*ಬಸವಾ ಎನಬಾರದೆ ಶ್ರೀ ಬಸವಾ ಎನಬಾರದೆ*
ಮನು ಜನ್ಮಕೆ ಬಂದಾಗ ವಿವೇಚನೆ ಇರುವಾಗ
ಬಸವಾ ಎನಬಾರದೆ
ಬಸವನ ನೆನೆದವರ ಹಸನಾದ್ವು ಬದುಕೆಲ್ಲ
ಬಸವಾ ಎನಬಾರದೆ
ಏಳು ಬೀಳುವಾಗ ಮೈ ಮುರಿದು ದುಡಿವಾಗ
ಬಸವಾ ಎನಬಾರದೆ
ಬಂದವರ ಸಂತೈಸಿ ಪ್ರಸಾದ ಕೊಡುವಾಗ
ಬಸವಾ ಎನಬಾರದೆ
ವಿಭೂತಿ ಧರಿಸುತ್ತ ಲಿಂಗ ಪೂಜೆಯ ಮಾಡಿ
ಬಸವಾ ಎನಬಾರದೆ
ದಿನ ವಾರ ಗಳಿಗೆಯ ಮಿತಿ ನೋಡದಾ ದಿನವು
ಬಸವಾ ಎನಬಾರದೆ
ಮನು ಜನ್ಮಕೆ ಬಂದಾಗ ವಿವೇಚನೆ ಇರುವಾಗ
ಬಸವಾ ಎನಬಾರದೆ
ಬಸವನ ನೆನೆದವರ ಹಸನಾದ್ವು ಬದುಕೆಲ್ಲ
ಬಸವಾ ಎನಬಾರದೆ
ಕ್ರೋಧ ಕುಹಕ ಭಾಷೆ ಬಳಸುವಾಗಲೊಮ್ಮೆ
ಬಸವಾ ಎನಬಾರದೆ
ಸಂಸಾರ ಸಾಗರದ ಅಲೆಗಳು ಬಂದಾಗ
ಬಸವಾ ಎನಬಾರದೆ
ಅಗಳಗುಳ ಅನ್ನವ ಬಾಯಲ್ಲಿ ಮೆಲುವಾಗ
ಬಸವಾ ಎನಬಾರದೆ
ಭವಿಗಳ ಜೊತೆಗೂಡಿ ಹೋಗುವಾಗಲೊಮ್ಮೆ
ಬಸವಾ ಎನಬಾರದೆ
ಊರೂರು ಅಲೆದಲೆದು ದೇವರ ಹುಡುಕದೆ
ಬಸವಾ ಎನಬಾರದೆ
ಯಾವ ಕಾಯಕಗಳು ಕೀಳಲ್ಲಂದೆಳುತ್ತ
ಬಸವಾ ಎನಬಾರದೆ
ಹೆಂಡತಿ ಮಗುವನ್ನು ಪ್ರೀತಿಸುವಾಗಲೊಮ್ಮೆ
ಬಸವಾ ಎನಬಾರದೆ
ಹೊತ್ತಾರೆ ಏಳುತ್ತ ವಚನ ಪಠಿಸುವ ಮುನ್ನ
ಬಸವಾ ಎನಬಾರದೆ
ಅನುಭಾವ ಅಮೃತವ ಕೇಳುವಾಗಲೊಮ್ಮೆ
ಬಸವಾ ಎನಬಾರದೆ
ವೇದ ವಿಪ್ರರ ಭೋದೆ ಶಾಸ್ತ್ರ ಸಂತೆಯ ಸುದ್ದಿ ಎಂಬರಿವು ಮೂಡ್ದಾಗ
ಬಸವಾ ಎನಬಾರದೆ
ರಾಶಿ ನಕ್ಷತ್ರಗಳ ರಾಹು ಕೇತುವ ಸರಿಸಿ
ಬಸವಾ ಎನಬಾರದೆ
ದುರಿತ ಕಷ್ಟಗಳೆಲ್ಲ ಧೂಳಿ ಪಟವಾದಾಗ
ಬಸವಾ ಎನಬಾರದೆ
ಬೆಟ್ಟದಷ್ಟು ಕಷ್ಟ ದುತ್ತನೆ ನಿಂತಾಗ
ಬಸವಾ ಎನಬಾರದೆ
ಸಂತೆಯ ಶಬ್ದಗಳು ಈಟಿಯಂತಾದಾಗ
ಬಸವಾ ಎನಬಾರದೆ
ಬಸವಾ ಬಸವಾ ಬಸವಾ ಬಸವಾ
ಬ ಸವನೆನ್ನ ಹ್ರುದಯ ಕಮಲ …