ವೇದವೆಂಬುದು ಓದಿನ ಮಾತು ಇದು ವಾಸ್ತವ ಸತ್ಯ

ವೇದವೆಂಬುದು ಓದಿನ ಮಾತು ಇದು ವಾಸ್ತವ ಸತ್ಯ

ಬೇಲಿಮಠದ ಶ್ರೀಗಳು

ಸತ್ಯಂಪೇಟೆ : ವಿಶ್ವ ಹಿಂದೂ ಪರಿಷತ್ತಿಗೂ ನಿಮಗೂ ಇರುವ ಸಂಬಂಧ ಹೇಗೆ ?

ಬೇಲಿಮಠದ ಶ್ರೀಗಳು : ಇರಬೇಕು ಇರದಿರಬೇಕು ಎನ್ನುವ ರೀತಿಯಲ್ಲಿ ಅವರೊಂದಿಗೆ ನಿರ್ಲಿಪ್ತನಾಗಿದ್ದೇನೆ. ವಾಸ್ತವವಾಗಿ ವಿಶ್ವ ಹಿಂದು ಪರಿಷತ್ತಿನ ರಾಜ್ಯದ ರಾಜಾಧ್ಯಕ್ಷನಾಗಿದ್ದಂತಹ ಶ್ರೀ ಲಕ್ಷ್ಮಿ ನಾರಾಯಣ ಆಳ್ವಾ ಅವರು ಮಂಗಳೂರಿನಲ್ಲಿ ಜಮಾತೆ ಇಸ್ಲಾಂನ ಬಹುದೊಡ್ಡ ಕಾರ್ಯಕ್ರಮವನ್ನು ನೆಹರೂ ಮೈದಾನದಲ್ಲಿ ಏರ್ಪಡಿಸಿದ್ದರು. ಆರ್ಚ ಬಿಶಪ್, ವಿಶ್ವ ಹಿಂದೂ ಪರಿಷತ್ತಿನ ಮುಖ್ಯರೆಲ್ಲ ಸೇರಿ ಅಲ್ಲಿಗೆ ಹೋಗಿದ್ದೆ. ಬಸವಣ್ಣನವರು ಹೇಳುವುದು ಎಲ್ಲರಿಗೂ ಹೊಂದಿಕೊಂಡು ಹೋಗು ಎಂದು, ಯಾರು ಸ್ವಲ್ಪ ಚೂಪಾಗಿರ್ತಾರೆ ಅವ್ರನ್ನ ಸ್ವಲ್ಪ ಮಂಡ ಮಾಡು.ಯಾರಿಗೆ ಕಾಹಿಲೆ ಇರುತ್ತದೋ ಅವರಿಗೆ ಔಷಧಿ ಕೊಡು. ಯಾರು ಅಯೋಗ್ಯರಾಗಿರರ್ತಾರೋ ಅವರನ್ನು ಯೋಗ್ಯರನ್ನಾಗಿ ಪರಿವರ್ತಿಸು.

ಇವರೆಲ್ಲರೊಂದಿಗೆ ನನ್ನ ಒಡನಾಡವಿದೆ ಎಂದಾಕ್ಷಣ ನಾನು ಅವರೆಲ್ಲರ ಕೊಳೆ ಅಂಟಿಸಿಕೊಂಡಿದ್ದೀನಿ ಅಂತ ಅರ್ಥ ಅಲ್ಲ. ನಾನು ಸುಟ್ಟ ಇಟ್ಟಿಗೆ, ಕಟ್ಟಿಗೆ ಅಲ್ಲ. ಇಟ್ಟಿಗೆ ಮತ್ತು ಕಟ್ಟಿಗೆಗೂ ವ್ಯತ್ಯಾಸ ಇದೆ. ಕಟ್ಟಿಗೆ ಬೆಂಕಿಗೆ ಬಿದ್ದರೆ ಬೂದಿಯಾಗಿ ಬಿಡುತ್ತೆ. ಆದ್ರೆ ಇಟ್ಟಿಗೆ ಹಾಗಲ್ಲ. ಅದು ಸುಟ್ಟಷ್ಟು ಗಟ್ಟಿಯಾಗುತ್ತದೆ. ಜಮಾತೆ ಇಸ್ಲಾಂನ ಯುತ್ ಕಾನ್ಪರೆನ್ಸಿಗೂ ಹೋಗಿದ್ದೆ.

