*ಶ್ರೀರಾಮನ ಹಣೆಗೆ ವಿಜ್ಞಾನದ ಲೈಟು* [ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹದ ಹಣೆಯ ಮೇಲೆ ಪ್ರತಿ ರಾಮನವಮಿಯ ದಿನ ಸೂರ್ಯ ರಶ್ಮಿ ಬೀಳುವಂತೆ ಮಾಡಲು…
Category: ಸಂವಾದ
*ಅಧಿಕಾರಕ್ಕೆ ಅಂಟದವರು*
*ಅಧಿಕಾರಕ್ಕೆ ಅಂಟದವರು*
ಜಾಗತಿಕ ಇತಿಹಾಸದಲ್ಲಿ ಜನಸಾಮಾನ್ಯರ ಬದುಕಿನ ಬದಲಾವಣೆಗಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಜನರ ಹಕ್ಕುಗಳಿಗಾಗಿ ಹೋರಾಡಿದವರಲ್ಲಿ ಬಸವಣ್ಣ, ಮಹಾತ್ಮಾಗಾಂಧೀಜಿ, ನೆಲ್ಸನ್ ಮಂಡೇಲಾ ರಂತ ಅಪರೂಪದ ವ್ಯಕ್ತಿಗಳು ನಮ್ಮ ಕಣ್ಣಮುಂದೆ ಸಿಗುತ್ತಾರೆ. ಬಸವಣ್ಣನವರು ಜಾತಿ ವ್ಯವಸ್ಥೆಯ ಕರ್ಮಟತನದಲ್ಲಿ ಜನಿಸಿದರೂ ಕೂಡಾ ಆ ಕರ್ಮಟತನವನ್ನು ಧಿಕ್ಕರಿಸಿ “ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು” ಎನ್ನುವ ತತ್ವವನ್ನು ಪ್ರತಿಪಾದಿಸಿದಾತ. ರಾಜಶಾಹಿ ವ್ಯವಸ್ಥೆಯಲ್ಲಿ ಪ್ರಧಾನಿ ಯಾಗುವ ಅವಕಾಶ ಬಂದಾಗಲೂ ಕೂಡಾ, ಪ್ರಜಾಪ್ರಭುತ್ವದ ಗುಣವನ್ನು ಅಳವಡಿಸಿಕೊಂಡ ಅಪರೂಪದ ವ್ಯಕ್ತಿ ಬಸವಣ್ಣನವರು, ಬಸವಣ್ಣನವರು ಮಹಾಮಂತ್ರಿಯಾಗಿದ್ದರೂ ಕೂಡಾ.
“ಹೊನ್ನಿನೊಳಗೊಂದೊರೆಯ ಅನ್ನದೊಳಗೊಂದಗುಳ
ಸೀರೆಯೊಳಗೊಂದೆಳೆಯ ಇಂದಿAಗೆ ನಾಳಿಂಗೆ ಬೇಕೆಂದೆನಾದಡೆ
ನಿಮ್ಮಾಣೆ ನಿಮ್ಮ ಪುರಾತನರಾಣೆ ಕೂಡಲ ಸಂಗಮದೇವಾ.”
