ಕನ್ನಡಮ್ಮನ ಪರಿಚಯ ಕೇಳಿಕೋ ,ಸೂಲಿಬೆಲಿ !

೦ ಹರೀಶ್ ಕುಮಾರ. ಬಿ.

ಚಕ್ರವರ್ತಿ ಸೂಲಿಬೆಲೆಗೂ ನನಗೂ ಸುವರ್ಣ ನ್ಯೂಸ್ ಡಿಬೆಟ್ನಲ್ಲಿ ವಾಗ್ವಾದವಾಯಿತು. ಆತ ನನ್ನನ್ನು ಯೂಸ್ಲೆಸ್ ಫೆಲೋ ಎಂದ, ನಾನವನಿಗೆ ಹುಚ್ಚ, ಮುಠ್ಠಾಳ, ಅಯೋಗ್ಯ ಎಂದೆ. ಅಲ್ಲಿಗೆ ಈ ಸಂಗತಿ ಮುಗಿದುಹೋಗಿತ್ತು. ಆದರೆ ಸೂಲಿಬೆಲೆ ಫೇಸ್ಬುಕ್ಕಿನಲ್ಲಿ ನನ್ನನ್ನು ಸ್ವಘೋಷಿತ ಹೋರಾಟಗಾರ ಎಂದು ಬರೆದ. ದಶಕಗಳ ಹಿಂದೆ ಇವ್ನು ಬೆಳಗಾವಿ ಮೇಯರ್ ಆಗಿರುತ್ತಿದ್ದರೇ, ನಾನವನಿಗೆ ಮಸಿ ಬಳದಿರುತ್ತಿದ್ದೆ. ಅವನ ಪುಣ್ಯ ಆ ಯೋಗ ಅವನಿಗಿರಲಿಲ್ಲ. ಇವ್ನು ಸುಳ್ಳು ಕಲಿಯುವ ಮುನ್ನವೇ ನಾನು ಕನ್ನಡಮ್ಮನ ಸೇವೆಗಿಳಿದಿದ್ದೆ. ಸಾಮಾಜಿಕ ಜಾಲತಾಣದಲ್ಲಿ ಸೂಲಿಬೆಲೆ ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದಾಗ ಸುಳ್ಳಿನ ಕೆಸರಿನಲ್ಲಿ ಅರಳಿರುವ ಕಮಲ ಎಂದು ತಿಳಿಯಿತು. ಅಲ್ಯಾರೋ ಹುಚ್ಚನನ್ನು ಹುಚ್ಚ ಎನ್ನದೇ ಮತ್ತೇನೆನ್ನಬೇಕು ಎಂದು ಬರೆದರು. ನನಗೆ ಮಾನಸಿಕ ಅಸ್ವಸ್ಥರ ಬಗ್ಗೆ ಕಾಳಜಿಯಿದೆ.
ಅದಿರಲಿ, ಎಲ್ಲವೂ ಶುರುವಾಗಿದ್ದು, ಯಲಹಂಕ ಫ್ಲೈ ಓವರ್ಗೆ ಸಾವರ್ಕರ್ ಹೆಸರಿಡುವ ಬಗ್ಗೆ ಸರಕಾರ ಚಿಂತಿಸಿದಾಗ. ನನಗೆ ತಿಳಿದಂತೆ, ಇತಿಹಾಸ ಹೇಳಿದಂತೆ ಒಬ್ಬ ಹೇಡಿಯಾದವನ ಹೆಸರನ್ನು ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಟಾಯ್ಲೆಟ್ಟಿಗೂ ಇಡುವುದನ್ನು