*ಎರಡು ಕಾಲಿನವರನ್ನು ನಾಲ್ಕು ಕಾಲು ಮಾಡುವ ಪ್ರಯತ್ನ ಮಾಡಿದರೆ, ತಾವು ಗಣಾಚಾರಿಗಳಾಗಿ*

*ಎರಡು ಕಾಲಿನವರನ್ನು ನಾಲ್ಕು ಕಾಲು ಮಾಡುವ ಪ್ರಯತ್ನ ಮಾಡಿದರೆ, ತಾವುಗಳು ಗಣಾಚಾರಿಗಳಾಗಿ*

12ನೇ ಶತಮಾನದ ಕಲ್ಯಾಣ ಕ್ರಾಂತಿಯಾದ ಮೇಲೆ, ಗುರು ಬಸವಣ್ಣ ಹಾಗೂ ಬಸವಾದಿ ಶರಣನ್ನು ಹೆಸರುಗಳನ್ನು ಹೇಳುವುದು ಅಥವಾ ಅವರ ಬಗ್ಗೆ ಮಾತನಾಡುವುದೇ ಶಿಕ್ಷಾರ್ಯ ಅಪರಾಧವಾಗುತ್ತು. ಗುರು ಬಸವಣ್ಣನವರು ಹಾಗೂ ಶರಣರನ್ನು ಜೀವಂತವಾಗಿಡುವುದು ಅನುಯಾಯಿಗಳಿಗೆ ಸಾವಲಾಗಿತ್ತು.

ಗುರು ಬಸವಣ್ಣನವರು ನಂದೀಶ್ವರ ವರಪ್ರಸಾದದಿಂದ ಹುಟ್ಟಿದರೆಂದು, ಬಸವಣ್ಣನವರು “ನಂದೀಶ್ವರ” ಮಾಚಿದೇವರು ವೀರಭದ್ರನ ಪ್ರತೀಕ ಎಂದು “ವೀರಭದ್ರ” ಗುಡಿಗಳನ್ನು ನಿರ್ಮಿಸಿದ್ದರು. ಇಂತಹ ಬಹಳಷ್ಟು ಗುಡಿಗಳು ಬಸವಕಲ್ಯಾಣದಿಂದ ಉಳಿವಿಯ ಹಾದಿಯಲ್ಲಿ ಇವೆ.

ಆದರೆ ತಾಳಿಕೋಟೆಯ ಬಳಿ ಇರುವ ಹಗರಟಗಿ (ಶಾಸನಗಳಲ್ಲಿ ಪಗರಟಗಿಎಂದು ಉಲ್ಲೇಖವಾಗಿದೆ) ಯಲ್ಲಿ ಅನೇಕ ದೇವಾಲಯಗಳು ಇವೆ, ಆ ದೇವಾಲಯಗಳಲ್ಲಿ ಶಿಲಶಾಸನಗಳಿವೆ. ಗರ್ಭಗುಡಿಯಲ್ಲಿ ಶಿವಲಿಂಗ ಇದ್ದರೂ ದೇವಾಲಯಗಳಿಗೆ ಭೀಮನ ಗುಡಿ ಹಾಗೂ ಇತರ ಹೆಸರುಗಳಿಂದ ಕರೆಯುತ್ತಾರೆ.

ಈ ಹಾದಿಯಲ್ಲಿರುವ ಗುಡಿಗಳ ನಂದೀಶ್ವರನ ತಲೆ ಒಡೆದು ಹಾಕಲಾಗಿದ್ದೂ ಮೂಲ ವಿಗ್ರಹಕ್ಕೆ ಯಾವುದೇ ಹಾನಿಯಾಗಿಲ್ಲ.

ಗುರು ಬಸವಣ್ಣನವರ ಪ್ರತೀಕ ನಂದೀಶ್ವರನ ತಲೆಯನ್ನು ಹೊಡೆಯುವ ಯೋಜನೆ (Scheme) ಬಹಳ ಚನ್ನಾಗಿ ಕೆಲಸ ಮಾಡಿದೆ.

ನಂದೀಶ್ವರನ ಕೊರಳಲ್ಲಿ ಬಂಗಾರ ಇದೆ ಎಂದು ಪ್ರಚಾರ ಮಾಡಿ, ನಂದೀಶ್ವರನ ತಲೆಯನ್ನು ಹೊಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ಭಾಗಗಳಲ್ಲಿ ಕಾಣಬಹುದಾಗಿದೆ

ಶಿಕ್ಷಣ ನಮ್ಮ ಹಕ್ಕು ಎಂದು ಶತಮಾನಗಳಿಂದ ಶೂದ್ರರಿಗೆ ಶಿಕ್ಷಣ ವಂಚನೆ ಮಾಡಿದ್ದರೂ ಬ್ರಿಟಿಷರ ಕೃಪಾಕಟಾಕ್ಷದಿಂದ ಸರ್ವರಿಗೂ ಶಿಕ್ಷಣ ಸಿಕ್ಕಿ ವಿದ್ಯಾವಂತರಾಗಿದ್ದಾರೆ.

