*ಬಸವ ತತ್ವದ ಮಣಿಯ ಹೊತ್ತು ನಡೆದ ಡಾ.ಚೆನ್ನಬಸವ ಪಟ್ಟದ್ದೇವರು*

*ಬಸವ ತತ್ವದ ಮಣಿಯ ಹೊತ್ತು ನಡೆದ ಡಾ.ಚೆನ್ನಬಸವ ಪಟ್ಟದ್ದೇವರು*

ತೀರಾ ಇತ್ತೀಚಿಗೆ ಭಾಲ್ಕಿಯ ಹಿರೇಮಠದ ಚೆನ್ನಬಸವ ಪಟ್ಟದ್ದೇವರ ಆಶ್ರಮದಲ್ಲಿ ನಡೆಯುತ್ತಿದ್ದ ವಚನ ಶ್ರಾವಣ ಕ್ರಾರ್ಯಕ್ರಮಕ್ಕೆ ಹೋಗಿದ್ದೆ. ಆಕಸ್ಮಿಕವಾಗಿ ಎಂಬಂತೆ ಬಸವ ಪಂಚಮಿಯೂ ಬಂದಿತ್ತು. ಆಗ ಅನಿವಾರ್ಯವಾಗಿ ನಾನು ಮಠದಲ್ಲಿಯೇ ಉಳಿಯುವ ಪ್ರಸಂಗ ಇದಿರಾಯಿತು. ನಾಗರ ಪಂಚಮಿಯ ದಿನ ಇಡಿ ರಾಜ್ಯದ ತುಂಬ ಜನರೆಲ್ಲ ನಾಗಪ್ಪನಿಗೆ ಹಾಲು ಎರೆದು ಬರುವುದು ರೂಢಿಗತವಾಗಿ ಬಂದ ಮೂಢನಂಬಿಕೆ. ಅಪ್ಯಾಯನ ಪ್ರಸಾದವಾದ ಹಾಲನ್ನು ಚೆಲ್ಲಬಾರದು ಎಂಬ ಅರಿವು ಜನರಿಗೆ ಯಾವತ್ತೂ ಬರುವುದೊ ನಾ ಕಾಣೆ. ಆದರೆ ಭಾಲ್ಕಿಯ ಹಿರೇಮಠದಲ್ಲಿ ಅಂದು ನೆರೆದಿದ್ದ ನೂರಾರು ಮಹಿಳೆಯರು ಮಠದಲ್ಲಿನ ಅನಾಥ ಮಕ್ಕಳಿಗೆ ಕುಡಿಯಲು ಹಾಲು ಕೊಟ್ಟ ಮಾದರಿಯ ಕಾರ್ಯಕ್ರಮವನ್ನು ನೋಡಿದೆ. ಕಣ್ಣುಗಳು ಇದನ್ನು ನೋಡಿ ಸಂತೃಪ್ತಿಯಿಂದ ಬೀಗಿದವು. ಕಂಗಳು ತುಂಬಿದ ಬಳಿಕ ನೋಡಲಿಲ್ಲ. ಮನ ತುಂಬಿದ ಬಳಿಕ ನೆನೆಯಿಲ್ಲ ಎಂದು ಭಾವುಕವಾಗಿ ಬಸವಣ್ಣನವರು ಹೇಳುವಂತೆ ಡಾ.ಚೆನ್ನಬಸವ ಪಟ್ಟದ್ದೇವರು ಭಾಲ್ಕಿಯ ಭಕ್ತರಲ್ಲಿ ಬಿತ್ತಿದ್ದ ವೈಚಾರಿಕ ಅರಿವನ್ನು ನೋಡಿ ಪುಳಕಗೊಂಡೆ. ಆಗ ನನಗೆ ತಕ್ಷಣ ನೆನಪಾದುದು ಪುಣ್ಯ ಸ್ತಿçà ಮಸಣ್ಣ ಅವರ ವಚನ.

ಎನ್ನನರಿಯಿಸದಿರುವೆ, ಎನ್ನನರಿಯಿಸು
ನಿನ್ನನರಿಯಿಸಬೇಡ.ಎನ್ನನರಿಯದವ ನಿನ್ನನರಿಯ,
ಎನ್ನನರಿಯಿಸದೆ ನಿನ್ನನರಿಯಿಸಿದಡೆ,
ನೀನೆನಗೆ ಗುರುವಲ್ಲ, ನಾ ನಿನಗೆ ಶಿಷ್ಯನಲ್ಲ.
ಎನ್ನನರಿಯಿಸಿದಡೆ ನೀನೆನಗೆ ಗುರು ; ನಾ ನಿನಗೆ ಶಿಷ್ಯ.
ಮಸಣಯ್ಯ ಪ್ರಿಯ ಗಜೇಶ್ವರಾ.