ಅಲ್ಲಿ ಕೆಲವು ಜನ ಮಾಧ್ಯಮದವರು ಮೈಕ್ ಹಿಡಕೊಂಡು ನನ್ನೆದುರು ಬಂದು : ಇದು ಇಸ್ಲಾಂ ಧರ್ಮದ ಕಾರ್ಯಕ್ರಮ ಇದಕ್ಕೂ ನಿಮಗೆ ಏನು ಸಂಬಂಧ ? ಎಂದು ಪ್ರಶ್ನಿಸಿದರು. ಆಗ ನಾನವರಿಗೆ ನನ್ನ ಉದ್ಘಾಟನಾ ಭಾಷಣದಲ್ಲಿಯೇ ಹೇಳಿದೆ. ನಾನು ಮುಸ್ಲಿಂ ಆಗಿರುವುದರಿಂದ ಇಲ್ಲಿಗೆ ಬಂದಿರುವೆ. ಎಲ್ಲರಿಗೂ ಆಶ್ಚರ್ಯ ! ಮುಸ್ಲಿಂ ಅಂದ್ರೆ ದೇವರು ಎಲ್ಲರಿಗಿಂತ ದೊಡ್ಡವನು, ದೇವರು ನಿರಾಕಾರ, ದೇವರಲ್ಲಿರ ತಕ್ಕಂತಹ ಶ್ರದ್ಧೆ, ಭಕ್ತಿ ಅದು ನಮ್ಮ ಮೂಲ ಆಧಾರ ಅಂತ ಯಾರು ತಿಳಕೊಳ್ಳುತ್ತಾರೋ ಅವರೆಲ್ಲ ಮುಸ್ಲಿಂರೆ ಎಂದು ಹೇಳಿದಾಗ ಅವರೆಲ್ಲ ತಬ್ಬಿಬ್ಬಾದರು. ಶಾಂತಿ ಸಮಾನತೆ ಸುಸ್ಥಿತಿಯಲ್ಲಿ ಹೋಗುವವನೆ, ಇಸ್ಲಾಂ.

ಸ್ವಾಮಿ ನೀನು ಶಾಶ್ವತ ನೀನು
ಎತ್ತಿದೆ ಬಿರುದ ಜಗವೆಲ್ಲ ಅರಿಯಲು
ಮಹಾದೇವ ಮಹಾದೇವ
ಅಲ್ಲಿಂದ ಮುಂದೆ ಶಬ್ದಗಳಿಲ್ಲ
ಪಶುಪತಿ ಜಗಕೆ ಏಕೋ ದೇವ
ಸ್ವರ್ಗ ಮತ್ರ್ಯ ಪಾತಾಳದೊಳಗೆಲ್ಲ
ಒಬ್ಬನೆ ದೇವ

ಅಂತ ಅಪ್ಪ ಬಸವಣ್ಣನವರು ಹೇಳಿದರು. ಇದನ್ನೆ ದಾರ್ಶನಿಕ ಮಹ್ಮದ ಪೈಗಂಬರ ಲಾ ಹಿಲಾಹ ಹಿಲ್ಲಲ್ಲಾ ಅಂದ್ರು. ನಾವು ಯಾವತ್ತೂ ಪರಸ್ಪರ ಹೊಂದಾಣಿಕೆಯಿಂದ, ನಮಗೆ ಅವರನ್ನು ಪರಿಚಯಿಸುವುದು. ನಾವು ಅವರಿಗೆ ಪರಿಚಯವಾಗುವ ಮೂಲಕ ಹೋಗಬೇಕು.

ಸತ್ಯಂಪೇಟೆ : ಶರಣರು ದೇವಾಲಯಗಳನ್ನು ನಿರಾಕರಿಸಿದವರು ? ದೇಹವೇ ದೇವಾಲಯ ಎಂದವರು, ಇದು ನಿಮಗೂ ಖಚಿತವಾಗಿ ಗೊತ್ತು ! ಆದರೂ ತಾವು ಸ್ಥಾವರ ಸಂಸ್ಕøತಿಯ ಕಡೆಗೆ ವಾಲಿರುವುದು ?