ನಾನು ವಿರೋಧಿಸುತ್ತೇನೆ. ಅಂದಮೇಲೆ ಸ್ವಾಭಿಮಾನಿಗಳು ಅಡ್ಡಾಡುವ ರಸ್ತೆಗಿಟ್ಟರೇ ಬಿಡುತ್ತೇವೆಯೇ? ಮಹಾತ್ಮನನ್ನು ಕೊಂದ ಆರೋಪ ಹೊತ್ತಿದ ಮನುಷ್ಯನಿಗೆ ಈ ಪ್ರಮಾಣದ ಗೌರವವಾದರೇ, ಬಿಜೆಪಿ ತನ್ನ ಕಛೇರಿಗೆ ಹೆಸರಿಟ್ಟುಕೊಳ್ಳಲಿ. ಕನ್ನಡಮ್ಮನ ಹೃದಯದ ಮೇಲಲ್ಲ. ನಿಜ ನಾನು ಭಾರತೀಯ, ಪಾಕಿಸ್ತಾನ ಮುಗಿಬಿದ್ದರೇ ಅವರನ್ನು ಹಿಮ್ಮೆಟ್ಟಿಸುವ ಸಾಲಿನಲ್ಲಿ ನಾನು ಮೊದಲಿರುತ್ತೇನೆ. ಆದರೆ ಕನ್ನಡಮ್ಮ ಮೊದಲ, ಭಾರತಾಂಬೆ ಮೊದಲ ಎಂದು ಕೇಳಿದರೇ ನಾನು ನನ್ನಮ್ಮನಿಗೆ ಹುಟ್ಟಿದ್ದೆಂದು ಎದೆತಟ್ಟಿ ಹೇಳಿಕೊಳ್ಳುತ್ತೇನೆ. ಆಮೇಲೆ ನನ್ನ ಅಜ್ಜಿಯ ವಿಚಾರದ ಬಗ್ಗೆ ಮಾತನಾಡುತ್ತೇನೆ. ಜೈ ಭಾರತ ಜನನಿಯ ತನುಜಾತೆ ಎಂದು ಬರೆದ ಕವಿಯ ಅಂತರಂಗದ ಹಪಾಹಪಿಗೂ, ವಾಸ್ತವಕ್ಕೂ ಬಹಳ ವ್ಯತ್ಯಾಸವಿದೆ. ನಾನು ಮೊದಲು ನನ್ನಮ್ಮನ ಕೂಸು, ನನ್ನಮ್ಮನನ್ನು ಪ್ರಶ್ನೆಗಿಟ್ಟರೇ ಬಿಟ್ಟುಕೊಡುವ ಮಾತೇ ಇಲ್ಲ. ಈ ಮಣ್ಣಿನಲ್ಲಿ ಏನೇ ಹೆಸರಿಡಬೇಕಾದರೂ ಅದು ಕನ್ನಡ ನಾಡಿನ ಸೇವಕರು ಮೊದಲು ಗಣನೆಗೆ ಬರಬೇಕು. ಅದಾದ ಮೇಲೆ ದೇಶದ ಸ್ವಾತಂತ್ರ್ಯ ಹೋರಾಟಗಾರರು, ದೇಶವನ್ನಾಳಿದ ಪ್ರಾಮಾಣಿಕ ಮುತ್ಸಧ್ಧಿಗಳ ಹೆಸರಿಡಲಿ ತಕರಾರಿಲ್ಲ, ಯಾರೀ ಸಾವರ್ಕರ್? ಆತನ ಐಡೆಂಟಿಟಿಯ ಅಯೋಮಯವಾಗಿರುವಾಗ, ಅವರನ್ನು ತಂದು ಕನ್ನಡಿಗರ ಮೇಲೆ ಹೇರುವುದನ್ನು ನಾವು ಹೇಗೆ ಒಪ್ಪಿಕೊಳ್ಳೋದು. ಬಿಲ್ಕುಲ್ ಅದಾಗಬಾರದು.