ತನ್ನ ತೆಕ್ಕೆಗೆ ಬಂದ ಬೀದರ ಜಿಲ್ಲೆಯ ಭಕ್ತರನ್ನು ಡಾ.ಚೆನ್ನಬಸವ ಪಟ್ಟದ್ದೇವರು ಕುರಿಗಳನ್ನಾಗಿ ಮಾಡಿಲ್ಲ. ಅವರವರ ಅರಿವನ್ನು ಅವರಿಗೆ ಮಾಡಿಸಿದ್ದಾರೆ. ಯಾವುದೆ ಭಕ್ತ ತಾನು ಯಾರು ಎಂಬುದನ್ನು ತಿಳಿದುಕೊಂಡಾದ ಮೇಲೆ ಸಹಜವಾಗಿಯೆ ಆತನಿಗೆ ಇನ್ನೊಬ್ಬರ ಪರಿಚಯವೂ ಸ್ಪಷ್ಟವಾಗಿ ಆಗುತ್ತದೆ. ತಾನು ಮಾಡುವ ಕಾರ್ಯ, ಭಕ್ತಿ ಮುಂತಾದವುಗಳ ಮೇಲೆ ಖಚಿತವಾದ ಅರಿವು ಮೂಡುತ್ತದೆ. ಬೀದರ ಜಿಲ್ಲೆಯ ಬಹುತೇಕರಿಗೆ ಬಸವ ತತ್ವದ ಅರಿವನ್ನು ಮೂಡಿಸಿದ ಡಾ.ಚೆನ್ನಬಸವ ಪಟ್ಟದ್ದೇವರು ಮಠಾಧೀಶರಿಗೆ ಮಾದರಿಯ ವ್ಯಕ್ತಿಗಳು.

ಮಠಾಧಿಪತಿಯಾಗಬೇಕಾದರೆ ಆತ ಜಾತಿ ಜಂಗಮನಾಗಿರಲೇಬೇಕು ಎಂಬುದೊಂದು ಅಲಿಖಿತ ನಿಯಮ. ಆದರೆ ಚೆನ್ನಬಸವ ಪಟ್ಟದ್ದೇವರು ಭಕ್ತ ವರ್ಗದವರಾಗಿಯೂ ಭಾಲ್ಕಿಯ ಹಿರೇಮಠಕ್ಕೆ ಮಠಾಧಿಪತಿಯಾದರು. ಬಸವಣ್ಣನವರ ಷಟಸ್ಥಲ ವಚನಗಳು ಮತ್ತು ಶ್ರೀ ಬಸವಲಿಂಗ ಶರಣರ ಗುರು ಕರುಣ ತ್ರಿವಿಧಿ ಎಂಬ ಗ್ರಂಥಗಳ ನಿರಂತರ ಓದು ಪಟ್ಟದ್ದೇವರನ್ನು ಪರಿಪಕ್ವ ಮಠಾಧೀಶರನ್ನಾಗಿ ಮಾಡಿತು. ಅಪ್ಪನು ನಮ್ಮ ಮಾದಾರ ಚೆನ್ನಯ್ಯ. ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ ಎಂಬ ಅಪ್ಪ ಬಸವಣ್ಣನವರ ವಚನ ಪೂಜ್ಯರಿಗೆ ದಾರಿ ದೀಪವಾಯಿತು. ಅಂದಿನ ಕರ್ಮಠ ಸಮಾಜವನ್ನು ಎದುರು ಹಾಕಿಕೊಂಡು, ಹಲವಾರು ಟೀಕೆ ಟಿಪ್ಪಣ ಗಳಿಗೆ ಗುರಿಯಾಗಿ ತಳ ಸಮೂಹದ ಜನಗಳನ್ನು ಅಪ್ಪಿಕೊಂಡರು. ಒಪ್ಪಿಕೊಂಡರು. ಮಾದಾರ ಚೆನ್ನಯ್ಯನ ಬೀಳುಡುಗೆಯ ಹೊದ್ದು ಬದುಕುವೆ ಎಂಬಂತೆ ಅಕ್ಷರಶಃ ದೀನ ದಲಿತ ದುಃಖಿತರ ಆಸರೆಗೆ ನೆರವಾದರು. ಅವರಿಗೆಲ್ಲ ಇಷ್ಟಲಿಂಗವನ್ನು ಕೊಟ್ಟು , ಅವರ ಪಾದೋದಕವನ್ನು ಸಹ ಪಡೆದರು. ಕರ್ಮಠ ಲಿಂಗಾಯತರೊAದಿಗೆ ಅವರನ್ನು ಒಂದೆ ಸಾಲಿನಲ್ಲಿ ಕೂಡ್ರಿಸಿ ಸಹಪಂಕ್ತಿ ಭೋಜನವನ್ನು ಮಾಡಿದರು. ಮಾನವರೆಲ್ಲ ಶಿವನ ಮಕ್ಕಳು ಎಂಬ ವಾಕ್ಯಕ್ಕೆ ಅರ್ಥವನ್ನು ತುಂಬಿದರು.

