*ಶರಣರ ಚಿಂತನೆಗಳನ್ನು ಜಾರಿಗೆ ತರುವ ಅವಶ್ಯಕತೆ ಇದೆ”

*ಶರಣರ ಚಿಂತನೆಗಳನ್ನು ಜಾರಿಗೆ ತರುವ ಅವಶ್ಯಕತೆ ಇದೆ*

ಶಹಾಪುರ : 26 : ಹನ್ನೆಡನೆಯ ಶತಮಾನದ ಬಸವಾದಿ ಶರಣರ ಚಿಂತನೆಗಳಾದ ಭಕ್ತಿ ಶ್ರದ್ಧೆ ಇವನಾರವ ಇವನಾರವ ಎನ್ನದ ಭಾವ ಹದಿನಾರನೆಯ ಶತಮಾನದ ತಿಂಥಣ ಯ ಮೌನೇಶ್ವರರಲ್ಲಿಯೂ ನಾವು ಕಾಣಬಹುದಾಗಿದೆ. ಆದ್ದರಿಂದಲೆ ತಿಂಥಣಿ ಯ ಕ್ಷೇತ್ರದಲ್ಲಿ ಇಂದಿಗೂ ಭಾವೈಕ್ಯತೆಯ ಪ್ರತೀಕವಾಗಿ ಗುಡಿ ಹಾಗೂ ಮಸೀದಿ ಎರಡೂ ಜೊತೆಯಾಗಿ ಇರುವುದನ್ನು ಕಾಣಬಹುದಾಗಿದೆ ಎಂದು ಪೂಜ್ಯ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಏಕದಂಡಗಿ ಮಠ ಅವರು ನುಡಿದರು.


ನಗರದ ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಏರ್ಪಡಿಸಿದ್ದ ಲಿಂ. ಭೂತಾಳೆಪ್ಪ ಸಲಾದಪುರ ಅವರ 4 ನೇ ಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ತಿಂಗಳ ಬಸವ ಬೆಳಕು-105 ರ ಸಭೆಯಲ್ಲಿ “ಹಿಂದು ತುರುಕರಿಗೆ ಚಂದಿರನೊಬ್ಬನೆ’ ಎಂಬ ವಿಷಯ ಕುರಿತು ಅನುಭಾವಿಗಳಾಗಿ ಭಾಗವಹಿಸಿ ಮಾತಾನಾಡಿದರು.

ಇಂದಿನ ತ್ವೇಷಮಯ ವಾತಾವರಣದಲ್ಲಿ ಬಸವಾದಿ ಶರಣರ ಚಿಂತನೆಗಳನ್ನು ನಾವು ನೀವೆಲ್ಲ ಪಾಲಿಸಬೇಕಾದುದು ಅವಶ್ಯಕವಾಗಿದೆ. ಈ ದೇಶದಲ್ಲಿ ಎರಡು ಪ್ರಬಲ ಜನಾಂಗಗಳು ಇತಿಹಾಸವನ್ನು ಅರಿತುಕೊಳ್ಳದೆ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಇದು ಸರಿಯಾದುದಲ್ಲ. ನಾವೆಲ್ಲ ಮನುಜರು ಎಂಬ ತತ್ವವನ್ನು ಹೇಳಿದರ ಶರಣರ ಚಿಂತನೆಗಳನ್ನು ಜಾರಿಗೆ ತರುವ ಅಗತ್ಯವಿದೆ ಇಲ್ಲಿರುವ ಹಿಂದು ಮುಸಲ್ಮಾನರಿಗಷ್ಟೇ ಅಲ್ಲ, ಜಗತ್ತಿನ ಎಲ್ಲರಿಗೂ ಚಂದಿರನೊಬ್ಬನೆ ಇದ್ದಾನೆ ಎಂಬ ಮೌನೇಶ್ವರ ವಚನವನ್ನು ವಿಸ್ತರಿಸಿ ಹೇಳಿದರು.


ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಲಕ್ಷ್ಮಣ ಲಾಳಸೇರಿಯವರು ಮಾತನಾಡಿ, ಬಸವಾದಿ ಶರಣರ ಚಿಂತನೆ ಹಾಗೂ ಸಿದ್ಧಾಂತಗಳು ಕೇವಲ ಮಾತನಾಡುವುದರಿಂದ ಜಾರಿಯಾಗುವುದಿಲ್ಲ. ಅವುಗಳ ಅನುಷ್ಠಾನ ಮಾಡಿದರೆ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ಶರಣರ ಸಿದ್ಧಾಂತ ಚಿಂತನೆ ಎಷ್ಟೇ ಜನಪರವಾಗಿ ಎಂದು ಹೇಳಿದರು, ಬರೆದರೂ ಅದು ಕೇವಲ ಅರಣ್ಯರೋಧನವಾಗುತ್ತದೆ. ಬದಲಾಗಿ ಶರಣರ ಚಿಂತನೆಗಳನ್ನು ಅಳವಡಿಸಿಕೊಂಡು ನಡೆದರೆ ಮಾತ್ರ, ಶರಣರು ಜೀವಂತವಾಗಿ ಇರಬಲ್ಲರು. ನಡೆ ನುಡಿಯ ಸಿದ್ಧಾಂತ ಹನ್ನೆರಡನೆಯ ಶತಮಾನದ ಶರಣರದ್ದು ಎಂಬ ಮಾತು ತುಂಬಾ ಗಮನಾರ್ಹವಾದುದು ಎಂದು ಮಾರ್ಮಿಕವಾಗಿ ಹೇಳಿದರು.