ಇನ್ನು ಸುಳ್ಳು ಹೆಳದಿದ್ದರೇ ನಿದ್ದೆ ಮಾಡುವುದಿಲ್ಲ ಎಂಬ ವ್ಯಾದಿ ಇರುವ ಸೂಲಿಬೆಲೆಗೆ ನಾನು ಕನ್ನಡದ ಇತಿಹಾಸವನ್ನು ತಿಳಿಸುವ, ಕನ್ನಡದ ಹೋರಾಟಗಾರರರಿಗೆ ಕಿವಿಮಾತು ಹೇಳುವ ಪ್ರಯತ್ನ ಮಾಡಲೇಬೇಕು. ಇಲ್ಲವೆಂದರೇ ನನ್ನ ಆಕ್ರೋಶ, ಅನರ್ಥವಾದೀತು.

`ಕನ್ನಡ ನುಡಿದರೇ ಚೆನ್ನ, ಕನ್ನಡ ಸವಿದರೇ ಚೆನ್ನ’. ಈ ನಾಡಲ್ಲಿ ಹುಟ್ಟೋದಕ್ಕೆ ಹೆಮ್ಮೆ ಪಡಬೇಕು. ಈ ನಾಡಿನ ಬಗ್ಗೆ ಹೇಳುತ್ತಾ ಹೋದರೇ ಮುಗಿದುಹೋಗದ ಚರಿತ್ರೆಗಳು ಅಣಕಿಸುತ್ತವೆ. ಕನ್ನಡವೆಂದರೇ ಕೇವಲ ಹೋರಾಟವಲ್ಲ, ಕನ್ನಡವೆಂದರೇ ಸಿಟ್ಟಲ್ಲ, ಸೆಡವಲ್ಲ, ಸೋಲು-ಗೆಲುವಿನ ಲೆಕ್ಕಾಚಾರವಲ್ಲ. ಕೇವಲ ಅಸ್ತಿತ್ವದ ವಿಚಾರವೂ ಅಲ್ಲ. ಕನ್ನಡ ಅಂದ್ರೇ ಎಲ್ಲವನ್ನೂ ಮೀರಿದ ಅಚ್ಚರಿ.

ಕನ್ನಡ ದ್ರಾವಿಡ ಭಾಷೆಗಳಲ್ಲೇ ಅತ್ಯಂತ ಪ್ರಮುಖವಾದ ಭಾಷೆಯಾಗಿದೆ. ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾಗಿರೋ ಕನ್ನಡವನ್ನ ಅಂದಾಜಿನ ಪ್ರಕಾರ ಐವತ್ತು ದಶಲಕ್ಷಕ್ಕೂ ಅಧಿಕ ಜನರು ಆಡುನುಡಿಯಾಗಿ ಬಳಸುತ್ತಿದ್ದಾರೆ. ಜಗತ್ತಿನಾದ್ಯಂತ 7 ಕೋಟಿಗೂ ಅಧಿಕ ಮಂದಿ ಕನ್ನಡವನ್ನು ಮಾತನಾಡುತ್ತಿದ್ದಾರೆ. ಜಗತ್ತಿನ ಅತ್ಯಂತ ದೊಡ್ಡ ಭಾಷೆಗಳಲ್ಲಿ ಕನ್ನಡ ಇಪ್ಪತ್ತೊಂದನೇ ಸ್ಥಾನದಲ್ಲಿದೆ. ಇವೆಲ್ಲಕ್ಕಿಂತ ಮಿಗಿಲಾಗಿ ಜಗತ್ತಿನ ಅತ್ಯಂತ ಪುರಾತನ ಭಾಷೆಗಳಾದ ಗ್ರೀಕ್ ಮತ್ತು ಸಂಸ್ಕೃತ ಬಿಟ್ರೇ ಆನಂತರದ ಸ್ಥಾನದಲ್ಲಿರೋದು ನಮ್ಮ ಕನ್ನಡ.

