ಗಾಂಧೀಜಿಯವರು ಭಾರತದ ಅಖಂಡತ್ವ ಹಾಳು ಮಾಡಿದರೆ ಇತ್ಯಾದಿ …?

ಯುವಕರಿಗೆ ಕಾಡುವ ಪ್ರಶ್ನೆಗಳಿಗೆ ಪ್ರಬುದ್ಧ ಉತ್ತರ

( ಸಾಮಾನ್ಯ ಮನುಷ್ಯನ ಸಾಮಾನ್ಯ ಪ್ರಶ್ನೆ ಹಾಗೂ ಅವಲೋಕನ)

1) ಗಾಂಧಿಯವರು ದೇಶವನ್ನು ಎರಡು ತುಂಡು ಮಾಡಿದರು ?


ಇದು ಈಗ ಯುವಕರು ಹೇಳುವ ಸಾಮಾನ್ಯ ಹೇಳಿಕೆ… ಒಂದು ವೇಳೆ ಅವರು ಭಾಗವಾಗಲು ಒಪ್ಪದಿದ್ದರೆ ಮುಂದೆ ನಿರಂತರವಾಗಿ ಹೋರಾಟ ನಡೆದು , ಕೆಲವೇ ವರ್ಷಗಳಲ್ಲಿ ಪಾಕಿಸ್ತಾನ ಉದಯವಾಗುತ್ತಿತ್ತು … ಭಾಗ ಕೊಡದಿದ್ದರೆ ಗಾಂಧಿಯವರನ್ನು ಪಾಕಿಸ್ತಾನದವರು ಹತ್ಯೆ ಮಾಡುತ್ತಿದ್ದರೇನು? ಗೊತ್ತಿಲ್ಲ.

ಇಬ್ಭಾಗವಾಗುವ ಯೋಚನೆ ಬಂದ ಮನೆತನಗಳನ್ನು ನೋಡಿ ,,ನಿರಂತರ ಮನಸ್ತಾಪಗಳು ನಡೆದು ಕೊನೆಗೆ ಬೇರೆ ಬೇರೆಯಾಗುತ್ತಾರೆ. ಅಖಂಡ ಆಂದ್ರಪ್ರದೇಶ ಆಗಲು ಬಹಳಷ್ಟು ಜನರು ಜೀವ ತ್ಯಾಗ ಮಾಡಿದ್ದರು… ಮತ್ತೆ ಆಂದ್ರಪ್ರದೇಶ ಒಡೆಯಲು ಪ್ರಾಣ ತ್ಯಾಗ ಮಾಡಿ ಆಂದ್ರ ,ತೆಲಂಗಾಣ ಮಾಡಿದ್ದಾರೆ… ಜನರ ತಲೆಯಲ್ಲಿ ಇಬ್ಭಾಗ ಆಗಬೇಕೆಂದು ಬಂದರೆ ಅದು ಆಗೇ ಆಗುತ್ತದೆ …ಕೆಲ ವರ್ಷ ತಡ ಆಗಬಹುದು ಅಷ್ಟೇ.

ಗಾಂಧೀಜಿ ಅವರಿಂದ ಅಷ್ಟೇ ಸ್ವತಂತ್ರ ಬರಲಿಲ್ಲ , ಬಹಳಷ್ಟು ಸ್ವತಂತ್ರ ಹೋರಾಟಗಾರರ ತ್ಯಾಗದ ಫಲದಿಂದ ಸ್ವತಂತ್ರ ಬಂದಿದೆ ಎನ್ನುತ್ತಾರೆ ಹಾಗಾದರೆ ಭಾರತ ಇಬ್ಭಾಗವಾಗಲು ಸಹ ಬಹಳಷ್ಟು ಜನರ ಕೈವಾಡ , ಪರಿಶ್ರಮ ಇರಬೇಕು ಅಲ್ಲವೇ?

ಒಂದು ವೇಳೆ ಭಾಗವಾಗದೆ ಅಖಂಡ ಭಾರತ ಇದ್ದಿದ್ದರೆ ಸೌಹಾರ್ದಯುತವಾಗಿ ಇರುತ್ತಿತ್ತೆ?