21ನೆಯ ಶತಮಾನದಲ್ಲಿಯೂ ರಣಹೇಡಿಗಳಂತೆ ಗುರು ಎರಡು ಕಾಲಿನ ಗುರು ಬಸವಣ್ಣನವರನ್ನು ನಾಲ್ಕು ಕಾಲಿನ ಏತ್ತು – ನಂದಿ ಎಂದು ಹೇಳುವವರು ಕಲಬರಕೆಯವರು. ಎರಡು ಕಾಲಿನನವರನ್ನು ನಾಲ್ಕು ಕಾಲಿನವರೆಂದು ಈಗಲೂ ನಂಬುವವರು ಶತಮೂರ್ಖರು.

ಗುರು ಬಸವಣ್ಣನವರು ನಂದೀಶ್ವರನ ವರಪ್ರಸಾದದಿಂದ ಹುಟ್ಟಿದ್ದಾರೆ ಮಾದಲಾಂಬಿಕೆಯ ನಂಬಿಕೆ ಹೊರತು ಬಸವಣ್ಣ ನಂದಿ ಅಥವಾ ಏತ್ತು ಅಲ್ಲ.

ಇನ್ನೂ ಮುಂದೆ ಯಾರೇ ಎರಡು ಕಾಲಿನವರನ್ನು ನಾಲ್ಕು ಕಾಲು ಮಾಡುವ ಪ್ರಯತ್ನ ಮಾಡಿದರೆ, ತಾವುಗಳು ಗಣಾಚಾರಿಗಳಾಗಿ ತಮ್ಮ ಕಾಲಿನ ಪಾದರಕ್ಷಯಿಂದ ಬಾರಿಸಿ.

ಹಾಗೆಯೇ ಕ್ರಾಂತಿಯ ನಂತರ, ಶರಣರ ಅನುಯಾಯಿಗಳು ಭಯಭೀತರಾಗಿ, ತಾಡೋಲೆಗಳ ರಕ್ಷಣೆಗೆ ಮುಂದಾಗಿ, ಮನೆಯ ಗೋಡೆಗಳಲ್ಲಿ ( ಈಗಲೂ ಹಲವು ಕಡೆ ಗೋಡೆಗಳಿಗೆ ಪೂಜೆ ಮಾಡುವುದು ಇದೇ ಕಾರಣದಿಂದ) ಹಾಗೂ ಭೂಮಿ ಒಳಗೆ ಮರೆಮಾಚಿ ದ್ದರಿಂದ ತಾಡೋಲೆಗಳಲ್ಲಿದ್ದ ಶರಣಸಾಹಿತ್ಯ ಭೂಗತ ಆಗಿತ್ತು. ಮತ್ತೆ ವಿಜಯನಗರದ ಪ್ರೌಢಲಾಯನ ಕಾಲದಲ್ಲಿ ಮತ್ತೆ ಶರಣಸಾಹಿತ್ಯ ಬೆಳಕಿಗೆ ಬಂದಿದೆ. ಆದರೆ 12ನೆಯ ಶತಮಾನದಿಂದಲೇ ನಿರಂತರವಾಗಿ ಶರಣಸಾಹಿತ್ಯವನ್ನು ತೀರಿಚಲಾಗಿದೆ.

ಆದರೆ ಗುರು ಬಸವಣ್ಣನವರು ಶರಣಸಾಹಿತ್ಯ ಎಂಬ ವಿಶ್ವದಾದ್ಯಂತ ಬಿತ್ತಿದ್ದೂ, ಬೀಜಗಳು ಈಗ ಫಲ ನೀಡಲಿವೆ. ಅಂದು ವಿಶ್ವದಾದ್ಯಂತ ಪ್ರಚಾರ ಮಾಡದ್ದ ಜಂಗಮರು ಎಲ್ಲಾ ಭಾಗಗಲ್ಲಿ ತಾಡೋಲೆ ಪ್ರತಿಗಳನ್ನು ಮಾಡಿದ್ದರಿಂದ, ಇಂದಿಗೂ ವಿಶ್ವದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಭಾಷೆ ತಾಡೋಲೆಗಳು ಇವೆ. ಕನ್ನಡ ಭಾಷೆ ತಾಡೋಲೆ ಎಂದರೆ ಶೇಕಡ 90% ರಷ್ಟು ಶರಣ ಸಾಹಿತ್ಯವೇ ಇರಲಿದೆ.

ಇಲ್ಲಿಯವರೆಗೆ ವಿದೇಶಗಳಲ್ಲಿ ಕಾರ್ಯಕ್ರಮ ಕೊಟ್ಟಿರುವ ಅಥವಾ ಆ ದೇಶಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವವರು ಒಮ್ಮೆ ಯಾದರೂ ಆ ದೇಶದಲ್ಲಿ ಶರಣಸಾಹಿತ್ಯ ಬಗ್ಗೆ ವಿಚಾರಣೆ ಮಾಡಬೇಕಿತ್ತು ಎಂಬುವುದು ನನ್ನ ಅನಿಸಿಕೆ.

 

ಅಶೋಕ ದೊಮ್ಮಲೂರು

One thought on “*ಎರಡು ಕಾಲಿನವರನ್ನು ನಾಲ್ಕು ಕಾಲು ಮಾಡುವ ಪ್ರಯತ್ನ ಮಾಡಿದರೆ, ತಾವು ಗಣಾಚಾರಿಗಳಾಗಿ*

  1. Sharana Ashok Dommaluru is a renowned field researcher in history and Vachan literature of 12 th century Sharana . We are thankful to you for publishing his article. We request you to publish his articles in future.

Leave a Reply

Your email address will not be published. Required fields are marked *

error: Content is protected !!