ಎನ್ನುವ ಬಸವಣ್ಣನವರ ಪ್ರಾಮಾಣಿಕ ನಿಲವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಬಸವಣ್ಣನವರು ಒಮ್ಮೆ ರಾಜ್ಯಭಾರದ ಕೆಲಸ ಮಾಡುತ್ತ ಕುಳಿತಿರುತ್ತಾರೆ. ಆಗ ಶರಣರೊಬ್ಬರು ಬಂದು ಚರ್ಚೆ ಮಾಡಲು ಬರುತ್ತಾರೆ. ಬಸವಣ್ಣನವರು ತಮ್ಮ ಮುಂದೆ ಇರುವ ದೀಪವನ್ನು ಶಾಂತಗೊಳಿಸಿ ಮತ್ತೊಂದು ದೀಪವನ್ನು ಹಚ್ಚಿ ಮಾತನಾಡನಾಡಲು ಕುಳಿತುಕೊಳ್ಳುತ್ತಾರೆ. ಆಗ ಆ ಶರಣರು ಬಸವಣ್ಣನವರಿಗೆ ಶರಣರೆ ನಾನು ಬಂದಾಗ ಬೇರೆ ದೀಪವಿತ್ತು ನಾನು ಬಂದು ಕುಳಿತಮೇಲೆ ಬೇರೆ ದೀಪವನ್ನು ಹಚ್ಚಿದರಿ ಇದರ ಮರ್ಮವೇನು ತಿಳಿಯಲಿಲ್ಲ ಅಂದಾಗ ಬಸವಣ್ಣನವರು ನೀವು ಬಂದಾಗ ನಾನು ಸರಕಾರಿ ಕೆಲಸ ಮಾಡುತ್ತಿದ್ದೆ ಆಗ ಮುಂದಿದ್ದದ್ದು ಸರಕಾರಿ ದೀಪ. ನೀವು ಬಂದಾಗ ನಾನು ಸರಕಾರಿ ದೀಪ ತೆಗೆದು ನನ್ನ ಸ್ವಂತ ಹಣದ ದೀಪ ಹಚ್ಚಿ ನಿಮ್ಮ ಜೊತೆ ಮಾತನಾಡಿದೆ ಎನ್ನುತ್ತಾರೆ. ಈ ಘಟನೆಯಿಂದ ಬಸವಣ್ಣನವರ ಪ್ರಾಮಾಣಿಕತೆಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ.
ಮಹಾಮಂತ್ರಿಯಾಗಿ ರಾಜ್ಯಭಾರ ಮಾಡಿದರೂ ಜನಕಲ್ಯಾಣದ ಆಶಯವನ್ನೆ ಪ್ರತಿಪಾದಿಸಿದಾತ. ಅರಸನ ಮನವನ್ನು ಬದಲಾಯಿಸಿ ಜನ ಮಾನಸದ ಶ್ರೇಯಸ್ಸಿನ ಕಡೆ ವಾಲುವಂತೆ ಮಾಡಿದ್ದು ಬಸವಣ್ಣನವರ ಮಹಾನ್ ಹೆಗ್ಗಳಿಕೆಯೆ ಸರಿ. ಅರಸರ ವಿಚಾರದ ಬಗ್ಗೆ ಬಸವಣ್ಣನವರು ತಮ್ಮದೊಂದು ವಚನದಲ್ಲಿ ಹೀಗೆ ಹೇಳುತ್ತಾರೆ.
“ಅರಸುವಿಚಾರ, ಸಿರಿಯು ಶ್ರೀಂಗಾರ
ಸ್ಥಿರವಲ್ಲ ಮಾನವ!
ಕೆಟ್ಟಿತ್ತು ಕಲ್ಯಾಣ ಹಾಳಾಯಿತ್ತುನೋಡಾ! ಒಬ್ಬಜಂಗಮದಭಿಮಾನದಿಂದ
ಚಾಳುಕ್ಯರಾಯನ ಆಳ್ವಿಕೆ ತೆಗೆಯಿತ್ತು.
ಸಂದಿತ್ತು ಕೂಡಲಸಂಗಮದೇವ ನಿನ್ನ ಕವಳಿಗೆಗೆ”.