ಬೇಲಿಮಠದ ಶ್ರೀಗಳು : ಉಪನಿಷತ್ತಗಳಲ್ಲೂ ದೇವಾಲಯಗಳ ಕುರಿತು ಹೇಳಿಲ್ಲ. ದೇವೋ ದೇವಾಲಯ ಪ್ರೋಕ್ತ ಅಂತ. ಭಗವ್ಗೋತೆಯಲ್ಲಿಯೂ ದೇವಸ್ಥಾನಗಳು ಇರಲಿಲ್ಲ. ಪ್ರತಿಯೊಂದು ಜೀವಿಯಲ್ಲಿ ದೇವನಿದ್ದಾನೆ ಅಂತ ಶ್ರೀಕೃಷ್ಣ ಹೇಳುತ್ತಾರೆ. ಅಯೋಗ್ಯರ ಕೈಯಲ್ಲಿ ಧರ್ಮ ಸಿಕ್ಕುಬಿದ್ದಾಗ ಜನರು ಗೊಂದಲದಲ್ಲಿರುತ್ತಾರೆ. ಕಳ್ಳರ ಕೈಯಲ್ಲಿ ಬಾಂಬ್ ಸಿಕ್ಕಿದಂತಾಗುತ್ತದೆ.

ಸತ್ಯಂಪೇಟೆ : ಹೋಮ ಹವನ, ಯಜ್ಞ ಯಾಗಗಳು ಮಾಡೋದು ಎಷ್ಟು ಸರಿ ?

ಬೇಲಿಮಠದ ಶ್ರೀಗಳು : ಹೋಮ ಹವನ ಯಜ್ಞ ಯಾಗ ಎಂಬ ನಾಲ್ಕು ವಿಧಾನಗಳಲ್ಲಿ ಇರುವ ವ್ಯತ್ಯಾಸ ಏನು ಎಂದು ಇದನ್ನು ಆಚರಿಸುವ ವೈದಿಕರಿಗೆ ಕೇಳಿದೆ. ನೀವು ಸರಿಯಾಗಿ ಅರ್ಥ ಮಾಡಿಕೊಂಡು ಆಚರಿಸುತ್ತಿಲ್ಲ. ನಿಮ್ಮ ಸ್ವಾರ್ಥಕ್ಕೆ ಬೆಂಕಿಹಾಕಿಕೊಂಡು ಕುಳಿತುಕೊಂಡಿದ್ದೀರಿ ಎಂದೆ. ವೇದಗಳಿಗೆ ಇರುವ ವೈಜ್ಞಾನಿಕ ಅರ್ಥಕ್ಕೆ ಬೆಂಕಿ ಹಾಕಿ ಕುಳಿತುಕೊಂಡು ಸ್ವಾರ್ಥದ ಹಪ್ಪಳಸುಟ್ಟುಕೊಳ್ಳುತ್ತಿರುವಿರಿ ಎಂದು ಟೀಕಿಸಿದೆ.

ಸತ್ಯಂಪೇಟೆ : ವೇದಗಳು ವೈಜ್ಞಾನಿಕವಾಗಿದ್ದರೆ ಅಪ್ಪ ಬಸವಣ್ಣನವರು ವೇದಕ್ಕೆ ಒರೆಯ ಕಟ್ಟುವೆ ……. ಶಾಸ್ತ್ರಕ್ಕೆ ನಿಗಳವನಿಕ್ಕುವೆ. ತರ್ಕದ ಬೆನ್ನ ಬಾರನೆತ್ತುವೆ….. ಇತ್ಯಾದಿ … ?!