ಈಗಿನ
ಮುಸ್ಲಿಮರು ಪರಕೀಯರಲ್ಲ ಅವರು ಈ ದೇಶದ ಮೂಲ ನಿವಾಸಿಗಳು.ಅದರಲ್ಲೂ ಬಹುಸಂಖ್ಯಾತ ಹಿಂದೂಗಳೆ ಮುಸ್ಲಿಂ ರಾಜರ ಕಾಲದಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದಾರೆ.

ಅವರ ನೆಲ ಪಾಕಿಸ್ತಾನ ಅಲ್ಲ ಭಾರತ. ಅವರಿಗೆ ಭಾರತವೇ safe ದೇಶ. ಅವರಿಗೆ ದೇಶ ಎಲ್ಲಾ ರೀತಿಯ ಸವಲತ್ತುಗಳನ್ನು ಕೊಡುತ್ತಾ ಬಂದಿದೆ ಹಾಗಾಗಿ ಭಾರತ ಮುಸ್ಲಿಂ ಸಮುದಾಯ ಎಲ್ಲಾ ರಂಗದಲ್ಲಿ ಸಾಧನೆ ಮಾಡುತ್ತಾ ಬಂದಿದೆ.
ಅಬ್ದುಲ್ ಕಲಾಂ ಅಂತಹ ಶ್ರೇಷ್ಠ ವಿಜ್ಞಾನಿಯನ್ನು ,ಇಬ್ರಾಹಿಂ ಸುತಾರ್ ಅಂತಹ ವಾಗ್ಮಿಗಳನ್ನು , ಅಜರುದ್ದಿನ್ ,ಪಠಾಣ್ ಸಹೋದರರು ,ಜಹಿರಖಾನ್ ,ಮಹಮ್ಮದ್ ಸಮಿ ,ಮಹಮ್ಮದ್ ಕೈಪ್ ,ಸಾನಿಯಾ ಮಿರ್ಜಾ ಆಟಗಾರರನ್ನು , ಮಹಮ್ಮದ್ ರಫಿ ಅಂತಹ ಹಾಡುಗಾರರನ್ನು , ಬಿಸ್ಮಿಲ್ಲಾ ಖಾನ್ ಅವರಂತ ಸಂಗೀತಗಾರರನ್ನು ಜಗತ್ತಿಗೆ ಕೊಟ್ಟಿದೆ.

ಧರ್ಮದ ಆಧಾರದ ಮೇಲೆ ಹುಟ್ಟಿದ ಪಾಕಿಸ್ತಾನ ಜಗತ್ತಿಗೆ ಏನು ಕೊಟ್ಟಿದೆ ಹೇಳಿ ನೋಡೋಣ?

ಒಂದು ದಿನದ ಮೊದಲೇ ಸ್ವತಂತ್ರ ಪಡೆದರೂ ಭಾರತದ ಪ್ರಗತಿ ಮುಂದೆ ಅದರ ಪ್ರಗತಿ ತುಂಬಾ ಕಡಿಮೆ.ಭಾರತ ವಿಜ್ಞಾನ ತಂತ್ರಜ್ಞಾನ ಬಾಹ್ಯಾಕಾಶ ಸಂಶೋಧನೆಯಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿದೆ.

ಭಾರತದಲ್ಲಿ ಮುಸ್ಲಿಂ ಮಹಿಳೆಯರಿಗೆ ಬದುಕಲು ಮುಕ್ತ ಅವಕಾಶ ನೀಡುತ್ತಾ ಬಂದಿದೆ.
ಶಿಕ್ಷಣದಲ್ಲಿ ಸಹ ಮುಸ್ಲಿಂ ವಿದ್ಯಾರ್ಥಿಗಳು ರ್ಯಾಂಕ್ ಪಡೆಯುತ್ತಿದ್ದಾರೆ.ಹಾಗಾಗಿ ಭಾರತೀಯ ಮುಸ್ಲಿಂ ಯುವ ಜನಾಂಗ ಪಾಕಿಸ್ತಾನದ ಮೇಲಿನ ಮೋಹ ಬಿಡಬೇಕು.

