ಬೈದು ಹಂಗಿಸಬೇಕಾದ ಕ್ಷುದ್ರ ಕೀಳು ವ್ಯಕ್ತಿ ಗಾಂಧಿಯೇ ? 

ಬೈದು ಹಂಗಿಸಬೇಕಾದ ಕ್ಷುದ್ರ ಕೀಳು

ವ್ಯಕ್ತಿ ಗಾಂಧಿಯೇ ? 

ಗಾಂಧೀಜಿಯವರ ಅದ್ಭುತ ಕ್ರಿಯಾಶೀಲತೆಯ ವಿಸ್ತಾರವನ್ನು ನೆನೆ ನೆನೆದಂತೆಲ್ಲ ಅಚ್ಚರಿಯಾಗುತ್ತಾ ಹೋಗುತ್ತದೆ. ಯಾವ ಸಂವಹನವಾಗಲೀ , ಆರ್ಥಿಕ ನೆರವಾಗಲೀ ಇಲ್ಲದ ಆ ಕಾಲದಲ್ಲಿ ಅವರು ಕೈಗೊಂಡ ಅಹಿಂಸೆಯ ಅಸಹಕಾರ ಚಳುವಳಿ ಬ್ರಿಟಿಷರ ಉಸಿರು ಕಟ್ಟಿಸಿತ್ತು. ಅದು ಆವತ್ತಿಗಿರಲಿ ಈವತ್ತಿಗೂ ಪ್ರಪಂಚಕ್ಕೇ ಹೊಸ concept.

ಚಳುವಳಿಯಲ್ಲಿದ್ದ ಒಬ್ಬೊಬ್ಬರ ವಿಚಾರಧಾರೆಯೂ ಒಂದೊಂದು ದಿಕ್ಕು ಎನ್ನುವಂತಹ ಮೇಧಾವಿ ನಾಯಕರು. ಸ್ವಾತಂತ್ರ್ಯಗಳಿಸಲು ಒಬ್ಬೊಬ್ಬ ನಾಯಕರಲ್ಲೂ ಅವರದೇ ಆದ ಯೋಚನೆ ಯೋಜನೆಗಳಿದ್ದವು. ಅವರೆಲ್ಲರನ್ನೂ ಒಂದೇ ವಾಹಿನಿಯಲ್ಲಿ ಕರೆದೊಯ್ಯುವುದೆಂದರೆ ಹುಡುಗಾಟವಲ್ಲ. ಅವರು ಬಂದರೂ ಗಾಂಧೀಜಿಯ ನಾಯಕತ್ವವನ್ನು ಒಪ್ಪಬೇಕಲ್ಲ ?

ನೇತಾಜಿ , ಭಗತ್ ಸಿಂಗರ ರಕ್ತದ ಹೋರಾಟ ;

ಸಮಾಜವಾದ , ಸಮತಾವಾದದ ನೆಹರೂ , ಲೋಹಿಯಾ, ಕೃಪಲಾನಿ , ಜೆಪಿ , ಡಾಂಗೆ, ನಂಬೂದರಿ ,ನರೇಂದ್ರ ದೇವ್ ಗಳು ;

ದೇವರು ಧರ್ಮಗಳನ್ನು ಧಿಕ್ಕರಿಸಿದ್ದ ಪೆರಿಯಾರ್ , ಗೋರಾ ಗಳು ;

ನಿಮ್ಮ ಸ್ವಾತಂತ್ರ್ಯ ಹೋರಾಟ ಯಾರಿಗೆ ಬೇಕಿದೆ ? ನಿಮ್ಮ ದಾರಿಯಲ್ಲಿ ಬರೋದಿಲ್ಲ ” ಎನ್ನುತ್ತಾ ಪ್ರತ್ಯೇಕತಾವಾದಿಗಳಾಗಿದ್ದ ಜಿನ್ನಾ , ಅಂಬೇಡ್ಕರ್ , ಖಲಿಸ್ಥಾನ್ ವಾದಿಗಳು ;