ಎನ್ನುವ ವಚನ ಅರಸು ಎಷ್ಟೆ ಪ್ರಗತಿ ಪರವಾಗಿದ್ದರೂ ಕೂಡಾ ಪುರೋಹಿತಶಾಯಿ ವ್ಯವಸ್ಥೆಯ ತಂತ್ರಗಾರಿಕೆಗೆ ಮಣಿಯಲೇಬೇಕಾಗುತ್ತದೆ ಎಂಬುದಕ್ಕೆ ಅರಸು ಬಿಜ್ಜಳನು ಮಹಾಮಂತ್ರಿ ಬಸವಣ್ಣನವರನ್ನು ಗಡಿಪಾರು ಶಿಕ್ಷೆ ಕೊಡುವ ಪೂರ್ವದಲ್ಲಿ ನಿರಪರಾಧಿ ಶರಣರಗೆ ಅರಸು ಕೊಡುವ ಎಳೆಹೂಟಿ ಶಿಕ್ಷೆಯ ಪ್ರತಿಭಟನಾರ್ಥವಾಗಿ ಮಂತ್ರಿ ಪದವಿಯನ್ನು ತಲೆಯ ಮೇಲಿನ ಕಿರೀಟ ಮತ್ತು ಖಡ್ಗವನ್ನು ಅರಸನ ಮುಂದಿಟ್ಟಾಗ ಬಿಜ್ಜಳ ದಿಘ್ಬ್ರಮೆಯಾಗುತ್ತಾನೆ. ಬಸವಣ್ಣನವರು ಅಧಿಕಾರ ತ್ಯಜಿಸುವುದನ್ನು ತಲೆಯ ಮೇಲಿನ ಧೂಳನ್ನು ಕೊಡವಿದಂತೆ ಕೊಡವಿ ಎದ್ದು ಹೋಗುವ ಅವರ ಭಾವ ಎಂತಾದ್ದಾಗಿತ್ತು ಎಂಬುದನ್ನು ತಿಳಿಸುತ್ತದೆ. ಅವರು ಅಧಿಕಾರ ಒಂದು ಅವಕಾಶ ಅದನ್ನು ಜನಕಲ್ಯಾಣಕ್ಕೆ ಬಳಸಬೇಕೆ ಹೊರತು ಸ್ವಾರ್ಥಕ್ಕಲ್ಲ ಎಂಬ ವಿಚಾರ ಸ್ಪಷ್ಟವಾಗುತ್ತದೆ.
ಮಹಾತ್ಮಾ ಗಾಂಧೀಜಿಯವರು ಮನುಷ್ಯನ ಬದುಕಿನಲ್ಲಿ ಇರಬೇಕಾದ ಸಪ್ತ ಸೂತ್ರಗಳ ಬಗ್ಗೆ ಹೇಳಿರುವ ಮಾತುಗಳನ್ನು ಪ್ರತಿ ವ್ಯಕ್ತಿ ತಿಳಿದುಕೊಳ್ಳಬೇಕಾದ ಸಂಗತಿಗಳಾಗಿವೆ.
“ತತ್ವವಿಲ್ಲದ ರಾಜಕೀಯ
ನೀತಿಇಲ್ಲದ ವ್ಯಾಪಾರ
ಶ್ರಮವಿಲ್ಲದ ಸಂಪತ್ತು
ಆತ್ಮಸಾಕ್ಷಿ ಇಲ್ಲದ ಭೋಗ
ಶೀಲವಿಲ್ಲದ ಜ್ಞಾನ
ಮಾನವೀಯತೆ ಮರೆತ ವಿಜ್ಞಾನ
ತ್ಯಾಗವಿಲ್ಲದ ಪೂಜೆ.”