ಅಮ್ಮಾ ಅಂದ್ರೇ.. ಏಯ್ ಅಮ್ಮಾ ಅನ್ಬೇಡ, ಮಮ್ಮಿ ಅನ್ನು ಅಂತ ಗದರೋ ಮಮ್ಮಿ, ಮನೇಲಿ ಕುಂತು ಕನ್ನಡ ಸಿನಿಮಾ ನೋಡಿದ್ರೇ, ಇಂಗ್ಲೀಷ್ ನೋಡು ಅಂತ ಗದರೋ ಪೇರೆಂಟ್ಸ್… ಕನ್ನಡದಲ್ಲಿ ಹಚ್ಚೇವು ಕನ್ನಡದ ದೀಪ ಅಂತ ಹಾಡಿದ್ರೇ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್..' ಅಂತ ಹಾಡಿಸೋ ಟೀಚರ್ಸ್. ಕನ್ನಡ ಮಾತನಾಡಿದ್ರೇ ಮಹಾಪರಾಧವೇನೋ ಎಂಬಂತೆ ಸಾಮಾನ್ಯವಾಗಿ ನೋಡೋ ವಲಸೆ ಜಗತ್ತು. ವಾಸ್ತವ ಹೀಗಿರುವಾಗ ಕನ್ನಡ ಹೇಗೇ ತಾನೇ ಉಳಿದುಕೊಂಡೀತು ಹೇಳಿ. ಅಚ್ಚ ಕನ್ನಡಕ್ಕಾಗಿ ಈ ಜೀವ ಮೀಸಲು ಎಂದವರ ಮಕ್ಕಳೆಲ್ಲಾ ಇಂಗ್ಲೀಷ್ ಸ್ಕೂಲ್ಗಳಲ್ಲಿ ಓದುತ್ತಿದ್ದಾರೆ. ಕನ್ನಡತನ ಇದ್ದ ಕಡೆಯಲ್ಲೆಲ್ಲಾ ತಮಿಳರು ಆಕ್ರಮಿಸಿಕೊಂಡಿದ್ದಾರೆ. ನಮಸ್ಕಾರ.. ಅನ್ನೋ ಚಂದದ ಶಬ್ಧದ ಜಾಗದಲ್ಲಿವಣಕ್ಕುಂ..’ ವಕ್ಕರಿಸಿಕೊಂಡಿದೆ. ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡಿಕೊಳ್ಳುತ್ತಿರೋ ಈ ವಿಧ್ಯಮಾನ ಕಾಲಕಾಲಕ್ಕೂ ಕನ್ನಡವನ್ನು ನಾಶ ಮಾಡ್ತಿರೋದು ಸುಳ್ಳಲ್ಲ.

ಕನ್ನಡಕ್ಕಾಗಿ ಕೈ ಎತ್ತಿದ ಕುವೆಂಪು ಕಲ್ಪವೃಕ್ಷವಾದರು

ಕನ್ನಡವನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಂದ್ರೇ.. ಮೊದಲು ಅದರ ಇತಿಹಾಸವನ್ನ ತಿಳಿದುಕೊಳ್ಳಬೇಕು. ಆಗ ಮಾತ್ರ ಕನ್ನಡ ಅಂತರಾಳದಲ್ಲಿ ಕೋಲಾಹಲ ಸೃಷ್ಟಿಸುತ್ತೆ, ರೋಮಾಂಚನವುಂಟು ಮಾಡುತ್ತೆ.

ಕನ್ನಡಕ್ಕೆ ಒಂದೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡದ ಲಿಪಿ, ಕದಂಬ ಲಿಪಿಯಿಂದ ಜನ್ಮ ತಾಳಿದೆ. ಕ್ರಿಸ್ತಶಕ ಆರನೇ ಶತಮಾನದಲ್ಲಿ ಪಶ್ಚಿಮ ಗಂಗರ ಕಾಲದಲ್ಲಿ ಹಾಗೂ ಒಂಬತ್ತನೇ ಶತಮಾನದಲ್ಲಿ ರಾಷ್ಟ್ರಕೂಟರ ಕಾಲದಲ್ಲಿ ಹಳಗನ್ನಡ ಸಾಹಿತ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿತ್ತು. ಕ್ರಿ.ಶ ನಾನೂರೈವತ್ತರಲ್ಲೇ ಬಳಕೆಯಲ್ಲಿದ್ದ ಹಳೇಗನ್ನಡ, ಹತ್ತೊಂಬತ್ತನೇ ಶತಮಾನದ ನಂತರ ಸೊಗಸಾದ ಕನ್ನಡವಾಗಿ ರೂಪುಗೊಂಡಿದೆ. ಆಯಾ ಪ್ರಾಂತ್ಯಗಳಿಗೆ ತಕ್ಕ ಹಾಗೇ ಕನ್ನಡದ ಭಾಷಾ ವೈಖರಿಯಲ್ಲಿ ಬದಲಾವಣೆ ಇದ್ದರೂ, ಅಚ್ಚ ಸೊಬಗಿನ ಕನ್ನಡಕ್ಕೆಂದು ಧಕ್ಕೆಯಾಗಿಲ್ಲ.

