*ಪುಸ್ತಕ ಪ್ರಪಂಚವೆ ನನ್ನ ಪ್ರಪಂಚ*

*ಪುಸ್ತಕ ಪ್ರಪಂಚವೆ ನನ್ನ ಪ್ರಪಂಚ* ಈ ಕವಲು ದಾರಿಯ ಒಂಟಿ ಪಯಣದಲ್ಲಿ ನನ್ನ ಪುಸ್ತಕ ಪ್ರಪಂಚವೇ ನನ್ನ ನಿಜವಾದ ಗೆಳೆಯ, ನಿಜ…

*ನನ್ನ ನೆಲೆಯ ಮೂಲ ಯಾವುದು ?*

ನನ್ನ ನೆಲೆಯ ಮೂಲ ಯಾವುದು? ಹೆಣ್ಣು ಪ್ರತಿಯೊಂದು ಹಂತದಲ್ಲೂ ಒಂದೊಂದು ಕಷ್ಟಗಳನ್ನು ಎದುರಿಸುತ್ತಾಳೆ,ಆದರೆ ತುಂಬಾ ನೋವಾಗುವ ಸಂದರ್ಭ ಯಾವುದು ಗೊತ್ತೇ? ಮದುವೆಯ…

ಗಾಂಧೀಜಿಯವರು ಭಾರತದ ಅಖಂಡತ್ವ ಹಾಳು ಮಾಡಿದರೆ ಇತ್ಯಾದಿ …?

ಯುವಕರಿಗೆ ಕಾಡುವ ಪ್ರಶ್ನೆಗಳಿಗೆ ಪ್ರಬುದ್ಧ ಉತ್ತರ ( ಸಾಮಾನ್ಯ ಮನುಷ್ಯನ ಸಾಮಾನ್ಯ ಪ್ರಶ್ನೆ ಹಾಗೂ ಅವಲೋಕನ) 1) ಗಾಂಧಿಯವರು ದೇಶವನ್ನು ಎರಡು…

ಒಂದು ಲೋಹದ ಬಗ್ಗೆ ಇಷ್ಟೆಲ್ಲಾ ಕಾಳಜಿ ವಹಿಸುವ ನೀವು ನಿಮ್ಮ ಜೀವನಾಧಾರವಾಗಿರುವ, ಮಾರ್ಗದರ್ಶಿಯಾಗಿರುವ ಮೌಲ್ಯಗಳನ್ನ, ನಂಬಿಕೆಗಳನ್ನೇಕೆ ಪರೀಕ್ಷೆಗೆ ಒಳಪಡಿಸುವುದಿಲ್ಲ? You ought to put your faith to the test of the fire of truth

ನಂಬಿಕೆ, ಮೂಢನಂಬಿಕೆ ಮತ್ತು ಸಾಂಸ್ಕೃತಿಕ ಆಚರಣೆಗಳು- ಸಂ random ಥಾಟ್ಸ್ ಗೆಲಿಲಿಯೋ ಟೆಲಿಸ್ಕೋಪ್ ಕೊಂಡು ಹಿಡಿದು ಅದರ ಮೂಲಕ ಆಗಸವನ್ನು ನೋಡಲು…

ರಾಮಲೀಲಾ ಉತ್ಸವಗಳ ನಡುವೆ ರಾವಣಾಸುರನ ನೆನೆದು

ಬರಹ 0 ಡಿ.ಉಮಾಪತಿ  ಶ್ರೀಲಂಕೆಯ ರಾಷ್ಟ್ರವಾದವನ್ನು ಪ್ರತಿನಿಧಿಸುವ ಶಕಪುರುಷನೆಂದು ರಾವಣನನ್ನು ಪುನರುಜ್ಜೀವಿಸುವ ಆಂದೋಲನ ಆಧುನಿಕ ಶ್ರೀಲಂಕೆಯಲ್ಲಿ ಜರುಗಿತ್ತು! ರಾಮಲೀಲಾ ಉತ್ಸವಗಳ ನಡುವೆ…

ವಾಲ್ಮೀಕಿಯವರು ಪೂರ್ವಾಶ್ರಮದಲ್ಲಿ ಕಳ್ಳನಾಗಿದ್ದ, ದರೋಡೆಕೊರನಾಗಿದ್ದ ಎನ್ನುವ ಆಧಾರ ರಹಿತ ವಾದಗಳು