ಇಷ್ಟನ್ನು ಮನುಷ್ಯ ಪಾಲಿಸಿದರೆ ಆತ ಸಂತನೆ ಆಗುತ್ತಾನೆಂಬುದರಲ್ಲಿ ಸಂದೇಹವಿಲ್ಲ. ಸ್ವಾತAತ್ರ್ಯ ಹೋರಾಟದಲ್ಲಿ ಹೋರಾಡುವದರ ಜೊತೆಯಲ್ಲಿಯೂ ಜನಸಾಮಾನ್ಯರ ಸಮಸ್ಯಗಳ ಚಿಂತನೆಯನ್ನು ಅಳವಡಿಸಿಕೊಂಡವರು ಮಹಾತ್ಮಾ ಗಾಂಧೀಜಿಯವರು.ದೀನರ ದಲಿತರ ದಮನಿತರ ಪರವಾಗಿ ಆಲೋಚಿಸಿದ ಗಾಂಧೀಜಿಯವರು ಎಂದೂ ತಮ್ಮ ಮಡದಿ ಮಕ್ಕಳು ಸಂಸಾರದ ಬಗ್ಗೆ ತಲೆ ಕೆಡಸಿಕೊಳ್ಳಲಾಗಲಿಲ್ಲ. ಅವರ ಹೋರಾಟ ಯಶಸ್ವಿಯಾಗಿ ಅಧಿಕಾರ ದೇಶಕ್ಕೆ ದೊರಕಿಸಿದಾಗಲೂ ಕೂಡಾ ಅವರ ಶಿಷ್ಯನಂತಿದ್ದ ಜವಾಹರಲಾಲ ನೆಹರು ಪ್ರಧಾನಿಯಾಗಿ ಅಧಿಕಾರ ಹಿಡಿಯುವಾಗಲೂ ಕೂಡಾ ಅವರು ಆ ಸಂಭ್ರಮದಲ್ಲಿ ಭಾಗಿಯಾಗದೆ ಹಿಂದು ಮುಸ್ಲಿಮರು ಬಡಿದಾಡಿರುವ ಸ್ಥಳಕ್ಕೆ ಹೋಗಿ ಅವರಿಗೆ ಸಾಂತ್ವನ ಹೇಳುವಲ್ಲಿ ಇದ್ದರೆಂದರೆ ಅವರಿಗೆ ಅಧಿಕಾರದ ಲವಲೇಶದ ಆಸೆ ಅವರಲ್ಲಿರಲಿಲ್ಲ ಎಂಬ ಮಾತು ಸ್ಪಷ್ಟವಾಗುತ್ತದೆ. ಕನಿಷ್ಟ ಪಕ್ಷ ಕಾಂಗ್ರೇಸ್ ಪಕ್ಷದ ಅಧ್ಯಕ್ಷರೂ ಕೂಡಾ ಆಗಲಿಲ್ಲವೆಂದರೆ ಅವರಿಗೆ ಅಧಿಕಾರವನ್ನು ಎಂದೂ ಕನಸು ಮನಸಿನಲ್ಲಿಯೂ ನಿರೀಕ್ಷಿಸಿದವರಲ್ಲ ಎಂಬುದು ಅವರ ಬದುಕಿನ ಘಟನೆಗಳೆ ಸಾಕ್ಷಿಯಾಗುತ್ತವೆ ಅಲ್ಲವೆ.
ಮನುಷ್ಯನ ಬಣ್ಣ ಕೂಡಾ ಆತನ ವ್ಯಕ್ತಿತ್ವಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ದಕ್ಷಿಣ ಆಫ್ರೀಕಾದಲ್ಲಿ ನಡೆದ ಹೋರಾಟವು ಕಾರಣವಾಗುತ್ತದೆ.ಅಲ್ಲಿ ಮೂಲ ನಿವಾಸಿಗಳು ಕಪ್ಪು ಬಣ್ಣವಿದ್ದುದ್ದೆ ಶತಶತಮಾನಗಳ ಕಾಲ ಅಧಿಕಾರ ವಂಚಿತರಾದ ಉದಾಹರಣೆಯೆ ಸಾಕ್ಷಿಯಾಗಿದೆ. ನೆಲ್ಸನ್ ಮಂಡೇಲಾರ ಹೋರಾಟದ ಫಲವೆ ಕಪ್ಪು ಜನರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣವಾಯಿತು ಎಂಬಮಾತು ಸತ್ಯವಾದ ಮಾತು.
