ಮಾಗಿದಂತೆಲ್ಲ ಮಗುವಂತಾದವರು ಲಿಂಗಣ್ಣ ಮಾಸ್ತರ

ಮಾಗಿದಂತೆಲ್ಲ ಮಗುವಂತಾದವರು

ನಮ್ಮ ಲಿಂಗಣ್ಣ ಮಾಸ್ತರ


ಉನ್ನತ ಪದವಿ ಇಲ್ಲ, ಅಧಿಕಾರವಂತು ಮೊದಲೇ ಇಲ್ಲ. ಇದ್ದ ಸರಕಾರಿ ಶಾಲೆಯ ,ಕನ್ನಡ ಮಾಸ್ತರ ನೌಕರಿ ಬಿಟ್ಟು ಹೈದರಾಬಾದ ಕರ್ನಾಟಕ ಇಂದಿನ ಕಲ್ಯಾಣ ಕರ್ನಾಟಕದ ಬೀದರ,ಕಲಬುರಗಿ, ಯಾದಗಿರಿ, ರಾಯಚೂರ, ಬಿಜಾಪುರಗಳಿಂದ ಲಂಕೇಶ್ ಹಾಗೂ ಇನ್ನಿತರ ಪತ್ರಿಕೆಗಳಿಗೆ ವರದಿಗಾರರಾಗಿ ಕೆಲಸ ಮಾಡುತ್ತಿದ್ದವರು. ದಿಟ್ಟ ಬರಗಾರ, ಪತ್ರಕರ್ತರಾಗಿದ್ದ ಅಪ್ಪ ಲಿಂಗಣ್ಣನವರು. ಕಂಡದನ್ನು ಕಂಡ ಹಾಗೆ ನಿರ್ಬೀತಿಯಿಂದ ಬರೆಯಬಲ್ಲವರಾಗಿದ್ದರವರು ಅವರು ಈ ನಾಡು ಕಂಡ ಅಪರೂಪದ ಪತ್ರಕರ್ತ ಮತ್ತು ಬಸವಾದಿಶರಣರ ತತ್ವ ಚಿಂತಕ ಹಾಗೂ ಪ್ರಸಾರಕರಾಗಿದ್ದರು.