ಸ್ವಾತಂತ್ರದ ನಂತರವು ಸಹ ನಮ್ಮ ದೇಶದ ಹಲವಾರು ಗುಡಿಗಳಲ್ಲಿ ದಲಿತರಿಗೆ ಇಂದಿಗೂ ಪ್ರವೇಶ ನಿರಾಕರಿಸಲಾಗುತ್ತಿದೆ. ಆಶ್ಚರ್ಯವೆಂದರೆ ಡಾ, ಚೆನ್ನಬಸವ ಪಟ್ಟದ್ದೇವರು ದಶಗಳ ಹಿಂದೆಯೆ ಭಾಲ್ಕಿಯ ಭಾಲ್ಕೇಶ್ವರ ಗುಡಿಯಲ್ಲಿ ದಲಿತರನ್ನು ಕರೆದುಕೊಂಡು ಹೋದರು. ಆಗ ಇದಕ್ಕೆ ಅಡ್ಡಿ ಉಂಟು ಮಾಡಿದ ಪಟ್ಟಭದ್ರಶಕ್ತಿಗಳನ್ನು ತನ್ನ ತೋಳುಗಳಿಂದ ಒತ್ತಿ ಹಿಡಿದು,ದಲಿತರನ್ನು ಉದ್ದೇಶಿಸಿ : ‘‘ಏನಾದರೂ ಆದರೆ ನನಗಾಗಲಿ, ನೀವು ಒಳಗೆ ಹೋಗಿ ದೇವರಿಗೆ,ಬಾವಿಗೆ ಮುಟ್ಟಿ ರ‍್ರಿ’’ ಎಂದು ಅವರನ್ನು ಹುರಿದುಂಬಿಸಿದರು. ಇದಕ್ಕೆ ಸಾಕ್ಷಿಯಾದವರು ಇಂದಿಗೂ ಜೀವಂತವಾಗಿದ್ದಾರೆ. ಡಾ.ಚೆನ್ನಬಸವ ಪಟ್ಟದ್ದೇವರ ತಳ ಸಮೂಹದ ಜನಗಳ ಬಗೆಗಿನ ಪ್ರೇಮವನ್ನು ಕಂಡು ಕರ್ಮಠ ಲಿಂಗಾಯತರು ಎಗರಿ ಬಿದ್ದರು. ಮಠದಿಂದ ನಿತ್ಯ ಓಣ ಗಳಲ್ಲಿ ಹೋಗಿ, ಭಕ್ತರ ಮನೆಗಳಿಂದ ತರುತ್ತಿದ್ದ ಕಂತಿಭಿಕ್ಷಾ ವನ್ನು ನಿಲ್ಲಿಸಬೇಕೆಂದು ಹರಸಾಹಸ ಪಟ್ಟರು. ಆದರೆ ಡಾ.ಪಟ್ಟದ್ದೇವರ ಬಸವ ಸಂಕಲ್ಪದ ಮುಂದೆ ಕರ್ಮಠತನ ಬಾಗಿ ಹೋಯಿತು. ಛಲಬೇಕು ಶರಣಂಗೆ ಹಿಡಿದುದ ಬಿಡೆನೆಂಬ ಎಂಬ ಅಚಲವಾದ ಧೈರ್ಯಕ್ಕೆ ಗೆಲುವಾಯಿತು.