ಪಟೇಲ್ , ಮುನ್ಷಿ , ರಾಜಾಜಿ ಮುಂತಾದ ಭಿನ್ನ ನೆಲೆಯವರೆಲ್ಲರನ್ನೂ ಸಮಾಧಾನಪಡಿಸಿಕೊಂಡು ಒಗ್ಗಟ್ಟಾಗಿ ಹೋಗುವ ದಾರಿಯನ್ನು ಕಂಡುಕೊಂಡವರು ಮಹಾತ್ಮಾ ಗಾಂಧೀಜಿವರು.

ಅವರ ನಾಯಕತ್ವಕ್ಕಿದ್ದ ಸವಾಲು ಇದಿಷ್ಟೇ ಅಲ್ಲ. ಒಡೆದಾಳುವುದರಲ್ಲಿ ನಿಷ್ಣಾತರಾಗಿದ್ದ ಬ್ರಿಟಿಷರು ಹೂಡಿದ ಒಳಸಂಚು ಪಿತೂರಿಗಳು ಒಂದೆರಡಲ್ಲ. ಭಿನ್ನಮತೀಯ ನಾಯಕರನ್ನು ಗಾಂಧಿಯ ವಿರುದ್ಧ ಎತ್ತಿಕಟ್ಟಿ ಚಳುವಳಿಯನ್ನು ಬಗ್ಗುಬಡಿಯಲು ನಿರಂತರವಾಗಿ ಚಿತಾವಣೆ ಮಾಡುತ್ತಲೇ ಇದ್ದರು. ಭಿನ್ನನಾಯಕರಿಗೆ ಗಾಂಧಿಹಾದಿಯ ಬಗ್ಗೆ ಅಸಮಧಾನವಿದ್ದರೂ ಅವರ ನಾಯಕತ್ವವನ್ನು ಗತ್ಯಂತರವಿಲ್ಲದೆ ಒಪ್ಪುವಂತಹ ಉನ್ನತಗುಣವನ್ನು ಗಾಂಧೀಜಿ ಬೆಳೆಸಿಕೊಂಡಿದ್ದರು.

ಚಳುವಳಿಯ ಬಗ್ಗೆ ಅವರಿಗಿದ್ದ ಬದ್ದತೆ , ಪ್ರಾಮಾಣಿಕತೆ ಹಾಗೂ ವ್ಯಕ್ತಿತ್ವದಲ್ಲಿದ್ದ ಪಾರದರ್ಶಕ ಗುಣವನ್ನು ಯಾರೂ ನಿರಾಕರಿಸಲಾಗುತ್ತಿರಲಿಲ್ಲ.
ಅವರನ್ನು ನಾಟಕವಾಡುವ ನಯವಂಚಕ ಎಂದೆಲ್ಲಾ ಟೀಕಿಸಿದರೂ , ಗಾಂಧೀಜಿಯ #ಅಭಿನಯಕ್ಕೆ ಅವರೂ ಮರುಳಾಗಲೇಬೇಕಿತ್ತು. ಅದು ಗಾಂಧೀಜಿಯ ನಿಷ್ಕಳಂಕ ಗುಣ.

ಗಾಂಧೀಜಿ ಸ್ವತಃ ಆಸ್ತಿಕರಾಗಿದ್ದರೂ ದೈವಧರ್ಮಗಳನ್ನು ಮೀರಿದ ಮಾನವೀಯ ಕಾರ್ಯಕ್ರಮಗಳಿಂದಾಗಿ ನಾಸ್ತಿಕರೂ ಅವರ ಜೊತೆಗೂಡಿದರು. ಅವರ ಕಣ್ಣಿಗೆ ಗಾಂಧೀಜಿ ನಾಸ್ತಿಕನಾದ ಆಸ್ತಿಕ !.

