್ಕಿದರೆ ನಡುವೆ ಹುಟ್ಟಿದ ಕಿಚ್ಚು ಹೆಣ್ಣೋ ಗಂಡೋ ರಾಮನಾಥ

ಎಂದು ದೇವರ ದಾಸೀಮಯ್ಯ ಅಂದು ಕೇಳಿದ್ದು.
ಹಿಂದೆ ಹೆಣ್ಣು ಮಾಯೆ ಎಂದು ಭಾವಿಸಿ ಅದರಂತೆ ಶಾಸ್ತ್ರ ಬರೆವರೆ ಹೆಚ್ಚು. ಅದಕ್ಕೆ

ಹೆಣ್ಣು ಮಾಯೆ ಎಂಬರು ಹೆಣ್ಣು ಮಾಯೆಯಲ್ಲ.ಮಣ್ಣು ಮಾಯೆ ಎಂಬರು ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಸೆಯೆ ಮಾಯೆ ಕಾಣಾ ಗುಹೇಶ್ವರಾ

ಎಂದಿದ್ದಾರೆ.

ಇಂದ್ರಿಯ ನಿಗ್ರಹವ ಮಾಡಿದರೆ ಹೊಂದುವವು ದೋಷಂಗಳು ,ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು.
ಸತಿ ಪತಿ ರತಿಸುಖವ ಬಿಟ್ಟರೆ ಸಿರಿಯಾಳ ಚಂಗಳೆಯರು.
ಸತಿ ಪತಿ ರತಿಸುಖವ ಭೋಗೋಪಭೋಗ ವಿಳಾಸವಬಿಟ್ಟರೆ ಸಿಂದು ಬಲ್ಲಾಳನು ನಿಮ್ಮ ಮುಟ್ಟಿ ಪರಧನ, ಪರ ಸತಿಗಳಿಗೆಳಸಿದರೆ .ನಿಮಾಚಾರಕ್ಕೆ ದೂರ ಕೂಡಲ ಸಂಗಮ ದೇವ

ಅಂದಿದ್ದಾರೆ ಬಸವಣ್ಣನವರು.
ಆಸೆಯೆ ಮಾಯೆ ಅಂದಿದ್ದಾರೆ ಶರಣರು. ಹಿಂದೆ ಮಾಯೆ ಅಂದರೆ ಚಂಚಲತೆಗೆ ಹೋಲಿಸಿದರೆ ಶರಣರು ಮಾಯೆಯನ್ನು ಪ್ರೀತಿಗೆ ಹೋಲಿಸಿಕೊಂಡರು.


ಜನಿಕ್ಕೆ ತಾಯಾಗಿ ಹೆತ್ತಳು ಮಾಯೆ.
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ. ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆಈ ಮಾಯೆಯ ಕಳೆವಡೆ ಎನ್ನಳವಲ್ಲ ನೀವೆ ಬಲ್ಲಿ ರಿ ಕೂಡಲ ಸಂಗಮದೇವಾ

ಎಂದಿದ್ದಾರೆ ಬಸವಣ್ಣನವರು.
ಶರಣ ವಿಚಾರಗಳಂತೆ ಸ್ಪಷ್ಟತೆ ಹಿಂದಿನ ವೇದ,ಪುರಾಣ, ಆಗಮಗಳಲ್ಲಿ ಬಂದಿಲ್ಲಾ ಯಾಕೇ?ಅದಕ್ಕೆ ಶರಣರು


ವೇದ ವಿಪ್ರರ ಮಾತು ,ಶಾಸ್ತ್ರ ಸಂತೆಯ ಸುದ್ದಿ, ತರ್ಕ,ವ್ಯಾಕರಣ ಕವಿತ್ವ ಪ್ರೌಡಿಮೆ ತನಗನೊಳಗಿನ ಅರಿವಿನಿಂದ ಘನವಿಲ್ಲೆಂದ ಕಲಿದೇವರ ದೇವ

ಎಂದು ಮಡಿವಾಳ ಮಾಚಿತಂದೆ ಹೇಳಿದ್ದು.