ಹೈದ್ರಾಬಾದ ನಿಜಾಮನ ಆಳ್ವಿಕೆಯ ಸಂದರ್ಭ. ಉರ್ದುವೆ ಶಾಸನಬದ್ಧ ಭಾಷೆ. ಶಾಲೆಗಳಲ್ಲೂ ಅದನ್ನೆ ಕಲಿಯಬೇಕೆಂಬ ಕಡ್ಡಾಯ ನಿಯಮ. ರಾಜಾಜ್ಞೆಯ ವಿರುದ್ಧ ಹೋಗುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕೆಲ್ಲ ಬಾರದು ಬಪ್ಪದು ಬಪ್ಪದು ತಪ್ಪದು ಎಂಬ ವೀರನ ಕ್ಷಾತ್ರತೇಜಬೇಕಾಗುತ್ತದೆ. ಡಾ. ಚೆನ್ನಬಸವ ಪಟ್ಟದ್ದೇವರು ಕನ್ನಡದ ಭಾಷೆಯ ಬಗೆಗೆ ಅಸೀಮ ಪ್ರೇಮ ಹೊಂದಿದವರು. ಜನ ಕನ್ನಡ ಭಾಷೆ ಕಲಿತರೆ ಅವರಿಗೆ ವಚನ ಸಾಹಿತ್ಯವೆಂಬ ಅಮೂಲ್ಯವಾದ ಸಂಪತ್ತು ದಕ್ಕುತ್ತದೆ. ಹೇಗಾದರೂ ಸೈ. ಜನ ಸಾಮಾನ್ಯರಿಗೆ ಕನ್ನಡ ಭಾಷೆ ಕಲಿಸಬೇಕು ಎಂಬ ತಹತಹ. ಶಾಲೆಯ ಕಟ್ಟಡದ ಹೊರಗೆ ಉರ್ದು ಬೋರ್ಡ ಹಾಕಿ ಒಳಗಡೆ ಕನ್ನಡ ಕಲಿಸುವ ಧೈರ್ಯ ತೋರಿದರು. ನಿಜಾಮನ ಹದ್ದಿನ ಕಣ ್ಣನಿಂದ ಪಾರಾಗಲು ಮೋರಗಿ, ಕಾರಾಮುಂಗಿ,ಲಾತೂರ, ಉದಗೀರ್, ಸಂಗಮ, ಕಮಾಲ ನಗರ ಹೀಗೆ ವಿವಿಧ ಸ್ಥಳಗಳಿಂದ ಮತ್ತೊಂದು ಸ್ಥಳಕ್ಕೆ ಶಾಲೆ ಸ್ಥಳಾಂತರಗೊಳ್ಳುತ್ತಲೆ ಇತ್ತು. ಅನಾಥ ಮಕ್ಕಳ ಊಟ, ಬಟ್ಟೆ ,ವಸತಿಗಾಗಿ ಮುಂಗೈಗೆ ಜೋಳಿಗೆ ಹಾಕಿ ಆಸಕ್ತ ಜನರಿಂದ ಹಣವನ್ನು ಸಂಗ್ರಹಿಸಿದರು.

ತಳ ಸಮೂಹಕ್ಕೆ ಹಾಗೂ ಮಹಿಳೆಯರಿಗೆ ಶಿಕ್ಷಣವನ್ನು ಕೊಟ್ಟರೆ ಸಾಕು. ಸಮಾಜ ತಂತಾನೆ ಬದಲಾವಣೆಗೊಳ್ಳುತ್ತದೆ ಎಂಬ ನಂಬಿಕೆ ಪಟ್ಟದ್ದೇವರಿಗೆ ಆದ್ದರಿಂದಲೆ ಶಾಲೆಗಳ ಸ್ಥಾಪನೆಗೆ ಹೆಚ್ಚು ಒತ್ತು ಕೊಟ್ಟರು. ಶ್ರೀ. ಚೆನ್ನಬಸವೇಶ್ವರ ಕಾಲೇಜು, ಶ್ರೀ. ಅಕ್ಕಮಹಾದೇವಿ ಕಾಲೇಜು ಮೈ ತಳೆದದ್ದು ಇಂಥ ಕರ್ತೃತ್ವ ಶಕ್ತಿಯಿಂದ. ಶ್ರೀಗಳು ಬ್ರಹ್ಮಚಾರಿಗಳು. ಆದರೆ ಮಹಿಳೆಯರ ಬಗೆಗೆ ಅವರದು ಅತೀವವಾದ ಕಾಳಜಿ. ಸ್ತಿçÃಯೊಬ್ಬಳು ಶಿಕ್ಷಣ ಕಲಿತರೆ ಆ ಮನೆ, ಆ ಕುಟುಂಬ, ಆ ಸಮಾಜ ತಂತಾನೆ ಪ್ರೌಢವಾಗುತ್ತದೆ ಎಂಬ ಕನಸು ಅವರದು. ಶಿವಶರಣೆ ಅಕ್ಕನಾಗಮ್ಮಳ ಕಾರಣಕ್ಕಾಗಿಯೇ ಬಸವಣ್ಣನವರೆಂಬ ಸ್ಪೋಟ ಆವಿರ್ಭಾವಗೊಳ್ಳಲು ಸಾಧ್ಯವಾಯಿತು ಎಂಬುದು ಪಟ್ಟದ್ದೇವರಿಗೆ ಖಚಿತವಾಗಿತ್ತು. ಆದ್ದರಿಂದಲೆ ಮಹಿಳೆಯ ಶಿಕ್ಷಣದ ಸಬಲಿಕರಣಕ್ಕೆ ಹೆಚ್ಚು ಒತ್ತು ನೀಡಿದರು.