ಬೇಲಿಮಠದ ಶ್ರೀಗಳು : ವೇದಕ್ಕೆ ಒರೆಯ ಕಟ್ಟುವೆ ಅಂದರೆ ಹೊರೆಕಟ್ಟಿ ಬಿಸಾಕುತ್ತೇನೆಂದು ಅರ್ಥವಲ್ಲ. ಒರೆಯ ಕಟ್ಟುವೆ ಅಂದರೆ ಚಿನ್ನವನ್ನು ಉಜ್ಜಿ ಉಜ್ಜಿ ಅದರ ಯೋಗ್ಯತೆಯನ್ನು ಪರೀಕ್ಷೆ ಮಾಡ್ತೀವೋ ಆ ರೀತಿ ಒಂದೊಂದು ಪರೀಕ್ಷೆ ಮಾಡ್ತೀನಿ ಅಂತ. ವೇದಗಳ ಅಪಭ್ರಂಶ. ಈ ಶಾಸ್ತ್ರ ಇನ್ನೊಬ್ಬರ ದಬ್ಬಾಳಿಕೆ ಮಾಡುತ್ತೆ. ಆದ್ದರಿಂದ ಆ ಶಾಸ್ತ್ರವನ್ನು ಅಗಳಿ ಹಾಕಿ ಕೂಡು ಹಾಕ್ತಿನಿ ಅಂತ ಹೇಳಿದ್ರ್ದು ಶರಣರು. ಜನರನ್ನು ಯಾಮಾರಿಸಿ ತರ್ಕದಿಂದ ಕುತರ್ಕ, ವಿತರ್ಕದಿಂದ ಗೆಲ್ಲುವ ಜನಗಳ ಬಾರನೆತ್ತುವೆ ಅಂದ್ರು.

ಸತ್ಯಂಪೇಟೆ : ವೇದವೆಂಬುದು ಓದಿನ ಮಾತು, ಶಾಸ್ತ್ರವೆಂಬುದು ಸಂತೆಯ ಸುದ್ದಿ. ಪುರಾಣವೆಂಬದು ಪುಂಡರಗೋಷ್ಠಿ ಅಂತಲೂ ಬಸವಣ್ಣನವರು ಹೇಳಿದ್ದಾರಲ್ಲವೆ ?

ಬೇಲಿಮಠದ ಶ್ರೀಗಳು : ವೇದವೆಂಬುದು ಓದಿನ ಮಾತು ಇದು ವಾಸ್ತವ ಸತ್ಯ. ವೇದ ಬರಿ ಓದಿಕೊಂಡು ಹೋದ್ರೆ ಆಗಲ್ಲ. ಗೀಳಿಯೋದಿದರೇನು ಲಿಂಗವೇದಿ ಆಗಬಲ್ಲುದೆ ? ಇಲ್ಲದ ಕತೆಗಳನ್ನು ಸೃಷ್ಟಿ ಮಾಡಿ ಜನರನ್ನು ಮೋಸ ಮಾಡುವ, ಮತ್ತು ಬರಿಸುವ ಅಫೀಮು ಅಂತ ಅರ್ಥ. ವೇದ ಶಾಸ್ತ್ರ ಆಗಮ ಓದಿದ ಮಾತ್ರಕ್ಕೆ ಯಾರೂ ಹಿರಿಯರಾಗಲು ಸಾಧ್ಯವಿಲ್ಲ.

( ನಾಳೆಗೆ ಮುಂದುವರೆಯುತ್ತದೆ )

6 thoughts on “ವೇದವೆಂಬುದು ಓದಿನ ಮಾತು ಇದು ವಾಸ್ತವ ಸತ್ಯ

  1. ಅವರು ರಾಮ ನ ದೇವಸ್ಥಾನಕ್ಕೆ ಚಂದಾ ಎತ್ತುವ ವಿಶ್ವ ಹಿ0ದು ಪರಿಷತ್ ಕಾರ್ಯಕ್ರಮಕ್ಕೆ ಹೋಗಿದ್ದು,ಗುಡಿ ಸಂಸ್ಕೃತಿ ಗೆ ಬೆಂಬಲ ನೀಡಿದಂತೆ ಅಲ್ಲವೇ?. ಅಲ್ಲಿ ಅವರು ಗುಡಿ ಸಂಸ್ಕೃತಿಯ ಬಗ್ಗೆ ಮಾತನಾಡಿದ ಆಡಿಯೋ ಅಥವಾ ವಿದ್ರೋ ಇದ್ದರೆ ಕೊಡಲು ಪ್ರಶ್ನೆ ಕೇಳಿ.