ಕಿವಿಗೊಟ್ಟು ಕೇಳು ಕಂದಾ ಚಕ್ರವರ್ತಿ

ಕನ್ನಡ, ಇಂಟರ್ನ್ಯಾಶನಲ್ ಹಾಗೂ ನ್ಯಾಶನಲ್ ಭಾಷೆಗಳು ಎನಿಸಿಕೊಂಡಿರೋ ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಿಗಿಂತ ಮಹತ್ವವಾದ ಸ್ಥಾನವನ್ನು ಹೊಂದಿದೆ. ಇಂಗ್ಲಿಷ್ಗೆ ಸ್ವಂತದ ಲಿಪಿಯಿಲ್ಲ, ಅದು ರೋಮನ್ನಲ್ಲಿದೆ. ಇನ್ನು ಹಿಂದಿಯ ಮೂಲ ಲಿಪಿ ದೇವ ನಗರಿ. ಕನ್ನಡದ ಮೊದಲ ಕೃತಿ ಕವಿರಾಜ ಮಾರ್ಗ ಬರೆದ ಅಮೋಘವರ್ಷ ನೃಪತುಂಗ, `ಕಾವೇರಿಯಿಂದ ಗೋದವರಿಯವರೆಗೆ..’ ಎಂದು ನುಡಿದಾಗ, ಹಿಂದಿ, ಇಂಗ್ಲೀಷ್ ಜನಿಸಿದ ಸುದ್ದಿಯೇ ಇರಲಿಲ್ಲ..! ಕನ್ನಡದ ಮಹತ್ವ, ಕನ್ನಡದ ಅಸ್ತಿತ್ವ, ಕನ್ನಡದ ಇತಿಹಾಸ ಹೇಳಿದಷ್ಟು ಮುಗಿಯೋದೇ ಇಲ್ಲ. ಇಡೀ ಭಾರತದಲ್ಲಿರೋ ಅದೆಷ್ಟೋ ಭಾಷೆಗಳಲ್ಲಿ ವಿದೇಶಿ ರೆವರೆಂಡ್ ಫರ್ಡಿನಾಂಡ್ ಕಿಟ್ಟಲ್ ಬರೆದ ಒಂದೇ ಒಂದು ಶಬ್ಧಕೋಶ- ಅದು ಕನ್ನಡದಲ್ಲಿದೆ. ಕನ್ನಡ ಇಂಗ್ಲಿಷ್ನಲ್ಲಿ ಅವರು ರಚಿಸಿದ ಶಬ್ಧಕೋಶದಲ್ಲಿ ಎಪ್ಪತ್ತು ಸಾವಿರಕ್ಕೂ ಹೆಚ್ಚು ಶಬ್ಧಭಂಡಾರವಿದೆ. ಜಿ. ವೆಂಕಟಸುಬ್ಬಯ್ಯನವರು ಹೊಸಗನ್ನಡ ಕಾಲಘಟ್ಟದಲ್ಲಿ ಕನ್ನಡ- ಕನ್ನಡ ನಿಘಂಟು ರಚಿಸಿದರು. ಹಾಗೆಯೇ ಸಾಹಿತ್ಯ ಪ್ರಕಾರದ ರಗಳೆ ಸಾಹಿತ್ಯವನ್ನ ಕನ್ನಡದಲ್ಲಿ ಮಾತ್ರ ಕಾಣಲು ಸಾಧ್ಯ.