ಮಹರ್ಷಿ ವಾಲ್ಮೀಕಿ ಜಯಂತಿಯ ಆಚರಣೆ ಬದುಕಿನಲ್ಲಿ ಪರಿವರ್ತನೆ ತರುವ ಮಹಾಗಳಿಗೆಯಾಗಲಿ ಇಂದು ಪುಣ್ಯ ಪುರುಷ, ಭಾರತ ಮೊಟ್ಟ ಮೊದಲ ಆದಿ ಗ್ರಂಥ…

ವಚನ ಚಳುವಳಿ ಕೇವಲ ಧಾರ್ಮಿಕ ಚಳುವಳಿಯಲ್ಲ, ಆ ರೂಕ್ಷ ಧಾರ್ಮೀಕತೆಯನ್ನು ಮೀರಿದ ಒಂದು ಸಮಾಜೋಧಾರ್ಮಿಕ ಚಳುವಳಿ.

ಶರಣ ಸತಿ ಲಿಂಗಪತಿ #################### ವಚನ ಚಳುವಳಿ ಇದು ಕೇವಲ ಧಾರ್ಮಿಕ ಚಳುವಳಿಯಲ್ಲ, ಆ ರೂಕ್ಷ ಧಾರ್ಮೀಕತೆಯನ್ನು ಮೀರಿದ ಒಂದು ಸಮಾಜೋಧಾರ್ಮಿಕ…

ಬಸವಣ್ಣನವರು ಬ್ರಹ್ಮಚಾರಿಯಾಗಿದ್ದರೆ ?!

*ಅಖಂಡ ಬ್ರಹ್ಮಚಾರಿ ಗುರು ಬಸವಣ್ಣನವರೊಬ್ಬರೇ* -ಸಚ್ಚಿದಾನಂದ ಪ್ರಭು ಚಟ್ನಳ್ಳಿ ಸತಿಯ ಕಂಡು ವ್ರತಿಯಾದ ಬಸವಣ್ಣ. ವ್ರತಿಯಾಗಿ ಬ್ರಹ್ಮಚಾರಿಯಾದ ಬಸವಣ್ಣ. ಬ್ರಹ್ಮಚಾರಿಯಾಗಿ ಭವಗೆಟ್ಟನಯ್ಯಾ…

ಒಬ್ಬ ಲಿಂಗಾಯತ ನಾಯಕ ಹುಟ್ಟದಿರಲು ಕಾರಣವೇನು ?

ಒಬ್ಬ ಲಿಂಗಾಯತ ನಾಯಕ ಹುಟ್ಟದಿರಲು ಕಾರಣ 1) ಶರಣಧರ್ಮ ಆನೇಕ ಶತಮಾನ ಅಜ್ಞಾತ ವಾಸದಲ್ಲಿದಿದ್ದು . 2) ಹೊರಗಿನಿಂದ ಬಂದ ವೀರಶೈವ…

ತಲೆದಿಂಬ ಕೆಳಗೆ ಲಿಂಬಿಹಣ್ಣು ಇಟ್ಟರೆ ಸಮಸ್ಯೆ ಬಗೆಹರಿಯುತ್ತದಾ?

ಜ್ಯೋತಿಷ ಕಾಮನ್ ಸೆನ್ಸ್
———————————–
ಮೋಡ ನೋಡಿ ಇವತ್ತು ಖಂಡಿತ ಮಳೆ ಬಂದೆ ಬರುತ್ತದೆ ಎಂದು ಹೇಳುವ ಜ್ಯೋತಿಷಿಗಳು ಹೆಚ್ಚಾಗಿದ್ದಾರೆ. ಇವತ್ತು ಮಳೆ ಬರದೆ ಹೊದ್ರೆ ನನ್ನ ಜ್ಯೋತಿಷವೆ ಸುಳ್ಳು ಎಂದು ನಂಬಿಸುತ್ತಾರೆ. ಅಂತವರ ಕಾಲಿಗೆ ಹೊಗಿ ಬೀಳುವವರು ಹೆಚ್ಚಾಗಿದ್ದಾರೆ. ಸ್ಪಲ್ಪನ್ನಾದ್ರೂ ಜನಗಳಿಗೆ ಲಾಜಿಕ್ ಬೇಡವೆ?

