*ಭಾಲ್ಕಿಯಲ್ಲೊಂದು ವಿನೂತನ ೨೫ ವರ್ಷಗಳ ಕಲ್ಯಾಣ ಮಹೋತ್ಸವ ಕಾರ್ಯಕ್ರಮ*

*ಭಾಲ್ಕಿಯಲ್ಲೊಂದು ವಿನೂತನ ೨೫ ವರ್ಷಗಳ ಕಲ್ಯಾಣ ಮಹೋತ್ಸವ ಕಾರ್ಯಕ್ರಮ*

ಆ ದೇವ ಬಂದಡೆ ಈ ದೇವಿ ಸಂಭ್ರಮ ನೋಡಾ
ಈ ದೇವಿ ಹೋದಡೆ ಆ ದೇವನ ಮನೋವ್ಯಾಕುಲ ನೋಡಾ !
ಈ ದೇವಿಯಿಲ್ಲದಿರ್ದಡೆ ಆ ದೇವ ಸೈರಿಸನು,
ಆ ದೇವನಿಲ್ಲದಿರೆ ಈ ದೇವಿ ಸೈರಿಸಲು
ಒಂದಲ್ಲಲ್ಲದೆ ಎರಡರ್ಥದಲ್ಲಿ ನೋಡಾ
ಕಪಿಲಸಿದ್ಧ ಮಲ್ಲಿಕಾರ್ಜುನಾ

ಶರಣರು ಸಂಸಾರವನ್ನು ಎಂದಿಗೂ ಕೆಟ್ಟದ್ದು ಎಂದು ಹೇಳಿದವರಲ್ಲ. ಶಿವನೊಲಿಸಬಂದ ಪ್ರಸಾದ ಕಾಯವನ್ನು ಸವೆಯೆ ಬಳಸಬೇಕೆಂದು ತಿಳಿ ಹೇಳಿದವರು. ಹೊನ್ನಿನೊಳಗೊಂದೊರೆಯ ಸಿರೆಯೊಳಗೊಂದೆಳೆಯ ಎಂದು ಹೇಳುತ್ತ ಆಸೆ ಆಕಾಂಕ್ಷೆಗಳಿಗೆ ಮಿತಿ ಇರಬೇಕೆಂದು ತಿಳಿಸಿದವರು. ಅಳಿ ಮನವನ್ನು ಇಟ್ಟುಕೊಂಡ ಸಂಸಾರಿಕನ ಸ್ಥಿತಿ ಹರಿದ ಗೋಣ ಯಲ್ಲಿ ಕಳವೆಯ ತುಂಬಿ ಇರುಳೆಲ್ಲ ನಡೆದನಾ ಸುಂಕಕ್ಕಂಜಿ ಎಂಬಂತಾಗುತ್ತದೆ. ಆದ್ದರಿಂದಲೆ ಮನುಷ್ಯರೆಲ್ಲರು ಕಾಯಕ ಮಾಡಬೇಕು, ತಾವು ದುಡಿದದ್ದರಲ್ಲಿ ಉಳಿದದ್ದನ್ನು ದಾಸೋಹ ಮಾಡಬೇಕೆಂದು ತಿಳಿಸಿದವರು.

ಆದರೆ ಇಂದಿಗೂ ಬಹುತೇಕ ಜನಗಳಲ್ಲಿ ಸಂಸಾರ ಕೆಟ್ಟದ್ದು ಸನ್ಯಾಸತ್ವ ಶ್ರೇಷ್ಟ ಎಂಬ ಭ್ರಮೆ ಹೆಚ್ಚು ಕಡಿಮೆ ಎಲ್ಲರಲ್ಲೂ ಇದೆ. ಹೆಣ್ಣು ಬಿಟ್ಟು ಲಿಂಗವನೊಲಿಸಬೇಕೆಂಬರು ಹೆಣ ್ಣಗೂ ಲಿಂಗಕ್ಕೂ ವೈರವೆ ? ಗಂಡು ಬಿಟ್ಟು ಲಿಂಗವನೊಲಿಸಬೇಕೆಂಬರು ಗಂಡಿಗೂ ಲಿಂಗಕ್ಕೂ ವೈರವೆ ? ಎಂದು ಹುಸಿ ಬ್ರಹ್ಮಚರ್ಯದ ವಿರುದ್ಧ ಗುಡಿದವರು ಶರಣರು. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎಂದು ಸಾರಿ ಸಾರಿ ಹೇಳಿದವರು. ಇಂದ್ರಿಯ ನಿಗ್ರಹವ ಮಾಡಿದಡೆ ಮುಂದೆ ಬಂದು ಕಾಡುವವು ಪಂಚೇಂದ್ರಿಯಗಳು ಎಂಬ ವಾಸ್ತವ ಸತ್ಯವನ್ನು ಸಾರಿದವರು.