  1. ಮುಸ್ಲಿಂ ಯುವಕರಿಗೆ ಅಪ್ಜಲ್ ಗುರು ,ಕಸಬ್ ಅವರು ಸ್ಪೂರ್ತಿ ಆಗಬಾರದು…ನನ್ನನ್ನು ಗಲ್ಲಿಗೇರಿಸಿದ ನಂತರ ನನ್ನ ಹೆಣ ನೋಡಿ ಅಳಬೇಡ ,ಮದು ಮಗನಂತೆ ಕಳಿಸಿಕೊಡು ಎಂದು ತಾಯಿಗೆ ಪತ್ರ ಬರೆದು ಗಲ್ಲಿಗೇರಿದ ಅಶ್ಫಖುಲ್ಲಾ ಖಾನ್….
  2. ಹಾಗೆ ಇಂಕ್ವಿಲಾಬ್ ಜಿಂದಾಬಾದ್ ಬರೆದು ಸ್ವತಂತ್ರದ ಕಿಚ್ಚು ಹಚ್ಚಿಸಿದ್ದ , ಸ್ವತಂತ್ರದ ನಂತರ ಪಾಕಿಸ್ತಾನದವರು ನೆಲೆಸಲು ಕರೆದರೆ ಭಾರತವೇ ನನ್ನ ಜನ್ಮ ಭೂಮಿ ಎಂದು ಹೇಳಿದ ಉರ್ದು ಕವಿ ಮೌಲಾನಾ ಹಸ್ರತ್ ಮೊಹಾನಿ
    ಇಂತವರು ಮುಸ್ಲಿಂ ಯುವ ಸಮುದಾಯಕ್ಕೆ ಸ್ಪೂರ್ತಿ ಆಗಬೇಕು.ಹಾಗಾಗಿ ಹಿಂದೂ , ಮುಸ್ಲಿಂ ಸ್ವತಂತ್ರ ಹೋರಾಟಗಾರರು ಧರ್ಮದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡಲು ಪ್ರಾಣ ತ್ಯಾಗ ಮಾಡಿದರು.

3) ಗಾಂಧಿಯವರು ,,ಅರ್ಹತೆ ಇದ್ದ ವಲ್ಲಭ ಬಾಯಿ ಪಟೇಲರಿಗೆ ಪ್ರಧಾನಿ ಮಾಡಲಿಲ್ಲ.. ಎನ್ನುತ್ತೇವೆ.

 ಅರ್ಹತೆ ಇದ್ದ ಲಾಲ್ ಕೃಷ್ಣ ಅಡ್ವಾನಿಯವರು ಪ್ರಧಾನ ಮಂತ್ರಿ , ರಾಷ್ಟ್ರಪತಿ ಯಾಕೆ ಆಗಲಿಲ್ಲ ?
ಪಕ್ಷ ಕಟ್ಟಲು ಶ್ರಮಿಸಿದ ಉಮಾಭಾರತಿ , ಮುರಳಿ ಮನೋಹರ ಜೋಶಿಯವರು ಯಾಕೆ ಉಪರಾಷ್ಟ್ರಪತಿ ಆಗಲಿಲ್ಲ?

ನಮ್ಮ ರಾಜ್ಯದ ಹಿಂದೂ firebrand ಬಸವರಾಜ ಪಾಟೀಲ ಯತ್ನಾಳ , ಹಿಂದೂ ಮತ ಪಡೆದು ಅಧಿಕಾರದಲ್ಲಿರುವ ಸರ್ಕಾರದಲ್ಲಿ ಕೊನೆಯ ಪಕ್ಷ ಮಂತ್ರಿ ಯಾಕೆ ಆಗಲಿಲ್ಲ?


ಪ್ರಮೋದ್ ಮುತಾಲಿಕ್ ಅವರಿಗೆ ಯಾಕೆ ಟಿಕೆಟ್‌ ಕೊಡಲಿಲ್ಲ , ಚುನಾವಣೆ ಸ್ಪರ್ಧಿಸಿದರೂ ಯಾಕೆ ಗೆಲ್ಲಲಿಲ್ಲ?ಅರ್ಹತೆ ಇದ್ದರೂ ಪ್ರಹ್ಲಾದ್ ಜೋಶಿ , ಮಲ್ಲಿಕಾರ್ಜುನ ಖರ್ಗೆ ಯಾಕೆ ಮುಖ್ಯ ಮಂತ್ರಿ ಆಗಲಿಲ್ಲ ?

