ವಾಸ್ತು ಹೇಳುವ ಭಯೋತ್ಪಾದಕರು ಹಾಗೂ ಗೆಳೆಯ ಬಸವರಾಜ ಅಂಗಡಿ

ನಿನ್ನೆ ದಿನ ಗೆಳೆಯ ಜಂಬುನಾಥ ಆನೆಗುಂದಿಯವರ ನೂತನ ಪತ್ರೋಳಿ ಕಾರ್ಖಾನೆಗೆ ಹೋಗಿದ್ದೆ. ಅಲ್ಲಿಯೆ ಕುಳಿತ್ತಿದ್ದ ಗೆಳೆಯ ಬಸವರಾಜ ಅಂಗಡಿ ತಲೆಮೇಲೆ ಕೈಹೊತ್ತು ಕುಳಿತ್ತಿದ್ದು ಕಂಡುಬಂತು. ಯಾಕೊ ಮಾಮ ಏನಾಯಿತ್ತು ? ಅಂದಾಗ ಏನು ಇಲ್ಲ ಏನು ಇಲ್ಲ ಅಂದ. ಆಗ ಮತ್ತೊಬ್ಬ ಗೆಳೆಯ ವಿಶ್ವಾ ಪಾಟೀಲ್ ಮಾಮ ಇವತ್ತು ಜಗಲಿ ಪೂಜಾ ಮಾಡಿದ್ದಾನೆ ಎಂದ. ಹೌದಾ ಮಾಮ ? ಅಂದಾಗ “ಹೌದು ದೇವದುರ್ಗದಲ್ಲಿ ಒಬ್ಬ ಒಳ್ಳೆಯ ಪಂಚಾಂಗ ಹೇಳುವ ಮುತ್ಯಾ ಇದ್ದಾನೆ. ಆತ ಹೇಳಿದ್ದರಿಂದ ಪೂಜೆ ಮಾಡಿದೆ ,ಎಂದು ಹೇಳಿ ಮುಖ ಸಪ್ಪೆ ಮಾಡಿಕೊಂಡು ಕುಳಿತ.

ನಾನು , ಎಲ್ಲಿ ಬಂತ್ತು ಮನಿ ಕೆಲಸ ? ಅಂದಾಗ ಇನ್ನು ನಡದಾದಪ್ಪ ಅನ್ನುತ್ತಿರುವಾಗ ನಾನು ಮನೆಯ ಪೋಟೋನಾದರು ತೋರಿಸು ಅಂದೆ. ಮೊಬೈಲ್ ನೋಡಲೇನೋ ಕೊಟ್ಟ ಅದರಲ್ಲಿ ಸುಂದರವಾಗಿ ಕಟ್ಟಿದ್ದ ಮನೆಯ ಪೋಟೋ ನೋಡಿ ಖುಷಿಗೊಂಡೆ. ಕ್ಷಣ ಮಾತ್ರದಲ್ಲಿ ಇನ್ನೊಂದು ಪೋಟೋ ನೋಡಿದಾಗ ಅದರಲ್ಲಿ ಕಟ್ಟಿದ ಮನೆ ಕೆಡವಿದ ಚಿತ್ರವಿತ್ತು . ನನಗೆ ಆಶ್ಚರ್ಯವಾಗಿ “ಯಾಕೊ ಮಾವ ಹಿಂಗ್ಯಾಂಕ ?’’ ಅಂದಾಗ
ಹಿಂದೆ ನಡೆದ ಸತ್ಯ ಘಟನೆ ಹೇಳಿದ. ಪಂಚಾಂಗ ಹೇಳುವ ಮುತ್ಯಾನ ಮಾತು ಕೇಳಿಯೇ ಮೊದಲು ಕಟ್ಟಿದ್ದೆ. ಆತ ಒಮ್ಮಿದೊಮ್ಮೆ ಬಂದು ಇದು ಸರಿಯಾದುದಲ್ಲ ಎಂದ, ಅದನ್ನು ಕೆಡವಿದೆ. ಈಗ ಅದೇ ಮುತ್ಯಾ ಹಿಂದಿನದೆ ಸರಿ ಇತ್ತು ಹಾಗೆ ಕಟ್ಟು ಎಂದು ಹೇಳುತ್ತಿದ್ದಾನೆ. ನನಗೆ ಏನೊಂದು ತೋಚುತ್ತಿಲ್ಲ ಎಂದು ತನ್ನ ಅಸಹಾಯಕತೆ ವ್ಯಕ್ತ ಪಡಿಸಿದ.

