*ಮಾನವ ಜೀವನವೆ ಪಾಕವಾಗಿ ಪ್ರಸಾದವಾಗಬೇಕು*

*ಮಾನವ ಜೀವನವೆ ಪಾಕವಾಗಿ ಪ್ರಸಾದವಾಗಬೇಕು*

೧೨ನೇ ಶತಮಾನದಲ್ಲಿ ಬಸವ ಬೆಳಕಿನ ಬೆಳಗಿನಲ್ಲಿ ಬೆಳಕಾದ ಜೀವಗಳಲ್ಲಿ ಬಿಬ್ಬಿ ಬಾಚಯ್ಯ ಅಪರೂಪದ ವ್ಯಕ್ತಿ ಯಾದವರು. ಕಲಬುರ್ಗಿ ಜಿಲ್ಲೆಯ ಗೊಬ್ಬೂರು ಆತನ ಸ್ಥಳ ಎನ್ನುವ ಐತಿಹ್ಯದನಡುವೆಯೂ ರಾಯಚೂರ ಜಿಲ್ಲೆಯ ಗೊಬ್ಬೂರು ಈತನ ಊರು ಎಂಬುದೆ ಹೆಚ್ಚಾಗಿ ಒಪ್ಪಿದಂತಾಗಿದೆ.

ಬಸವಣ್ಣನ ಪ್ರಭಾವಕ್ಕೆ ಒಳಗಾಗಿ ದಾಸೋಹದ ಸೇವೆ ಗೈದ ಅಪರುಪದ ಜೀವವಾದಾತ ಬಿಬ್ಬಿ ಬಾಚಯ್ಯ ಈತನಿಗೆ ಬಾಚರಸ ಎಂತಲೂ ಕರೆದರೂಡಿ ಇದೆ.ಕಾರಣ ಆಸುತ್ತಲಿನ ಭಾಗದಲ್ಲಿ ಬಾಚರಸ ಎಂಬ ಹೆಸರು ಬಹಾಳಷ್ಟು ಜನರು ತಮ್ಮ ಮಕ್ಕಳಿಗೆ ಮೊಮ್ಮಕ್ಕಳಿಗೆ ಇಟ್ಟುಕೊಂಡ ಉದಾಹರಣೆಗಳು ಇವೆ.ಈತನು ನೂರಾರು ವಚನಗಳು ಬರೆದದ್ದು ಇದೆ ಎಂಬ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯನವರ ಶಬ್ಧ ಸೋಪಾನ ಕೃತಿಯಲ್ಲಿ ಗೊತ್ತಾಗುತ್ತದೆ.

ಏಣಾಂಕಧರ ಸೊಮೇಶ್ವರಲಿಂಗ ಇತನ ವಚನ ಮುದ್ರಿಕೆಯೂ ಹೌದು ಆತನ ಆರಾಧ್ಯ ದೈವವೂ ಹೌದು.

ಅಂಗಲಿಂಗ ಪ್ರಾಣಯೋಗ ಸಂಬಂಧದ ಬಗ್ಗೆ ಆತನ ಒಂದು ವಚನ ಈ ರೀತಿ ಇದೆ.
ನೀರು ಮಣ್ಣಿನಂತೆ,ಬೇರು ಸಾರದಂತೆ,ಗಂಧ ತರುವಿನಂತೆ.
ಒಂದ ಬಿಟ್ಟು ಒಂದು ಹಿಂಗಿರವಾಗಿ
ಅಂಗಲಿಂಗ ಪ್ರಾಣ ಪ್ರಾಣಯೋಗ ಸಂಬಂಧ ಸಂದಿಲ್ಲ. ಏಣಾಂಕಧರ ಸೋಮೇಶ್ವರ ಲಿಂಗದಲ್ಲಿ.

ಎನ್ನುವ ವಚನ ಗಮನಿಸ ಬಹುದು.
ಬಲ್ಲವರ ಇರುವು ಹೇಗಿಬೇಕು ಎಂಬ ಮಾತನ್ನು ತನ್ನ ಇನ್ನೊಂದು ವಚನದಲ್ಲಿ ತಿಳಿಸುತ್ತಾನೆ.

ಬಲು ಗಜ ಭಾದಳದಲ್ಲಿ ಹಾದಿಯುಂಟೆ?
ವಿಕ್ರಮ ಪಕ್ಷಿ ಕಲ್ಲಿಗೆ ಸಿಕ್ಕುವುದುಂಟೇ?
ಬಲ್ಲವನೆಲ್ಲರಿಗೆ ಲಲ್ಲೆಯ ನುಡಿವನೆ?
ಬಲ್ಲವನ ಇರುವು ಛಲ್ಲಿಯ ರೂಹಿನಂತೆ ಇರಬಲ್ಲವರಾರೋ ಏಣಾಂಕಧರ ಸೋಮೇಶ್ವರಲಿಂಗ.