ಇದನ್ನೆಲ್ಲ ತಮಗೆ ಯಾಕೆ ಹೇಳಬೇಕಾಯಿತೆಂದರೆ ಬೀದರ ಜಿಲ್ಲೆಯ ಭಾಲ್ಕಿಯಲ್ಲಿ ತೀರಾ ಇತ್ತೀಚೆಗೆ ೨೧-೧೨-೨೦೨೨ ರಂದು ಶರಣೆ ಕಾವೇರಿ ಶಿವಪುತ್ರ ಕಲ್ಯಾಣೆ ಅವರ ೨೫ ನೇ ವರ್ಷದ ಕಲ್ಯಾಣ ಮಹೋತ್ಸವ ದಿನ ಬಸವ ಬೆಳಕು ಎಂಬ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು. ಗಂಡ ಹೆಂಡಿರ ಜಗಳ ಗಂಧ ತೀಡಿದಂಗ್ಹ ಎಂಬAತಹ ದಿನಗಳು ಕರಗಿ ಹೋಗಿತ್ತಿವೆಯೆನೋ ? ಎಂಬ ಆತಂಕದ ದಿನಗಳಲ್ಲಿ ೨೫ ವರ್ಷಗಳ ದಾಂಪತ್ಯ ಬದುಕನ್ನು ಅನ್ಯೂನ್ಯವಾಗಿ ಸವೆಸುವುದು ಕಷ್ಟ. ಇಂಥ ಸಂದರ್ಭದಲ್ಲಿ ಕಲ್ಯಾಣೆ ಹಾಗೂ ಕಾಕನಾಳೆ ಮನೆತನದ ವಧು ವರರಿಬ್ಬರು ಇಪ್ಪತ್ತೆöÊದು ವಸಂತಗಳನ್ನು ದಾಟಿ ೨೬ ನೇ ವರ್ಷಕ್ಕೆ ಕಾಲಿಕ್ಕುತ್ತಿರುವ ಸಮಯದಲ್ಲಿ ಬಸವ ಬೆಳಕು ಎಲ್ಲರ ಮನ ಮನಕ್ಕೂ ತಲುಪಲಿ ಎಂಬ ಕಾಳಜಿಯಿಂದ ಸಭೆ ಸಂಯೋಜನೆ ಮಾಡಲಾಗಿತ್ತು.

ನಿಷ್ಕಲ ಮಂಟಪದ ಪೂಜ್ಯ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳ ಮಾತುಗಳು, ಆಲೋಚನೆಗಳು,ಚಿಂತನೆಗಳನ್ನು ಬಹುತೇಕ ಜನರು ಕೇಳಿ ಅವರೊಬ್ಬ ಬಂಡಾಯದ- ಚಳುವಳಿಯ ಮನುಷ್ಯ ಎಂದು ಪರಿಭಾವಿಸಿದ್ದೆ ಹೆಚ್ಚು. ಸನಾತನ ವಾದಿಗಳ ಕೆಂಗಣ ್ಣಗೆ ತುತ್ತಾಗಿ ನಿತ್ಯ ಟೀಕೆ ಟಿಪ್ಪಣೆಗಳಿಗೆ ಒಳಗಾದುದೆ ಹೆಚ್ಚು. ಆದರೆ ಈ ಪ್ರಸ್ತುತ ಸಭೆಯಲ್ಲಿ ಕೌಟುಂಬಿಕ ಜೀವನದ ಕುರಿತು ಅವರು ಆಡಿದ ಮಾತುಗಳು, ಶರಣರ ಚಿಂತನೆಗಳು ಕಡೆಗೀಲು ಇಲ್ಲದ ಬಂಡಿಗೆ ಕೀಲುಗಳಂತೆ ಇದ್ದವು.