ಹೀಗೆ ರಾಜಕೀಯದಲ್ಲಿ ಆಗಿನ ಸನ್ನಿವೇಶ ,ಸಂಧರ್ಭಗಳಲ್ಲಿ ಆ ಬೆಳವಣಿಗೆಗಳು ನಡೆಯುತ್ತಿರುತ್ತವೆ..ಅದು ಕಾಲವೇ ನಿರ್ಣಯ ಮಾಡುತ್ತದೆ.

ಹಾಗೆ ನೋಡಿದರೆ ವಲ್ಲಭ ಬಾಯಿ ಪಟೇಲರು ಗೃಹ ಸಚಿವರಾಗಿ ಅಖಂಡ ಭಾರತ ಒಂದು ಮಾಡಿದರು.ನಮ್ಮ ಹೈದರಾಬಾದ್ ಕರ್ನಾಟಕ ಸ್ವತಂತ್ರ ಪಡೆಯಲು ಅವರೇ ಕಾರಣ.
ಉಕ್ಕಿನ ಮನುಷ್ಯ ,ಸರ್ದಾರ್ ವಲ್ಲಭ ಬಾಯಿ ಪಟೇಲರು ಎಲ್ಲರ ಮನದಲ್ಲಿಯೂ ಸ್ಥಾನ ಪಡೆದಿದ್ದಾರೆ.

ಈ ಕೆಳಗಿನ‌ಲಿಂಕ್ ಒತ್ತಿ, ಬರಹವನ್ನು ಓದಿರಿ

ಜಾತಿಯ ಹೊಲಸು, ಸಂವಿಧಾನ, ವಿವೇಕಾನಂದರು ಇತ್ಯಾದಿ…

3) ದೇಶದಲ್ಲಿ ಒಂದೇ ಧರ್ಮ ಇರಬೇಕು ಮತ್ತು ಪಕ್ಕದ ರಾಷ್ಟ್ರಗಳು ಸಹ ಅದೆ ಧರ್ಮ ಇದ್ದರೆ safe ? ಎನ್ನುತ್ತಾರೆ.

ಇದು ಕೂಡ ತಪ್ಪು ತಿಳುವಳಿಕೆ.
ರಷ್ಯಾ ,ಉಕ್ರೇನ್ ಎರಡು ಒಂದೇ ಧರ್ಮದ ದೇಶಗಳಾದರೂ ಯುದ್ಧ ನಡೆಯುತ್ತಿದೆ ಅಲ್ಲವೇ?
ಇರಾಕ್ ,ಇರಾನ್ ,ಬಾಂಗ್ಲಾ ಪಾಕಿಸ್ತಾನ ಒಂದೇ ಧರ್ಮದ ದೇಶಗಳಿದ್ದರೆ ಗಡಿಗಳಲ್ಲಿ ನಿರಂತರ
ನಡೆಯುತ್ತಿಲ್ಲವೇ?

ಹಾಗಾಗಿ ಇತಿಹಾಸದಲ್ಲಿ ನಡೆದ ಘಟನೆಗಳನ್ನು ವರ್ತಮಾನಕ್ಕೆ ಹೊಲಿಕೆ ಮಾಡಿ , ಗಾಂಧಿಯವರನ್ನು ಅವಮಾನ ಮಾಡುವುದು.

ಕ್ಷಮಾಪಣೆ ಪತ್ರ ತೋರಿಸಿ ಸಾವರ್ಕರ್ ಅವರಿಗೆ ಅವಮಾನ ಮಾಡುವುದು ಎಷ್ಟು ಸರಿ?

ಅವರವರ ವೈಯಕ್ತಿಕ ಸಿದ್ದಾಂತ ಮೇಲೆ ಅವರು ಹೋರಾಟ ನಡೆಸಿದರು. ಒಬ್ಬರದು ಶಾಂತಿ ,ಇನ್ನೊಬ್ಬರದು ಕ್ರಾಂತಿ ಹೋರಾಟ …ಅವರ ಮುಖ್ಯ ಉದ್ದೇಶ ಸ್ವತಂತ್ರ ಗಳಿಸುವುದಾಗಿತ್ತು.

