*ಬಸವ ತತ್ವದ ಮಣಿಯ ಹೊತ್ತು ನಡೆದ ಡಾ.ಚೆನ್ನಬಸವ ಪಟ್ಟದ್ದೇವರು*
*ಬಸವ ತತ್ವದ ಮಣಿಯ ಹೊತ್ತು ನಡೆದ ಡಾ.ಚೆನ್ನಬಸವ ಪಟ್ಟದ್ದೇವರು* ತೀರಾ ಇತ್ತೀಚಿಗೆ ಭಾಲ್ಕಿಯ ಹಿರೇಮಠದ ಚೆನ್ನಬಸವ ಪಟ್ಟದ್ದೇವರ ಆಶ್ರಮದಲ್ಲಿ ನಡೆಯುತ್ತಿದ್ದ ವಚನ…
ಡಾ.ಅಂಬೇಡ್ಕರ ಸಹವಾಸದಲ್ಲಿ ; ಸವಿತಾ ಅಂಬೇಡ್ಕರ್
ಒಂದು ಕಾಲದಲ್ಲಿ ಮರಾಠಿ ಸಾಹಿತ್ಯದಲ್ಲಿ ಆತ್ಮಕಥನಗಳ ಸುಗ್ಗಿ. ಅವುಗಳಲ್ಲಿ ಹಲವು ಕನ್ನಡಕ್ಕೆ ಬಂದಿವೆ. ಈಗ ಕನ್ನಡದಲ್ಲಿಯೂ ಸಾಕಷ್ಟು ಆತ್ಮಕಥನಗಳು ಬರುತ್ತಿವೆ. ಸವಿತಾ…
ಕಾವಿ ಹೊದ್ದು ತಿರುಗುವವರೆಲ್ಲ ಮಠಾಧೀಶರೆ ?
ಬಸವಣ್ಣನವರ ಬ್ರಹ್ಮಚರ್ಯ ಶುದ್ದ ಗ್ರಹಸ್ಥವಾದ ಲಿಂಗಾಯತ ಧರ್ಮಕ್ಕೆ ಈ ಸನ್ಯಾಸತ್ವ, ಬ್ರಹ್ಮಚರ್ಯ , ಭೂತ ಯಾವಾಗಿನಿಂದ ಹೊಕ್ಕರಿಸುಕೊಂಡಿತೊ ನಿರ್ದಿಷ್ಟವಾಗಿ ಹೇಳಲು ಆಗಲ್ಲ…
ಅರಿವು ಕಣ್ತದೆರೆಯದವರಲ್ಲಿ ಆ ದೇವ ಕೂಡ ಆರತಿಯನ್ನೂ ಸ್ವೀಕರಿಸುವುದಿಲ್ಲ
ಹನ್ನೆರಡನೆಯ ಶತಮಾನದ ವಚನ ಸಾಹಿತ್ಯ ಬಹುತೇಕರು ಬಲ್ಲಂತೆ ಸಾಹಿತ್ಯ ಬರೆಯಬೇಕು ಎಂಬ ಉದ್ದೇಶದಿಂದ ಬರೆಯಲ್ಪಟ್ಟದ್ದಲ್ಲ. ಅರಿವು ಮತ್ತು ವಾಸ್ತವ ಬದುಕು ಎರಡೂ ಜೊತೆಗೂಡಿದಾಗ ಘಟಿಸಿದ್ದು. ವಚನ ಸಾಹಿತ್ಯದ ಒಂದು ಸಾಲನ್ನು ಸಹ ನಾವಿಂದು ಬದುಕದ ದೈನೀಯ ಸ್ಥಿತಿಯಲ್ಲಿ ನಾವಿಂದು ಬಿದ್ದು ಒದ್ದಾಡುತ್ತಿದ್ದೇವೆ. ಆದರೂ ವಚನಕಾರರ ಆಶಯಗಳನ್ನು ಇಂಬಿಟ್ಟುಕೊಂಡು ನಡೆಯಲೇಬೇಕಾದ ತುರ್ತು ಇಂದು ಇದೆ. ಇಲ್ಲದೆ ಹೋದರೆ ನಾವೆಲ್ಲ ನಾವಿಕನಿಲ್ಲದೆ ದೋಣಿ ಎತ್ತೆತ್ತಲೋ ನಮ್ಮನ್ನು ಕರೆದೊಯ್ಯಬಲ್ಲುದು; ಬದುಕಿನ ದೋಣಿಯೇ ನಾವಿಕನಿಲ್ಲದೆ ಎಲ್ಲಾದರೂ ಮಗುಚಿಕೊಂಡು ಬೀಳಬಹುದು. ಅಹಂಕಾರವನ್ನಿಟ್ಟುಕೊಂಡ ಈ ಒಡಲೆಂಬ ಬಂಡಿಗೆ ಮೃಢ ಶರಣರ ನುಡಿಗಡಣ ಅತ್ಯಾವಶ್ಯಕವಾಗಿಬೇಕು.