ಜೀವನದುದ್ದಕ್ಕೂ ಬಸವಾದಿ ಶರಣರ ನಡೆ ನುಡಿ ಆಚಾರ ವಿಚಾರ ಮೈಗೂಡಿಸಿಕೊಂಡವರಾಗಿದ್ದರು. ಎಷ್ಟೇ ಕಷ್ಟ ಕಾರ್ಪಣ್ಯಗಳು ಬಂದರು ಅಂಜದೆ ಎದೆಗುಂದದೇ ದಿಟ್ಟತನದಿಂದಲೇ ಎದುರಿಸುವ ಎದೆಗಾರಿಕೆ ಅವರಲ್ಲಿತ್ತು. ಒಂದು ಕಾಲದಲ್ಲಿ ಇವರನ್ನು ಕಂಡರೆ ಕೆಲವು ರಾಜಕಾಣಿಗಳು ಮತ್ತು ಮಠಾಧೀಶರಿಗೆ ಭಯ. ಯಾಕೆಂದರೆ ಅವರುಗಳು ಮಾಡುತ್ತಿದ್ದ ಬಾರ ಬಾನಗಡಿಗಳನ್ನು ಯಾವುದೇ ಮುಲಾಜಿ ಇಲ್ಲದೆ ಬರೆಯುತ್ತಿದ್ದರು. ಲಿಂಗಣ್ಣ ಮಾಸ್ತರರು ಬಹಳ ಜನಕ್ಕೆ ಬಿಸಿ ತುಪ್ಪ ಆಗಿದ್ದರು. “ನ್ಯಾಯ ನಿಷ್ಠುರಿ ಶರಣ ದಾಕ್ಷಿಣ್ಯಪರನಲ್ಲ ಲೋಕವಿರೋಧಿ ಶರಣನಾರಿಗೂ ಅಂಜುವವನಲ್ಲ” ಎಂಬ ತತ್ವಗಳನ್ನು ಮೈಗೂಡಿಸಿಕೊಂಡವರು. ಹಾಗಾಗಿ ಹಲವರಿಗೆ ಲಿಂಗಣ್ಣನವರ ಬರಹವೆಂದರೆ ಬೆಂಕಿಯ ಉಂಡೆಯಂತೆ ಕಾಣುತ್ತಿತ್ತು. ೮೦ ರದಶಕದಲಂತೂ ಅವರ ಬರಹ ಎಷ್ಟೊಂದು ಪರಿಣಾಮಕಾರಿ ಯಾಗಿದ್ದವೆಂದರೆ ಕೆಲವು ರಾಜಕಾರಣಿಗಳಿಗೆ ಮರಳಿ ಮನೆಗೆ ಕಳಿಸಿದ್ದರು. ಕೆಲವು ಲೇಖನೆಗಳಿಂದ ಅಂದಿನಕಾಲದಲ್ಲಿ ರಾಜಕಾಣಿಗಳಿಗೆ ಸಾಧ್ಯವಾಗದಂತ ಕೆಲಸ ಕಾರ್ಯಗಳು ವರದಿ ಪ್ರಕಟಗೊಂಡನಂತರದ ಒಂದು ವಾರದೊಳಗೆ ಸಮಸ್ಯೆಗಳು ಪರಿಹಾರ ಕಾಣುತ್ತಿದ್ದು ನಾನು ಹಲವು ಬಾರಿ ಕಂಡಿದ್ದೇನೆ. ಹೌದು ಅಪ್ಪ ಲಿಂಗಣ್ಣನವರೊಂದಿಗೆ ಮಾತನಾಡಬೇಕಾದರಂತು ಒಂದು ರೀತಿ ಭಯ

ಮಾಸ್ತರ ಊರು,ಕೇರಿಗೆ ಬಂದಾನಂತ ಕೇಳಿದರೆ ಸಾಕು ಕೆಲವು ಜನರಿಗೆ ಭಯ ಇನ್ನು ಕೆಲವರಿಗೆ ಮೈನಡುಕ ತಾವುಗಳು ಮಾಡಿದ ಬಾರಾ ಬಾನಗಡಿಯನ್ನು ಎಲ್ಲಿ ಕೆದಕ್ಕುತ್ತಾರೆಂಬ ಭಯ ! ಇದರ ನಡುವೆ ಮಾಸ್ತರ ಬಂದ್ರೆ ಸಾಕು ಅವರಿ ಆತಿಥ್ಯ ಮಾಡುವುದೆ ಅವರುಗಳಿಗೆ ಸಂಭ್ರಮ.

ಬಸವಾದಿ ಶರಣರ ತತ್ವಗಳಿಗೆ ಮಾರು ಹೋಗಲು ಮೂಲಕಾರಣವೆಂದರೆ ಅವರ ತಂದೆಯವರಾದ ಗುರಪ್ಪ ಯಜಮಾನರು ಪ್ರಭುಲಿಂಗಲೀಲೆಯನ್ನು ನಿತ್ಯ ಪಾರಾಯಣ ಮಾಡುತ್ತಿದ್ದರಂತೆ. ಅದರ ಪ್ರಭಾವವೆ ಅಪ್ಪ ಲಿಂಗಣ್ಣನವರಿಗೆ ಶರಣ ತತ್ವಗಳ ಪ್ರೇರಣೆಯಾಯಿತು. ಶರಣತತ್ವ ಪ್ರಸಾರಕ್ಕಾಗಿ ಚರ ಜಂಗಮನಂತೆ ಹಗಲು ರಾತ್ರಿ ಎನ್ನದೆ ಊರು,ಕೇರಿಗಳಿಗೆ ತಿರುಗುತ್ತಾ ಜನರ ಬದುಕನ್ನು ಹಸನಗೊಳಿಸಲು ‘ಮನೆಯಲ್ಲಿ ಮಹಾಮನೆ’ ಎಂಬ ಕಾರ್ಯಕ್ರಗಳನ್ನು ಆಯೋಜನೆ ಮಾಡುತ್ತ ಉಪನ್ಯಾಸಗಳನ್ನು ಮಾಡುತ್ತಾ ಹೋದಂತೆಲ್ಲಾ ನಾಡಿನ ತುಂಬೆಲ್ಲ ಬಸವಾಭಿಮಾನಿಗಳ ದಂಡು ಬೆಳೆಯುತ್ತಾ ಹೋಯಿತ್ತು. ದಿನಕಳೆದಂತೆಲ್ಲ ಅವರ ವಿಚಾರಗಳು ಮತ್ತು ಬರಹಗಳು ಜನರ ಮೇಲೆ ಪ್ರಭಾವ ಬೀರುತ್ತಾ ಹೋದವು.