ಚಳುವಳಿಗೆ ಟಾಟಾ ಬಿರ್ಲಾಗಳಿಂದ ಸಹಾಯ ಪಡೆದರೂ ತಮ್ಮ ಹೋರಾಟದ ಅಂತಿಮ ಗುರಿ ಇರುವುದೇ ಶ್ರಮಿಕನ ಸಮಾನತೆಗಾಗಿ ; ಸಮಾಜವಾದಿ ಸಮಾಜಕ್ಕಾಗಿ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಸಮಾಜವಾದಿಗಳು ಓಡೋಡಿ ಬಂದರು. ಸಮತಾಗಳೂ ಒಗ್ಗೂಡಿದರು.

ಅಸ್ಪೃಶ್ಯರನ್ನು ಕೀಳಾಗಿ ಕಾಣುತ್ತಿದ್ದಾರೆಂಬ ಟೀಕೆಯನ್ನೇ ಅಸ್ತ್ರಮಾಡಿಕೊಂಡು ಹರಿಜನೋದ್ಧಾರದ ಕಾರ್ಯಗಳನ್ನು ತಾವಾಗಿಯೇ ಕೈಗೊಂಡರು. ದಲಿತಕೇರಿಗಳನ್ನು ಸ್ವಚ್ಚಗೊಳಿಸಿ ತಾವೇ ಅವರಲ್ಲೊಬ್ಬರಾದರು.
ಇಂಥವು ಒಂದೆರಡಲ್ಲ. ಭಿನ್ನಭಿನ್ನ ಆಲೋಚನೆಗಳ , ಭಿನ್ನಭಿನ್ನ ಮಾರ್ಗಗಳಲ್ಲಿ ಅತಿರಥ ಮಹಾರಥರಾಗಿದ್ದ ನಾಯಕರುಗಳೆಲ್ಲರನ್ನೂ ಒಂದು ಸೂತ್ರಕ್ಕೆ ತಂದುಕೊಳ್ಳುವಲ್ಲಿ ಅವರ ಸಾಮರ್ಥ್ಯ ಅಸಾಧಾರಣವಾದದ್ದು.


ಹಾಗೆಯೇ , ಭಾರತದಾದ್ಯಂತ ತುಂಬಿದ್ದ ಅನಕ್ಷರಸ್ಥ ಬಡಜನರಲ್ಲಿ ಸ್ವಾತಂತ್ರ್ಯದ ಕಿಡಿ ಹೊತ್ತಿಸಿ ತಮ್ಮೆಡೆ ಸೆಳೆದುಕೊಳ್ಳುವುದೂ ಸಾಧಾರಣದ ಸಂಗತಿಯಲ್ಲ.

ಇನ್ನೊಂದು ಅತಿಮುಖ್ಯ ಸಂಗತಿ ಎಂದರೆ ಗಾಂಧೀಜಿಯಾಗಲೀ ಅವರ core ಜೊತೆಗಾರರಾಗಲೀ , ತಮ್ಮ ಯೌವ್ವನದ 10 – 12 ವರ್ಷಗಳನ್ನು ಜೈಲಿನಲ್ಲೇ ಕಳೆದದ್ದು ; ಜನರೊಡನ ಸಂಪರ್ಕ ವನ್ನು ಪದೆಪದೇ ಕಳೆದುಕೊಂಡದ್ದು ; ಇದರೊಂದಿಗೆ ಬ್ರಿಟಿಷರ ನಿಲ್ಲದ ಚಿತಾವಣೆ ; ಹುಟ್ಟಿಸುತ್ತಿದ್ದ ನಿರಂತರ ಒಡಕು ; ಹಬ್ಬಿಸುತ್ತಿದ್ದ ಸುಳ್ಳುಸುದ್ದಿ ಇವೆಲ್ಲವನ್ನೂ ಸಂಭಾಳಿಸಿ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟು ತಾವು ಮಾತ್ರ ಅಧಿಕಾರದಿಂದ ಬಹುದೂರವೇ ಉಳಿದದ್ದು ಆ ತ್ಯಾಗಮೂರ್ತಿಯ ಅನನ್ಯ ಕೊಡುಗೆ.