ಬಸವಣ್ಣನವರು ಅಂದು ಬದಲಾವಣೆ ಮಾಡಲು ಸಾಧ್ಯವಾದುದಕ್ಕೆ ಕಾರಣ ಅವರ ಮಾತೃ ಹೃದಯ. ಚೆನ್ನಯ್ಯನ ಬಾಯ್ತಂಬುಲ ಮೆಲುದು ; ಅವರ ಬೀಳುಡುಗೆಯ ಹೊದ್ದು ಬದುಕುವೆ ಎಂಬ ಮಾತು ಕೇವಲ ಅವರ ಗಂಟಲಿನಿಂದ ಬಂದಿರಲಿಲ್ಲ. ಶತ ಶತಮಾನಗಳಿಂದ ನಿರ್ಲಕ್ಷಿಸಲ್ಪಟ್ಟ ಸಮಾಜವನ್ನು ಇವನಾರ ಇವನಾರವನೆನ್ನದೆ ತಬ್ಬಿಕೊಂಡದ್ದು ನಾಟಕೀಯವೂ ಅಲ್ಲ. ಜೀವನದ ಸತ್ಯವನ್ನು ಅವರು ಮನಗಂಡಿದ್ದರು. ನರೆ ಕೆನ್ನೆಗೆ ತೆರೆ ಗಲ್ಲಕೆ. ಶರೀರ ಗೂಡು ಹೋಗದ ಮುನ್ನ. ಹಲ್ಲು ಹೋಗಿ ಬೆನ್ನುಬಾಗಿ ಅನ್ಯರಿಗೆ ಹಂಗಾಗದ ಮುನ್ನ. ಕಾಲ ಮೇಲೆ ಕೈಯನೂರಿ ಕೋಲ ಹಿಡಿದ ಮುನ್ನ ಮುಪ್ಪಿಂದೊಪ್ಪವಳಿಯದ ಮುನ್ನ ಮೃತ್ಯು ಮುಟ್ಟದ ಮುನ್ನ ಪೂಜಿಸು ಕೂಡಲ ಸಂಗಮದೇವನ ಎಂದ ಅರಿವು ಇದ್ದುದರಿಂದ ಇದ್ದ ಬದುಕನ್ನು ಸವೆಯೇ ಬಳಸಲು ತೀರ್ಮಾನಿಸಿದ್ದರು.
ಯಾವುದೆ ವ್ಯಕ್ತಿಗೆ ಅರಿವು ತುಂಬಾ ಮುಖ್ಯವಾದುದು. ಅರಿವು ಇರದಿದ್ದರೆ ಏನಿದ್ದೂ ಫಲವಿಲ್ಲ. ಬಸವಣ್ಣನವರು ಮೊಟ್ಟ ಮೊದಲು ಮಾಡಿದ ಕೆಲಸವೆಂದರೆ ಎಲ್ಲರೊಳಗೂ ಅರಿವನ್ನು ಜಾಗೃತಗೊಳಿಸಿದರು. ದುಡಿಯುವ ವ್ಯಕ್ತಿಯೆ ದೊಡ್ಡವನು. ದೈಹಿಕ ಶ್ರಮ ಎಲ್ಲಾ ಶ್ರಮಗಳಿಗಿಂತಲೂ ಮಿಗಿಲು. ಕಾಯವೇ ಕೈಲಾಸ ಎಂಬ ಹೊಚ್ಚ ಹೊಸ ಮಾತಿಗೆ ಜನ ನಿಬ್ಬೆರಗಾಗಿ ನೋಡುವಂತಾಯಿತು. ದೇವರು ದುಡಿಮೆಯಲ್ಲಿದ್ದಾನೆ. ಕಾಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಆ ದೇವನನ್ನು ನಮ್ಮ ನಮ್ಮೊಳಗೆ ಕಾಣಲು ಸಾಧ್ಯ. ಕಾಲು ಕಂಬ, ದೇಹ ದೇಗುಲ ಶಿರ ಹೊನ್ನ ಕಳಸವಾಗಬೇಕಾದರೆ ಆ ಶಿರದ ತುಂಬೆಲ್ಲ ಅರಿವು ತುಂಬಿಕೊಂಡಿರಬೇಕು. ಅರಿವು ಕಣ್ತದೆರೆಯದವರಲ್ಲಿ ಆ ದೇವ ಕೂಡ ಆರತಿಯನ್ನೂ ಸ್ವೀಕರಿಸುವುದಿಲ್ಲ ಎಂಬ ಮಾತನ್ನು ಅಕ್ಕಮಹಾದೇವಿ ತಾಯಿ ಹೇಳುತ್ತಾಳೆ.
ಆ ಅರಿವು ಬರುವುದಾದರೂ ಯಾವುದರಿಂದ ? ಯಾರಿಂದ ? ಸಮಾಜವನ್ನು ಕಣ್ತೆರೆದು ನೋಡುವುದರಿಂದ, ಪ್ರಕೃತಿಯನ್ನು ಕಣ್ತುಚ್ಚಿ ಧ್ಯೇನಿಸುವುದರಿಂದ.