ಬಿದ್ದಲ್ಲೇ ಬೇರೂರಿ ಗಗನಕ್ಕೆ ಕೈ ಎತ್ತಿ

ಹೂ ಬಿಡುವ ಗಿಡ ಮರಕ್ಕೆ ವಾಸ್ತು ಎಲ್ಲಿ?

ಗುಡಿಸಲಿನ ಹಸಿರಲ್ಲಿ ಬಡತಾಯ ಮಡಿಲಲ್ಲಿ ನಸುನಗುವ

ಮಗು ಮನಕೆ ವಾಸ್ತು ಎಲ್ಲಿ?

ಎಂಬ ವಾಸ್ತು ಪ್ರಕಾರ ಚಲನ ಚಿತ್ರ ಹಾಡು ನೆನಪಿಗೆ ಬಂತು ಈ ಹಾಡಿನ ಸಾಲುಗಳನ್ನು ಅರಿತ್ತು ಕೊಂಡರೆ ನಡೆದರೆ ಯಾವ ವಾಸ್ತುನು ಬೇಕಾಗಿಲ್ಲ. ಸ್ವಂತ ಮನೆ ಕಟ್ಟಿಸಿಕೊಂಡವರು ವಾಸ್ತು ನೋಡುತ್ತೇವೆ. ಆದರೆ ಸಾವಿರಾರು ಜನರು ರಸ್ತೆಯ ಪಕ್ಕದಲ್ಲಿ ಗುಡಿಸಿಲುಗಳಲ್ಲಿ ಬದುಕುತ್ತಿದ್ದಾರೆ. ಅವರುಗಳಿಗೆ ಎಲ್ಲಿದೇ ವಾಸ್ತು ? ಹಾಗೆ ನೋಡಿದರೆ ಭೂಮಿ ಪ್ರತಿಕ್ಷಣವು ತನ್ನ ದಿಕ್ಕನ್ನು ಬದಲಿಸುತ್ತ ಸುತ್ತುತ್ತಾ ಇರುತ್ತದೆ. ಈ ಪೂರ್ವ,ಪಶ್ಚಿಮ ಇದನ್ನು ನಮ್ಮ ಅನುಕೂಲಕ್ಕಾಗಿ ಮಾಡಿಕೊಂಡಿದ್ದೇವೆ ವಿನಃ ಇದರಿಂದ ಯಾವುದೆ ಬದಲಾವಣೆ ಆಗುವುದಿಲ.ಹಸ್ತರೇಖೆ ನೋಡಿ ಭವಿಷ್ಯ ಹೇಳುವುದಾದರೆ ಹಸ್ತವೇ ಇಲ್ಲದವನಿಗೆ ಭವಿಷ್ಯವೇ ಇಲ್ಲವೆ !