ಭಾರತದಲ್ಲಿ ಅಸಂಖ್ಯಾ ಕವಿಗಳಿದ್ದಾರೆ, ಲೇಖಕರಿದ್ದಾರೆ. ಆದರೆ ಭಾರತದ ಶ್ರೇಷ್ಟ ಜ್ಞಾನಪೀಠ ಪ್ರಶಸ್ತಿಯಲ್ಲಿ ಅನಾಮತ್ತು ಎಂಟು ಪ್ರಶಸ್ತಿ ಕರ್ನಾಟಕದ ಮುಕುಟವನ್ನೇರಿದೆ. ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಕೃತಿ ಕುವೆಂಪು ಅವರ ಶ್ರೀ ರಾಮಾಯಣದರ್ಶನಂ. ದ ರಾ ಬೇಂದ್ರೆಯವರ ನಾಕು ತಂತಿ, ಕೆ. ಶಿವರಾಮಕಾರಂತರ ಮೂಕಜ್ಜಿಯ ಕನಸುಗಳು, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಚಿಕ್ಕವೀರ ರಾಜೇಂದ್ರ, ವಿನಾಯಕ ಕೃಷ್ಣ ಗೋಕಾಕ್ ಅವರ ಭಾರತ ಸಿಂಧೂ ರಶ್ಮಿ, ಯು ಆರ್ ಅನಂತಮೂತರ್ಿ ಅವರ ಒಟ್ಟು ಸಾಹಿತ್ಯ, ಗಿರೀಶ್ ಕಾನರ್ಾಡ್ರವರ ಯಯಾತಿ, ಚಂದ್ರಶೇಖರ ಕಂಬಾರರ ಒಟ್ಟು ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದೆ. ಜೊತೆಗ ಭಾರತದ ಸಾಹಿತಿಗಳಲ್ಲೇ… ಅತೀ ಹೆಚ್ಚು ಪ್ರಶಸ್ತಿ ಪಡೆದ ಹೆಗ್ಗಳಿಕೆ ನಮ್ಮ ರಾಷ್ಟ್ರಕವಿ ಕುವೆಂಪು ಅವರದ್ದು.

ಇನ್ನು ಕನ್ನಡಕ್ಕೆ ಅನೇಕ ಉಪಭಾಷೆಗಳಿವೆ. ಕುಂದಗನ್ನಡ, ಹವಿಗನ್ನಡ, ಅರೆಭಾಷೆ, ಸೋಲಿಗ ಕನ್ನಡ ಇನ್ನಿತರೆ ಪ್ರಕಾರಗಳಿವೆ. ಅಯಾ ಸಮುದಾಯ ಪ್ರಾಂತ್ಯ, ಆಚರಣೆ, ಸಂಪ್ರದಾಯಕ್ಕೆ ಅನುಗುಣವಾಗಿ ಕನ್ನಡದಲ್ಲಿ ಉಪಭಾಷೆಗಳು ಹುಟ್ಟಿಕೊಂಡಿವೆ. ಉದಾಹರಣೆಗೆ ಕುಂದಾಪುರದ ಜನರು ಕುಂದಗನ್ನಡ ಮಾತನಾಡುತ್ತಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಲೆನಾಡು ಬೇರೆ ಬೇರೆ ವಲಯಗಳಲ್ಲಿ ಬೇರೇ ಬೇರೇ ರೀತಿಯ ಕನ್ನಡ ಮಾತನಾಡುತ್ತಾರೆ. ಅದೇನೆ ಉಪಭಾಷೆಯಾದರೂ ಕನ್ನಡ ವಿಭಿನ್ನವಾಗಿ ಕೇಳೋದಿಕ್ಕೆ ಸೊಗಸಾಗಿರುತ್ತದೆ. ಕೇರಳ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರದಲ್ಲೂ ಯಥೇಚ್ಚವಾಗಿ ಕನ್ನಡಿಗರಿದ್ದಾರೆ. ಹಾಗೆಯೇ ಅಮೇರಿಕಾ, ಇಂಗ್ಲೆಂಡ್, ಕೊಲ್ಲಿ ರಾಷ್ಟ್ರಗಳಲ್ಲೂ ಕನ್ನಡಿಗರಿದ್ದಾರೆ. ಕನ್ನಡ ಭಾಷೆಯಿದೆ.

ಕನ್ನಡವೆಂದ್ರೇ ಕೇವಲ ಸ್ವಾರ್ಥದ ಸರಕಲ್ಲ. ಕನ್ನಡ ನಮ್ಮ ಹೆಮ್ಮೆಯ ಪ್ರತೀಕ. ಅದನ್ನು ಉಳಿಸಿ ಬೆಳೆಸಲು ಪ್ರಾಮಾಣಿಕತೆಯ, ಕಲ್ಮಶವಿಲ್ಲದ ಅಭಿಮಾನದ ಅಗತ್ಯವಿದೆ. ಪ್ರಪಂಚದ ಪುರಾತನ ಭಾಷೆಗಳಲ್ಲೇ ಮೂರನೇ ಸ್ಥಾನದಲ್ಲಿರೋ ಕನ್ನಡದ ಉದ್ದಾರಕ್ಕೆ, ಅಚ್ಚ ಕನ್ನಡದ ಪ್ರತಿಯೊಬ್ಬ ನಾಗರೀಕನು ಈ ನೆಲ, ಜಲ, ನಾಡು, ನುಡಿಗೆ ಪ್ರಾಮಾಣಿಕವಾಗಿ ಮಿಡಿದರೇ ಸಾಕು. ಕನ್ನಡದ ಬಾವುಟ ಇತಿಹಾಸಕ್ಕೆ ಪ್ರತೀಕವಾಗಿ ಹಾರುತ್ತಲೇ ಇರುತ್ತೆ.