ಕಣ್ಣೊಳಗೆ ಕಣ್ಣಿದ್ದು ಕಾಣಲೆಕರಿರಯ್ಯಾ
ಕಿವಿಯೊಳಗೆ ಕಿವಿಯಿದ್ದು ಕೇಳಲೇಕರಿಯರಯ್ಯಾ
ಘ್ರಾಣದೊಳಗೆ ಘ್ರಾಣವಿದ್ದು ವಾಸಿಸಲೇಕರಿಯರಯ್ಯಾ
ಜಿಹ್ವೆಯೊಳಗೆ ಜಿಹ್ವೆಯಿದ್ದು ರುಚಿಸಲೇಕರಿಯರಯ್ಯಾ
ಸ್ಪರ್ಶನದೊಳಗೆ ಸ್ಪರ್ಶನವಿದ್ದು ಮುಟ್ಟಲೇಕರಿಯರಯ್ಯಾ
ಪ್ರಾಣದೊಳಗೆ ಪ್ರಾಣವಿದ್ದು ನೆನೆಯಲೇಕರಿಯರಯ್ಯಾ
ಕಾಯದೊಳಗೆ ಕಾಯವಿದ್ದು ಬಿಡದು ಬೇರಾಗದು
ಕೂಡಲಸಂಗಮದೇವಾ
ನೀವಿಕ್ಕಿದ್ದ ಅಣದ ಭೇದವ ಭೇದಿಸಬಾರದಯ್ಯಾ
ಕಣ್ಣೊಳಗಿನ ಕಣ್ಣಿನ ಆಳಕ್ಕೆ, ಕಿವಿಯೊಳಗಿನ ಕಿವಿಯ ಆಳಕ್ಕೆ. ಘ್ರಾಣದೊಳಗಿನ ಘ್ರಾಣದ ಒಳಗಡೆ ಹೋಗಿ ಇಣುಕಿ ನೋಡಬೇಕು ಆಗಲೇ ಅರಿವು ಕಾಣಿಸಿಕೊಳ್ಳುವುದು. ನಮ್ಮೊಳಗಿನ ಅರಿವಿನ ಆಳಕ್ಕೆ ಇಳಿಯದೆ ಹೋದರೆ ಹೊರಗಡೆ ಇರುವ ಯಾವ ಸಂಗತಿಗಳು ಅರ್ಥವಾಗಲು ಸಾಧ್ಯ. ಹೊರಗಡೆ ಕಾಣುವ ಗಾಳಿ ಬೆಳಕು ನೀರು ಬೆಂಕಿಯ ಸ್ವರೂಪಗಳು ನಮ್ಮೊಳಗೂ ಇವೆ. ಬ್ರಹ್ಮಾಂಡವೇ ಪಿಂಡಾಂಡ. ಪಿಂಡಾಂಡವೇ ಬ್ರಹ್ಮಾಂಡ. ಒಂದು ಬಿಟ್ಟು ಮತ್ತೊಂದು ಇಲ್ಲ. ಪಂಚಭೂತಗಳಿಂದ ಉದಯವಾದ ಶರೀರ ಕೊನೆಗೆ ಲೀನವಾಗುವುದು ಪಂಚಭೂತಗಳಲ್ಲಿಯೇ ಎಂಬ ಸತ್ಯ ಅರಿತುಕೊಂಡು ನಡೆಯಬೇಕಾಗಿದೆ. ಭಾವ ಶುದ್ಧತೆಯಿಂದ ನೋಡಿದಾಗ ಮಾತ್ರ ಜಗತ್ತು ಶಿವಮಯವಾಗಿ ಕಾಣುತ್ತದೆ. ತನು ಮನ ಧನ ಮೂರರ ಪರಿಶುದ್ಧತೆಯಿಂದ ಹೃದಯದ ಕಮಲ ವಿಕಸಿತವಾಗುತ್ತದೆ ಎಂದು ಅಕ್ಕಮಹಾದೇವಿ ತಾಯಿ ಹೇಳುತ್ತಾರೆ.

ಅರಿವು ಅರಿವು ಎನುತಿಪ್ಪಿರಿ ಅರಿವು ಸಾಮಾನ್ಯವೆ ?
ಹಿಂದಣ ಹೆಜ್ಜೆಯ ಕಂಡಲ್ಲದೆ ನಿಂದ ಹೆಜ್ಜೆಯನರಿಯಬಾರದು.
ಮುಂದಣ ಹೆಜ್ಜೆಯಳಿದಲ್ಲದೆ
ಒಂದು ಪಾದ ನೆಲೆಗೊಳ್ಳದು
ನೆಲನ ಬಿಟ್ಟು ಆಕಾಶದಲ್ಲಿ ನಿಂದು ಮುಗಿಲೊಳಗೆ
ಮಿಂಚಿದಲ್ಲದೆ ತಾನಾಗಬಾರದು
ಗುಹೇಶ್ವರನೆಂಬುದು ಬರಿದೆ ಬಹುದೆ ಹೇಳಿರೆ ?
ಅರಿವಿಗೆ ಮೂಲದ್ವಾರವೆ ಹಿಂದಣ್ಣ ಹೆಜ್ಜೆಗಳು. ಇತಿಹಾಸ ಅರಿತವರು ಮಾತ್ರ ಇತಿಹಾಸವನ್ನು ಕಟ್ಟಬಲ್ಲರು. ಇತಿಹಾಸದ ಪರಿಚಯವಿಲ್ಲದವರು ತಪ್ಪು ತಪ್ಪು ಹೆಜ್ಜೆಗಳನ್ನು ಇಟ್ಟ ಉದಾಹರಣೆಗಳು ಸಾಕಷ್ಟು. ವಾಸ್ತವದ ನೆಲೆ ತುಂಬಾ ಮುಖ್ಯವಾದುದು. ವಾಸ್ತವದ ಮೇಲೆಯೆ ಭವಿಷ್ಯ ಕಟ್ಟಬೇಕು. ಈ ಬದುಕು ಲೊಳಲೊಟ್ಟೆ, ಅಲ್ಲಿರುವುದು ನಿಜವಾದ ಬದುಕು ಎಂಬ ಭ್ರಮೆಯಿಂದ ಹೊರಬರಬೇಕಾಗಿದೆ. ಇಲ್ಲಿರುವುದು ಸುಮ್ಮನೆ ಅಲ್ಲಿರುವುದು ನಮ್ಮ ಮನೆ ಎಂಬುದನ್ನು ತೊಡೆಯಬೇಕು. ಇದನ್ನೆ ಅಲ್ಲಮಪ್ರಭು ನೆಲನ ಬಿಟ್ಟು ಆಕಾಸದಲ್ಲಿ ನಿಂದು ಮುಗಿಲೊಳಗೆ ಮಿಂಚಿದಲ್ಲದೆ ತಾನಾಗಬಾರದು ಎಂದು ಹೇಳಿದ್ದು. ಅರಿವು ಬಂದ ಬಳಿಕ ಆಚಾರದಲ್ಲಿ ಅದು ವ್ಯಕ್ತವಾಗಬೇಕು.