ಆದರೆ ಗಾಂಧಿಯನ್ನು ವಾಚಾಮಗೋಚರವಾಗಿ ಉಗಿದು ಉಪ್ಪುಹಾಕುವ ದೊಡ್ಡಪಡೆಯೇ ಹುಟ್ಟಿಕೊಂಡಿದೆ. ಆ ದಿನಗಳಲ್ಲಿ ಯಾವುದೋ ಸಂಗತಿ ಬಗ್ಗೆ ಟೀಕೆ ಮಾಡಿದ್ದನ್ನೇ ( 1919 ) ಈವತ್ತಿಗೂ ಸತ್ಯ ಎಂಬಂತೆ ನಿಭಾಯಿಸಲಾರದವರೆಲ್ಲರೂ ಚಳುವಳಿಯ ಓನಾಮ ತಿಳಿಯದ ; ಒಂದು ಗುಂಪನ್ನು ನಿಯಂತ್ರಿಸಲಾರದ ; ಒಂದು ಸಂಸಾರವನ್ನು ನೆಟ್ಟಗೆ ನಿಭಾಯಿಸಲಾರದವರೂ ಗಾಂಧಿ ನಾಯಕತ್ವದ ಬಗ್ಗೆ ಜೋರುಗಂಟಲಲ್ಲಿ ಅರಚುತ್ತಾರೆ.

ಇವರ ಬೈಗಳನ್ನಿಟ್ಟುಕೊಂಡೇ ಗಾಂಧೀಜಿಯನ್ನು ನೋಡುತ್ತಾ ಹೋದರೆ ಆ ವ್ಯಕ್ತಿತ್ವದ ಸಾಧನೆಯೇ ಮನುಕುಲದ ಪವಾಡದಂತೆ ಕಾಣುತ್ತದೆ. ಸೇವೆ ತ್ಯಾಗ ಬಲಿದಾನಗಳು ಮೇಳೈಸಿದ ವ್ಯಕ್ತಿತ್ವದಂತೆ ಕಾಣುತ್ತದೆ.

ಗಾಂಧೀಜಿ ನಾಯಕತ್ವದ ಯಶಸ್ಸು ಇರುವುದೇ ನಾನಾ ದಿಕ್ಕಿನ ವಿಚಾರಧಾರೆಗಳುಳ್ಳ ಭಿನ್ನವ್ಯಕ್ತಿತ್ವಗಳ ಮುಂದಾಳುಗಳನ್ನೆಲ್ಲ ಒಗ್ಗೂಡಿಸಿಕೊಂಡು ಜೊತೆಜೊತೆಗೆ ಕರೆದೊಯ್ದು ಸ್ವಾತಂತ್ರ್ಯ ದೀವಿಗೆ ಹೊತ್ತಿಸಿದ ಮಹಾಚೇತನ.

*ಜೆ ಎಮ್ ರಂಗ ಸ್ವಾಮಿ

ಒಂದಷ್ಟು ವಿಚಾರಗಳನ್ನ ಹಂಚಿಕೊಳ್ಳಲು ಬಯಸುತ್ತೇನೆ ಅದು ಯಾರ ವಿಷಯವೆಂದರೆ ಮಹಾತ್ಮಾ ಗಾಂಧೀಜಿ ವಿಷಯವಾಗಿ.