ವೈಜಾನಿಕ ಯುಗದಲ್ಲಿ ನಮ್ಮನ್ನು ಬೆಂಬಿಡದೆ ಕಾಡುತ್ತಿರುವ ಜೊತ್ಯಿಷ ವಾಸ್ತು ಮೌಢ್ಯದ ಕಳೆ ಬಿತ್ತುತ್ತಿರುವ ಪುರೋಹಿತರು ,ವಾಸ್ತುತಜ್ಞರು ಪಂಚಾಂಗ ಹೇಳುವವರು ಮನೆ ಬಾಗಿಲು ಮತ್ತು ಕಿಟಕಿಗಳನ್ನು ಆಕಡೆ ಇಂದ ಈ ಕಡೆ ಕಿತ್ತಿ ಇಡುವಂತೆ ಹೇಳುತ್ತಾರೆ. ಮನೆ ಮುರಿಸುತ್ತಾರೆ. ಹಣವನ್ನು ಖರ್ಚು ಮಾಡಿಸುತ್ತಾರೆ. ಒಂದು ಕಡೆ ಇರುವ ಜಗುಲಿ ಕಿತ್ತಿ ಇನ್ನೊಂದು ಕಡೆ ಇಡಲು ಸೂಚಿಸುತ್ತಾರೆ. ಸಂಡಾಸ ರೂಮ ಆ ಕಡೆ ಯಿಂದ ಈ ಕಡೆ ಇಡಲು ಹೇಳುತ್ತಾರೆ. ಸಂಡಾಸ ರೂಮಲ್ಲಿ ಎಂತಾ ವಾಸ್ತು ಇರುತ್ತದೆ ? ಸಂಡಾಸ ರೂಮಲ್ಲಿ ನಿಜವಾಗಲು ಇರಬೇಕಾದದ್ದು ನಲ್ಲಿಯಲ್ಲಿ ನೀರು. ಆ ನೀರು ಬರುತ್ತಾ ಇದೆಯಾ ಇಲ್ಲವಾ ಮತ್ತು ಬಕೇಟು ಚಂಬು ಇದೆಯಾ ಇಲ್ಲವಾ ಎಂಬುವುದೆ ಗಮನಿಸುವು ವಾಸ್ತವ.

basavaraj

ವಾಸ್ತವವನ್ನು ಗಮನಿಸದ ಹಲವಾರು ಜನರು ವಾಸ್ತು ಹೇಳುವ ಅಳಲೆಕಾಯಿ ಪಂಡಿತರ ಹಿಂದೆ ಬೆನ್ನು ಬೀಳುತ್ತಿರುವುದು ದುರಂತ. ಈ ವಿವೇಕರಹಿತ ನಡವಳಿಕೆಯನ್ನು ವಿದ್ಯಾವಂತರೆ ಮಾಡುತ್ತಿರುವುದು ಇನ್ನೂ ದುರಂತ. ದೇವರು ಎಲ್ಲಾ ಕಡೆ ವಾಸವಾಗಿದ್ದಾನೆ ಎಂದು ಹೇಳುವ ಜನಗಳೆ ಕೇವಲ ಒಂದು ಮೂಲೆಯಲ್ಲಿ ದೇವರಿಲ್ಲ, ಆ ಬಾಗಿಲು ಇಟ್ಟರೆ, ಜಗಲಿ ಇಟ್ಟರೆ, ಸಂಡಾಸ ರೂಮ್ ಕಟ್ಟಿಸಿದರೆ ,ಬಾಗಿಲು ಇಟ್ಟರೆ ನಿಮಗೆ ಕೇಡುಗು ಆಗುತ್ತದೆ ಎಂಬ ಮಾನಸಿಕ ಭಯೋತ್ಪಾದಕರ ಮೂಲ ಉದ್ದೇಶವನ್ನು ಅರಿಯುವವರೆಗೂ ನಮ್ಮನ್ನು ಮೋಸ ಮಾಡುತ್ತಲೆ ಇರುವ ವರ್ಗವೊಂದು ಹುಲುಗಾವಲಿನಲ್ಲಿ ಮೇಯ್ಯುತ್ತಲೆ ಇರುತ್ತದೆ.

0 ಸಾಯಿಕುಮಾರ ಇಜೇರಿ
ಕಾಯಕ ನಿಲಯ, ಕುಂಬಾರ ಓಣಿ
ಶಹಾಪುರ ( ಯಾದಗಿರಿ ) ಜಿಲ್ಲೆ

3 thoughts on “ವಾಸ್ತು ಹೇಳುವ ಭಯೋತ್ಪಾದಕರು ಹಾಗೂ ಗೆಳೆಯ ಬಸವರಾಜ ಅಂಗಡಿ

  1. ನೀವು ಹೇಳಿರುವುದು ಸತ್ಯ, ಜನರು ಇಂತಹ ದನ್ನು ನಂಬಿ ಹನ್ ಹಾಗೂ ಮನಸ್ಥಿತಿಯನ್ನು ಕೆಡಿ ಸಿ ಕೊಳ್ಳುತ್ತಿದ್ದಾರೆ.
    ತಮಗೆ ವಂದನೆಗಳು🙏🙏

Leave a Reply

Your email address will not be published. Required fields are marked *

error: Content is protected !!