ನೀವು ಎಷ್ಟು ದುಡಿದ್ರು ನಿಮ್ಮ ಕೈಯಲ್ಲಿ ಹಣ ನಿಲ್ಲುತ್ತೀಲ್ಲ. ಹೌದಲ್ಲವೆ! ಹೌದು ಸ್ವಾಮಿˌ ಎನೂ ಕರೆಕ್ಟಾಗಿ ಹೇಳಿದ್ರಿ. ಹಣವೆ ನಿಲ್ಲುತ್ತಿಲ್ಲ ಗುರುಗಳೆ. ಸಿಕ್ಕದೆನ್ನೆಲ್ಲ ಕೊಳ್ಳುವ ಮತ್ತು ಆಸೆ ಹೆಚ್ಚಾದ್ರೆ ಯಾರ ಹತ್ತಿರ ಹಣ ನಿಲ್ಲುತ್ತೆ.

ಮುಖ ನೋಡಿˌ ನೀವು ತುಂಬ ಒತ್ತಡದಲ್ಲಿದ್ದೀರಿ. ನಿಮಗೆ ಯಾವುದೋ ಸಮಸ್ಯೆ ಕಾಡುತ್ತೀದೆ. ನೀವು ತುಂಬ ಬೇಸರದಲ್ಲಿ ಇದ್ದೀರಿˌ ನಿಮ್ಮನ್ನು ನಿಮಗೆ ಬೇಕಾದವರೆ ಮೋಸ ಮಾಡಿದ್ದಾರೆ. ನೀವು ತುಂಬ ತೊಂದರೆಯಲ್ಲಿ ಇದ್ದಿರಿ….ಅದಕ್ಕೆ ˌ – – – ಗ್ರಹಗಳು – – – ಜಾಗದಲ್ಲಿ ಇವೆ- – – ಪರಿಹಾರಗಳಿವೆ- – – ಹಣವಾಗುತ್ತದೆ.

ಅಲ್ಲ ಜ್ಯೋತಿಷಿದ ಗುರುಗಳೇ ˌ ಈಗಿನ ಕಾಲದಲ್ಲಿ ಒತ್ತಡದಲ್ಲಿ ಇಲ್ಲದವನು ಯಾವನ್ನಾದ್ರೂ ಇದ್ದಾನೆಯೆ? ಸಮಸ್ಯೆ ಕಾಡುತ್ತಿರುವುದರಿಂದಲೆ ನಿಮ್ಮಂಥ ಜ್ಯೋತಿಷಿಗಳನ್ನು ಹುಡುಕಿಕೊಂಡು ಬರುವುದು. ಸಮಸ್ಯೆಯಿಲ್ಲದೆ ಇದ್ದರೇ ನಿಮ್ಮ ಹತ್ತಿರ ಯಾರು ಬರುತ್ತಾರೆ. ನಿನ್ನ ಹತ್ತಿರ ಬಂದವರು ಖುಷಿಯಾಗಿ ಇದ್ದವರು ಯಾಕೆ ತಾನೆ ಬರುತ್ತಾರೆ ˌ ಏನಾದ್ರೂ ಬೇಸರˌ ನೋವುˌ ದುಃಖ ಇದ್ದರೆ ತಾನೆ ಬರುವುದು. ನೀನು ಏನೂ ವಿಶೇಷವಾಗಿ ಹೇಳುವದು. ಮೋಸ ಎನು ಹೊರಗಿನವರು ಮಾಡಲು ಆಗುವುದೆ? ನಮಗೆ ತಿಳಿದವರೆ ತಾನೇ ಮೋಸ ಮಾಡುವದುˌ ಅವರು ಹಾಗೆ ಮಾಡಿದಾಗಲೇ ನೋವು ಆಗುವುದುˌ ಆ ನೋವಾದಾಗಲೆ ನಿಮ್ಮಂತವರ ಕಡೆ ಓಡಿ ಬಂದು ಪರಿಹಾರ ಕೇಳುವದು.