ಇವತ್ತು ಬೆಂಗಳೂರಿನಲ್ಲಿ ಅದೆಷ್ಟು ಮಲ್ಟಿ ನ್ಯಾಶನಲ್ ಕಂಪನಿಗಳಿಲ್ಲ. ಅದರಲ್ಲಿ ಎಷ್ಟು ಜನ ಕನ್ನಡಿಗರು ಕೆಲ್ಸ ಮಾಡ್ತಾ ಇದ್ದಾರೆ ಹೇಳಿ. ಕನ್ನಡಿಗ ಅನ್ನೋ ಕಾರಣಕ್ಕೆ ಕೆಲಸ ಸಿಗದೇ ಬರಿಗೈಲಿ ವಾಪಾಸಾಗೋ ವಾಸ್ತವ ಇದೆ. ಆರಂಭದಲ್ಲಿ ಮೈ ಮರೆತ ಕನ್ನಡಿಗರ ಉಡಾಫೆಗೆ ಅವರೇ ಬೆಲೆ ತೆರಬೇಕಾಗಿದೆ. ಅವರ ಹಕ್ಕನ್ನು ಅವರು ಪಡೆಯೋ ಉತ್ಸಾಹ ತೋರಿಸಲಿಲ್ಲ. ವಲಸೆ ಬಂದವರಿಗೆಲ್ಲಾ ಜಾಗ ಕೊಟ್ಟರು. ಬಿಡಿ ಲಾಭದ ಆಸೆಗೆ ತಮ್ಮತನವನ್ನು ಮಾರಿಕೊಂಡರು. ಇವೆಲ್ಲವೂ ಪರರ ಪರಾಕ್ರಮಕ್ಕೆ ಕಾರಣವಾಗಿದೆ.

ಕನ್ನಡದ ಹೋರಾಟಗಾರರಿಗೆ, ಕನ್ನಡಕ್ಕಾಗಿ ಮಿಡಿಯುವವರಿಗೆ ಚಿಕ್ಕದೊಂದು ಮನವಿ, ಯಾರ ವೈಯುಕ್ತಿಕ ಹಿತಾಸಕ್ತಿಗಳು, ದ್ವೇಷಗಳು ಬೇಕಾಗಿಲ್ಲ. ಅಪ್ಪಟ ಕನ್ನಡಿಗರಾಗಿ, ಅಪ್ಪಟ ಕನ್ನಡಕ್ಕಾಗಿ, ಅಪ್ಪಟ್ಟ ಹೋರಾಟವನ್ನು ಮಾಡೋಣ. ಪ್ರಾಮಾಣಿಕತೆ, ಶ್ರದ್ದೆಯಲ್ಲಿ ಪ್ರತಿ ಹೋರಾಟದ ಗೆಲುವಿದೆ. ಈ ನಾಡನ್ನು ಕನ್ನಡೀಕರಿಸಲು ಹೊರಟ ನಡೆಯಲ್ಲಿ ಹಿಂದೇಟು ಬೇಡ. ಕನ್ನಡಿಗ ತಲೆ ಎತ್ತಿ ನಡೆಯಬೇಕು, ತಲೆ ಎತ್ತಿದಾಗೆಲ್ಲಾ ಕನ್ನಡ ಕಾಣಿಸಬೇಕು.