ಬೀಜ ಮೊಳೆವುದಲ್ಲದೆ ಮೊಳೆ ಮೊಳೆತುದುಂಟೆ ?
ಕ್ರೀಗೆ ಅರಿವಿಲ್ಲದೆ ಅರಿವಿಗೆ ಅರಿವುಂಟೆ ?
ಮೊಳೆ ಮೊಳೆತು ಪುನರಪಿ ಬೀಜವಾದಂತೆ
ಅರಿವು ಕ್ರೀಯಲ್ಲಿ ನಿಂದು ಉಭಯವು ತಾನಾದ ತೆರದಂತೆ
ಆ ಎರಡರಲ್ಲಿ ಕೂಡಿದ ಉಳುಮೆಯನರಿಯಬೇಕೆಂದನಂಬಿಗ
ಚೌಡಯ್ಯ
ಅಂಬಿಗರ ಚೌಡಯ್ಯ ಶರಣರು ಇಲ್ಲಿ ಸ್ಪಷ್ಟವಾಗಿ ಅರಿವು ಬಂದ ಮೇಲೆ ಕ್ರೀಯೆ ಖಂಡಿತವಾಗಿಯೂ ನಡೆಯಬೇಕೆಂದು ಒತ್ತಿ ಹೇಳಿದ್ದಾರೆ. ಕ್ರೀಯೆಗೆ ಅರಿವೇ ಪಾದ. ಅರಿವಿನ ಪಾದದ ಮೇಲೆ ನಿಂತ ಕ್ರೀಯೆ ಹುಸಿಯಾಗಲು ಸಾಧ್ಯವಿಲ್ಲ. ಯಾವುದೆ ರೀತಿಯ ಬೀಜ ಚಿಗುರೊಡೆಯುತ್ತದೆಯೆ ಹೊರತು ಎಂದಾದರೂ ಮೊಳೆ ಚಿಗುರಿದೆಯೆ ? ಬೀಜ ಮೊಳೆತು ಪುನರಪಿ ಕ್ರೀಯಲ್ಲಿ ಬೀಜವಾಗುವಂತೆ ಉಭಯವೂ ತಾನಾಗಬೇಕು. ಅರಿವಿಗೆ ಪೂಜೆಯ ಅಗತ್ಯವಿಲ್ಲ. ಅರಿವನ್ನು ಜಾರಿಗೆ ತರಬೇಕು ಅಷ್ಟೆ.
ಅರಿವಿನ ಪಥನರಿದ ಮೇಲೆಯೆ ಮನುಷ್ಯ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ. ಅರಿವಿನ ಸಮೀಪ ಬರದ ವ್ಯಕ್ತಿ ಸಹಜವಾಗಿ ಅಜ್ಞಾನದ ಕೂಪದಲ್ಲಿ ಬಿದ್ದು ಬದುಕಿನ ಅರ್ಥ ತಿಳಿಯದೆ ಸತ್ತು ಹೋಗುವುದೆ ಹೆಚ್ಚು. ಅರಿವಿನ ಸಹವಾಸ ಅದು ಹೊಂಬೆಳಕಿನ ಕಿರಣ. ಮನ ಭಾವ ಬುದ್ದಿಗೂ ಅದು ಕಚಗುಳಿ ಇಡುವಂಥದ್ದು. ಪ್ರೇಮತ್ವವನ್ನು ತುಂಬುವಂಥದ್ದು. ಬದುಕನ್ನು ಸಹನಶೀಲಗೊಳಿಸುವಂಥದ್ದು. ತನ್ನಂತೆ ಇತರರು ಎಂಬ ಸೌಹಾರ್ದತೆಯಿಂದ ಸಮಾಜವನ್ನು ಮಲೀನವಾಗದಂತೆ ನೋಡುವ ದೃಷ್ಠಿಕೋನವೂ ಲಭ್ಯವಾಗುತ್ತದೆ. ಆದ್ದರಿಂದ ನಾವು ನೀವೆಲ್ಲ ಶರಣರ ಅರಿವಿನ ಮಾರ್ಗವನ್ನು ಹಿಡಿದು ಹೋಗಬೇಕಾಗಿದೆ.
0 ವಿಶ್ವಾರಾಧ್ಯ ಸತ್ಯಂಪೇಟೆ

ಮೀಸಲಾತಿ ಬೇಡಿಕೆಯ ಚಳುವಳಿಗಳ ಹಿಂದೆ ಬೇರೆ ಇನ್ನಾರೋ ಇದ್ದಾರೆ !!??
ಕರ್ನಾಟಕದಲ್ಲಿ ಒಮ್ಮಿದೊಮ್ಮೆ ಮೀಸಲಾತಿ ಬೇಡಿಕೆಯ ಚಳುವಳಿಗಳು ಆರಂಭವಾಗಿವೆ. ಕುರುಬರು, ನಾಯಕರು, ಜಂಗಮರು ಹಾಗೂ ಪಂಚಮಸಾಲಿಗಳು ತಮ್ಮ ಬೇಡಿಕೆಯನ್ನು ಮುಂದಿಟ್ಟುಕೊಂಡು ಚಳುವಳಿ ನಡೆಸುತ್ತಿದ್ದಾರೆ.…
ಹರ್ಡೇಕರ ಮಂಜಪ್ಪನವರನ್ನು ಕಾಡಿದ ಕರ್ಮಠರು
ರಾಷ್ಟ್ರ ಪ್ರೇಮಿ, ಅನುಭಾವ ಜೀವಿ, ಶರಣರ ವಿಚಾರ ಮಾರ್ಗದ ಅನುಯಾಯಿ ಹರ್ಡೇಕರ್ ಮಂಜಪ್ಪನವರು ಲಿಂಗಾಯತನಾದುದೇ ಒಂದು ಕೌತುಕ. ತಾಯಿ ಮಾತ್ರ ಗೊತ್ತು,…
ಗಂಡೆಂಬ ಅಹಮ್ಮಿಯಾಗಲಿ, ಹೆಣ್ಣೆಂಬ ಕೀಳಿರಿಮೆಯಾಗಲಿ ಇಟ್ಟುಕೊಳ್ಳದೆ ಮುನ್ನಡೆಯಬೇಕಿದೆ.