ದಕ್ಷಿಣ ಆಫ್ರಿಕಾದ ಗಾಂಧಿಯಂದೆ ಕರೆಯಲ್ಪಡುವ ನೆಲ್ಸನ್ ಮಂಡೇಲಾರು ಮಹಾತ್ಮಾ ಗಾಂಧೀಜಿಯ ಅವರ ಅಹಿಂಸಾ ತತ್ವವನ್ನೆ ಆಚರಿಸುವುದರ ಮೂಲಕ ಬದುಕಿದವರು. ಬದುಕಿನ ಅವರ ಇಡೀ ಜೀವನವನ್ನೆ ಜೈಲಿನಲ್ಲಿ ಕಳೆದರು. ಹೋರಾಟದಲ್ಲಿ ಸದಾ ಜೈಲಿನಲ್ಲಿರಬೇಕಾದ ಪರಿಸ್ಥಿಗಾಗಿ ತಮ್ಮ ಹೆಂಡತಿಯನ್ನು ನನ್ನಿಂದ ನಿನಗೇನು ಸುಖ ಸಿಗಲಾರದು ಹೆಣ್ಣಿನ ದು:ಖವನ್ನು ಅರ್ಥಮಾಡಿಕೊಂಡು ನೀನು ಮರು ಮದುವೆಮಾಡಿಕೊ ಎಂದು ಹೇಳಿದ ಮಹಾನ್ ಸಂತ. ದೇಶವನ್ನು ಸ್ವಾತಂತ್ರ್ಯ ಕೊಡಿಸಿ ಅಧ್ಯಕ್ಷನಾಗಿ ಆಯ್ಕೆಯಾಗಿ ಆಡಳಿತಮಾಡಿ ಎರಡನೇ ಅವಧಿ ಬಯಸದೆ ಮತ್ತೊಬ್ಬರಿಗೆ ಅವಕಾಶಮಾಡಿಕೊಟ್ಟ ಅಪರೂಪದ ಹೋರಾಟಗಾರ. ಸಾಯುವವರೆಗೆ ನಾವೆ ಅಧಿಕಾರದಲ್ಲಿರಬೇಕು ಎಂಬ ರಾಜಕಾರಣಿಗಳೆ ತುಂಬಿರುವ ಜಗತ್ತಿನಲ್ಲಿ ಬಸವಣ್ಣನವರು, ಮಹಾತ್ಮಗಾಂಧೀಜಿ, ನೆಲ್ಸನ್ ಮಂಡೆಲಾರಂತ ವ್ಯಕ್ತಿಗಳು ಅಪರೂಪವಾಗಿ ಸಿಗುತ್ತಾರಷ್ಟೆ. ಅಂತವರು ಮಾತ್ರ ಇತಿಹಾಸದಲ್ಲಿ ದಾಖಲಾಗುತ್ತಾರೆ. ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ.
ಶಿವಣ್ಣ ಇಜೇರಿ
ಮನುವಿನ ಮೊಮ್ಮಗನೊಂದಿಗೆ ಸಂದರ್ಶನ
ಇಪ್ಪತ್ತು ವರ್ಷಗಳ ಹಿಂದೆ ಪ್ರಮೋದ ಮುತಾಲಿಕ್ ಅವರೊಂದಿಗೆ ಅಗ್ನಿಅಂಕುರ ಪತ್ರಿಕೆಗೆ ನಡೆಸಿದ ಸಂದರ್ಶನ ಬಸವಮಾರ್ಗದ ಓದುಗರಿಗಾಗಿ. ಧರ್ಮವನ್ನು ಗುತ್ತಿಗೆ ಹಿಡಿದವರಂತೆ ವರ್ತಿಸುತ್ತಿರುವ…
ಚಿತ್ರದುರ್ಗ ಶ್ರೀಗಳ ಮೇಲಿನ ಆರೋಪ ಸತ್ಯಕ್ಕೆ ದೂರ
ಸಮಸ್ತ ಕರ್ನಾಟಕದ ಲಿಂಗಾಯತ ಮಠಾಧೀಶರ ನನ್ನ ಕಳಕಳಿಯ ಮನವಿ. ಇವತ್ತಿನ ದಿನಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಚಿತ್ರದುರ್ಗ ಮುರುಘಾಮಠದ ಮೇಲೆ. ಶ್ರೀಗಳ ಮೇಲೆ…
ಬಾಳಬೇಕಾದ ವಯಸ್ಸಿನಲ್ಲೇ ನಂದೀಶ್ ಕಣ್ಮರೆಯಾದನೇಕೆ ?