ಜೀವನದ ಬಗ್ಗೆ ಗಹನವಾಗಿ ಆಲೋಚಿಸುವಂಥದ್ದೇನಿಲ್ಲ. ಇದು ಶಿವನು ನಮಗೆಲ್ಲ ಕೊಟ್ಟ ಬಿಕ್ಷೆ. ಇದನ್ನು ಸಮರ್ಥವಾಗಿ ಬಳಸಿ ಸಮರ್ಪಿಸಿ ಬದುಕುವುದೆ ಹಿತ. ಪ್ರತಿಯೊಬ್ಬ ವ್ಯಕ್ತಿ ಕಾಯಕ ನಿರತನಾಗಬೇಕು. ಪ್ರಾಮಾಣ ಕವಾಗಿ ಜೀವನ ಸವೆಸಬೇಕು. ನೀವು ದುಡಿದದ್ದರಲ್ಲಿ ಸಮಾಜದ ಹಿತಕ್ಕೊಂದಿಷ್ಟು ತೆಗೆದಿಟ್ಟು, ಮೈ ಮನ ಉಲ್ಲಾಸವಾಗುವಂತೆ ಆಹ್ಲಾದಕರವಾದ ಜೀವನ ನಡೆಸಬೇಕು. ದುಷ್ಚಟಗಳು ಮನುಷ್ಯನಿಗೆ ರೋಗ ರುಜಿನಗಳನ್ನು ತಂದೊಡ್ಡುತ್ತವೆ. ಸಕಾರಾತ್ಮಕವಾದ ಆಲೋಚನೆ, ಪರಿಶುಭ್ರವಾದ ಬದುಕು ಇನ್ನೊಬ್ಬರಿಗೆ ಬೆಳಕನ್ನು ಕೊಡುತ್ತದೆ. ಗಂಡ ಹೆಂಡಿರಿಬ್ಬರು ಅನ್ಯೂನ್ಯವಾಗಿ ಬಾಳುವುದು. ಸಮಾಜಕ್ಕೊಂದು ಹಿತ. ಅವರಿಬ್ಬರಿಗೂ ನೆಮ್ಮದಿಯನ್ನು ಒದಗಿಸಬಲ್ಲುದು.

ತೊಡಲು ಒಳ್ಳೆಯ ಬಟ್ಟೆ, ವಾಸಕ್ಕೆ ಇರಲು ಯೋಗ್ಯವಾದ ಮನೆ. ಮನೆಯೊಳಗೆ ಕಸ ಕಡ್ಡಿ ಬೆಳೆಯದಂತಹ ಎಚ್ಚರಿಕೆ ಇಟ್ಟುಕೊಂಡು ಲಹರಿಯಿಂದ ಬದುಕಬೇಕು. ಒಳ್ಳೊಳ್ಳೆಯ ಮನರಂಜನೆ ಒದಗಿಸಬಹುದಾದ ಸಿನೆಮಾ, ಆಟ ಪಾಟಗಳಲ್ಲಿ ಸಮಯ ಕಳೆಯಬೇಕು. ಕಾಲನ ಕರೆ ಬಂದಾಗ ಗೊಣಗದೆ ಹೋಗಬೇಕು. ಜೀವನ ಅಂದರೆ ಇನ್ನೇನು ಅಲ್ಲ. ಅದನ್ನು ಅರ್ಥಪೂರ್ಣವಾಗಿ ಜೀವಿಸುವುದು ಎಂದು ಹೇಳಿದಾಗ ಸಭೆಯಲ್ಲಿ ಸೇರಿದ್ದ ಜನಗಳು ಪ್ರಫುಲ್ಲವಾಗಿ ಅರಳಿದ್ದವು.

ಈ ನಡುವೆ ಆದರ್ಶ ಜೀವನಕ್ಕೆ ಪೂರಕವಾಗಿ ಒಂದೆರಡು ಸಿನೆಮಾ ಹಾಡು ಹಾಡಿದಾಗ ಅಲ್ಲಿ ಕುಳಿತ ಪ್ರೇಕ್ಷಕರ ಮನ ಉಯ್ಯಾಲೆಯಾಡುತ್ತಿತ್ತು. ಬಸವಾದಿ ಶರಣರ ತತ್ವವನ್ನು ತಿಳಿ ಹಾಸ್ಯದೊಂದಿಗೆ ನಿಜಗುಣ ಸ್ವಾಮೀಜಿ ಹೇಳಿದಾಗ ಆ ವೇದಿಕೆಯ ಮೇಲೆ ಕುಳಿತ ಡಾ.ಬಸವಲಿಂಗ ಪಟ್ಟದ್ದೇವರ ಕಣ್ಣಲ್ಲಿಯೂ ಆನಂದದ ಭಾಷ್ಪ. ಬಸವ ಸೇವಾ ಪ್ರತಿಷ್ಠಾನದ ಡಾ.ಗಂಗಾಂಬಿಕೆ ಅಕ್ಕ, ಓಂ ಶಾಂತಿ ಕೇಂದ್ರದ ಅಕ್ಕ ರಾಧಾ ಅವರೂ ನಿಜಗುಣಾನಂದ ಸ್ವಾಮೀಜಿಗಳ ಮಾತುಗಳಲ್ಲಿ ಮಿಂದೆದ್ದ ಅನುಭವ.