ತೊರೆಯ ಮೀವ ಸ್ವಾಮಿಗಳಿರಾ,ತೊರೆಯ ಮೀವ ಅಣ್ಷಗಳಿರಾ. ತೊರೆಯಿಂಭೋ ತೊರೆಯಿಂಭೋ ಪರನಾರಿಯರ ಸಂಗ ತೊರೆಯಿಂಭೋ.
ಪರಧನದಾಮಿಷ ತೊರೆಯಿಂಭೋ ಇವತೊರೆಯದೆ ಹೊಗಿ ತೊರೆಯಲ್ಲಿ ಮಿಂದರೆ ಬರು ದೊರೆ ಹೊಯಿತ್ತು ಕೂಡಲ ಸಂಗಮದೇವ

ಶತ ಶತಮಾನಗಳಿಂದ ಶೊಷಣೆಯೆ ದಾಳವನ್ನು ಹಾಕುತ್ತ ಬಂದಿರುವ ಈ ಪುರೋಹಿತ ವರ್ಗ ತಿಳಿಯದ ಭಾಷೆ ಸಂಸ್ಕೃತವನ್ನು ಬಳಸಿಕೊಂಡು ನಮ್ಮನ್ನು ತುಳಿಯುತ್ತಲೆ ಬಂದಿದ್ದಾರೆ. ತುಳಿತಕ್ಕೆ ಪ್ರತಿಭಟನೆಯಾಗಿ ಅಣ್ಣ ಬಸವಣ್ಣ ಮತ್ತು ಶರಣರೆಲ್ಲ ಅಚ್ಚ ಕನ್ನಡದಲ್ಲಿ ವಚನ ರಚನೆ ಮಾಡಿದ್ದರೆ ಅವು ನಮ್ಮದಾರಿಗೆ ಕೈ ದೀವಿಗೆಗಳಾಗಿವೆ. ಅವುಗಳನ್ನು ಓದುವ ಮೂಲಕ ನಮ್ಮನ್ನು ಯಾರು ಶೋಷಣೆ ಮಾಡತಾರೆ ? ಅನ್ನು ಎಚ್ಚರಿಕೆಯನ್ನ ನಾವು ಹೊಂದಲೇ ಬೇಕಾಗಿದೆ. ಜಗತ್ತು ಇವತ್ತು ಬಸವಣ್ಣನವರತ್ತ ವಾಲುತ್ತಿದೆ. ಆದರೆ ನಾವು ಅವರಿಂದ ದೂರವಾಗಬಾರದಲ್ಲವೇ? ನಾವೂ ಬಸವಾದಿ ಶರಣರ ವಿಚಾರವನ್ನು ಒಪ್ಪೋಣ ಮತ್ತು ಅಪ್ಪೋಣ.

೦ ಶಿವಣ್ಣ ಇಜೇರಿ ಶಹಾಪುರ

2 thoughts on “ಹೆಣ್ಣು ಶೈವಾಗಮ ಮತ್ತು ಶರಣರು

  1. ತುಂಬಾ ಅದ್ಭುತವಾಗಿ ಬರೆದಿದ್ದೀರಿ ಅಣ್ಣಾವ್ರೆ, ಹೆಣ್ಣು ಶೂದ್ರವೆಂದು ದೂರವಿಟ್ಟ ಸನಾತನಕ್ಕೆ “ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಕಸಿಯಲ್ಲ ಹೆಣ್ಣು ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ ಎಂದು ಉತ್ತರಿಸಿದರು ಶರಣರು..ಶರಣು ಶರಣಾರ್ಥಿ..💐

  2. ಸತ್ಯವಾದ ಮಾತು ಶಿವಣ್ಣ ಶರಣರದು.

    ಶರಣು ಶರಣಾರ್ಥಿ ಶರಣರೇ

Leave a Reply

Your email address will not be published. Required fields are marked *

error: Content is protected !!