  2. ಅವರು ರಾಮ ನ ದೇವಸ್ಥಾನಕ್ಕೆ ಚಂದಾ ಎತ್ತುವ ವಿಶ್ವ ಹಿ0ದು ಪರಿಷತ್ ಕಾರ್ಯಕ್ರಮಕ್ಕೆ ಹೋಗಿದ್ದು,ಗುಡಿ ಸಂಸ್ಕೃತಿ ಗೆ ಬೆಂಬಲ ನೀಡಿದಂತೆ ಅಲ್ಲವೇ?. ಅಲ್ಲಿ ಅವರು ಗುಡಿ ಸಂಸ್ಕೃತಿಯ ಬಗ್ಗೆ ಮಾತನಾಡಿದ ಆಡಿಯೋ ಅಥವಾ ವಿದ್ರೋ ಇದ್ದರೆ ಕೊಡಲು ಪ್ರಶ್ನೆ ಕೇಳಿ.

  3. ಅವರು ರಾಮ ನ ದೇವಸ್ಥಾನಕ್ಕೆ ಚಂದಾ ಎತ್ತುವ ವಿಶ್ವ ಹಿ0ದು ಪರಿಷತ್ ಕಾರ್ಯಕ್ರಮಕ್ಕೆ ಹೋಗಿದ್ದು,ಗುಡಿ ಸಂಸ್ಕೃತಿ ಗೆ ಬೆಂಬಲ ನೀಡಿದಂತೆ ಅಲ್ಲವೇ?. ಅಲ್ಲಿ ಅವರು ಗುಡಿ ಸಂಸ್ಕೃತಿಯ ಬಗ್ಗೆ ಮಾತನಾಡಿದ ಆಡಿಯೋ ಅಥವಾ ವಿದ್ರೋ ಇದ್ದರೆ ಕೊಡಲು ಪ್ರಶ್ನೆ ಕೇಳಿ.

  4. ಅವರು ರಾಮ ನ ದೇವಸ್ಥಾನಕ್ಕೆ ಚಂದಾ ಎತ್ತುವ ವಿಶ್ವ ಹಿ0ದು ಪರಿಷತ್ ಕಾರ್ಯಕ್ರಮಕ್ಕೆ ಹೋಗಿದ್ದು,ಗುಡಿ ಸಂಸ್ಕೃತಿ ಗೆ ಬೆಂಬಲ ನೀಡಿದಂತೆ ಅಲ್ಲವೇ?. ಅಲ್ಲಿ ಅವರು ಗುಡಿ ಸಂಸ್ಕೃತಿಯ ಬಗ್ಗೆ ಮಾತನಾಡಿದ ಆಡಿಯೋ ಅಥವಾ ವಿದ್ರೋ ಇದ್ದರೆ ಕೊಡಲು ಪ್ರಶ್ನೆ ಕೇಳಿ.

  5. ಬೇಲಿಮಠದ ಪೂಜ್ಶ ಶ್ರೀಗಳ ಜೊತೆಗಿನ ನಿಮ್ಮ ಮಾತು ಕತೆ ವಾದ ಸಂವಾದ ಬಹಳ ಆಕರ್ಷಕವಾಗಿದೆ.ಮತ್ತು ಅಷ್ಟೇ ಅರ್ಥವತ್ತಾಗಿದೆ.ಗಂಧದವರ ಜೊತೆಗಿನ ಗುದ್ದಾಟದಂತೆ.ನೀವು ಚಂದನ ಗಂಧ ಪೂಜ್ಶರು ಶ್ರೀಗಂಧ.ನಿಮ್ಮ ಮಾತುಗಳಲಿ ವಚನಗಳ ಪರಿಮಳ ಸತ್ಶದ ಝೇಂಕಾರ ನಿರಾಕಾರ ಮಹಾದೇವನ ಓಂಕಾರ.
    ಶರಣಾರ್ಥಿಗಳು ಬಸವ ಪ್ರೀಯರಿಗೆ.

  6. ಬೇಲಿ ಮಠದ ಸ್ವಾಮೀಜಿ ಮನಸ್ಸಿನ ಎಲ್ಲ ದುಗುಡಗಳು ಮಾಯ ಆಗುವಂತೆ ಪ್ರಶಾಂತವಾಗಿ ವಿವರಿಸಿ ಮನಸ್ಸನ್ನು ಚಿತ್ತಗೊಳಿಸುತ್ತಾರೆ.
    ಸ್ವಾಮಿಜಿ ಅವರಿಗೆ ಶರಣು ಶರಣಾರ್ಥಿ.

Leave a Reply

Your email address will not be published. Required fields are marked *

error: Content is protected !!