ಆರಂಭದಲ್ಲಿ ಶರಣರು ಕಿವಿಗಳಿಗೆ ಪ್ರಸಾದವೆಂದು ಕರೆದಿದ್ದಾರೆ. ಊಟಕ್ಕೆ ಪ್ರಸಾದವೆಂಬ ತಪ್ಪು ಕಲ್ಪನೆಯಲ್ಲಿ ನಾವೆಲ್ಲ ಜೀವಿಸಿದ್ದೇವೆ. ಊಟ ಪ್ರಸಾದವಾಗಿದ್ದರೆ ಅಂಬಿಗರ ಚೌಡಯ್ಯ ಇವು ಹೌದೆಂಬುವನ ಬಾಯ ಮೇಲೆ ಅರ್ಧ ಮಣ ಪಾದರಕ್ಷೆಯ ತಕ್ಕೊಂಡು ಲಟ ಲಟನೆ ಹೊಡೆ ಎಂದಾತ ಎಂದು ಹೇಳುತ್ತಿರಲಿಲ್ಲ. ಕಿವಿಯಿಂದ ಕೇಳುವ ಮಾತುಗಳೆ ಪ್ರಸಾದವಾದ್ದರಿಂದ ಶಿವಪುತ್ರ ಹಾಗೂ ಕಾವೇರಿ ಕಲ್ಯಾಣೆ ಅವರ ಮದುವೆಯ ಬೆಳ್ಳಿ ಹಬ್ಬದ ಪ್ರಯುಕ್ತ ಬಸವ ಬೆಳಕು ಎಂಬ ವಿನೂತ ಸಭೆ ಏರ್ಪಡಿಸಲಾಯಿತು ಎಂದು ವಿಶ್ವಾರಾಧ್ಯ ಸತ್ಯಂಪೇಟೆ ನುಡಿದರು.

ಈ ಸಮಾರಂಭಕ್ಕೆ ಭಾಲ್ಕಿಯ ರಾಜಕೀಯ ಧುರಿಣರಾದ ಪ್ರಕಾಶ ಖಂಡ್ರೆ, ಡಿ.ಕೆ.ಸಿದ್ರಾಮ, ಈಶ್ವರ ಖಂಡ್ರೆಯಯವರ ಮಗ ಭಾಲ್ಕಿಯ ಗಣ್ಯ ನಾಗರಿಕರು, ವ್ಯಾಪಾರಿಗಳು, ಪತ್ರಕರ್ತರು, ಚಿಂತಕರು ಭಾಗವಹಿಸಿ ಸಭೆಯ ಶೋಭೆಯನ್ನು ಹೆಚ್ಚಿಸಿದರು. ಕಲ್ಯಾಣೆಯವರ ಪುತ್ರ ಡಾ. ಮಯೂರ ಕಲ್ಯಾಣೆಯವರ ಉಲ್ಲಾಸದ ಓಡಾಟ, ಸಹೋದರ ಸಂಗಶೆಟ್ಟಿ ಕಲ್ಯಾಣೆಯವರ ಉತ್ಸಾಹ ಗಮನ ಸೆಳೆಯುವಂತೆ ಇತ್ತು.

ಎರಡು ಕುಟುಂಬಕ್ಕೆ ಮಾತ್ರ ಸೀಮಿತವಾಗಬಹುದಾಗಿದ್ದ ಕಾರ್ಯಕ್ರಮ ಸಾವತ್ರಿಕವಾದುದರ ಬಗ್ಗೆ ಜನ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದರು. ವೇದಿಕೆಯ ಮೇಲೆ, ಸ್ವಾಗತ ಕಮಾನನಲ್ಲಿ ಇಟ್ಟಿದ್ದ ಬಸವಣ್ಣನವರ ಪುತ್ಥಳಿಗಳು ಸಭೆಗೆ ಶೋಭೆಯನ್ನು ತಂದಿದ್ದವು. ಲಿಂಗಾಯತರ ಧರ್ಮ ಗ್ರಂಥ ವಚನ ಸಾಹಿತ್ಯ ಇಲ್ಲಿ ಎಲ್ಲರ ಮನದಲ್ಲಿ ಹಾಸು ಹೊಕ್ಕಾಗಿ ಸೇರಿಕೊಂಡಿತ್ತು.

 

Leave a Reply

Your email address will not be published. Required fields are marked *

error: Content is protected !!