ಇತ್ತೀಚೆಗೆ ಪ್ರಕೃತಿಯಲ್ಲಾದ ಸೂರ್ಯ ಮತ್ತು ಚಂದ್ರ ಗ್ರಹಣವೇನೋ ಹೋಯಿತು. ಆದರೆ ನಮ್ಮ ಬುದ್ಧಿಗೆ ಹಿಡಿದಿರುವ ಮೌಢ್ಯದ- ಕಂದಾಚಾರದ ಗ್ರಹಣ ಇನ್ನೂ ಹೋಗಿಲ್ಲ. ಬಸವಣ್ಣನವರು ಶ್ರೀಮಂತರಿಗೆ, ಬೌದ್ಧಿಕ ಚಿಂತನೆ ಮಾಡುವವರಿಗೆ, ಅಧಿಕಾರಿ ವರ್ಗದವರಿಗೆ ಅರ್ಥವಾಗುವುದಿಲ್ಲ. ಶರಣರು ಹೃದಯವಂತರಿಗೆ ಮಾತ್ರ ದಕ್ಕುತ್ತಾರೆ. ಜಗತ್ತಿನ ಪರಿವರ್ತನೆಯೂ ಸಹ ಜನ ಸಾಮಾನ್ಯರಿಂದ ಆಗುತ್ತದೆಯೆ ಹೊರತು ಪಟ್ಟಭದ್ರ ಶಕ್ತಿಗಳಿಂದ ಅಲ್ಲ ಎಂದು ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ತಿಳಿಸಿದರು.
ಬಸವರಾಜ ಸಿನ್ನೂರ ಸ್ವಾಗತಿಸಿದರು. ಪ್ರತಿಷ್ಠಾನದ ವತಿಯಿಂದ ಪುಷ್ಪಾವತಿ ಏಕಲವ್ಯ ಸಲಾದಪುರ ಅವರನ್ನು ಸತ್ಕರಿಸಲಾಯಿತು. ವೇದಿಕೆಯಲ್ಲಿ ಗೌತಮಬುದ್ಧ, ಕನ್ನಡಾಂಭೆ ಉಪಸ್ಥಿತರಿದ್ದರು. ಸಭೆಯನ್ನು ಚಂದ್ರಮ್ಮ ಸಲಾದಪುರ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಬಸವಮಾರ್ಗ ಪ್ರತಿಷ್ಠಾನದ ಮಕ್ಕಳಿಂದ ವಚನಗಳನ್ನು ಹಾಡಲಾಯಿತು. ಕೊನೆಯಲ್ಲಿ ಚೇತನ ಪಾಟೀಲ ಮಳಗ ವಂದಿಸಿದರು. ಶಿವಣ್ಣ ಇಜೇರಿ ಸಭೆಯ ಸಂಚಾಲನೆ ಮಾಡಿದರು.

ಸಭೆಯಲ್ಲಿ ಅಡಿವೆಪ್ಪ ಜಾಕಾ, ಶಿವಯೋಗಪ್ಪ ಮುಡಬೂಳ, ಡಾ. ಶ್ರೀಶೈಲ ನಾಗನಟಗಿ, ಡಾ.ಸಾಯಬಣ್ಣ ಮುಡಬೂಳ, ಡಾ,ಬಸವರಾಜ ಹಾದಿಮನಿ, ದೇವಿಂದ್ರಪ್ಪ ಬಡಿಗೇರ, ಸಿದ್ಧಲಿಂಗಪ್ಪ ಆನೇಗುಂದಿ, ಉಮೇಶ ಗೋಗಿ, ಬಸವರಾಜ ಹೇರುಂಡಿ, ಭೀಮನಗೌಡ, ಚಂದ್ರು ಮುಡಬೂಳ ಷಣ್ಮುಖ ಅಣಬಿ, ಶಿವಕುಮಾರ ಆವಂಟಿ ,ಪಂಪಣ್ಣಗೌಡ ಮಳಗ.     ಮುಂತಾದವರು ಭಾಗವಹಿಸಿದ್ದರು.


Leave a Reply

Your email address will not be published. Required fields are marked *

error: Content is protected !!