ಹಂದೆಯಲ್ಲ ನಾನು, ಹರುಷದ ಧೈರ್ಯವುಳ್ಳ ಹೆಣ್ಣು ನಾನು. ಕಾಮವನಳಿದವಳಾನಾದ ಕಾರಣ ಬಸವನ ಹಂಗೆನಗಿಲ್ಲವಯ್ಯ. ಭ್ರಮೆಯಡಗಿ ಕಲೆನಷ್ಟವಾಗಿ ಮುಖವರತು ಮನವಿಚಾರವ ಕಂಡೆನಯ್ಯ ಸಂಗಯ್ಯ.…
ಮಠಗಳು ಸಮಾಜದ ಸ್ವತ್ತು
ಮಠಗಳು ಸಮಾಜದ ಸ್ವತ್ತು ಮಠಗಳು ಲಿಂಗಾಯತ ಧರ್ಮದ ಸ್ವತ್ತು. ಅದರ ಆಸ್ತಿ ಪಾಸ್ತಿ ಘನತೆ ಗೌರವಕ್ಕೆ ಬಾದ್ಯಸ್ಥರು ಸಾರ್ವಜನಿಕರು. ಸಾರ್ವಜನಿಕರಿಗಾಗಿ ಸಾರ್ವಜನಿಕರಿಂದ…
ಪಂಚಮಸಾಲಿಗಳ ಹೋರಾಟವೂ ; ಪಂಚಾಚಾರ್ಯರ ತಂತ್ರವೂ
ಲಿಂಗಾಯತ ಪಂಚಮಸಾಲಿಗಳು ಸರಕಾರವನ್ನು ಕೇಳುತ್ತಿರುವ ಮೀಸಲಾತಿಯ ಕುರಿತು ನಾನಿಲ್ಲಿ ಚರ್ಚಿಸಲು ಹೋಗಲಾರೆ. ಈ ಬಗ್ಗೆ ಸಂವಿಧಾನ ತನ್ನ ನಿರ್ಣಯವನ್ನು ಪ್ರಕಟಿಸುತ್ತದೆ. ರಾಜಕೀಯದ…
ಸಾಹಿತ್ಯ, ಸಂಗೀತ ಮತ್ತು ಕಲೆಯ ಸ್ಪರ್ಶ ಮಾನವನಿಗೆ ಇರಬೇಕು
ಕಲೆ, ಸಾಹಿತ್ಯ, ಸಂಗೀತ ಹಾಡಲು, ಅಭಿನಯಿಸಲು ನಮಗೆ ಬರದಿದ್ದರೂ ಅವುಗಳ ಬಗ್ಗೆ ವಿಶೇಷ ಒಲವು ಮತ್ತು ಪೋಷಿಸುವ ಮನಸ್ಸು ಇದೆ. ಇದು…
ನನ್ನೆಲ್ಲ ಬರವಣಿಗೆಗೂ ದಾಖಲೆ ಇದೆ ಪ್ರೊ. ಭಗವಾನ್
ನನ್ನೆಲ್ಲ ಬರವಣಿಗೆಗೂ ದಾಖಲೆ ಇದೆ ; ನನ್ನ ಬರವಣಿಗೆ ಮೇಲೆ ಯಾರೂ ಕೇಸ್ ಹಾಕಿಲ್ಲ ! ಪ್ರೊ. ಭಗವಾನ್ ಪ್ರೊ.ಕೆ.ಎಸ್.ಭಗವಾನ್ ಹಲವರಿಗೆ…
ಪಂಚಮಸಾಲಿ ಮೀಸಲಾತಿ ಹೋರಾಟ ರಂಭಾಪುರಿ ಶ್ರೀಗಳಿಗೆ ಕಳವಳ ?!
ಒಣ ಪ್ರತಿಷ್ಠೆಗಳನ್ನು ಬಿಡಿರಿ,ಬಸವಮಾರ್ಗಕ್ಕೆ ಬನ್ನಿ ಬಾಳೆಹೊನ್ನುರಿನ ರಂಭಾಪುರಿ ಪೀಠದ ಜ. ವೀರಸೋಮೇಶ್ವರ ಶಿವಾಚಾರ್ಯರು ಜಾತಿ ಆಧಾರಿತ ಮೀಸಲಾತಿ ಸರಿಯಲ್ಲ ಎಂದು ಪತ್ರಿಕಾ…
ವೇದವೆಂಬುದು ಓದಿನ ಮಾತು ಇದು ವಾಸ್ತವ ಸತ್ಯ
ವೇದವೆಂಬುದು ಓದಿನ ಮಾತು ಇದು ವಾಸ್ತವ ಸತ್ಯ ಸತ್ಯಂಪೇಟೆ : ವಿಶ್ವ ಹಿಂದೂ ಪರಿಷತ್ತಿಗೂ ನಿಮಗೂ ಇರುವ ಸಂಬಂಧ ಹೇಗೆ ?…
ಭಗವಾನ್ ರ ಮೇಲಿದ ದೌರ್ಜನ್ಯ ಖಂಡನೀಯ
ಬಹುತೇಕರು ಬಲ್ಲಂತೆ ಪ್ರೊ.ಕೆ.ಎಸ್.ಭಗವಾನ ಒಬ್ಬ ನ್ಯಾಯ ನಿಷ್ಠುರ ಬರಹಗಾರ.ಇತಿಹಾಸವನ್ನು ಸರಿಯಾಗಿ ಅಧ್ಯಯನ ಮಾಡಿರುವ ವ್ಯಕ್ತಿ. ಆದರೆ ಅವರ ಸತ್ಯದ ಪರ ಧೋರಣೆ…
ಅಪ್ರಾಪ್ತ ಬಾಲಕಿಯೊಂದಿಗೆ ಮಠಾಧೀಶರ ಡಿಂಗ್ ಡಾಂಗ್. ಪೀಠ ತ್ಯಾಗ ಮಾಡಿಸಿದ ಗ್ರಾಮಸ್ಥರು !