ಇವುಗಳನ್ನು ನಾನು ದೂರದಿಂದಲೇ ಗಮನಿಸುತ್ತಿದ್ದೆ. ಆದರೆ ಅವರ ಹತ್ತಿರ ಮಾತ್ರ ಹೋಗುತ್ತಿದ್ದಿಲ್ಲ. ಯಾಕೆಂದರೆ ಅವರನ್ನು ಕಂಡರೆ ಭಯ ಮತ್ತು ಆತಂಕ ಹಾಗೂ ಮೈಗಳತನವು ಹೌದು. ಏನಾದರು ಕೆಲಸ ಹೇಳ್ಯಾರು ಅನ್ನುವಂತಹ ಆತಂಕ. ಅವರು ಯಾವುದೇ ಕೆಲಸ ಹೇಳಿದರೆಂದರೆ ಅದು ಸರಿಯಾದ ಸಮಯಕ್ಕೆ ಮಾಡಬೇಕು. ಅದು ಅವರ ಮೊದಲನೇ ಕರಾರು ಆಗಿರುತಿತ್ತು. ಆದರೆ ನಾನು ಎಂದೂ ಸರಿಯಾದ ಸಮಯಕ್ಕೆ ಹೇಳಿದ ಕೆಲಸ ಮಾಡಲಾಗುತ್ತಿದ್ದಿಲ್ಲ. ಹಾಗಾಗಿ ನಮಗೆ ಬೈಯುತ್ತಿದ್ದರು. ಇದರಿಂದಾಗಿ ಎಷ್ಟೋ ಬಾರಿ ಅವರಿಗೆ ಕಾಣದಂತೆ ಬಚಿಟ್ಟುಕೊಳ್ಳುತ್ತಿದ್ದು ಹೌದು. ಮತ್ತೆ ಯಾವಗಲಾದರು ಕಂಡೆರೆ “ಏನಪ್ಪ ಸಾಬ ಏನು ನಡದಾದ ?” ಎಂದು ಕೇಳುತ್ತಲೇ ಮೊನ್ನ ಬಂದಿದೆಂತ ಮನಿಗೆ , ನನಗೆ ಬೇಟಿನೆ ಆಗಿಲವಲ್ಲ !? ” ಎನ್ನುವರು ಆಗ ನಾನು ಅದಕೊಂದು ಸುಳ್ಳು ಹೇಳಿ ಯಾವಾಗ ಇವರಿಂದ ಪಾರಾದೇನೋ ಅಂದುಕೊಳ್ಳಿತ್ತಿದ್ದೆ. ಹೌದು ಈಗೆ ಅವರಿಗೂ ನಮಗೂ ನಡೆಯುತ್ತಲೇ ಇರುತ್ತಿತ್ತು. ಮುಂದೆ ಕೆಲವು ವರ್ಷಗಳ ನಂತರ ಅವರು ನನ್ನೊಂದಿಗೆ ಎಷ್ಟು ಸಲುಗೆಯಿಂದ ಮಾತನಾಡಿಸುವರೆಂದ್ರೆ ಚಿಕ್ಕ ಮಗುವಿನಂತಾಗಿದ್ದರು. ಇದರಿಂದ ಅವರೊಂದಿಗೆ ನನ್ನ ಒಡನಾಟ ಜಾಸ್ತಿಯಾಯ್ತು.

