*ಉಡುತಡಿ ಅಕ್ಕನ ದೇವಾಲಯ ರಕ್ಷಿಸಿದ್ದು ಶ್ರೀ ತರಳಬಾಳು ಹಿರಿಯ ಜಗದ್ಗುರುಗಳು*

ಅಕ್ಕನಿಗೆ ಲಿಂಗದೀಕ್ಷೆಯಿತ್ತ ಗುರು ವಿಶ್ವಬಂಧು ಮರುಳಸಿದ್ದರು‌..!

*ಉಡುತಡಿ ಅಕ್ಕನ ದೇವಾಲಯ ರಕ್ಷಿಸಿದ್ದು ಶ್ರೀ ತರಳಬಾಳು ಹಿರಿಯ ಜಗದ್ಗುರುಗಳು*

ಕನ್ನಡದ ಪ್ರಪ್ರಥಮ ಕವಿಯಿತ್ರಿ ಶರಣೆ ಅಕ್ಕಮಹಾದೇವಿ ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಹೀಗೆ ಹಲವು ರೀತಿ ಗುರುತಿಸಬಹುದಾಗಿದೆ. ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು. ಸಾಕ್ಷಾತ್ ಶಿವ (ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ, ಹಲವಾರು ಭಕ್ತರಿಗೆ ಮಾದರಿಯಾಗಿದ್ದಾಳೆ.

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಮೂಲಪುರುಷರಾದ ಶ್ರೀ ವಿಶ್ವಬಂಧು ಮರುಳಸಿದ್ದರಿಂದ ಲಿಂಗದೀಕ್ಷೆ ಪಡೆದ ಅಕ್ಕಮಹಾದೇವಿಯವರು ಜನಿಸಿದ್ದು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ-ಶಿರಾಳ ಕೊಪ್ಪದ ನಡುವೆ ಇರುವ ಉಡುತಡಿ ಅಥವಾ ಉಡಗಣಿ ಇಲ್ಲವೆ ಉಡುಗಣಿ ಎಂದೇ ಪ್ರಸಿದ್ದವಾಗಿರುವ ಪುಟ್ಟ ಗ್ರಾಮದಲ್ಲಿ. ಇದೀಗ ಇದು ಪ್ರವಾಸಿ ತಾಣವಾಗಿಯೂ ಪ್ರಸಿದ್ದವಾಗಿದೆ. ಪರರ ಪಾಲಾಗಿದ್ದ ಇಲ್ಲಿರುವ ಕೌಶಿಕ ಮಹಾರಾಜರ ಕೋಟೆ ಹಾಗೂ ಅಕ್ಕನ ದೇವಸ್ಥಾನ ಇರುವ ಜಮೀನನ್ನು ಉಳಿಸಲು ಪ್ರಯತ್ನಿಸಿ, ಹೋರಾಟ ನಡೆಸಿ, ಯಶಸ್ವಿ ಯಾಗಿದ್ದು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು ಹಾಗೂ ಹಿರೇ ಜಂಬೂರಿನ ಸ್ವಾತಂತ್ರ ಹೋರಾಟಗಾರರು. ಇದನ್ನು ಇವರು ಉಳಿಸಿ ಕೊಟ್ಟ ನಂತರ ಸರಕಾರ ಇತ್ತ ಗಮನ ಹರಿಸಿ,ಅದರ ಅಭಿವೃದ್ದಿಗೆ ಮುಂದಾಗಿದೆ. ಇಂತಹ ಉಡುತಡಿಯಿಂದ ಎಲ್ಲವನ್ನೂ ತ್ಯಜಿಸಿ ಹೊರಟ ಅಕ್ಕಮಹಾದೇವಿಯವರು ಮುಂದೆ ಬಸವ ಕಲ್ಯಾಣದ ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ ಸಿದ್ಧರಾಮ ಮೊದಲಾದ ಶರಣರೊಡನೆ ಕಲ್ಯಾಣದ ಕ್ರಾಂತಿಯಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡರಲ್ಲದೇ,ತಮ್ಮನ್ನು ತಾವೂ ತೊಡಗಿಸಿಕೊಂಡರಲ್ಲದೇ,ಚನ್ನಮಲ್ಲಿಕಾರ್ಜುನ” ಎಂಬ ಅಂಕಿತ ನಾಮದಲ್ಲಿ ವಚನ ಸಾಹಿತ್ಯಕ್ಕೆ ಸಾಹಿತ್ಯ ಅನುಪಮ ಕೊಡುಗೆ ನೀಡಿದ್ದಾರೆ.