ಎನ್ನುವಲ್ಲಿ ದೊಡ್ಡದಾದ ಆನೆ ಕಿಂಡಿಯಲ್ಲಿ ತೂರಿಕೊಂಡು ಹೊಗಬಹುದೇ?.ಗರುಡಪಕ್ಷಿ ಕಲ್ಲಿಗೆ ಸಿಕ್ಕುವುದೆ?ಹಾಗೆ ಬಲ್ಲವರು ಲಲ್ಲೆ ಹೊಡಿಯಲಾರರು , ಬಲ್ಲವರ ಇರುವು ಛಲ್ಲಿಯ ರೂಹು ಅಂದರೆ ಕನ್ನಡಿಯ ರೂಹು ಯಾರು ನೊಡುತ್ತಾರೊ ಅವರನ್ನೆ ಕಾಣಿಸುವ ಸ್ವಭಾವ ಕನ್ನಡಿಯದು ಹೀಗೆ ಇರ ಬಲ್ಲವರಾರೊ ದೇವಾ ಎಂದು ಕೇಳುತ್ತಾನೆ. ಶರಣ ಬಾಚಯ್ಯ.

ಸ್ವಾದವಿಲ್ಲದ ಹಣ್ಣು ವಾಸನೆ ಇಲ್ಲದ ಹೂ,ರುಚಿ ಇಲ್ಲದ ನೀರು ಅದು ಯಾರಿಗೂ ಯೊಗ್ಯವಾಗದು.ಇಷ್ಟಲಿಂಗದಪೂಜೆ ಮಾಡುವಾಗ ಅರಿವು ಮುಖ್ಯ .ಅರಿವಿಲ್ಲದ ಪೂಜೆಗೆ ಆ ದೇವನೂ ಅಂದರೆ ಏಣಾಂಕಧರ ಸೋಮೇಶ್ವರಲಿಂಗ ಒಪ್ಪಲಾರ ಅಂತವರ ಕಡೆ ದೇವರು ತಿರುಗಿಯೂ ನೊಡುವುದಿಲ್ಲ ಅಂದಿದ್ದಾನೆ ಶರಣ ಬಾಚಯ್ಯ.
ಪೂಜೆ ಬರೀ ಆಚರಣೆಯಿಂದಿರಬಾರದು ಅದು ಅರಿವಿನಿಂದ ಕೂಡಿರಬೇಕು ಅಂದಿದ್ದಾನೆ.
ಶರಣನಾದ ಬಾಚಯ್ಯ ಶರಣರೆ ಎನ್ನ ಮಾತಾ ಪಿತರು ಎನ್ನುತ್ತಾನೆ.

ಬಸವಣ್ಣನ ಪ್ರಸಾದವ ಕೊಂಡ ಕಾರಣ ಎನಗೆ ಭಕ್ತಿ ಸಾಧ್ಯವಾಯಿತ್ತು.
ಚನ್ನಬಸವಣ್ಣನ ಪ್ರಸಾದವ ಕೊಂಡ ಕಾರಣ ಎನಗೆ ಜ್ಞಾನ ಸಾಧ್ಯವಾಯಿತ್ತು.
ಪ್ರಭುದೇವರ ಪ್ರಸಾದವ ಕೊಂಡ ಕಾರಣ ಎನಗೆ ವೈರಾಗ್ಯ ಸಾಧ್ಯವಾಯಿತ್ತು. ಇಂತಿ ಮೂವರು ಒಂದೊಂದು ಕೊಟ್ಟ ಕಾರಣ ಎನಗೆ ಸರ್ವವೂ ಸಾಧ್ಯವಾಯಿತ್ತು
ಏಣಾಂಕಧರ ಸೋಮೇಶ್ವರಲಿಂಗ ನಿಮ್ಮ ಶರಣರೆನ್ನ ಮಾತಾಪಿತರು

ಶರಣನಲ್ಲಿರ ಬೇಕಾದ ವಿನಯವಂತಿಕೆ ದಾಸೊಹಂಬಾವ ವನ್ನು ನಾವು ನೀವೆಲ್ಲ ಅಳವಡಿಸಿಕೊಳ್ಳಬೇಕಾಗಿದೆ .
ಆಗ ನಮ್ಮೆಲ್ಲರ ಬದುಕು ಸಮಾಜದ ಬದುಕು ಸುಂದರವಾಗ ಬಹುದು ಆದಿಶೆಯಲ್ಲಿ ನಾವು ನಿವೆಲ್ಲರೂ ಪ್ರಯತ್ನಿಸೋಣ ಶರಣುಗಳು.

 ಮೌನವಾದ ಮತ್ತೆ ಜಗಳ ಉಂಟೆ?