ಪತ್ರಿಕೆಯ ಏನಾದರು ಕೆಲಸ ಕಾರ್ಯಕ್ರಮದ ಆಗು ಹೋಗುಗಳನ್ನು ನೋಡಿಕೊಳ್ಳುವುದು ಇವುಗಳ ಎಲ್ಲವು ಮಾಡಿದರೆ ಮಾಸ್ತರರಿಗೆ ಎಲ್ಲಿಲ್ಲದ ಸಂತೋಷ ಪಡುತ್ತಿದ್ದರು. ದಿನಗಳೆದಂತ್ತೆಲ್ಲ ಅವರ ನನಗೆ ಗೆಳೆಯರಂತ್ತಾಗಿದ್ದರು. ಹರಟೆ ಮಾತನಾಡುತ್ತ ಅವರೊಂದಿಗೆ ಕುಳಿತಾಗ ಕೆಲವರು ಅದನ್ನು ನೋಡಿ ಮಾಸ್ತರನೊಂದಿಗೆ ಎಷ್ಟು ಸಲಿಗಿಯಿಂದ ಕುಂತಾನ ಅಂದದ್ದು ಕೇಳಿಸಿಕೊಂಡಿರುವೆ. ನಾನು ಕೋ-ಆಪರೇಟಿವ್ ಒಂದರಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೆ. ಮಾಸ್ತರು “ಲೇ ಖೋಡಿ ರೊಕ್ಕಾದಿಂದ ಬೆನ್ನತ್ಬ್ಯಾಡಲೇ ಅದೇನು ಬದುಕಾಗಗಿಲ್ಲ ಬಹಾಳೆವ್ಯೆ ಆಗಂಗಿಲ್ಲ ! ನನ್ನ ಜೋಡಿ ಬಾ ಊರು,ಊರು ಕಾರ್ಯಕ್ರಮ ಮಾಡಿಕೊಂತ ಹೋಗಮು, ಮೈಕ ಸಟ್ ಒಂದು ಗಾಡಿ ತೊಗಮು ” ಅಂತೆಲ್ಲ ಹೇಳಿದರು. ಆದರೆ ಏನು ಹೇಳದೆ ಕೇಳದೆ ಬಾರದೂರಿಗೆ ಹೊರಟೆ ಹೋದರು. ಇವಾಗ ನಮ್ಮಗೆ ಅನಿಸುತ್ತಿದೆ ಎಂತ ವ್ಯಕ್ತಿ ನಮ್ಮೊಂದಿಗಿದ್ದರು ! ಅವರಿಗೆ ನಾವು ಸಹಕಾರ ಕೊಡದೆ ಅವರನ್ನು ನೋಡಿದರೆ ಓಡಿ ಹೋಗುತ್ತಿದೇವಲ್ಲ ! ಎಂದು ನೆಸಿಕೊಂಡರೆ ಮನಸ್ಸಿಗೆ ನೋವಾಗುತ್ತದೆ. ಆದರೆ ಒಂದು ಮಾತಂತೂ ಸತ್ಯ. “ಸತ್ತ ಮೇಲೆ ಅತ್ತರೇನು ಬಂತು ಕತ್ತೆ ಮೂಳ !?” ಅನ್ನುವಂಗ ಆಗಿದೆ ನಮ್ಮ ಬಾಳ.

೦ ಸಾಯಿ ಕುಮಾರ ಇಜೇರಿ

Leave a Reply

Your email address will not be published. Required fields are marked *

error: Content is protected !!