ಉಂಡೊಡೆಯರಲ್ಲಿ ಕೊಂಬ ಪ್ರಸಾದ ಕಾರಿದ ಕೂಳು.
ಸಣ್ಣವರಲ್ಲಿ ಕೊಂಬ ಪ್ರಸಾದ ಸಂತೆಯ ಸೂಳೆಯ ಎಂಜಲು
ಅಳಿಯಲ್ಲಿ ಕೊಂಬ ಪ್ರಸಾದ ಅಮೇಧ್ಯ.
ಮಕ್ಕಳಲ್ಲಿ ಕೊಂಬ ಪ್ರಸಾದ ಗೋಮಾಂಸ.
ತಮ್ಮನಲ್ಲಿ ಕೊಂಬ ಪ್ರಸಾದ ಸಿಂಗಿ.
ನಂಟನಲ್ಲಿ ಕೊಂಬ ಪ್ರಸಾದ ನರಮಾಂಸ.
ವಂದಿಸಿ, ನಿಂದಿಸಿ ಕೊಂಬ ಪ್ರಸಾದವ
ಉರಿಲಿಂಗ ಪೆದ್ದಿಗಳರಸನೊಲ್ಲನವ್ವಾ

ಉರಿಲಿಂಗ ಪೆದ್ದಿಗಳ ಪುಣ್ಯ ಸ್ತಿçà ಕಾಳವ್ವೆಯ ವಚನ ಅವರಿಗೆ ನಿತ್ಯ ಮಾರ್ಗದರ್ಶಿ. ಕಾಯವನ್ನು ಬಳಲಿಸದೆ, ಹೊಟ್ಟೆಯನ್ನು ತುಂಬಿಸಿಕೊಂಡವರಲ್ಲ. ಬಸವಾದಿ ಶರಣರ ಚಿಂತನೆಗಳ ಬೀಜಗಳನ್ನು ಬಿತ್ತುತ್ತ ತಮ್ಮ ಹೊಟ್ಟೆಯನ್ನು ಹೊರೆದವರು. ತಮ್ಮ ತೊಂಬತ್ತರ ಇಳಿ ವಯಸ್ಸಿನಲ್ಲಿಯೂ ಸಹ ದೈಹಿಕ ಪರಿಶ್ರಮ ಪಡಲು ಹಿಂದೆ ಮುಂದೆ ನೋಡಲಿಲ್ಲ. ಯಾರಾದರೂ ಅಪ್ಪೋರೆ… ನಿಮಗೆ ವಯಸ್ಸಾಯಿತು. ಇಂಥ ಕೆಲಸ ಮಾಡಬೇಡಿ ಎಂದು ಅವರು ಅನುಭವ ಮಂಟಪದ ಕಟ್ಟಡಕ್ಕೆ ಕಲ್ಲು ಹೊರುವುದನ್ನು ನೋಡಿ ಹೇಳಿದಾಗ : ಕೈ ಕಾಲಲ್ಲಿ ಬಲ ಇರುವವರೆಗೂ ಕಾಯಕ ಮಾಡಬೇಕು. ಎಲ್ಲಿಯವರೆಗೆ ಊಟ ಮಾಡುತ್ತೇವೋ ಅಲ್ಲಿಯವರೆಗೆ ಕಾಯಕ ಮಾಡಲೇಬೇಕೆಂದು ಹೇಳಿದರು. ನುಡಿದಂತೆ ನಡೆದರು. ಈಗ ಬಸವ ಕಲ್ಯಾಣದಲ್ಲಿರುವ ಅನುಭವ ಮಂಟಪ ಕಟ್ಟಡದ ಮೂಲ ರೂವಾರಿಗಳು ಡಾ.ಚೆನ್ನಬಸವ ಪಟ್ಟದ್ದೇವರು ಎಂಬ ಹೆಮ್ಮೆ ನಮ್ಮೆಲ್ಲರಿಗೆ.