ಯುವ ಜನಾಂಗ ಧರ್ಮವನ್ನು ತಲೆಗೆರಿಸಿಕೊಂಡು ಹೊಡದಾಡಿ ಸಾಯುವುದು ಬೇಕಿಲ್ಲ…

ಧರ್ಮ ಎಂದರೆ ಪ್ರೀತಿಸುವುದು .ಪವಿತ್ರ ಧರ್ಮ ಪವಿತ್ರವಾಗಿ ಪ್ರೀತಿಸುವುದು .

ದ್ವೇಷ ಮಾಡುವುದು
ಖುರಾನ್ , ಭಗವತ್ ಗೀತೆ ಗೆ .ರಾಮ ರಹೀಮ್ ಗೆ ಮಾಡುವ ದ್ರೋಹ…
ಕೇಸರಿ , ಹಸಿರು ಬಣ್ಣದ ದೊಡ್ಡ ದೊಡ್ಡ ದ್ಜಜ ಹಿಡಿಯುದರ ಬದಲು ,ಸಣ್ಣದಾದರೂ ರಾಷ್ಟ್ರ ಧ್ವಜ ಹಾರಿಸೋಣ. ಅದು ಆಗದಿದ್ದರೂ ರಾಷ್ಟ್ರ ಧ್ವಜ ಹಾರಾಡುವುದನ್ನು ನೋಡಿ ಖುಷಿ ಪಡೋಣ

ಡಾ.ಶಿವಕುಮಾರ್ ಮಾಲಿಪಾಟೀಲ ದಂತ ವೈದ್ಯರು , ಗಂಗಾವತಿ
9448302775

 

ನನ್ನ ಜೀವನವೊಂದು ಅವಿಭಾಜ್ಯ ಅಖಂಡ ಚೇತನ. ಅದು ಹತ್ತು ಹಲವು ವಿಭಾಗಗಳಾಗಿ ಸಂಯೋಜನೆ ಗೊಂಡಿಲ್ಲ. ಸತ್ಯಾಗ್ರಹ, ಅಸಹಕಾರ, ಅಸ್ಪೃಶ್ಯತೆ, ಹಿಂದೂ-ಮುಸ್ಲಿಂ ಏಕತೆ ಇವೆಲ್ಲವೂ ಒಂದರಿಂದ ಇನ್ನೊಂದು ಬೇರ್ಪಡಿಸಲಾಗದ ಒಂದೇ ಇಡಿತನದ ಭಾಗಗಳಾಗಿವೆ.
ನನ್ನ ಜೀವನದ ಒಂದು ಕಾಲದಲ್ಲಿ ಯಾವುದೋ ಒಂದು ಅಂಶಕ್ಕೆ ಒತ್ತು ಕಾಣಬಹುದು, ಮತ್ತೊಂದು ಕಾಲಘಟ್ಟ ದಲ್ಲಿ ಬೇರೊಂದು.ಅದು ಪಿಯಾನೋ ವಾದಕನೊಬ್ಬ ಒಮ್ಮೆ ಒಂದು ಸ್ವರ ಮತ್ತೊಮ್ಮೆ ಮತ್ತೊಂದು ಸ್ವರ ನುಡಿಸಿದಂತೆ. ಆದರೆ ಅವೆಲ್ಲವೂ ಒಂದಕ್ಕೆ ಸಂಬಂಧಪಟ್ಟವೇ.
ಸ್ವರಾಜ್ಯವಿಲ್ಲದೇ ಅಸ್ಪೃಶ್ಯತೆಯ ಸಂಪೂರ್ಣ ಮತ್ತು ಅಂತಿಮ ಮೂಲೋತ್ಪಾಟನೆ ಸಾಧ್ಯವೂ ಇಲ್ಲ ‘..
….
ರಾಷ್ಟ್ರಪಿತ ಮಹಾತ್ಮ ಗಾಂಧಿ..’ ನನ್ನ ಜೀವನವೊಂದು ಅವಿಭಾಜ್ಯ ಅಖಂಡ ಚೇತನ. ಅದು ಹತ್ತು ಹಲವು ವಿಭಾಗಗಳಾಗಿ ಸಂಯೋಜನೆ ಗೊಂಡಿಲ್ಲ. ಸತ್ಯಾಗ್ರಹ, ಅಸಹಕಾರ, ಅಸ್ಪೃಶ್ಯತೆ, ಹಿಂದೂ-ಮುಸ್ಲಿಂ ಏಕತೆ ಇವೆಲ್ಲವೂ ಒಂದರಿಂದ ಇನ್ನೊಂದು ಬೇರ್ಪಡಿಸಲಾಗದ ಒಂದೇ ಇಡಿತನದ ಭಾಗಗಳಾಗಿವೆ.
ನನ್ನ ಜೀವನದ ಒಂದು ಕಾಲದಲ್ಲಿ ಯಾವುದೋ ಒಂದು ಅಂಶಕ್ಕೆ ಒತ್ತು ಕಾಣಬಹುದು, ಮತ್ತೊಂದು ಕಾಲಘಟ್ಟ ದಲ್ಲಿ ಬೇರೊಂದು.ಅದು ಪಿಯಾನೋ ವಾದಕನೊಬ್ಬ ಒಮ್ಮೆ ಒಂದು ಸ್ವರ ಮತ್ತೊಮ್ಮೆ ಮತ್ತೊಂದು ಸ್ವರ ನುಡಿಸಿದಂತೆ. ಆದರೆ ಅವೆಲ್ಲವೂ ಒಂದಕ್ಕೆ ಸಂಬಂಧಪಟ್ಟವೇ.
ಸ್ವರಾಜ್ಯವಿಲ್ಲದೇ ಅಸ್ಪೃಶ್ಯತೆಯ ಸಂಪೂರ್ಣ ಮತ್ತು ಅಂತಿಮ ಮೂಲೋತ್ಪಾಟನೆ ಸಾಧ್ಯವೂ ಇಲ್ಲ ‘..
….
ರಾಷ್ಟ್ರಪಿತ ಮಹಾತ್ಮ ಗಾಂಧಿ..
15.08.1933.

