ಅಪ್ರಾಪ್ತ ಬಾಲಕಿಯೊಂದಿಗೆ ಮಠಾಧೀಶರ ಡಿಂಗ್ ಡಾಂಗ್. ಪೀಠ ತ್ಯಾಗ ಮಾಡಿಸಿದ ಗ್ರಾಮಸ್ಥರು !

ಬಸವಕಲ್ಯಾಣ: ಅಪ್ರಾಪ್ತ ಬಾಲಕಿಯೊಬ್ಬಳ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಸ್ವಾಮಿಜಿಯೊಬ್ಬರನ್ನು ಮಠದಿಂದ ಪೀಠ ತ್ಯಾಗ ಮಾಡಿಸಿದ ಘಟನೆ ತಾಲೂಕಿನ ಗಡಿಗೌಂಡಗಾಂವ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಗಡಿಗೌಂಡಗಾಂವ ಗ್ರಾಮದ ಶ್ರೀ ಹಾವಗಿಲಿಂಗೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿಗಳಾದ ಶ್ರೀ ಶಾಂತವೀರ ಶಿವಾಚಾರ್ಯರು ಎರಡು ದಿನಗಳ ಹಿಂದೆ ದರ್ಶನಕ್ಕೆಂದು ಬಂದಿದ್ದ ಸುಮಾರು 17 ವರ್ಷದ ಅಪ್ರಾಪ್ತೆಯೊಬ್ಬಳ ಜೊತೆ ಅನುಚಿತ ಹಾಗೂ ಅಸಭ್ಯವಾಗಿ ವರ್ತಿಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು.ಅಪ್ರಾಪ್ತ ಬಾಲಕಿಯೊಂದಿಗೆ ಸ್ವಾಮೀಜಿ ಅನುಚಿತ ವರ್ತನೆ ಆರೋಪ.

ಘಟನೆಯಿಂದ ಮನನೊಂದ ಬಾಲಕಿ ನಡೆದ ವಿಷಯವನ್ನು ತನ್ನ ಪಾಲಕರಿಗೆ ವಿವರಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಪಾಲಕರು ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದರು. ಹಾಗಾಗಿ ಜನರು ಸ್ವಾಮೀಜಿಯನ್ನು ಮಠದಿಂದ ಹೊರ ಕಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಭಾನುವಾರ ಮಠದ ಆವರಣದಲ್ಲಿ ಜಮಾಯಿಸಿದ ಗ್ರಾಮಸ್ಥರು, ಪೀಠ ತ್ಯಾಗ ಮಾಡಿ ಮಠದಿಂದ ನಿರ್ಗಮಿಸುವಂತೆ ಸ್ವಾಮೀಜಿಗೆ ತಾಕೀತು ಮಾಡಿದ್ದಾರೆ.

ಈ ನಡುವೆ ವಿಷಯ ಅರಿತು ಮಠಕ್ಕೆ ಭೇಟಿ ನೀಡಿದ ಹುಲಸೂರನ ಶ್ರೀ ಶಿವಾನಂದ ಸ್ವಾಮೀಜಿ, ಹಿರೇನಾಗಾಂವನ ಶ್ರೀ ಜಯಶಾಂತಲಿಂಗ ಸ್ವಾಮೀಜಿ ಸೇರಿದಂತೆ ಕೆಲ ಪ್ರಮುಖರು, ಸ್ವಾಮೀಜಿ ಮತ್ತು ಗ್ರಾಮಸ್ಥರೊಂದಿಗೆ ಚರ್ಚಿಸಿದ್ದಾರೆ. ಈ ನಡುವೇ ಪಟ್ಟು ಸಡಿಲಿಸದ ಗ್ರಾಮಸ್ಥರು, ಸ್ವಾಮೀಜಿ ಮಠ ಬಿಟ್ಟು ಹೊಗಲೇಬೇಕು ಎಂದಿದ್ದಾರೆ. ಹಾಗಾಗಿ ಆರೋಪ ಹೊತ್ತ ಶ್ರೀ ಶಾಂತವೀರ ಶಿವಾಚಾರ್ಯ ಸ್ವಾಮೀಜಿ ತಮ್ಮ ಕಾರಿನಲ್ಲಿ ಮಠದಿಂದ ನಿರ್ಗಮಿಸಿದ್ದಾರೆ.

ಸುದ್ದಿ ತಿಳಿದ ಹುಲಸೂರ ಠಾಣೆ ಪಿಎಸ್‌ಐ ಗೌತಮ್ ಸೇರಿದಂತೆ ಅಧಿಕಾರಿಗಳ ತಂಡ ಮಠಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಮುಂಜಾಗ್ರತಾ ಕ್ರಮವಾಗಿ ಮಠಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಆದರೆ ಬಾಲಕಿ ಪಾಲಕರು ದೂರು ನೀಡಲು ನಿರಾಕರಿಸಿದ ಹಿನ್ನೆಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ವರದಿಗಾರ

Leave a Reply

Your email address will not be published. Required fields are marked *

error: Content is protected !!