ಬಸವಕಲ್ಯಾಣ: ಅಪ್ರಾಪ್ತ ಬಾಲಕಿಯೊಬ್ಬಳ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಸ್ವಾಮಿಜಿಯೊಬ್ಬರನ್ನು ಮಠದಿಂದ ಪೀಠ ತ್ಯಾಗ ಮಾಡಿಸಿದ ಘಟನೆ ತಾಲೂಕಿನ ಗಡಿಗೌಂಡಗಾಂವ ಗ್ರಾಮದಲ್ಲಿ…
ತತ್ವಗಳಿಗೆ ಬದ್ಧರಾಗದ ಮಠಾಧೀಶರೂ , ಬಸವ ತತ್ವವೂ
ತತ್ವಗಳಿಗೆ ಬದ್ಧರಾಗದ ಮಠಾಧೀಶರೂ , ಬಸವ ತತ್ವವೂ ಬಸವಾದಿ ಶರಣರ ವಿಚಾರಧಾರೆಯ ಅವಶ್ಯಕತೆ ಎಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತ ಎಂಬ ಸಂಗತಿ…
ರಾಜಕಾರಣ ಧರ್ಮವನ್ನು ನುಂಗಬಾರದು
ಸತ್ಪುರುಷರಿಂದ ಸಿದ್ಧಾಂತವು ಹುಟ್ಟುತ್ತದೆ; ರಾಜಕಾರಣಿಯಿಂದ ಸಾಯುತ್ತದೆ ಎಂಬ ನುಡಿಯಿದೆ. ನಾಲ್ಕೈದು ವರ್ಷಗಳ ಹಿಂದೆ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಲಿಂಗಾಯತ ಸ್ವತಂತ್ರಧರ್ಮ ಕುರಿತಾದ…
ಮುರಗೋಡದ ಶರಣ ಮಹಾದೇವಪ್ಪ ವಾಲಿ
ಅಪ್ಪ ಲಿಂಗಣ್ಣ ಸತ್ಯಂಪೇಟೆ ನನಗೆ ಬಸವಾದಿ ಶರಣರ ಚಿಂತನೆಗಳ ಹುಚ್ಚು ಹಿಡಿಸಿ ಬಿಟ್ಟಿದ್ದಾರೆ. ಆದ್ದರಿಂದ ತಲೆ ಕೆಟ್ಟವರಂತೆ ಮನೆಯಲ್ಲಿ ಮಹಾಮನೆ, ಬಸವ…
ಪ್ರಶ್ನೆಗಳು ಅರ್ಥವಾಗದ ಭಾರತದಲ್ಲಿ ವಾಸಿಸುತ್ತಿದ್ದೇವೆ
ಶಹಾಪುರ : ೨೭ : ಪ್ರಶ್ನೆಗಳು ಅರ್ಥವಾಗದಿರುವ ಭಾರತದಲ್ಲಿ ನಾವು ವಾಸಿಸುತ್ತಿದ್ದೇವೆ. ಮೊದಲು ಪ್ರಶ್ನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಪ್ರಶ್ನೆಗಳು ನಮಗೆ…
ವಿಜ್ಞಾನ ನೇಣು ಹಾಕಿಕೊಂಡಿತು !?
ನೀವು ಅಳ್ಳೆದೆಯವರಾಗಿದ್ದರೆ ಇದನ್ನು ಓದಲೇಬೇಡಿ. ಈ ಇಬ್ಬರು ಹೆಣ್ಣುಮಕ್ಕಳ ಅಪ್ಪ ಅಮ್ಮ ಸಿಕ್ಕಾಪಟ್ಟೆ ಓದಿಕೊಂಡವರು. ತಾಯಿಯಂತೂ ಗೋಲ್ಡ್ ಮೆಡಲಿಸ್ಟ್. ಈ ಹುಡುಗಿಯರಲ್ಲಿ…
ಧಾರ್ಮಿಕ ಸ್ಥಾವರಗಳಿಗೆ ದೇಣಿಗೆ ನೀಡಲಾರೆ !