ಅಕ್ಕನ 62 ಅಡಿ ಎತ್ತರದ ಪ್ರತಿಮೆ, ದೆಹಲಿಯ ಅಕ್ಷರಧಾಮ ಮಾದರಿ ಉದ್ಯಾನವನ ಇಂದು ಅವರ ಜನ್ಮಸ್ಥಳ ಉಡುತಡಿಯಲ್ಲಿ ಅನಾವರಣಗೊಳ್ಳಲಿದೆ. ಈ ಕಾರ್ಯಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು.

4 thoughts on “*ಉಡುತಡಿ ಅಕ್ಕನ ದೇವಾಲಯ ರಕ್ಷಿಸಿದ್ದು ಶ್ರೀ ತರಳಬಾಳು ಹಿರಿಯ ಜಗದ್ಗುರುಗಳು*

  1. ತರಳಬಾಳು ಹಿರಿಯ ಜಗದ್ಗುರುಗಳ ಬಸವ ತತ್ವ ಪರ ಹೋರಾಟ ಶರಣರ ಸ್ಮಾರಕಗಳ ರಕ್ಷಣೆ ಚಿಂತನೆ ಗಮನಾರ್ಹವಾದದ್ದು ಇಂದು ಲೋಕಾರ್ಪಣೆಗೊಳ್ಳುತ್ತಿರುವ ಜಗದಕ್ಕನ ಭವ್ಯ ಮೂರ್ತಿ ಎಲ್ಲರ ಗಮನ ಸೆಳೆಯುತ್ತಿದೆ ಆದರೆ ನನಗೆ ಹೊಡೆದದ್ದು ಈ ರೀತಿ ದಿಗಂಬರೆಯಾಗಿ ಕೇಶದಿಂದ ದೇಹವನ್ನು ಮರೆಮಾಚಿರುವ ಮೂರ್ತಿಗಿಂತ ಬಿಳಿಯ ಸೀರೆಯನ್ನುಟ್ಟ ಅಕ್ಕನ ಮೂರ್ತಿ ಅಕ್ಕನ ವೈರಾಗ್ಯಕ್ಕೆ ಕಳಶ ವಿಟ್ಟಂತಿರುತ್ತಿತ್ತು ಏನಾದರೂ ಸರಿ ಒಟ್ಟಿನಲ್ಲಿ ಅಕ್ಕನ ಹುಟ್ಟೂರಿನಲ್ಲಿ ಇಂತಹ ಸುಂದರ ಆಧ್ಯಾತ್ಮಿಕ ಪ್ರವಾಸಿ ತಾಣ ಜಗದ ಕಣ್ಮನ ಸೆಳೆಯಲಿ

    1. Think Sujata, which is more challenged life, without cloth is more powerful than white Sarry. They did Justice to Akkamahadevi life…

  2. ವೈರಾಗ್ಯನಿಧಿ ಅಕ್ಕ ಮಹಾದೇವಿ ಕನ್ನಡದ ಮೊದಲ ಶ್ರೇಷ್ಟ ಕವಿಯಿತ್ರಿ ಪುತ್ಥಳಿ ಅನಾವರಣಗೊಂಡು ವಿಶ್ವಕ್ಕೆ ಮಾದರಿಯಾಗಿದೆ. ಅವರ ವಚನಗಳು ವಿಶ್ವದಾದ್ಯಂತ ಹರಡಿ ಲೋಕೊದ್ಧಾರವಾಗಬೇಕಾಗಿದೆ .🙏🙏🙏

  3. ವೈರಾಗ್ಯನಿಧಿ ಅಕ್ಕ ಮಹಾದೇವಿ ಕನ್ನಡದ ಮೊದಲ ಶ್ರೇಷ್ಟ ಕವಿಯಿತ್ರಿಯವರ ಪುತ್ಥಳಿಯು ಅನಾವರಣಗೊಂಡು ವಿಶ್ವಕ್ಕೆ ಮಾದರಿಯಾಗಿದೆ.ಅವರ ವಚನಗಳು ವಿಶ್ವದಾದ್ಯಂತ ಹರಡಿ ಲೋಕೊದ್ಧಾರವಾಗಬೇಕಾಗಿದೆ

Leave a Reply

Your email address will not be published. Required fields are marked *

error: Content is protected !!