ಕೊರ್ಟ ವ್ಯವಹಾರˌ ಗಂಡ ಹೆಂಡತಿ ಸಮಸ್ಯೆ ˌ ಪ್ರೀತಿ ಪ್ರೇಮದ ಸಮಸ್ಯೆˌ ಸ್ತ್ರೀ ಪುರುಷ ವಶೀಕರಣ ಇವುಗಳನ್ನೆಲ್ಲ ಮಾಡುತ್ತೇನೆ ಅಂಥ ಹೇಳಿ ಪುಂಗಿ ಬಿಟ್ಟು ಕೈಗೊಂದು ದಾರˌ ಬೆರಳಿಗೊಂದು ಉಂಗುರˌ ಪೂಜೆ ಮಾಡಲು ಟೆಂಗಿನಕಾಯಿˌ ಜೇಬಲ್ಲಿ ಇಟ್ಟುಕೊಳ್ಳಲು ಲಿಂಬೆ ಹಣ್ಣು ಕೊಟ್ಟು ಒಳ್ಳೆಯ ಬಿಸಿನೆಸ್ ಮಾಡುತ್ತೀ ಬಿಡಪ್ಪಾ! ನಿನ್ನದೆ ಆರಾಮ ಕೆಲಸ. ಜನ ಎಂಥ ಮೂಢರು ಇಂಥವರನ್ನೆಲ್ಲ ನಂಬಿಕೊಂಡು ಅವರು ಕೇಳಿದಷ್ಟು ಹಣ ಕೊಡುತ್ತಿರಲ್ಲಾ ಏನು ಹೇಳಬೇಕು. ಹೀಗಾಗಿ ಜ್ಯೋತಿಷಿಗಳು ನಿಮ್ಮ ಭವಿಷ್ಯ ಹೇಳಿಹೇಳಿ ತಮ್ಮ ಭವಿಷ್ಯ ಉಜ್ವಲವಾಗಿಸಿಕೊಂಡಿದ್ದಾರೆ. ಕೊಟ್ಯಾಂತರ ರೂಪಾಯಿ ದುಡಿಯುತ್ತೀದ್ದಾರೆ. ಭೂತಕಾಲ ಮಾತ್ರ ಮನುಷ್ಯ ಬಳಿ ಇರುವದು. ವರ್ತಮಾನದಲ್ಲಿ ಬದುಕು ಇದೆ. ಭವಿಷ್ಯ ಹೇಗೆಯೆಂಬುವುದು? ಪ್ರಕೃತಿ ರಹಸ್ಯ. ಅದು ಯಾರು ತಿಳಿಯಲು ಆಗುವುದಿಲ್ಲ.

ಎಂದಾದರೂ ˌ ಲೇ ಬೋ…ಮಗನೆ ಕೊರ್ಟ್ ವ್ಯವಹಾರ ಹೇಗೆ ಬಗೆಹರಿಸುತ್ತಿಯೋ. ಗಂಡ – ಹೆಂಡತಿ ಸಮಸ್ಯೆ ಹೇಗೆ ಬಗೆಹರಸತ್ತಿ? ತಲೆದಿಂಬ ಕೆಳಗೆ ಲಿಂಬಿಹಣ್ಣ ಇಟ್ಟರೆ ಸಮಸ್ಯೆ ಬಗೆಹರಿಯುತ್ತದಾ? ಪ್ರೀತಿ ಪ್ರೇಮ ಹೇಗೆ ಸರಿ ಮಾಡುತ್ತೀ? ಸ್ತ್ರೀ ಪುರುಷ ವಶೀಕರಣ ಮಾಡುತ್ತೀ ಐಶ್ವರ್ಯ ರೈ ವಶಮಾಡಿಕೊಡು ನೊಡೋಣ? ಎಂದು ಯಾವಾಗ ಜನಗಳು ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸುತ್ತಾರೋ ಅಂದು ಈ ಜ್ಯೋತಿಷಗಳ ಅಂಗಡಿಗಳ ಬಂದ ಆಗುವವು.

ಟಿವಿ ಮಾಧ್ಯಮದವರು ಕೂಡˌ ಟಿಆರ್ ಪಿ ಗೊಸ್ಕರ ಬೆಳಗ್ಗೆಯೆ ಇಂಥವರನ್ನ ತಂದು ಕೂಡ್ರಿಸಿ ˌ ಇಂಥವರಿಗೆ ಹಣ ಮಾಡಲು ಅವಕಾಶ ಮಾಡುತ್ತೀದ್ದಾರೆ. ಸರಕಾರ ಇಂತ ಧಂಧೆಗಳನ್ನು ನಿಷೇಧಿಸಬೇಕು. ಮೌಢ್ಯತೆ ಭಿತ್ತುವದು ಕಾನೂನು ಪ್ರಕಾರ ಅಪರಾಧ. ಅದರೆಡೆ ಇವರ ಮೇಲೆಲ್ಲಾ ಕ್ರಮವಾಗಬೇಕು.

ಜಯದೇವಪ್ಪ

error: Content is protected !!