ನಾನು ಬಸವವಾದಿ ಸ್ಥಾವರಕ್ಕೆ ದೇಣಿಗೆ ನೀಡಲಾರೆ ! ೧) ಸ್ಥಾವರಗಳು ಉಳ್ಳವರಿಗಾಗಿ ,ಅವರ ಮೇಲಿರಿಮೆ ಮೆರೆಯಲಿಕ್ಕಾಗಿ. ಹಾಗಾಗಿ ನಾನು ಯಾವುದೆ ಸ್ಥಾವರ…
ಇತಿಹಾಸದ ಪ್ರಜ್ಞೆ ಇಲ್ಲದ ಲಿಂಗಾಯತ ಜನಾಂಗ
ಹಿಂದಣ ಹೆಜ್ಜೆಯನರಿಯದೆ ಮುಂದಡಿ ಇಡಲಾಗದು ಎಂದು ಅಲ್ಲಮಪ್ರಭುಗಳು ಹೇಳಿದ ವಚನದ ಸಾಲನ್ನು ಲಿಂಗಾಯತರು ಅರ್ಥ ಮಾಡಿಕೊಂಡಿದ್ದರೆ ಖಂಡಿತವಾಗಿಯೂ ಸನಾತನವಾದಿಗಳಾಗಿ ಪರಿವರ್ತನೆಯಾಗುತ್ತಿರಲಿಲ್ಲ. ತನ್ನ…
ಧರ್ಮ ಇರುವುದು ಬೆಳೆಯಬೇಕಾದುದು ಕಟ್ಟಡಗಳಿಂದ ಅಲ್ಲ
ಬಹು ಸಂಖ್ಯಾತ ಜನ ಒಪ್ಪುವ ವಿಚಾರಗಳನ್ನು ಜಾರಿಗೆ ತರಬೇಕು ಎಂಬುದೆ ಮೊದಲ ತಪ್ಪು. ಬಹು ಸಂಖ್ಯಾತರು ಒಪ್ಪುವ ವಿಚಾರಗಳನ್ನು ಜಾರಿಗೆ ತರುವುದರಿಂದ…
ಹುಲಿಕಲ್ ನಟರಾಜ ಕರ್ಣಧಾರತ್ವದಲ್ಲಿ ಕ.ರಾ. ವಿಜ್ಞಾನ ಸಂಶೋಧನಾ ಪರಿಷತ್ತು
ಬಂಟತನವ ಮಾಡಬೇಕೆಂದು, ಬಟ್ಟೆಯ ಬಡಿಯಬೇಕೆಂದು,ಕೆಟ್ಟದುದನರಸಬೇಕೆಂದು, ಕೊಟ್ಟುದ ಬೇಡಬೇಕೆಂದು,ಮುಂಜಾವದಲೇಳುವರಯ್ಯಾ, ಹಲಬರು ಕೆಲಬರು.ಆಹಾರವನುಣಬೇಕೆಂದು, ವ್ಯವಹಾರವ ಮಾಡಬೇಕೆಂದು,ಆ ಹೆಣ್ಣ ತರಬೇಕೆಂದು, ಈ ಹೆಣ್ಣ ಕೊಡಬೇಕೆಂದು,ಮುಂಜಾವದಲೇಳುವರಯ್ಯಾ, ಹಲಬರು…
ಮನದ ಕಳವಳ ದೂರವಾಗುವ ಬಗೆ ಹೇಗೆ ?
ಮನುಷ್ಯನ ಮನಸ್ಸು ಪಾದರಸಕ್ಕಿಂತಲೂ ತೀಕ್ಷ್ಣವಾಗಿ ಹರಿದಾಡುವಂತಹದ್ದು. ಇದನ್ನು ಹಿಡಿದು ನಿಲ್ಲಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಮನಸ್ಸನ್ನು ಹಿಡಿದಿಡಲು ನನಗೆ ಸಾಧ್ಯವೆಂದು ಹೇಳಿದವರು ತುಂಬಾ…
ನನ್ನ ಲೇಖನಿಯನ್ನು ಬದಿಗಿಟ್ಟು ಮಂಡಿಯೂರುತ್ತೇನೆ,ಯಾಕೆ ಗೊತ್ತೆ ?
ನನ್ನ ಲೇಖನಿಯನ್ನು ಬದಿಗಿಟ್ಟು ಮಂಡಿಯೂರುತ್ತೇನೆ.ಯಾಕೆ ಗೊತ್ತೆ ? ನಾನು ಈ ಹಿಂದೆ ಒಂದೆರಡು ಪ್ರಕರಣಗಳಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆಕೋರಿದ್ದೆ. ಮುಂದೆಯೂ…
*ಉಡುತಡಿ ಅಕ್ಕನ ದೇವಾಲಯ ರಕ್ಷಿಸಿದ್ದು ಶ್ರೀ ತರಳಬಾಳು ಹಿರಿಯ ಜಗದ್ಗುರುಗಳು*
ಅಕ್ಕನಿಗೆ ಲಿಂಗದೀಕ್ಷೆಯಿತ್ತ ಗುರು ವಿಶ್ವಬಂಧು ಮರುಳಸಿದ್ದರು..! *ಉಡುತಡಿ ಅಕ್ಕನ ದೇವಾಲಯ ರಕ್ಷಿಸಿದ್ದು ಶ್ರೀ ತರಳಬಾಳು ಹಿರಿಯ ಜಗದ್ಗುರುಗಳು* ಕನ್ನಡದ ಪ್ರಪ್ರಥಮ ಕವಿಯಿತ್ರಿ…
*ಲಿಂಗಾಯತರು ಬ್ರಾಹ್ಮಣೀಕೃತ ಹಿಂದು ಧರ್ಮದ ಒಂದು ಭಾಗವೆ?*
ಮೈಸೂರು ಜನಗಣತಿಯ ಮಹತ್ವ (1871) *ಲಿಂಗಾಯತರು ಬ್ರಾಹ್ಮಣೀಕೃತ ಹಿಂದು ಧರ್ಮದ ಒಂದು ಭಾಗವೆ?* ಇತ್ತೀಚಿನ ದಿನಗಳಲ್ಲಿ (ಅಂದರೆ 21ನೇ ಶತಮಾನದ ಎರಡನೇ…