2 thoughts on “ಗಾಂಧೀಜಿಯವರು ಭಾರತದ ಅಖಂಡತ್ವ ಹಾಳು ಮಾಡಿದರೆ ಇತ್ಯಾದಿ …?

  1. ಡಾ.ಶಿವಕುಮಾರ ಮಾಲಿ ಪಾಟೀಲ ಅವರ ಬರಹ ಯುವ ಜನರ ಕಣ್ಣು ತೆರೆಸುವಂತದ್ದು,ಗಾಂಧೀ ಎಂದರೆ ಬೇಸರಿಸಿಕೊಳ್ಳುವಂತೆ ಮಾಡಿದ ಮನೋವಿಕಲರಿಗೆ ಚಿಕಿತ್ಸಕ ಲೇಖನಗಳು ಮತ್ತಷ್ಟು ಮಗದಷ್ಟು ಬೇಕು ಎನಿಸುತ್ತದೆ.ಅಭಿನಂದನೆಗಳು ಸರ್.

  2. ನಿಮ್ಮ ಬರಹ ಓದಿ ನಮ್ಮಂತಹ ತಪ್ಪು ತಿಳುವಳಿಕೆ ಗ್ರಹಿಸಿ ಮಾತನಾಡುವರಿಗೆ, ಹೇಳುವವರಿಗೆ ನಿಮ್ಮ ಲೇಖನ ನನಗೆ ಸ್ಪೂರ್ತಿಯಾಗಿದೆ ಗುರುಗಳೇ ನಮಸ್ಕಾರgalu🙏.
    ಇಂದಿನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪಕ್ಷಗಳು, ನಾಯಕರು ಜಾತಿ, ಧರ್ಮವನ್ನೇ ಮುಂದಿಟ್ಟುಕೊಂಡು ಯುವಕರಿಂದ ಹಿಡಿದು 1 ವರ್ಷದ ಮಗುವಿನಲ್ಲೂ ಕೂಡಾ ಜಾತಿ ಧರ್ಮದ ಬೀಜ ಮೊಳಕೆಯೋಡೆಯುತ್ತಿದೆ ಇದು ನಿರ್ನಾಮವಾದಾಗಲೆ ಗಾಂಧೀಜಿಯವರ ಶಾಂತಿ ಮಂತ್ರಕ್ಕೆ ಶಾಂತಿ ಸಿಗುತ್ತದೆ.

Leave a Reply

Your email address will not be published. Required fields are marked *

error: Content is protected !!