*ಮಹಾತ್ಮಾ ಗಾಂಧೀಜಿ ರವರಿಗೆ ಮಹಾತ್ಮಾ ಎಂದು ಯಾವಾಗ ಈ ಬಿರುದ್ದು ನೀಡಿದರೂ ಎಂದು ಮಾಹಿತಿ ಹಕ್ಕು ಕೇಳಿದರು ಆಗ ಬಂದ ಉತ್ತರ ಇಲ್ಲಾ ಅಂತಾಹ ಬಿರುದ್ದು ಸರ್ಕಾರದ ಮಾಹಿಯಲ್ಲಿಲ್ಲಾ ಎಂದು ಉತ್ತರ ಕೊಟ್ಟರು.*

*ಇಲ್ಲಿ ಬಿರುದ್ದುಗಳನ್ನ ಸರ್ಕಾರ ನೀಡಬೇಕಿಲ್ಲಾ ಯಾವುದೆ ಸಂಸ್ಥೆ ಕೊಡಬೇಕಾಗಿಲ್ಲಾ ಜನರ ಮನದಲ್ಲಿ ಜನರ ಹೃದಯ ಅಂತರಾಳ ದಿಂದ ಜನರು ನೀಡಿದ ಬಿರುದ್ದು ಮಹಾತ್ಮಾ ಅವರೇ ಗಾಂಧಿ.*

*ಮಹಾತ್ಮಾ ಗಾಂಧಿ ಜಿ ಸ್ವಾತಂತ್ರ್ಯ ಹೋರಾಟಕ್ಕೆ ಬರುವ ಮುಂಚೆನೂ ಹೋರಾಟಗಳಾಗುತಿದ್ದವು ಅವು ಯಂತಾವುಗಳು ಎಂದರೆ ಕ್ರಾಂತಿ ಕಾರಿಗಳ ಹೋರಾಟಗಳು ಇಲ್ಲಿ ಕ್ರಾಂತಿಕಾರಿಗಳ ಹೋರಾಟ ಅಲ್ಪಾವಧಿಯ ದಿನಗಳವರೆಗೆ ಮಾತ್ರ ಸೀಮಿತವಾಗುತಿದ್ದವು ಕಾರಣ ಬೆಂಕಿ ತಕ್ಷಣದಲ್ಲಿ ಹುರಿದು ಹಾರೋಗುತಿತ್ತು ಅಂದರೆ ಬ್ರಿಟಿಷರ ಗುಂಡಿಗೆ ಹುತಾತ್ಮರಾಗುತಿದ್ದರು ಹಾಗೇ ಈ ಕ್ರಾಂತಿಕಾರಿಗಳ ಸ್ವಾತಂತ್ರ್ಯ ಹೋರಾಟಕ್ಕೆ ಜನ ಅವರೊಟ್ಟಿಗೆ ಹೋಗಲು ಬೆದರುತಿದ್ದರು ಕಾರಣ ಸಾವಿನ ಭಯದಿಂದ.*

*ಸಾವಿರದ ಒಂಬೈನೂರ ಇಪ್ಪತ್ತನೆಯ ಇಸವಿಯಲ್ಲಿ ಮಹಾತ್ಮಾ ಗಾಂಧಿ ರವರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು ಅದರ ನೇತೃತ್ವವನ್ನು ಗಾಂಧಿಜಿ ರವರಿಗೆ ನೀಡಿದರು ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಗಾಂಧೀಜಿ ರವರಿಗೆ ಗೊತಿತ್ತು ಈ ದೇಶದ ಜನರ ನಾಡಿಮಿಡಿತ ಬನ್ನಿ ದೇಶಕೊಸ್ಕರ ದೇಶದ ಜನರು ಜೀವ ಕೊಟ್ಟಿಯಾದರು ಸ್ವಾತಂತ್ರ್ಯವನ್ನ ಪಡೆಯೋಣ ಎಂದರೆ ಗಾಂಧಿ ಜಿ ಬೆನ್ನ ಹಿಂದೆ ಜನ ಸಮೂಹ ಬರುತಿರಲಿಲ್ಲಾ ಕ್ರಾಂತಿಕಾರಿಗಳ ಸ್ವಾತಂತ್ರ್ಯ ಹೋರಾಟಕ್ಕೆ ಜನ ಸಾಮೂಹಿಕವಾಗಿ ಇಡೀ ಸಮೂಹ ಹೋಗುತಿರಲಿಲ್ಲ ಕಾರಣ ಸಾವು ನೋವುಗಳಿಗೆ ಸಾಮಾನ್ಯ ಜನ ಸಮೂಹ ಬೆದರುತಿದ್ದರು ಕ್ರಾಂತಿ ಕಾರಿ ಹೋರಾಟಗಾರರು ಬಹಳ ಸಣ್ಣ ಸಣ್ಣ ವಯಸ್ಸಿನಲ್ಲಿ ಅಂದರೆ ಇಪ್ಪತ್ತು ಮೂವತ್ತರೊಳಗೆ ಅವರು ಬ್ರಿಟಿಷರ ಗುಂಡಿಗೆ ಬಲಿಯಾಗಿ ಹುತಾತ್ಮರಾಗುತಿದ್ದರು ಅಲ್ಲಿಗೆ ಸ್ವಾತಂತ್ರ್ಯ ಹೋರಾಟ ಮೊಟಕುಗೊಳತಿತ್ತು.*