ಕನ್ನಡವೇ ಸತ್ಯ, ಕನ್ನಡವೇ ನಿತ್ಯ.. ಇದು ಕೇವಲ ನಾಲಿಗೆಯ ತೆವಲಾಗಬಾರದು, ಅಂತರಂಗದ ಕೂಗಾಗಬೇಕು. ಒಪ್ಪಿಕೊಳ್ಳುತ್ತೇವೆ; ನಾವು ಭಾರತೀಯರು, ನಾವೆಲ್ಲರೂ ಒಂದೇ.. ಆದರೆ ನಮ್ಮ ಸಾಮ್ರಾಜ್ಯದಲ್ಲಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳದ ಹೊರತು ದೇಶ ರಕ್ಷಣೆ ಸಾಧ್ಯವಿಲ್ಲ. ತಮ್ಮ ಮನೆಯನ್ನು ಕಾಪಾಡಲಾರದವನು, ನಾಡನ್ನು ರಕ್ಷಿಸೋ ಮಾತೆಲ್ಲಿ. ಸೂಲಿಬೆಲೆ ಅರ್ಥ ಮಾಡಿಕೋ?

-ಹರೀಶ್ ಕುಮಾರ್ ಬಿ

2 thoughts on “ಕನ್ನಡಮ್ಮನ ಪರಿಚಯ ಕೇಳಿಕೋ ,ಸೂಲಿಬೆಲಿ !

 1. Kannadabhimanada bagge savistaravagi sogasagi barediddire hechchu kadime nenapannu taja maadiddiri adakkagi danyavadagalu.Sulibeleyannu ashte channagi echcharisiddiri Tq

 2. ನನ್ನತನ, ತನ್ನತನ, ನಮ್ಮತನ ಉಳಿಸಿ ಕೊಳ್ಳುವದು ಅವಸ್ಯವಿರುವಾಗ ಉಷಾಬರಿ ಬಿಡುತ್ತಾ ಯಾರದಾದರೂ ಧ್ವಜ ಹಿಡಿದು ಕುಗಾಡುವದು ಜಾಣರ ಲಕ್ಷಣ ಅಲ್ಲ.
  ಜಾಣ ಯಾರೂ ?
  ಜಾಣತನ ಎಂದರೇನು?
  ಮಾತಾಡಲಿಕ್ಕೆ ಬರುತ್ತೆ , ನಾನು ಹೇಗೆ ಜನರನ್ನು ಮಾತಿನಲ್ಲಿ ಮರಳು ಮಾಡಬಹುದು ಎಂದು ತಪ್ಪು ಕಲ್ಪನೆ ಇರುವ ಈ ಸ್ವಯಂಭೂ … ಗಳು ಸ್ವಘೋಷಿತ ಹಿಂಬಾಲಕರ ದಂಡನ್ನು ಕೂಡಿಸಿ ಒಂದು ಅಘೋಷಿತ ನಿರೂಪಣೆ ತಯಾರಿಸಿ ಇದು ಜನರ ಬೇಡಿಕೆ ಎಂದು ಬಿಂಬಿಸುವ ಪ್ರಯತ್ನ. ಇದನ್ನೇ ಕಾಲಾನುಕಾಲ ನಡೆಸಿ ಜನಪ್ರತಿ ನಿಧಿ ಸರಕಾರ ಗಳ ಮೇಲೆ ಪ್ರಭಾವ ಬೀರುವ ಹುನ್ನಾರ . ಇದೊಂದು ಸಿಸ್ತುಬದ್ದವಾಗಿ ನಡೆಸಿಕೊಂಡು ಬರುತ್ತಿರುವ ನಡೆ ಕಾಣುತ್ತದೆ.
  ಆದುದರಿಂದ ವಿಚಾರಗಳನ್ನು ವೈಚಾರಿಕ ಪಾತಳಿಯ ಮೇಲೇನೆ ತುಂಡರಿಸುವ ಕಾರ್ಯ ಆಗಬೇಕು… ಮತ್ತು ಆಗುತ್ತಾ ಇರಬೇಕು….
  ತಮ್ಮ ಪ್ರಯತ್ನ ಶ್ಲಾಘನೀಯ ವಾಗಿದೆ… ತಮ್ಮ ಪ್ರಾಮಾಣಿಕ ಪ್ರಯತ್ನ ಕ್ಕೇ ಶುಭವಾಗಲಿ.

  ತನ್ನದೇ

Leave a Reply

Your email address will not be published. Required fields are marked *

error: Content is protected !!