*ಎರಡು ಕಾಲಿನವರನ್ನು ನಾಲ್ಕು ಕಾಲು ಮಾಡುವ ಪ್ರಯತ್ನ ಮಾಡಿದರೆ, ತಾವು ಗಣಾಚಾರಿಗಳಾಗಿ*
*ಎರಡು ಕಾಲಿನವರನ್ನು ನಾಲ್ಕು ಕಾಲು ಮಾಡುವ ಪ್ರಯತ್ನ ಮಾಡಿದರೆ, ತಾವುಗಳು ಗಣಾಚಾರಿಗಳಾಗಿ* 12ನೇ ಶತಮಾನದ ಕಲ್ಯಾಣ ಕ್ರಾಂತಿಯಾದ ಮೇಲೆ, ಗುರು ಬಸವಣ್ಣ…
*ಪರುಷ ಕಟ್ಟೆಯ ಮೇಲೆ ದನ (ನಂದಿ) ದ ವಿಗ್ರಹ ಇಡಲು ಪುರೋಹಿತಶಾಹಿಗಳ ಹುನ್ನಾರ*
*ಪರುಷ ಕಟ್ಟೆಯ ಮೇಲೆ ದನ (ನಂದಿ) ದ ವಿಗ್ರಹ ಇಡಲು ಪುರೋಹಿತಶಾಹಿಗಳ ಹುನ್ನಾರ* ~ಡಾ. ಜೆ ಎಸ್ ಪಾಟೀಲ. ಬಸವಣ್ಣನವರು ಮತ್ತು…
*ಉಂಡುಂಡು ಮಲಗಿರುವ ಮಠಾಧೀಶರೆ ದಯವಿಟ್ಟು ಶರಣರ ಸ್ಮಾರಕಗಳ ರಕ್ಷಿಸಿರಿ*
*ಉಂಡುಂಡು ಮಲಗಿರುವ ಮಠಾಧೀಶರೆ ದಯವಿಟ್ಟು ಶರಣರ ಸ್ಮಾರಕಗಳ ರಕ್ಷಿಸಿರಿ* ಬಸವಣ್ಣನವರನ್ನು ಮಾದಲಾಂಬಿಕೆ ತಾಯಿ ಹೆತ್ತಿರಬಹುದು. ಆದರೆ ಆ ಕ್ರಾಂತಿ ಪುರುಷರನ್ನು ಕಾಪಿಟ್ಟು…
*ಜ್ಯೋತಿಯ ಮುಟ್ಟಿದ ಜ್ಯೋತಿಯಂತಾಗ್ಯಾರೊ*
*ಜ್ಯೋತಿಯ ಮುಟ್ಟಿದ ಜ್ಯೋತಿಯಂತಾಗ್ಯಾರೊ* ಕಲ್ಯಾಣ ಬಸವಣ್ಣನ ಕಾರುಣ್ಯಕೆ ಮಾರು ಹೋಗಿ ಕಲ್ಯಾಣ ಕಡೆಗೆ ಮುಖಮಾಡಿ/ ಶರಣ ಬಸವ ಬಸವನ ಮಾರ್ಗ ಹಿಡದಾರೋ…
*ಹೆಣ್ಣು ಕನಿಷ್ಠ, ಗಂಡು ಶ್ರೇಷ್ಠ ಎಂಬ ಅಹಂ ಏನೆಲ್ಲ ದರ್ಪ ದೌರ್ಜನ್ಯದ ನಡೆಗೆ ಕಾರಣವಾಗುತ್ತಿದೆ*
*ಹೆಣ್ಣು ಕನಿಷ್ಠ, ಗಂಡು ಶ್ರೇಷ್ಠ ಎಂಬ ಅಹಂ ಏನೆಲ್ಲ ದರ್ಪ ದೌರ್ಜನ್ಯದ ನಡೆಗೆ ಕಾರಣವಾಗುತ್ತಿದೆ* ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ.…
*ಬಸವಣ್ಣನವರ ಪರುಷ ಕಟ್ಟೆಯಲ್ಲಿ ನಂದಿಯ ಮೂರ್ತಿ ಇರಬೇಕೆ ?*
*ಬಸವಣ್ಣನವರ ಪರುಷ ಕಟ್ಟೆಯಲ್ಲಿ ನಂದಿಯ ಮೂರ್ತಿ ಇರಬೇಕೆ ?* ಬಸವ ಧರ್ಮ ರಕ್ಷಣೆಗಾಗಿ ಗುರು ಲಿಂಗಾನಂದ ಅಪ್ಪಾಜಿ ಯವರ ಹಾಗೂ ಗುರು…
*ಮಾನವ ಜೀವನವೆ ಪಾಕವಾಗಿ ಪ್ರಸಾದವಾಗಬೇಕು*
*ಮಾನವ ಜೀವನವೆ ಪಾಕವಾಗಿ ಪ್ರಸಾದವಾಗಬೇಕು* ೧೨ನೇ ಶತಮಾನದಲ್ಲಿ ಬಸವ ಬೆಳಕಿನ ಬೆಳಗಿನಲ್ಲಿ ಬೆಳಕಾದ ಜೀವಗಳಲ್ಲಿ ಬಿಬ್ಬಿ ಬಾಚಯ್ಯ ಅಪರೂಪದ ವ್ಯಕ್ತಿ ಯಾದವರು.…
*ಸ್ತ್ರೀ_ಕುಲೋದ್ದಾರಕ_ಅಪ್ಪ_ಗುರು ಬಸವಣ್ಣನವರು*
*ಸ್ತ್ರೀ_ಕುಲೋದ್ದಾರಕ ಬಸವಣ್ಣನವರು* ಈ ಸಮಾಜದಲ್ಲಿ ಹೆಣ್ಣು ಅಂದರೆ ಹುಣ್ಣು ಅಂತ ತಿಳಿದ್ದರು ಮನುಪದ್ದತಿಗೊಳಾಗಿದ್ದವಳು ದೇವದಾಸಿ ಪದ್ದತಿ ಸತಿಹಗಮ ಪದ್ದತಿ ಬಾಲ್ಯವಿವಾಹ ಪದ್ದತಿ…