ಧ್ಯಾನವಾದ ಮತ್ತೆ ಪರಾಕು ಉಂಟೆ?
ಸ್ಥಲಲೇಪವಾದಮತ್ತೆ ಭೇದದ ಬಿನ್ನವುಂಟೆ?
ಕ್ರೀ ಜ್ಞಾನ ಸಮಗಂಡಲ್ಲಿ,ಭಾವ ಶುದ್ಧವಾಯಿತ್ತು ಏಣಾಂಕಧರ ಸೋಮೇಶ್ವರಲಿಂಗದಲ್ಲಿ

ವಚನದಲ್ಲಿ ಮೌನವಾದವರ ಜೊತೆ ಯಾರು ಜಗಳವಾಡಲಾರರು. ಧ್ಯಾನಿಯಾದವನಿಗೆ ಹೊಗಳಿಕೆಯ ಪರಾಕು ಯಾಕೆಬೇಕು.ಕ್ರೀಯೆ ಜ್ಞಾನ ಒಂದಾದಾಗ ಭಾವ ಶುದ್ಧವಾಗುತ್ತದೆ ಅದುವೆ ಏಣಾಂಕಧರ ಸೋಮೇಶ್ವರ ಲಿಂಗದಲ್ಲಿ ಒಂದಾದವರ ನಿಲುವು ಅನ್ನುತ್ತಾನೆ ಶರಣಬಾಚರಸ.

ಹಿಂದಿನವರು ಜ್ಞಾನ ಒಂದೆ ಸಾಕು ಮುಕ್ತಿಗೆ ಅಂದವರ ಮಾತಿಗೆ ಉತ್ತರ ದಂತಿದೆ ಶರಣ ಬಾಚಯ್ಯ‌ನ ವಚನ.ಹುಟ್ಟಿಸಿದ ದೇವರು ನಮ್ನನೆಂದು ಕೈಬಿಡಲಾರ ಎಂಬ ವಿಸ್ವಾಸದ ಮೇಲೆ ಜಗತ್ತು ಬದಕತಾ ಇದೆ, ಆದರೆ ಕೆಲವೊಮ್ಮೆ ಅದು ಸಾಧ್ಯವಾಗದೆ ಹೋಗಬಹುದು ಎಂಬುದಕ್ಕೆ ಕೆಳಗಿನ ವಚನ ಹೇಳುತ್ತಾನೆ ಶರಣ ಬಾಚಯ್ಯ.

ಹಿಂಡಿನೊಳಗಣ ಕುರುಬನ ತೋಳತಿಂಬಾಗ ಕುರಿ ಮಾಣಿಸಬಲ್ಲವೇ?
ಕಟ್ಟೊಡೆಯ ಕೊಲ್ಲುವಾಗ ಮತ್ತೊಬ್ಬರು ಬೇಡಾ ಎನಲುಂಟೆ?
ಹುಟ್ಟಿಸಿದಾತ ಭವದ ಗೊತ್ತಿಂಗೆತಳ್ಳುವಡೆ ,ನಮ್ಮಗೊತ್ತಿನ ಅರಿವೇನ ಮಾಡುವುದು?ಉಭಯವೂ ನಿನ್ನಾಟ ಏಣಾಂಕಧರ ಸೋಮೇಶ್ವರ ಲಿಂಗವೆ. 

ಕುರಿ ಕಾಯುವ ಕುರುಬನನ್ನೆ ತೋಳ ತಿನ್ನುವಾಗ ಪಾಪ ಕುಗಳು ರಕ್ಷಿಸಲು ಸಾಧ್ಯವೇ ಒಡೆಯನೆ ಕೊಲ್ಲಲು ನಿಂತರೆ ಬೇಡ ಅನ್ನುವವರಾರು?ಹುಟ್ಟಿಸಿದಾತನೆ ನೆಲೆಗೆ ತಳ್ಳುವಾಗ ನಾವು ಕಂಡುಕೊಂಡನೆಲೆಯ ಅರಿವು ಏನು ಮಾಡಬಹುದು ಎಲ್ಲವು ಸವನದೆ ಆಟವಾಗಿರುವಾಗ ನನ್ನದೆನು ಆಟ ನಡೆಯದು ಎಂಬ ಭಾವ ವ್ಯಕ್ತ ಪಡಿಸುತ್ತಾನೆ ಶರಣ ಬಿಬ್ಬಿ ಬಾಚರಸ.ಆತನಡೆಸಿದಂತೆ ನಡೆಯುವ ಕಾರ್ಯಮಾತ್ರ ನಮ್ಮದು.

O ಶಿವಣ್ಣ ಇಜೇರಿ

Leave a Reply

Your email address will not be published. Required fields are marked *

error: Content is protected !!