*ಗಾಂಧೀಜಿ ಹಾಗೆ ಮಾಡದೆ ಶಾಂತಿಯ ಪ್ರತೀಕವಾದ ಚಳುವಳಿಗಳನ್ನ ಮಾಡುತಿದ್ದರು ಇದನ್ನು ಗಮನಿಸಿದ ಜನ ಸಮೂಹ ನಾನು ತಾನು ಎಂದು ಗಾಂಧಿ ಜಿಯವರ ಬೆನ್ನ ಹಿಂದೆ ಲಕ್ಷ ಲಕ್ಷಗಟ್ಟಲೆ ಸಾರ್ವಜನಿಕರು ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು ಭಾರತ ದೇಶದ ಜನರ ಮಿಡಿತ ಬಲ್ಲವರಾಗಿದ್ದ ಗಾಂಧಿಜಿ.*

*ಇಲ್ಲಿ ಒಂದು ಅರ್ಥವಾಗಿರಬೇಕು ಓದುಗರಿಗೆ ಉದಾಹರಣೆಗೆ ಬಾ ದೇಶಕೋಸ್ಕರ ಪ್ರಾಣ ತೆತ್ತಿಯಾದರು ಸ್ವಾತಂತ್ರ್ಯ ಪಡೆಯೋಣ ಎಂದರೆ ಬರೋದು ಬೆರಳೆಣಿಕೆ ಜನರು ಅವರನ್ನು ಯಾವ ಲೆಕ್ಕಿಸದೆ ಬ್ರಿಟಿಷರು ಗುಂಡಿಕ್ಕಿ ಕೊಲ್ಲುತಿದ್ದರು.*

ಗಾಂಧೀಜಿ ಹಾಗೆ ಮಾಡಲಿಲ್ಲಾ ಮನೆ ಮನೆ ಯಿಂದ ಮನ ಮನ ದಿಂದ ಜನರನ್ನ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಕರೆತರುವಲ್ಲಿ ಯಶಸ್ಸು ಕಂಡ ಏಕೈಕ ವ್ಯಕ್ತಿ ಗಾಂಧೀಜಿ.

*ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಸ್ವಾತಂತ್ರ್ಯ ಹೋರಾಕ್ಕೆ ದುಮುಕಿದ ಲಕ್ಷ ಲಕ್ಷ ಜನರನ್ನ ಕೊಲ್ಲಲಾಗುತಿತ್ತೇ ಬ್ರಿಟಿಷರು ಹೆದರಿದರು.*