ಬಸವಣ್ಣನವರ ಭಕ್ತಿ, ವಿನಯ ಶೀಲತೆ, ನಿಷ್ಠುರತೆಗಳನ್ನು ವಚನಗಳ ಮೂಲಕ ಓದಿ ಅರಿತುಕೊಂಡಿದ್ದ ಡಾ.ಚೆನ್ನಬಸವ ಪಟ್ಟದ್ದೇವರು ಮೃದು ವಚನವೆ ಸಕಲ ಜಪ ತಪಂಗಳಯ್ಯ ಎಂಬAತೆ ಬದುಕಿ ಹೋದರು. ಸದಾ ಬಾಗಿದ ತಲೆ ಮುಗಿದ ಕೈಯಾಗಿರಿಸಿಕೊಂಡು ಶರಣ ತತ್ವವನ್ನು ಪಾಲಿಸಿದರು. ಅನಿವಾರ್ಯ ಸಂದರ್ಭ ಬಂದಾಗ ಸಿಡಿಲಿನಂತೆ, ಯಾರ ಮುಲಾಜಿಗೂ ಒಳಗಾಗದೆ ನಿಷ್ಠುರವಾಗಿಯೂ ಮಾತನಾಡುತ್ತಿದ್ದರು. ಯಾರು ಸಾತ್ವಿಕವಾದ ದಾರಿಯಲ್ಲಿ ನಡೆಯುತ್ತಾರೆ ಆ ವ್ಯಕ್ತಿ ವಿನಯಶೀಲನೂ ನಿಷ್ಠುರವಾದಿಯೂ ಆಗಿರುವುದು ಸಹಜವಾಗಿದೆ. ಡಾ. ಚೆನ್ನಬಸವ ಪಟ್ಟದ್ದೇವರು ಈ ಮಾತಿಗೆ ಉದಾಹರಣೆಯಾಗಿದ್ದರು.

ಕೀರ್ತಿ,ಪದವಿ, ಪ್ರಶಸ್ತಿಗಳ ಬಗೆಗೆ ಯಾವ ಲಕ್ಷವೂ ಇಲ್ಲದೆ ಜನ ಸಾಮಾನ್ಯನಂತೆ ಬಾಳಿ ಹೋದವರು. ತಾವು ಮಠಾಧೀಶರು ಎಂಬ ಯಾವ ಹಮ್ಮು ಬಿಮ್ಮುಳಿಲ್ಲದೆ ಸಾಮಾನ್ಯರ ಜೊತೆ ಶ್ರೀಸಾಮಾನ್ಯರಾಗಿ ವರ್ತಿಸುತ್ತಿದ್ದರು. ಎಷ್ಟೋ ಸಲ ಭಕ್ತರ ಜೊತೆಗೆ ಕುಳಿತು , ಅವರು ಪ್ರೀತಿಯಿಂದ ತಂದ ಆಹಾರವನ್ನೇ ಸೇವಿಸಿದ್ದಾರೆ. ಡಾ.ಪಟ್ಟದ್ದೇವರಿಗಾಗಿಯೇ ಯಾರಾದರೂ ವಿಶೇಷ ಅಡುಗೆ, ಹಣ್ಣು ಹಂಪಲ ತೆಗೆದುಕೊಂಡು ಹೋಗಿದ್ದರೆ ಅದನ್ನು ತಮ್ಮ ಮಠದಲ್ಲಿನ ಅನಾಥ ಮಕ್ಕಳಿಗೆ ಹಂಚಿ, ಅವು ತರಾತುರಿಯಲ್ಲಿ ತಿನ್ನುವುದನ್ನು ಕಣ ್ಣಂದ ನೋಡಿ ಸಂತೋಷ ಪಡುತ್ತಾರೆ.

ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಇಂದಿನ ಬೀದರ ಜಿಲ್ಲೆಯ ಹಲವಾರು ಊರು, ತಾಲೂಕುಗಳು ಮಹಾರಾಷ್ಟçಕ್ಕೆ ಸೇರ್ಪಡೆಯಾಗುತ್ತಿದ್ದವು. ಆದರೆ ಪಟ್ಟದ್ದೇವರು ರೈಲ್ ರೋಖೋ ಚಳುವಳಿಗೆ ಉತ್ತೇಜನ ಕೊಟ್ಟು, ಜನ ಜಾಗೃತಿಯನ್ನು ಉಂಟು ಮಾಡಿದ ಕೀರ್ತಿಗೆ ಅರ್ಹರಾಗಿದ್ದಾರೆ. ಸ್ವಾತಂತ್ರö್ಯ ಚಳುವಳಿಗೂ ಅಪರೋಕ್ಷವಾಗಿ ಸಹಾಯ ಸಹಕಾರಿ ನೀಡಿ ತಮ್ಮ ಸ್ವತಂತ್ರ ಮನೋಭಾವವನ್ನು ಪ್ರಕಟಗೊಳಿಸಿದ್ದಾರೆ.

ಕವಿ ಶಾಂತರಸ ರಾಯಚೂರು ಅವರು ಕಲಬುರಗಿಯ ಶರಣ ಬಸವೇಶ್ವರರ ಕುರಿತು ಕವಿತೆಯ ಸಾಲುಗಳಲ್ಲಿ ಹೀಗೆ ವಣ ðಸಿದ್ದಾರೆ.

ಯಾರ ನೋವೇ ಇರಲಿ ನಿನ್ನದೆಂದೆ ಬಗೆದೆ
ಯಾರತ್ತರೂ ನಿನ್ನ ಕಣ್ಣಲ್ಲಿ ನೀರು
ನೋವಳಿಸಿ ಕಣ ್ಣರನೊರಸಿ ತಿಳಿವೀಯುತ್ತ
ಪೊರೆದ ಜೀವರ ನೀನು ಕಾರುಣ್ಯ ಮೇರು

ಈ ನುಡಿ ಭಾಲ್ಕಿ ಅಪ್ಪಗಳ ಪಾದಾರವಿಂದಗಳಿಗೆ ಅರ್ಪಿಸಿದರೆ ಅದು ಸೂಕ್ತವೆಂದು ನನ್ನ ಭಾವನೆ. ಬಸವ ತತ್ವದ ಮಣ ಯ ಹೊತ್ತು ನಡೆದ ಡಾ.ಚೆನ್ನಬಸವ ಪಟ್ಟದ್ದೇವರು ದಾರ್ಶನಿಕರ ಸಾಲಿನಲ್ಲಿ ನಿಲ್ಲಲು ಯೋಗ್ಯರಾದವರು. ಬಸವಣ್ಣನೆ ತಂದೆ. ಬಸವಣ್ಣನೆ ತಾಯಿ. ಬಸವಣ್ಣನೆ ಸರ್ವ ಬಂದುವೆನಗೆ ಎಂಬ ಸಿದ್ಧರಾಮ ಶರಣರ ವಚನವನ್ನು ಇಂಬಾಗಿ ಇಟ್ಟುಕೊಂಡು ಬದುಕಿ ಬಾಳಿದ ಪುಣ್ಯ ಪುರುಷರು. ಅವರು ತಲೆಯ ಮೇಲೆ ಹೊತ್ತು ನಡೆದ ತತ್ವವನ್ನು ಇಂದಿನ ಡಾ. ಬಸವಲಿಂಗ ಪಟ್ಟದ್ದೇವರು ಹಾಗೂ ಶ್ರೀ ಗುರುಬಸವ ಪಟ್ಟದ್ದೇವರು ಹೃತ್ಕಮಲದಲ್ಲಿಟ್ಟುಕೊಂಡು ನಡೆ ನುಡಿಯಲ್ಲಿ ಪೂರೈಸುತ್ತಿರುವುದು ನಮಗೆಲ್ಲ ಸಂತೋಷದ ಸಂಗತಿಯಾಗಿದೆ.

೦ ವಿಶ್ವಾರಾಧ್ಯ ಸತ್ಯಂಪೇಟೆ


Leave a Reply

Your email address will not be published. Required fields are marked *

error: Content is protected !!