ನಾಳೆ ಬಪ್ಪುದು ನಮಗಿಂದೆ ಬರಲಿ ಇಂದು ಬಪ್ಪುದು ನಮಗೀಗಲೆ ಬರಲಿ ಇದಕಾರಂಜುವರು ಇದಕಾರಳುಕುವರು `ಜಾತಸ್ಯ ಮರಣಂ ಧ್ರುವಂ’ ಎಂದುದಾಗಿ ನಮ್ಮ ಕೂಡಲಸಂಗಮದೇವರು…
ಉಡುಪಿಯ_ಕೃಷ್ಣಮಠವನ್ನು_ಪ್ರವೇಶಿಸಲು_ನಿರಾಕರಿದ_ಮಹಾತ್ಮ
ಉಡುಪಿಯ_ಕೃಷ್ಣಮಠವನ್ನು_ಪ್ರವೇಶಿಸಲುನಿರಾಕರಿದ_ಮಹಾತ್ಮ ಮಹಾತ್ಮಾ ಗಾಂಧೀಜಿ ಅವರು ಉಡುಪಿ ಜಿಲ್ಲೆಗೆ ಬಂದದ್ದು ಕೇವಲ ಒಂದು ಬಾರಿ, ಅದು 1934ರ ಫೆ.25ರಂದು. ಆದರೇ ಅವರು ಕೃಷ್ಣಮಠಕ್ಕೆ…
ಎಲ್ಲಾ ಪ್ರಭಾವಗಳಿಂದ ಮುಕ್ತರಾಗಿ – ಓಶೋ
ಎಲ್ಲಾ ಪ್ರಭಾವಗಳಿಂದ ಮುಕ್ತರಾಗಿ.. ಓಶೋ ———————————————— ಎಲ್ಲಾ ಪ್ರಭಾವಗಳು ಗುಲಾಮಗಿರಿ, ಬಂಧನ, ಸೆರೆವಾಸವನ್ನು ಸೃಷ್ಟಿಸುತ್ತವೆ. ಯಾವಗ ನೀವು ಎಲ್ಲ ಪ್ರಭಾವಗಳಿಂದ ಮುಕ್ತವಾಗುವಿರೋ…
ಕಡಕೋಳ ಮಡಿವಾಳಪ್ಪನ ಕುರಿತು ಇನ್ನಷ್ಟು ಅಧ್ಯಯನ ಮಾಡಬೇಕಿದೆ.
ಬಹುಮುಖಿ ನೆಲೆಗಳಿಂದ ಇನ್ನು ಮಡಿವಾಳಪ್ಪನವರನ್ನು ಹುಡುಕಬೇಕಾದ ತುರ್ತಿದೆ. ಕೇವಲ ಸಾಹಿತ್ಯ, ಜಾನಪದಿಯ, ಪರಿಧಿಯಿಂದ ನೋಡದೆ ಬಹುಮುಖಿ ನೆಲೆಯಿಂದ ನೋಡಬೇಕಾದ ಜರೂರು ಇದೆ…
ದುಡಿದೆ ಸತ್ತ ನಮ್ಮವ್ವ–ಕುಡಿದೆ ಸತ್ತ ನಮ್ಮಪ್ಪ.
ದುಡಿದೆ ಸತ್ತ ನಮ್ಮವ್ವ–ಕುಡಿದೆ ಸತ್ತ ನಮ್ಮಪ್ಪ ————————————- ಮೇ ೧ ಕಾರ್ಮಿಕರ ದಿನಾಚರಣೆ ಅದು ದುಡಿದು ತಿನ್ನುವವರ ದಿನಾಚರಣೆ. ಅದು ಕಾಕತಾಳಿಯವೆನ್ನುವಂತೆ…
ಶರಣರ ವಚನಗಳು ಸಹಕಾರಿ ಸಂಘಟನೆಯನ್ನು ಬಲವರ್ಧನೆಗೊಳಿಸುತ್ತವೆ
ಶರಣರ ವಚನಗಳು ಸಹಕಾರಿ ಸಂಘಟನೆಯನ್ನು ಬಲವರ್ಧನೆಗೊಳಿಸುತ್ತವೆ ಸಹಬಾಳ್ವೆ ಸಹಕಾರ ಇಲ್ಲದೆ ಜೀವನ ಸಾಗಿಸಲು ಸಾಧ್ಯವಿಲ್ಲ. ಪರಸ್ಪರ ಸಹಕಾರದ ಮೂಲಕವೆ ಕುಟುಂಬಗಳ ಬೆಳವಣಿಗೆ…