*ಒಟ್ಟಾರೆಯಾಗಿ ಹೇಳುವುದಾದರೆ ಒಂದು ಗ್ರಾಮ ಆ ಗ್ರಾಮದಲ್ಲಿ ಒಂದು ಗುಂಪು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರವಿರುದ್ದ ಹೋರಾಡುತಿತ್ತು ಆ ಗುಂಪಿಗೆ ಬ್ರಿಟಿಷರು ಬೆದರುತಿದ್ದರು ಆದರೆ ಆ ಗುಂಪ್ಪನ್ನ ಬಗ್ಗುಬಡಿವಲ್ಲಿ ಬ್ರಿಟಿಷರು ಯಶಸ್ವಿಯಾಗುತಿದ್ದರು ಕಾರಣ ಅದು ಅವರಿಗೆ ಕೇವಲ ಒಂದು ಗುಂಪು ಎಂದು.*

*ನಂತರ ಆ ಗ್ರಾಮದಲ್ಲಿ ಮತ್ತೊಬ್ಬ ಹುಟ್ಟಿಕೊಂಡ ಆತ ಮಾಡಿದ ಕೆಲಸವೆಂದರೆ ಇಡೀ ಗ್ರಾಮದ ಮಹಾ ಜನತೆಯನ್ನ ಮನೆಯಿಂದ ಕರೆತಂದು ಶಾಂತಿಯುತ ಸ್ವಾತಂತ್ರ್ಯ ಹೋರಾಟದ ಚಳುವಳಿಗಳನ್ನ ರೂಪಿಸಿದ ಇಡೀ ಗ್ರಾಮದ ಮಹಾಜನತೆ ಬ್ರಿಟಿಷರ ವಿರುತ್ತ ತಿರುಗಿ ಬಿದ್ದರು ಬ್ರಿಟಿಷರಿಗೆ ದಿಗುಲು ಹೆಚ್ಚಾಯಿತು ಇಡೀ ಗ್ರಾಮವೇ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದೆ ಇದು ಒಂದು ಗುಂಪಲ್ಲಾ ಇದು ಇಡೀ ಗ್ರಾಮದ ಮಹಾಜನತೆ ಬ್ರಿಟಿಷರು ಹೆದರಿದರು ಹಾಗಾಗೆ ಸಂಧಾನಗಳಗುತಿದ್ದವು ಹಾಗೇ ಒಂದು ದಿನ ಸ್ವಾತಂತ್ರ್ಯ ಬಂತು.*

*ಇಲ್ಲಿ ಒಂದು ಗುಂಪು ಎಂದು ಹೇಳಿದ್ದು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಇವರು ಯಾರನ್ನೂ ಬಲಿಕೊಡದೆ ತಮ್ಮ ತಮ್ಮನೆ ಬಲಿಕೊಟ್ಟಿಯಾದರು ಸ್ವಾತಂತ್ರ್ಯ ಪಡೆದುಕೊಳ್ಳಬೇಕೆಂಬ ಹಂಬಲ.

*ಹಾಗೇ ಇಲ್ಲೊಬ್ಬ ಮಹಾತ್ಮಾ ನಾನು ಬಲಿಯಾದರೆನು ಪ್ರಯೋಜನ ಬದುಕಿ ಶಾಂತಿಯುತವಾಗಿ ಇಡೀ ಭಾರತವನ್ನೆ ಬಡಿದೆಬ್ಬಿಸಿ ಜನರನ್ನ ಲಕ್ಷ ಲಕ್ಷಗಟ್ಟಲೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಮಾಡಿದರೆ ಜನ ಸಮೂಹವನ್ನ ಬ್ರಿಟಿಷರಿಗೆ* *ಎದುರಿಸಲಾಗುವುದಿಲ್ಲಾ ಎಂಬ ಮುಂದಾಲೋಚನೆ ಮಾಡಿದವರು ಮಹಾತ್ಮಾ ಗಾಂಧೀಜಿ.*

*ಕುಂಬಾರ ಕೊಪ್ಪಲ್* *ಕುಮಾರ್ ಗೌಡ*
*ಮೈಸೂರು*

Leave a Reply

Your email address will not be published. Required fields are marked *

error: Content is protected !!